Friday, February 24, 2017

ತಿಗಳಾರಿ ಲಿಪಿ ಆನ್‌ಲೈನ್‌ ಅಧ್ಯಯನ


             ಬಿ.ಎಂ.ಶ್ರೀಪ್ರತಿಷ್ಠಾನ. ೩ನೇಮುಖ್ಯರಸ್ತೆ,ಎನ್‌.ಆರ್.ಕಾಲನಿ,ಬೆಂಗಳೂರು-೧೯                                                              
                                           ತಿಗಳಾರಿ ಲಿಪಿ ಆನ್‌ಲೈನ್‌  ಅಧ್ಯಯನ

ವಿವರಣ ಪತ್ರಿಕೆ 
 
ತಿಗಳಾರಿ ಲಿಪಿಯು ಕರಾವಳಿ ಮತ್ತು ಮಲೆನಾಡಿನ ಭಾಗದಲ್ಲಿ  ಶತಮಾನಗಳ ಹಿಂದೆ ಸಂಸ್ಕೃತ ಮತ್ತು ಕೆಲ ಮಟ್ಟಿಗೆ ತುಳು ಭಾಷೆಯನ್ನು ಬರೆಯಲು  ಬಳಸಲಾಗುತಿದ್ದ ಬರಹ.. ಇದು ಒಂದು ರೀತಿಯಲ್ಲಿ ಗೂಢವಾದ ಲಿಪಿ. ಬಹುತೇಕ ಸಂಸ್ಕೃತವಿದ್ವಾಂಸರು ತಮ್ಮ ಮಂತ್ರ, ತಂತ್ರ ಹಾಗೂ ಸಾಹಿತ್ಯಗಳು ಅನೇಕರಿಗೆ ಅರ್ಥವಾಗಬಾರದೆಂದು ರಹಸ್ಯವಾಗಿರಿಸಬೇಕೆಂದು ಈ ಲಿಪಿ ಬಳಸಿದರೆಂದು ಹೇಳಲಾಗುವುದು. ಬಹುತೇಕ ಕೃತಿಗಳು ಮಠ, ದೇವಸ್ಥಾನ ಹಾಗೂ ಸಂಸ್ಥಾನಗಳಲ್ಲಿ ಇವೆ. ಈಗ ಅವುಗಳನ್ನು ಓದುವವರ ಸಂಖ್ಯೆಯೇ ವಿರಳವಾಗಿದೆ. ಬೆರಳೆಣಿಕೆಯಷ್ಟು ಜನರು ತಿಗಳಾರಿಯನ್ನುಅರ್ಥೈಸಬಲ್ಲರು. ಸುಮಾರು ಐದು ಸಾವಿರ ಕೃತಿಗಳು ಇವೆ. ಕೆಲವೇ ವರ್ಷಗಳಲ್ಲಿ ಅವು ಇದ್ದೂ ಇಲ್ಲದಾಗಬಹುದು.ಆದ್ದರಿಂದ ನಮ್ಮ ಪುರಾತನ ಸಾಹಿತ್ಯ ,ಸಂಸ್ಕೃತಿ ಮತ್ತು ಜ್ಞಾನವನ್ನು ಉಳಿಸಿಕೊಳ್ಳಲು ತಿಗಳಾರಿ ಬಲ್ಲ ಯುವ ಪಡೆಯನ್ನು ರೂಪಿಸವುದು ಅಗತ್ಯ. ಈ ದಿಶೆಯಲ್ಲಿ ಬಿ.ಎಂ.ಶ್ರೀ ಪ್ರತಿಷ್ಠಾನದ ಹಸ್ತಪ್ರತಿವಿಭಾಗವು ಆನ್‌ಲೈನ್‌ನಲ್ಲಿ ಕಲಿಸುವ ಯೋಜನೆ ರೂಪಿಸಿದೆ.  ಸಂಸ್ಕೃತ ಬಲ್ಲ ಮತ್ತು ತಂತ್ರಜ್ಞಾನದಲ್ಲಿ ನುರಿತವರಿದ್ದರೆ ಕಲಿಕೆಗೆ ಅನುಕೂಲ.ಅದೃಷ್ಟವಶಾತ್‌ ಸಂಸ್ಕೃತ ವಿಶ್ವವಿದ್ಯಾಯದ ಎಂ ಫಿಲ್‌ ಮತ್ತು ಪಿಎಚ್‌ಡಿ ವಿದ್ಯಾರ್ಥಿಗಳು ಭಾಗವಹಿಸಲು ಆಸಕ್ತರಾಗಿದ್ದಾರೆ. ಪ್ರತಿಷ್ಠಾನದಲ್ಲಿನ  ಗಣಕೀಕೃತ ತಿಗಳಾರಿ ಕೃತಿಗಳು ಬಹಳ ಉಪಯೋಗವಾಗಿವೆ.ಎಲ್ಲ ಕಲಿಕೆಯೂ ಅಂತರ್ಜಾಲದ ಮೂಲಕವೇ ಆಗುವುದು ಆಧುನಿಕ.ತಂತ್ರಜ್ಞಾನದ ಸಹಾಯದಿಂದ ಈ ಆರ್ವಾಚೀನ ಲಿಪಿಯನ್ನು ಉಳಿಸುವ ಈ ಪ್ರಯತ್ನ ದೇಶದಲ್ಲಿಯೇ ಮೊದಲನೆಯದು ಎನ್ನಬಹುದು. ಇದರ ಯಶಸ್ಸು ಅಭ್ಯರ್ಥಿಗಳ ಆಸಕ್ತಿಯನ್ನಯ ಅವಲಂಬಿಸಿದೆ. . ಈ ವಿನೂತನ  ಪ್ರಯತ್ನಕ್ಕೆ  ಎಲ್ಲ ಆಸಕ್ತರ ಬೆಂಬಲ ಬೇಕಿದೆ.

