Tuesday, March 5, 2013

ಬಿ.ಎಂ.ಶ್ರೀ.ಸಾಹಿತ್ಯೋಪಾಸಕರು ಕಾರ್ಯಕ್ರಮ














ಬಿ. ಎಂ. ಶ್ರೀ. ಸಭಾಂಗಣದಲ್ಲಿ ದಿನಾಂಕ ೪-೩-೨೦೧೩ ರಂದು ಸಂಜೆ ೫.೩೦ ಕ್ಕೆ 
ಸಾಹಿತ್ಯೋಪಾಸಕರ ಲೇಖನ ಮಾಲೆ ಕಾರ್ಯಕ್ರಮದಲ್ಲಿ  ಪ್ರೊ. ಕೆ. ಎಸ್ ಮಧುಸೂಧನ್ ನಿವೃತ್ತ  ಪ್ರಾಧ್ಯಾಪಕರು , ಜರ್ಮನ್‌ ಪಾದ್ರಿ ಹರ್ಮನ್‌ಮೋಗ್ಲಿಂಗ್ಘ್‌‌ಕುರಿತು ಉಪನ್ಯಾಸ  ನೀಡಿದರು. ಕನ್ನಡ ಸಾಹಿತ್ಯ ಮತ್ತು ಛಂದಸ್ಸಿಗೆ ಅವರ ಕೊಡುಗೆಯ ಮಹತ್ವವನ್ನು ಹೇಳುತ್ತಾ ಕನ್ನಡ ಲಿಪಿಯ ಸುಧಾರಣೆಗೆ ಅವರು ಬಿ ಎಂಶ್ರೀ ಯವರು ಕನ್ನಡ ಬಾವುಟದಲ್ಲಿ ಸೂಚಿಸುವ  ಮೊದಲೇ ಪ್ರಯತ್ನ ಮಾಡಿರುವ ಕಲ್ಲಚ್ಚುಪ್ರತಿಯ ದಾಖಲೆಯನ್ನು ಪ್ರದರ್ಶಿಸಿದರು. ಅವರು ಕನ್ನಡ ದ ಮೊದಲ ಪತ್ರಿಕೆಮಂಗಳೂರು ಸಮಾಚಾರದ ಪ್ರಕಟನೆಗೆ ಮೋಗ್ಲಿಂಗ್‌ಹೇಗೆ ಕಾರಣರು ಎಂಬುದನ್ನು ವಿವರಿಸಿದರು. ಜೊತೆಯಲ್ಲಿ ಕಿಟಲ್‌ ಅವರ ಹಸ್ತಾಕ್ಷರಗಳಿರುವ ದಾಖಲೆಯ ಪ್ರದರ್ಶಿಸಿದರು.

