Sunday, February 16, 2014

ಹಸ್ತ ಪ್ರತಿ ಅಭಿಯಾನ- ೫

ವರ್ಣನಾತ್ಮಕ ಸೂಚಿ 

 ಯಾವುದೇ ಪರಾಮರ್ಶನ ಗ್ರಂಥಾಲಯದಲ್ಲಿ, ಅದು ಸಂಶೋಧನೆಗೆ ಪೂರಕವಾಗಿ ಕಾರ್ಯನಿರ್ವಹಿಸಲು ಸನ್ನದ್ಧ ಮಾಡಲು ಮೊದಲು ಮಾಡ ಬೇಕಾದದ್ದು   ಅಲ್ಲಿರುವ ಕೃತಿಗಳ ಬಗ್ಗೆ ಮಾಹಿತಿಯನ್ನು ತಕ್ಷಣ ನೀಡುವ ವ್ಯವಸ್ಥೆ.. .ಅದರ ಮೊದಲ ಹೆಜ್ಜೆ ಎಂದರೆ ಕ್ಯಾಟಲಾಗ್‌ ಅಥವ ಸೂಚಿಯ ತಯಾರಿ.  ಈಗ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಬಹುತೇಕ ಗ್ರಂಥಾಲಯಗಳಲ್ಲಿ ಡಿಜಿಟಲೈಜ್‌ ಮಾಡಲಾಗಿದೆ. ಇ-ಗ್ರಂಥಾಲಯ ಎಂಬ ತಂತ್ರಾಂಶದಿಂದ ಅಗತ್ಯವಿರುವ  ಕೃತಿಯ ಲಭ್ಯತೆ ತಕ್ಷಣ ಗೊತ್ತಾಗುವುದು.ಜೊತೆಯಲ್ಲಿ ವಿಷಯವಾರು, ಲೇಖಕನ ಹೆಸರು ಅಥವ ಕೃತಿಯ ಹೆಸರು ತಿಳಿಸಿದರೂ ಸಾಕು ಪುಸ್ತಕದ ಲಭ್ಯತೆಯು ಗೊತ್ತಾಗುವುದು. ನನ್ನ ಅನುಭವವಕ್ಕೆ ಬಂದಂತೆ .ನ್ಯೂಯಾರ್ಕನ ಪಬ್ಲಿಕ್ಲೈಬ್ರರಿಯಲ್ಲಂತೂ ಮನವಿ ಸಲ್ಲಿಸಿದ ಮೂರು ನಿಮಿಷದಲ್ಲಿ ಪುಸ್ತಕ ಕೈ ಸೇರುವುದು. ಇನ್ನು ಕೆಲವು ಕಡೆ  ಸದ್ಯಕ್ಕೆ ಅದು ಲಭ್ಯವಿಲ್ಲದಿದ್ದರೆ ಅದನ್ನು ತರಿಸಿ ಕೊಡುವ ವ್ಯವಸ್ಥೆಯು ಇದೆ.ಇನ್ನುಇ-. ಗ್ರಂಥಾಲಯಗಳನ್ನು ಕುರಿತು ಹೇಳುವ ಅಗತ್ಯವೇ ಇಲ್ಲ. ಸದಸ್ಯರಿಗೆ ರಹಸ್ಯ ಪದ ಬಳಸಿದರೆ ಬೆರಳ ತುದಿಯಲ್ಲಿ ಅಗತ್ಯ ಮಾಹಿತಿ ದೊರಕುವುದು ಸಾಮಾನ್ಯ ಗ್ರಂಥಾಲಯಗಳಲ್ಲೂ ಮುದ್ರಿತ .