Monday, August 20, 2012

ಎಲ್ಲ ಬಿಟ್ಟು ಅಲ್ಲೇಕೆ ಸೇರುವೆ

ನನ್ನ ಬಿಎಸ್‌ಸಿ ಪರೀಕ್ಷೆ ಮುಗಿಯಿತು. ಇನ್ನೂ ಫಲಿತಾಂಶ ಬರಬೇಕಿತ್ತು. ಆಗಲೆ ನನಗೆ ಕೆಲಸದ ಅವಕಾಶ ದೊರಕಿತು. ಜಿಲ್ಲಾ ಬೋರ್ಡುಗಳು ಹೋಗಿ ತಾಲೂಕು ಬೋರ್ಡುಗಳು ಅಸ್ತಿತ್ವಕ್ಕೆ ಬಂದಿದ್ದವು. ಸ್ಥಳೀಯ ನಾಯಕರಿಗೂ ರಾಜಕೀಯ ಸ್ಥಾನಮಾನ ದೊರಕಿತು. ತಾಲೂಕ ಅಭಿವೃದ್ಧಿ ಮಂಡಳಿಯಲ್ಲಿ ಮೊದಲು ಮಾಡಿದ ಕೆಲಸವೆಂದರೆ ಹೈಸ್ಕೂಲುಗಳ ಮಂಜೂರಾತಿ. ಹೀಗಾಗಿ ನಮ್ಮ ಹೋಬಳಿಯಲ್ಲೆ ಮೂರು ಶಾಲೆಗಳು ತಲೆ ಎತ್ತಿದವು. ಇದ್ದ ಪ್ರಾಥಮಿಕ ಶಾಲೆಯಲ್ಲೆ ಹೈಸ್ಕೂಲು ಶುರುವಾದವು. ಆದರೆ ಸಿಬ್ಬಂದಿಗೆ ಏನು ಮಾಡುವುದು. ಜಿಲ್ಲಾ ಬೋರ್ಡುಗಳಲ್ಲಿ ಇದ್ದವರು ನಗರ ಪ್ರದೇಶಗಳನ್ನು ಆಯ್ದುಕೊಂಡರು. ಆದರೆ ಹಳ್ಳಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳವಾಯಿತು. ನೇಮಕಾತಿ ಪ್ರಕ್ರಿಯೆ ಕಠಿಣವಾಗಿರಲಿಲ್ಲ. ತಾಲೂಕ ಬೋರ್ಡು ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿತ್ತು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಅಭ್ಯರ್ಥಿಗಳ ಪಟ್ಟಿ ಕರೆದು ಸಂದರ್ಶನ ನಡೆಸಿ ನೇಮಕಾತಿ ಆದೇಶ ನೀಡುತಿದ್ದರು. ಅಲ್ಲಿ ಲಭ್ಯವಿಲ್ಲವೆಂದರೆ ಸ್ಥಳೀಯವಾಗಿ ನೇಮಕ ಮಾಡಲು ಅವಕಾಶವಿತ್ತು. ಬೇರೆ ವಿಷಯಗಳ ಪದವೀಧರರು ದೊರೆಯುತಿದ್ದರು. ಆದರೆ ವಿಜ್ಞಾನ ಮತ್ತು ಗಣಿತದ ಪದವೀಧರರ ಕೊರತೆ ಬಹಳವಾಗಿತ್ತು. ಸುಮಾರು ನಾಲ್ಕಾರು ಶಾಲೆಗಳಲ್ಲಿ ಆ ಹುದ್ದೆಗಳು ಖಾಲಿ ಖಾಲಿ.
