Monday, August 20, 2012

ಸಿನಿಮಾ ಸುಗ್ಗಿ


ಕಾಲೇಜು ಹುಡುಗರು ಅಂದರೆ ಸಿನೆಮಾ ನೋಡದೆ ಇರಲು ಸಾಧ್ಯವೆ ? ಎಂಬ ಮಾತು ಪ್ರಚಲಿತ.. ಸಿನೆಮಾದ ಮಾಯಾ ಲೋಕದ ಆಕರ್ಷಣೆ ಅದಮ್ಯ . ಕಾಲೆಜು ಹುಡುಗರಿಗೆ ಇನ್ನೂ ಹೆಚ್ಚು.ಕನಸಿನ ಲೋಕದಲ್ಲಿ ವಿಹರಿಸಲು ಅದೊಂದು ಸಾಧನ.. ಅದರಲ್ಲೂ ಹಳ್ಳಿಯಿಂದ ಬಂದವರಿಗಂತೂ ಅದು ವಿಸ್ಮಯ ಲೋಕ. ಒಮ್ಮೆಗೆ ದೊರೆತ ಸ್ವಾತಂತ್ರ್ಯದ ಪರಿಣಾಮವೋ ಇಲ್ಲವೆ ಸಮಾಜದ ಕಟ್ಟಪಾಡಿನ ವಿರುದ್ಧದ ಪ್ರತಿಕ್ರಿಯೆಯೋ ತಿಳಿಯದು. ಊಟ ಬಟ್ಟೆಗೆ ಕೊರತೆಯಾದರೂ ಪರವಾಇಲ್ಲ ಸಿನೆಮ ನೋಡುವುದು  ಹೆಚ್ಚು. ಎಲ್ಲರೂ ಹಾಗೆ ಎಂದಲ್ಲ  ಆದರೆ ಮನೆ ಬಿಟ್ಟು ಬಂದು ಒಂಟಿಯಾಗಿ ಇರುವವರಿಗೆ ಸಿನೆಮ ಹುಚ್ಚು ಹೆಚ್ಚು..  ಕಾರಣ ಏನೋ ತಿಳಿಯದು ಅಂತೂ ಬಹತೇಕ ಜನ ಸಿನೆಮಾ ನೋಡುತಿದ್ದರು. ನಾನೂ ಅದಕ್ಕೆ ಹೊರತಾಗಿರಲಿಲ್ಲ. ಆ ಅವಧಿಯಲ್ಲಿ ನಾನು  ಬಹಳ ಸಿನೆಮ ನೋಡಿದ ನೆನಪು. ಭಾಷಾ ಭೇದ ವಿಲ್ಲದೆ ಹೋಗುತಿದ್ದೆವು ಅದರಿಂದ ಅಲ್ಪ ಸ್ವಲ್ಪ  ತಮಿಳು, ತೆಲುಗು ಮತ್ತು ಹಿಂದಿ ಪರಿಚಯವಾಯಿತು
ಎರಡು ಮಸಾಲ ದೋಸೆ ಬೆಲೆಗೆ ಸಿನೆಮ ನೋಡಬಹುದಿತ್ತು. ನಮ್ಮ ಊರಿನಲ್ಲಿ ನೆಲದ ಮೇಲೆ ಕುಳಿತು ನೋಡುವವರಿಗೆ ಇಲ್ಲಿ ತುಸು ದುಬಾರಿಯಾದರೂ ಕುರ್ಚಿಯ ಮೇಲೆ ಕುಳಿತು ನೋಡುವ ಯೋಗ. ಬಾಲ್ಕನಿಯ ಮಾತೆ ಇಲ್ಲ. ಸದಾ ಗಾಂಧಿಕ್ಲಾಸು.
ಬರುವ ಮೂವತ್ತು ರೊಪಾಯಿಯಲ್ಲಿ ಊಟ ವಸತಿಗೆ ಹದಿನೈದು ರೂಪಾಯಿ ಆದರೆ ಉಳಿದುದರಲ್ಲಿ ಸಿಂಹ ಪಾಲು ಸಿನೆಮಾಗೆ ಖರ್ಚಾಗುತಿತ್ತು.. ನಮಗೆ  ಭಾಷಾದ್ವೇಷ  ಇರಲೆ ಇಲ್ಲ. ಕನ್ನಡ ಸಿನೆಮಾ ಕಡಿಮೆ.ಬರುವ ಎಲ್ಲ ಒಳ್ಳೆಯ ಸಿನೆಮಾ ನೋಡುವೆವು. ಒಳ್ಳೆಯ ಸಿನೆಮಾ ಎಂದರೆ ನೂರು ದಿನದ ಮೇಲೆ ಓಡುವವು. ನನಗೆ  ನೆನಪಿರುವಂತೆ
 ಆಗ ಕನ್ನಡ ,ಹಿಂದಿ ತೆಲುಗು ತಮಿಳು ತೆಲುಗು ಸಿನಿಮಾಗಳಲ್ಲಿ ಮೂವರು ನಾಯಕರದೆ ಮೇಲಾಟ. ಬೇರೆಯವರೂ ಇದ್ದರು ಆದರೆ ಹೆಚ್ಟು ಪ್ರಭಾವವಿರಲಿಲ್ಲ.