ಕ್ಯಾಟಲಾಗ್‌ ಇದ್ದೇ ಇರುವುದು. ಆದರೆ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಮಾತ್ರ ಸೂಚಿಗೆ ವಿಶೇಷ ಸ್ಥಾನ ವಿದೆ. ಅಲ್ಲಿ ಬರಿ ಗ್ರಂಥದ ಹೆಸರು ಮಾತ್ರವಲ್ಲ ಇನ್ನೂ ಹೆಚ್ಚಿನ ವಿವರ ಅಗತ್ಯವಿದೆ. ಕಾರಣ ಸಾಮಾನ್ಯ ಪುಸ್ತಕಗಳಿಗಿಂತ ಇವುಗಳಿಗೆ ಭಿನ್ನವಾದ ಸ್ವರೂಪವಿದೆ.ಮೊದಲನೆಯದಾಗಿ ಹಸ್ತ ಪ್ರತಿಗಳು ಏಕರೂಪತೆ ಹೊಂದಿರುವುದಿಲ್ಲ. ಅವು ಮೂಲ ಪ್ರತಿಗಳೂ ಅಲ್ಲ. ಅವು ಪ್ರತಿಗಳ ಪ್ರತಿ ಆಗಿರಬಹುದು, ಅವುಗಳ ಲಿಪಿಕಾರರು ಬೇರೆ ಬೇರೆ ಆಗಿರುವುದರಿಂದ  ಪಾಠದಲ್ಲಿ ಸಾಕಷ್ಟು ವ್ಯತ್ಯಾಸ ಇರಬಹದು.ಅದನ್ನು ಪಾಠಾಂತರ ಎನ್ನುವರು.ಅಲ್ಲದೆ ಕೃತಿಯೇ ಅಸಮಗ್ರ ಅಥವ ಶಿಥಿಲ ಸ್ಥಿತಿಯಲ್ಲಿ ಇರುವ ಸಾಧ್ಯತೆಯೂ ಇದೆ. ಯಾವುದೇ ಒಂದು ಅಪ್ರಕಟಿತ ಕೃತಿಯ ಸಂಪಾದನೆ ಮಾಡುವಾಗ ಲಭ್ಯವಿರುವ ಸುಸ್ಥಿತಿಯಲ್ಲಿರುವ ಹಲವು ಪ್ರತಿಗಳನ್ನುಪರಾಮರ್ಶನೆ ಮಾಡುವುದು ಮೂಲಭೂತ ಅಗತ್ಯ. ಆದ್ದರಿಂದ ಸಂಶೋಧಕರಿಗೆ ಯಾವ ಹಸ್ತಪ್ರತಿ ಸಂಗ್ರಹಾಲಯದಲ್ಲಿ ಕೃತಿ ಲಭ್ಯವಿದೆ ಮತ್ತು ಯಾವ ಸ್ಥಿತಿಯಲ್ಲಿದೆ ಎಂಬ ವಿವರ ತಿಳಿದರೆ ಅವರ ಕೆಲಸ ತಕ್ಕ ಮಟ್ಟಿಗೆ ಸರಳವಾಗುವುದು. ಆದಕ್ಕೆ ಇದು ವಿಶೇಷ ವಾದ ಸೂಚಿಯಾಗಿದೆ.ಆದ್ದರಿಂದಲೇ ಇದನ್ನು ವರ್ಣನಾತ್ಮಕ ಸೂಚಿ ಎಂದು ಕರೆಯಲಾಗಿದೆ. ಹಸ್ತ ಪ್ರತಿಗಳ ಮಟ್ಟಿಗೆ ಹೇಳಬಹುದಾದರೆ  ಮೊಟ್ಟ ಮೊದಲ ವರ್ಣನಾತ್ಮಕ  ಸೂಚಿ ತಯಾರಾದದ್ದು ೧೮೮೨ ರಲ್ಲಿ. ಹಸ್ತಪ್ರತಿ ಸಂಗ್ರಹದ ಪಿತಾಮಹನಾದ ಕರ್ನಲ್‌ಕಾಲನೆಎ ಮೆಕೆಂಜಿಯ ಅಪಾರ ಸಂಗ್ರಹದ  ಅಧಿಕೃತ ದಾಖಲಾತಿಯೇ ಮೊಟ್ಟ  ಮೊದಲ ವರ್ಣನಾತ್ಮಕ ಸೂಚಿ.ಅದನ್ನು ಸಿದ್ಧ ಪಡಿಸಿದವರು ಎಚ್‌ .ಎಚ್‌ . ವಿಲ್ಸನ್‌.ಅವರು ಅನುಸಿರಿಸಿದ ಕ್ರಮ ಇಂದಿಗೂ ಅನುಕರಣೀಯ.

