Friday, February 14, 2014

ಹಸ್ತ ಪ್ರತಿ ಅಭಿಯಾನ-೪

ಹಸ್ತ ಪ್ರತಿ ಕಾರ್ಯಾಗಾರ- ನಾಲ್ಕನೆಯ ದಿನ
ಹಸ್ತ ಪ್ರತಿ ಕಾರ್ಯಾಗಾರದ ನಾಲ್ಕನೆಯ ದಿನದ ಗುರಿ  ಹಸ್ತ ಪ್ರತಿಗಳ ಸಂರಕ್ಷಣೆಯ ಮುಂದಿನ ಮಜಲಾದ ಆಧುನಿಕ ತಂತ್ರಜ್ಞಾನದ ನೆರವಿನಿಂದ ಶಾಶ್ವತವಾಗಿ ಸಂಗ್ರಹಿಸುವ ಮೊದಲು ಕೈಕೊಳ್ಳ ಬೇಕಾದ ಕ್ರಮಗಳನ್ನು ತಿಳಿದು ಕೊಳ್ಳುವ   ಪ್ರಯತ್ನ. ಈ ದಿನ ಮೊದಲ ಮೂರು ದಿನ ಮಾಡಿದ ಕೆಲಸಗಳ ಫಲಿತವನ್ನು ಸಂಕಲಿಸುವ ಕಾರ್ಯವೇ ಅತಿ ಮುಖ್ಯವಾದುದು... ಹಸ್ತಪ್ರತಿಗಳ ಮಿಶ್ರಗರಿಗಳ ವಿಂಗಡಣೆ ,, ಶುಷ್ಕ ಶುದ್ಧೀಕರಣ, ಆದ್ರ ಶುಚೀಕರಣ,  ತೈಲ ಲೇಪನದ ನಂತರದ ಮುಂದಿನ ಹಂತ ಗರಿಗಳ ಸಂಕಲನ.... ಈವರೆಗಿನ ಪದ್ದತಿಯಂತೆ ಈ ಎಲ್ಲ ಹಂತಗಳು ಮುಗಿದ ನಂತರ ಅ ಗರಿಗಳನ್ನು ನೆರಳಲ್ಲಿ ಒಣಗಿಸಿ ಫೋಲಿಯೋ ಅಥವ ಗರಿಗಳ ಸಂಖ್ಯೆಗೆ ಅನುಗುಣವಾಗಿ ಜೋಡಿಸಿ ‌ಒಟ್ಟು ಗೂಡಿಸಿ  ದಾರ ಪೋಣಿಸಿ ಕಟ್ಟು ಕಟ್ಟಿ ಇಡುವುದು.ಆದರೆ ಡಿಜಿಟಲೈ ಜೇಷನ್‌ಮಾಡುವ ಉದ್ದೇಶವಿದ್ದರೆ ಈ ಹಂತದ ನಂತರ ತುಸು ಬದಲಾವಣೆ ಮಾಡ ಬೇಕಾಗುವುದು.. ಮೊದಲನೆಯದಾಗಿ ಸಭಾಮಂಟಪದಲ್ಲಿ ಒಣಗಿಸಲು ಹಾಕಿದ್ದ ಗರಿಗಳನ್ನು ಸಂಗ್ರಹಿಸಿ ಅವುಗಳ ಗರಿ ಸಂಖ್ಯೆಗೆ ಅನುಗುಣವಾಗಿ ಕ್ರಮವಾಗಿ ಜೋಡಿಸುವುದು. ಮೂರು ದಿನಗಳ ಪ್ರಯತ್ನದಿಂದ ಧೂಳು, ಬೂಷ್ಟು ಗಳು ಇಲ್ಲವಾದ್ದರಿಂದ ಗರಿಗಳು ಇನ್ನು ಹೆಚ್ಚು ಕಾಲ ಬಾಳಿಕೆ ಬರುವಂತಾಗಿದ್ದವು.  ಶಿಥಿಲವಾದ ,ಗರಿಗಳು ಗಟ್ಟಿಯಾಗಿ ದ್ದವು, ಮುಟ್ಟಿದರೆ ಮುರಿಯುವ ಹಾಗಿದ್ದವು ಮೃದುವಾಗಿದ್ದವು,. ಮಸಕಾಗಿದ್ದ ಗರಿಗಳು ತೈಲ ಲೇಪನದಿಂದ ಲಕಲಕ ಹೊಳೆಯುತ್ತಿದ್ದವು. .ಗರಿಗಳಲ್ಲಿನ  ಬರಹವು ಮಸಿಲೇಪನದಿಂದ ಪುಸ್ತದಲ್ಲಿನ ಅಕ್ಷರಗಳಂತೆ  ಸ್ಪುಟವಾಗಿದ್ದವು. ಇವನ್ನುಕಟ್ಟು ಕಟ್ಟಿ ಇಟ್ಟರೆ ಮತ್ತೆ ಒಂದು ವರ್ಷದವರಗೆ ಸುರಕ್ಷಿತ ಎನ್ನಬಹುದು..