ತೆಲುಗು ಇತ್ರಗಳು ವರ್ಷಗಟ್ಟಲೆ ಓಡುತಿದ್ದವು. ಶಾಂತಿನಿವಾಸ, ಜಗದೇಕ ವೀರನ ಕಥೆ ಮತ್ತು ಗುಂಡಮ್ಮಕಥಾ ಈ ಮೂರೆ ಸಿನೆಮಾಗಳು ಮೂವಿಲ್ಯಾಂಡಿನಲ್ಲಿ ನನ್ನ ಕಾಲೇಜು ಓದಿನ  ಅವಧಿಯಲ್ಲಿ ಓಡಿದ ನೆನಪು. ಮೂವಿಲ್ಯಾಂಡ್‌ ಮತ್ತು ಗೀತ ಥೇಟರ್‌ಗಳು  ತೆಲುಗಿಗೆ ಮೀಸಲು.. ಸ್ಟೇಟ್ಸ  ಸೂಪರ್‌ ಶಿವಾಜಿ  ಮತ್ತು  ಮೆಜೆಸ್ಟಿಕ್‌ ಥೇಟರ್‌ಗಳು ತಮಿಳಿಗೆ ಮೀಸಲು.
. ಅದೆ ತಾನೆ ಚಿತ್ರಾಲಯದ ಶ್ರೀಧರ್‌  ಮತ್ತು ಬಾಲಚಂದರ್‌ ತಮ್ಮ ಚಿತ್ರಯಾತ್ರೆ ಮೊದಲು ಮಾಡಿದ್ದರು. ತಮಿಳು ಚಿತ್ರರಂಗದ ನಾಯಕಿಯರಾಗಿ ಕನ್ನಡತಿಯರೆ ಮಿಂಚುತಿದ್ದರು . ಮೊದಲು ಸರೊಜಾದೇವಿ ಹೆಸರುಮಾಡಿದರೆ ನಂತರ  ಈಗ ಮುಖ್ಯಮಂತ್ರಿಯಾಗಿರುವ ಜಯಲಲಿತ ಬಹು ಜನಪ್ರಿಯ.ನಾನು ತಮಿಳ್‌ ಪೊಣ್ಣು ಎಂದು ಹೇಳಿದರೂ ಜಯಲಲಿತ ನಮ್ಮ ಮೇಲುಕೋಟೆಯ ಸಂಧ್ಯಾ ಅವರ ಮಗಳು..
..
ನಾಯಕಿಯರಲ್ಲಿ ಪಂಡರಿಬಾಯಿ ಲೀಲಾವತಿ  . ನಂತರ ಜಯಂತಿ ಮತ್ತು ಭಾರತಿ ಪ್ರವೇಶವಾಯಿತು. ಆದರೆ ಆಗ ಕನ್ನಡ ಚಿತ್ರಗಳು ಬರುತಿದ್ದುದೆ ಬಹು ಕಡಿಮೆ. ಬಂದರೂ ಅವುಗಳಿಗೆ ಒಳ್ಳೆಯ ಚಿತ್ರಮಂದಿರ ದೊಕುತ್ತಿರಲಿಲ್ಲ. ಆಗ ಕನ್ನಡ ಕಲಾವಿದರೆಲ್ಲ ಸೇರಿ ಮುಖ್ಯವಾಗಿ ರಾಜಕುಮಾರ್‌ ನರಸಿಂಹರಾಜು, ಬಾಲಕೃಷ್ಣ ಮತ್ತು ಜಿ.ವಿ ಐಯರ್‌ ಒಟ್ಟಾಗಿ ರಣಧೀರ ಕಂಠೀರವ ಎಂಬ ಐತಿಹಾಸಿಕ ಚಿತ್ರ ನಿರ್ಮಿಸಿದ್ದರು. ಆದರೆ ಅದಕ್ಕೆ ಚಿತ್ರ ಮಂದಿರ ದೊರಕದೆ ಮೊದಲು  ಮಹಡಿಯ ಮೇಲಿದ್ದ ಚಿಕ್ಕ ಥೇಟರ್‌ ಹಿಮಾಲಯದಲ್ಲಿ  ಬಿಡುಗಡೆಯಾಯಿತು. ನಂತರ ಅದು ಸೂಪರ್‌ ಹಿಟ್‌ ಆಗಿ ಕನ್ನಡ ಚಿತ್ರ ರಂಗದ ಮೈಲಿಗಲ್ಲಾಯಿತು.ಆಂದಿನ ಕಾಲದಲ್ಲಿ ಕನ್ನಡದ ಬಾವುಟ ಎತ್ತಹಿಡಿದ ಹಿರಿಮೆ  ಮಿನರ್ವಾ ವೃತ್ತದಲ್ಲಿದ್ದ ಭಾರತ್‌ ಟಾಕೀಸ್‌ ನದು. ಅದೂ ಅದರ  ಮಾಲಿಕರು ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದವರು. ಅವರ ಮನೆ ಮಾತು ಕನ್ನಡವೂ ಅಲ್ಲ.