ಮೊಟ್ಟ ಮೊದಲನೆಯದಾಗಿ ಆ  ಸಂಗ್ರಹದಲ್ಲಿ ಹಲವು ಭಾಷೆಯ ಹಸ್ತ ಪ್ರತಿಗಳು ಇದ್ದವು. ಹಲವಾರು ಲಿಪಿಗಳ ಹಸ್ತ ಪ್ರತಿಗಳೂ ಇದ್ದವು. ಆದ್ದರಿಂದ ಲಿಪಿವಾರು ಮತ್ತು ಭಾಷಾವಾರು ವಿಂಗಡಣೆ ಮಾಡಿರುವರು. ನಮ್ಮಲ್ಲಿಯೂ ಅದೇ ಸ್ಥಿತಿ. ಇದೆ.  ಕನ್ನಡ , ಸಂಸ್ಕೃತ, ಗ್ರಂಥ , ನಂದಿ ನಾಗರಿ , ತಮಿಳು, ತಿಗಳಾರಿ,ತೆಲುಗು ಬಾಷೆ ಮತ್ತು ಲಿಪಿಗಳ ಗ್ರಂಥ ಗಳಿವೆ. ಇನ್ನೊಂದು ವಿಶೇಷ ವೆಂದರೆ ಸಂಸ್ಕೃತಭಾಷೆಯ ಕೃತಿಗಳು ಕನ್ನಡಲಿಪಿಯಲ್ಲಿವೆ.. ಈ ಹಿಂದೆ ತಯಾರಿಸಿದ ಅನೇಕ ಭಾಷೆಯ ಕೃತಿಗಳನ್ನು  ಒಂದೇ ವರ್ಣನಾತ್ಮಕ ಸೂಚಿಯಲ್ಲಿ ಸೇರಿಸಲಾಗಿದೆ. ಇದರಿಂದ ಅನುಕೂಲಕ್ಕಿಂತ ಅಡಚಣೆಯೇ ಅಧಿಕ. ಆದ್ದರಿಂದ ನಮ್ಮ  ಮೊದಲ ತೀರ್ಮಾನವೆಂದರೆ ಭಾಷಾವಾರು ವರ್ಣನಾತ್ಮ ಸೂಚಿಯ ತಯಾರಿ. ಕನ್ನಡ , ಸಂಸ್ಕೃತ, ತಮಿಳು ಹೀಗೆ ಬೇರೆ ಭಾಷೆಯಲ್ಲಿರುವ ಕೃತಿಗಳನ್ನು ಅವುಗಳ ಸಂಖ್ಯೆ ಎಷ್ಟೇ ಇರಲಿ ಬೇರೆ ಬೇರೆ  ವಿಭಾಗದಲ್ಲಿ ಸಂಕಲಿಸುವ ಪದ್ದತಿ ಅಳವಡಿಸಿ ಕೊಂಡೆವು .