ನಾನು ನಮ್ಮ ಗ್ರಾಮದಲ್ಲಿ ಮೊದಲ ಪದವೀಧರ ಮತ್ತು ನಮ್ಮ ಭಾಗದಲ್ಲಿ ವಿಜ್ಞಾನ ಪದವಿ ಓದಿದ ಪ್ರಥಮವ್ಯಕ್ತಿ. ಅದರಿಂದ ಹಿತೈಷಿಗಳೊಬ್ಬರು ನಮ್ಮ ಊರಿಗೆ ನಾಲ್ಕು ಮೈಲು ದೂರವಿರುವ ತಾಲೂಕು ಬೋರ್ಡು ಶಾಲೆಯಲ್ಲಿ ಗಣಿತ ಶಿಕ್ಷಕ ಹುದ್ದೆ ಖಾಲಿ ಇರುವುದು. ಅದೆ ಊರಿನವರಾದ ಗೌಡರು ಉಪಾಧ್ಯಕ್ಷರು ಅವರಿಗೆ ಒಂದು ಮಾತು ಹೇಳಿದರೆ ಕೆಲಸ ದೊರಕುವುದು ನಿಮ್ಮ ಹುಡುಗನನ್ನು ಕೆಲಸಕ್ಕೆ ಸೇರಿಸುವಿರಾ? ಎಂದು ಕೇಳಿದರು. ಅದೆ ಸಮಯದಲ್ಲಿ ನನಗೆ ಆಗಲೆ ಲೋಕಲ್‌ ಅಡಿಟ್‌ ಸರ್ಕಲ್‌ ನಲ್ಲಿ ಸಂದರ್ಶನದ ಕರೆ ಬಂದಿತ್ತು. ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ ಸಹಾಯಕನ ಹುದ್ದೆಗೆ ಸಂದರ್ಶನವೂ ಮುಗಿದಿತ್ತು. ಆ ಸಮಯದಲ್ಲಿ ಕಚೇರಿಯ ಅಗತ್ಯಕ್ಕೆ ತಕ್ಕಂತೆ ಅಲ್ಲಿನ ಅಧಿಕಾರಿಗಳೆ ನೇಮಕ ಮಾಡುವ ಅಧಿಕಾರವಿತ್ತು. ನಂತರ ಅದನ್ನು ಹಿರಿಯ ಅಧಿಕಾರಿಗಳು ಅನುಮೋದಿಸುತಿದ್ದರು. ಪದವೀಧರರಿಗೆ ನಿರುದ್ಯೋಗದ ಮಾತೆ ಇರಲಿಲ್ಲ.
ಆ ವರ್ಷ ನನಗೆ ನೆನಪಿರುವಂತೆ ನಮ್ಮ ಜಿಲ್ಲೆಯ ಕಾಲೇಜಿನಲ್ಲಿ ಬಿಎಯಲ್ಲಿ ಇಬ್ಬರು, ವಾಣಿಜ್ಯದಲ್ಲಿ ಒಬ್ಬರು ಮಾತ್ರ ಪದವಿ ಪಡೆದಿದ್ದರು ಮತ್ತು ವಿಜ್ಞಾನದಲ್ಲಿ ಯಾರೂ ಪಾಸಾಗಿರಲಿಲ್ಲ. ನಮ್ಮ ಜಿಲ್ಲೆ ಹೊಸದಾಗಿ ಮೈಸೂರು ರಾಜ್ಯಕ್ಕೆ ಸೇರಿದ್ದರಿಂದ ಬೇರೆ ಕಡೆಯವರು ಯಾರೂ ನಮ್ಮ ಜಿಲ್ಲೆಗೆ ಬರಲು ಇಷ್ಟಪಡುತ್ತಿರಲಿಲ್ಲ. ಪ್ರೌಢಶಾಲೆಗಳನ್ನು ತೆರೆದಿದ್ದರು. ಆದರೆ ಸೂಕ್ತ ಸಿಬ್ಬಂದಿಯ ಕೊರತೆ ಬಹಳವಾಗಿತ್ತು. ಆಗ ತಾನೆ ಅಧಿಕಾರದ ಕುರ್ಚಿ ಏರಿದ್ದ ನಾಯಕರಿಗೆ ಜನರಿಗೆ ಉತ್ತರ ಹೇಳುವುದು ತಮ್ಮ ಕೆಲಸ ಎಂದು ಕೊಂಡಿದ್ದರು. ನನಗೆ ಒಂದೆ ಬಾರಿ ಮೂರು ಅವಕಾಶಗಳು ಸಿಕ್ಕಿದ್ದವು. ಯಾವುದಕ್ಕೆ ಹೋಗಬೆಕು, ಯಾವುದನ್ನು ಬಿಡಬೇಕು ಎಂಬುದೆ ಸಂದಿಗ್ಧವಾಗಿತ್ತು. ಬಳ್ಳಾರಿಯ ಕೆಲಸ ಬೇಡ ಎಂದು ಒಮ್ಮತದ ತಿರ್ಮಾನವಾಯಿತು. ಅದುವರೆಗೆ ನಾನೂ ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಹೋಗಿರಲಿಲ್ಲ. ಅಲ್ಲಿಗೆ ಪೂರ್ತಿ ಅಪರಿಚಿತನಾಗಿದ್ದೆ. ಇನ್ನು ಕೃಷಿ ಇಲಾಖೆಯ ಗುಮಾಸ್ತನ ಕೆಲಸ. ಅದು ಸರ್ಕಾರಿ ಕೆಲಸ. ದೂರದ ಊರಿಗೆ ವರ್ಗವಾಗುವ ಅವಕಾಶವಿತ್ತು. ನಾಲಕ್ಕೆ ಮೈಲು ದೂರದಲ್ಲಿದ್ದ ಪ್ರೌಢಶಾಲಾ ಶಿಕ್ಷಕನ ಹುದ್ದೆಗೆ ಸೇರಬೇಕೆಂದು ಒಮ್ಮತದಿಂದ ಒಪ್ಪಲಾಯಿತು.
ಕೆಲಸ ಹತ್ತಿರದಲ್ಲೆ. ಮನೆಯಿಂದ ಓಡಾಡಬಹುದು. ಎಲ್ಲ ನಾವು ಕಂಡುಂಡ ಜನ. ಮೇಲಾಗಿ ನೇಮಕಾತಿ ಆದೇಶವನ್ನು ಮನೆಗೆ ತಂದು ತಲುಪಿಸಿದ್ದರು. ಹೇಗೂ ಬಸ್ಸಿನ ಅನುಕೂಲ ಇತ್ತು. ಸೈಕಲ್ಲಾದರೆ ಅರ್ಧ ಗಂಟೆ ಪ್ರಯಾಣ. ಮನಸ್ಸು ಮಾಡಿದರೆ ನೆಡದೆ ಹೋಗಬಹುದಿತ್ತು. ಅರ್ಜಿ ಹಾಕದೆ, ಪರೀಕ್ಷೆ ಬರೆಯದೆ, ಸಂದರ್ಶನ ನೀಡದೆ ನೇಮಕಾತಿ  ಆದೇಶ ಕೈಗೆ ಬಂದಿತ್ತು. ಬಹುಶಃ ಆಗಿನ ವೇತನ ನೂರು ರೂಪಾಯಿಗೂ ತುಸು ಹೆಚ್ಚು ಎಂದು ನೆನಪು.
