Wednesday, February 5, 2014

ಬ್ರಹ್ಮಾಂಡ ದರ್ಶನ

 ತ್ರಿರಂಗ ದರ್ಶನ.


ಒಂದೇ ದಿನ ಅನೇಕ ದೇವರ ದರ್ಶನ ಮಾಡುವ ಪದ್ದತಿಗೆ ಪ್ರಾಚೀನ ಪರಂಪರೆಯೇಇದೆ. ಪಂಚಲಿಂಗ ದರ್ಶನ  ನಮ್ಮ ರಾಜ್ಯದ  ಹಳೆಮೈಸೂರು ಪ್ರದೇಶದಲ್ಲಿ ಜನಪ್ರಿಯವಾದರೆ,ಶ್ರೀ ವೈಷ್ಣವರಲ್ಲಿ ಆದಿ , ಮಧ್ಯ  ಮತ್ತು ಅಂತ್ಯರಂಗದರ್ಶನ ಪರಮಪುಣ್ಯದಾಯಕ ಎಂಬ ನಂಬಿಕೆ ಇದೆ.. ರಂಗನಾಥಸ್ವಾಮಿಯ ವಿಶೇಷವೆಂದರೆ ಕಾವೇರಿ ತೀರದಲ್ಲಿರುವುದು ಅದೂ ಎರಡು ಸೀಳಾಗಿ ಒಡೆದ ನದಿಯ ನಡುವಣ ಭೂ ಪ್ರದೇಶದಲ್ಲಿರುವುದು, ಅಂದರೆ ದ್ವೀಪವಾಸಿ.ರಂಗನಾಥನೆಂದರೆ ನಿದ್ರಾಭಂಗಿಯಲ್ಲಿರುವ ಮಹಾವಿಷ್ಣವಿನ ರೂಪ.ಮಾರ್ಗಶಿರ ಮಾಸದಲ್ಲಿ ಸಾಧ್ಯವಾದರೆ ಶನಿವಾರದಂದು ಸೋರ್ಯೋದಯದಿಂದ ಸೂರ್ಯಾಸ್ತದ ಒಳಗೆ ಮೂರು ದೈವಗಳ ದರ್ಶನ ಮಾಡುವುದನ್ನು ಬ್ರಹ್ಮಾಂಡ ದರ್ಶನ ಎನ್ನುವರು. ಮನಸ್ಸು ಇದ್ದರೂ ಮಾರ್ಗ ಬಹಳ ದುರ್ಗಮ. ಸುಮಾರು ೫೦೦ ಕಿಲೋ ಮೀಟರ್‌ಗೂ ಹೆಚ್ಚು ಅಂತರವಿರುವ ಈ ಮೂರನ್ನೂ ತಲುಪುವುದು ಸಾಹಸದ ಕೆಲಸವೇ ಸರಿ.ಆದರೂ ಆಧುನಿಕ ಶ್ರವಣಕುಮಾರನಾದ ಮಗ ಭರತನಿಗೆ ಹೆತ್ತವರಿಗೆ ಬ್ರಹ್ಮಾಂಡ ದರ್ಶನಮಾಡಿಸುವ ಹಂಬಲ. ಅದೂ ಮಕ್ಕಳು ಮೊಮ್ಮಕ್ಕಳ ಸಮೇತ.
