Tuesday, February 11, 2014

ಹಸ್ತಪ್ರತಿ ಅಭಿಯಾನ -೧

ಎಚ್‌.ಶೇಷಗಿರಿರಾವ್‌

                             ಹಸ್ತಪ್ರತಿ ಕಾರ್ಯಾಗಾರ


                                                             ಉದ್ಘಾಟನೆ
    ಬೆಂಗಳೂರಿನ  ಬಿ.ಎಂ.ಶ್ರೀ  ಸ್ಮಾರಕ ಪ್ರತಿಷ್ಠಾನದಲ್ಲಿನಲ್ಲಿ   ಸೋಮವಾರ ೧೦ನೆಯ ಫೆಬ್ರವರ ಯಂದು “ ಹಸ್ತ ಪ್ರತಿ ಸಂರಕ್ಷಣೆ ಮತ್ತು ಅಧ್ಯಯನ ಅಭಿಯಾನದ ಅಡಿಯಲ್ಲಿ ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಡೆಸುವ ಒಂದು ವಾರದ ಕಾರ್ಯಾಗಾರದ ಉದ್ಘಾಟನೆಯಾಯಿತು.ಇದರಲ್ಲಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಕಾಲೇಜು, ಮಲ್ಲೇಶ್ವರಂ ಮತ್ತು  ಎಂ ಇ.ಎಸ್‌ ಕಾಲೇಜಿನಲ್ಲಿ ಕನ್ನಡ ಎಂ. ಎ ಓದುತ್ತಿರುವ   ೨೫ ವಿದ್ಯಾರ್ಥಿಗಳು ಭಾಗವಹಿಸಿದ್ದರು
ಬಿ. ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ
ಅಭಿಯಾನದ ನಿರ್ದೇಶಕರಾದ ಎಚ್‌. ಶೇಷಗಿರಿರಾವ್‌ ಕಾರ್ಯಾಗಾರವನ್ನು  ಉದ್ಘಾಟಿಸಿದರು. ಹಿರಿಯ ಸಾಹಿತಿಗಳಾದ ಶ್ಸುರೀ ಎಂ ವಿ ಸೀತಾರಾಮಯ್ಯನವರು  ಮೂವತ್ತು ವರ್ಷಗಳ ಹಿಂದೆ ಸಾಹಿತ್ಯ ಮತ್ತು ಸಂಶೋಧನೆಯ ಸಲುವಾಗಿ ತಮ್ಮ ಗುರುಗಳಾದ ಬಿ. ಎಂ.,ಶ್ರೀ ಅವರ ಹೆಸರಿನಲ್ಲಿ ಈ ವಿದ್ವತ್‌ಸಂಸ್ಥೆ ಸ್ಥಾಪಿಸಿದರು. ಇದನ್ನ ರಾಷ್ಟ್ರ ಕವಿ ಕುವೆಂಪು ಅವರು ಉದ್ಘಾಟಿಸಿದರು. ಎಂ.ವಿ. ಸಿಯವರ ಸತತ ಪರಿಶ್ರಮದಿಂದ  ೧೩೦೦ ಹಸ್ತಪ್ರತಿಗಳು ಸಂಗ್ರಹವಾದವು.ಏಳು ಲಿಪಗಳಲ್ಲಿರುವ ವಿವಿಧ ವಿಷಯದ ಹಸ್ತಪ್ರತಿಗಳಿವೆ.
ಪ್ರೊ. ಎಂ ವಿ. ಸೀತಾರಾಮಯ್ಯನವರ ಪುತ್ಥಳಿ