ಇನ್ನು ಇಂಗ್ಲಿಷ್‌ ಚಿತ್ರಗಳ ವಿಷಯ. ಕಂಟೋನ್‌ಮೆಂಟ್‌ ಪೂರ್ತಿ ಇಂಗ್ಲಿಷ್‌ ಚಿತ್ರಗಳಿಗೆ ಮೀಸಲು.
 ಸಿಟಿ ಮಾರು ಕಟ್ಟೆಯಲ್ಲಿದ್ದ ಪ್ಯಾರಾಮೌಂಟ ಬೆಂಗಳೂರಿನಲ್ಲಿ ಟಾಕೀ ಚಿತ್ರಪ್ರದರ್ಶಿಸಿದ ಮೊದಲ ಚಿತ್ರಮಂದಿರ  ಮತ್ತು ಬಳೆ ಪೇಟೆಯಲ್ಲಿದ್ದ ವಿಜಯಲಕ್ಷ್ಮಿ ಇಂಗ್ಲಿಷ್‌ ಚಿತ್ರಗಳ ಭದ್ರಕೋಟೆ. ಅದರಲ್ಲೂ ವಿಜಯಲಕ್ಷ್ಮಿಯಲ್ಲಿ ಒಂದು ವಿಶೇಷ ಸವಲತ್ತು ಒದಗಿಸಿದ್ದರು.ಕಾಲೇಜುವಿದ್ಯಾರ್ಥಿ ಎಂದು ಪುರಾವೆ ಒದಗಿಸಿ ಅವರಿಂದ ಗುರುತಿನ ಚೀಟಿ ಪಡೆದರೆ ಪ್ರವೇಶ ದರದಲ್ಲಿ ರಿಯಾಯತಿ. ಹೀಗಾಗಿ ಎಷ್ಟೋ ಜನ ಕಾಲೇಜು ಹುಡುಗರು   ಕಾಲೇಜಿಗೆ ಚಕ್ಕರ್‌ ಹೊಡೆದು ಅಲ್ಲಿ ಮಾರ್ನಿಂಗ್‌ ಷೋ ನೋಡುತಿದ್ದರು.ಇದರಿಂದಇಂಗ್ಲಿಷು ಕಲಿಯಲು ಅನುಕೂಲ ಎಂಬ ನೆಪ ಬೇರೆ. ಅಲ್ಲಿ  ಕಿವಿಗಿಂತ ಕಣ್ಣಿಗೆ ಬಹು ಕೆಲಸ.ಭಾರತೀಯ ಚಿತ್ರಗಳಲ್ಲಿ ಕಾಣಸಿಗದ ಬಿಚ್ಚು ಮೈನ ದೃಶ್ಯಗಳೇ ಪ್ರಮುಖ ಆಕರ್ಷಣೆ . 
 ಚಿತ್ರಮಂದಿರಗಳ ಸಂಖ್ಯೆ  ಆಗ ಬೆಂಗಳೂರಿನಲ್ಲಿ ನೂರಕ್ಕಿತ ಕಡಿಮೆ.. ಅದೆ ಸುಮಾರಿಗೆ ನಮಗೆಲ್ಲ ಇದ್ದ ಆಕರ್ಷಣೆ ಎಂದರೆ ಬನ್ನೇರು ಘಟ್ಟ ರಸ್ತೆಯಲ್ಲಿ ಬಂದ ಡ್ರೈವ್‌ ಇನ್‌ ಥೇಟರ್‌. ನಮಗಂತೂ ಅದು ಗಗನ ಕುಸುಮ. ಮೊದಲನೆಯದಾಗಿ ಅದು ದೂರ. ಅಲ್ಲದೆ ಅದು ಓಪನ್‌ ಏರ್‌ ಥೇಟರ್‌ ಆದ್ದರಿಂದ ಕತ್ತಲಾದ ಮೇಲೆ ಮಾತ್ರ ಪ್ರದರ್ಶನ. ಅದೂ ಅಲ್ಲದ ನಮಗೆ ಮೊದ ಮೊದಲು ಆ ಥೇಟರಿಗೆ ಹೋಗಬೇಕೆಂದರೆ ಕಾರು ಇರಲೆ ಬೇಕೆಂದು ಕಡ್ಡಾಯವಿದೆ ಎಂದುಕೊಂಡಿದ್ದವು. ಕೆಲವು ಸಮಯದ ಮೇಲೆ ಗೊತ್ತಾಯಿತು. ಕಾರಿಲ್ಲದೆಯೆ ಹೋಗಬಹುದು ಎಂದು. ಯಥಾರೀತಿ ವಾಹನ ಸೌಲಭ್ಯ ಇಲ್ಲ. ಉತ್ಸಾಹಿಗಳು ನಾಲಕ್ಕಾರು ಜನ ಸೇರಿ ಹೋದೆವು. ಅದಕ್ಕೆ ಜಯನಗರ ದಾಟಿ ಹೋಗಬೇಕಿತ್ತು. ಅಲ್ಲಿ ನೋಡಿದರೆ ನಮಗೆ ಖುಷಿಯೋ ಖುಷಿ. ದೊಡ್ಡ ಮೈದಾನ. ಅದರ ಒಂದು ಅಂಚಿನಲ್ಲಿ ವಿಶಾಲವಾದ ಬಹು  ಎತ್ತರದ ನುಣುಪಾದ ಗೋಡೆ. ಅದೆ ಸಿನಮಾ ತೋರಿಸುವ ಪರದೆ. .ಅದರ ಮುಂದೆ  ಸಿನೆಮಾ ಹಾಲಿನಲ್ಲಿ ಸಾಲಾಗಿ ಕುರ್ಚಿಗಳಿದ್ದಂತೆ   ಕಾರು ನಿಲ್ಲಿಸಲು ಗುರುತು ಮಾಡಿದ ಜಾಗ. ಪ್ರತಿ   ಜಾಗದ ಪಕ್ಕದಲ್ಲೆ ಐದಡಿ ಎತ್ತರದ ಕಂಬ . ಅದಕ್ಕೆ ನೇತುಹಾಕಿದ ಧ್ವನಿ ವರ್ಧಕ ಉಪಕರಣ. ಕಾರಿನಲ್ಲಿ ಬಂದವರು  ಅಲ್ಲಿ ಕಾರು ನಿಲ್ಲಿಸಿ ಆ ಉಪಕರಣವನ್ನು ಕಾರಿನಲ್ಲಿಟ್ಟುಕೊಂಡು ದ್ವನಿಯನ್ನು ಕೇಳ ಬಹುದಿತ್ತು. ಚಿತ್ರನೋಡುವುದಕ್ಕಂತೂ ಸಮಸ್ಯೆಯೆ ಇಲ್ಲ. ಕಾರಿನಲ್ಲಿ  ಹೇಗೆ ಕುಳಿತರೂ ಕಾಣುತಿತ್ತು. ಒಂದು ಕಾರಿಗೂ ಇನ್ನೊಂದು ಕಾರಿಗೂ ಅಂತರವಿರುತಿತ್ತು. ಮತ್ತು ಎಲ್ಲ ಕಡು  ಕತ್ತಲು . ಆನಂತರ ನಮಗೆ ಗೊತ್ತಾಯಿತು. ಅಲ್ಲಿ ಪ್ರವೇಶ ದರ ಆಗಿನ ಕಾಲಕ್ಕೆ ಅತಿ ದುಬಾರಿ . ಅಲ್ಲಿ ತಲೆ ಎಣಿಸಿ ಟಿಕೆಟ್‌ ಕೊಡುತ್ತಿರಲಿಲ್ಲ. ಒಂದು ಕಾರಿಗೆ ಇಷ್ಟು ದರ ಎಂದು ನಿಗದಿ ಮಾಡಿದ್ದರು ಅಷ್ಟು ದುಬಾರಿಯಾದರೂ ಒಂದು ಸಲಕ್ಕೆ ನೂರಾರು ಕಾರುಗಳು ಬರುತಿದ್ದವು. ಕೆಲವರು ಟ್ಯಾಕ್ಸಿ ಮಾಡಿಕೊಂಡೂ ಬರುತಿದ್ದರು.ಅದಕ್ಕೆ ಕಾರಣವೂ ಇತ್ತು. ಏಕಾಂತ ಬಯಸುವ ಜೋಡಿಗಳು ಅಲ್ಲಿ ಮೂರು ತಾಸು ಮೋಜು ಮಾಡಲು ಬರುತ್ತಾರೆ ಎಂಬ ಮಾತು ಚಾಲತಿಯಲ್ಲಿತ್ತು.