 
ಈ ಪ್ರಯಾಸದ ಪ್ರವಾಸಕ್ಕೆ ಪೂರ್ವಸಿದ್ಧತೆ ಬಹಳ ಬೇಕಿತ್ತು.ನಾವು ಹೊರಡುವ ದಿನ ಸಂಕಷ್ಟಿ ಬೇರೆ. ಶ್ರದ್ದಾಳುಗಳಿಗೆ ಚಂದ್ರದರ್ಶನ ವಾಗುವುವರೆಗೆ ಊಟವಿಲ್ಲ. ಆದರೆ ಮಕ್ಕಳಿಗೆ ಮತ್ತು ಇನ್ನೂ ಮನಸ್ಸು ಮಾಗದವರಿಗೆ ರಿಫಿಲ್ಲಿಂಗ್‌ ವ್ಯವಸ್ಥೆ ಆಗಲೇ ಬೇಕು. ಹೋಟೆಲಿನ ಅವಲಂಬನೆ ಆರೋಗ್ಯದ ದೃಷ್ಟಿಗಿಂತ ಸಮಯದ ಅಭಾವದಿಂದ ಸೂಕ್ತವಾಗದು. ಸಿದ್ಧ ಆಹಾರತೆಗೆದುಕೊಂಡು ಹೋಗುವುದೇ ಸರಳ ಎನಿಸಿತು. ದಾರಿಯುದ್ಧಕ್ಕೂ ಸಿಗುವ ಜಂಕ್‌ಫುಡ್‌ಗ್‌ಳನ್ನು ಬಳಸದಿರಲು ನಿರ್ಧರಿಸಲಾಯಿತು ಕಾರಣ ಲೋಡಿಂಗ್‌ಅಧಿಕವಾದಂತೆ ಅನಲೋಡಿಂಗ್‌ಗೂ ಹೆಚ್ಚಿನ ಸಮಯ ಬೇಕಾಗುವುದು. ಅದಕ್ಕೆ ಅಗತ್ಯ ಸೌಕರ್ಯ ಹುಡುಕಿಹೋಗಲು ಸಮಯದ ಕೊರತೆ. ಆದ್ದರಿಂದ ಹೋಗುವ ಪ್ರಯಾಣದಲ್ಲಿ  ಅಗತ್ಯಕ್ಕೆ ತಕ್ಕಷ್ಟು ಹಣ್ಣು, ಬಿಸ್ಕತ್ತು, ಬ್ರೆಡ್‌ಜಾಮ್  ಮತ್ತು ಅವಲಕ್ಕಿ ಮಂಡಾಳುಗಳ ವ್ಯವಸ್ಥೆಮಾಡಿಕೊಂಡೆವು. ದೇವ ದರ್ಶನಕ್ಕೆಂದು ಹೊರಟವರು ಅದೂ ಎ. ಸಿ ಕಾರಿನಲ್ಲಿಪ್ರಯಾಣಿಸುವಾಗಪಾಗ ಅಪಾನವಾಯುವಿನ ಉತ್ಪಾದನೆ ಆಗದಂತೆ ಎಚ್ಚರಿಕೆ ವಹಿಸ ಬೇಕಿತ್ತು.ಇಲ್ಲವಾದರೆ ನರಕಯಾತನೆಯ ಅನುಭವ ಆಗುವ ಸಂಭವ.

ಬೆಳಗಿನ ನಾಲ್ಕು ಗಂಟೆಗೆ ಸ್ನಾನ ಮುಗಿಸಿ ಹೊರಟೆವು. ಮಹಿಳೆಯರಂತೂ ಮೂರುನಾಲ್ಕು ಸಲ ಸ್ನಾನ ಮಾಡಬೇಕಾದುದರಿಂದ ಅವರ ಬಟ್ಟೆಗಳ ಬ್ಯಾಗ್‌ಗಳು ನೋಡಿದರೆ ವಾರಗಟ್ಟಲೆ ಹೊರ ಪ್ರಯಾಣಕ್ಕೆ ಹೊರಟಂತೆ ಅನಿಸುತಿತ್ತು.  ಅಂತೂ ಎಲ್ಲವನ್ನು ಕಾರಿನ ಡಿಕ್ಕಿಯಲ್ಲಿ ಅಡಕಿಸಿ ಜೈ ರಂಗನಾಥ ಎಂದು ಹೊರಟೆವು.ಬೆಳಗಿನ ಸಮಯ. ಸಂಚಾರದಟ್ಟಣೆ ಇರಲಿಲ್ಲ. ಆರು ಗಂಟೆಯ ಹೊತ್ತಿಗೆ ಆದಿರಂಗ ತಲುಪಿದೆವು. ದೇವದರ್ಶನ ಕ್ಕೆ ಮುಂಚೆ ತೀರ್ಥ ಸ್ನಾನ ವಾಗದಿದ್ದರೆ ಏನು ಸಾರ್ಥಕ ಎಂಬ ವಾದಕ್ಕೆ ಮಣಿದು ಸಂಗಮಕ್ಕೆ ಹೊರಟೆವು.ಆಗಲೇ ಆರುವರೆ.ಅಲ್ಲಿ ಪ್ರವಾಸಿಗರು ಕಿಕ್ಕಿರಿದಿದ್ದರು. ಸುಮಾರು ಮೂರ ಬಸ್ಸುಗಳಲ್ಲಿ ಪ್ರವಾಸಿ ವಿದ್ಯಾರ್ಥಿಗಳಿದ್ದರು..ಕಪಿಲ ಕಾವೇರಿ ನದಿಸಂಗಮವು ಜಲಮಾಲಿನ್ಯದಿಂದ ಸ್ನಾನ ಮಾಡಿದರೆ ಪುಣ್ಯ ಬರುವಮಾತಿರಲಿ ವೈದ್ಯರ ಹತ್ತಿರ ಹೋಗುವ ಸಂದರ್ಭ ಬರುವಂತಿತ್ತು. ಸರಿ ನೀರ ಹನಿ ತಲೆಯ ಮೇಲೆ ಪ್ರೋಕ್ಷಣೆಯ ಶಾಸ್ತ್ರಮುಗಿಸಿ ಮನೆಯಲ್ಲಿಸ್ನಾನ ಮಾಡಿ ಹೊರಟಿದ್ದು ಎಷ್ಟು ಒಳ್ಳೆಯದಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟೆವು  
ಶ್ರೀರಂಗಪಟ್ಟಣ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆಐತಿಹಾಸಿಕ ಮಹತ್ವವನ್ನೂ ಪಡೆದಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಟಿಪ್ಪೂಸುಲ್ತಾನನ ಚಿತ್ರ ಕಣ್ಣಿನ ಮುಂದೆ ಸುಳಿಯಿತು.ಇನ್ನು ಪ್ರಾಚ್ಯ ಸ್ಮಾರಕಗಳು ವಿಶೇಷವಾದವುಗಳೆ.ಆದರೆ ಈ ಸಲ ಅವಲ್ಲವೂ ತೆರೆಗೆ ಸರಿದವು ಶೇಷಶಾಯಿಯಾದ ರಂಗನಾಥನ ದರ್ಶನ ನೋಡಿಕೊಂಡು ಓಟ ಕಿತ್ತ ಬೇಕಾಯಿತು. ಏನೇ ಆದರೂ ನೆಮ್ಮದಿಯಿಂದ ನಿದ್ದೆ ಮಾಡುವವರನ್ನು ರಂಗಧಾಮನಂತೆ ಮಲಗಿರುವನು, ಎಂದು ಏಕೆ ಹೇಳುವರು ಎಂದು ದರ್ಶನ ಮಾಡಿದಾಗ ತಿಳಿಯಿತು. ಯೋಗ ನಿದ್ರೆಯಲ್ಲಿಯೇ ಮುಗುಳುನಗೆ ಬೀರುವ ದೇವನನ್ನು ನೋಡುವುದೆ ಆನಂದದಾಯಕ. ಅಂದ ಹಾಗೆ ಕಳೆದ ಲ ಹೋದಾಗ ಪ್ರಾಕಾರದ ಸುತ್ತುವಾಗ ಅನುಕೂಲದ ದೃಷ್ಟಿಯಿಂದ ಎಡದಿಂದ ಬಲಕ್ಕೆ ಹೋಗುವ ಸಂಪ್ರದಾ ಬಿಟ್ಟು ಬಲದಿಂದ ಎಡಕ್ಕೆ ಸರತಿಯಲ್ಲಿ ಚಲಿಸುವ ವ್ಯವಸ್ಥೆಮಾಡಿದ್ದರು. ಆಗ ಅಲ್ಲಿ ದಂಪತ್‌ ಸಮೇತ ಭೇಟಿ ನೀಡಿದ್ದ  ತರಂಗದ ಸಂಪಾದಕರಾಗಿದ್ದ ಶ್ರೀಸಂತೋಷ ಕುಮಾರ ಗುಲ್ವಾಡಿಯವರು ಅಲ್ಲಿನವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಫ್ರದಕ್ಷೀಣವಾಗಿ ಹೋಗುವುದು ಚಿತೆಗೆ ಅಗ್ನಿ ಸ್ಪರ್ಶ ಮಾಡುವಾಗ ಮಾತ್ರ ಇದು ಶುದ್ಧ ತಪ್ಪು ಎಂದು ಅವರು ದಬಾಯಿದ್ದ ನೆನಪುಬಂತು. ಈ ಸಲ ಪ್ರದಕ್ಷಿಣೆ ವ್ಯವಸ್ಥೆ ಇರಲಿಲ್ಲ. ಆದರೂ ಒಳಗೆ  ಬಲದಿಂದಲೇ ಹೋಗಿ ಎಡಕ್ಕೆ ಹೊರ ಬರುವ ವ್ಯವಸ್ಥೆ ಇದ್ದಿತು. ಅದಕ್ಕೆ ಕಾರಣವೂ ಇದ್ದಿತು . ಮೊದಲು ದೇವರ ಮುಖ ದರ್ಶನ ನಂತರ ಕತ್ತು ತಿರುಗಿಸಿ ಪಾದದರ್ಶನ ಮಾಡಿಕೊಳ್ಳ ಬಹುದಿತ್ತು. ಆಗ ಅನ್ನಿಸಿತು ದೇವರ ಮುಂದೆ ಶುಭ ಅಶುಭದ ಮಾತೇ ಬರುವುದಿಲ್ಲ.