 ’ ಹಸ್ತಪ್ರತಿಗಳು ನಾಡಿನ ಜ್ಞಾನ ಭಂಡಾರ. ಲಕ್ಷಾಂತರ ಹಸ್ತ ಪ್ರತಿಗಳಲ್ಲಿ ಪರಂಪರಾಗತ ಜ್ಞಾನ ಅಡಗಿದೆ ಆದರೆ ಅವು ನಾಶವಾಗುತ್ತಿವೆ. ಪ್ರಾಕೃತಿಕ ವಿಕೋಪ, ನಿರ್ಲಕ್ಷ್ಯ ,ಮೂಢ ನಂಬಿಕೆ ಮತ್ತು  ಅಜ್ಞಾನವೆ ಅದಕ್ಕೆ ಕಾರಣ.   ಅವುಗಳನ್ನು ಸಂಗ್ರ ಹಿಸಿ ಸಂರಕ್ಷಿಸಿ ಅವುಗಳಲ್ಲಿನ    ಜ್ಞಾನವನ್ನು ಅರಿಯುವುದರಿಂದ ಮನುಕುಲದ ಅಭಿವೃದ್ಧಿ ಸಾಧ್ಯ. ಈಗ ಹಸ್ತಪ್ರತಿಗಳ ಸಂಗ್ರಹಾಲಯದಲ್ಲಿ ಅವುಗಳ ಧೂಳು ವರೆಸಿ ವರ್ಷಕ್ಕೊಮ್ಮೆ  ತೈಲ ಲೇಪನಮಾಡಿ ಇಡುವುದೇ ಮುಖ್ಯ ಕಾರ್ಯವಾಗಿದೆ, ಅಧ್ಜಯನ ಮಾಡುವ   ವಿದ್ವಾಂಸರು ವಿರಳ ವಾಗುತಿದ್ದಾರೆ. ಅವುಗಳಲ್ಲಿ ಆಸಕ್ತಿ ಇಲ್ಲವಾಗಿದೆ. ಹಸ್ತಪ್ರತಿಗಳನ್ನು ಶಾಶ್ವತವಾಗಿ ಸಂರಕ್ಷಿಸುವ ಉದ್ದೇಶದಿಂದ ಅವುಗಳ ಡಿಜಿಟಲೈಜೇಷನ್‌ ಆಗ ಬೇಕಿದೆ. ಜ್ಞಾನವು ಮುಕ್ತವಾಗಿ ಎಲ್ಲರಿಗೂ ಎಲ್ಲ ಕಡೆ ದೊರೆಯಲು ಆಧುನಿಕ ತಂತ್ರ ಜ್ಞಾನ ಬಳಸಿ ಆನ್‌ಲೈನ್‌ನಲ್ಲಿ ಹಾಕಿದರೆ ಸಂಶೋಧಕರು ಹುಡುಕಿಕೊಂಡು ಹೋಗಿ ಭೂತ ಗನ್ನಡಿ ಹಿಡಿದು ಅಧ್ಯಯನ ಮಾಡುವ  ಬದಲು ಕುಳಿತಲ್ಲಿಯೇ ಅಗತ್ಯ ಮಾಹಿತಿ ಪಡೆಯಬಹುದು. 
ಕಾರ್ಯಾಗಾರದ ಉದ್ಘಾಟನೆ
ಈ ದಿಶೆಯಲ್ಲಿ  ಜನ ಜಾಗೃತಿ  ಮೂಡಿಸಲು ಮತ್ತು ಜ್ಞಾನದ ಪಂಜನ್ನು ಮುಂದೆ ಸಾಗಿಸಲು ಯುವಜನರನ್ನು ತೊಡಗಿಸಿ ಕೊಳ್ಳುವದರಿಂದ ಮಾತ್ರ ಸಾಧ್ಯ.  ಗಣಕೀಕರಣದ ಕೆಲಸದಲ್ಲಿ ಈಗ ಆನ್‌ಲೈನ್‌ನಲ್ಲಿ ದೇಶ ವಿದೇಶಗಳ ೨೫ ಜನರು ಸಹಕರಿಸುತ್ತಿರುವರು. ಈ ಕೆಲಸದಲ್ಲಿ ಸಮುದಾಯವು ತೊಡಗಿದಾಗ ಮಾತ್ರ ಸಾಧ್ಯ. ವಿದ್ಯಾರ್ಥಿಗಳಿಗೆ ಇದು ಕನ್ಯ ನೆಲ. ಅದರಲ್ಲಿ ತೊಡಗಿಕೊಂಡರೆ ಆಕಾಶವೇ ಮಿತಿ. ಇದು ನಮ್ಮ ಪರಂಪರೆಯನ್ನು ಉಳಿಸಿ  ಕೊಳ್ಳುವ ಕೆಲಸ  ಅದಕ್ಕೆ ಯುವ ಜನರನ್ನು ಸಿದ್ಧ ಮಾಡುವುದೇ ಕಾರ್ಯಾಗಾರದ ಉದ್ದೇಶ ಎಂದು ಹೇಳಿದರು.