ಆಗಾಗ ಕೇಳಿಬರುವ ಪ್ರಶ್ನೆಗಳು   
೧.ಯಾರು ತಿಗಳಾರಿ ಲಿಪಿ ಕಲಿಕೆಗೆ ಅರ್ಹರು ?
 ಸಾಹಿತ್ಯ ಸಂಸ್ಕೃತಿ ಮತ್ತು ಸಂಸ್ಕೃತದಲ್ಲಿ ಆಸಕ್ತಿ ಇರುವ ಎಲ್ಲರೂ ಅರ್ಹರು.
೨. ಅಭ್ಯರ್ಥಿಗಳಿಗೆ ಯಾವ ಅರ್ಹತೆ ಅಗತ್ಯ?
ಅ.ತಂತ್ರಜ್ಞಾನದ ತಿಳುವಳಿಕೆ ಬೇಕೇ ಬೇಕು. ಅಂತ್‌ಜಾಲ, ವಾಟ್ಸ ಅಪ್‌, ಸ್ಮಾರ್ಟ    ಫೋನು ಬಳಸಲು ಪರಿಣಿತಿ ಬೇಕು ಜೊತೆಗೆ ಅವುಗಳನ್ನು ಹೊಂದಿರ ಬೇಕು ಸಂಸ್ಕೃತ ಜ್ಞಾನವಿದ್ದರೆ ಉತ್ತಮ
೩. ಕಲಿಕೆಗೆ ಏನಾದರೂ ಶುಲ್ಕವಿದೆಯಾ?
 ಬೋಧನಾ ಶುಲ್ಕ ಸದ್ಯಕ್ಕೆ   ಉಚಿತ. ( ನಿರ್ವಹಣಾವೆಚ್ಚ ಭರಿಸ ಬೇಕಾಗಬಹದು)
೪.ಕಲಿಕಾ ಅವಧಿ ಎಷ್ಟು?
ಸರಿಸುಮಾರು   ಆರುತಿಂಗಳು.
೫. ತಿಗಳಾರಿ ಕಲಿಕೆಯಿಂದ ಉಪಯೋಗ ವೇನು?
ತಿಗಳಾರಿಲಿಪಿ ಕಲಿತರೆ ಆ ಲಿಪಿಯಲ್ಲಿರುವ ಸುಮಾರು ಐದು ಸಾವಿರ ಕೃತಿಗಳ ಜ್ಞಾನದ ಅನಾವರಣ ಮಾಡಬಹುದು.
ವಿದ್ವಾಂಸರು, ಸಂಶೋಧಕರು ತಮಗೆ ಬೇಕಾದ ಮಾಹಿತಿಯನ್ನು ಮೂಲದಲ್ಲೇ ಪಡೆಯಬಹುದು.
ತಿಗಳಾರಿ ಕೃತಿಗಳನ್ನುಲಿಪ್ಯಾಂತರಿಸಿ ಪ್ರಕಟಿಸಲು ಸರ್ಕಾರದ ನೆರವು ಸಿಗುವುದು.
ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು ಮತ್ತು ಸಂಶೋಧಕರು  ತಮ್ಮಲ್ಲಿರುವ ತಿಗಳಾರಿ ಕೃತಿಗಳಲ್ಲಿರುವ ಮಾಹಿತಿ ಅರಿಯಲು ಲಿಪ್ಯಾಂತರಿಸಲು ಹಣ ಕೊಡಬಹುದು.
 ಎಲ್ಲಕ್ಕಿಂತ ಅಜ್ಞಾತವಾಗಿ ಕಣ್ಮರೆಯಾಗಬಹುದಾದ ಲಿಪಿಯನ್ನು ಉಳಿಸುವ ಸಾರ್ಥಕ ಕಾರ್ಯದಲ್ಲಿ ಭಾಗಿಯಾಗುವ ಸಂತೃಪ್ತಿ ನಮ್ಮದಾಗುವುದು.
                                         ಪಠ್ಯ ಕ್ರಮ
ಹಂತ -೧. ವಿದ್ಯು ನ್ಮಾನ ಮಾಧ್ಯಮದ ಮೂಲಕ ಸುಗುಮ ಸಂಪರ್ಕ ಸಾಧಿಸುವುದು  ( ಇಂಟರ್ನೆಟ್‌  ,ಸ್ಮಾರ್ಟ ಫೋನ್‌, ವಾಟ್ಸ ಅಪ್, ಗೂಗಲ್‌ಡ್ರೈವ್‌ ಬಳಕೆ ಹಾಗೂ ಕನ್ನಡದಲ್ಲಿ ಟೈಪ್‌ ಮಾಡುವ ಸಾಮರ್ಥ್ಯವೃದ್ಧಿ )
