Monday, March 11, 2013

ಬರ್ಥ ಡೇ

ಅನಿಕೇತ್
ಮೊನ್ನೆ ಶಿವರಾತ್ರಿಯ ದಿನ ಬೆಳ್ಳಂ  ಬೆಳಗ್ಗೆ    ಕಾಲಿಂಗ್‌ ಬೆಲ್‌ಸದ್ದಾಯಿತು. ಗಡಿಬಿಡಿಯಿಂದ ಬಾಗಿಲುತೆಗೆದಾಗ ಕ್ಯೂರಿಯರ್‌ನವನು ಒಂದು ಸುಂದರ ಪಾರ್ಸಲ್‌ ತಂದಿದ್ದ. ಇದೇನಪ್ಪ ಎಂದು ಕೇಳಿದರೆ , ಅಮೇರಿಕಾದಿಂದ ಆರ್ಡರ್‌ ಮಾಡಿರುವರು ಎಂದು ತಿಳಿಸಿದ.. ಅಚ್ಚರಿಯಿಂದ ಬಿಚ್ಚಿನೋಡಿದರೆ  ಹ್ಯಾಪಿ ಬರ್ತಡೇ ಕೇಕು. ನಾವು ಆರ್ಡರ್‌ ಮಾಡಿರಲಿಲ್ಲ. ಅದು ಅಮೇರಿಕಾದಲ್ಲಿರುವ ಮಗಳು ಅಕ್ಕನ ಮಗನ ಜನ್ಮದಿನಕ್ಕೆ ಅಲ್ಲಿಂದಲೇ ಆರ್ಡರ್‌ಮಾಡಿ ಇಲ್ಲಿಗೆ ಈ ದಿನದಂದು ತಲುಪುವ ವ್ಯವಸ್ಥೆ ಮಾಡಿದ್ದಳು.ಆಹಾ! ಗ್ಲೋಬಲ್‌ ವಿಲೇಜ್‌ ಪರಿಣಾಮವೇ !, ಎಂದು ಕೊಂಡೆ

ಜಯಂತ್‌--ಹಿತಾ
ಹುಟ್ಟು ಹಬ್ಬ ಎಂದರೆ  ಈಗಿನ ಮಕ್ಕಳಿಗೆ ಅದೇನೋ ಸಂಭ್ರಮ.ಅದು ಬರುವ ತಿಂಗುಳಗಳ ಮೊದಲೇ ನನ್ನ ಹ್ಯಾಪಿ ಬರ್ಥ ಡೇ ಬರುತ್ತದೆ ಎಂದು ಹಾಡುತ್ತಿರುತ್ತವೆ. ಅವರೇನಿರ್ಧಾರ ಮಾಡಿರುವರು. ಅದನ್ನು ಹ್ಯಾಪಿ ಬರ್ಥ ಡೇ ಎಂದು. ಅದಕ್ಕಾಗಿ ನನಗೆ ಅದು ಬೇಕು , ಇದು ಬೇಕು ಎಂದು ಕೇಳುತ್ತಲೇ ಇರುತ್ತವೆ
.ಮೊಮ್ಮಕ್ಕಳ ಈ ಉತ್ಸುಕತೆ ಕಂಡು ನನಗೆ ನನ್ನ ಬಾಲ್ಯದ ನೆನಪಾಯಿತು. ನಮ್ಮಕಾಲದಲ್ಲಿ ಈ ಸಡಗರ ಇರಲಿಲ್ಲ. ಕಾರಣ ಮನೆ ತುಂಬ ಮಕ್ಕಳು . ಬರುವ ಹಬ್ಬ ಹರಿದಿನಗಳನ್ನು ಮಾಡುವದೇ ಕಠಿಣವಾಗಿತ್ತು. ಹಣಕಾಸಿಗಿಂತ ಮಡಿ ಮೈಲಿಗೆ, ಆಚರಣೆ ಪೂಜೆ ಪುನಸ್ಕಾರ ,ಅತಿಥಿಗಳು,      ಅಭ್ಯಾಗತರು ಎಲ್ಲವನ್ನು  ನಿಭಾಯಿಸುವುದು ಕಷ್ಟ ಸಾಧ್ಯವಾಗಿತ್ತು . ಬೇಳೆಯಲ್ಲಿ ಬೆಲ್ಲ ಬಿದ್ದರೆ ಊಟ ಮಧ್ಯಾಹ್ನ ಮೂರುಗಂಟೆಗೆ. ಮಕ್ಕಳಿಗೆ ಬೆಳಗಿನ  ತಿಂಡಿ ರಾತ್ರಿ ಉಳಿದ ತಂಗಳ ಅನ್ನಕ್ಕೆ ಮೆಂತ್ಯದ ಹಿಟ್ಟು ಕಲೆಸಿ ಹಾಕುವ ಕೈತುತ್ತು .ಆಗಿನ ಹುಟ್ಟು ಹಬ್ಬಗಳು ಇಂಗ್ಲಿಷ್‌ ದಿನಾಂಕನ್ವ್ನುನು ಅವಲಂಬನೆ ಮಾಡಿಕೊಂಡಿರಲಿಲ್ಲ ಹುಟ್ಟು ಹಬ್ಬ ಬರುವುದ ಯಾವಾಗ  ಎಂದು ಪೀ ಉಗಾದಿ ಮುಂದೆ,
 ನಮ್ಮೂರ ದೀಪಾವಳಿ ಹಿಂದಿನ ದಿನ. ರಾಮನವಮಿ  ಆದ ಮೇಲೆ ಮೂರುದಿನದ ನಂತರ , ಎಳ್ಳು ಮಾಸಿ ಮುಂದೆ, ಗೌರಿ ಹುಣ್ಣಿಮೆ ದಿಜಾತ್ರೆದಿನ  ಹೀಗೆ ಗುರುತಿಸುತಿದ್ದರು.ಇನ್ನು. ಇತರರು ಅದರಲ್ಲೂ  ಅನಕ್ಷರಸ್ಥರು ದಿನವನ್ನಲ್ಲ ವರ್ಷವನ್ನೆ ಮರೆತಿರುತಿದ್ದರು.. ಡೋಗಿ ಬರ ಬಂದಿತ್ತಲ್ಲ ಆಗ., ಪ್ಲೇಗು ಬಂದಾಗ ಊರು ಬಿಟ್ಟದ್ದೆವಲ್ಲ ಆಗ ಹುಟ್ಟಿದೆ . ಎನ್ನುವರು.