ಒಂದು ಶುಭ ದಿನ ನೋಡಿ ದೇವರಿಗೆ, ಅಪ್ಪ ಅಮ್ಮಗೆ ಅಡ್ಡಬಿದ್ದು ಕೆಲಸಕ್ಕೆ ಸೇರಲು ಹೊರಟೆ. ಆಗ ನನಗೆ ಇಪ್ಪತ್ತೊಂದು ವರ್ಷ ವಯಸ್ಸು. ಆಕೃತಿಯಲ್ಲಿ ವಾಮನ. ಐದು ಅಡಿ ಎರಡು ಅಂಗುಲಕ್ಕೆ ಎತ್ತರ ಸೀಮಿತವಾಗಿತ್ತು. ಭಾರಿ ಗಾತ್ರದ ಆಳಲ್ಲ. ಆಗಲೂ ಕಡ್ಡಿ ಪೈಲವಾನನೆ. ತೂಕ ನೂರು ಮೇಲೊಂದು ಹತ್ತು ಪೌಂಡು. ಮೀಸೆ ಅದೆ ತಾನೆ ಕಪ್ಪಾಗಿದ್ದವು. ಗಡ್ಡ ವಾರಕೊಮ್ಮೆ ಮಾಡಿಕೊಂಡರೂ ನಡೆಯುತಿತ್ತು. ಬೆಂಗಳೂರಿನಲ್ಲಿ  ಓದಿದವನಾದರೂ ಬಟ್ಟೆ ಬರೆಯಲ್ಲಿ ಹೇಳಿಕೊಳ್ಳುವ ಒಪ್ಪ ಓರಣ ಇರಲಿಲ್ಲ. ಪ್ಯಾಂಟು, ಪೂರ್ಣ ತೋಳಿನ ಸ್ಲಾಕ್‌ ಷರ್ಟ್. ಕಾಲಲ್ಲಿ ಚಪ್ಪಲಿ. ಅಲ್ಲಿಗೆ ಮುಗಿಯಿತು ಅಲಂಕಾರ. ಬೆಳಗ್ಗೆ ಒಂಬತ್ತು ಗಂಟೆಗೆ ಮನೆಯಿಂದ ಹೊರಟೆ. ಸ್ವಲ್ಪ ಕಾದ ನಂತರ ಬಸ್ಸು ಬಂದಿತು. ಜನ ಅದರಲ್ಲಿ ಕಿಕ್ಕಿರಿದಿದ್ದರು. ಹೇಗೋ ತೂರಿಕೊಂಡು ಒಳಗೆ ಹೋಗಿ ಮೇಲಿನ ಕಂಬಿ ಹಿಡಿದು ನೇತಾಡುತ್ತಾ ನಿಂತುಕೊಂಡೆ. ಸುತ್ತಮುತ್ತಲೂ ನಿಂತವರು ಕೈನಲ್ಲಿ ಪುಸ್ತಕ ಹಿಡಿದಿದ್ದರು. ಎಲ್ಲ ಹಳ್ಳಿಯ ಹುಡುಗರು. ರೈತರ ಮಕ್ಕಳು. ದಾಂಡಿಗರು. ನನಗಿಂತ ಅರ್ಧ ಅಡಿ ಎತ್ತರ ಇದ್ದಿರಬಹುದು. ನಾನು ಕೈನಲ್ಲಿ ಪುಸ್ತಕ ಹಿಡಿದಿದ್ದೆ. ಅವರು ಕೂಡಾ ನಾನು ಸೇರಲಿರುವ ಶಾಲೆಯ ವಿದ್ಯಾರ್ಥಿಗಳೆ ಇರಬಹುದು ಎನಿಸಿತು. ಏಕೆಂದರೆ ಆ ದಿಕ್ಕಿನಲ್ಲಿ ಇದ್ದುದು ಅದೊಂದೆ ಶಾಲೆ. ನಾನು ಆ ಮಾತು ಈ ಮಾತು ಆಡುತ್ತಾ ಎಲ್ಲಿಗೆ ಹೋಗುತ್ತಿರುವಿರಿ? ಎಂದು ಕೇಳಿದೆ. ಖಾಸಗಿ ಪಾಠ ಮುಗಿಸಿ ಶಾಲೆಗೆ ಹೊಗುತ್ತಿರುವುದಾಗಿ ತಿಳಿಸಿದರು. ಅವರು ತಾವು ನಾನು ಹೋಗಲಿರುವ ಹೈಸ್ಕೂಲಿನಲ್ಲಿ ಓದುತ್ತಿರುವುದಾಗಿ ತಿಳಿಸಿದರು. ಆ ಶಾಲೆ ಹೇಗಿದೆ, ನಾನೂ ಅಲ್ಲಿಗೆ ಹೋಗಬೇಕಾಗಿದೆ ಎಂದೆ. ಅವರು ನನ್ನನ್ನು ಮಿಕಿ ಮಿಕಿ ನೋಡಿದರು. ನೀನೂ ಆ ಶಾಲೆಗೆ ಹೊರಟಿರುವೆಯಾ ಎಂದರು.
