Wednesday, January 29, 2014

ಅಸ್ತು- ಚಿತ್ರ ವಿಮರ್ಶೆ

                                                       ಅಸ್ತು
ಏಳನೆಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವವು ಬೆಂಗಳೂರಿನಲ್ಲಿ ಮಾಗಿಯ ಚಳಿಯಲ್ಲಿ ನಡೆಯಿತು..ದೇಶ ವಿದೇಶಗಳ ಶ್ರೇಷ್ಟ ಚಿತ್ರಗಳ ನಡುವೆ ಪ್ರೇಕ್ಷಕರನ್ನು ಹಿಡಿದಿಟ್ಟ ಚಿತ್ರಗಳಲ್ಲಿ ಒಂದು ಮರಾಠಿ ಚಿತ್ರ “ ಅಸ್ತು” ಇದೇ ಕಥಾಹಂದರವನ್ನು ಹೊಂದಿರುವ ಕೋರಿಯನ್‌ ಕಿರು ಚಿತ್ರ  “Oldman and me ,ವೃದ್ಧಾಪ್ಯದ ಲ್ಲಿನ ಮರೆಗುಳಿತನದ ದುರಂತ ಚಿತ್ರವನ್ನು ನೀಡಿದರೆ  ಈ ಚಿತ್ರ ಮಾನವೀಯ ಸಂಬಂಧಗಳ ವಿಶ್ಲೇಷಣೆ ಯನ್ನು ಮಾಡಿದೆ. ಇದು ಆಧುನಿಕ ಕಾಲದಲ್ಲಿನ ಸಮಾಜ ಎದುರಿಸುತ್ತಿರುವ  ಸಮಸ್ಯೆಯ ಸಹಜ ಚಿತ್ರಣ.ನಿವೃತ್ತ  ಡಾ.ಚಕ್ರವರ್ತಿ.ಆತ ಸಾಮಾಜಿಕವಾಗಿ ಮೇಲುವರ್ಗಕ್ಕೆ ಸೇರಿದವ  ಪ್ರಸಿದ್ಧ ಸಂಸ್ಕೃತ ಸಂಶೋಧನಾ ಸಂಸ್ಥೆಯ ನಿವೃತ್ತನಿರ್ದೇಶಕ.ಹೆಸರಾಂತ ವಿದ್ವಾಂಸ.ಅವನಿಗೆ ಮರವಿನ ಕಾಯಿಲೆ. ಅವನನಿಗೆ  ಇಬ್ಬರೇ ಹೆಣ್ಣು ಮಕ್ಕಳು. . ಹಿರಿಯ ಮಗಳು ಇರಾ. ತಂದೆಯಂತೆ ಸಂಸ್ಕೃತ ಕಲಿತವಳು ಪರಂಪರಾಗತ ಮೌಲ್ಯಗಳಪ್ರತಿನಿಧಿ. ಕಿರಿಯ ಮಗಳಯ ಆಧುನಿಕ ಮಹಿಳೆ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧಕಿ.ಆಧುನಿಕ ನಾಗರೀಕತೆ ಯ ಪ್ರತೀಕ ಒಮದೆಸಲ ವೃದ್ಧಾಪ್ಯತಬದುಕುತ್ತಿರುವ  ಮತ್ತು ಪರಂಪರಾಗತ ಮೌಲ್ಯಗಳನ್ನು ಮೈ ಗೂಡಿಸಿಕೊಂಡು ಯೋಗ ತರಬೇತಿ ಶಾಲೆ ನಡೆಸುತ್ತಿರುವಳು. ಕಿರಿಯ ಮಗಳು ವಿಜ್ಞಾನಿಯಾಗಿ ಐ ಐಟಿ ಯಲ್ಲಿಸಂಶೋಧನೆ ಮಾಡುತ್ತಿರುವ ಆಧುನಿಕವಿಚಾರಧಾರೆ ಮೈ ಗೂಡಿಸಿಕೊಂಡವಳು. ಇಬ್ಬರೂ ಗಂಡು ಮಕ್ಕಳಂತೆಯೇ ಎಂದು ಪರಿಗಣಿಸಿದ ವಿದ್ವಾಂಸನಿಗೆ ಡೆಮ್ನಿಷಿಯಾ ಕಾಯಿಲೆಇದ್ದರೂ. ತನ್ನ ವಿದ್ಯಾರ್ಥಿಯೊಬ್ಬನೊಡನೆ ಸ್ವತಂತ್ರವಾಗಿ ಬದುಕುತ್ತಿರವ ಹಿರಿಯ ಜೀವ. ಒಂದೆ ಸಲ ವೃದ್ಧಾಪ್ಯದ ಪ್ರಬುದ್ಧತೆಯಿಂದ ಬಾಲ್ಯದ ಮುಗ್ದತೆಗೆ ಜಾರಿ ಬಿಡುವನು.ಇದು ಬೆಳಗ್ಗೆ ಕಾರಿನಲ್ಲಿ ಕುಳಿತು ಮಗಳ ಮನೆಗೆ ಹೋಗುವಾಗ ಮಾರುಕಟ್ಟೆಯಲ್ಲಿ ಮೊಮ್ಮಗಳಿಗೆ  ಸಂಜೆಯ ಕಾರ್ಯಕ್ರಮಕ್ಕೆ ವೇಷ ಭೂಷಣಕ್ಕೆ ಬೇಕಾದ  ಉಡುಪುತರಲು ಮಗಳು ಹೋದಾಗ ಬೀದಿಯಲ್ಲಿ ಬರುವ ಆನೆಯೊಂದನ್ನು ನೋಡಿ ಕಾರಿನಿಂದ ಇಳಿದು ಅದನ್ನು ಹಿಂಬಾಲಿಸುವಲ್ಲಿಂದ ಕಥೆ ಬಿಚ್ಚಿ ಕೊಳ್ಳುವುದು.ಮಗುವಿನ ಮುಗ್ದ ಮನ ಹೊಂದಿರುವ ಹಿರಿಯ ಕಾರಲ್ಲಿದ್ದ ೫೦೦ ರೂಪಾಯಿ ನೋಟನ್ನು ಆನೆ  ಜೊತೆ ಬೇಡಿ ಬದುಕುವವನಿಗೆ ಕೊಡುವನು. ಹಾಗೆಯೇ ಆನೆಯ ಮೇಲೆ  ಸವಾರಿ ಮಾಡುವ ಮಕ್ಕಳಂತೆ ತಾನೂ ಮಾಡ ಬೇಕೆನ್ನುವ ಅವನ ಹಂಬಲ ಈಡೇರುವುದಿಲ್ಲ. ಆಧರೆ ಬೆಗಿನಿಂದ ಅನೆಯನ್ನು ಹಿಂಬಾಲಿಸುವನು,ಅಲ್ಲಿಂದ ಎರಡು ಜಾಡಿನಲ್ಲಿ ಕಥೆ ಮುಂದುವರಿಯುವುದು.. ಕಾಣದ ತಂದೆಯನ್ನು ಅರಸುವ ಮಗಳಗಾಬರಿ ಒಂದು ಕಡೆಯಾದರೆ, ಏನನ್ನು ಅರಿಯದೆ ಗಜ ಗಜ ಎಂದು ಆನೆ ಆಡಿಸುವವನ ಜೊತೆ ಹೊರಟ ಚಕ್ರವರ್ತಿಯ ಸಾಹಸ ಗಾಥೆಯ ವಿವರ.
ಇರಾಳ ಹುಡುಕಾಟದ ಜೊತೆ ಜೊತೆಗೆ ಫ್ಲಾಷ್‌ ಬ್ಯಾಕ್‌ನಲ್ಲಿ ಕುಟುಂಬದ ವಿವರ ಬಿಚ್ಚಿಕೊಳ್ಳುತ್ತದೆ. ಸಂಸ್ಕೃತ ಮಹಾಕಾವ್ಯಗಳನ್ನು ಮರೆಯದೆ ಹೇಳುವ ಹಿರಿಯನಿಗೆ ದೈನಂದಿನ ಚಿಕ್ಕಪುಟ್ಟ ವಿವರಗಳೂ ನೆನಪಿಗೆ ಬಾರವು. ಅದರ ವನ್ನು ಕಾಡುತ್ತದೆ.ಬಾಲ್ಯದಲ್ಲಿ ಮತ್ತುಗಮಭೀರತೆ ಮನ ಮೂಡಿಸಿದರೂ ಅವುಗಳ ಹಿಂದಿನ ವಿಷಾದ ಮನೆ ಗೊಂದಲದ ಗೂಡು. ಅನೇಕ ಘಟನೆಗಳು ಮುಖದ ಮೇಲೆ ನಗೆ ಮೂಡಿಸುತ್ತವೆ.. ಆದರೆ ಬದಲಾದ ಸಮಾಜಿಕ ಪರಿಸರದಲ್ಲಿ ಅದು ಸಾಧ್ಯವಾಗದು.ಇರಾಳಿಗೆ ಬೆಳೆಯುವ ಮಗಳ ಕುರಿತ ಕಾಳಜಿ ಮತ್ತು ಮಾಗಿದ ತಂದೆಯ ಹೊಣೆಗಳಲ್ಲಿ ಯಾವುದಕ್ಕೆ ಆದ್ಯತೆ ಕೊಡ ಬೇಕೆಂಬ ಸಂದಿಗ್ದದಲ್ಲಿ ತೊಲಳಾಡುವಳು. ಹೀಗೆಪ್ರತಿಯೊಂದು ಪಾತ್ರವೂ ಸಾಂಕೇತಿಕವಾಗಿಚಿತ್ರತವಾಗಿದೆ.ಸಹೋದ್‌ಐಗಿಯೊಬ್ಬಳಿಗೆ ಸಹೃದಯತೆಯಿಂದ ಸಹಾಯ ಮಾಡಿದ್ದನ್ನೆ ತಪ್ಪು ತಿಳಿದುಕೊಳ್ಳುವ ಹೆಂಡಿ ಮಕ್ಕಳು,ಬಾಗಿಲು ಹಾಕದೆ ಸಮಢಾಸಕ್ಕೆ ಹೋದ ತಾನನ್ನು ಅಸಹ್ಯಸಿಕೊಳ್ಳುವ ಮೊಮ್ಮಗಳು, ಅಜ್ಜನು ಅತಿಪ್ರೀತಿಯಿಂದ ಕೇಕ್‌ತಿನ್ನಿಸಿದರೆ ಮುಜುಗರ ಪಡುವುದ ಹೀಗೆ ಘಟನೆಗಳ ಸರಮಾಲೆ ಎರರಡು ಪೀಳಿಗೆಗಳ ನಡುವಿನ  .ಅಂತರ ತೋರುವವು..ಇಲ್‌ಇನ ವಿಶೇಷ ಎಂದರೆ ಹಿರಿಯನಾಗರೀಕರೆಲ್ಲ ನಮ್ಮದೂ ಇಧೇ ಪಡೇ ಎಂದು ಗುರುತಿಸಿ ಕೊಳ್ಳುವಂತಿದೆ ಈ ಚಿತ್ರ.ಹಣದ ಹಿಂದೆ ಬಿದ್ದಿರುವ ಇಂದಿನ ಯುವ ಜನಾಂಗ ಪ್ರೀತಿ., ಪ್ರೇಮ , ಕರ್ತವ್ಯಗಳಿಗೆ ಹೊಸ ಅರ್ಥ ಕಂಡುಕೊಂಡಿರುವುದರ ದುರಂತ ಚಿತ್ರಿತವಾಗಿದೆ.
ಇಲ್ಲಿ ಮೇಲ್ವರ್ಗದ ಮಕ್ಕಳು ವಯಸ್ಸಾದ  ತಂದೆಯನ್ನು ಹೊರೆ ಎಂದು ವೃದ್ಧಾಶ್ರಮ ಸೇರಿ ಸಲು ಚಿಂತಿಸಿದರೆ ಬೇಡಿತಿನ್ನುವ ಆನೆ ಸಾಕಿದವನ ಹೆಂಡತಿಯ ಅಪ್ಪಾ ನೀನು ಕೂಸು ಇದ್ದಂಗೆ ಇಲ್ಲೇ ಇರು ಎನ್ನುವಳು ಅವಳ  ಮಾನವತೆ ಮನ ತಟ್ಟುತ್ತದೆ. ಅಪ್ತವಾಗಿ  ತಂದೆಯಂತೆ ಆರೈಕೆ ಮಾಡುವಳು , ಹಿರಿಯನು ಮಾ ಹಸಿವು ಎಂದಾಗ ಅವಳ ನಾನು ಬಡವಿ ಏನುಕೊಡಬಲ್ಲೆ ಎಂದು ಅಲವತ್ತು ಕೊಂಡರೂ ತನ್ನಲ್ಲಿರುವ ರೊಟ್ಟಿಯನ್ನೇ ಹಂಚಿಕೊಳ್ಳುವಳು.. ಆತ ಆನೆಯ ಮೇಲೆ ಬಂದರಸ ಎಂದರೂ ಅವನ ನರರ್ಗಳ ಸಂಸ್ಕೃತ ಮಾತು ಕೇಳಿ ದೇವರು ಎನ್ನುವಳು. ಉಟ್ಟ ಬಟ್ಟೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಾಗ ಎಳೆಯ ಮಗುವಿಗೆ ಸಮಾನ ಎಂದು ಶುಚಿ ಮಾಡಿ ಲುಂಗಿ ಉಡಿಸುವಳು  ವಿಜ್ಞಾನಿಯಾದ ಮಗಳು ನೆನಪು ಹೋದ ತಂದೆಯಬಗ್ಗೆ ಯೋಚಿಸುವುದು ಅರ್ಥ ಹೀನ ಎಂದು ವಾದಿಸಿದರೆ ಇತ್ತ ಅ ವಿದ್ಯಾವಂತೆ ಬಡ ಹೆಂಗಸು ಮಗುವಿನಂತೆ ಆರೈಕೆ ಮಾಡುವಳು.ಇದು ಬದಲಾದ ಆದ್ಯತೆಗಳ ಸಂಕೇತ. ಮತ್ತು ಜೀವನ ಮೌಲ್ಯಗಳ ಚಿತ್ರಣ
ಇಲ್ಲಿ ಭಾಷೆಯ ಬಳಕೆ ಬಹಳ ಸಾಂಕೇತಿಕವಾಗಿದೆ ಸಂಸ್ಕೃತ, ಮರಾಠಿ ಕನ್ನಡ ಮೂರೂ ಪ್ರಾತಿನಿಧಿಕವಾಗಿವೆ
ಕೊನೆಯಲ್ಲಿ ಪೋಲೀಸರು ಪತ್ತೆ ಹಚ್ಚಿ ಮನೆಗೆ ಕರೆದಯ್ಯಲುಬಂದಾಗ ಮಕ್ಕಳನ್ನೂ ಗುರುತ ಹಿಡಿಯದ ’ಅಪ್ಪಾ’ ಒಂದೇದಿನ ನೋಡಿಕೊಂಡ ಬೇಡಿ ಬದುಕವುವನ ಹೆಂಡತಿಯನ್ನು ಮಾ ಎಂದು ಗುರುತಿಸುವುದು ಮನತಟ್ಟುವುದು.
ಇಲ್ಲಿ ಆನೆ ಆಡಿಸುವವನ ಕುಟಂಬದ ಕನ್ನಡ ಸಂಭಾಷಣೆ   ಮತ್ತು ಮಗು ಮತ್ತು ಮುದುಕ ಇಬ್ಬರಿಗೂ ಅನ್ವಯವಾಗುವ ಲಾಲಿಪದವನ್ನು ಕನ್ನಡದ ಕಲಾವಿದೆ ಬಿ. ಜಯಶ್ರೀ ಕಂಠಸಿರಿಯಿಮದ ಬಳಕೆ ಚಿತ್ರಕ್ಕೆ ಮೆರಗು ಮೂಡಿಸಿರುವರುನೀಡಿವೆ.. ಇನ್ನು ನಿರ್ಮಾಪಕ  ಮರಾಠಿಯ ರಂಗ ಭೂಮಿ ಮತ್ತು ಸಿನೆಮಾದ ಹೆಸರಾಂತ ಕಲಾವಿದ. ಅವರ ವಯಸ್ಸಿಗೆ ಹೇಳಿಮಾಡಿಸಿದ ಪಾತ್ರ.ಅದಕ್ಕೆ ಜೀವ ತುಂಬಿರುವುರು. ಇದಕ್ಕೆ ಇಂಗ್ಲಿಷ್‌ಚುತ್ರ ಒಮದು ಸ್ಪೂಅಸ್ತು
ಏಳನೆಯ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವವು ಬೆಂಗಳೂರಿನಲ್ಲಿ ಮಾಗಿಯ ಚಳಿಯಲ್ಲಿ ನಡೆಯಿತು..ದೇಶ ವಿದೇಶಗಳ ಶ್ರೇಷ್ಟ ಚಿತ್ರಗಳ ನಡುವೆ ಪ್ರೇಕ್ಷಕರನ್ನು ಹಿಡಿದಿಟ್ಟ ಚಿತ್ರಗಳಲ್ಲಿ ಒಂದು ಮರಾಠಿ ಚಿತ್ರ “ ಅಸ್ತು” ಇದೇ ಕಥಾಹಂದರವನ್ನು ಹೊಂದಿರುವ ಕೋರಿಯನ್‌ ಕಿರು ಚಿತ್ರ  “Oldman and me ,ವೃದ್ಧಾಪ್ಯದ ಲ್ಲಿನ ಮರೆಗುಳಿತನದ ದುರಂತ ಚಿತ್ರವನ್ನು ನೀಡಿದರೆ  ಈ ಚಿತ್ರ ಮಾನವೀಯ ಸಂಬಂಧಗಳ ವಿಶ್ಲೇಷಣೆ ಯನ್ನು ಮಾಡಿದೆ. ಇದು ಆಧುನಿಕ ಕಾಲದಲ್ಲಿನಸಮಾಜ ಎದುರಿಸುತ್ತಿರುವ  ಸಮಸ್ಯೆಯ ಸಹಜ ಚಿತ್ರಣ.ನಿವೃತ್ತ  ಡಾ.ಚಕ್ರವರ್ತಿ.ಆತ ಸಾಮಾಜಿಕವಾಗಿ ಮೇಲುವರ್ಗಕ್ಕೆ ಸೇರಿದವ ನಿವೃತ್ತ ನಿರ್ದೇಶಕ.ಶೋಧನಾ ಕೇಂದ್ರದ ನ.ಸಂಸ್ಕೃತ ಗೆಸಂಶೋಧನಾ ಸಂಸ್ಥೆಯ ನಿವೃತ್ತನಿರ್ದೇಶಕ ಅವನನಿಗೆ  ಇಬ್ಬರೇ ಹೆಣ್ಣು ಮಕ್ಕಳು. . ಹಿರಿಯ ಮಗಳು ಇರಾ. ತಂದೆಯಂತೆ ಸಂಸ್ಕೃತ ಕಲಿತವಳು ಪರಂಪರಾಗತ ಮೌಲ್ಯಗಳಪ್ರತಿನಿಧಿ. ಕಿರಿಯ ಮಗಳಯ ಆಧುನಿಕ ಮಹಿಳೆ ವಿಜ್ಞಾನ ಸಂಸ್ಥೆಯಲ್ಲಿ ಸಂಶೋಧಕಿ.ಆಧುನಿಕ ನಾಗರೀಕತೆ ಯ ಪ್ರತೀಕ ಒಮದೆಸಲ ವೃದ್ಧಾಪ್ಯತಬದುಕುತ್ತಿರುವ  ಮತ್ತು ಪರಂಪರಾಗತ ಮೌಲ್ಯಗಳನ್ನು ಮೈ ಗೂಡಿಸಿಕೊಂಡು ಯೋಗ ತರಬೇತಿ ಶಾಲೆ ನಡೆಸುತ್ತಿರುವಳು. ಕಿರಿಯ ಮಗಳು ವಿಜ್ಞಾನಿಯಾಗಿ ಐ ಐಟಿ ಯಲ್ಲಿಸಂಶೋಧನೆ ಮಾಡುತ್ತಿರುವ ಆಧುನಿಕವಿಚಾರಧಾರೆ ಮೈ ಗೂಡಿಸಿಕೊಂಡವಳು. ಇಬ್ಬರೂ ಗಂಡು ಮಕ್ಕಳಂತೆಯೇ ಎಂದು ಪರಿಗಣಿಸಿದ ವಿದ್ವಾಂಸನಿಗೆ ಡೆಮ್ನಿಷಿಯಾ ಕಾಯಿಲೆ. ತನ್ನ ವಿದ್ಯಾರ್ಥಿ ಯೊಬ್ಬನೊಡನೆ ಸ್ವತಂತ್ರವಾಗಿ ಬದುಕುತ್ತಿರವ ಹಿರಿಯ ಜೀವ ಒಂದೆ ಸಲ ವೃದ್ಧಾಪ್ಯದ ಪ್ರಬುದ್ಧತೆಯಿಂದ ಬಾಲ್ಯದ ಮುಗ್ದತೆಗೆ ಜಾರಿ ಬಿಡುವನು.ಇದು ಬೆಳಗ್ಗೆ ಕಾರಿನಲ್ಲಿ ಕುಳಿತು ಮಗಳ ಮನೆಗೆ ಹೋಗುವಾಗ ಮಾರುಕಟ್ಟೆಯಲ್ಲಿ ಮೊಮ್ಮಗಳಿಗೆ  ಸಂಜೆಯ ಕಾರ್ಯಕ್ರಮಕ್ಕೆ ವೇಷ ಭೂಷಣಕ್ಕೆ ಬೇಕಾದ  ಉಡುಪುತರಲು ಮಗಳು ಹೋದಾಗ ಬೀದಿಯಲ್ಲಿ ಬರುವ ಆನೆಯೊಂದನ್ನು ನೋಡಿ ಕಾರಿನಿಂದ ಇಳಿದು ಅದನ್ನು ಹಿಂಬಾಲಿಸುವಲ್ಲಿಂದ ಕಥೆ ಬಿಚ್ಚಿ ಕೊಳ್ಳುವುದು.ಮಗುವಿನ ಮುಗ್ದ ಮನ ಹೊಂದಿರುವ ಹಿರಿಯ ಕಾರಲ್ಲಿದ್ದ ೫೦೦ ರೂಪಾಯಿ ನೋಟನ್ನು ಆನೆ  ಜೊತೆ ಬೇಡಿ ಬದುಕುವವನಿಗೆ ಕೊಡುವನು. ಹಾಗೆಯೇ ಆನೆಯ ಮೇಲೆ  ಸವಾರಿ ಮಾಡುವ ಮಕ್ಕಳಂತೆ ತಾನೂ ಮಾಡ ಬೇಕೆನ್ನುವ ಅವನ ಹಂಬಲ ಈಡೇರುವುದಿಲ್ಲ. ಆಧರೆ ಬೆಗಿನಿಂದ ಅನೆಯನ್ನು ಹಿಂಬಾಲಿಸುವನು,ಅಲ್ಲಿಂದ ಎರಡು ಜಾಡಿನಲ್ಲಿ ಕಥೆ ಮುಂದುವರಿಯುವುದು.. ಕಾಣದ ತಂದೆಯನ್ನು ಅರಸುವ ಮಗಳಗಾಬರಿ ಒಂದು ಕಡೆಯಾದರೆ, ಏನನ್ನು ಅರಿಯದೆ ಗಜ ಗಜ ಎಂದು ಆನೆ ಆಡಿಸುವವನ ಜೊತೆ ಹೊರಟ ಚಕ್ರವರ್ತಿಯ ಸಾಹಸ ಗಾಥೆಯ ವಿವರ.

ಇರಾಳ ಹುಡುಕಾಟದ ಜೊತೆ ಜೊತೆಗೆ ಫ್ಲಾಷ್‌ ಬ್ಯಾಕ್‌ನಲ್ಲಿ ಕುಟುಂಬದ ವಿವರ ಬಿಚ್ಚಿಕೊಳ್ಳುತ್ತದೆ. ಸಂಸ್ಕೃತ ಮಹಾಕಾವ್ಯಗಳನ್ನು ಮರೆಯದೆ ಹೇಳುವ ಹಿರಿಯನಿಗೆ ದೈನಂದಿನ ಚಿಕ್ಕಪುಟ್ಟ ವಿವರಗಳೂ ನೆನಪಿಗೆ ಬಾರವು. ಅದರ ವನ್ನು ಕಾಡುತ್ತದೆ.ಬಾಲ್ಯದಲ್ಲಿ ಮತ್ತುಗಮಭೀರತೆ ಮನ ಮೂಡಿಸಿದರೂ ಅವುಗಳ ಹಿಂದಿನ ವಿಷಾದ ಮನೆ ಗೊಂದಲದ ಗೂಡು. ಅನೇಕ ಘಟನೆಗಳು ಮುಖದ ಮೇಲೆ ನಗೆ ಮೂಡಿಸುತ್ತವೆ.. ಆದರೆ ಬದಲಾದ ಸಮಾಜಿಕ ಪರಿಸರದಲ್ಲಿ ಅದು ಸಾಧ್ಯವಾಗದು.ಇರಾಳಿಗೆ ಬೆಳೆಯುವ ಮಗಳ ಕುರಿತ ಕಾಳಜಿ ಮತ್ತು ಮಾಗಿದ ತಂದೆಯ ಹೊಣೆಗಳಲ್ಲಿ ಯಾವುದಕ್ಕೆ ಆದ್ಯತೆ ಕೊಡ ಬೇಕೆಂಬ ಸಂದಿಗ್ದದಲ್ಲಿ ತೊಲಳಾಡುವಳು. ಹೀಗೆಪ್ರತಿಯೊಂದು ಪಾತ್ರವೂ ಸಾಂಕೇತಿಕವಾಗಿಚಿತ್ರತವಾಗಿದೆ.ಸಹೋದ್ಯೋಗಿಯೊಬ್ಬಳಿಗೆ ಸಹೃದಯತೆಯಿಂದ ಸಹಾಯ ಮಾಡಿದ್ದನ್ನೇ ತಪ್ಪು ತಿಳಿದುಕೊಳ್ಳುವ ಹೆಂಡಿ ಮಕ್ಕಳು,ಬಾಗಿಲು ಹಾಕದೆ ಸಮಢಾಸಕ್ಕೆ ಹೋದ ತಾನನ್ನು ಅಸಹ್ಯಸಿಕೊಳ್ಳುವ ಮೊಮ್ಮಗಳು, ಅಜ್ಜನು ಅತಿಪ್ರೀತಿಯಿಂದ ಕೇಕ್‌ತಿನ್ನಿಸಿದರೆ ಮುಜುಗರ ಪಡುವುದ ಹೀಗೆ ಘಟನೆಗಳ ಸರಮಾಲೆ ಎರರಡು ಪೀಳಿಗೆಗಳ ನಡುವಿನ  .ಅಂತರ ತೋರುವವು..ಇಲ್‌ಇನ ವಿಶೇಷ ಎಂದರೆ ಹಿರಿಯನಾಗರೀಕರೆಲ್ಲ ನಮ್ಮದೂ ಇಧೇ ಪಡೇ ಎಂದು ಗುರುತಿಸಿ ಕೊಳ್ಳುವಂತಿದೆ ಈ ಚಿತ್ರ.ಹಣದ ಹಿಂದೆ ಬಿದ್ದಿರುವ ಇಂದಿನ ಯುವ ಜನಾಂಗ ಪ್ರೀತಿ., ಪ್ರೇಮ , ಕರ್ತವ್ಯಗಳಿಗೆ ಹೊಸ ಅರ್ಥ ಕಂಡುಮೊಂಡಿರುವುದರ ದುರಂತ ಚಿತ್ರಿತವಾಗಿದೆ.
ಇಲ್ಲಿ ಮೇಲ್ವರ್ಗದ ಮಕ್ಕಳು ವಯಸ್ಸಾದ  ತಂದೆಯನ್ನು ಹೊರೆ ಎಂದು ವೃದ್ಧಾಶ್ರಮ ಸೇರಿ ಸಲು ಚಿಂತಿಸಿದರೆ ಬೇಡಿತಿನ್ನುವ ಆನೆ ಸಾಕಿದವನ ಹೆಂಡತಿಯ ಅಪ್ಪಾ ನೀನು ಕೂಸು ಇದ್ದಂಗೆ ಇಲ್ಲೇ ಇರು ಎನ್ನುವಳು ಅವಳ  ಮಾನವತೆ ಮನ ತಟ್ಟುತ್ತದೆ. ಅಪ್ತವಾಗಿ  ತಂದೆಯಂತೆ ಆರೈಕೆ ಮಾಡುವಳು , ಹಿರಿಯನು ಮಾ ಹಸಿವು ಎಂದಾಗ ಅವಳ ನಾನು ಬಡವಿ ಏನುಕೊಡಬಲ್ಲೆ ಎಂದು ಅಲವತ್ತು ಕೊಂಡರೂ ತನ್ನಲ್ಲಿರುವ ರೊಟ್ಟಿಯನ್ನೇ ಹಂಚಿಕೊಳ್ಳುವಳು.. ಆತ ಆನೆಯ ಮೇಲೆ ಬಂದರಸ ಎಂದರೂ ಅವನ ನರರ್ಗಳ ಸಂಸ್ಕೃತ ಮಾತು ಕೇಳಿ ದೇವರು ಎನ್ನುವಳು. ಉಟ್ಟ ಬಟ್ಟೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಂಡಾಗ ಎಳೆಯ ಮಗುವಿಗೆ ಸಮಾನ ಎಂದು ಶುಚಿ ಮಾಡಿ ಲುಂಗಿ ಉಡಿಸುವಳು  ವಿಜ್ಞಾನಿಯಾದ ಮಗಳು ನೆನಪು ಹೋದ ತಂದೆಯಬಗ್ಗೆ ಯೋಚಿಸುವುದು ಅರ್ಥ ಹೀನ ಎಂದು ವಾದಿಸಿದರೆ ಇತ್ತ ಅ ವಿದ್ಯಾವಂತೆ ಬಡ ಹೆಂಗಸು ಮಗುವಿನಂತೆ ಆರೈಕೆ ಮಾಡುವಳು.ಇದು ಬದಲಾದ ಆದ್ಯತೆಗಳ ಸಂಕೇತ. ಮತ್ತು ಜೀವನ ಮೌಲ್ಯಗಳ ಚಿತ್ರಣ
ಇಲ್ಲಿ ಭಾಷೆಯ ಬಳಕೆ ಬಹಳ ಸಾಂಕೇತಿಕವಾಗಿದೆ ಸಂಸ್ಕೃತ, ಮರಾಠಿ ಕನ್ನಡ ಮೂರೂ ಪ್ರಾತಿನಿಧಿಕವಾಗಿವೆ
ಕೊನೆಯಲ್ಲಿ ಪೋಲೀಸರು ಪತ್ತೆ ಹಚ್ಚಿ ಮನೆಗೆ ಕರೆದಯ್ಯಲುಬಂದಾಗ ಮಕ್ಕಳನ್ನೂ ಗುರುತ ಹಿಡಿಯದ ’ಅಪ್ಪಾ’ ಒಂದೇದಿನ ನೋಡಿಕೊಂಡ ಬೇಡಿ ಬದುಕವುವನ ಹೆಂಡತಿಯನ್ನು ಮಾ ಎಂದು ಗುರುತಿಸುವುದು ಮನತಟ್ಟುವುದು.
ಇಲ್ಲಿ ಆನೆ ಆಡಿಸುವವನ ಕುಟಂಬದ ಕನ್ನಡ ಸಂಭಾಷಣೆ   ಮತ್ತು ಮಗು ಮತ್ತು ಮುದುಕ ಇಬ್ಬರಿಗೂ ಅನ್ವಯವಾಗುವ ಲಾಲಿಪದವನ್ನು ಕನ್ನಡದ ಕಲಾವಿದೆ ಬಿ. ಜಯಶ್ರೀ ಕಂಠಸಿರಿಯಿಂದ ಚಿತ್ರಕ್ಕೆ ಮೆರಗು ಮೂಡಿಸಿರುವರುನೀಡಿವೆ.. ಇನ್ನು ನಿರ್ಮಾಪಕ  ಮರಾಠಿಯ ರಂಗ ಭೂಮಿ ಮತ್ತು ಸಿನೆಮಾದ ಹೆಸರಾಂತ ಕಲಾವಿದ.ವರು ವೃತ್ತಿಯಿಂದ ಮನಶಾಸ್ತ್ರಜ್ಞ. ಅದೂ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದವರು. ಜೊತೆಗ ರಂಗಭೂಮಿ ಬಾಲ್ಯದ ಗೀಳು. ಹಲವಾರು ಚಿತ್ರಗಳಲ್ಲಿ ನಟಿಸಿರುವ ರಾಷ್ಟ್ರೀಯ ಫಲ್ಮ ಇನಸ್ಟಿಟ್ಯೀಟ್‌ಮುನ್ನೆಡಿಸಿದ  ವೃತ್ತಿ ಪರಿಣತ.ಅವೆಲ್ಲದರ  ಅನುಭವ ಈಚಿತ್ರದಲ್ಲಿ  ಎದ್ದು ಕಾಣುವುದು.ಅವರ ವಯಸ್ಸಿಗೆ ಹೇಳಿಮಾಡಿಸಿದ ಪಾತ್ರ.ಅದಕ್ಕೆ ಜೀವ ತುಂಬಿರುವುರು. ಇದಕ್ಕೆ ಇಂಗ್ಲಿಷ್‌ಚುತ್ರ ಒಮದು ಸ್ಪೂರ್ತಿ ಎಂದರೂ ಭಾರತೀಯತೆಯ ಸೊಗಡು ಎದ್ದು  ಕಾಣುವುದು.ಉಳಿದ ಕಲಾವಿದರೂ ಸಹ ಚೊಕ್ಕವಾಗಿ ಪಾತ್ರ ನಿರ್ವಹಣೆ ಮಾಡಿರುವರು.
ಮೋಹನ ಅಗಾಸೆn
ಚಿತ್ರ ಮುಗಿದಾಗ ಚಪ್ಪಾಳೆಯ ಸದ್ದೇ ಇಲ್ಲ. ಎಲ್ಲ ಗಾಢ ಮೌನದಲ್ಲಿ ನಡುನಡುವೆ ಭಾವ ಪರವಶರಾಗಿ ಕಣ್ಣು ಒದ್ದೆ ಯಾಗದವರು ಕಡಿಮೆ. ಅನೇಕರು ನಿರ್ದೇಶಕಿಯ ಕಾಲಿಗೆ ಎರಗಿದುದು ಚಿತ್ರ ಮಾಡಿದ ಪರಿಣಾಮ. ಹಿರಿಯನಟಿ ಸಾಹುಕಾರ ಜಾನಕಿ ಚಿತ್ರ ಮುಗಿದ ಮೇಲೆ ಅಭಿನಂದಿಸುತ್ತಾ ಕಣ್ಣು ಹನಿಗೂಡಿಸಿದ ಚಿತ್ರ ಮಾನವೀಯ ಮೌಲ್ಯಗಳನ್ನು ಅನಾವರಣ ಗೊಳಿಸಿದೆ. ಎಂದು ಅಭಿನಂದಿಸಿದರು.. ಪಕ್ಕದಲ್ಲಿದ್ದ ನಮ್ಮನ್ನು ನೋಡಿ" ನಾನಂತೂ ನೋಡ ನೋಡುತ್ತಾ ಅತ್ತು ಬಿಟ್ಟೆ ನಿಮಗೆ ಹಾಗೆಯೇ ಆಯಿತೆ ?"  ಎಂದು ಕೇಳಿದುದು ವೃದ್ಧಾಪ್ಯ  ಸಮಸ್ಯೆಯತ್ತ ಕ್ಷ ಕಿರಣ ಬಿರಿದ ಆ ಚಿತ್ರದ ಯಶಸ್ಸು ಎನ್ನಬಹುದು.ಸಹಜವಾಗಿಯೇ ಈ ಚಿತ್ರ ಬಹುಮಾನ ಬಾಚಿದುದು ಅಚ್ಚರಿಅಲ್ಲ. ಅನೇಕ ಕಲಾತ್ಮಕ ಚಿತ್ರಗಳು ತೆರೆಯಮೇಲೆ ಬರುವುದಿಲ್ಲ.ಬಂದರೂ ಜನಸಾಮಾನ್ಯರ ಮೆಚ್ಚುಗೆ ಗಳಿಸುವುದಿಲ್ಲ ಆದರೆ ಈಚಿತ್ರ ವಿಭಿನ್ನ. ಕಾಲ,ದೇಶ, ಭಾಷೆಗಳನ್ನು ಮೀರಿದ ಸಾರ್ವತ್ರಿಕ ಸಮಸ್ಯೆಯ ಸಮರ್ಥ ಚಿತ್ರಣ ನೀಡಿ .ಮೆಚ್ಚುಗೆ ಪಡೆದಿದೆ.
.