ಆಧುನಿಕ ತಂತ ಜ್ಞಾನ ಬಳಸಿ ಅವುಗಳನ್ನು ಸ್ಕ್ಯಾನ್‌ಮಾಡಲು ತುಸು ಮಾರ್ಪಾಟು ಮಾಡವ ಅಗತ್ಯವಿದೆ.  ಗರಿಗಳಿಗೆ ಹಿಂದಿನ ಪದ್ದತಿಯಲ್ಲಿ  ಒಂದು ಬದಿಯಲ್ಲಿ ಮಾತ್ರ ಗರಿ ಸಂಖ್ಯೆ ಇರುವುದು. ಆದರೆ ನಾವು ಎರಡೂ ಬದಿಯಲ್ಲೂ ಸ್ಕ್ಯಾನ್‌ಮಾಡುವೆವು. ಸಂಖ್ಯೆ ಇರುವ ಒಂದು ಗರಿಯನ್ನು ಗುರುತಿಸುವುದ ಸುಲಭ ಆದರೆ ಗರಿಯ ಇನ್ನೊಂದು ಬದಿಯ .ಇಮೇಜನ್ನು ಗುರುತಿಸುಲು ಆಗದೆ ಕೃತಿಯ ಸಂಕಲದಲ್ಲಿ ಸಂದಿಗ್ದತೆ  ತಲೆ ದೋರುವುದು. ಆದ್ದರಿಂದ ಗರಿಯ ಎರಡೂ ಬದಿಯಲ್ಲೂ ಸಂಖ್ಯೆ ಹಾಕಲೇ ಬೇಕು ಎರಡನಯದಾಗಿ ಗರಿಗಳ ಮೇಲೆ ಕನ್ನಡದ ಅಂಕಗಳು ಇರುತ್ತವೆ. ಬಹುತೇಕರು ಅವನ್ನು ಗುರುತಿಸುವರು.ಆದರೆ ಗರಿಗಳನ್ನು ಸ್ಕ್ಯಾನ್‌ ಮಾಡಿದ ಮೇಲೆ ‌ನಾಲಕೈದು ಗರಿಗಳಿರುವ  ಇಮೇಜ್‌ನಿಂದ  ಒಂದೊಂದೆ ಇಮೇಜ್‌ನ್ನು ಪ್ರತ್ತಯೇಕಿಸಿ ಅದು ಓದಲು ಅನುಕೂವಾಗಿರುವಂತೆ ಕಾಂಪ್ಯೂಟರಿನಲ್ಲಿ ಎಡಿಟ್‌ ಮಾಡಬೇಕು. ಈ ಕಾರ್ಯಕ್ಕೆ ಕಾಂಪ್ಯೂಟರ್‌ ಕೆಲಸ ಬಲ್ಲ ತಜ್ಞರು ಬೇಕು. ಅವರದು ಬರಿ ತಾಂತ್ರಿಕ ಕೆಲಸ. ಕನ್ನಡ ಬಾರದವರೂ ಈ ಕೆಲಸ ಮಾಡಬಹುದು. ಈಗಾಗಲೇ ನಮ್ಮ ಅಭಿಯಾನದಲ್ಲಿ ವಿದೇಶದಲ್ಲಿನೆಲಸಿರುವ ಭಾರತೀಯರು ಮತ್ತು ಅನ್ಯರೂ ತಾಂತ್ರಿಕ ಸಹಾಯ ಒದಗಿಸಿರುವರು. ಅವರಿಗೆಲ್ಲ ಮೊದಲು ಕನ್ನಡ ಅಂಕೆ ಕಲಿಯಿರಿ ಎನ್ನುವುದು ಅಸಮಂಜಸ. ಆದ್ದರಿಂದ ಈಗ ನಿತ್ಯವ್ಯವಹಾರದಲ್ಲಿರುವ ಸಂಖ್ಯಾಪದ್ದತಿಯನ್ನೇ ಬಳಸುವುದು ಅನಿವಾರ್ಯ. ಎರಡನೆಯದಾಗಿ ಮೊದಲಲ್ಲಿ ಒಬ್ಭಿಬ್ಬ ಸಂಪ್ರದಾಯ ವಾದಿ ವಿದ್ವಾಂಸರು ಯಾವುದೇ ಕಾರಣಕ್ಕೂ ಹಸ್ತಪ್ರತಿಗಳ ಮೇಲೆ ಇತರೆ ಬರಹ ವನ್ನು ದಾಖಲಿಸುವುದು ಅಪಚಾರ ಅದರಿಂದ ಕೃತಿಯ ಪಾವಿತ್ರ್ಯತೆ ಹಾಳಾಗುವುದು  ಎಂದು ಪುಟ ಸಂಖ್ಯೆ ಹಾಕುವುದನ್ನು ವಿರೋಧಿಸಿದರು. ಅವರ ವಾದವೂ ಸರಿ. ಹಸ್ತಪ್ರತಿಯ ಮೇಲಿನ ಬರಹಕ್ಕೆ  ಧಕ್ಕೆ ಬರಬಾರದು. ಆದರೆ ಅದರ ಶಾರ್ಶವತ ರಕ್ಷಣೆಗೆ ಮತ್ತು ಜಗತ್ತಿನಾದ್ಯಂತ  ಲಣ್ಯತೆಗಾಗಿ ಡಿಜಿಟಲೈಜೇಷನ್‌ ಮಾಡುವಾಗ ಸಂಖ್ಯೆ ಇಲ್ಲದ ಇನ್ನೊಂದು ಬದಿಯನ್ನು ಗುರುತಿಸಲು ಅನಿವಾರ್ಯವಾಗಿ ಸಂಖ್ಯೆ ನಮೂದಿಸುವು ಅಗತ್ಯವಿದೆ.. ಅದಕ್ಕೆ ಗರಿಯಬ ಎಡ ಅಂಚಿನಲ್ಲಿ ಇರುವ ಖಾಲಿ ಜಾಗದಲ್ಲಿ  ಸಿ.ಡಿ.ಮಾರ್ಕರ್ ನಿಂದ ಸಂಖ್ಯೆ ಹಾಕಲು ನಿರ್ಧರಿಸಲಾಯಿತು.ಇಲ್ಲಿ ಇನ್ನೊಂದು ತೊಡಕು ಇದೆ. ಕೃತಿಯು ಸಮಗ್ರವಾಗಿ ಇರಲಿಕ್ಕಿಲ್ಲ.ಮಧ್ಯದಲ್ಲಿ ಕೆಲವು ಗರಿಗಳು ಇಲ್ಲದೇ ಇರಬಹುದು, ಅಥವಾ ಒಂದು ಬದಿಯಲ್ಲಿ ಬರಹವೇ ಇಲ್ಲದೆ ಖಾಲಿ ಇರುವ ಸಾಧ್ಯತೆಯೂ ಇದೆ. ಇನ್ನಂದುವಿಶೇಷ ವೆಂದರೆ ಒಂದೇಕಟ್ಟಿನಲ್ಲಿ ಎರಡು ಮೂರು ಕೃತಿಗಳಿರಬಹುದು. ಕೆಲವು ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಲಿಪಿ, ಭಾಷೆಗಳ ಬರಹ  ಕಂಡು ಬರುವವು.  ಈ ಎಲ್ಲ ತೊಡಕುಗಳನ್ನು ನಿವಾರಿಸಿ ಗಣಕ ಯಂತ್ರದಲ್ಲಿ ಹಸ್ತಪ್ರತಿ ಓದುವವರಿಗೆ ಯಾವುದೇ ದ್ವಂದ್ವ ಬಾರದಂತಿರಲು ಕೆಲವು ಮುಂಜಾಗ್ರತೆಗಳನ್ನು ತೆಗೆದುಕೊಳ್ಲುವ ಅಗತ್ಯವಿದೆ.. ಮೊದಲನೆಯದಾಗಿ .ಗರಿಗಳ ಸಂಖ್ಯೆಯನ್ನು ಪರಿಶೀಲಿಸ ಸ ಬೇಕು.  ಸತತವಾಗಿದ್ದರೆ ಸಮಸ್ಯೆ ಇಲ್ಲ ಮತ್ತೆ ಮತ್ತೆ  ೧  ರಿಂದ ಪ್ರಾರಂಭವಾದರೆ ಅಲ್ಲಿ ಒಂದಕ್ಕಿಂತ ಹೆಚ್ಚು ಕೃತಿಗಳಿರುತ್ತವೆ.ಉದಾಹರಣೆಗ ೧೦೦ ಗರಿಗಳಿರುವ ಕಟ್ಟನಲ್ಲಿ ೧ ರಂದ ೭೨ ರವರೆಗ ಸತತ ಸಂಖ್ಯೆಗಳಿರುತ್ತವೆ, ನಂತರ ಮತ್ತೆ ೧ ರಿಂದ ೧೮ ರವರಗೆ ಸಂಖ್ಯೆಯ ಗರಿಗಳಿರಬಹುದು ಮತ್ತೆ ೧ರಂದ ೧೦ ರವರಗೆ ಸಂಖ್ಯೆಗಳಿರಬಹುದು .ಹಾಗಿದ್ದಾಗ  ಆ ಕಟ್ಟಿನಲ್ಲಿ  ೭೨ , ೧೮ ಮತ್ತು ೧೦ ಗರಿಗಳ  ಮೂರುಕೃತಿಗಳಿವೆ ಎಂದುಕೊಳ್ಳ ಬಹುದು.