ಈಗಾಗಲೇ ಹೊರ ಬಂದಿರುವ ಅನೇಕ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿಗಳನ್ನು ಪರಿಶೀಲನೆ ಮಾಡಲಾಗಿ   ಮೂಲಭೂತ ಅಂಶ ಗಳು ಒಂದೇ ಆದರೂ ಒಂದೊಂದು ಸಂಸ್ಥೆಯು ತುಸು ಬದಲಾವಣೆ ಮಾಡಿಕೊಂಡಿರುವುದು  ಕಂಡುಬಂದಿತು .ಪ್ರಮುಖವಾಗಿ  ಓರಿಯಂಟಲ್‌ ಇನಸ್ಟಿಟ್ಯೂಟ್‌ ನವರ ವರ್ಣನಾತ್ಮ ಸೂಸುಚಿಗಳಿಗೆ ಅಗ್ರಸ್ಥಾನ. ನಂತರ ಬೆಂಗಳುರು ವಿಶ್ವ ವಿದ್ಯಾಲಯ, ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ಅಧ್ಯಯನ ಸಂಸ್ಥೆಗಳ ವರ್ಣನಾತ್ಮಕ ಸೂಚಿಗಳು ಜೊತೆಗೆ ಇತ್ತೀಚೆ ಪ್ರಕಟಿಸಿದ ಕನ್ನಡ ವಿಶ್ವ ವಿದ್ಯಾನಿಲಯದ ಸೂಚಿಗಳನ್ನೂ ಗಮನದಲ್ಲಟ್ಟುಕೊಂಡು ನಮ್ಮದೇ ಆದ ಹೊಸ ಮಾದರಿಯನ್ನು ಸಿದ್ಧ ಪಡಿಸಲಾಯಿತು. ಜೊತೆಯಲ್ಲಿ ನ್ಯಾಷನಲ್‌ಮ್ಯಾನುಸ್ಲ್ರಿಪ್ಟ್‌ ಮಿಶನ್‌ ಅವರು ಸಿದ್ಧ ಪಡಿಸಿದ ನಮೂನೆಯಲ್ಲಿನ ಎಲ್ಲ ಮಾಹಿತಿಯೂ ದೊರಕುವಂತೆ ಕಾಳಜಿ ವಹಿಸಲಾಯಿತು

ಯಾವುದೇ ಕೃತಿಯ ವರ್ಣನಾತ್ಮ ಸೂಚಿಯನ್ನು ತಯಾರಿಸಲುಎರಡು ಅಂಶಗಳನ್ನು ಅತ್ಯಗತ್ಯವಾಗಿ ಗಮನಿಸ ಬೇಕು. ಮೊದಲನೆಯದು ಕೃತಿಯ   ಭೌತಿಕ ಸ್ವರೂಪದ ವಿವರ.  ಇದರಲ್ಲಿ.ನಮ್ಮ ದಾಖಲೆಯಲ್ಲಿ ಕೃತಿಗೆ ನೀಡಿದ ಸಂಖ್ಯೆ. ( Accession number) ಕೃತಿಯ ಹೆಸರು,  ಮತ್ತು ಕವಿಯ ಹೆಸರು, ಗರಿಗಳ ಸಂಖ್ಯೆ, ಕೃತಿಯ ಪ್ರಕಾರ-ಗದ್ಯ ಅಥವ ಪದ್ಯ,, ವಿಷಯ ನಂತರ  ಗರಿಗಳ ಉದ್ದ  ಮತ್ತು ಅಗಲ ಸೆಂ. ಮೀ. ಗಳಲ್ಲಿ  , ಗರಿಗಳ ಸ್ಥಿತಿ  ಸುಸ್ಥಿತಿ, ಶಿಥಿಲ,,ಅಸಮಗ್ರ,ಇತ್ಯಾದಿಗಳನ್ನು ದಾಖಲಿಸ ಬೇಕುಜೊತೆಗೆ ಸಮಗ್ರವಾಗಿದ್ದರೆ ಕಾಣೆಯಾಗಿರುವ ಗರಿಗಳ ಸಂಖ್ಯೆ ಬರೆಯ ಬೇಕು- ಪ್ರತಿ ಗರಿಯಲ್ಲಿಯ ಸಾಲುಗಳ ಸಂಖ್ಯೆ, ಅವು ಒಂದೇ ಸಮನಾಗಿರಲಿಕ್ಕಿಲ್ಲ ಕೆಲವು ನಾಲ್ಕು ಸಾಲು ಹಲವು ಆರು ಸಾಲುಇದ್ದರೆ   ೪ ರಿಂದ-೬ ಸಾಲುಗಳು ಎಂದು ದಾಖಲಿಸ ಬೇಕು ನಂತರ ಅಕ್ಷರಗಳ ಸಂಖ್ಯೆ ಇರಬೇಕು..