ಅಜ್ಜ ನಿನಗೆ ವಯಸ್ಸು ಎಷ್ಟು ಎಂದರೆ ಅಜಮಾಸು ೧೫೦-೨೦೦ ಇರಬೇಕು ಅಂತ ಒಬ್ಬರು ಅಂದರೆ , ಇಪ್ಪತ್ತು ಮೂವತ್ತು ಇರಬಹುದು ಎಂದು ಹಣ್ಣುಹಣ್ಣು ಅಜ್ಜಿ ಹೇಳಿದರೆ ಅಚ್ಚರಿ ಆಗುತ್ತಿರಲಿಲ್ಲ..ಏಕೆಂದರೆ ಅವರೆಲ್ಲ ಕಾಲತೀತರಾಗಿದ್ದರು. ಶಾಲೆಗೆ ಸೇರಿಸುವಾಗಲೂ ಅಷ್ಟೇ ಎಷ್ಟಪ್ಪಾ ಮಗುವಿನ ವಯಸ್ಸು ಎಂದು ಅರ್ಜಿತುಂಬುವಾಗ ಅಪ್ಪನನ್ನುಕೇಳಿದರೆ ನೀವೆ ಬರಕಳ್ರಿ ಮಾಷ್ಟ್ರೆ ಎನ್ನುವವರೆ ಬಹಳ. ಅದಕ್ಕೆ ನಮ್ಮ ಸಮಕಾಲೀನರ ಶಾಲಾ ಜನ್ಮ ದಿನಾಂಕ ಬಹುತೇಕ ಜೂಲೈ ೧. ಇದರಿಂದ  ಒಂದೊಂದು ಸಲ ಎಷ್ಟು ಅವಾಂತರವಾಗತಿತ್ತು ಎಂದರೆ ಅಣ್ಣ ಒಂದು ಶಾಲೆಯಲ್ಲಿ ತಮ್ಮ  ಬೇರೊಂದು ಊರಿನಲ್ಲಿ ಶಾಲೆಗ ಹೆಸರು ಹಚ್ಚಿದರೆ, ಅಣ್ಣನಿಗಿಂತ ತಮ್ಮ ದೊಡ್ಡವನು ಆಗುವುದಿತ್ತು. ಅದೂ ಪರವಾಇಲ್ಲ ಒಬ್ಬಳೇ ತಾಯಿಯ ಮಕ್ಕಳು ಮೂರೇ ತಿಂಗಳು ಅಂತರದಲ್ಲಿ ಹುಟ್ಟಿರುತಿದ್ದರು ಒಂದು ಸಲವಂತೂ  ಮಗನ ಜನ್ಮ ದಿನಾಂಕವನ್ನು ಅವನು ಕಾಲೇಜಿಗೆ ಬಂದಾಗ ಗಮನಿಸಿದರೆ ಅಮ್ಮನಿಗೆ ಮದುವೆಯಾಗುವ ಮೊದಲೇ ಹುಟ್ಟಿರುವಂತೆ ದಾಖಲಾಗಿತ್ತು. ಅದರಿಂದ ಕೆಲವರಿಗೆ ಹೊಸ ಅಂಗಿ ಹಾಕಿದಾಗ ಹುಟ್ಟುಹಬ್ಬ ಆದರೆ, ಕೆಲವು ಜಾಣರು ಹುಟ್ಟುಹಬ್ಬವನ್ನು ಆಚರಣೆ ಬಿಡುತ್ತಿರಲಿಲ್ಲ. ಆದರೆ ಅದೇ ದಿನಮಾಡುತ್ತಿರಲಿಲ್ಲ. ಯಾವಾಗಲೂ ಹೆಚ್ಚಿಸಿ ಮಾಡಬೇಕು ಎಂದು ಮುಂದೆ ಬರುವ ಒಂದು ಹಬ್ಬ ದಿನವೇ ಆಚರಿಸುತಿದ್ದರು. ಅಂದು ಹೇಗಿದ್ದರೂ ಎರೆದುಕೊಳ್ಳುತಿದ್ದ. ನಂತರ ಕುಂಕುಮ ಹಚ್ಚಿಕೊಂಡು ಹಿರಿಯರ ಕಾಲಿಗೆ ಬಿದ್ದರೆ ಮುಗಿಯಿತು , ಹಬ್ಬದಹೋಳಿಗೆ ಪಾಯಸ ಅವನ ಎಲೆಗೂ ಬೀಳುತಿತ್ತು. ಇನ್ನು ಈಗಿನಕಾಲದ ಮಕ್ಕಳ ಬೇಡಿಕೆ ಈಡೇರಿಸಲು ಆಕಾಶ ಪಾತಾಳ ಒಂದು ಮಾಡಬೇಕು.ಫಸ್ಟ ಸ್ಟಾಂಡರ್ಡನಲ್ಲಿ ಓದುವ ಮೊಮ್ಮಗಳಿಗೆ ಕಾರು ಬೇಕು. ಎಲ್‌ಕೆಜಿಗೆ ಹೋಗುವವನಿಗೆ ಮೋಟಾರ್‌ಸೈಕಲ್‌ ಅವರಿಗೆ ಸಮಾಧಾನ ಮಾಡುವುದರಲ್ಲಿ ಹೈರಾಣ

