Thursday, February 6, 2014

ಶ್ರೀ ಪ್ರಶಸ್ತಿ

                   

                    ಕನ್ನಡ ಸಾಹಿತ್ಯ ಲೋಕದಲ್ಲಿ ಮತ್ತೊಂದು ಪ್ರತಿಷ್ಠಿತ  ಪ್ರಶಸ್ತಿ.

ಬಿ. ಎಂ. ಶ್ರೀಕಂಠಯ್ಯ

ಶ್ರೀ ಪ್ರಶಸ್ತಿ 

 ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸಾಧನೆಯನ್ನು ಗುರುತಿಸಲು ಕನ್ನಡದ ಕಣ್ವ, ನವೋದಯದ ಹರಿಕಾರ ಬಿ. ಎಂ. ಶ್ರೀ ಅವರ ಹೆಸರಿನಲ್ಲಿ  “ ಶ್ರೀ ಪ್ರಶಸ್ತಿಯನ್ನು” ಇದೇ ವರ್ಷದಿಂದ ಬಿ. ಎಂ. ಶ್ರೀ. ಪ್ರತಿಷ್ಠಾನವು ಪ್ರದಾನ ಮಾಡುವುದು. ಒಂದು ಲಕ್ಷ ರೂಪಾಯಿ ನಗದು ಮತ್ತು ಸ್ಮರಣ ಫಲಕವನ್ನು ಕೊಡಲಾಗುವುದು . ಇದನ್ನು ನೀಡಲು ಬಿ. ಎಂ ಶ್ರೀ ಅವರ ಮೊಮ್ಮಗಳು ಶ್ರೀಮತಿ ಕಮಲಿನಿಬಾಲೂರಾವ್‌ಅವರು ೧೫ ಲಕ್ಷ  ರೂಪಾಯಿ ದತ್ತಿನಿಧಿ ಸ್ಥಾಪಿಸಿರುವರು. ