Tuesday, February 18, 2014

ಅಭಿಯಾನ -೬

ಹಸ್ತ ಪ್ರತಿ ಸಂರಕ್ಷಣೆ
ಎಚ್‌.ಶೇಷಗಿರಿರಾವ್‌








 ಕಾರ್ಯಾಗಾರೆದ ಅಂತಿಮ ಹಂತದ ಕೆಲಸ ಎಂದರೆ ಹಸ್ತ ಪ್ರತಿಗಳನ್ನು ಸುರಕ್ಷಿತವಾಗಿ ಬಹಳಕಾಲದವರೆಗೆ ಸಂರಕ್ಷಿಸಿ ಇಡುವುದು.ಅದಕ್ಕೆ ಈಗಾಗಲೇ ಸಿದ್ಧವಾದ ಭೌತಿಕ ವಿಧಾನಗಳಿವೆ.. ಅವೆಲ್ಲಕ್ಕಿತ ಅತ್ಯುತ್ತಮ ವಿದಾನವೆಂದರೆ ಹಸ್ತಪ್ರತಿಗಳನ್ನು ಡಿಜಿಟೀ ಲೀಕರಣ ಮಾಡಿ ಇಡುವುದು. ತಾಳೆಗರಿಗಳನ್ನು ಎಷ್ಟೇ ಎಚ್ಚರಿಕೆಯಿಂದ ಕಾಪಡಿಕೊಂಡರು ಅವುಗಳ ಜೀವಾವಧಿ ಹಲವು ನೂರು ವರ್ಷಗಳು. ಆದರೆ ನಿರ್ಲಕ್ಷ್ಯಕ್ಕೆ ಗುರಿಯಾದರೆ ಹುಳು, ಹುಪ್ಪಡಿ , ಕ್ರಿಮಿ ಕೀಟಗಳು ಇಟ್ಟಲ್ಲೇ ಮುಟ್ಟಿದರೆ ಪುಡಿಯಾಗುವಂತೆ ಮಾಡಿದರೆ  ನೈಸರ್ಗಿಕ ಅವಘಡಗಳಾದ  ಭೂಕಂಪ, ಬಿರುಗಾಳಿ, ನೆರೆಹಾವಳಿಗಳಿಂದ ಮನೆ ಮಠಗಳೇ ನೆಲ ಸಮವಾದಾಗ ಜನರೇ ನಿರ್ಗತಿಕರಾದಾಗ ತಾಳೆಗರಿಗಳನ್ನು ಕೇಳುವವರು ಯಾರು.. ಈ ದಿಶೆಯಲ್ಲಿ ಸರ್ಕಾರ ಮತ್ತು ಸಂಸ್ಥೆಗಳು ಪ್ರಯತ್ನ ಪಡುತ್ತಲೇ ಇವೆ.ವಿಶೇಷವಾಗಿ ಸರಕಾರಿ ಹಸ್ತ ಪ್ರತಿ ಸಂಗ್ರಹಾಲಯಗಳು,ತಮ್ಮಲ್ಲಿರುವ ಹಸ್ತ ಪ್ರತಿಗಳನ್ನು ಕಾಲದಿಂದ ಕಾಲಕ್ಕೆ ಅಗ ಲಭ್ಯವಿರುವ ತಂತ್ರಜ್ಞಾನವನ್ನು ಬಳಕೆ ಮಾಡಿ ಸಂರಕ್ಷಿಸುವ  ಪ್ರಯತ್ನ  ಮಾಡಿರುವರು.