Sunday, January 26, 2014

ಹಳಗನ್ನಡದ ಹೊಸ ರೂಪದ ಪುಸ್ತಕಗಳು





ಡಾ. ಪಿ.ವಿ.ಎನ್‌ರ ನಾಲ್ಕು ಪುಸ್ತಕ  ಕುರಿತ ಮೂರು ಮಾತು.

-ಎಚ್‌.ಶೇಷಗಿರಿರಾವ್‌

ಕನ್ನಡವು ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಪಡೆದ ಹಿನ್ನೆಲೆಯಲ್ಲಿ ನಮ್ಮ ಭಾಷೆಗೆ ೧೫೦೦ ವರ್ಷದ ಇತಿಹಾಸವಿದೆ ಎಂದು  ಕನ್ನಡಿಗರೆಲ್ಲ  ಹೆಮ್ಮೆ ಪಡುವುದು ಸಹಜ. ಆದರೆ ಪ್ರಾಚೀನಕೃತಿ ಓದಿರುವರು ಎಷ್ಟು ಎಂದಾಗ ಮೌನಕ್ಕೆ ಶರಣಾಗುವವರೇ ಬಹಳ. ಕಾರಣ ಬಹು ಸರಳ  ಹತ್ತು ಹನ್ನೆರಡನೆಯ ಶತಮಾನದ ಕೃತಿಗಳ ಹೆಸರು ಬಲ್ಲೆವೇ ಹೊರತು ಮೂಲದಲ್ಲಿ ಓದಿರುವವರು ಬೆರಳ ಎಣಿಕೆಯಷ್ಟು. ಕಾರಣ ಕಬ್ಬಿಣದ ಕಡಲೆಯಾಗಿರುವ ಹಳೆಗನ್ನಡ ಭಾಷೆ ಮತ್ತು ಗದ್ಯ ಪದ್ಯ ಮಿಶ್ರಿತ ಸಂಸ್ಕೃತ ಮಯವಾಗಿರುವ ಚಂಪೂ ಶೈಲಿ.. ನಾರಿಕೇಳ ಪಾಕದಂತಿರುವ  ಸಾಹಿತ್ಯ ಕೃತಿಗಳನ್ನು ದ್ರಾಕ್ಷಾಪಾಕಮಾಡಿ ಜನಸಾಮಾನ್ಯರೂ ಓದಬಹುದಾದ ಹೊಸ ಗನ್ನಡದ ಗಧ್ಯ ಶೈಲಿಯಲ್ಲಿ ಸಾದರ ಪಡಿಸುವ  ಪ್ರಯತ್ನದ ಫಲವೇ  ಡಾ.ಕೆ.ವಿ. ನಾರಾಯಣರ  ಈ ನಾಲ್ಕು ಕೃತಿಗಳು . ಆದಿ ಕವಿ ಪಂಪನ  ಯುಗಳ ಕೃತಿಗಳ ಸರಳ ನಿರೂಪಣೆಯ ಪಂಪಕಾವ್ಯ ಸಾರ,ಅಭಿನವಪಂಪ ನಾಗಚಂದ್ರನ  ಪಂಪ ರಾಮಾಯಣ  , ನಯ ಸೇನನ ಧರ್ಮಾಮೃತ  ಮತ್ತುಪಂಪನ ನುಡಿಗಣಿ  ಎಂಬ ಶಬ್ದ ಕೋಶ     ಇವು ಬಹುಕಾಲದ ಕೊರತೆಯನ್ನು ನೀಗುವ ಸಾಹಿತ್ಯ ರಸಿಕರಿಗೆ ರಸಪಾಕವಾಗಬಲ್ಲ ಕೃತಿಗಳು.
ಡಾ. ಪಿ.ವಿ.ನಾರಾಯಣ ಅವರು ಹಳೆಯ ಸೃಷ್ಟಿಯನ್ನು ಹೊಸ ದೃಷ್ಟಿ ಯಲ್ಲಿ ನೋಡ ಬಲ್ಲ ವಿರಳ ವಿದ್ವಾಂಸರಲ್ಲಿ ಒಬ್ಬರು. ಹಳೆಯದೆಲ್ಲ ಹೊನ್ನು ಎಂಬ ಅಂಧಾಭಿಮಾನವಿಲ್ಲ.ಸಂಸ್ಕೃತ ಭೂಯಿಷ್ಠ ಭಾಷೆ, ಅಸಂಬದ್ಧ ಅಷ್ಟಾದಶ ವರ್ಣನೆಗಳಿವೆ   ಎಂಬ ತಾತ್ಸಾರವೂ ಇಲ್ಲ.ಮಾರ್ಗದಲ್ಲಿ ದೇಶಿಯನ್ನು ಕಾಣುವ , ಅಂದಿನ ಮಿತಿಯಲ್ಲಿ ಶ್ರೇಷ್ಟತೆ ಸಾಧಿಸುವ ಯತ್ನವನ್ನು ಗುರುತಿಸುವ ಸಹೃದಯತೆ ಇದೆ.ಹಾಗೆಂದು ದೋಷವನ್ನು ಗುಣ ಎನ್ನದೆ ಎತ್ತಿತೋರುವ ಎದೆಗಾರಿಕೆ ಇದೆ. ಈ ಕಾರಣಗಳಿಂದ  ಪ್ರಾಚೀನ ಕೃತಿಗಳೂ ಇಂದಿನ ಸಮಕಾಲೀನ ಸಮಾಜಕ್ಕೆ ಆಪ್ತ ವಾಗುವವು.’.ಹಾದರದ ಕಥೆ, ಸೋದರರ ವಧೆಎಂದು ಹೀಗಳೆಯುವವರೂ ಓದಿ ಅವುಗಳಲ್ಲಿರುವ ಉದಾತ್ತತೆ ,,ಸಾರ್ವತ್ರಿಕ ಸತ್ಯ ,ಜನ ಜೀವನ ಮತ್ತು ಭಾಷಾಬಳಕೆಯ ಸೌಂದರ್ಯದ ಕಿರು ನೋಟ ಪಡೆಯಲು  ಸಹಾಯಕವಾಗಿವೆ, ಹೊಸ ರೂಪದಲ್ಲಿ ಬಂದ ಈ ಕೃತಿಗಳು.