ನಂತರ ತಿಂಡಿಗೂ ಕಾಯದೇ ಮಧ್ಯ ರಂಗಕ್ಕೆ ಹೊರಟೆವು ಅದು ಇರವುದು ಶಿವನಸಮುದ್ರದ ಹತ್ತಿರ. ಅದೂ ಕಾವೇರಿ ತೀರದಲ್ಲಿಯೇ, ಪ್ರಸಿದ್ದ ಗಗನ ಚುಕ್ಕಿ ಭರ ಚುಕ್ಕಿ ಜಲಪಾತಗಳು ಅಲ್ಲಿಗೆ ಸಮೀಪ. ಆದರೆ ನಮ್ಮ ಉದ್ದೇಶ ಮಧ್ಯರಂಗನದರ್ಶನ. ಅಲ್ಲಿಂದ ಪುನಃ ೩೫೦ ಕಿಲೊ ಮೀಟರ್‌ಪಯಣ. ಹಾಗಾಗಿ ತರಾತುರಿಯಲ್ಲಿ ಹೊರಟೆವು ರಂಗನಾಥನ ದರ್ಶನವಾದ ಮೇಲೆ ತಾಳ ಹಾಕುತಿದ್ದ ಹೊಟ್ಟೆಯ ಕಡೆ ಗಮನ ಹರಿಯಿತು. ಅಂದು ಸಂಕಷ್ಠಿಯಾದ್ದರಿಂದ ಮಹಿಳೆಯರು ಮತ್ತು ಮಗ ಊಟದ ಯೋಚನೆ ಇಲ್ಲ ಎಂದರು. ಆದರೂಲಘುವಾಗಿ ಉಪಹಾರ ಬೇಕಿತ್ತು. ಸರಿ, ಗುಡಿಯ ಮುಂದೆ ಇದ್ದ ತಳ್ಳುವ ಗಾಡಿಯಲ್ಲಿಯ ಬಿಸಿ ಬಿಸಿ ಇಡ್ಲಿ ಗಮನ ಸೆಳೆಯಿತು. ಹಸಿವಾದಾಗ ದೊರೆತಿದ್ದೇ ಪ್ರಸಾದ. ಹಿಂಜರಿಕೆಯಿಂದ ಹೋದರೂ .ತಿಂದ ಮೇಲೆ ಗೊತ್ತಾಯಿತು. ಅಲ್ಲಿನ ತಿಂಡಿ ಯಾವುದೇ ದರ್ಶಿನಿಯ ಗುಣಮಟ್ಟಕ್ಕೂ ಸವಾಲು ಹಾಕುವಂತೆ ಇತ್ತು. ಮುಂದಾಲೋಚನೆಯಿಂದ ಎರಡೆರಡು ಪ್ಲೇಟ್‌ತಿಂದರು.ಮಧ್ಯರಂಗನ ದರ್ಶನ ಮುಗಿಸಿ  ತಮಿಳುನಾಡಿನತ್ತ ಹೊರಟೆವು. ಗಡಿಯಲ್ಲಿ ಬೆಟ್ಟಗಳ ಸಾಲು.ಸಾಕಷ್ಟು ಹೇರ್‌ಪಿನ್‌ ತಿರುವುಗಳು. ಪರಿಣಾಮ ಒಬ್ಬಬ್ಬರಿಗೆ ತಲೆತಿರುಗಿ ವಾಂತಿಯ ಭಯ.ಮಧ್ಯ ಮಧ್ಯ ಕಾರು ನಿಲ್ಲಿಸುವ ಅಗತ್ಯ ಬಂದಿತು. ಅದರಿಂದ ತುಸು ತೊಂದರೆ ಎನಿಸಿದರೂ ಅಲ್ಲಿನ ಕಾಡು ಕಂಡು ಖುಷಿಯಾಯಿತು. ವೀರಪ್ಪನ್‌.ಎರಡು ರಾಜ್ಯಗಳ ಪೋಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದು ಇದೇ ಪ್ರದೇಶದಲ್ಲಿ ಎಂಬ ನೆನಪು ತಂದಿತು.ಅಂತೂ ಇಂತೂ ಸಂಜೆ ಯಾಗುವುದರೊಳಗೆ ಅಂತ್ಯ ರಂಗನ ದರ್ಶನ ಮಾಡಲೇ ಬೇಕಿತ್ತು. ಕಾರಿನ ಚಾಲಕನೂ ಚುರುಕಾಗಿಯೇಇದ್ದ. ಗುರಿತಲುಪಲು ಅಡೆ ತಡೆ ಇಲ್ಲದೆ ಗಾಡಿ ಓಡಿಸಿದ.