 ನಮ್ಮಂಥಹ ಕಾಲುನಡಗೆಯಲ್ಲಿ ಬರುವವರಿಗಾಗಿಯೆ ಬೇರೆ  ವ್ಯವಸ್ಥೆ ಮಾಡಿದ್ದರು ಹೇಗಿದ್ದರೂ ಪರದೆ ಅತಿ ದೊಡ್ಡದು, ಅದರ ಎದುರಿಗೆ ಕಾರು ನಿಲ್ಲಿಸುವ ಜಾಗದ ಬಹು ಹಿಂದೆ ಎರಡು ಅಂತಸ್ತಿನ ದೊಡ್ಡ ಕಟ್ಟಡ ಇತ್ತು . ಅಲ್ಲಿನ  ಬಾಲ್ಕನಿಯಲ್ಲಿ ಆಸನ ವ್ಯವಸ್ಥೆ ಯಿತ್ತು ನೂರಾರು ಜನ ಕೂಡ ಬಹುದಿತ್ತು .. ಅಲ್ಲಿ “ ಟೆನ್‌ ಕಮ್ಯಾಂಡ್‌ ಮೆಂಟ್ಸ”  ನೋಡಿದ ನೆನಪು.ಅಲ್ಲಿಂದ ರಾತ್ರಿ ಹತ್ತರ ಮೇಲೆ ರೂಮಿಗೆ ಬರುವಾಗ ಎಲ್ಲೆಲ್ಲೂ ನಿರ್ಜನ ಪ್ರದೇಶ. ಅದು ಹೇಗೋ  ಎದೆ ಗಟ್ಟಿಮಾಡಿಕೊಂಡು ರೂಮು ಸೇರಿದೆವು  ಈಗ ಏನದರೂ ಆ ಓಪನ್‌ ಏರ್‌ ಥೇಟರ್‌ ಇದ್ದಿದ್ದರೆ  ಅದರ ಜಾಗದ ಬೆಲೆಯೆ ನೂರಾರು ಕೋಟಿ ಯಾಗಬಹುದಿತ್ತು.
 . ಕಂಟೋನ್‌ ಮೆಂಟ್ ಎಂದರೆ ನಮಗೆ ವಿದೇಶದ   ಒಂದು ಭಾಗ. ಅದು ಪೂರ್ತಿ ಇಂಗ್ಲಿಷ್ ಮಯ. ಕೆಲವು ಸಾಹಸಿಗಳು ಸಂಜೆಯ ಸಮಯದಲ್ಲಿ ಮಹಾತ್ಮಗಾಂಧಿ ರಸ್ತೆಯಲ್ಲಿ  ಓಡಾಡಿ  ಬಂದರೆ .ಅದನ್ನೆ ವಾರಗಟ್ಟಲೆ ಬಣ್ಣಿಸುತಿದ್ದರು. ಅಲ್ಲಿನ ಮಹಿಳೆಯರ ಉಡುಪು,  ಹಾವ ಭಾವ  ಇಂಗ್ಲಿಷ್‌ ಸಿನೆಮಾದಲ್ಲಿ ಕಾಣುವ ದೃಶ್ಯಗಳಂತೆ ಇರುತಿದ್ದವಂತೆ.. ನಮಗೆ ಬರಿ ಶ್ರವಣಾನಂದ.
 . ಇಂಗ್ಲಿಷ್‌ ಸಿನೆಮಾಗಳಿಗೆ  ಪೋಲಿ ಹುಡುಗರು  ಹೋಗುವರು ಎಂಬ ಪ್ರತೀತಿ .  ಕಾರಣ ಅದಲ್ಲ. ನಮಗೆ ಇಂಗ್ಲಿಷ್‌ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಅಲ್ಲದೆ ಅವು  ತುಂಬ ದೂರ..  ಅದರೂ ಆಗೀಗ ವಿಜಯ  ಲಕ್ಷ್ನಿಯಲ್ಲಿ   ಇಂಗ್ಲಿಷ್‌ ಸಿನೆಮಾ ನೋಡಿದ ನೆನಪು.   
ಆಗ ಕನ್ನಡದಲ್ಲಿ  ನಟರಗಿಂತ ನಿರ್ದೇಶಕರ ಹೆಸರಿನಿಂದಲೆ ಚಿತ್ರಗಳು ಓಡುತಿದ್ದವು.ಬಿ ಆರ್‌ಪಂತುಲು, ಬಿಎಸ್‌ರಂಗಾ ಆರ್‌ ನಾಗೇಂದ್ರರಾವ್‌,. ಹುಣುಸೂರು ಕೃಷ್ಣ ಮೂರ್ತಿಗಳ ಹೆಸರಾಗಿದ್ದರು. ಅವರ ಗರಡಿಯಾಳುಗಳಾದ ಪುಟ್ಟಣ್ಣ ಭಾರ್ಗವ , ಲಕ್ಷ್ಮಿ ನಾರಾಯಣ ದ್ವಾರಕೀಶ್ ಮೊದಲಾದವರು ಕನ್ನಡದ ಬಾವುಟ. ಎತ್ತಿ ಹಿಡಿದರು.  ಪಂತುಲುಅವರ .