ನಾನು ತಲೆಯಾಡಿಸಿದೆ. `ಅಲ್ಲಿಗೆ ಸೇರಬೇಡ. ನೀನು ಹಾಳಾಗಿ ಹೋಗುತ್ತೀಯ. ಯಾರದೋ ಮಾತು ಕೇಳಿ ನಾವು ಅಲ್ಲಿ ಸೇರಿದೆವು. ಅಲ್ಲಿ ಪಾಠಗಳೆ ನಡೆಯುವುದಿಲ್ಲಎಂದರು.
ನಾನು ಕೂತೂಹಲದಿಂದ, ಏಕೆ ಹಾಗೆ ಹೇಳುವಿರಿ? ಎಂದೆ.
`ಆ ಶಾಲೆ ಶುರುವಾಗಿ ಮೂರು ವರ್ಷವಾಯಿತು ನಾವು ಈಗ ಎಸ್‌ಎಸ್‌ಎಲ್‌ಸಿಗೆ ಬಂದಿದ್ದೇವೆ. ಅಲ್ಲಿ ಗಣಿತ ಮತ್ತು ವಿಜ್ಞಾನದ ಮೇಷ್ಟರೆ ಇಲ್ಲ. ನಾವು ನಗರದಲ್ಲಿ ಖಾಸಗಿ ಪಾಠಕ್ಕೆ ಹೊಗುತ್ತೇವೆ. ಹಣ, ಸಮಯ ಹಾಳು. ಸುಮ್ಮನೆ ಇಲ್ಲಿಗೆ ಯಾಕೆ ಹೋಗುವೆ. ಹೇಗೂ ನಿಮ್ಮ ಊರಿಗೆ ಪಟ್ಟಣ ಹತ್ತಿರವಿದೆ ಅಲ್ಲಿ ದೊಡ್ಡ ಶಾಲೆ ಸೇರುಎಂದು ಸಲಹೆ ನೀಡಿದರು.
ನಾನು ಮುಗಳುನಗೆ ನಕ್ಕು ಸುಮ್ಮನೆ ತಲೆಯಾಡಿಸಿದೆ.
ಅವರು ನನ್ನ ಆಕಾರ ನೋಡಿ ನಾನು ಹೈಸ್ಕೂಲು ಸೇರಲು ಹೊರಟ ಹುಡುಗ ಎಂದುಕೊಂಡಿದ್ದರು. ನಾನು ಶಾಲೆಯ ಕಛೇರಿಗೆ ಹೋಗಿ ವರದಿ ಮಾಡಿಕೊಂಡೆ. ಅಲ್ಲಿನ ಹೆಡ್‌ ಮೇಷ್ಟ್ರು ರಾಯಸಂ ವಂಶಸ್ಥರು. ಚೆನ್ನಾಗಿ ಓದಿಕೊಂಡವರು. ಉತ್ತಮ ಶಿಕ್ಷಕರು, ಅವರು ವಿಶ್ವಾಸದಿಂದ ಮಾತನಾಡಿಸಿದರು. ಅಲ್ಲಿನ ಪರಿಸ್ಥಿತಿಯನ್ನು ತಿಳಿಸಿದರು. ಅಲ್ಲಿ ಗಣಿತ ಮತ್ತು ವಿಜ್ಞಾನ ಪಾಠ ಕುಂಠಿತವಾಗಿದೆ ಆಸಕ್ತಿವಹಿಸಿ ಸುಧಾರಿಸಿ ಎಂದು ಹೇಳಿದರು. ಅಲ್ಲದೆ ನಾನು ಹೊಸಬನೆ ಅದರೂ ಎಸ್‌ಎಸ್ಎಲ್‌ಸಿ ಗಣಿತ ಪಾಠ ಮಾಡುವ ಹೊಣೆ ನೀಡಿದರು.