ಸಂಜೆ ಐದರ ಹೊತ್ತಿಗೆ ಶ್ರೀರಂಗಂನ ಹೊರ ವಲಯ ತಲುಪಿದೆವು.ಗೋಪುರ ದರ್ಶನವಾದೊಡನೆ ಕಷ್ಟ ಪಟ್ಟದ್ದು ಸಾರ್ಥಕವೆನಿಸಿತು. ಸೀದಾ ಗುಡಿಯ ಹತ್ತಿರ ಹೋದೆವು . ಅದೊಂದು ಏಳು ಸುತ್ತಿನ ಕೋಟೆಯಂತಿರುವ ಆವರಣ. ಎಲ್ಲಿ ನೊಡಿದರೂ ಗೋಪುರಗಳು.ಈ ಮೊದಲೇ ವಸತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದರಿಂದ ನೇರವಾಗಿ ಅಲ್ಲಿಗೆ ಹೋಗಿ ಕೈಕಾಲು ಮುಖತೊಳೆದು ಹೊರಟೆವು.ದೇವರ ದರ್ಶನಕ್ಕೆ ಹೋದರೆ ಸಾವಿರಾರು ಜನರ ಸಾಲು ನೋಡಿದಂಗಾದೆವು. ೨೫೦ ಕೊಟ್ಟರೂ ದರ್ಶನಕ್ಕೆ ನಾಲ್ಕಾರು ಗಂಟೆ ಕಾಯ ಬೇಕೆಂದರು. ಸರಿ ನಮಗಂತೂ ತಾಳ್ಮೆ ಇಲ್ಲ. ದೈವ ಭೀರುಗಳಾದ ನಮ್ಮ ಹೆಂಗಸರನ್ನು ಸಾಲಿನಲ್ಲಿ ನಿಲ್ಲಿಸಿ ನಾವು ನಂತರ ನೋಡಿದರಾಯಿತು ಎಂದು ಊರು ಸುತ್ತ ಹೊರಟೆವು.
ಶ್ರೀರಂಗಂ ಎಂದರೆ ಗುಡಿಗೋಪುರಗಳ ನಗರ.ಶ್ರೀರಂಗಮ್‌ ಪಟ್ಟಣವು ಇತಿಹಾಸ ಪ್ರಸಿದ್ಧ. ಸುಮಾರು ಸಾವಿರ ವರ್ಷಗಳ ಇತಿಹಾಸಕ್ಕೆ ಸಾಕ್ಷಿಭೂತವಾಗಿದೆ. ದಕ್ಷಿಣದ ಪ್ರಮುಖ ರಾಜವಂಶಗಳಾದ, ಚೋಳರ, ಪಾಂಡ್ಯ , ಪಲ್ಲವ, ವಿಜಯ ನಗರದ ಅರಸರ ಕಾಣಿಕೆ ಪಡೆದ ಏಕಮೇವ ಕ್ಷೇತ್ರ . ಮೊಘಲರ ದಾಳಿಗೂ ತುತ್ತಾದರೂ ಉಳಿದು ಕೊಂಡು ಬಂದಿದೆ.ಶ್ರೀರಂಗಮ್‌ ಜಗತ್ತಿನಲ್ಲೇ ಸಕ್ರಿಯವಾಗಿರುವ ಅತ್ಯಂತ ದೊಡ್ಡ  ಹಿಂದೂ ದೇವಸ್ಥಾನ ಎನ್ನಬಹುದು..ಅದರ ವಿಸ್ತೀರ್ಣ ಸುಮಾರು 631,000 ಚ.ಮೀ. ಸುತ್ತಳತೆ  4ಕಿ.ಮೀಟರ್‌.