ಹಂತ -೨. ಕನ್ನಡ ತಾಳೆ ಗರಿ ಬರಹಗಳನ್ನು  ಆನ್‌ಲೈನ್‌ ಮೂಲಕ ಪಡೆಯುವ ಮತ್ತು ಓದಿ ಲಿಪ್ಯಾಂತರಿಸಿ ವಾಪಸ್ಸು ಕಳುಹಿಸುವ ಪರಿಣತೆ ಗಳಿಸುವುದು
ಹಂತ -೩  ತಿಗಳಾರಿ ವರ್ಣ ಮಾಲೆಯ ಕಲಿಕೆ
ಹಂತ-೪. ಕಾಗುಣಿತದ ಕಲಿಕೆ
ಹಂತ-೫    ಒತ್ತಕ್ಷರದ ಕಲಿಕೆ
ಹಂತ-೬ ಸರಳ ಕನ್ನಡ ಮತ್ತು ಸಂಸ್ಕೃತ ಪದಗಳನ್ನು  ತಿಗಳಾರಿಲಿಪಿಯಲ್ಲಿ ಬರೆಯಲು ಕಲಿಯುವುದು. ಅದೇ ರೀತಿಯಲ್ಲಿ ತಿಗಳಾರಿಲಿಪಿಯಲ್ಲಿನ ಪದಗಳನ್ನು ಕನ್ನಡದಲ್ಲಿ ಬರೆಯುವುದನ್ನು ಕಲಿಯುವುದು.
ಹಂತ-೭- ಸರಳ ಕನ್ನಡ ಮತ್ತು ಸಂಸ್ಕೃತ ವಾಕ್ಯಗಳನ್ನು ತಿಗಳಾರಿಗೆ ಮತ್ತು ತಿಗಳಾರಿಯಲ್ಲಿನ ವಾಕ್ಯಗಳನ್ನು ಕನ್ನಡಕ್ಕೆ ಲಿಪ್ಯಾಂತರಿಸುವುದು
ಹಂತ-೮ ತಾಳೆ ಗರಿಗಳಲ್ಲಿನ ಪದಗಳನ್ನು ಗುರುತಿಸುವುದು (ಸ್ಕ್ಯಾನ್‌ ಮಾಡಿ ಕಳುಹಿಸಲಾಗುವುದು)
ಹಂತ -೯ ತಾಳೆ ಗರಿಗಳಲ್ಲಿನ ವಾಕ್ಯಗಳನ್ನು ಲಿಪ್ಯಾಂತರಿಸುವುದು (ಸ್ಕ್ಯಾನ್‌ ಮಾಡಿ ಕಳುಹಿಸಲಾಗುವುದು)
ಹಂತ ೧೦ ತಾಳಗರಿಗಳಲ್ಲಿನ ಪೂರ್ಣ ಬರಹವನ್ನು ಲಿಪ್ಯಂತರಿಸುವುದು.
ಹಂತ- ೧೧. ಪರಿಣಿತರಿರುವ  ಮೂರುದಿನ ಕಾರ್ಯಾಗಾರ
ಅವಧಿಯ ಕೊನೆಯಲ್ಲಿ ಯಾವುದಾದರೂ ಒಂದು ಕೃತಿಯ ಸಾಮೂಹಿಕ ಲಿಪ್ಯಾಂತರ
ಅಭ್ಯರ್ಥಿಗಳು ಪರಿಣಿತಿ ಸಾಧಿಸಿದರೆ ಅವರಿಗೆ ಸಾಧ್ಯವಾದಷ್ಟು ಮಟ್ಟಿಗೆ ಆದಾಯ ತರುವ  ಕಾರ್ಯವನ್ನು ಸಂಸ್ಥೆಯ ಮೂಲಕ ಮೂಲಗಳನ್ನು ಸಂಪರ್ಕಿಸಿ  ನಮ್ಮ ಮೇಲ್ವಿಚಾರಣೆಯಲ್ಲಿ ಸಮುದಾಯ  ಲಿಪ್ಯಾಂತರ ಕೆಲಸ ನಿರ್ವಹಿಸುವ ಯೋಜನೆ ಇದೆ.
.
ಡಾ. ಪಿ.ವಿ.ನಾರಾಯಣ                                                      ಎಚ್‌.ಶೇಷಗಿರಿರಾವ್‌