ಮೊದಲನೆ ಪಿರಿಯಡ್‌ನಲ್ಲೆ ಎಸ್ಎಸ್‌ಎಲ್‌ಸಿ ತರಗತಿ. ನನ್ನನ್ನು ತರತಿಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. `ನಿಮಗೆ ಈವರೆಗೆ ಪಾಠಕ್ಕೆ ತೊಂದರೆ ಆಗಿತ್ತು. ಇನ್ನು ಆ ಚಿಂತೆ ಇಲ್ಲ ಅದೃಷ್ಟದಿಂದ ಗಣಿತಕ್ಕೆ ಶಿಕ್ಷಕರು ಬಂದಿರುವರು. ಬೆಂಗಳೂರಲ್ಲಿ ಕಲಿತವರು. ಅವರೊಂದಿಗೆ ಸಹಕರಿಸಿ ಚೆನ್ನಾಗಿ ಕಲಿಯಿರಿ. ಅವರ ಅನುಭವದ ಲಾಭ ಪಡೆಯಿರಿಹೀಗೆ ಹೇಳಿ ಹೊರಟರು.
ನಾನು ನನ್ನ ಪರಿಚಯ ಮಾಡಿಕೊಂಡೆ. ಎಲ್ಲರೂ ತಮ್ಮ ತಮ್ಮ ಪರಿಚಯ ಮಾಡಿಕೊಳ್ಳಲು ಹೇಳಿದೆ. ನನಗೆ ಬಸ್ಸಿನಲ್ಲಿ ಸಿಕ್ಕ ಪಡ್ಡೆ ಹುಡುಗರು ಅಲ್ಲಿಯೆ ಇದ್ದರು. ಅವರು ಎದ್ದು ನಿಂತು ತಮ್ಮ ತಮ್ಮ ಹೆಸರು ಹೇಳಿದರು. ತರಗತಿಯಲ್ಲಿ ಓಬಯ್ಯ, ಬೋರಯ್ಯ, ಜೋಗಯ್ಯ, ಚೌಡಪ್ಪ ಎಂಬ ಹೆಸರಿನ ಹುಡುಗರು ಹೆಚ್ಚು ಇದ್ದರು. ಅಲ್ಲಿ ನಾಯಕ ಜನಾಂಗದವರೆ ಬಹಳ. ಹೊಸದಾಗಿ ಹೈಸ್ಕೂಲ್ ಶುರುವಾದಾಗ ಶಾಲೆ ಬಿಟ್ಟವರನ್ನೂ ಕರೆದುಕೊಂಡು ಬಂದು ದಾಖಲು ಮಾಡಿದ್ದರು. ಅದಕ್ಕೆ ವಯಸ್ಸಿನಲ್ಲೂ ಆಕಾರದಲ್ಲೂ ನನಗಿಂತ ದೊಡ್ಡ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಯೋಗ ನನಗೆ ಬಂದಿತು.
ಮೊದಲೆ ಪರಿಚಯವಾಗಿದ್ದ ಹುಡುಗರತ್ತ ನೋಡಿದೆ, `ನಿಮ್ಮ ಮಾತಿನಂತೆ ಬೇರೆ ಶಾಲೆಗೆ ಹೋಗಲು ಆಗಲಿಲ್ಲ. ಅದಕ್ಕೆ ತಪ್ಪು ತಿಳಿಯಬಾರದು. ಇಲ್ಲಿ ನನ್ನ ಅಗತ್ಯವಿದೆ. ನಾನು ಇಲ್ಲಿ ಪಾಠ ಕೇಳಲು ಬಂದಿಲ್ಲ. ಪಾಠ ಮಾಡಲು ಬಂದಿರುವೆ. ಇನ್ನು ನಿಮಗೆ ಯಾವುದೆ ಸಮಸ್ಯೆ ಇರದುಎಂದು ನಗು ನಗುತ್ತಾ ಸಮಜಾಯಿಷಿ ನೀಡಿದೆ. ಅವರೆಲ್ಲ ಸಂಕೋಚದಿಂದ ತಲೆ ತಗ್ಗಿಸಿ ಕುಳಿತಿದ್ದರು.   