ದೇವಸ್ಥಾನದ  ಸಂಕೀರ್ಣವೇ 156 ಎಕರೆ. ವ್ಯಾಟಿಕನ್‌ಸಿಟಿಗಿಂತ ಒಂದೂವರೆ ಪಟ್ಟು ದೊಡ್ಡದು. ಇದರಲ್ಲಿ ಏಳು ಪ್ರಕಾರಗಳು. ಒಂದು ರೀತಿಯಲ್ಲಿ ಏಳು ಸುತ್ತಿನ ಕೋಟೆ..ಮೂರು ದಿಕ್ಕಿನಲ್ಲಿ ಕೋಟೆ  ಬಾಗಿಲುಗಳು.ಅದರಲ್ಲಿ 21 ಗೋಪುರಗಳು.ಅತ್ಯಂತ ಹೊರಗಿನ .ರಾಜ ಗೋಪುರವು 236 ಅಡಿ ಎತ್ತರ.ವಿದೆ ಏಷಿಯಾಖಂಡದಲ್ಲೇ ಅತ್ಯಂತ ಎತ್ತರದ ಗೋಪುರ.ಹೊರ ಗೋಪುರ ಅತ್ಯಂತ ಎತ್ತರ ಪೂರ್ತಿ ಒಳಗಿನದು ಕಿರಿದು .ಗರ್ಭ ಗುಡಿಯ ಮೇಲಿನ ಗೋಪುರ ಸುವರ್ಣಮಯ.. ಈ ಕ್ಷೇತ್ರದ ಅಧಿದೈವ . ಮಲಗಿದ ಭಂಗಿಯಲ್ಲಿರುವ ರಂಗನಾಥನದು ಬಹುಭವ್ಯವಿಗ್ರಹ. ಇದರ ಜೊತೆ ಆವರಣದಲ್ಲಿ ೫೩ ಉಪಸನ್ನಿಧಿಗಳಿವೆ.. ಎಂಟು ಸ್ವಯಂ ವೈಕುಂಠಗಲ್ಲಿ  ಪ್ರಮುಖವಾದುದು.  ಶ್ರೀ ರಾಮಾನುಜಾಚಾರ್ಯರು ತಮ್ಮ ಅಂತಿಮಕಾಲದಲ್ಲಿ ನೆಲಸಿದ್ದ ಸ್ಥಳ. ಅಲ್ಲಿ ಕಂಡು ಬಂದ ವಿಶೇಷತೆಯೆಂದರೆ ಶ್ರೀ ವೈಷ್ಣವ ಸಂಪ್ರದಾಯದ ಬಹುಸಂಖ್ಯಾತರು ತಮ್ಮ ಅಂತಿಮ ಕಾಲವನ್ನು ಕಳೆಯಲು ಇಲ್ಲಿಗೆ ಬಂದು ನೆಲಸುವರು. ಅನೇಕರು ಜೀವನದಲ್ಲಿ ಉನ್ನತ ಮಟ್ಟ ಸಾಧಿಸಿ ವೃತ್ತ  ಜೀವನವನ್ನು ದೈವಸನ್ನಿಧಿಯಲ್ಲಿ ಸ್ವಂತ ಅಥವ ಬಾಡಿಗೆ ಮನೆ ಪಡೆದು ಕೊನೆಗಾಲವನ್ನು ದೇವರ ಸೇವೆಯಲ್ಲಿಯೇ ಕಳೆಯುವರು.ಆದ್ದರಿಂದ ಹತ್ತಿರವಿರುವ ತಿರುಚಿ ನಗರಕ್ಕಿಂತ ಇಲ್ಲಿ ಜೀವನ ವೆಚ್ಚ ದುಬಾರಿ ಆದರೆ ಹಣ ಕುರಿತು ಯೋಚಿಸದೇ ಶ್ರಧ್ಧಾಳುಗಳು ಇಲ್ಲಿ ನೆಲಸಿರುವರು.