ಇದರಿಂದ ಹಸ್ತಪ್ರತಿಯ ಬಾಹ್ಯ ಸ್ವರೂಪದ ಪರಿಚಯಾಗುವುದು. ಇವೆಲ್ಲವನ್ನು ದಾಖಲಿಸಲು ಅಂತಹ ವಿದ್ವತ್‌ ಅಗತ್ಯವಿಲ್ಲ. ಆಸಕ್ತಿ ಇರುವ ಯಾರಾದರೂ ಈ ಕೆಲಸ ಮಾಡಬಹುದು. ನಂತರದ್ದು ಹಸ್ತ ಪ್ರತಿಯ ಆಂತರಿಕ ವಿವರ.. ಮೊದಲನೆಯದಾಗಿ ಕೃತಿಯಲ್ಲಿರುವ  ಬರಹದ ಭಾಷೆ ಮತ್ತು ಲಿಪಿ.. ಈ ಎರಡೂ ಒಂದೇ ಆಗಿರ ಬಹುದು. ಅಥವ ಬೇರೆ ಬೇರೆ ಆಗಿರಬಹುದು. ನಂತರ ಬರಹದ ಸ್ವರೂಪ. ಪದ್ಯ ಅಥವ ಗದ್ಯ. ಮುಖ್ಯವಾದ ಅಂಶವೆಮದರೆ ಕೃತಿಯ ಆದಿ ಮತ್ತು ಅಂತ್ಯ. ಇದನ್ನು ಅರಿಯಲು ಲಿಪಿ ಮತ್ತು ಭಾಷೆಯ ಜ್ಞಾನ ಅತ್ಯವಶ್ಯಕ.


ಕೃತಿ ಸಮಗ್ರವಾಗಿದ್ದರೆ ಈ ಎಲ್ಲ ಅಂಶಗಳು ಲಭ್ಯವಾಗಬಹುದು. ಅಸಮಗ್ರವಾಗಿದ್ದರೆ ಅದಿ ಇಲ್ಲವೇ ಅಂತ್ಯದ ಗರಿಗಳು ಇಲ್ಲದೆ ಇರಬಹುದು. ಈ ಅಂಶವನ್ನು ದಾಖಲಿಸ ಬೇಕು
ಆದಿ ಅಂತ್ಯಗಳನ್ನು ದಾಖಲಿಸಲು ಗರಿಯಲ್ಲಿನ ಬರಹವನ್ನು ಓದಲು ಪರಿಣಿತಿ ಅಗತ್ಯ.  ಇದೇ ಅತಿ ಮಹತ್ವದ ಕೆಲಸ ಮತ್ತು ಶ್ರಮದಾಯಕ ಕಾರ್ಯ, ಈವರೆಗೆ ಅಕ್ಷರಗಳನ್ನು ಭೂತ ಕನ್ನಡಿ ಹಿಡಿದು ನೋಡ ಬೇಕಿತ್ತು. ಆದ್ದರಿಂದ ಸೂಚಿ ತಯಾರಿಕೆಯ ಕೆಲಸ ಕೆಲವೇ ಆಸಕ್ತರು ಮಾತ್ರ ಮಾಡುತಿದ್ದರು  ಹಸ್ತಪ್ರತಿ ರಂಗದಲ್ಲಿ ಕೆಲಸ  ಮಾಡುವವರ ಸಂಖ್ಯೆಯು ಬಹಳ ಕಡಿಮೆ.  ಆಧುನಿಕ ತಂತ್ರ ಜ್ಞಾನವನ್ನು ಅಳವಡಿಸದೇ ಇರುವುದರಿಂದ ಬಹುತೇಕ ಕಡೆ ಸೂಚಿ ತಯಾರಿಸಲುವರ್ಷಗಟ್ಟಲೆಯ ಯೋಜನೆ ಯ ಅಗತ್ಯವಿದೆ. ನಮ್ಮಲ್ಲಿ ಈ ಸಂಸ್ಥೆಯ ಸ್ಥಾಪಕರಾದ ಎಂ. ವಿ. ಸೀತಾರಾಮಯ್ಯನವರ ಕಾಲದಿಂದ ಇಂದಿನ ವರೆಗೆ ಕೇವಲ ಐವತ್ತು ಕೃತಿಗಳ ಸೂಚಿ ಪ್ರಕಟ ವಾಗಿದೆ.


