Wednesday, February 19, 2014

ಹಸ್ತ ಪ್ರತಿ ಅಭಿಯಾನ-೭

ಅಭಿಯಾನದ ನಿರ್ಧೇಶಕರು

                               



 ಸದ್ದಿಲ್ಲದೆ ಸಮಾರೋಪ  

ಹಸ್ತ ಪ್ರತಿ ಕಾರ್ಯಾಗಾರದ ಕೊನೆಯ ದಿನದ ಕಾರ್ಯಕ್ರಮ  ಗರಿಗಳ ಕಟ್ಟುವುದು. ಸುಮಾರು ೧೨೦ ಕೃತಿಗಳ ಶುದ್ದೀಕರಣ , ತೈಲೀಕರಣ  ಮತ್ತು ಸೂಚಿ ತಯಾರಿಕೆಯನ್ನು  ಯಶಸ್ವಿಯಾಗಿ ಮುಗಿಸಿ ರಟ್ಟು ಮತ್ತು ಬಟ್ಟೆ ಕಟ್ಟುವ ಕೆಲಸ ಮಾತ್ರ ಬಾಕಿ ಉಳಿಸಿಕೊಂಡಿದ್ದರು.ನಮ್ಮಲ್ಲಿ ಬಹುತೇಕ ಕಟ್ಟುಗಳಿಗೆ ಕಟ್ಟಿಗೆಯ ಪಟ್ಟಿಇರಲೇ ಇಲ್ಲ.ಇನ್ನು ಬಟ್ಟೆಯ ಮಾತು ದೂರ ಉಳಿಯಿತು. ಸಾಧಾರಣವಾಗಿ ಗರಿಯ ಕಟ್ಟನ್ನು ಭದ್ರವಾಗಿಸಲು  ಹಿಂದೆ ಸಾಗುವಾನಿ ಕಟ್ಟಿಗೆಯ ಪಟ್ಟಿಗಳನ್ನು ಬಳಸುತಿದ್ದರು ಸಾಗುವಾನಿ ಮರದ  ಬೆಲೆ ಕೈಗೆಟುಕದಷ್ಟು ದುಬಾರಿ. 
ಅಲ್ಲದೆ ಈಗ ಜಲನಿರೋಧಕ ಕಾರ್ಡ ಬೋರ್ಡಗಳು ಬಂದಿವೆ.  ೧ಸೆಂಟಿ ಮೀಟರ್‌ದಪ್ಪದ ಬೋರ್ಡಗಳನ್ನು ಸುಲ್ತಾನ್‌ ಪೇಟೆಯಿಂದ ತರಲಾಯಿತು ಆಗಲೇ ಅವನ್ನು ೨, ೩ ೪,  ಮತ್ತು ೫ ಅಂಗುಲ ಅಗಲದ ಪಟ್ಟಿಗಳನ್ನಾಗಿ ಕಟಿಂಗ್‌ ಮೆಷಿನ್‌ನ ಮೂಲಕ ಕತ್ತರಿಸಿ ತರಲಾಯಿತು ನಂತರ ಅವನ್ನು ಗರಿಗಳ ದ್ದಕ್ಕೆ  ಅನುಗುಣವಾಗಿ ಅಡ್ಡಡ್ಡವಾಗಿ ಕತ್ತರಿಸಲಾಯಿತು.ಬೋರ್ಡು ಬಿಳಿಯದ್ದಾಗಿರುವುದರಿಂದ ಅದರ ಮೇಲೆ ಗುರುತಿಸಲು ಅಗತ್ಯವಾದ ವಿವರ ನಮೂದಿಸ ಬಹುದಾಗಿತ್ತು.