ಒಂದು ಕಾಲದಲ್ಲಿ ಎಲ್ಲ ಜನರು ಏಳು ಪ್ರಕಾರಗಳ ಒಳಗಿನ ಪ್ರದೇಶದಲ್ಲೇ ನೆಲಸಿದ್ದರು. ಇದು ಒಂದು ಸುಂದರ ದ್ವೀಪ ಪ್ರದೇಶ. ಕಾವೇರಿ ಮತ್ತು ಅದರ ಉಪನದಿಯಿಂದ ಸುತ್ತುವರಿದಿದಿದೆ. ಈಗ ಹೊರಗಿನ ಮೂರು ಪ್ರಕಾರಗಳಲ್ಲಿ ವ್ಯಾಪಾರ ವ್ಯ ವಹಾರ ಬಲುಜೋರು. ಇಲ್ಲಿನ ರೇಷ್ಮೆ ಸೀರೆ ಪಂಚೆ ಬಹಳ ಹೆಸರುವಾಸಿ.ಯಾತ್ರಿಕರಿಗೆ ಬೇಕಾದ ಎಲ್ಲವೂ ಲಭ್ಯ. ಹಣ್ಣು ಹೂವು,ಆಟಿಕೆ, ವಿಶೇಷವಾಗಿ ಪಾತ್ರೆಗಳು. ಅದನ್ನು ನೋಡಿದಾಗ ನೆಪಾಯಿತು ಯಾತ್ರೆಗೆ ಹೋಗಿ ಪಾತ್ರೆ ತಂದರು ಎಂಬ ಮಾತು. ಪಾತ್ರೆ ಅಂಗಡಿಗಳಲ್ಲಿ ದೇವರ ವಿಗ್ರಹ , ಪ್ರಭಾವಳಿ ದೀಪಸ್ಥಂಭ  ಮನೆ ಬಳಕೆಯ ಪಾತ್ರೆ ಪಡಗಗಳಿಗೆ ಈ ಪ್ಲಾಸ್ಟಿಕ್‌ಯುಗದಲ್ಲೂ ಬೇಡಿಕೆ ಇದೆ.
ಲ್ಲಿ ವಿಶಷವಾಗಿಕಂಡುಬಂದದ್ದು ಎದರೆ ಗಾರೆ ಕೆಲಸ ಮಾಡುವ ಕರಣಿಗಳ ಮರಾಟ. ಅಲ್ಲಿ ಸುಮಾರು ೧೫- ೨೦ ಅಂತಹ ಅಗಡಿಗಳು ಕಂಡುಬಂದವು. ಅವುಗಳಲ್ಲಿ ಹೆಬ್ಬೆರಳ ಗಾತ್ರ ದಿಂದ ಹಿಡಿದುದೊಡ್ಡ ಅಗೈ ಗಾತ್ರದವರೆಗಿನ ಕರಣಿಗಳು ಇದ್ದವು. ಬೆಸುಗೆ ಇಲ್ಲದ ಲೋದ ತಗಡಿನಿಂದ ಮಾಡಿರುವ ಕರಣಿಗಳು ಆಪ್ರಾಂತ್ಯದಲ್ಲೇ ಅತಿ ಪ್ರಸಿದ್ದ ಎಂದು ತಿಳಿದು ಬಂದಿತು..ಇನ್ನು ರಸ್ತೆಯ ಎರಡೂ ಬದಿಗೂ ತಂಡಿಯ ಅಂಗಡಿಗಳು. ಒಲೆಯ ಮೇಲಿನ ತಿಂಡಿಎಲೆಯಲ್ಲಿ ಹಾಕಿತಿನ್ನಲು ಕೊಡುವರು.ಅದಕ್ಕೂ ಸಾಲು ಸಾಲುಜನ. ಇನ್ನು ದೇಗುಲದ ಸಂಕೀರ್ಣದ ಒಳಗಿರುವ ಪ್ರಸಾದದ ಅಂಗಡಿಯಲ್ಲೂ ಜನ ಸಂದಣಿ. ಎಲ್ಲ ಅಗ್ಗದ ದರ. ದೊನ್ನೆಯಲ್ಲಿ ಹಾಕಿಕೊಟ್ಟದ್ದನ್ನು ಅಲ್ಲಿಯೇ ಕುಳಿತು ತಿನ್ನುವರು ನೂರಾರು ಯಾತ್ರಿಗಳು ಬಿಸಿಬಿಸಿಯಾದ ಪೊಂಗಲ್‌ ಪುಳಿಯೋಗರೆ ಕಜ್ಜಾಯ ಒಂದೇ ಎರಡೇ. ದೇವರ ಪ್ರಸಾದ ಎಂಬ ಧನ್ಯತೆಯ ಜೊತೆಗೆ ಬಾಯಲ್ಲಿ ನೀರೂರಿಸುವ ರುಚಿ.