ಈಗಾಲೇ  ಬಳಕೆಯಲ್ಲಿ ರುವ  ತೈಲ ಲೇಪನ,ದಿಂದ ಗರಿಗಳು ಸದೃಢವಾದರೆ ಧೂಮ್ರೀಕರಣದಿಂದ ಕ್ರಿಮಿಕೀಟಗಳನ್ನು ನಾಶಮಾಡಿ ಹಸ್ತ ಪ್ರತಿಗಳ ಸಂರಕ್ಷಣೆ ಮಾಡಲಾಗುವುದು.,
ಹಸ್ತ ಪ್ರತಿಗಳು ಭೌತಿಕವಾಗಿ ನಾಶವಾದರೂ ಅವುಗಳಲ್ಲಿನ ವಿಷಯವನ್ನು ಭದ್ರವಾಗಿ ಇಡುವ ಮೊಟ್ಟಮೊದಲ ಪ್ರಯತ್ನ ಎಂದರೆ ಮೈಕ್ರೊ ಫಿಲ್ಮ್‌ ನಲ್ಲಿ ಸಂಗ್ರಹ .೧೯ನೆಯ ಶತಮಾನದಲ್ಲೇ  ನಾಂದಿ ಹಾಡಲಾಯಿತು.ಇಟಲಿಯ ಟ್ಯೂರಿನ್‌ ನಗರದ ಗ್ರಂಥಾಲಯ ಬೆಂಕಿಗೆ ಆಹುತಿಯಾದಾಗ ಅಲ್ಲಿನ ಅರ್ಧಕ್ಕಿಂತ ಅಧಿಕ ಗ್ರಂಥಗಳು  ಬೆಂಕಿಗೆ ಆಹುತಿಯಾದವು . ಇಂಥಹ ದುರ್ಘಟನೆಗಳಿಂದ ವಿರಳವಾದ ಜ್ಞಾನ ಭಂಡಾರವನ್ನುಉಳಿಸಿಕೊಳ್ಳುವಬಗ್ಗೆ ಚಿಂತನೆ ಮೊದಲಾಯಿತು.
ಗ್ರಂಥ ಬಂಡಾರಗಳನ್ನು ನಾಶಮಾಡುವುದು  ಪುಸ್ತಗಳನ್ನು ಸುಟ್ಟು ಹಾಕುವುದ ವಿದೇಶಿ ದಾಳಿಕೋರರ ಹಳೆಯ ಹವ್ಯಾಸ. ಇದಕ್ಕೆ ಕಾನಸ್ಟೆಂಟಿನೋಪಲ್‌, ನಳಂದಾ ತಕ್ಷ ಶಿಲಾ,ಮಾಯಾಸಂಸ್ಕೃತಿಯ ತೊಟ್ಟಿಲಾದ ಮಧ್ಯ ಅಮೇರಿಕಾಗಳೇ ಸಾಕ್ಷಿ. ಇದಕ್ಕೆ ಕಾರಣ ಧಾರ್ಮಿಕ ಅಸಹಿಷ್ಣತೆ ಮತ್ತು ಸಾಮ್ರಾಜ್ಯ ಶಾಯಿ ಮನೋಭಾವನೆ. ಒಂದು ಜನಾಂಗವನ್ನು ದಾಸ್ಯಕ್ಕೆ ತಳ್ಳಲು ಅವರ ಸಂಸ್ಕೃತಿಯ ನಾಶ ಸುಲಭದ ದಾರಿ ಎಂದುಕೊಂಡವರು ಮಾಡುವ  ಕೆಲಸ ತಾವು ಜಯಿಸಿದಾಗ ಮೊದಲು ಮಾಡುವ ಕೆಲಸ ಭಾಷೆ, ಸಾಹಿತ್ಯ,ನಂಬಿಕೆ,  ಆಚಾರ ವಿಚಾರಗಳಲ್ಲಿ ಬದಲಾವಣೆ ತರುವುದು.ಯಾವುದೇ ಕಾರನಚಿರಲಿ ಅಮೂಲ್ಯ ಪುಸ್ತಕ ಮತ್ತು ದಾಖಲೆಗಳನ್ನ ಸ\ರಕ್ಷಿಸ ಡುವ ಪ್ರಯತ್ನ ವಿಶ್ವದಲ್ಲಿ ೧೯೫೬ ರಲ್ಲಿ ಮೊದಲಾಯಿತು. ಈ ವಿರಳ ಕೃತಿಗಳ ಫೊಟೊ ಗ್ರಾಫಿಕ್‌ ಪ್ರತಿ ಪಡೆಯಲು ಯುನೆಸ್ಕೊ ಒಂದುವಿಶೇಷ ಘಟಕವನ್ನೆ ಸ್ಥಾಪಿಸಿತು. ಅದು ಜಗತ್ತಿನಾದ್ಯಂತದ  ವಿರಳ ಕೃತಿಗಳ ಮೈಕ್ರೋ ಫಿಲ್ಮ್‌ ದಲ್ಲಿ ಸಂಗ್ರಹ ಮಾಡಲು ಅಭಿಯಾನ ಪ್ರಾರಂಭಿಸಿತು.  ಮೈಕ್ರೋ ಫಿಲ್ಮಗಳಲ್ಲಿ ಎರಡು ವಿಧದವು ಇವೆ.. ಒಂದು ಪಾರದರ್ಶಕ ಫಿಲ್ಮ ಮತ್ತೊಂದು ಅಪಾರದರ್ಶಕ  ಕಾರ್ಡ್‌ಗಳು.ಅವುಗಳನ್ನು ಪರದೆಯ ಮೇಲೆ ದೊಡ್ಡದಾಗಿಸಿ ನೊಡಬಹುದು.  ಇವುಗಳನ್ನುಓದಲು ವಿಶೇಷ ವಾದ ಉಪಕರಣದ ಅಗತ್ಯವಿದೆ.ಅವನ್ನು ಮೈಕ್ರೊ ಫಿಲ್ಮ್‌ರೀಡರ್‌ ಎನ್ನುವರು.