ಕೃ ಷ್ಣ ದೇವರಾಯ. ಕಿತ್ತೂರು ಚೆನ್ನಮ್ಮ ಮನೆಮಾತಾಗಿದ್ದವು.. ಅದರಲ್ಲಿನ ಸರೋಜಾದೇವಿಯವರ, “  ಕಪ್ಪಕೊಡ ಬೇಕಂತೆ ಕಪ್ಪ, ಇದೇನು ಅವರಪ್ಪನ ಆಸ್ತಿಯೆ, ಉತ್ತಿದ್ದಾರಾ, ಬಿತ್ತಿದ್ದಾರಾ, ಬೆಳೆದಿದ್ದಾರಾ ?  “  ಎಂಬ ಸಂಭಾಷಣೆ ಮೈ ನವಿರೇಳಿಸುವುದು. ಅಮರ ಶಿಲ್ಪಿಜಕ ಣಾಚಾರಿ ಕನ್ನಡದಲ್ಲಿ ಮೊದಲ ವರ್ಣ ಚಿತ್ರ.ಸಿಂಗ್‌ಠಾಕೂರ್‌ಅವರುಅನೇಕ ಕನ್ನಡ ಕಾದಂಬರಿಗಳನ್ನು ಚಲನಚಿ ತ್ರಕ್ಕೆಅಳವಡಿಸಿದರು.  ಕುಲವಧು, ಕರುಣೆಯೆ ಕುಟುಂಬದ ಕಣ್ಣು, ಚಂದವಳ್ಳಿಯ ತೋಟ ,ಕನ್ನಡದ ಕುಮಾರ್‌ ತ್ರಯರು ಒಟ್ಟಿಗೆ ಅಭಿನಯಿಸಿದ ಚಿತ್ರ ಚಂದವಳ್ಳಿಯ ತೋಟ,  ನಂತರ ಅನೇಕ ಕಾದಂಬರಿಗಳು ಬೆಳ್ಳಿತೆರೆಗೆ ಬಂದವು ಜತೆಗ  ಖ್ಯಾತ ಕವಿಗಳ ಕವನಗಳು ಬೆಳ್ಳಿತೆರೆಯಮೇಲೆ ಮೂಡಿದವು.’ ಯುಗಯುಗಾದಿ ಕಳೆದರೂ ಯುಗಾದಿ ಮರಳಿಬರ ತಿದೆ’, .ದೋಣಿ ಸಾಗಲಿ ಮುಂದೆ ಹೋಗಲಿ,ನಾನೆ ವೀಣೆ ನೀನೆ ತಂತಿ ಅವನೆ ವೈ ಣಿಕ ,ಗೀತೆಗಳು ಇಂದಿಗೂ ಜನಪ್ರಿಯ.
ಹಿಂದಿಯಲ್ಲು  ನಿರ್ದೇಶಕರೆ   ಚಿತ್ರ ರಸಿಕರನ್ನು ಸೆಳಯುತಿದ್ದರು. ಬಿಮಲ್ ರಾಯ್‌,ಬಿ ಆರ್ ಚೋಪ್ರಾ ಚಿತ್ರಗಳೆಂದರೆ  ರಸ ದೌತಣ.  ನಮ್ಮ ಕನ್ನಡದವರ ಕಾಣಿಕೆ ಗಣನೀಯ.ವಿ.ಶಾಂತರಾಮರ “ದೊ ಆಂಖೆಬ ರಾ ಹಾತ್‌. “ ಡಾ.ಕೊಟ್ನಿಸ್  ಸರ್ವ ಕಾಲಿಕ ಅಮರ ಚಿತ್ರಗಳು ಗುರುದತ್ತರ . ಚೌದು ವಿನ್‌ಕ ಚಾಂದ, ಸಾಹಿಬ್‌ ಬೀಬಿ  ಔರ್‌ ಗುಲಾಮ್, ಕಾಗಜ್ ಕೆ ಫೂಲ್‌, ಪ್ಯಾಸಾ  ಚಿತ್ರಂಗದ ಮೈಲಿಗಲ್ಲುಗಳು.
ಹಿನ್ನೆಲೆ ಗಾಯನದಲ್ಲೂ ತ್ರಿವಳಿಗಳ ಪ್ರಾಭಲ್ಯ. ಮಹಮ್ಮದ್‌ರಫಿ , ಮುಖೇಶ್ ಮತ್ತು ಕಿಶೋರ್‌ ಕುಮಾರ್.ಅವರು ಕ್ರಮವಾಗಿ ದಿಲೀಪ್‌ಕುಮಾರ್‌,ರಾಜಕಪೂರ್‌ ಮತ್ತು ದೇವಾನಂದರ ಧ್ವನಿಗಳು. . ಗಾಯಕಿಯರಲ್ಲಿ  ಎಸ್‌ಜಾನಕಿ, ಸುಶೀಲ ಮತ್ತು ಎಲ್‌ ಆರ್‌ ಈಶ್ವರಿಯವರದೆ ರಾಜ್ಯವಾದರೆ, ಹಿಂದಿಯಲ್ಲಿ ಲತಾ ಮಂಗೇಶ್ಕರ್‌  ಅನಭಿಷಕ್ತ ಸಾಮ್ರಾಜ್ಞಿ. ಗಾಯಕರಲ್ಲಿ ಪಿಬಿ ಎಸ್‌ ಮತ್ತು ಘಂಟಸಾಲ ಅವರೆ ಏಕಮೇವಾದ್ವಿತೀಯರು.