ಅತಿಥಿಯಾದ ಡಾ. ಶ್ಯಾಮಲಾ ರತ್ನ ಕುಮಾರಿ ಮಾತನಾಡುತ್ತಾ ಹಸ್ತಪ್ರತಿಗಳ ಸಂರಕ್ಷಣೆಯ ವಿವಿಧ ಹಂತಗಳನ್ನು ವಿವರಿಸಿದರು.ಪ್ರಾಚೀನ ಕಾಲದಲ್ಲಿ ತಾಳೆಗರಿ ಸಿದ್ಧ ಪಡಿಸುತಿದ್ದ ವಿಧಾನ ಮತ್ತು ಕಂಟವನ್ನು ಬಳಸಿ ತಾಳೆಯ ಗರಿಗಳ ಮೇಲೆ ಕೊರೆಯುತಿದ್ದ ಪರಿಯನ್ನು   ತಿಳಿಸಿದರು.ಹಸ್ತಪ್ರತಿಗಳನ್ನು ಕಾಪಾಡುವ ಅಗತ್ಯವನ್ನು ಒತ್ತಿ ಹೇಳಿದರು
ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳಾದ ಪ್ರೊ.ಅಬ್ದುಲ್‌ ಬಷೀರ್‌ ಅವರು
ಸಂಸ್ಥೆಯಲ್ಲಿ  ಹಸ್ತ ಪ್ರತಿ ವಿಭಾಗದಲ್ಲಿ ಇತ್ತೀಚೆಗೆ ಆಗುತ್ತಿರುವ ಪ್ರಗತಿಯನ್ನು ಮೆಚ್ಚುತ್ತಾ, ಹಸ್ತಪ್ರತಿಗಳಲ್ಲಿನ ಕಾವ್ಯಗಳು ಅವುಗಳ ಸಂರಕ್ಷಣೆಗೆ ನೀಡುತಿದ್ದ ಪ್ರಾಮುಖ್ಯತೆಯನ್ನು ತಿಳಿಸಿದರು. ಕಾವ್ಯವು ಕೃಷ್ಣ ಕಥೆ  ಎಂದಾಗ ಭಕ್ತಿಯ ಜೊತೆ    ಭಯವೂ ಹುಟ್ದಿ ಹೇಗೆ ಹಸ್ತಪ್ರತಿಯ ರಕ್ಷಣೆ ಆಗುತಿತ್ತು ಎಂದ ಉದಾಹರಣೆ ಸಮೇತ ತಿಳಿಸಿದರು.  ವಿದ್ಯಾರ್ಥಿಗಳು ತಮಗೆ ಒದಗಿಸಲಾದ ಅವಕಾಶದ ಸದುಪಯೋಗ ಮಾಡಿಕೊಳ್ಳ ಬೇಕೆಂದು ಕರೆ ನೀಡಿದರು.
ಅಭಿಯಾನದ ಸಕರಿಸುತ್ಹತಿರುವ ಬಿ. ಎಸ್‌ ಗುರು ಪ್ರಸಾದ ಅವರು ಅತಿಥಿಗಳನ್ನು ಸ್ವಾಗತಿಸಿ  ಕಾರ್ಯಕ್ರಮದ ನಿರೂಪಣೆ
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಕಾರ್ಯಾಗಾರದ  ಮಧ್ಯಾಹ್ನದ ಅವಧಿ
ಭೋಜನಾನಂತರ ಮಧ್ಯಾಹ್ನದ ಅವಧಿ ಪ್ರಾರಂಭವಾಯಿತು. ಪ್ರತಿ ಯೊಬ್ಬರಿಗೂ ಮಿಶ್ರಗರಿಗಳ ಕಟ್ಟನ್ನು ಕೊಡಲಾಯಿತು.
ಅವುಗಳ ವಿಂಗಡಣೆಯಲ್ಲಿ ಗಮನಿಸ ಬೇಕಾದ ಅಂಶಗಳನ್ನು ತಿಳಿಸಲಾಯಿತು. ಗರಿಗಳ ಭೌತಿಕ ಸ್ವರೂಪಪ ಅಂದರೆ ಉದ್ದ ಮತ್ತು ಅಗಲಕ್ಕೆ ಅನುಸಾರವಾಗಿ ಜೋಡಿಸ ಬೇಕು ಆಗ ಗರಿಯ ಮಧ್ಯದಲ್ಲಿರುವ ರಂದ್ರಗಳು ಕೂಡಾ ಪರಸ್ಪರ ಹೊಂದುವಂತಿರಬೇಕು. ನಂತರ ಲಿಪಿ. , ಕನ್ನಡ, ಸಂಸ್ಕೃತ, ತಮಿಳು ತೆಲುಗು , ತಿಗಳಾರಿ , ಗ್ರಂಥ ಮೊದಲಾದ ಲಿಪಿಗಳ ಗರಿಗಳು ನಮ್ಮಲ್ಲಿ  ಇವೆ.   