ಇನಿರಾವ್‌

                                              ಈಗ ಪರಮಾಣು ಕುಟುಂಬಗಳು ಹೆಚ್ಚಿವೆ. ವೈಯುಕ್ತಿಕತೆಗೆ ಇನ್ನಿಲ್ಲದ ಪ್ರಾಧಾನ್ಯ ಬಂದಿದೆ. ಯುಗಾದಿ ಮಹಾರ್ನವಮಿ ಮರೆತರೂ ಪರವಾಇಲ್ಲ  ಹುಟ್ಟುಹಬ್ಬ ಮರೆಯುವಹಾಗಿಲ್ಲ. ಆಧುನಿಕ ದಂಪತಿಗಳಲ್ಲಂತೂ ಹುಟ್ಟುಹಬ್ಬ ಸಂತೋಷಕ್ಕಿಂತ ಸಂಕಟವನ್ನೇ ತರುವುದು ಹೆಚ್ಚು. ಗಂಡನೇನೇನಾದರೂ ಮಡದಿಯ ಹುಟ್ಟುಹಬ್ಬ ಮರೆತರೆ ಆದಿನ ಅಗುವುದು ಹಬ್ಬವಲ್ಲ  ಅವನ ತಿಥಿ..ಅಮೇರಿಕಾದಲ್ಲಂತೂ ಹೇಳುವುದೇ ಬೇಡ. ಅಷ್ಟುತಯಾರಿ.ಮೊದಲು ಸ್ಥಳದ ಆಯ್ಕೆ. ನಂತರ ಗೆಸ್ಟಲಿಸ್ಟ ತಯಾರಿ  ಅದರಲ್ಲಿ ಚಿಕ್ಕ ಮಕ್ಕಳಿದ್ದವರಿಗೆ ಆದ್ಯತೆ. ನಂತರ ಮರುಕಾಣಿಕೆಯ ಆಯ್ಕೆ. ಬರುವ ಮಕ್ಕಳ ವಯಸ್ಸಿಗೆ ಅನುಗುಣವಾದ ಕೊಡುಗೆಗಳು, ಇನ್ನು ಊಟದ ವ್ಯಸ್ಥೆಗಂತೂ ಯೋಜನೆ ಹಾಕಿದ್ದೇ ಹಾಕಿದ್ದು. ಎರಡುಸ್ಟಾರ್ಟರುಗಳು,ಅಪೆಟೈಜರ್‌ಗಳು, ಮೂರುನಾಲ್ಕು ಮುಖ್ಯಮೆನು ನಂತರ ಡೆಸರ್ಟ್ಸ ಎಲ್ಲಕ್ಕೂ  ಗಮನ.ಪಾನೀಯವಂತೂ ಇದ್ದೇ ಇರುವುದು. ಹಾಟ್‌ ಅಥವ ಕೋಲ್ಡ್‌ ಅವರ ಆಯ್ಕೆಗೆ ಬಿಟ್ಟದ್ದು.ಕೆಲವರು ಹೋಟೆಲ್‌ನಲ್ಲಿಮಾಡಿದರೆ, ಹಲವರು ಪಾರ್ಕನಲ್ಲಿ, ಬೌಲಿಂಗ್‌ ಅಲ್ಲೆಯಲ್ಲಿ, ಮಠದಲ್ಲಿ ಆಚರಿಸುವರು ಇದ್ದಾರೆ..ಮಕ್ಕಳಿಗಿಂತ ಹೆಚ್ಚಾಗಿ ಹಿರಿಯರೇ ಕುಣಿದುಕುಪ್ಪಳಿಸಿ ಖುಷಿ ಪಡುವರು.