ಆ ಕಟ್ಟಿನ ಸಂಖ್ಯೆ ೨೪೫ ಇದ್ದರೆ ಆ ಕಟ್ಟನ್ನು ಮೂರು ಭಾಗ ಮಾಡಿ ಮೊದಲನ ೭೨ ಗರಿಗಳ ಭಾಗವನ್ನು ೨೪೫ ಎ ಎಂಬ ಸಂಖ್ಯೆ ನೀಡಿ. ಅದರಲ್ಲಿ ಗರಿಗಳಿಗೆಳಿಗೆ  ೨೪೫ ಎ-೧ , ೨೪೫-ಎ-೨ ಎಂದುಮುಂತಾಗಿ ಸಂಖ್ಯೆ ನೀಡ ಬೇಕು. . ಅವುಗಳನ್ನು ೭೮ ಗರಿಗಳಿರುವ ಪ್ರತ್ಯೇಕ ಕೃತಿಯೆಂದು ಪರಿಗಣಿಸಿ,
ಡಿಜಿಟಲೈಜೇಷನ್‌ ಮಾಡುವಾಗ  ಪ್ರತ್ಯೇಕವಾಗಿ ದಾಖಲಿಸ ಬೇಕು. ಈ ಭಾಗವನ್ನುಗುರುತಿಸಲು ಅನುಕೂಲವಾಗುವಮತೆ ವಿವರ ಬರೆದಕಾಗದ ಜೊತೆಗಿಡಬೇಕು. ಆಗ ಸ್ಕ್ಯಾನ್‌ ಮಾಡುವಾಗ ೨೪೫ಸಂಖ್ಯೆಯ  ಕಟ್ಟಿನಲ್ಲಿ , ೨೪೫ ಎ , ೨೪೫ ಬಿ , ೨೪೫ ಸಿ ಎಂಬ ಮೂರುಭಾಗಗಳು ಪ್ರತ್ಯೇಕವಾಗಿ ದಾಖಲಾಗುತ್ತವೆ. ಒಂದು ಕೃತಿಯನ್ನುಸ್ಕ್ಯಾನ್‌ ಮಾಡುವ ಮುಂಚೆಈ ಅಂಶಗಳನ್ನು ಗುರುತಿಸುವುದ ಅಗತ್ಯ. ಜೊತೆಗೆ ಯಾವುದಾದರೂ ಗರಿ ಇಲ್ಲದಿದ್ದರೆ ,ಒಂದು ಬದಿ  ಖಾಲಿ ಇದ್ದರೆ , ಅನ್ಯಭಾಷೆಯ ಗರಿಇದ್ದರೆ ಅದನ್ನು ದಾಖಲಿಸಬೇಕು. ಕೃತಿಯನ್ನು ಡಿಜಿಟಲೈಜ್‌ಮಾಡುವ ಮೊದಲು ಈ ಅಂಶವಿರುವ ದಾಖಲೆಯನ್ನು ಸ್ಕ್ಯಾನ್‌ ಮಾಡಿ ಕೃತಿಯ ಫೋಲ್ಡರ್‌ನಲ್ಲಿ ಹಾಕಿರ ಬೇಕು. ಇಷ್ಟಾದ  ಮೇಲೆ  ೧- ೭೮  ಗರಿಗಳಿರುವ ಕಟ್ಟಿನಲ್ಲಿ ಒಟ್ಟು ೯೬ ಪುಟಗಳಿರಬೇಕು ೧೮ ಮತ್ತು ೬೨ ಸಂಖ್ಯಕ್ಯೆಯ  ೨ ಗರಿ ಇಲ್ಲದಿರಬಹುದು  ಮತ್ತು ೬೪ ಮತ್ತು ೫೬ ನೆಯ ಗರಿಗಳ ಒಂದು ಬದಿಯಲ್ಲಿ ಬರಹ ಇದ್ದು ಇನ್ನೊಂದು ಬದಿಖಾಲಿ ಇರಬಹದು ಆಗ ಆ ಕಟ್ಟಿನಲ್ಲಿರು ೩೪೫ ಎ ಸಂಖ್ಯೆ ಕೃತಿಯ ಒಟ್ಟು ಪುಟಗಳ ಸಂಖ್ಯೆ ೧೫೬ -೬= ೧೫೦ ಆಗುವುದ. ಇದೇ ತತ್ವವನ್ನು ಎಲ್ಲ  ಗರಿಗಳಿಗೆ ಸಂಖ್ಯೆ ಹಾಕುವಾಗ ಪಾಲಿಸುವುದು ಅಗತ್ಯ. ಈ ಎಲ್ಲ ಪ್ರಕ್ರಿಯೆಗಳ ನಂತರ ಕೃತಿಯು ಸ್ಕ್ಯಾನಿಂಗ್‌ಗೆ ಸಿದ್ದವಾಗಿದೆ ಎನ್ನಬಹುದು.