ಬಟ್ಟೆಯಂತೂ ನ ಸಿದ್ದವಾಗಿಯೇ ಇದ್ದಿತು. ಸಾಧಾರಣವಾಗಿ ಕ್ರಿಮಿ ನಿರೋಧಕ ಕೆಂಪುಬಣ್ನದ ಬಟ್ಟೆಯ್ನ್ನೇ ಬಳಸ ಲಾಗುವುದುಅವನ್ನು ನೀರಲ್ಲಿ ಲ್ಲಹಾಕಿ ಒಣಗಿಸಲಾಗಿತ್ತು  ಕಾರಣ ಅದು ಗಂಜಿರಹಿತವಾಗಿರ ಬೇಕು.  ಕೆಳದಿಯ ಹಿರಿಯ  ಹಸ್ತಪ್ರತಿ ಸಂಶೋಧಕ ಡಾ. ಕೆಲದಿಗುಂಡಾ ಜೋಯಿಸರು  ಸುಮಾರು ೫೦ಮೀಟರ್‌ ಬಟ್ಟೆಯನ್ನು ತಂದು ಕೊಟ್ಟದ್ದರುಅದೆಲ್ಲವೂ ಬಳಕೆ ಯಾಯಿತು. ಮಧ್ಯಾಹ್ನದ ಊಟದ ಸಮಯದ ಹೊತ್ತಿಗೆ  ೧೨೦ ಬಿವಿಧ ಗಾತ್ರದ ಕೆಂಪು ಹಸ್ತ ಪ್ರತಿ ಕಟ್ಟುಗಳು ಕಣ್ಣು ಸೆಳೆಯುತಿದ್ದವು
ತರಬೇತಿಯನ್ನು ತೃಪ್ತಿಕರವಾಗಿ ಮುಗಿಸಿದ್ದ ಸಂತಸ ದಿಂದ ಮಕ್ಕಳು ಬೀಗುತಿದ್ದರು.  ಪ್ರತಿ ದಿನ ಉತ್ತಮ ಸಾಧಕರಿಗೆ ಪ್ರಶಸ್ತಿ ನೀಡುವ ನಮ್ಮ ಯೋಜನೆ ಫಲಕಾರಿಯಾಗಿತ್ತು .  ಪೈಪೊಟಿಯಲ್ಲಿ ಕೆಲಸ ಮಾಡಿ ಗುರಿ ಮೀರಿ ಕೆಲಸಮಾಡಿದ್ದರು. ಹೆಚ್ಚಿನ ನಮ್ಮಲ್ಲಿ ಹೆಚ್ಚಿ ಸಂಖ್ಯೆಯಲ್ಲಿ ಹುಡುಗಿಯರೇ ಇದ್ದರು. ಊಟಕ್ಕೆ ಹೋಗುವ ತಾವು ದೂರದ ಸ್ಥಳ ದಿಂದ ಬರುವುದರಿಂದ ಆರು ಗಂಟೆಯ ಒಳಗೆ ಹೋಗುವುದಾಗಿಯೂ ತಮ್ಮ ಪ್ರಮಾಣ ಪತ್ರಗಳನ್ನು ನಂತರ ಪಡೆಯುವುದಾಗಿತಿಳಿಸಿದರು.ಮುಂಚಿತವಾಗಿ  ಊಟ ಮುಗಿಸಿ  ತೆರಳಲು ಅನುಮತಿ ಬೇಡಿದರು. ಅವರ ಮನವಿಯಿಂದ ತುಸು ಗಲಿಬಿಲಿಯಾಯಿತು. ಅಂದು ಸಂಜೆ ೬.೩೦ ಕ್ಕೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರಿಗೆ ಪ್ರಮಾಣ ಪತ್ರ ನೀಡುವ ಯೋಜನೆಇತ್ತು.