                          
ಅದ್ವೈತ
                  ಜಾಗತೀಕರಣದ ಪ್ರಭಾವ. ಭಾರತದ ಮೇಲೂ ಆಗಿದೆ. ಹಬ್ಬದ ದಿನ ದೀಪ ಬೆಳಗಿ ನಮಸ್ಕಾರ ಮಾಡುವ ಕಾಲಹೋಗಿ ಕ್ಯಾಂಡಲ್‌ ಆರಿಸಿ ಚಪ್ಪಾಳೆ ತಟ್ಟುವ ಪದ್ದತಿ ಜನಪ್ರಿಯ.ಕ್ಯಾಂಡಲ್‌ ವಯಸ್ಸಿನ ಸೂಚಿಏನಲ್ಲ. ಹುಡುಗಿಯರ ಅದರಲ್ಲೂ ಸಿನಿತಾರೆಯರ ವಯಸ್ಸು ಹೆಚ್ಚಿದಂತೆ ಕ್ಯಾಂಡಲ್‌ಗಳ ಸಂಖ್ಯೆ ಕಡಿಮೆಯಾದರೂ ಯಾರೂ ಲೆಕ್ಕಿಸುವುದಿಲ್ಲ.ಅಮೇರಿಕಾದಲ್ಲಿ  ಮಾರನೆ ದಿನ ಗಿಫ್ಟ ಪ್ಯಾಕ್‌ ಬಿಚ್ಚಿದರೆಬರುವ ಆಟಿಕೆಗಳು ಅಂಗಡಿ ಇಡುವಷ್ಟು ಅದೂ ಎರಡೂ ಮೂರು ಒಂದೆ ರೀತಿಯವು. ಮತ್ತೆ ಅವನ್ನುಪ್ಯಾಕ್‌ಮಾಡಿ ಇನ್ನೊಬ್ಬರಿಗೆ ಕೊಡುಗೆ ಕೊಡಲು ಎತ್ತಿ ಇಡುವರು. ಇತ್ತೀಚೆಗೆ ಅದನ್ನು ತಪ್ಪಿಸಲು  ಗಿಫ಼್ಟ ವೋಚರ್‌ ಕೊಡುವರು. ಬೇಕಾದದ್ದು ಕೊಳ್ಳಬಹುದು. ನಮ್ಮಲ್ಲಿ ಅಂದು ಚಾಕಲೇಟ್ ಗಳ ಸುರಿಮಳೆ ಅಜಿರ್ಣವಾಗುವಷ್ಟು. ಹೇಗೇಯೇ ಇದ್ದರೂ ಹಟ್ಟಿದ ದಿನ ಒಂದು ಹಬ್ಬವಾಗಿರುವುದಂತೂ ನಿಜ.
 ಇಗೋ ಈ ಬರಹ ಇಬ್ಬರು ಅಮೇರಿಕಾದ  ಮತ್ತು  ಭಾರತದ  ಮೂರು ಮೊಮ್ಮಕ್ಕಳಿಗೆ . ಅವರು ದೊಡ್ಡವರಾದ ಮೇಲೆ ಕನ್ನಡ ಕಲಿತರೆ ಓದಲೆಂದು ಕೊಡುಗೆ.



Posted by Picasa


No comments:

Post a Comment