ಎರಡನಯ ಮಜಲು ಸ್ಕ್ಯಾನಿಂಗ್‌. ಈ ಮೊದಲು ಹಸ್ತಪ್ರತಿಗಳನ್ನು ಆಧುನಿಕತಂತ್ರ ಜ್ಞಾನ ಬಳಸಿ ಸಂಗ್ರಹಿಸುವ ಪ್ರಯತ್ನಮಾಡಲಾಗಿದೆ. ಅದಕ್ಕೆ ಕೇಂದ್ರ ರ್ಕಾರದ ಒತ್ತಾಸೆಯೂಇದೆ. ಬಹುತೇಕ ಓರಿಯಂಟಲ್‌ ಮ್ಯಾನುಸ್ಕ್ರಪ್ಟ್‌ ಲೈವ್ರರಿಗಳಲ್ಲಿ  ಮತ್ತು ಬೃಹತ್‌ ಸಂಗ್ರಹಗಳಲ್ಲಿ ವ್ಯಾಪಕವಾಗಿ ಹಸ್ತ ಪ್ರತಿಗಳನ್ನು ಮೈಕ್ರೋ ಫೀಲ್ಮ್‌ ಮಾಡಿ  ಸಂಗ್ರಹಿಸಿ ಇಡಲಾಗಿದೆ.ಆದರೆ ಈ ಕೃತಿಗಳನ್ನು ಅಧ್ಯಯನ ಮಾಡಲು ಮೈಕ್ರೋಫಿಲ್ಮ್‌ರೀಡರ್‌  ಎಂಬ ಉಪಕರಣದ  ಅಗತ್ಯವಿದೆ. ಜೊತೆಗ ಮೈಕ್ರೋ ಫೀಲ್ಮ್‌ ಅನ್ನು ಹೊರಗಡೆ ಕೊಡಲಾಗುವುದಿಲ್ಲ.ಹೀಗಾಗಿ ಅದನ್ನುಬಳಸಿ ಅಧ್ಯಯನ ಮಾಡುವವರ ಸಂಖ್ಯೆಯು ಬಹು ವಿರಳ. ಜೊತೆಗೆ ಮೈಕ್ರೋಫಿಲ್ ಬಳಸಿ ಓದುವಾಗ  ನೂರನೆಯ ಪುಟ ಓದಿ ನಂತರ ಇಪ್ಪತ್ತನೆಯ ಪುಟಕ್ಕೆ ಹೋಗಬೇಕೆಂದರೆ ತಕ್ಷಣವಾಪಸ್ಸು ಹೋಗುವುದು ಕಷ್ಟದ ಕೆಲಸ.  ಅದೂ ಅಲ್ಲದೆ ಮೈಕ್ರೋಫಿಲ್ಮಗಳು ರಾಸಾಯನಿಕವಸ್ತುಗಳನ್ನು ಒಳಗೊಂಡಿರುವವು. ಬಹಳ ಕಾಲದ ವರೆಗೆ ಬಳಕೆ ಮಾಡದಿದ್ದರೆ ಅಥವ ಕಾಲಕಾಲಕ್ಕೆ ನಿರ್ವಹಣೆ ಮಾಡದಿದ್ದರೆಹಾಳಾಗುವ ಸಂಭವವೂ ಇದೆ. ಇತ್ತೀಚಿನ ತಂತ್ರ ಜ್ಞಾನದಿಂದ ಫೀಷರ್‌ ಎಂಬತಂತ್ರ ಜ್ಞಾನ ಬಳಸಿ ಹಲವು ದೋಷಗಳನ್ನು ನಿವಾರಿಸಲಾಗಿದೆ. ಈ ತಂತ್ರಜ್ಞಾನದ ಸಹಾಯದಿಂದ ಮೂರು ಅಂಗುಲ ಉದ್ದ ಮತ್ತು ಎರಡು ಅಂಗುಲ ಅಗಲದ ಪ್ಲಾಸ್ಟಿಕ್‌ಕಾರ್ಡಿನಲ್ಲಿ ಸುಮಾರು ನುರಾರುಪುಟಗಳ ಮಾಹಿತಿಯನ್ನು ಸಂಗ್ರಹಿಸಬಹುದು. ಇದನ್ನು ಓದಲು ಅನುವಾಗುವ ಯಂತ್ರವಿದೆ. ಅದರ ಸಹಾಯದಿಂದ ಅಕ್ಷರಗಳನ್ನು ಓದುಗನಿಗೆ ಅನುಕೂಲವಾವಂತೆ  ಗಾತ್ರ ಮತ್ತು ಬಣ್ಣ ಬದಲಾಯಿಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ೩೦೦ ಪುಟಗಳ ಕೃತಿಯಲ್ಲಿ ಯಾವುದೇ ಪುಟಬೇಕಾದರೂ  ಒಂದು ಗುಂಡಿ ಅದುಮಿದರೆ ಸಾಕು ಬೇಕಾದ ಪುಟಕ್ಕೆ ಹೋಗುವ ಸೌಲಭ್ಯವಿದೆ. ವಿದೇಶಗಳಲ್ಲಿ ಈ ಸೌಲಭ್ಯ ಲಭ್ಯ. ನಮ್ಮ ಲ್ಲಿಯೂ ಪ್ರತಿಷ್ಠಿತ ಸಂಸ್ಥೆಗಳಿಲ್ಲಿ ಇವೆ. ನಾನು ಗಮನಿಸಿದಂತೆ ಬೆಂಗಳೂರಿನ ಥಿಯಾಲಜಿ ಕಾಲೇಜಿ ಗ್ರಂಥಾಲಯದಲ್ಲಿ ಈ ಸೌಲಭ್ಯವಿದೆ.ಕೆಲವೇ ಸಂಶೋಧಕರು ಇದರ ಉಪಯೋಗ ಪಡೆಯುತಿದ್ದಾರೆ.ಇದರ ವ್ಯಾಪಕ ಉಪಯೋಗ ಸಾಮಾನ್ಯರಿಗೆ ಸಾಧ್ಯವಿಲ್ಲ.
ಈ ಎಲ್ಲ ಅಂಶಗಳನ್ನು ಗಮನಿಸಿ ಸ್ಕ್ಯಾನ್‌ ಮಾಡುವ ಸುಲಭದ ಮತ್ತು ಸರಳ ವಿಧನವನ್ನು ಅಳವಡಿಕೊಂಡೆವು.ನಾವು ಬಳಸಿದ್ದು ಸಾಧಾರಣ ಎಲ್ಲ ಕಚೇರಿಗಳಲ್ಲಿ ಇರುವ ತ್ರೀ ಇನ್‌ ಒನ್‌ ಉಪಕರಣ ದಲ್ಲಿರುವ ಸ್ಕ್ಯಾನರ್‌ ಅನ್ನು. ಇದಕ್ಕೆ ತನ್ನದೇ ಆದ ಮಿತಿಇದೆ. ಮೊದಲನೆಯದಾಗಿ ಇದರಲ್ಲಿನ   A-4 ಅಳತೆಯ ದಾಖಲೆಗಳನ್ನು ಮಾತ್ರ ಸ್ಕ್ಯಾನ್‌ಮಾಡಬಹದು. ಎರಡನೆಯದಾಗಿ ಗರಿಗಳ ಮೇಲೆ ಸ್ಕ್ಯಾನ್‌ಮಾಡುವಾಗ ಪ್ರಖರ ಬೆಳಕು ಬೀಳುವುದರಿಂ ಹಾಳಾಗುವ ಸಾಧ್ಯತೆಯೂ ಇದೆ.ಅಲ್ಲಲ್ಲದೆ ಇದರಲ್ಲಿ   ಒಂದು ಸಲ ಸ್ಕ್ಯಾನ್‌ಮಾಡಲು ಹಲವು ನಿಮಿಷ ಹಿಡಿಯುವುದು.ಆದರೆ ಇದರ ಒಂದೇ ಅನುಕೂಲ ಎಂದರೆ ವೆಚ್ಚ ದ ಬಾಬ್ತಿನಲ್ಲಿ ಬಹು ಅಗ್ಗ. ಹೆಚ್ಚು ತಾಂತ್ರಿಕ ಕ್ಲಿಷ್ಟತೆ ಇಲ್ಲ. ಆದರೆ ಅಮೂಲ್ಯ ದಾಖಲೆಗಳನ್ನು ಸ್ಕ್ಯಾನ್‌  ಮಾಡಲು ಇದರ ಬಳಕೆ ಸಲ್ಲ.