ವಿಶೇಷ ದರ್ಶನ ಎಂದು ೨೫೦ ರೂಪಾಯಿ ಕೊಟ್ಟರೂಮುರುನಾಲ್ಕು ಗಂಟೆ ಕಾಯಲೇ ಬೇಕು. ಒಳಗೆ ಹೋದನಂತರ ರಂಗನಾಥಥನ ಮುಖ ನೋಡಿದ ಮೇಲೆ ಪಾದ ನೊಡಲು ತಲೆಯನ್ನು ವಿರುದ್ಧ ದಿಕ್ಕಿಗೆ  ತಿರುಗಿಸಿದರೆ ಮಾತ್ರ ಕಾಣುವುದು. ಮೂರು ರಂಗನಾಥರುಗಳಲ್ಲಿ  ಅಂತ್ಯರಂಗವೇ ಅತಿ ಭವ್ಯ.ಕಾವೇರಿ ತೀರವೂ ಜನಸಾಗರ. ಇದು ಒಂದು ಶ್ರದ್ಧಾಕೇಂದ್ರವಾಗಿರುವುದರಿಂದ ಅಲ್ಲಿ ಪಿತೃಗಳಿಗೆ ಶ್ರಾಧ್ಧ ಮಾಡಿದರೆ ಪುಣ್ಯ ಪ್ರಾಪ್ತಿ ಎಂಬ ನಂಬಿಕೆ.ಎಲ್ಲಿ ನೋಡಿದರೂ ಕೇಶಮುಂಡನ ಮಾಡಿಸಿಕೊಂಡ ಧಾರ್ಮಿಕ ಕ್ರಿಯೆಯಲ್ಲಿ ತೊಡಗಿದ ಜನ.ಇನ್ನು ಸಾರಿಗೆ ವ್ಯವಸ್ಥೆಯೂ ಚೆನ್ನಾಗಿಯೇ ಇದೆ. ತಿರುಚಿಗೆ ದೇಶಾದ್ಯಂತದಿಂದ ರೈಲುಇದೆ. ಬಸ್ಸಿನ ಸೌಕರ್ಯವೂ ಇದೆ. ಸ್ಥಳೀಯವಾಗಿ ನಗರ ಸಾರಿಗೆ ಬಸ್ಸುಗಳು, ಕಾರು, ಅಟೋ ಜೊತೆಗೆ ಸೈಕಲ್‌ರಿಕ್ಷಾಗಳೂ ಇವೆ.. ಬ್ರಹ್ಮಾಂಡ ದರ್ಶನದ ಹೆಸರಲ್ಲಿ ಒಂದೇ ದಿನದಲ್ಲಿ ಶ್ರೀರಂಗಮ್‌ ತಲುಪಿದರು ಅಲ್ಲಿ ಎಲ್ಲವನ್ನೂ ಪೂರ್ಣವಾಗಿ ನೋಡಲು ಮೂರುದಿನಸಾಲದು ಎನ್ನಿಸಿತು.ಅಷ್ಟಿವೆ ಶಿಲ್ಪಮತ್ತು . ಚಿತ್ರಕಲೆಯ ಆಕರ್ಷಣೆ
 ಒಂದು ವಿಪರ್ಯಾಸ ವೆಂದರೆ ರಾಜಗೋಪುರದ ಎದುರಲ್ಲೇ ದೇವರು ಇಲ್ಲ ಎನ್ನುವ ಫಲಕಹೊಂದಿದ ಪೀಠದ ಮೇಲೆ ಪೆರಿಯಾರ್‌ ಪ್ರತಿಮೆ.. ಭಾರತದಲ್ಲಿವೈವಿದ್ಯತೆಯಲ್ಲಿ ಏಕತೆ ಇದೆ ಎನ್ನುವುದಕ್ಕೆ ಸಾಕ್ಷಿ. ಅದರ ಪಕ್ಕದಲ್ಲೇ ಒಂದು ಪೋಲೀಸು ವ್ಯಾನ್‌ ಅದೂ ಕೆಟ್ಟು ನಿಂತಿರುವುದು ಬಹು ಸಾಂಕೇತಿಕ.ವಿಚಾರವಾದಿಗಳ ವಿರೋಧದ ಹೊರತಾಗಿಯು ಈ ಶ್ರದ್ಧಾ ಕೇಂದ್ರಕ್ಕೆ ಬರುವ ಜನ ಸಂದಣಿ ನೋಡಿದರೆ ಪರಂಪರೆಯ ಪ್ರಜ್ಞೆಯ ಗಾಢತೆಯ ಅರಿವಾಗುವುದು.
























No comments:

Post a Comment