ಪಂಪ ಕಾವ್ಯ ಸಾರ – ಹೆಸರೇ ಸೂಚಿಸುವಂತೆ ಆದಿಕವಿ ಪಂಪನ ಮತ್ತು ಆದಿಪುರಾಣಗಳ ಮತ್ತು ವಿಕ್ರಮಾರ್ಜುನ ವಿಜಯ ಸಂಕ್ಷಿಪ್ತ ಆವೃತ್ತಿ.  ಆಯ್ದ ಸಾರವತ್ತಾದ ಭಾಗಗಳನ್ನು ಮಾತ್ರ ಒಳಗೊಂಡಿದೆ..ಸಮಯದೊಂದಿಗೆ ಸ್ಪರ್ಧಿಸುತ್ತಿರುವ ಈ ಆಧುನಿಕ ಕಾಲದಲ್ಲಿ ಶ್ರೇಷ್ಟ ಕಾವ್ಯ ಪರಿಚಯಮಾಡಿಕೊಳ್ಳಲು ಅನುವಾಗುವುದು.  

  .ಪಂಪ ಕನ್ನಡದ ಆದಿಕವಿ. ಬರಿಕಾಲದ ದೃಷ್ಟಿಯಿಂದ ಮಾತ್ರವಲ್ಲ. ಕಾವ್ಯಗುಣಮಟ್ಟದ  ದೃಷ್ಟಿಯಿಂದಲೂ ಮೂಲಪುರುಷ.’.ಆದಿಪುರಾ”  ಕನ್ನಡದ ಲ್ಲಿ ಜೈನ ಪರಂಪರೆಯ ಮೊದಲಕಾವ್ಯ.. ಪ್ರಥಮ ತೀರ್ಥಂಕರ   ಆದಿನಾಥನ ಅನುಭವದ ಪುನರ್‌ಸೃಷ್ಷ್ಟಿ.  ಜೀವನವನ್ನು ಪಾವನವಾಗಿ ಮಾಡಿಕೊಂಡ ಬಗೆ ಎಲ್ಲರಿಗೂ ಆದರ್ಶ. ಲೌಕಿಕ ಕಾವ್ಯ ಎಂದು ಅವನೇ ಹೇಳಿಕೊಳ್ಳುವ ವಿಕ್ರಮಾರ್ಜುನ ವಿಜಯದ  ಕಥಾಭಾಗ ಯಥಾರೀತಿ ವ್ಯಾಸನಿಂದ ಪಡೆದಿದ್ದರೂ ಅದರ ಅಭಿವ್ಯಕ್ತಿ ಮತ್ತು ತನ್ನ ಆಶ್ರಯದಾತ ಅರಿಕೇಸರಿಗೆ ಅರ್ಜುನನ್ನು ಸಮೀಕರಿಸಿ ಮಾಡಿಕೊಂಡ ಬದಲಾವಣೆ,,ಸಮಕಾಲೀನ ಪರಿಸ್ಥಿತಿಯ ಚಿತ್ರಣ,ವಿಶೇಷವಾಗಿ ಬಳಸಿದ ಮಾರ್ಗದಲ್ಲಿ ಜಾನಪದವನ್ನು ಸಮ್ಮಿಳನಗೊಳಿಸಿದ ರೀತಿಯಿಂದ ಸಾವಿರ ವರ್ಷಕಳೆದರೂ ಇನ್ನು ಜೀವಂತವಾಗಿದ್ದು ಸ್ಪೂರ್ತಿಯ ಸೆಲೆಯಾಗಿದೆ
ಪಂಪ ರಾಮಾಯಣ-  ಹನ್ನೊಂದು ಹನ್ನೆರಡನೆ ಶತಮಾನದ ಸಂಧಿಕಾಲದಲ್ಲಿ ಇದ್ದ ನಾಗಚಂದ್ರ ಜೈನ ಕವಿಗಳಲ್ಲಿ ಗಣ್ಯ. ಪಂಪನ ಉತ್ಕಟ  ಅಭಿಮಾನಿ. ಅಭಿನವ ಪಂಪನೆಂದು ಕರೆದು ಕೊಂಡು ಹೆಮ್ಮೆ ಪಟ್ಟುಕೊಂಡವ. ಅವನಂತೆಯೇ ಒಂದು ಧಾರ್ಮಿಕ ಕಾವ್ಯ ಮತ್ತು ಒಂದು ಲೌಕಿಕ ಕಾವ್ಯ ರಚಿಸಿದ. ಕುಮಾರವ್ಯಾಸನ ಕಾಲಕ್ಕೆ ತಿಣುಕಿದನು ಫಣಿರಾಯ ರಾಮಾಯಣ ಕವಿಗಳ  ಭಾರದಲ್ಲಿ’  ಎಂದರೂ ನಮಗೆ ದೊರೆತಿರುವ ರಾಮಾಯಣಗಳ ಸಂಖ್ಯೆ ಅಧಿಕವಾಗಿಲ್ಲ. 
ಆದರೆ ನಾಗಚಂದ್ರನ ರಾಮಚಂದ್ರ ಚರಿತೆಒಂದು ವಿಶಿಷ್ಟವಾದ ಕೃತಿ. ವಾಲ್ಮೀಕಿಯ ಕಥೆಯನ್ನು ಜೈನಸಂಪ್ರದಾಯಕ್ಕೆ ಅಳವಿಡಿಸಿರುವುದರಿಂದ ಸಾಮಾನ್ಯ ಓದುಗರಿಗೆ ವಿಚಿತ್ರವೆನಿಸುವ ಬದಲಾವಣೆಗಳಿವೆ. ರಾಮ ನಾಯಕನಾದರೂ ರಾವಣನ್ನು ಕೊಲ್ಲುವುದು ಲಕ್ಷ್ಮಣ.., ಹನುಮಂತ ,ಸುಗ್ರೀವ  ಮೊದಲಾದವರು ವಾನರನಲ್ಲ. ಅವರೆಲ್ಲ ಕಪಿಧ್ವಜರು. ರಾಮನು  ವನವಾಸಕ್ಕೆ ಹೋಗುವುದಿಲ್ಲ. ದೇಶ ಸಂಚಾರಕ್ಕೆ ಹೊರಡುವನು.ರಾವಣ ಪ್ರತಿ ನಾಯಕನಾದರೂ ದುಷ್ಟನಲ್ಲ ಪರಾಂಗನಾವಿರತಿ ವ್ರತನಿಷ್ಠ.  ಮೊದಲ ಬಾರಿಗೆ ಕನ್ನಡ ಕಾವ್ಯ ಕ್ಷೇತ್ರದಲ್ಲಿ ದರಂತ ನಾಯಕನಾಗಿ ಅವನ  ಚಿತ್ರಣ ಭವ್ಯವಾಗಿ ಮೂಡಿಬಂದಿದೆ. ಭಾರತದಲ್ಲಿ ಕಾವ್ಯಗಳು ಬಹುತೇಕ ನಾಯಕ ಪ್ರಧಾನ. ಆದರೆ ಇಲ್ಲಿ ರಾವಣ ತನ್ನ ಎಲ್ಲ ಸಾಧನೆಯ ಗುಣಗಳ ಹೊರತಾಗಿಯೂ ವಿಧಿಯ  ಕೈಗೊಂಬೆಯಾಗಿ ದುರಂತ ನಾಯಕನಾಗುವನು. ಓದುಗರ ಕರುಣೆಗೆ ಪಾತ್ರನಾಗುವನು.ಈ ರೀತಿಯ ಪಾತ್ರ ಚಿತ್ರಣ ಗ್ರೀಕ್‌  ದುರಂತ ನಾಟಕಗಳಲ್ಲಿ ಸಾಮಾನ್ಯವಾದರೂ ಕನ್ನಡದಲ್ಲಿ ಅತಿವಿರಳ . ಇದರ ಪ್ರಭಾವ ಆಧುನಿಕ ಕವಿಗಳ ಮೇಲೆ ಮೂಡಿರುವದನ್ನು ಗುರುತಿಸಬಹುದು. ಚಂಪೂವಿನಲ್ಲಿರುವ ಈ ಕಾವ್ಯವನ್ನು ಗಧ್ಯ ರೂಪದಲ್ಲಿ ತಂದಿರುವುದರಿಂದ  ಸರಳವಾಗಿ ಓದಿಸಿಕೊಂಡು ಹೋಗುವುದು.ಇದರಿಂದ ಪ್ರಾಚೀನ ಕಾವ್ಯದ ಪರಿಚಯ ಸುಲಭ ವಾಗುವುದು..
ಧರ್ಮಾಮೃತ- ಹನ್ನೆರಡನೆಯ ಶತಮಾನದ ಕವಿ ನಯಸೇನ.. ಹೆಸರೇ ಸೂಚಿಸುವಂತೆ ಜೈನ ಧರ್ಮದ ಹಿರಿಮೆಯನ್ನು ಸಾರುವುದು ಅವನ ಗುರಿ. ಆದರೆ ಅದಕ್ಕೆ ಅವನು ಆರಿಸಿಕೊಂಡ ವಿಧಾನ ಜೈನ ತತ್ವಗಳನ್ನು ಬೇರೆ ಬೇರೆ. ಹದಿನಾಲ್ಕು ಕಥಗಳ ಮೂಲಕ ವಿಶದ ಪಡಿಸುವುದು..ಅದೂ ಪಂಚತಂತ್ರದ ಮಾದರಿಯಲ್ಲಿ.