.ಹೊಸ ಪೀಳಿಗೆಯ  ಬಾಲ ಚಂದರ್‌, ಲಕ್ಷ್ಮಿನಾರಾಯಣ್, ಇನ್ನೂ  ಕಾಲೂರಲು ಪ್ರಯತ್ನಿಸುತಿದ್ದರು. ದಕ್ಷಿಣ ಭಾರತದ ಏಕೈಕ ಚಿತ್ರನಿರ್ಮಾಣ ಕೇಂದ್ರವೆಂದರೆ ಮದ್ರಾಸು.ಅಲ್ಲಿ ಕನ್ನಡದವರು ಶ್ರೀಮಂತರ ಮದುವೆಯಲ್ಲಿನ ದೂರದ ಬಡ ನೆಂಟರಿದ್ದಂತೆ. ಕನ್ನಡ ಚಿತ್ರೀಕರಣ ಏನಿದ್ದರೂ ರಾತ್ರಿ ೯ ರ ಮೇಲೆ.  ಕಾರಣ ಆ ಸಮಯದಲ್ಲಿ ಸ್ಟುಡಿಯೋದ ಬಾಡಿಗೆ ಅರ್ಧ ಕ್ಕಿಂತ ಕಡಿಮೆ.ಎಲ್ಲ ತಾಂತ್ರಿಕ ಪರಿಣಿತರು ಅಲ್ಲಿಯವರೆ.. ಸಾಕಷ್ಟು ಹೋರಾಟದ ನಂತರ ಕನ್ನಡ ಚಿತ್ರಗಳು ಕರ್ನಾಟಕಕ್ಕೆ ಬಂದು ತಳ ಊರಿತು.
 ಎನ್‌ ಟಿ ಆರ್‌ ಮತ್ತು ಎ ಎನ್‌ ಆರ್‌  ಜತೆಯಾಗಿ ಜನಪ್ರಿಯರು  ಒಬ್ಬರು ಮಾಸ್‌ ನಾಯಕ ನಾದರೆ, ಇನ್ನೊಬ್ಬರು ಕ್ಲಾಸ್‌  ನಾಯಕರು ಜತೆಗೆ ಕಾಂತಾರಾವ್‌ ಸಹ ಇದ್ದರು.
ಆಗ ತಮಿಳಿನಲ್ಲಿ ಶಿವಾಜಿಗಣೇಶನ್‌  ಕ್ಲಾಸ್‌ ಪ್ರೇಕ್ಷಕ್ಷಕರ ಕಣ್ಮಣಿಯಾದರೆ  ಎಂ ಜಿ. ಆರ್    ಜನ ಸಾಮಾನ್ಯರಲ್ಲಿ ಜನಪ್ರಿಯ . ಮತ್ತು  ಜತೆಗೆ ಜೈಮಿನ ಗಣೇಶನರ ಚಿತ್ರಗಳು ಪೈ ಪೋಟಿಯಲ್ಲಿ ಬರುತ್ತಿದ್ದವು.
ಇನ್ನು ಹಿಂದಿ ಚಿತ್ರರಂಗದಲ್ಲಿ ಆಗ ಮೂವರದೆ ರಾಜ್ಯಭಾರ. ರಾಜಕಪೂರ್‌, ದೇವಾನಂದ ಮತ್ತು ದಿಲೀಪ್ ಕುಮಾರ್‌.  ಅವರ ಚಿತ್ರಗಳು ಸದಾ ಪೈಪೋಟಿಯ ಮೇಲೆ ಬಿಡುಗಡೆಯಾಗುತಿದ್ದವು ಮೆಜೆಸ್ಟಿಕ್‌ನ ಪ್ರಭಾತ್‌, ಕಲ್ಪನಾ ಅವಕ್ಕೆ ಮೀಸಲು. ಅದೆ ತಾನೆ ಅಲಂಕಾರ್‌ ಚಿತ್ರ ಮಂದಿರ ವನ್ನು ಹೊಸದಾಗಿ ಕಟ್ಟಲಾಗಿತ್ತು. ಅದು ಬೆಂಗಳೂರಿನ ಸ್ಟಾರ್‌ ಆಕರ್ಷಣೆ. ಬೆಂಗಳೂರಿಗೆ ಬಂದು ಅಲಂಕಾರ್‌ನಲ್ಲಿ ಸಿನೆಮಾ ನೋಡದಿದ್ದರೆ ಎನೋ ಕಳೆದು ಕೊಂಡ ಅನುಭವ.