ನಮ್ಮ ಕಾರ್ಯಾಗಾರದ ಉದ್ಘಾಟನೆ ತುಸು ವಿಚಿತ್ರವಾಗಿಯೇ ನಡೆದಿತ್ತು.  ಬೆಳಗ್ಗೆ ಹತ್ತೂವರೆಗೆ ಇದ್ದ ಕಾರ್ಯಕ್ರಮಕ್ಕೆ ಏಲ್ಲ ತಯಾರಿಯೂ ನಡೆದು ಅತಿಥಿಗಳು  ಅಧ್ಕ್ಷಕ್ಷರು ಪದಾದಿಕಾರಿಗಳೂ  ಸಮಯಕ್ಕೆ ಸರಿಯಾಗಿ ಬಂದಿದ್ದರು. ಅಲ್ಲದೆ ಪತ್ರ ಕರ್ತರು ಕ್ಯಾಮರಾಮನ್‌ಗಳೂ ಹಾಜರಿದ್ದರು.ಹತ್ತೂವರೆಯಾಯಿತು ಹನ್ನೊಂದು ಆಯಿತು ವಿದ್ಯಾರ್ಥಿಗಳ ಸುಳಿವಿಲ್ಲ. ಬಂದ ಒಬ್ಬಿಬ್ಬರ ಪ್ರಕಾರ ಮಹಿಳಾಕಾಲೇಜಿನ  ವಿದ್ಯಾರ್ಥಿಗಳ ಸಹಪಾಠಿಯ ಮದುವೆ ಬೆಳಗ್ಗೆ ಇದ್ದುದರಿಂದ ಎಲ್ಲರೂ ಅದಕ್ಕೆ ಹಾಜರಿ ಹಾಕಿ ನಂತರ ಬರುವರು ಎಂಬ ಮಾಹಿತಿ ಬಂದಿತು.ಬಹುಶಃ ಸಂಚಾರ ದಟ್ಟಣೆಯಿಂದ ಅವರಿಗೆ ಬರಲಾಗಿಲಿಲ್ಲ  ವರನಿಲ್ಲದ ವಿವಾಹ ಮಂಟಪವಾದಂತೆ ಇತ್ತು ನಮ್ಮ ಸಭಾಂಗಣ. ಕೊನೆಗೆ  ಬಂದಿದ್ದ ಏಳೆಂಟು ವಿದ್ಯಾರ್ಥಿಗಳನ್ನೇ ಸಂದರ್ಶಿಸಿ ಫೋಟೋ ತೆಗೆದು ತಮ್ಮ ಇನ್ನೊಂದು ಕಾರ್ಯಕ್ರಮಕ್ಕೆ ಪತ್ರ ಕರ್ತರು ಧಾವಿಸಿದರು
.ಅವರು ಹೊದ ಹತ್ತು ನಿಮಿಷದಲ್ಲೇ ವಿದ್ಯಾರ್ಥಿಗಲೆಲ್ಲರೂ ಬಂದರು ಅವರ ಜೊತೆ ಪ್ರಧ್ಯಾಪಕರೊಬ್ಬರೂ ಬಂದಿದ್ದರು  ಹನ್ನೆರ ತನಕ ಕಾದಿದ್ದ ಅದ್ಯಕ್ಷರುಮತ್ತು ಅತಿಥಿಗಳೂ ನಿರ್ಗಮಿಸಿದ್ದರು  ಈಗ ಎಲ್ಲ ೨೫ ವಿದ್ಯಾರ್ಥಿಗಖು ಬಂದಿರುವರು. ಅತಿಥಿಗಳೇ ಇಲ್ಲ.ಅಕ್ಕಿಇಲ್ಲದಿದ್ದರೆ ಅಡುಗೆ ಕಷ್ಟ  ಅಕ್ಕ ಇಲ್ಲದಿದ್ದರೆ ಯಾರಾದರೂ ಅಡುಗೆ ಮಾಡಿಯಾರು ಎಂ ಬಮಾತಿನಂತೆ ಇದ್ದ ನಾವೇ ಜ್ಯೋತಿ ಬೆಳಗಿಸಿ ಕಾರ್ಯಾಗಾರಕ್ಕೆ ಚಾಲನೆ ನೀಡಿದೆವು. ಅಂದೇ ಅವರಿಗೆ ಕಾರ್ಯಾಗಾರದಲ್ಲಿ ಕೆಲಸದಷ್ಟೇ ಶಿಸ್ತು ಮುಖ್ಯ. ಎಂದು ಮನದಟ್ಟು ಮಾಡಿದೆವು. ನಂತರ ಯಾವುದೇ ಸಮಸ್ಯೆ ಬರಲಿಲ್ಲ.