ಆದರೆ  ಇತೀಚೆಗೆ ಹಸ್ತ ಪ್ತಿ ವಿಭಾಗದ ಹೊಣೆ ವಹಿಸಿಕೊಂಡಾದ ಮೇಲೆ ಕೆಲಸದ ವೇಗ ಹೆಚ್ಚಿತು ನಿರ್ದೇಶಕರ  ಜೊತೆ ಇನ್ನೊಬ್ಬ ಸ್ವಯಂ ಸೇವಕರಾದ ಬಿ.ಎಸ್ .ಗುರುಪ್ರಸಾದ್ ಮತ್ತು ಅರೆ ಕಾಲಿಕ ಉದ್ಯೋಗಿ ಶ್ರೀಮತಿ ವೀಣಾ ಅವರುಗಳ ತಂಡ ಎರಡು ತಿಂಗಳಲ್ಲಿ ೫೦ ಕೃತಿಗಳ ಸಂರಕ್ಷಣಾ ಪ್ರಕ್ರಿಯೆಗಳನ್ನು ಮುಗಿಸಿ ಸೂಚಿ ಸಿದ್ದಪಡಿಲಾಯಿತು.ಆದರೆ ಸೂಚಿ ತಯಾರಿಕೆಗೆ ತೀವ್ರ ವೇಗ ದೊರೆತದ್ದು  ಹಸ್ತ ಪ್ರತಿ ಅಭಿಯಾನದ ಅಡಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ  ಏಳುದಿನ ತರಬೇತಿ ಕಾರ್ಯಾಗಾರ  ನಡೆಸಿದಾಗ. ತರಬೇತಿಗೆ  ಇಪ್ಪತ್ತೈದು ಅಭ್ಯರ್ಥಿಗಳಿಗೆ ಅವಕಾಶವಿದ್ದರೂ ಬೇಡಿಕೆಯ ಹೆಚ್ಚಳದಿಂದ ೨೯ ಜನರು ಪ್ರವೇಶ ಪಡೆದರು. ಏಳುದಿನಗಳಲ್ಲಿ ಅವರು ಸೂಕ್ತ ಮಾರ್ಗ ದರ್ಶನದೊಂದಿಗೆ ಐಪ್ಪತ್ತು ಕೃತಿಗಳ ವರ್ಣನಾತ್ಮ ಕ  ಸೂಚಿ ತಯಾರಿಸಿದರು. ಇವು ಬರಿ ಕರಡು ಪ್ರತಿ ಮಾತ್ರ. ಎಲ್ಲವನ್ನೂ ಪರಿಶೀಲೆನೆಗೆ ಒಳಪಡಿಸಿ ನಂತರ ತಜ್ಞರ ಅಭಿಪ್ರಾ ಪಡೆದು ಅಂತಿಮ ಪ್ರತಿ ತಯಾರಿಸಲಾಗುವುದು. ನಂತರ ಅದನ್ನುಮೊದಲಿನಂತೆ ಮುದ್ರಿಸುವ ಅಗತ್ಯವಿಲ್ಲ. ಅದಕ್ಕೆ ಆಗುವ ಸುಮಾರು ೩೦-೪೦ ಸಾವಿರ ರೂಪಾಯಿ ಉಳಿತಾಯ.