ಎರಡನೆಯ ಉಪನ್ಯಾಸವನ್ನು ಎಚ್ ಶೇಷಗಿರಿರಾವ್‌ ಪುರಾತತ್ವ ಸಂಗ್ರಾಹಕ  ’ ಕರ್ನಲ್ ಕಾಲಿನ್‌ ಮೆಕೆಂಜಿ” ಕುರಿತು  ನೀಡಿದರು. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಐತಿಹಾಸಿಕದಾಖಲೆಗಳನ್ನು ಸಂಗ್ರಹಿಸಿದ, ಅವನ ಶ್ರಮವನ್ನು , ಕೈಫಿಯತ್ತುಗಳ ಕರ್ತಾರನಾಗಿ ಇತಿಹಾಸ ರಚನೆಗೆ ಸಮಗ್ರ ಮಾಹಿತಿಯ ಆಕರವನ್ನೂ ಒದಗಿಸಿದ.ಬಗೆಯನ್ನುವಿವರಿಸಿದರು. ಅಂದಿನಕಾಲದಲ್ಲೇ ಸುಮಾರು ಇಪ್ಪತ್ತು ಸಾವಿರಕ್ಕೂ ಮಿಗಿಲಾಗಿ ಶಾಸನ, ಹಸ್ತಪ್ರತಿ, ನಾಣ್ಯ, ನಕ್ಷೆ, ಕೈಫಿಯತ್ತುಗಳನ್ನು ೧೩ ಭಾಷೆಗಳಲ್ಲಿ ೧೭ ಲಿಪಿಗಳಲ್ಲಿ  ಸುಮಾರು ೪೦ಸಾವಿರ ಮೈಲು ಸಂಚರಿಸಿ ೩೮ ವರ್ಷಗಳಕಾಲ ನುಡಿ ಸೇವೆ ಮಾಡಿದ್ದನ್ನು ವಿವರಿಸಿದರು.ಎರಡು ನೂರುವರ್ಷಗಳ ಹಿಂದೆ. ಕರ್ನಲ್‌ಮೆಕೆಂಜಿ ಮಾಡಿದ್ದ ಕೆಲಸವನ್ನು  ಮೂವತ್ತು ವರ್ಷದ ಹಿಂದೆ ಕಿರು ಪ್ರಮಾಣದಲ್ಲಿ  ಎಂ. ವಿ ಸೀತಾರಾಮಯ್ಯನವರು ಮಾಡಿದ ಪರಿಣಾಮವಾಗಿ ಬಿ. ಎಂ. ಶ್ರೀ ಪ್ರತಿಷ್ಠಾನವು ಮೈ ತಳೆಯಿತು ಈ ಕೆಲಸದಲ್ಲಿ ಹಿರಿಯರು ಯುವಕರು ಕೈ ಜೋಡಿಸುವುದ ಅಗತ್ಯ.ಜೊತೆಗ ಆಧುನಿಕ ತಂತ್ರಜ್ಞಾನದ ಅಳವಡಿಕೆಯಿಂದ ಸಂಸ್ಕೃತಿಯ ಪ್ರಚಾರ ಆಗುವುದು ಎಂದು ಅಭಿಪ್ರಾಯ ಪಟ್ಟರು

 ಅಧ್ಯಕ್ಷತೆ  ವಹಿಸಿದ್ದ  ಡಾ. ಪಿವಿ ನಾರಾಯಣ್‌ ಅವರು ಈ ಪರಂಪರಾಗತ ಸಂಪತ್ತನ್ನು ಸಂರಕ್ಷಿಸಲು ಪ್ರಚುರ ಗೊಳಿಸಲು ಆಧುನಿಕ ತಂತ್ರಜ್ಞಾನದ ಬಳಕೆಯ ಅಗತ್ಯವನ್ನು ಒತ್ತಿ ಹೇಳಿದರು, ಬದಲಾದ ಕಾಲದಕಾಲದಲ್ಲಿ
ಅದರೊಂದಿಗೆ ಹೆಜ್ಜೆ ಹಾಕುವದು ಅನಿವಾರ್ಯ ಎಂದರು ಕಾರ್ಯದರ್ಶಿಗಳಾದ ಪ್ರೊ. ಅಬ್ದುಲ್‌ಬಷೀರ್‌  ಅತಿಥಿಗಳ ಪರಿಚಯಮಾಡಿ  ಎಲ್ಲರನ್ನೂಸ್ವಾಗತಿಸಿದರು ಮತ್ತು ಗೌರವ ಕಾರ್ಯದರ್ಶಿ ಎಸ್‌..ವಿ. ಶ್ರೀನಿವಾಸ ರಾವ್  ವಂದಿಸಿದರು.
 ಇದೇ ಸಮಯದಲ್ಲಿ ಉಪನ್ಯಾಸಗಳನ್ನು  ಪುಸ್ತಕರೂಪದಲ್ಲಿ ತಂದು ಪ್ರಕಟಿಸುವುದಾಗಿ ತಿಳಿಸಿದರು

No comments:

Post a Comment