ಅಧ್ಯಕ್ಷರು                                                               ಅಧ್ಯಯನ ನಿರ್ದೇಶಕರು                                                                                                                                             

 ಸಂಪರ್ಕ ವಿಳಾಸ -  ನಿರ್ದೇಶಕರು ತಿಗಳಾರಿ ಆನ್‌ಲೈನ್‌ ಅಧ್ಯಯನ ವಿಭಾಗ
   ಬಿ ಎಂ ಶ್ರೀ.ಪ್ರತಿಷ್ಠಾನ. ಬೆಂಗಳೂರು-೧೯
ಮಿಂಚಂಚೆ-    hastaprati2@Gmail.com  
ಸ್ಥಿರ- 080-266-13929 . ಚರ ದೂರವಾಣಿ- 9448442323    
               ಆಸಕ್ತರು ಆನ್‌ಲೈನ್‌ನಲ್ಲಿ ನೊಂದಾಯಿಸಿಕೊಳ್ಳಬಹುದು.  















    D£ï ¯ÉÊ£ï CzsÀåAiÀÄ£À, ºÀ¸ÀÛ ¥Àæw «¨sÁUÀ, ©.JA ²æà ¥ÀæwµÁ×£À ¨ÉAUÀ¼ÀÆgÀÄ-19

                                     £ÉÆAzÁªÀuÉ Cfð


1. ºÉ¸ÀgÀÄ                   -   
                    
2. vÀAzÉ /vÁ¬Ä ºÉ¸ÀgÀÄ     -

3 «¼Á¸À                     -    ...........................
                                 ..........................
                                   ............................

4.  zsÀÆgÀªÁt  1. ¹ÜgÀ.........................................2. ZÀgÀ.........................................

5 ªÀAiÀĸÀÄì      ........................

6. «zÁåºÀðvÉ  ...................

7.w½¢gÀĪÀ ¨sÁµÉUÀ¼ÀÄ     NzÀ®Ä --------mÉÊ¥ÀÄ ªÀiÁqÀ®Ä  ----- ªÀiÁvÀ£ÁqÀ®Ä

                     1    .................             .................             .................
                     2  ..................             ...................             ....................
                     3  ..................             .................              ................

8. CAvÀgïeÁ® §¼ÀPÉ   eÁÕ£À -      ¸ÁzsÁgÀt----   GvÀÛªÀÄ ---- CvÀÄåvÀÛªÀÄ

 ¸ÀzÁ CAvÀgï eÁ®zÀªÀÄÆ®PÀ ¸ÀAªÀºÀ£À ªÀÄvÀÄÛ  PÀgÉzÁUÀ ªÉÊAiÀÄÄQÛPÀ ¨sÉÃn  CUÀvÀå
 
                          
       ¢£ÁAPÀ                                   C¨sÀåyðAiÀÄ ¸À»