ಈ ಅನುಭವದಿಂದ ಅದ್ಧೂರಿಯಾಗಿ ಸಮಾರೋಪ ಮಾಡಲು ಹಿಂಜರಿಕೆ .ಕೊನೆಯದಿನ ಸಂಶೋಧನ ದಿನ ಮತ್ತುನಿವೃತ್ತ  ಕಾರ್ತ ದರ್ಶಿಗಳಿಗೆ ಸನ್ಮಾನ ಸಮಾರಂಭವಿತ್ತು, ಸಂಜೆ ಆರುವರೆ ಗಂಟೆಗೆ ನಿಗದಿ ಮಾಡಲಾಗಿತ್ತು 
ನಮ್ಮ ಕಾರ್ಯಾಗಾರದ ವಿದ್ಯಾರ್ಥಿಗಳಿಗೂ ಅದೇ ಸಮಾರಂಭದಲ್ಲಿಪ್ರಮಾಣ ಪತ್ರ ವಿತರಣೆ   ಮಾಡಲುನಿರ್ಧರಿಸಿದ್ದೆವು.ಅಂದರೆ ನಮ್ಮದು ತ್ರೀ ಇನ್‌ ಒನ್‌ ಕಾರ್ಯ ಕ್ರಮ.ನಮ್ಮ ಹಸ್ತ ಪ್ರತಿ   ಸ್ಕ್ಯಾನಿಂಗ್‌ಕೆಲಸವೂ ನಡೆಯುತಿದ್ದುದು  ಹಾಗೆಯೇ.. ನಮ್ಮಲ್ಲಿ ಇದ್ದುದುದು  ನಮ್ಮದು ತ್ರೀ ಇನ್‌ ಒನ್‌  -ರಿಂಟರ್‌. ಒಂದರಲ್ಲೆ ಪ್ರಿಂಟಿಂಗ್, ಜೆರಾಜ್ಸ್‌ ಮತ್ತು ಸ್ಕ್ಯಾನಿಂಗ್‌ ಕೆಲಸ ನಡೆಯಬೇಕಿತ್ತು ಕಚೇರಿಯ ಕೆಲಸದ ನಡುವೆ ಬಿಡುವಿನಲ್ಲಿ ನಮ್ಮ ಕೆಲಸ ಮಾಡಿಕೊಳ್ಳಲಾಗುತಿತ್ತು. ಸಂಸ್ಥೆಗ ಸರಸ್ವತಿ ಕೃಪೆ ಧಾರಾಳವಾಗಿದ್ದರೂ ಲಕ್ಮಿ ಕೃಪೆ  ಬಹು ಸೀಮಿತ. ಅದರಿಂದ ಈ ರೀತಿಯ ಹೊಂದಾಣಿಕೆ ನಮಗೆ ಒಗ್ಗಿ ಹೋಗಿತ್ತು
ಮೊದಲದಿನದ  ಅನುಮಾನ ದೂರವಾಗಿತ್ತು ಅಭ್ಯರ್ಥಿಗಳು ಬಹಳಶಿಸ್ತು ಮತ್ತು ಶ್ರದ್ಧೆಯಿಂ ಕೆಲಸ ಮಾಡಿದ್ದರುಊಟಕ್ಕ ನಾವೇ ಒತ್ತಾಯದಿಂದ ಕಳುಹಿಸುತಿದ್ದೆವು.ಅದರ ಫಲ ಸುಮಾರು ೧೨೦ ಕೃತಿಗಳು ಕೆಂಪು  ಉಡುಗೆ ಯುಟ್ಟು ಕೂತಿದ್ದವು. ಇಂದು ಇತಿಹಾಸದ ಪುನರಾವರ್ತನೆಯಾಗಲಿತ್ತು ವಿದ್ಯಾರ್ಥಿಗಳ ಸಮಸ್ಯೆ ನೈಜವಾಗಿತ್ತು  ವಿದ್ಯಾರ್ಥಿಗಳ ಅನುಕೂಲವಕ್ಕಾಗಿ ಪ್ರಮಾಣ –ತ್ರ ವಿತರಣೆಯನ್ನು