 ಈ ಉಪಕರಣವನ್ನು ಮೊದಲು ಕತ್ತಲೆ ಕೋಣೆಯಲ್ಲಿ ಇಡಬೇಕಾಗಿತ್ತು.ಈಗ ತಂತ್ರ ಜ್ಞಾನ ಅಭಿವೃದ್ಧಿಯಾಗಿದೆ. ಮೈಕ್ರೋ ಫಿಲ್ಮಗಳು ಈಗ ಪ್ರಾಚೀನ ಪತ್ರಾಗರದಲ್ಲಿ ಇಡಲಾಗಿವೆ.ಆದ ಕಾಂಪ್ಯೂಟರ್‌ಗಳ ಅನ್ವೇಷಣೆಯೀಮದ ಸಂಗ್ರಹಣೆಯ ,ಕೆಲಸ ಸುಲಭವಾಗಿದೆ ಇದುವರೆಗೆ ಗ್ರಂಥಾಯವುಕ್ಕೆ ಓದುಗರು ಬರಬೇಕಿತ್ತು. ಈಗ ಓದುಗರಲ್ಲಿಗೆ ಗ್ರಂಥಾಲಯ ಬರುತ್ತದೆ.
ಮೈಕ್ರೊ ಫಿಲ್ಮಗಳನ್ನು ಸೂಕ್ತ ರೀತಿಯಲ್ಲಿ ಸಂರಕ್ಷಿಸಿ ಇಟ್ಟರೆ ಅವುಗಳ ಜೀವಿತಾವಧಿ ಸರಿ ಸುಮಾರು  ೯೦೦ ವರ್ಷಗಳು ಮೈಕ್ರೊ ಫಿಲ್ಮ್‌ನ ಮೂಲ ಉದ್ದೇಶ ಅಪಾರ ಮಾಹಿತಿ ಯನ್ನ ಅತಿಸೂಕ್ಷ್ಮ ರೂಪದಲ್ಲಿ ಅಡಕಿಸುವುದು ಮತ್ತು  ಸ್ಥಳಾವಕಾಶದ ಕೊರತೆ ಬರದಂತ ನೊಡಿಕೊಳ್ಳುವುದು.  ಈಗ ಡಿಜಿಟಲೈಜೇಷನ್‌ ಮಾಡುವುದರಿಂದ ಸಂಗ್ರಹಣೆಯ ಸಮಸ್ಯೆ ತಾನೇ ತಾನಾಗಿ ಪರಿಹಾರ ಕಂಡು ಕೊಂಡಿದೆ. ದತ್ತಾಂಶವನ್ನು ಒಂದಲ್ಲ ಹಲವು  ರೀತಿಯಲ್ಲಿ ಸಂಗ್ರಹಿಸಬಹುದು. ಸರ್ವರ್‌ಗಳಲ್ಲಿ, ಕಾಪ್ಯೂಟರ್‌ನಲ್ಲಿ, ಎಕ್ಸ ಟರ್ನಲ್‌ ಹಾರ್ಡ ಡಿಸ್ಕ್‌ಗಳಲ್ಲಿ ಗೂಗಲ್‌ಗಳಲ್ಲಿ ಡ್ರೈವ್‌ನಲ್ಲಿ  ಈಗ ಮೈಕ್ರೋ ಫಿಲ್ಮಗಳಲ್ಲಿ  ಮತ್ತು ಸಿಡಿಗಳಲ್ಲಿ ಸಂಗ್ರಹಿಸುವ ವಿಧಾನ ಪುರಾತನ ಪರಂಪರೆಯಾಗಿದೆ.,. ಈ ಅನುಕೂಲದ ಜೊತೆ ಡಿಜಿಟಲೈಜ್‌ಆದ ಮಾಹಿತಯನ್ನು ಓದುವುದೂ ಬಹು ಸುಲಭ. ಅಕ್ಷರಗಳ ಬಣ್ಣ, ಗಾತ್ರ, ಬೆಳಕಿನ ಪ್ರಮಾಣವನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸ ಬಹುದು.ಎಲ್ಲ ಕ್ಕಿಂತ ಮಿಗಿಲಾಗಿ  ಮಾಹಿತಿಯನ್ನು ಕಾಲದೇಶಗಳ ಮಿತಿಇಲ್ಲದೇ ಹಂಚಿಕೊಳ್ಳಬಹುದು.