ಆ ವರುಷ ನಲವತ್ತು ಹುಡುಗರಲ್ಲಿ ಇಬ್ಬರೆ ಪಾಸಾದರು. ಆರತಿಗೆ ಒಬ್ಬಳು ಮತ್ತು ಕೀರುತಿಗೆ ಒಬ್ಬ ಎಂಬಂತೆ ಒಬ್ಬ ಹುಡುಗಿ ಒಬ್ಬ ಹುಡುಗ ಮಾತ್ರ ಪಾಸಾಗಿದ್ದರು. ಆದರೆ ಗಣಿತದಲ್ಲಿ ೨೦ಕ್ಕೂ ಹೆಚ್ಚು ಜನ ಪಾಸಾಗಿದ್ದರು. ವಿಜ್ಞಾನದಲ್ಲೆ ನಪಾಸಾದವರು ಬಹಳ. ಅದಕ್ಕೆ ಮುಂದಿನ ವರ್ಷ ಗಣಿತ ಮತ್ತು ವಿಜ್ಞಾನ ಎರಡೂ ವಿಷಯಗಳನ್ನು ಎಸ್‌ಎಸ್ಎಲ್‌ಸಿಗೆ ನಾನೆ ಪಾಠ ಮಾಡಬೇಕಾಯಿತು. ವರ್ಷದಿಂದ ವರ್ಷಕ್ಕೆ ಫಲಿತಾಂಶ ಸುಧಾರಿಸತೊಡಗಿತು. ನನಗೂ ಮಕ್ಕಳ ಅಕ್ಕರೆ ಬೊಗಸೆಗಟ್ಟಲೆ ಸಿಕ್ಕಿತು.
ಕೆಲಸಕ್ಕೆ ಸೇರಿದ ಎರಡು ತಿಂಗಳಲ್ಲೆ ನನ್ನ ಪದವಿಯ ಫಲಿತಾಂಶ ಬಂದಿತು. ನಾನು  ತರಬೇತಿ ರಹಿತ ಪದವೀಧರ ಶಿಕ್ಷಕನಾಗಿ ಬಡ್ತಿ ಪಡೆದೆ. ನನಗೆ ಅಲ್ಲಿ ದೊರೆತ ಅನುಭವ ಅಪಾರ. ಹೊಸದಾಗಿ ಕೆಲಸಕ್ಕೆ ಸೆರಿದರೂ ಹೆಚ್ಚಿನ ಹೊಣೆ ಲಭಿಸಿತು. ಮಾಡಿದ ಪಾಠವನ್ನೆ ಮೆಚ್ಚಿ ಬೆನ್ನುತಟ್ಟುವ ಶಾಲಾ ಮುಖ್ಯಸ್ಥರು, ಅವರು ಮದರಾಸಿನಲ್ಲಿ ಓದಿದವರು, ಸಾಹಿತ್ಯಾಸಕ್ತರು. ನನಗೆ ಓದುವ ಗೀಳು ಇರುವುದು ಅರಿತು ತಮ್ಮಲ್ಲಿನ ಪುಸ್ತಕಗಳನ್ನು ಓದಲು ಕೊಡತೊಡಗಿದರು. ವಿಶೇಷವಾಗಿ ಅವರಲ್ಲಿ ಇಂಪ್ರಿಂಟ್ ಎಂಬ ನಿಯತಕಾಲಿಕದ ದೊಡ್ಡ ಸಂಗ್ರಹವೆ ಇತ್ತು. ಅದು ಒಂದು ಇಂಗ್ಲಿಷ್‌ ಸಾಹಿತ್ಯ ಪತ್ರಿಕೆ. ಪ್ರತಿ ಸಂಚಿಕೆಯಲ್ಲೂ ಎರಡು ಮೂರು ಕಥೆಗಳು ಮತ್ತು ಕಾದಂಬರಿ ಇರುತಿದ್ದವು. ಅದರಿಂದಾಗಿ ನನಗೆ ಹೊಸ ಅವಕಾಶ ಸಿಕ್ಕಿತು. ಜತೆಗೆ ಅವರು ರೀಡರ್ಸ್ ಡೈಜೆಸ್ಟ್ ತರಿಸುತಿದ್ದರು. ನಾನು ಅವನ್ನೆಲ್ಲ ಕೊಂಡು ಓದುವುದಂತೂ ಕನಸಿನ ಮಾತು. ಅವರಿಂದಾಗಿ ನನಗೆ ಇಂಗ್ಲಿಷ್‌ ಸಾಹಿತ್ಯದ ಆಳ ಅಗಲಗಳ ಪರಿಚಯವಾಯಿತು.