ಮುಂಚಿತವಾಗಿ ಮಾಡಲು ನಿರ್ಧರಿಸಿದೆವು, ಸಂಸ್ಥೆಯ ಪದಾಧಿಕಾರಿಗಳಿಗಉ ವಿಷಯ ತಿಳಿಸಿ ಮುಂಚಿತವಾಗಿ ಬರಲು ದೂರವಾಣಿಯ ಮೂಲಕ ಕೋರಲಾಯಿತು. ಮೂಖ್ಯ ಅತಿಥಿಗಳಾ ಡಾ.. ಪರಮಶಿವಯ್ಯನವರು ತುಮುಕೂರು ವಿಶ್ವ ವಿದ್ಯಾನಿಲಯದ ಡಿವಿ. ಜಿ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರು. ಅವರಿಗೆ ಸಂಜೆ ಆರೂವರೆಗೆ ಕಾರ್ಯಕ್ರಮವೆಂದು ತಿಳಿಸಲಾಗಿತ್ತು.ಅವರಿಗೂ ಸಾಧ್ಯವಾದಷ್ಟು ಬೇಗ ಬರಲು ಕೋರಲಾಯಿತುನಾಲ್ಕು ಗಂಟೆಗೆ ಮನೆಂಜನೆ ಕಾರ್ಯಕ್ರಮ ಮೊದಲಾಸವು. ಕಾರ್ಯಕ್ರಮ ಮೊದಲಾದ ಮೇಲೆ ಒಬ್ಬೊಬ್ಬರಾಗಿ ಗಣ್ಯರು ಬಂದರು ಆದರೆ ವಿದ್ಯಾರ್ಥಿಗಳೆಲ್ಲರೂ ಇದ್ದರು ಅತಿಥಿಗಳಿಗೆ ಕಾಯದೆ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು.ಮಕ್ಕಳಿಗೆ ಪ್ರಶಸ್ತಿ ಪತ್ರದ ಜೊತೆಗೆ ಜೊತೆಗೆ ಹತ್ತು ಪುಸ್ತಕಗಳನ್ನೂ ನೀಡಲಾಯಿತು 
ಅದರಿಂದ ’  ತಲೆ  ಜ್ಞಾನದಿಂದ , ಮನ ಭಾವದಿಂದ  ಕೈಗಳು  ಪುಸ್ತಕಗಳ ಭಾರದಿಂದ ತುಂಬಿ ಹೋಗಿದೆ ’ಎಂಬ ವಿದ್ಯಾರ್ಥಿಯ ಮಾತು ಎಲ್ಲರೂ ತಲೆ ದೂಗುವಂತೆ ಮಾಡಿತ್ತು. ಅದೃಷ್ಟಕ್ಕೆ ಡಾ.ಪರಮಶಿವಯ್ಯನವರೂ ಬಂದರು,   ಎಲ್ಲರಿಗೂ ಅವರೇ  ಪ್ರಶಸ್ತಿಪತ್ರ ವಿತರಿಸಿ ಮಾತನಾಡಿದರು. ಅವರ ಪ್ರಕಾರ ವಿಶ್ವವಿದ್ಯಾಲಯಮಾಡಬೇಕಾಗಿದ್ದ ಕೆಲಸವನ್ನು ಕೈಗೆತ್ತಿಕೊಂಡಿರುವ  ಬಿ. ಎಂ. ಶ್ರೀ ಪ್ರತಿಷ್ಠಾನ, ಹಸ್ತ ಪ್ರತಿ . ಅಭಿಯಾನ ಮತ್ತು ಅದರ ರೂವಾರಿಯನ್ನು  ಅಭಿನಂದಿಸಿದರು