ಶೈಲಿ  ಗದ್ಯಪದ್ಯ ಮಿಶ್ರಿತ ಚಂಪೂ ಆದರೂ ಸಂಸ್ಕೃತ ಅತಿಯಾಗಿಲ್ಲ. ಗದ್ಯಕ್ಕೆ ಆದ್ಯತೆ, ಕನ್ನಡಕ್ಕೆ ಪ್ರಥಮ ಸ್ಥಾನ. ಆಡುನುಡಿಯ ಸೊಬಗನ್ನು ಮೈ ಗುಡಿಸಿಕೊಂಡಿದೆ. ಕವಿ ಉಪಮಾಲೋಲ.  ಹೀಗಾಗಿ ತಿಳಿಯಾದ ಶೈಲಿಯಲ್ಲಿ ಜನ ಸಾಮಾನ್ಯರಿಗೂ ಅರ್ಥವಾಗುವಷ್ಟು ಸರಳ ಭಾಷೆ.
ಸಂಸ್ಕೃತ ಬೆರಸುವುದರ ಕಡುವಿರೋಧಿ. ಕನ್ನಡಕ್ಕೆ ಆದ್ಯತೆ ಇರಬೇಕೆಂಬುದು ಅವನ ಸ್ಪಷ್ಟ ನಿಲುವು.. ಈ ಎಲ್ಲ ಕಾರಣಗಳಿಂದ ನಯಸೇನನ ಕೃತಿ ಕನ್ನಡಿಗರ ಹೃದಯಕ್ಕೆ ಹತ್ತಿರವಾಗಿದೆ. ಅದನ್ನು ಪೂರ್ಣವಾಗಿ ಗದ್ಯದಲ್ಲಿ ರೂಪಾಂತರಿಸಿರುವುದರಿಂದ ಇಂದಿನ ಓದುಗರಿಗೆ ಅನುಕೂಲ.ಹಳೆಗನ್ನಡದ ಮೂರು ಕೃತಿಗಳು ಹೊಸಗನ್ನಡದ ಓದುಗರಿಗೆ  ಅಭಿರುಚಿ ಮಾಡುವಂತೆ ರೂಪಾಂತಿಸಿರುವ ಲೇಖಕರ ಪ್ರಯತ್ನ ಅಬಿನಂದನೀಯ. ಪಂಪನ ನುಡಿ ಗಣಿ’  ಒಂದು ಅಪೂರ್ವ . ಶಬ್ದಕೋಶ.  ಪಂಪನ  ಎರಡೂ ಕಾವ್ಯಗಳಲ್ಲಿ  ಪ್ರಯೋಗವಾಗಿರುವ ಪದಗಳ ಸಂಗ್ರಹ.  ಪಂಪನ ಕಾವ್ಯದ ಲ್ಲಿ ಹಾಸು ಹೊಕ್ಕಾಗಿರುವ  ದೇಶಿ ಮತ್ತು ಮಾರ್ಗ ಪದಗಳ ಅರ್ಥವನ್ನು ಪ್ರಯೋಗದ ಮೂಲಕ ಪರಿಚಯಿಸುವ ಪರಿ ಅನನ್ಯ.  ಅಲ್ಲಿಯೇ ಪದದ ವ್ಯಾಕರಣ ಸ್ವರೂಪವನ್ನೂನೀಡಲಾಗಿದೆ.ಅಕಾರಾದಿಯಾಗಿ ಹ ಕಾರದ ವರೆಗ ಇರುವ ಪದಗಳ ವಿವಧ ರೂಪಗಳನ್ನು ಸುಮಾರು ೬೦೦ ಪುಟಗಳಲ್ಲಿಅಳವಡಿಸಿಲಾಗಿದೆ.ಇದು ವಾಣಿಜ್ಯ ಉದ್ದೇಶದಿಂದ ಮಾಡಿದ ಪ್ರಕಟನೆಯಲ್ಲ. ಸಾಹಿತ್ಯ ಪ್ರೀತಿಯ ಫಲ. ಈ ಧೈರ್ಯ ಮಾಡಿರುವವರು ಸದಭಿರುಚಿಯ ಕೃತಿಗಳ ಹೊರತರುವಲ್ಲಿ ಹೆಸರಾಗಿರುವ ಕಾಮಧೇನು ಪುಸ್ತಕ ಪ್ರಕಾಶನದವರು.ಲಘು  ಸಾಹಿತ್ಯಕ್ಕೇ ಒಗ್ಗಿಕೊಂಡಿರುವವರನ್ನು ಆಕರ್ಷಿಸವಂತಿವೆ. ಪ್ರಾಚೀನ ಕೃತಿಗಳ ಸಾರ ಸೆರೆ ಹಿಡಿದಿರುವ ಮೂರು ಪುಸ್ತಕಗಳು ಸಂಗ್ರಹ ಯೋಗ್ಯ. ಮತ್ತು ಪರಾಮರ್ಶನಕ್ಕೆ ಕೈಗನ್ನಡಿಯಾಗಿದೆ ಶಬ್ದ ಕೋಶ .



. ಈ ಪುಸ್ತಕಗಳ ಇನ್ನೊಂದು ಹೆಗ್ಗಳಿಕೆ ಎಂದರೆ  ಉತ್ತಮ ಮುದ್ರಣ ಮತ್ತುವಿನ್ಯಾಸ ಮುಖಪುಟವಂತೂ ನೋಡಿದವರುಕೈಗೆ ಎತ್ತಿಕೊಳ್ಳುವಷ್ಟು  ಆಕರ್ಷಕ.ಅದಕ್ಕೆ ಕಾರಣ ಗಂಜಿಫಾ ರಘುಪತಿ ಭಟ್ಟರ ಚಿತ್ರಗಳು.ಈ ಮೂರುಪುಸ್ತಕಗಳು ಓದುಗರಿಗೆ  ಉತ್ತಮ ಕೊಡುಗೆಯಾಗಿವೆ..












ಮುದ್ರಣ ಮತ್ತು ವಿನ್ಯಾಸ.   ಆಕರ್ಷಕ ಮುಖಪುಟ,    ಗಂಜೀಫಾ ರಘುಪತಿ ಭಟ್ಟರ ಚಿತ್ರಗಳು  ಕಣ್ಣುಸೆಳೆಯುವಂತಿವೆ. ನೋಡಿದವರುಕೈಗೆತ್ತಿಕೊಳ್ಳುವಷ್ಟು ಸುಂದರವಾಗಿ ಮೂಡಿ ಬಂದಿವೆ.




Thursday, January 23, 2014

ಪು.ತಿ.ನ-ಭಕ್ತಿ-ಕಾವ್ಯ ಸಂಗಮ


ಕೇಂದ್ರ ಸಾಹಿತ್ಯ ಅಕಾಡಿಮಿಯವರು ಭಾರತದ ಮಹಾನ್‌ಕವಿಗಳ ಕುರಿತಾದ ಸಾಕ್ಷ್ಯ ಚಿತ್ರೋತ್ಸವವನ್ನು ಇದೇ ಜನವರಿ ೯, ೧೦. ಮತ್ತು  ೧೧ ರಂದು ಸುಚಿತ್ರ ಅಕಾಡಮಿಯಲ್ಲಿ ನಡೆಸಿದರು, ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಅದರಲ್ಲೂ ಕರ್ನಾಟಕದ ಕೊನೆಯ ರಾಷ್ಟ್ರ ಕವಿ ಜಿ ಎಸ್. ಶಿವರುದ್ರಪ್ಪನರು ಅಗಲಿದ ಹಿನ್ನೆಲೆಯಲ್ಲಿ  ಒಂದು ಉತ್ತಮ ಪ್ರಯತ್ನ ಎನಿಸಿತು.ಸಹಜವಾಗಿ ಸಮಕಾಲೀನ ಕವಿಗಳಾದ ಲಕ್ಷಮಿನಾರಾಯಣ ಭಟ್ಟ, ಜಯಂತ ಕಾಯ್ಕಿಣಿ, ಬಿ.ಆರ್‌ಲಕ್ಷ್ಮಣ ರಾವ್‌ ಮೊದಲಾವರು ಹಾಜರಿದ್ದರು..ಇತ್ತೀಚೆಗೆ ಹಸ್ತಪ್ರತಿ ಸಂರಕ್ಷಣೆಯ ಕಾರ್ಯದಲ್ಲಿ ತಲ್ಲೀನನಾಗಿ ಹೊರ ಜಗತ್ತನ್ನು ಮರೆತಿರುವ ನಾನು ಅದೃಷ್ಟವಶಾತ್‌ ಬದಲಾವಣೆ ಇರಲಿ ಎಂದು ಸುಚಿತ್ರಕ್ಕೆ ಭಾನುವಾರ ಸಂಜೆ ಹೋದಾಗ ಕಳೆದ ಎರಡುದಿನ ಆಕಡೆ ಹೋಗದೆ ಇರುವುದಕ್ಕೆ ಮನ ಮಿಡುಕಿತು. ಅಂದು ಸಂಜೆ ಐದಕ್ಕೆ ಅನಂತ ಮೂರ್ತಿಯವರ ಜತೆ ಸಂವಾದ ಇದ್ದಿತು. ಆದರೆ ಅವರ ಅನುಪಸ್ಥಿತಿಯಿಂದ ನೇರವಾಗಿ ಚಿತ್ರಪ್ರದರ್ಶನ ಪ್ರಾರಂಭವಾಯಿತು
ಮೊದಲ ಚಿತ್ರ ಪು. ತಿ. ನ ಅವರಕುರಿತಾದುದು.ಸಂಗೀತ ಕಾವ್ಯಗಳ ಸುಮಧುರ ಸಂಗಮವಾದ ಅವರ ಕಾವ್ಯದ ಝಳಕಿನೊಂದಿಗೆ ಚಿತ್ರ ಪ್ರಾರಂಭವಾಯಿತು. ಮಲೆದೇಗುಲದ ಗೀತೆ ಮೇಲುಕೋಟೆಯ ಪ್ರಕೃತಿ ಚಿತ್ರಣ ಉತ್ತಮ ಆರಂಭ ಒದಗಿಸಿತು. ಜ್ಞಾನ ಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರರು.  ಹಿರಿಯ ಕವಿಯ ವ್ಯಕ್ತಿತ್ವವನ್ನು ಅವರ ಸ್ಪೂರ್ತಿ ನೆಲೆವೀಡಾದ ಮೇಲುಕೋಟೆಯ ಸುಂದರ ಪರಿಸರದ ಜೊತೆಅವರ ಜೀವನ ಹೇಗೆ ಹಾಸು ಹೊಕ್ಕಾಗಿದ್ದನ್ನು  ಸಮರ್ಥವಾಗಿ ಸೆರೆ ಹಿಡಿದಿರುವರು. ಬಹುಶಃ ಪು.ತಿ.ನ ಅವರ ಮಾಗಿದ ವಯಸ್ಸಿನಲ್ಲಿ ಚಿತ್ರೀಕರಣವಾದುದರಿಂದ ಅವರ ಬಾಲ್ಯ ಯೌವನ  ಮತ್ತು ಅವರ ಸಮಕಾಲೀನ  ಒಡಗಿನ ಒಡನಾಡದ ವಿವರ ಇಲ್ಲದೇ ಇರುವುದು ಎದ್ದು ಕಾಣುತಿತ್ತು . ಚೆಲುವನಾರಾಯಣನ ಅರ್ಚಕರ ವಂಶದಲ್ಲಿ ಜನಿಸಿದ ಅವರು ವೈದಿಕಜಗತ್ತಿನಿಂದ ಹೊರಬಂದು ಮೈಸೂರು ಸೈನಿಕ ಇಲಾಖೆಯಲ್ಲಿ ಆಂಗ್ಲ ಅಧಿಕಾರಿಗಳ ಅಡಿಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿದರೂ ಅವರ ಮನದ ತುಂಬ ಚೆಲುವನಾರಾಯಣ ಮತ್ತು ಮೇಲು ಕೋಟೆಯೇ. ತಮ್ಮ ೧೯ರ ಎಳೆವಯಸ್ಸಿನಲ್ಲಿ ೧೩ರ ಬಾಲೆಯನ್ನು ಮದುವೆಯಾದ  ಅವರು ತಮ್ಮ ಅರವತ್ತುವರ್ಷಕ್ಕೂ ಅಧಿಕ ದಾಂಪತ್ಯ ಜೀವನದಲ್ಲಿ ಕಷ್ಟ ನಷ್ಟಗಳ ಕೋಟಲೆ ಕೊರತೆಗಳ ನಡುವೆ ಕವಿ ಮನ ಮುದುಡದಂತೆ ನೋಡಿಕೊಂಡಮಡದಿಯೇ ರಂಗವಲ್ಲಿ ಹಾಕುವುದರೊಂದಿಗೆ ಚಿತ್ರ ಪ್ರಾರಂಭವಾದುದು ಸಾಂಕೇತಿಕವಾಗಿತ್ತು ಅವರು ಜನಿಸಿದ ಮನೆ ಮೈಸೂರಲ್ಲಿ ವಾಸವಿದ್ದ ವಠಾರ, ದೈನಂದಿನ ವೈದಿಕಾಚರಣೆಗಳು  ನಡುವೆಯೂ ಅವರ ಕವಿಮನಸ್ಸು ಹೇಗೆ ಕ್ರಿಯಾಶೀಲವಾಗಿ ಜೀವಂತವಾಗಿತ್ತು, ಕನ್ನಡದಲ್ಲಿ ಮೊದಲ ಸಂಗೀತ ನಾಟಕ ರಚಿಸಿದ ಅವರ ವೈಶಿಷ್ಟ್ಯವನ್ನು ವೀಣೆ ದೊರೆಸ್ವಾಮಿಗಳೇ ವಿವರಿಸಿದ್ದು ಜೊತೆಗೆ ಸುಧಾಮ ಎಂಬ ಬ್ಯಾಲೆಯ ತುಣುಕು ತೋರಿಸಿದುದು ತುಂಬಾ ಆಸಕ್ತಿದಾಯಕವಾಗಿದ್ದಿತು.ಅವರೇ ಹೇಳಿದಂತೆ ಅರವತ್ತರ ವಯಸ್ಸಿನವರೆಗೆ ಅವರ ಕಾವ್ಯಕ್ಕೆ ಯಾವುದೇ ಪ್ರಶಸ್ತಿ ಪುರಸ್ಕಾರ ಬಂದಿರಲಿಲ್ಲ. ನಂತರ ಅವರ ಕಾವ್ಯ ಪ್ರತಿಭೆಗೆ ಸಲ್ಲಬೇಕಾದ ಗೌರವ ಸಂದಿತು. ಅವರು ಬಹುಶಃ ಹನ್ನೆರಡನೆಯ ಶತಮಾನದಲ್ಲಿ ಪ್ರಾಂರಂಭವಾದ  ಭಕ್ತ ಕವಿ ಪರಂಪರೆಯ ಕೊನೆಯ ಕೊಂಡಿ ಎಂಬ ವಿಮರ್ಶಕ  ಡಾ. ಕೆ.. ಮರಳ ಸಿದ್ಧಪ್ಪನವರ ಮಾತು  ಅರ್ಥಪೂರ್ಣ. ಅವರ ಧಾರ್ಮಿಕ ಆಚರಣೆ, ವೇಷ ಭೂಷಣ   ನೋಡಿ ಮೂಡುವ ಚಿತ್ರಣಕ್ಕಿಂತ ಹೇಗೆ ಅವರ ವ್ಯಕ್ತಿತ್ವ ಭಿನ್ನವಾಗಿತ್ತಯ ಎಂದು ಮರುಳಸಿದ್ದಪ್ಪ ನೀಡಿದ ಒಂದು ಘಟನೆ  ಮನಮುಟ್ಟುವಮತೆ ಇತ್ತು. ಕಟ್ಟಾ ವೈದಿಕ ಸಂಪ್ರದಾಯದವರಂತಿದ್ದ ಅವರು ಬಾಬ್ರಿ ಮಸೀದಿಯು ಧರ್ಮಾಧರರ ದಾಳಿಗೆ ತುತ್ತಾಗಿ ನಾಶವಾದಾಗ ಅದನ್ನು ಖಂಡಿಸುವ ಸಭೆಗೆ ಬಂದುದನ್ನು ನೆನಸಿಕೊಂಡರು.. ಅವರನ್ನು ಕರೆತರಲು ಹೋದಾಗ ಅವರು ಸಂಧ್ಯಾವಂದನೆಯ ಸಿದ್ದತೆಯಲ್ಲಿದ್ದರು. ಅದರ ಮೊದಲ ಅಂಗವಾಗಿ  ತ್ರಿನಾಮ ಹಾಕಿಕೊಳ್ಳುತಿದ್ದರು. ಇವರನ್ನು ನೋಡಿದೊಡನೆ ಅಪ್ಪಾ, ನಾನು ನಾಮ  ಹಾಕಿಕೊಳ್ಳುವೆ ಇತರರಿಗೆ ಹಾಕುವುದಿಲ್ಲ ಎಂಬ ಅವರ ಹಾಸ್ಯ ಪ್ರಜ್ಞೆ ಅವರ ಸರಸ ಗುಣಕ್ಕೆ ಸಾಕ್ಷಿ . ಅಂದಿನ ಸಭೆಯಲ್ಲಿ ಲಂಕೇಶ, ಮರುಳಸಿದ್ದಪ್ಪ ಅನಂತ ಮೂರ್ತಿ , ರಾಮದಾಸ ಮೊದಲಾದ ಪ್ರಗತಿಪರ ಧೋರಣೆ ಸಾಹಿತಿಗಳು ಭಾಗವಹಿಸಿ, ಗುಡಿ, ಮಸೀದಿ ಚರ್ಚು ಯಾವುದೇ ಪೂಜಾಸ್ಥಳವಾದರೂ ಅದರ ನಾಶ ಖಂಡನಾರ್ಹ ಎಂದು ಮಾತನಾಡಿದರು.. ಆದರೆ ಬಾಬ್ರಿ ಮಸೀದೆಯಲ್ಲಿ ಪ್ರಾರ್ಥನೆ ನಡೆಸುತ್ತಿರರಲಿಲ್ಲ  ಅಲ್ಲವೇ ಎಂಬ  ಅವರ ಪ್ರಶ್ನೆ ಹಲವರ ಕಣ್ಣು ಕೆಂಪಾಗಲೂ ಕಾರಣವಾದರೂ .ಕೋಮುವಾದದ ಖಂಡನೆಯ ಸಭೆಯಲ್ಲಿ ಭಾಗವಹಿಸಿದುದು ಅವರ ಜ್ಯಾತ್ಯಾತೀತ ಮನಸ್ಸಿನ ಅನಾವರಣ ಗೊಳಿಸುವಂಥಹ ಘಟನೆ. ಆದರೆ ಈ ಎಲ್ಲ ಆಯಾಮಗಳು ಚಿತ್ರದಲ್ಲಿ ಇಲ್ಲದಿರುವುದು ಒಂದು ಕೊರತೆ. ದೇವನೂರು ಮಹದೇವ ಅವರ ಮಗಳ ಕವನ ಸಂಕಲನಕ್ಕೆ ಮುನ್ನುಡಿ ಬರೆಸಲು ಡಾ. ವಿಜಯಮ್ಮ ಮತ್ತು ಮಹಾದೇವ ಅವರ ಮನೆಗೆ ಹೊದಾಗ ರಾತ್ರಿ ಹನ್ನೆರಡುಗಂಟೆ. ಅಪರಾತ್ರಿಯಲ್ಲಿ ಹೊದರೂ ಬಾಗಿಲುತೆರೆದು ಏನಮ್ಮ  ವಿಜಯಾ ,ಇಷ್ಟು ಹೊತ್ತಿನಲ್ಲಿ ಬಂದೆ? ಎಂದವರು, ಮಹದೇವ ಬಂದಿರುವನು ಎಂದು ಕೇಳಿದೊಡನೆ  ಧಾವಿಸಿ ಅಪ್ಪಿಕೊಂಡ ಘಟನೆ  ಮಡಿವಂತಿಕೆಯ ಮುಸುಕಿನಲ್ಲಿ  ಅವರ ಮನದಾಳದಲ್ಲಿ ಹುದುಗಿದ  ಅಂತಃಕರಣಕ್ಕೆ ಸಾಕ್ಷಿ ಭೂತ. ಮಾರನೆಯ ದಿನ ಬೆಳಗಿನ ಹತ್ತೂವರೆಗ ಮುನ್ನುಡಿ ಬರೆದು ಯುವ ಕವಿಯತ್ರಿಯನ್ನು ಹರಸಿದುದು ಕೇಳಿ ಅವರ ವ್ಯಕ್ತಿತ್ವಕ್ಕೆ ತಲೆ ಬಾಗುವುದು. ಇಂಥಹ ಅಂಶಗಳೇ ವ್ಯಕ್ತಿಚಿತ್ರಣ ಕುಸರಿ ಕೆಲಸ ಎಂಬುದು ನಿಜಕ್ಕೂ ಮನನೀಯ. ಇವೆಲ್ಲಸಾಕ್ಷ್ಯಚಿತ್ರದಲ್ಲಿ ಇರಲಿಲ್ಲ. ಅಲ್ಲದೇ ಅನೇಕ ಕಡೆ ಅವರ ಮಾಗಿದ ವಯಸ್ಸಿನ ಕಾರಣವೋ ಇಲ್ಲವೇ ತಾಂತ್ರಿಕಕ ದೋಷದಿಂದಾಗಿಯೋ   ಮಾತು ತುಸು ಅಸ್ಪಷ್ಟವಾಗಿತ್ತು.
 ಪು. ತಿ. ನರಸಿಮಹಾಚಾರ್‌ ಅವರ ಜನನ  17 ಮಾರ್ಚ್‌ 1905 ರಲ್ಲಿ ಸಂಪ್ರದಾಯಸ್ಥ ಅಯ್ಯಂಗಾರ್‌ ಕುಟುಂಬ. ತಂದೆ ತಿರುನರಾಯಣಅಯ್ಯಂಗಾರ್‌ ಚೆಲುವನಾರಾಯಣನ ಅರ್ಚಕರು. ತಾಯಿ ಶ್ರೀರಂಗಮ್ಮ. ಅವರದು ಪುರೋಹಿತ ಮನೆತನ.  ಮಗನು ಅದೇ ವೃತ್ತಿಯಲ್ಲಿ ಮುಂದುವರಿಯಲ್ಲಿ ಎಂಬ ಆಸೆ. ಅದಕ್ಕೆ ಚಿಕ್ಕಂದಿನಿಂದಲೇ ಸಂಸ್ಕೃತ, ಶಾಸ್ತ್ರ ಅಭ್ಯಾಸ. ಆದರೆ ಪುತಿನ ಅವನ್ನು ಕನ್ನಡ ಕೈ ಬಿಸಿ ಕರೆಯಿತು  ಪ್ರಾಥಮಿಕ  ಶಿಕ್ಷಣ ಅಲ್ಲಿಯೇ ಆದರೂ  ಅವರ ಮುಂದಿನ ಶಿಕ್ಷಣ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ, ತಿ..ನಂ.ಶ್ರೀ,, ಡಾ.ರಾಧಾಕೃಷ್ಣನ್,  ಪ್ರೊ. ಹಿರಿಯಣ್ಣ ಅವರ ಗುರುಗಳು. ಇಂಗ್ಲಿಷ್‌, ಫ್ರೆಂಚ್‌ ತಮಿಳು ಭಾಷೆಗಳಲ್ಲೂ ಪ್ರೌಢಿಮೆ. ವಂಶಪಾರ್ಯಂಪರೆಯ ವೈದಿಕ ವೃತ್ತಿ ತೊರೆದು  ಮೈಸೂರು ರಾಜ್ಯದ ಸೈನಿಕ ಇಲಾಖೆಯಲ್ಲಿ ಉದ್ಯೋಗ.. ಆಂಗ್ಲರ ಅಡಿಯಲ್ಲಿ ಕೆಲಸ  ಮಾಡಿದರೂ ವೃತ್ತಿ ಬದುಕು ಹಿತಕರ. .ಅಂದಿನ  ಮೈಸೂರಿನಲ್ಲಿ ಸಂಗೀತದ ಸುಗ್ಗಿ.ವೀಣೆ ಶೇಷಣ್ಣ , ಬಿಡಾರಂ ಕೃಷ್ಣಪ್ಪ ಮೊದಲಾದ ಕರ್ನಾಟಕ ಸಂಗೀತದತ್ತ ದಿಗ್ಗಜರ ಜೊತೆಜೊತೆಗೆ ಅರಮನೆಯ ಪಾಶ್ಚಾತ್‌ ಸಂಗೀತ ಆಲಿಸುವ ಭಾಗ್ಯ ಅವರದಾಗಿತ್ತು.  ಅದರ ಪರಿಣಾಮ ಕೃತಿಗಳು ಸಂಗೀತ ಸಾಹಿತ್ಯಗಳ ಸುಮಧುರ ಸಮ್ಮಿಳನ  ನಂತರ ವಿಧಾನ ಮಂಡಲದಲ್ಲಿ  ಉದ್ಯೋಗ . ಬೆಂಗಳೂರಿನಲ್ಲಿ ವಾಸ.  ನಿವೃತ್ತಿಯ ನಂತರ ನಿಘಂಟು ರಚನೆಯಲ್ಲಿ ನಿರತರು.
.ನವೋದಯ ಕಾವ್ಯದ ಪ್ರಾರಂಭದ ಪ್ರಮುಖ ಕವಿ. ಕುವೆಂಪು ಬೇಂದ್ರೆ  ಮತ್ತು ನರಸಿಂಹಸ್ವಾಮಿಯವರ ಸಾಲಿನಲ್ಲಿರಬಹುದಾದ ಪ್ರತಿಭೆ .ಇವರ ಕಾವ್ಯ  ದೈವ, ಪ್ರಕೃತಿ ಮತ್ತು ಸಂಗೀತಗಳ ತ್ರಿವೇಣಿ ಸಂಗಮ ಹಣತೆ, ಮಾಂದಳಿರು,ಗಣೇಶದರ್ಶನ,ಮಲೆಯದೇಗುಲ,ಎಳೆಯಚಿಗುರು,ಹೊಸಬೇರುಮತ್ತು,ರಾಗರಾಗಿಣಿಇವರ ಪ್ರಮುಖ ಕವನ ಸಂಕಲನಗಳು,ಗೋಕುಲನಿರ್ಗಮನ, ಸುಧಾಮ,ಅಹಲ್ಯ, ಶಬರಿ. ಸೀತಾಕಲ್ಯಾಣ, ರಾಮಪಟ್ಟಾಭಿಷೇಕ  ಮೊದಲಾದ ಗೀತ ನಾಟಕಗಳು.ರಾಮಾಚಾರಿಯ ನೆನಪು, ಈಚಲು ಮರದ ಕೆಳಗೆ,  ರಥಸಪ್ತಮಿ ಮತ್ತುಇತರೆ ಕಥೆಗಳು ಮುದಲಾದ ಗದ್ಯ ಕೃತಿಗಳು ಅವರ ವೈವಿದ್ಯ ಮಯ ಬರವನಿಣಿಗೆಯ ಪ್ರತೀಕ.

ಅವರ ಕಾವ್ಯ ಪ್ರತಿಭೆ ಗುರುತಿಸಲು ತಡವಾದರೂ   ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟ್ರೇಟ್‌, ಪಂಪ ಪ್ರಶಸ್ತಿ, ಪದ್ಮಶ್ರೀ,  ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರಿಗೆ ಸಂದಸನ್ಮಾನಗಳು.ನವೋದಯದ ಕೊನೆಯ ಕೊಂಡಿ ಕಳಚಿದ್ದು ೧೯೯೮ ರ ಅಕ್ಟೋಬರ್‌೨೩ ರಂದು. ಇಂಥಹ ಸಮೃದ್ಧ ಜೀವನವನ್ನು ಕಿರು ಚಿತ್ರದಲ್ಲಿ ಸೆರೆ ಹಿಡಿಯುವುದು ತುಸು ಕಠಿನ, ಆ ಮಿತಿಯಲ್ಲಿಯೇ ಡಾ. ಚಂದ್ರಶೇಖರ ಕಂಬಾರರು ತಕ್ಕ ಮಟ್ಟಿಗೆ ಯಶಸ್ವಿಯಾಗಿರುವರು.ಕಾವ್ಯ ರಸಿಕರಿಗೆ ಖುಷಿಕೊಡುವರು


Monday, January 13, 2014

ಪು.ತಿ.ನ- ಸಾಕ್ಷ್ಯ ಚಿತ್ರ

   ಡಾ. ಪು. ತಿ. ನರಸಿಂಹಾಚಾರ್‌



ಕೇಂದ್ರ ಸಾಹಿತ್ಯ ಅಕಾಡಿಮಿಯವರು ಭಾರತದ ಮಹಾನ್‌ಕವಿಗಳ ಕುರಿತಾದ ಸಾಕ್ಷ್ಯ ಚಿತ್ರೋತ್ಸವವನ್ನು ಇದೇ ಜನವರಿ ೯, ೧೦. ಮತ್ತು  ೧೧ ರಂದು ಸುಚಿತ್ರ ಅಕಾಡಮಿಯಲ್ಲಿ ನಡೆಸಿದರು, ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಚಿತ್ರೋತ್ಸವದ ಹಿನ್ನೆಲೆಯಲ್ಲಿ ಅದರಲ್ಲೂ ಕರ್ನಾಟಕದ ಕೊನೆಯ ರಾಷ್ಟ್ರ ಕವಿ ಜಿ ಎಸ್. ಶಿವರುದ್ರಪ್ಪನರು ಅಗಲಿದ ಹಿನ್ನೆಲೆಯಲ್ಲಿ  ಒಂದು ಉತ್ತಮ ಪ್ರಯತ್ನ ಎನಿಸಿತು.ಸಹಜವಾಗಿ ಸಮಕಾಲೀನ ಕವಿಗಳಾದ ಲಕ್ಷಮಿನಾರಾಯಣ ಭಟ್ಟ, ಜಯಂತ ಕಾಯ್ಕಿಣಿ, ಬಿ.ಆರ್‌ಲಕ್ಷ್ಮಣ ರಾವ್‌ ಮೊದಲಾವರು ಹಾಜರಿದ್ದರು..ಇತ್ತೀಚೆಗೆ ಹಸ್ತಪ್ರತಿ ಸಂರಕ್ಷಣೆಯ ಕಾರ್ಯದಲ್ಲಿ ತಲ್ಲೀನನಾಗಿ ಹೊರ ಜಗತ್ತನ್ನು ಮರೆತಿರುವ ನಾನು ಅದೃಷ್ಟವಶಾತ್‌ ಬದಲಾವಣೆ ಇರಲಿ ಎಂದು ಸುಚಿತ್ರಕ್ಕೆ ಭಾನುವಾರ ಸಂಜೆ ಹೋದಾಗ ಕಳೆದ ಎರಡುದಿನ ಆಕಡೆ ಹೋಗದೆ ಇರುವುದಕ್ಕೆ ಮನ ಮಿಡುಕಿತು. ಅಂದು ಸಂಜೆ ಐದಕ್ಕೆ ಅನಂತ ಮೂರ್ತಿಯವರ ಜತೆ ಸಂವಾದ ಇದ್ದಿತು. ಆದರೆ ಅವರ ಅನುಪಸ್ಥಿತಿಯಿಂದ ನೇರವಾಗಿ ಚಿತ್ರಪ್ರದರ್ಶನ ಪ್ರಾರಂಭವಾಯಿತು
ಮೊದಲ ಚಿತ್ರ ಪು. ತಿ. ನ ಅವರಕುರಿತಾದುದು.ಸಂಗೀತ ಕಾವ್ಯಗಳ ಸುಮಧುರ ಸಂಗಮವಾದ ಅವರ ಕಾವ್ಯದ ಝಳಕಿನೊಂದಿಗೆ ಚಿತ್ರ ಪ್ರಾರಂಭವಾಯಿತು. ಮಲೆದೇಗುಲದ ಗೀತೆ ಮೇಲುಕೋಟೆಯ ಪ್ರಕೃತಿ ಚಿತ್ರಣ ಉತ್ತಮ ಆರಂಭ ಒದಗಿಸಿತು. ಜ್ಞಾನ ಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರರು.  ಹಿರಿಯ ಕವಿಯ ವ್ಯಕ್ತಿತ್ವವನ್ನು ಅವರ ಸ್ಪೂರ್ತಿ ನೆಲೆವೀಡಾದ ಮೇಲುಕೋಟೆಯ ಸುಂದರ ಪರಿಸರದ ಜೊತೆಅವರ ಜೀವನ ಹೇಗೆ ಹಾಸು ಹೊಕ್ಕಾಗಿದ್ದನ್ನು  ಸಮರ್ಥವಾಗಿ ಸೆರೆ ಹಿಡಿದಿರುವರು. ಬಹುಶಃ ಪು.ತಿ.ನ ಅವರ ಮಾಗಿದ ವಯಸ್ಸಿನಲ್ಲಿ ಚಿತ್ರೀಕರಣವಾದುದರಿಂದ ಅವರ ಬಾಲ್ಯ ಯೌವನ  ಮತ್ತು ಅವರ ಸಮಕಾಲೀನ  ಒಡಗಿನ ಒಡನಾಡದ ವಿವರ ಇಲ್ಲದೇ ಇರುವುದು ಎದ್ದು ಕಾಣುತಿತ್ತು . ಚೆಲುವನಾರಾಯಣನ ಅರ್ಚಕರ ವಂಶದಲ್ಲಿ ಜನಿಸಿದ ಅವರು ವೈದಿಕಜಗತ್ತಿನಿಂದ ಹೊರಬಂದು ಮೈಸೂರು ಸೈನಿಕ ಇಲಾಖೆಯಲ್ಲಿ ಆಂಗ್ಲ ಅಧಿಕಾರಿಗಳ ಅಡಿಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿದರೂ ಅವರ ಮನದ ತುಂಬ ಚೆಲುವನಾರಾಯಣ ಮತ್ತು ಮೇಲು ಕೋಟೆಯೇ. ತಮ್ಮ ೧೯ರ ಎಳೆವಯಸ್ಸಿನಲ್ಲಿ ೧೩ರ ಬಾಲೆಯನ್ನು ಮದುವೆಯಾದ  ಅವರು ತಮ್ಮ ಅರವತ್ತುವರ್ಷಕ್ಕೂ ಅಧಿಕ ದಾಂಪತ್ಯ ಜೀವನದಲ್ಲಿ ಕಷ್ಟ ನಷ್ಟಗಳ ಕೋಟಲೆ ಕೊರತೆಗಳ ನಡುವೆ ಕವಿ ಮನ ಮುದುಡದಂತೆ ನೋಡಿಕೊಂಡಮಡದಿಯೇ ರಂಗವಲ್ಲಿ ಹಾಕುವುದರೊಂದಿಗೆ ಚಿತ್ರ ಪ್ರಾರಂಭವಾದುದು ಸಾಂಕೇತಿಕವಾಗಿತ್ತು ಅವರು ಜನಿಸಿದ ಮನೆ ಮೈಸೂರಲ್ಲಿ ವಾಸವಿದ್ದ ವಠಾರ, ದೈನಂದಿನ ವೈದಿಕಾಚರಣೆಗಳು  ನಡುವೆಯೂ ಅವರ ಕವಿಮನಸ್ಸು ಹೇಗೆ ಕ್ರಿಯಾಶೀಲವಾಗಿ ಜೀವಂತವಾಗಿತ್ತು, ಕನ್ನಡದಲ್ಲಿ ಮೊದಲ ಸಂಗೀತ ನಾಟಕ ರಚಿಸಿದ ಅವರ ವೈಶಿಷ್ಟ್ಯವನ್ನು ವೀಣೆ ದೊರೆಸ್ವಾಮಿಗಳೇ ವಿವರಿಸಿದ್ದು ಜೊತೆಗೆ ಸುಧಾಮ ಎಂಬ ಬ್ಯಾಲೆಯ ತುಣುಕು ತೋರಿಸಿದುದು ತುಂಬಾ ಆಸಕ್ತಿದಾಯಕವಾಗಿದ್ದಿತು.ಅವರೇ ಹೇಳಿದಂತೆ ಅರವತ್ತರ ವಯಸ್ಸಿನವರೆಗೆ ಅವರ ಕಾವ್ಯಕ್ಕೆ ಯಾವುದೇ ಪ್ರಶಸ್ತಿ ಪುರಸ್ಕಾರ ಬಂದಿರಲಿಲ್ಲ. ನಂತರ ಅವರ ಕಾವ್ಯ ಪ್ರತಿಭೆಗೆ ಸಲ್ಲಬೇಕಾದ ಗೌರವ ಸಂದಿತು. ಅವರು ಬಹುಶಃ ಹನ್ನೆರಡನೆಯ ಶತಮಾನದಲ್ಲಿ ಪ್ರಾಂರಂಭವಾದ  ಭಕ್ತ ಕವಿ ಪರಂಪರೆಯ ಕೊನೆಯ ಕೊಂಡಿ ಎಂಬ ವಿಮರ್ಶಕ  ಡಾ. ಕೆ.. ಮರಳ ಸಿದ್ಧಪ್ಪನವರ ಮಾತು  ಅರ್ಥಪೂರ್ಣ. ಅವರ ಧಾರ್ಮಿಕ ಆಚರಣೆ, ವೇಷ ಭೂಷಣ   ನೋಡಿ ಮೂಡುವ ಚಿತ್ರಣಕ್ಕಿಂತ ಹೇಗೆ ಅವರ ವ್ಯಕ್ತಿತ್ವ ಭಿನ್ನವಾಗಿತ್ತಯ ಎಂದು ಮರುಳಸಿದ್ದಪ್ಪ ನೀಡಿದ ಒಂದು ಘಟನೆ  ಮನಮುಟ್ಟುವಮತೆ ಇತ್ತು. ಕಟ್ಟಾ ವೈದಿಕ ಸಂಪ್ರದಾಯದವರಂತಿದ್ದ ಅವರು ಬಾಬ್ರಿ ಮಸೀದಿಯು ಧರ್ಮಾಧರರ ದಾಳಿಗೆ ತುತ್ತಾಗಿ ನಾಶವಾದಾಗ ಅದನ್ನು ಖಂಡಿಸುವ ಸಭೆಗೆ ಬಂದುದನ್ನು ನೆನಸಿಕೊಂಡರು.. ಅವರನ್ನು ಕರೆತರಲು ಹೋದಾಗ ಅವರು ಸಂಧ್ಯಾವಂದನೆಯ ಸಿದ್ದತೆಯಲ್ಲಿದ್ದರು.
 ಅದರ ಮೊದಲ ಅಂಗವಾಗಿ  ತ್ರಿನಾಮ ಹಾಕಿಕೊಳ್ಳುತಿದ್ದರು. ಇವರನ್ನು ನೋಡಿದೊಡನೆ ಅಪ್ಪಾ, ನಾನು ನಾಮ  ಹಾಕಿಕೊಳ್ಳುವೆ ಇತರರಿಗೆ ಹಾಕುವುದಿಲ್ಲ ಎಂಬ ಅವರ ಹಾಸ್ಯ ಪ್ರಜ್ಞೆ ಅವರ ಸರಸ ಗುಣಕ್ಕೆ ಸಾಕ್ಷಿ . ಅಂದಿನ ಸಭೆಯಲ್ಲಿ ಲಂಕೇಶ, ಮರುಳಸಿದ್ದಪ್ಪ ಅನಂತ ಮೂರ್ತಿ , ರಾಮದಾಸ ಮೊದಲಾದ ಪ್ರಗತಿಪರ ಧೋರಣೆ ಸಾಹಿತಿಗಳು ಭಾಗವಹಿಸಿ, ಗುಡಿ, ಮಸೀದಿ ಚರ್ಚು ಯಾವುದೇ ಪೂಜಾಸ್ಥಳವಾದರೂ ಅದರ ನಾಶ ಖಂಡನಾರ್ಹ ಎಂದು ಮಾತನಾಡಿದರು.. ಆದರೆ ಬಾಬ್ರಿ ಮಸೀದೆಯಲ್ಲಿ ಪ್ರಾರ್ಥನೆ ನಡೆಸುತ್ತಿರರಲಿಲ್ಲ  ಅಲ್ಲವೇ ಎಂಬ  ಅವರ ಪ್ರಶ್ನೆ ಹಲವರ ಕಣ್ಣು ಕೆಂಪಾಗಲೂ ಕಾರಣವಾದರೂ .ಕೋಮುವಾದದ ಖಂಡನೆಯ ಸಭೆಯಲ್ಲಿ ಭಾಗವಹಿಸಿದುದು ಅವರ ಜ್ಯಾತ್ಯಾತೀತ ಮನಸ್ಸಿನ ಅನಾವರಣ ಗೊಳಿಸುವಂಥಹ ಘಟನೆ. ಆದರೆ ಈ ಎಲ್ಲ ಆಯಾಮಗಳು ಚಿತ್ರದಲ್ಲಿ ಇಲ್ಲದಿರುವುದು ಒಂದು ಕೊರತೆ. ದೇವನೂರು ಮಹದೇವ ಅವರ ಮಗಳ ಕವನ ಸಂಕಲನಕ್ಕೆ ಮುನ್ನುಡಿ ಬರೆಸಲು ಡಾ. ವಿಜಯಮ್ಮ ಮತ್ತು ಮಹಾದೇವ ಅವರ ಮನೆಗೆ ಹೊದಾಗ ರಾತ್ರಿ ಹನ್ನೆರಡುಗಂಟೆ. ಅಪರಾತ್ರಿಯಲ್ಲಿ ಹೊದರೂ ಬಾಗಿಲುತೆರೆದು ಏನಮ್ಮ  ವಿಜಯಾ ,ಇಷ್ಟು ಹೊತ್ತಿನಲ್ಲಿ ಬಂದೆ? ಎಂದವರು, ಮಹದೇವ ಬಂದಿರುವನು ಎಂದು ಕೇಳಿದೊಡನೆ  ಧಾವಿಸಿ ಅಪ್ಪಿಕೊಂಡ ಘಟನೆ  ಮಡಿವಂತಿಕೆಯ ಮುಸುಕಿನಲ್ಲಿ  ಅವರ ಮನದಾಳದಲ್ಲಿ ಹುದುಗಿದ  ಅಂತಃಕರಣಕ್ಕೆ ಸಾಕ್ಷಿ ಭೂತ. ಮಾರನೆಯ ದಿನ ಬೆಳಗಿನ ಹತ್ತೂವರೆಗ ಮುನ್ನುಡಿ ಬರೆದು ಯುವ ಕವಿಯತ್ರಿಯನ್ನು ಹರಸಿದುದು ಕೇಳಿ ಅವರ ವ್ಯಕ್ತಿತ್ವಕ್ಕೆ ತಲೆ ಬಾಗುವುದು. ಇಂಥಹ ಅಂಶಗಳೇ ವ್ಯಕ್ತಿಚಿತ್ರಣ ಕುಸರಿ ಕೆಲಸ ಎಂಬುದು ನಿಜಕ್ಕೂ ಮನನೀಯ. ಇವೆಲ್ಲಸಾಕ್ಷ್ಯಚಿತ್ರದಲ್ಲಿ ಇರಲಿಲ್ಲ. ಅಲ್ಲದೇ ಅನೇಕ ಕಡೆ ಅವರ ಮಾಗಿದ ವಯಸ್ಸಿನ ಕಾರಣವೋ ಇಲ್ಲವೇ ತಾಂತ್ರಿಕಕ ದೋಷದಿಂದಾಗಿಯೋ   ಮಾತು ತುಸು ಅಸ್ಪಷ್ಟವಾಗಿತ್ತು.
 ಪು. ತಿ. ನರಸಿಮಹಾಚಾರ್‌ ಅವರ ಜನನ  17 ಮಾರ್ಚ್‌ 1905 ರಲ್ಲಿ ಸಂಪ್ರದಾಸ್ಥ ಅಯ್ಯಂಗಾರ್‌ ಕುಟುಂಬ. ತಂದೆ ತಿರುನರಾಯಣ ಅಯ್ಯಂಗಾರ್‌ ಚೆಲುವನಾರಾಯಣನ ಅರ್ಚಕರು. ತಾಯಿ ಶ್ರೀರಂಗಮ್ಮ. ಅವರದು ಪುರೋಹಿತ ಮನೆತನ.  ಮಗನು ಅದೇ ವೃತ್ತಿಯಲ್ಲಿ ಮುಂದುವರಿಯಲ್ಲಿ ಎಂಬ ಆಸೆ. ಅದಕ್ಕೆ ಚಿಕ್ಕಂದಿನಿಂದಲೇ ಸಂಸ್ಕೃತ, ಶಾಸ್ತ್ರ ಅಭ್ಯಾಸ. ಆದರೆ ಪುತಿನ ಅವನ್ನು ಕನ್ನಡ ಕೈ ಬಿಸಿ ಕರೆಯಿತು  ಪ್ರಾಥಮಿಕ  ಶಿಕ್ಷಣ ಅಲ್ಲಿಯೇ ಆದರೂ  ಅವರ ಮುಂದಿನ ಶಿಕ್ಷಣ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ, ತಿ..ನಂ.ಶ್ರೀ,, ಡಾ.ರಾಧಾಕೃಷ್ಣನ್,  ಪ್ರೊ. ಹಿರಿಯಣ್ಣ ಅವರ ಗುರುಗಳು. ಇಂಗ್ಲಿಷ್‌, ಫ್ರೆಂಚ್‌ ತಮಿಳು ಭಾಷೆಗಳಲ್ಲೂ ಪ್ರೌಢಿಮೆ. ವಂಶಪಾರ್ಯಂಪರೆಯ ವೈದಿಕ ವೃತ್ತಿ ತೊರೆದು  ಮೈಸೂರು ರಾಜ್ಯದ ಸೈನಿಕ ಇಲಾಖೆಯಲ್ಲಿ ಉದ್ಯೋಗ.. ಆಂಗ್ಲರ ಅಡಿಯಲ್ಲಿ ಕೆಲಸ  ಮಾಡಿದರೂ ವೃತ್ತಿ ಬದುಕು ಹಿತಕರ. .ಅಂದಿನ  ಮೈಸೂರಿನಲ್ಲಿ ಸಂಗೀತದ ಸುಗ್ಗಿ.ವೀಣೆ ಶೇಷಣ್ಣ , ಬಿಡಾರಂ ಕೃಷ್ಣಪ್ಪ ಮೊದಲಾದ ಕರ್ನಾಟಕ ಸಂಗೀತದತ್ತ ದಿಗ್ಗಜರ ಜೊತೆಜೊತೆಗೆ ಅರಮನೆಯ ಪಾಶ್ಚಾತ್‌ ಸಂಗೀತ ಆಲಿಸುವ ಭಾಗ್ಯ ಅವರದಾಗಿತ್ತು.  ಅದರ ಪರಿಣಾಮ ಕೃತಿಗಳು ಸಂಗೀತ ಸಾಹಿತ್ಯಗಳ ಸುಮಧುರ ಸಮ್ಮಿಳನ  ನಂತರ ವಿಧಾನ ಮಂಡಲದಲ್ಲಿ  ಉದ್ಯೋಗ . ಬೆಂಗಳೂರಿನಲ್ಲಿ ವಾಸ.  ನಿವೃತ್ತಿಯ ನಂತರ ನಿಘಂಟು ರಚನೆಯಲ್ಲಿ ನಿರತರು.
.ನವೋದಯ ಕಾವ್ಯದ  ಪ್ರಾರಂಭದ ಪ್ರಮುಖ ಕವಿ. ಕುವೆಂಪು , ಬೇಂದ್ರೆ  ಮತ್ತು ನರಸಿಂಹಸ್ವಾಮಿಯವರ ಸಾಲಿನಲ್ಲಿರಬಹುದಾದ ಪ್ರತಿಭೆ .ಇವರ ಕಾವ್ಯ  ದೈವ, ಪ್ರಕೃತಿ ಮತ್ತು ಸಂಗೀತಗಳತ್ರಿ ವೇಣಿ ಸಂಗಮ ಹಣತೆ, ಮಾಂದಳಿರು,ಗಣೇಶ ದರ್ಶನ,  ಮಲೆಯ ದೇಗುಲ,ಎಳೆಯ ಚಿಗುರು,ಹೊಸಬೇರು ರಾಗರಾಗಿಣಿ ಕವನ ಸಂಕಲನಗಳು,ಗೋಕುಲನಿರ್ಗಮನ, ಸುಧಾಮ,ಅಹಲ್ಯ, ಶಬರಿ. ಸೀತಾಕಲ್ಯಾಣ, ರಾಮಪಟ್ಟಾಭಿಷೇಕ  ಮೊದಲಾದ ಗೀತ ನಾಟಕಗಳು
ರಾಮಾಚಾರಿಯ ನೆನಪು, ಈಚಲು ಮರದ ಕೆಳಗೆ,  ರಥಸಪ್ತಮಿ ಮತ್ತುಇತರೆ ಕಥೆಗಳು ಮುದಲಾದ ಗದ್ಯ ಕೃತಿಗಳು ಅವರ ವೈವಿದ್ಯಮಯ ಬರವನಿಣಿಗೆಯ ಪ್ರತೀಕ.
ಅವರ ಕಾವ್ಯ ಪ್ರತಿಭೆ ಗುರುತಿಸಲು ತಡವಾದರೂ   ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಗೌರವ ಡಾಕ್ಟ್ರೇಟ್‌, ಪಂಪ ಪ್ರಶಸ್ತಿ, ಪದ್ಮಶ್ರೀ,  ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಅವರಿಗೆ ಸಂದಸನ್ಮಾನಗಳು.ನವೋದಯದ ಕೊನೆಯ ಕೊಂಡಿ ಕಳಚಿದ್ದು ೧೯೯೮ ರ ಅಕ್ಟೋಬರ್‌೨೩ ರಂದು. ಇಂಥಹ ಸಮೃದ್ಧ ಜೀವನವನ್ನು ಕಿರು ಚಿತ್ರದಲ್ಲಿ ಸೆರೆ ಹಿಡಿಯುವುದು ತುಸು ಕಠಿನ, ಆ ಮಿತಿಯಲ್ಲಿಯೇ ಡಾ. ಚಂದ್ರಶೇಖರ ಕಂಬಾರರು ತಕ್ಕ ಮಟ್ಟಿಗೆ ಯಶಸ್ವಿಯಾಗಿರುವರು.ಕಾವ್ಯ ರಸಿಕರಿಗೆ ಖುಷಿಕೊಡುವರು