ಆದ್ದರಿಂದ ಹಸ್ತ ಪ್ರತಿ ಅಭಿಯಾನದಲ್ಲಿ ಸಂರಕ್ಷಣೆ ಮತ್ತು ಸೂಚಿ ತಯಾರಿ ಮೊದಲ ಹಂತ ಮಾತ್ರ. ಅದು ಸ್ಕ್ಯಾನ್‌ ಮಾಡಲು ಪೂರ್ವ ಸಿದ್ದತೆ.ಸ್ಕ್ಯಾನ್‌ ಮಾಡಲು ಅನೇಕ ಸಾಧನಗಳು ಇವೆ. ಕೆಲವೇ ಸಾವಿರದಿಂದ ಹಿಡಿದು ಲಕ್ಷ ರೂಪಾಯಿ ಬೆಲೆ ಬಾಳುವ ಉಪಕರಣಗಳಿವೆ.
ಮೊದಲನೆಯದು ಫ್ಲಾಟ್‌ ಬೆಡ್‌ಸ್ಕ್ಯಾನರ್‌. ಇದರಲ್ಲಿ A-4 ಅಳತೆಯ ಗರಿಗಳನ್ನು ಸ್ಕ್ಯಾನ್‌ ಮಾಡಬಹುದು. ಇದು ಸ್ಥಿರವಾದದ್ದು . ಒಂದೇ ಕಡೆ ಇಡ ಬೇಕಾಗುವುದು ಮತ್ತು ಕಾಂಪ್ಯೂಟರ್‌ ಜೊತೆ ಸಂಪರ್ಕ ಕಲ್ಪಿಸ ಬೇಕು. ಎರಡನೆಯದು ಹ್ಯಾಂಡ್‌ಸ್ಕ್ಯಾನರ್‌. ಇದರಿಂದ ಎಷ್ಟೇ ಉದ್ದ ಗರಿಯನ್ನಾದರೂ ಸ್ಕ್ಯಾನ್‌ ಮಾಡಬಹುದು.ಇದಕ್ಕೆ ಇದನ್ನು ಎಲ್ಲಿ ಬೇಕಾದರೂ ಮಾಡಬಹುದು. ತಕ್ಷಣವೇ ಕಾಂಪ್ಯೂಟರ್‌ ಬೇಕು ಎಂದೇನೂ ಇಲ್ಲ. ಕೆಲಸ ವಾದ ತರುವಾಯ ಕಾಂಪ್ಯೂಟರ್‌ ನಲ್ಲಿ ಹಾಕಿಕೊಳ್ಳಬಹುದು ಇದರ ಒಂದು ತೊಡಕು ಎಂದರೆ ಗರಿಯ ಮೇಲೆ ಚಲಿಸುವಾಗ ತುಸುವೂ ಅಲುಗಾಡ ಬಾರದು. ಕೈ ನಡುಗಿದರೆ ಗರಿಯ ಚಿತ್ರ ಬರುವುದಿಲ್ಲ.