ಅಂತೂ ತಮ್ಮ ಮಕ್ಕಳಿಗೆ ಎಲ್ಲ ವಿಷಯದಲ್ಲೂ ಪಾಠ ನಡೆಯುವುದೆಂಬ ನೆಮ್ಮದಿ ಪಡೆದ ಪೋಷಕರು ತೋರುವ ಆದರ ಗೌರವ ಮನತುಂಬಿಸಿತು. ಶಾಲಾ ವೇಳೆಯಾದ ಮೇಲೆ ಮನೆಪಾಠ ಮಾಡಬೇಕೆಂದು ಒತ್ತಡವೂ ಬಂದಿತು. ಅದಕ್ಕೆ ಹೆಡ್‌ ಮಾಸ್ಟರ್ ಅವರ ಒತ್ತಾಸೆಯೂ ಇತ್ತು. ಫಲಿತಾಂಶ ಸುಧಾರಿಸಿದರೆ ಶಾಲೆಗೆ ಕೀರ್ತಿ, ಅವರಿಗೂ ಹೆಸರು. ಕನಿಷ್ಠ ಪಕ್ಷ ಎಸ್‌ಎಸ್‌ಎಲ್‌ಸಿ ಮಕ್ಕಳಿಗಾದರೂ ಸಹಾಯ ಮಾಡುವ ದೃಷ್ಟಿಯಿಂದ ಪಾಠ ಮಾಡಲೆಬೇಕೆಂದು ಒತ್ತಾಯ ಬಂದಿತು. ಅಲ್ಲಿಯೆ ಹುಡುಗರು ಒಂದು ರೂಮು ಮಾಡಿಕೊಟ್ಟರು. ಶಾಲೆ ಬಿಟ್ಟ ಮೇಲೆ ಐದುವರೆಯಿಂದ ರಾತ್ರಿ ಏಳುವರೆವರೆಗೆ ಮನೆಪಾಠ  ಮಾಡಿ ನಂತರ ಊರಿಗೆ ಹೋಗುತಿದ್ದೆ. ಶನಿವಾರ ಭಾನುವಾರ ಆ ಮಕ್ಕಳೆ ನಮ್ಮ ಊರಿಗೆ ಬಂದು ಪಾಠ ಹೇಳಿಸಿಕೊಂಡು ಹೊಗುತಿದ್ದರು. ಮೇಲಾದಾಯವೂ ಬರತೊಡಗಿತು. ಲೆಕ್ಕದ ಮೇಷ್ಟ್ರು ಅಂದರೆ ರೊಕ್ಕದ ಮೇಷ್ಟ್ರು, ಅವರಿಗೇನು ಕಡಿಮೆ ಎನ್ನುವಂತಾಯಿತು.     

                                                                                       ಎಲ್ಲ ಬಿಟ್ಟು ಅಲ್ಲೇಕೆ ಸೇರುವೆ    http://kendasampige.com/images/xml.gif
             
http://kendasampige.com/images/trans.gif

No comments:

Post a Comment