ಏಕೆಂದರೆ ಅದು ಸಾರ್ವಜನಿರಿಗೆ ಮಾರಾಟ ಮಾಡುವ ಪುಸ್ತಕವಲ್ಲ.ಕೇವಲ ಆಸಕ್ತ ವಿದ್ವಾಂಸರಿಗೆ ಮಾತ್ರ ಬೇಕು.ಇದನ್ನು ಆನ್‌ಲೈನ್‌ನಲ್ಲಿ ಹಾಕಿದರೆ ಸಂಬಂಧಿಸಿದವರೆಲ್ಲರೂ ಎಲ್ಲಿಯೇ ಇದ್ದರೂ ಯಾವಾಗಬೇಕಾದರೂ ಪಡೆಯಲು ಆಗುವುದರಿಂದ ಅಮೂಲ್ಯವಾದ, ಸಮಯ , ಹಣ  ಉಳಿತಾಯವಾಗುವುದು ಸಂಶೋಧನೆಯ ಆಕರಗಳನ್ನು ಹುಡುಕುವ ಶ್ರಮ ತಪ್ಪುವುದು.

ಈ ಕೆಲಸ   ವಿದೇಶಗಳಲ್ಲಿ   ಆಗಿದೆ. ಆದರೆ ನಮ್ಮಲ್ಲಿ ಅದರಲ್ಲೂ ಹಸ್ತಪ್ರತಿ ರಂಗದಲ್ಲಿ ಬಹು ಕಡಿಮೆ. ಹಲವಾರು ವರ್ಷಗಳ ವಿದ್ವಾಂಸರ  ಶ್ರಮದಿಂದ ಲಕ್ಷಗಟ್ಟಲೇ ವೆಚ್ಚದಲ್ಲಿ ಆಗ ಬೇಕಾದ ಕೆಲಸ ಇದು.ನಮ್ಮ ತಂಡವು ೨೮ ಸ್ನಾತಕೋತ್ತರ ವಿದ್ಯಾರ್ಥಿಗಳ ಸಹಕಾರದಿಂದ ಸಾಧಿಸಲಾಗಿದೆ. ನನ್ನ ಮಟ್ಟ್ಗೆ  ಇವೆಲ್ಲ ಕ್ಕಿಂತ ಅತಿಮುಖ್ಯವಾದುದು ೨೮ ಯುಜನರಲ್ಲಿ ಹಸ್ತ ಪ್ರತಿ ರಂಗದಲ್ಲಿ  ಆಸಕ್ತಿ ಮೂಡಿಸಿ ಅವರಿಗೆ ತರಬೇತಿ ನೀಡಿ ಜ್ಞಾನದ ಮೌಲ್ಯ ವರ್ಧನೆ ಮಾಡಿರುವುದೇ ಮಹತ್ತರ ಅಂಶ.ಈಗ ಬೆರಳೆಣಿಕೆಗೂ ಕಡಿಮೆ  ಕುಶಲ ಕೆಲಸ ಗಾರರು ಇರುವ ಹಸ್ತಪ್ರತಿ ರಂಗದಲ್ಲಿ ಈ ಒಂದು ಪ್ರಯತ್ನದಿಂದ ಮಾನವ ಸಂಪನ್ಮೂಲದ ಅಭಿವೃದ್ದಿಮಾಡಿರುವುದು ಸಾರ್ಥಕ ಪ್ರಯತ್ನ ಎನಿಸಿತು.




No comments:

Post a Comment