 ಮುರನೆಯ ವಿಧಾನ ಫೋಟೋ ಸ್ಕ್ಯಾನಿಂಗ್‌. ಇದಕ್ಕೆ ಒಂದು ಹೈ ಎಂಡ್‌ ಕ್ಯಾಮರಾ ಅಗತ್ಯ. ಒಂದುವಿಶೇಷವಾದ ಸ್ಟಾಂಡ್‌ ಕೂಡಾ ಬೇಕೇ ಬೇಕು . ಜೊತೆಗೆ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ಅದೆಲ್ಲದರ ಜೊತೆಗೆ ನಿಪುಣ ಫೋಟೋ ಗ್ರಾಫರ್‌ ಅತ್ಯವಶ್ಯಕ.  ನೂರಾರು ಗರಿಗಳ ಚಿತ್ರ ತೆಗದು ನಂತರ ಅವನ್ನುಕಾಪ್ಯೂಟರ್‌ನಲ್ಲಿ ಹಾಕಬಹುದು.  ಈ ಎಲ್ಲವಿಧಾನಗಳಲ್ಲು ಒಂದೊಂದೆ ಗರಿ ಯ ಚಿತ್ರ ತೆಗೆದರೆ ವರ್ಷಗಟ್ಟಲೇ ಸಮಯ ಹಿಡಿಯುವುದು. ಆದ್ದರಿಂದ ಗರಿಗಳ ಉದ್ದ ಅಗಲಕ್ಕೆ ಅನುಸಾರವಾಗಿ ೨ ರಿಂದ ಆರು ಗರಿಗಳನ್ನು ಒಟ್ಟಿಗೆ ಇಟ್ಟು ಸ್ಕ್ಯಾನ್‌ಮಾಡಿದರೆ ಸಮಯದ ಉಳಿತಾಯ ವಾಗುವುದು
ಸ್ಕ್ಯಾನ್‌ ನಂತರದ ಕೆಲಸ ಅತಿ ಮುಖ್ಯವಾದುದು. ಪ್ರತಿಯೊಂದು ಕೃತಿಯ ಗರಿಗಳ ಚಿತ್ರ ನಮಗೆ ದೊರೆತ ಮೇಲೆ ಒಂದೊಂದು  ಚಿತ್ರದಲ್ಲೂ ಇರುವ ಗರಿಗಳನ್ನು ಬೇರ್ಪಡಿಸುವುದಕ್ಕೆ ಮೊದಲ ಆದ್ಯತೆ. ಬೇರ್ಪಡಿಸಿ ಅವನ್ನು ಓದಲು ಅನುಕೂಲವಾಗುವಂತೆ ಎಡಿಟ್‌ಮಾಡ ಬೇಕು, ಅವೆಲ್ಲವನ್ನೂ ಕ್ರೋಢೀಕರಿಸಿ  ಇ.ಪುಸ್ತಕ ತಯಾರಿಸ ಬೇಕು.  ಈ ಕಾರ್ಯಕ್ಕೆ ಎಷ್ಟು ಜನ ಇದ್ದರೂ ಸಾಲದು. ಕಾರಣ ಲಕ್ಷಾಂತರ ಚಿತ್ರಗಳನ್ನು ಸಂಸ್ಕರಿಸಿ ಅವುಗಳನ್ನು ಓದಲು ಅನುಕೂವಾಗುವಂತೆ ರೂಪಿಸ ಬೇಕಾಗುವುದು. ಇದಕ್ಕೆ ತಂತ್ರ ಜ್ಞಾನದ ಪರಿಣಿತ ಇರುವ ‌ಅಂತರ್‌ಜಾಲ ಸಂಪರ್ಕವಿರುವ ಕಾಂಪ್ಯೂಟರ್ ಹೊಂದಿರುವರು ಮಾತ್ರ ಕಾರ್ಯ ನಿರ್ವಹಿಸಬಲ್ಲರು. ನಮ್ಮ ಜತೆಯಲ್ಲಿ ಸದ್ಯಕ್ಕೆ ಇಪ್ಪತ್ತೈದು ಜನರ ಹವ್ಯಾಸಿ ತಂಡವಿದೆ ಆದರೆ ಎಲ್ಲರೂ ವೃತ್ತಪರ ತಂತ್ರಜ್ಞರು ಬಿಡುವಿನ ವೇಳೆ ಈ ಕೆಲಸ ಮಾಡುವರು. ಇದಕ್ಕೆ ಇನ್ನೂ ಹೆಚ್ಚಿನ ಜನ ಬಲ ಬೇಕು. ಅಮದಾಗ ಮಾತ್ರ ಅಬಿಯಾನ ದ ಗುರಿಸಾಧನೆ ಸಾಧ್ಯ. ದೂರದ ದಾರಿಯಲ್ಲಿ ಮೊದಲ ಹೆಜ್ಜೆ ಹಾಕಿದ್ದೇವೆ. ಗುರಿ ತಲುಪಲು ನಡೆಯುವುದು. ಮುಖ್ಯ. ನಡಗೆಯಂತೂ ಪ್ರಾರಂಭವಾಗಿದೆ. ನೋಡೋಣ.







No comments:

Post a Comment