.ಕನ್ನಡದಲ್ಲೂ ಕುಮಾರತ್ರಯರ ಕಾಲ. ರಾಜಕುಮಾರ ,ಉದಯಕುಮಾರ ಮತ್ತು ಕಲ್ಯಾಣ ಕುಮಾರ ಮಿಂಚುತಿದ್ದರು. ಭಕ್ತಿಪ್ರಧಾನ ಪಾತ್ರಕ್ಕೆ ರಾಜಕುಮಾರ್‌ ಹೆಸರಾದರೆ , ಭಾವ ಪೂರ್ಣ ಅಭಿನಯಕ್ಕೆ ಉದಯಕುಮಾರ್ ಎತ್ತಿದ ಕೈ. ಸಾಮಾಜಿಕಪಾತ್ರಗಳಿಗೆ  ಕಲ್ಯಾಣ ಕುಮಾರ್ ಹೇಳಿ ಮಾಡಿಸಿದಂತೆ ಇದ್ದರು.ಕಲ್ಯಾಣ ಕುಮಾರ್‌ ತಮಿಳು ಚಿತ್ರರಂಗದಲ್ಲೂ ಹೆಸರು ಮಾಡಿ ಒಂದು ಸಲ ನಮ್ಮ ಮನೆ ಮಾತು ತಮಿಳು ಎಂದು ಹೇಳಿಕೆ ನೀಡಿ ಕನ್ನಡಿಗರ ಅಸಮಾಧಾನಕ್ಕೆ ಕಾರಣರಾದರು. ಉದಯ ಕುಮಾರ್‌ಶಿಸ್ತಿನ ಜಿವನ ರೂಡಿಸ ಕೊಳ್ಳದೆ ಬೇಡಿಕೆ ಕಳೆದುಕೊಂಡರು. ರಾಜ್‌ ಕುಮಾರ್ ಮಾತ್ರ ದಿನದಿಂದ ದಿನಕ್ಕೆ  ತಮ್ಮ ಶಿಸ್ತಿನ ಜೀವನ, ಕನ್ನಡದ ಪ್ರೇಮ,ಕಲಾಬದ್ದತೆಯಿಂದ ಎಲ್ಲ ಬಗೆಯ ಪಾತ್ರ ಗಳಲ್ಲಿ ಪರಕಾಯ ಪ್ರವೇಶ ಮಾಡಿ ದಕ್ಷಿಣ ಬಾರತಲ್ಲೆ ಮಾದರಿ ತಾರೆಯಾದರು.
ಆಂಧ್ರದಎನ್‌ಟಿ ಆರ್‌ , ತಮಿಳುನಾಡಿನಲ್ಲಿ ಎಂಜಿಆರ್‌ ತಮ್ಮಜನಪ್ರಿಯತೆಯಿಂದ ಮುಖ್ಯ ಮಂತ್ರಿಯಾದರು. ಆದರೆ ರಾಜ ಕುಮಾರ್‌ ಮಾತ್ರ ತಮ್ಮನ್ನು ಕನ್ನಡಕಕಲಾರಂಗಕ್ಕೆ ಮುಡುಪಿಟ್ಟುಕೊಂಡರು. ಒಂದು ಸಮಯದಲ್ಲಿ ಮುಖ್ಯ ಮಂತ್ರಿಯಾಗುವ ಆಮೀಷವೂ ಬಂದಿತ್ತು ಇಂದಿರಾಗಾಂಧಿಯವರ ವಿರುದ್ಧ ಚಿಕ್ಕ ಮಗಳೂರಿನಲ್ಲಿ ಸ್ಪರ್ಧಿಸಲು ಒತ್ತಾಯ ಮಾಡಿದರು. ಆದರೆ ಅವರು ಆಮಿಷಕ್ಕೆ ಒಳಗಾಗಲಿಲ್ಲ. ಅದೂ ಅಲ್ಲದೆ ಇತರೆ ಭಾಷಾ ಚಿತ್ರರಂಗದ ಕರೆಗೆ ಓ ಗೊಡಲಿಲ್ಲ. ಅಷ್ಟೆ ಅಲ್ಲ  ಒಂದು ಹಂತದ ನಂತರ ಚಿತ್ರದಲ್ಲೂ ಬೀಡಿ. ಸಿಗರೇಟು, ಕುಡಿತದ ದೃಶ್ಯಗಳಲ್ಲಿ ಅಭಿನಯಸದೆ ಮುಂದಿನ ಪೀಳಿಗೆಗ ಮಾದರಿಯಾದರು.ಗೊಕಾಕ ಚಳುವಳಿಯಲ್ಲಿ ಅವರ ಪ್ರವೇಶದಿಂದ ಮಿಂಚಿನ ಸಂಚಾರವಾಯಿತು.ಹೀಗಾಗಿ ಅವರು ನಮ್ಮ ದೇಶದ ಯಾವುದೆ ನಟರೂ ಏರದ ಉನ್ನತ ಮಟ್ಟ ಮುಟ್ಟಿದರು ಕನ್ನಡ ನಾಡು ನುಡಿಯ ಕಣ್ಮಣಿಯಾದರು

No comments:

Post a Comment