Wednesday, January 1, 2014

ಕನ್ನಡದ ಕೆಲಸಕ್ಕೆ ಅನನ್ಯ ಅವಕಾಶ






ಹಸ್ತ ಪ್ರತಿಗಳು ಇತಿಹಾಸ ಮತ್ತು ಸಾಹಿತ್ಯದ ಪ್ರಮುಖ ಆಕರ.ಅವು ನಮ್ಮ ನಾಡಿನ ಪರಂಪರಾಗತ ಸಂಪತ್ತು.ನಾಶದ ಅಂಚಿನಲ್ಲಿರುವ ಅವುಗಳನ್ನು ಸಂರಕ್ಷಿಸಲು ಮತ್ತು ಅಭ್ಯಸಿಸಲು ಅಭಿಯಾನ ಹಮ್ಮಿಕೊಂಡಿದೆ.ಆಧುನಿಕತಂತ್ರ ಜ್ಞಾನವನ್ನು ಅಳವಡಿಸಿಕೊಂಡರೆ ಈ ಕೆಲಸ ಸರಳ ಮತ್ತು ಸುಲಭ.ಈಗಾಗಲೇ  ದೇಶವಿದೇಶದ ಮೂವತ್ತಕ್ಕೂ ಹೆಚ್ಚು ಜನ ಸ್ವಯಂ ಸೇವಕರು ಈ ಕೆಲಸದಲ್ಲಿತೊಡಗಿಸಿ ಕೊಂಡಿರುವರು.ಎಲ್ಲದಕ್ಕೂ ಸರಕಾರವನ್ನೇ ನಂಬಿಕೊಂಡರೆ ಕೆಲಸ ಆಗದು.  ಹಣ ಇಲ್ಲದಿದ್ದರೂ ಜನ ಇದ್ದರೆ ಸಾಕು. ಈಗ ಒಂದು ತಿಂಗಳಲ್ಲಿ ೫೦ ಕೃತಿಗಳ ಡಿಜಿಟಲೈಜೇಷನ್‌ ಮತ್ತು ಸೂಚಿಯ ಕರಡು ತಯಾರಿ ಕೆಲಸ ಆಗಿದೆ. ಇನ್ನೂ ಒಂದು ಲಕ್ಷಕ್ಕೂ ಮಿಗಿಲು ಗರಿಗಳು ಇವೆ.ಈಗ ಆಗಿರುವ ಕೆಲಸ ಅಡಿಕೆಯಷ್ಟು ಆಗ ಬೇಕಾದುದು ಬೆಟ್ಟದಷ್ಟು. ಕನ್ನಡದ ತೇರು ಎಳೆಯಲು ಕೈಗಳು ಬೇಕಿವೆ, ವಿದ್ಯಾರ್ಥಿ , ವಿದ್ವಾಂಸ, ತಂತ್ರಜ್ಞ, ಗೃಹಿಣಿ, ವೃತ್ತಿಪರ ಮತ್ತು ನಿವೃತ್ತrOಸೇರಿದಂತೆ ಎಲ್ಲರೂ ಸೇವೆ ಸಲ್ಲಿಸಲು ಸಾಧ್ಯವಿದೆ.ಬಿಡುವಿನ ಸಮಯದಲ್ಲಿ ಕೆಲಸಮಾಡುವ ದೃಢ ಮನ ಬೇಕು.ವಿಶೇಷವಾಗಿ ಇಂಟರ್‌ನೆಟ್‌ ಸೌಲಭ್ಯ ಹೊಂದಿದವರು ಜಗತ್ತಿನ ಯಾವ ಮೂಲೆಯಲ್ಲೊ ಇದ್ದರೂ ಈ ಅನನ್ಯ ಕೆಲಸದಲ್ಲಿ ಭಾಗಿಯಾಗಬಹುದು.ಇಲ್ಲದವರು ಬೆಂಗಳೂರಿನವರಾದರೆ ಪ್ರತಿಷ್ಠಾನದಲ್ಲಿ   ಕೆಲಸ ನಿರ್ವಹಿಸಬಹುದು.ಜ್ಞಾನ ಸಂಪತ್ತನ್ನು ಉಳಿಸುವ, ಹರಡುವ ಮತ್ತು  ಅಧ್ಯಯನ ಮಾಡಲು ಅವಕಾಶ ಒದಗಿಸುವ ಹೆಮ್ಮೆ ನಿಮ್ಮದಾಗಲು  ಸಂಪರ್ಕಿಸಿ
ಎಚ್‌.ಶೇಷಗಿರಿರಾವ್‌
ನಿರ್ದೇಶಕರು
ಹಸ್ತ ಪ್ರತಿ ಅಭಿಯಾನ
ಬಿ.ಎಂ.ಶ್ರೀ. ಪ್ತತಿಷ್ಠಾನ, ಬೆಂಗಳೂರು-೧೯
ಚರದೂರವಾಣಿ – 9448442323,  ಸ್ಥಿರ ದೂರವಾಣಿ-080-26613929