ಒಂದೇ ರೀತಿಯ ಲಿಪಿಇರುವ ಗರಿಗಳನ್ನು ಒಟ್ಟಿಗೆ ಜೋಡಿಸುವುದು ಅಗತ್ಯ. ಒಂದೇ ಸಂಖ್ಯೆಯ ಸಾಲು ಇರುವ  ಗರಿಗಳನ್ನು ಒಟ್ಟಿಗೆ ಜೊಡಿಸ ಬೇಕು. , ಸಾಲಿನಲ್ಲಿನ ಅಕ್ಷರಗಳು, ಗರಿಯಬಣ್ಣ   ಜೊತೆಗೆ,  ಹಸ್ತಾಕ್ಷರಗಳುಲ್ಲಿ ಹೋಲಿಕೆ  ಇರ ಬೇಕು.   ಹೀಗೆ ಹಲವು ಅಂಶಗಳನ್ನು ಗಮನಿಸಿ ವಿಂಗಡಿಸುವ ಕೆಲಸವನ್ವಿನು ಮಕ್ಧಾಕಳಿಗೆ ನೀಡಲಾಯಿತುಸಿ ಕೊಡಲಾಯಿತು.  ಪ್ರತಿಯೊಬ್ಬ ವಿದ್ಯಾರ್ಥಿಗೂ   ೨೦-೨೫ ಬಿಡಿ ಗರಿಗಳನ್ನು ನೀಡಿ ವಿಂಗಢನೆ ಮತ್ತು ಜೋಡಣೆಯ ಕೆಲಸದಲ್ಲಿ ತೊಡಗಿಸಲಾಯಿತು   ೨೪ ವಿದ್ಯಾರ್ಥಿಗಳು ಖುಷಿ ಖುಷಿಯಿಂದ ಕೆಲಸ ಮಾಡಿದರು 
ಅವರಿಗೆ ಶ್ರೀಮತಿ ವೀಣಾ, ಶ್ರೀ ರಾಘವೇಂದ್ರ, ಡಾ. ಶ್ಯಾಮಲಾ ರತ್ನಕುಮಾರಿ ಮತ್ತುಶ್ರೀ ಗುರುಪ್ರಸಾದ್‌ ಅವರುಅನುಮಾನಗಳನ್ನು ಪರಿಹರಿಸಿದರು.ಅಲ್ಲದೇ ವಿದ್ಯಾರ್ಥಿಗಳ ಜೊತೆ   ಇಬ್ಬರು ಪ್ರಾಧ್ಯಾಪಕರೂ ಭಾಗವಹಿಸಿದ್ದರು ಡಾ. ಲಕ್ಷ್ಮಿಪ್ರಸಾದ್‌ ಸರ್ಕಾರಿ ಪದವಿ ಪೂರ್ವಕಾಲೇಜಿನ ಉಪನ್ಯಾಸಕರು ಮತ್ತು ಶ್ರೀ. ರಾಮಕೃಷ್ಣ ಪ್ಪ, ಎಂ, ಇ. ಎಸ್‌ ಕಾಲೇಜಿನ   ಪ್ರಾಧ್ಯಾಪಕರು  ಉತ್ಸಾಹದಿಂದ ಮಕ್ಕಳಿಗಿಂತ ಮಿಗಿಲಾಗಿ ಕೆಲಸ ಮಾಡಿದರು. ವಿದ್ಯಾರ್ಥಿಗಳಂತೂ ಈವರೆಗೆ   ತರಗತಿಯಲ್ಲಿ    ತಾಳೆಗರಿಗಳ  ಬಗ್ಗೆ ಕೇಳಿದ್ದೆವು  ಈಗ   ಕೈಮುಟ್ಟಿ ಕೆಲಸ ಮಾಡುವ ಅವಕಾಶದಿಂದ ರೋಮಾಂಚನ ಗೊಂಡಿರುವುದಾಗಿ ತಿಳಿಸಿದರು..ತಮಗೆ ನೀಡಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.ಈ ಕಾರ್ಯಾಗಾರದ ಪ್ರಾರಂಭದ ಹಂತದಲ್ಲಿ ಅಧ್ಯಕ್ಷರಾದ ಡಾ ಪಿ.ವಿ.ನಾರಾಯಣ, ಖಜಾಂಚಿಗಳಾದ ಎಂ .ಎಸ್‌.ರಾಮಪ್ರಸಾದ , ಭಾಸ್ಜರ್‌ ಐಟಿ ತಜ್ಞೆ ಸೀತಾಲಕ್ಷ್ಮಿ,  ವೆಂಕಟರಮಣಯ್ಯಮತ್ತು ಹಲವುಸಾರ್ವಜನಿಕರು ಉಪಸ್ಥಿತರಿದ್ದರು.ಕಚೇರಿಯ ಸಿಬ್ಬಂದಿ ಎಲ್ಲ ಕಾರ್ಯಗಳಲ್ಲಿ ಸಹಕರಿಸಿತು.
                           ಹಸ್ತ ಪ್ರತಿಗಳ ವಿಂಗಡಣೆಯಲ್ಲಿ ತೊಡಗಿರುವ  ವಿದ್ಯಾರ್ಥಿಗಳ ಚಿತ್ರ ಸಂಪುಟ

No comments:

Post a Comment