ಸುರಕ್ಷಿತ ಮತ್ತು ಸೂಕ್ತ ವಿಧಾನವೆಂದರೆ ಫೋಟೋ ಸ್ಕ್ಯಾನಿಂಗ್‌. ಮೊಟ್ಟ ಮೊದಲನೆಯದಾಗಿ ಹೈ ಎಂಡ್‌ ಕ್ಯಾಮರಾ ಅತ್ಯಗತ್ಯ. ಅದು ವೆಚ್ಚದ ಬಾಬ್ತು. ಜೊತೆಗ ವಿಶೇಷ  ಸ್ಕ್ಯಾನಿಂಗ್‌ ಸ್ಟ್ಯಾಂಡ್‌ ಬೇಕು . ಮತ್ತು ಪರಿಣಿತ ಛಾಯಾಗ್ರಾಹಕನು ಇರಲೇ ಬೇಕು.ಇದರ ಅನುಕೂಲ ಎಂದರೆ ಯವದೇ ಅಳತಯೆಯ ಗರಿಗಳನ್ನು ಸ್ಕ್ಯಾನ್‌ಮಾಡಬಹುದು ಎರಡನೆಯದಾಗಿ ಗರಿಗಲು ಹಾಳಾಗುವುದಲ್ಲ. ಚಿತ್ರಗಳ ಗುಣಮಟ್ಟ ಉತ್ತಮವಾಗಿರುವುದು. ಕೊನೆಯದಾಗಿ ಇದು ತುಲನಾತ್ಮಕವಾಗಿ ಸಮಯದ ಉಳಿತಾಯ ಮಾಡುವುದು. ಆದರೆ ಇದು ಬಹು ದುಬಾರಿ.
ನನಗೆ ತಿಳಿದಂತೆ ಒಂದು ಸಲ ಸ್ಕ್ಯಾನ್‌ ಮಾಡಲು ಚೌಕಾಸಿ ಮಾಡಿದರೂ ೧೦ ರುಪಾಯಿ ವೆಚ್ಚಾಗವುದು. ಅಂದರೆ  ಸ್ಕ್ಯಾನಿಂಗ್‌ಗೆ ಲಕ್ಷಾಂತರ ರೂಪಾಯಿ ಬೇಕು .ಇದು ವಿಶೆಷ ಕೆಲಸವಾದ್ದರಿಂದ ಮಾಡುವವರು ವಿರಳ. ಅಲ್ಲದೆ ಸ್ಕ್ಯಾನ್‌ಪೂರ್ವದ ಮತ್ತು ನಂತರದ ಕೆಲಸಕ್ಕೆ ಹೆಚ್ಚಿನ ಕುಶಲತೆ,ಸಮಯ ಮತ್ತು ಶ್ರಮಗತ್ಯ.. ಬರಿ ಸ್ಕ್ಯಾನ್‌  ಮಾಡಿ ಸಿ. ಡಿ ಯಲ್ಲಿ ಹಾಕಿ ದರೆ ಏನೂ ಉಪಯೋಗ ವಾಗದು.
ನಾಲ್ಕನೆಯ ದಿನದ ವೈಶಿಷ್ಷಟ್ಯವೆಂದರೆ ಬಿ. ಎಂ.ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಅವರು ಬರಹದ ವಿಧಿವಿಧಾನಗಳು ಕಾಲದಿಂದ ಕಾಲಕ್ಕೆ ಬದಲಾದ ಬಗೆಯನ್ನು ವಿವರಿಸಿದರು. ಪ್ರಾಚೀನ ಜ್ಞಾನವನ್ನು ಆರ್ವಾಚೀನ ತಂತ್ರಜ್ಞಾನ ಬಳಸಿ ಸಂರಕ್ಷಿಸುವ, ಅಧ್ಯಯನಕ್ಕೆ ಒದಗಿಸುವ ಅಗತ್ಯವನ್ನುತಿಳಿಸಿದರು ಮತ್ತು ಸಂಸ್ಥೆಯ ನಿವೃತ್ತ ಗೌರವ ಕಾರ್ಯದರ್ಶಿಗಳಾದ ಎಸ್‌.ವಿ. ಶ್ರೀನಿವಾಸರಾವ್‌ ಅವರು ಹಸ್ತಪ್ರತಿ ಅಧ್ಯಯನದ ಪ್ರಾಮುಖ್ಯತೆ ಕುರಿತು ಹೇಳಿದರು. ಕಾರ್ಯಾಗಾರದಲ್ಲಿ ಪ್ರತಿತ್ಯವೂ ಉತ್ತಮವಾಗಿ  ಕಾರ್ಯನಿರ್ವಹಿಸಿದ ಆಭ್ಯರ್ಥಿಗಳ ತಂಡಕ್ಕೆ  ಬಹುಮಾನ ಪ್ರದಾನ ಮಾಡಿದರು. ವಿದ್ಯಾರ್ಥಿಗಳಿಗಂತೂ ಸಂಭ್ರಮವೇ ಸಂಭ್ರಮ. ಅವರ ಕಾಲೇಜಿನ ಗುರುಗಳಿಗೆ ದೂರವಾಣಿಯ ಮೂಲಕ ಸಂತಸ ಹಂಚಿಕೊಂಡರು. ಪ್ರತಿದಿನವೂ ಉತ್ತಮ  ಕಾರ್ಯನಿರ್ವಣೆ ಮಾಡಿದವರನ್ನು ಗುರುತಿಸಿ ಗೌರವಿಸುವ ಈ ನಡೆ ಕೆಲಸದ ಮೇಲೂ ಪರಿಣಾಮಬೀರಿತು. ಎಲ್ಲ ವಿದ್ಯಾರ್ಥಿಗಳೂ ಸ್ಪರ್ಧಾತ್ಮಕವಾಗಿ ಚುರುಕಾಗಿ ಕೆಲಸ ಮಾಡ ತೊಡಗಿದರು.

ಅವರಿಗೆ ಶ್ರೀಮತಿ ಸೀತಾಲಕ್ಷ್ಮಿ, ನಮ್ಮ ಅಭಿಯಾನದತಾಂತ್ರಿಕ ಸಲಹೆಗಾರರು. ಫೋಟೋ ಸ್ಕ್ಯಾನಿಂಗ್‌ ಮತ್ತು ಹ್ಯಾಂಢ್‌ಸ್ಕ್ಯಾನಿಂಗ್‌ ಪ್ರಾತ್ಯಕ್ಷಿಕೆ ತೋರಿಸಿ ಅದರಲ್ಲಿನ ತಂತ್ರಾಂಶಗಳನ್ನು ಸೂಕ್ಷ್ಮವಾಗಿ ಸರಳವಾಗಿ ಮನದಟ್ಟು ಮಾಡಿಸಿದರು.   ವೃತ್ತಿಯಿಂದ ಇಂಜನಿಯರ್‌ ಆಗಿರುವ ಅವರು, ವಿದೇಶದಲ್ಲಿ ಅನುಭವ ಪಡೆದಿರುವವರು.  ಹೇಗೆ ಅನೇಕ ವೃತ್ತಿ ಪರಿಣಿತರು ಈ ಅಭಿಯಾನದಲ್ಲಿ  ಆನ್‌ನ್‌ಲೈನ್‌ ಕೆಲಸದಲ್ಲಿ  ಸಹಭಾಗಿಗಳಾಗಿರುವರು ಎಂಬ ಅಂಶವನ್ನು ತಿಳಿಸಿದಾಗ ವಿದ್ಯಾರ್ಥಿಗಳಿಗೆ ತಾವೂ ಈ ಕಾರ್ಯಾಗಾರದಲ್ಲಿ  ಭಾಗಿಯಾಗಿರುವುದು ಅಭಿಮಾನ ವೆನಿಸಿತು.

ಇಂದಿನ ಇನ್ನೊಂದು ವಿಶೇಷವೆಂದರೆ ಮಿಥಿಕ್‌ ಸೊಸೈಟಿಯಲ್ಲಿ ಸಂಶೋಧಕರಾದ  ಶ್ರೀಜಯಸಿಂಹ ಅವರಿಂದ  ಹಸ್ತಪ್ರತಿ . ಕುರಿತಾದ ಪವರ್‌ಪಾಯಿಂಟ್‌ ಪ್ರಾತ್ಯಕ್ಷಿಕೆ.ಅವರ ವಿವರಣೆ ಸಮಗ್ರವಾಗಿದ್ದು ಮಕ್ಕಳು  ಈವರೆಗೆ  ಕಲಿತದ್ದೆನ್ನೆಲ್ಲ ಮನದಟ್ಟು ಮಾಡಿಸಿತು.ಕೆಲಸದ ಭರದಲ್ಲಿ ಸಂಜೆ ಯಾದದ್ದು ಗೊತ್ತಾಗಲೇ ಇಲ್ಲ.

No comments:

Post a Comment