ಅಭಿಯಾನದ ನಿರ್ದೇಶಕರು  ಮೂವತ್ತು ವರ್ಷಗಳ ಹಿಂದೆ ಶ್ರಮಪಟ್ಟು ಹಸ್ತ ಪ್ರತಿ  ಸಂಗ್ರಹಿಸಿದ್ದ  ಪ್ರೊ. ಎಂ. ವೀ. ಸೀತಾರಾಮಯ್ಯನವರ ಕನಸು ನನಸಾಗಿದೆ, ಅವರ ಎರಡು ಆಶಯಗಳ ಪೂರೈಕೆಗೆ ಚಾಲನೆ ದೊರೆತಿದೆ. ಮೊದಲನೆಯದಾಗಿ ಹಸ್ತಪ್ರತಿಗಳ ಅಧ್ಯಯನ ಪ್ರಾರಂಭವಾಗಿದೆ ಮತ್ತು ಆಕಾರ್ಯ ನಿರ್ವಹಿಸಲು ಯುವ ಪಡೆಯೇ ಸಿದ್ಧವಾಗಿದೆ.ಅದನ್ನು ನಾಡಿನಾದ್ಯಂತ ವಿಸ್ತರಿಸುವ ಆಶಯವಿದೆ ಎಂದು ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದರು. ಅಧ್ಯಕ್ಷರು ಹಸ್ತ ಪ್ರತಿಗಳು ನಮ್ಮ ಭಾವಲೋಕಕ್ಕೆ ಹತ್ತಿರವಾದವು ಅವುಗಳಿಂದ  ಪರಂಪರೆಯ ಮುಂದುವರಿಕೆ ಸಾಧ್ಯ .  ವಿರದಲ್ಲಿ ಒಂದು ವಿರಳ ಕೃತಿ ಬೆಳಕಿಗೆ ಬಂದರೂ ಶ್ರಮ ಸಾರ್ಥಕ, ಈ ವಿದ್ವತ್‌ ಸಂಸ್ಥೆಯು ಯುವ ಜನರನ್ನು ತೆರೆದ ಬಾಗಿಲು, ತೆರೆದ ತೋಳು ಮತ್ತು ತೆರೆದ ಹೃದಯದಿಂದ ಸ್ವಾಗಿತಿಸಿ ಜ್ಞಾನ ಪಥದಲ್ಲಿ ಸಕಲ ಮಾರ್ಗದರ್ಶನ ಮಾಡುವ ಆಶ್ವಾಸನೆ ನೀಡಿದರು.  ವಿದ್ಯಾರ್ಥಿಗಳ ಶ್ರದ್ಧೆ, ಶ್ರಮವನ್ನು ಮತ್ತು ಸಾಧನೆಯ ಪ್ರತೀಕವಾಗಿ  ೧೨೦ ಹಸ್ತ ಪ್ರತಿಗಳ ಕಟ್ಟುಗಳು ಕಂಗೊಳಿಸುತಿದ್ದವು.. 
ಮುಂದೆ ಸಂಘಟಿಸುವ .ಹಸ್ತ ಪ್ರತಿ ಕಾರ್ಯಾಗಾರದಲ್ಲಿ ತಾವೂ ಕೈ ಜೋಡಿಸುವ ಆಸೆ ವ್ಯಕ್ತ ಪಡಿಸಿದರು. .ವಿದ್ವತ್‌ಸಂಸ್ಥೆಯ ಸಂಪರ್ಕವನ್ನು ಮುಂದುವರಿಸಿ ಮಾರ್ಗದರ್ಶನ ಪಡೆಯುವ ನಿರ್ಧಾರ ಅವರದಾಗಿತ್ತು. ವಿದ್ಯಾರ್ಥಿಗಳು  ಭಾರವಾದ ಹೃದಯದಿಂದ ವಿದಾಯ ಹೇಳಿದರು. ಗಡಿ ಬಿಡಿಯಲ್ಲಿ ಪ್ರಾಂಭವಾಗಿದ್ದ ಕಾರ್ಯಾಗಾರವು ಗಂಭೀರವಾಗಿ  ಮುಕ್ತಾಯ ಕಂಡಿತು





No comments:

Post a Comment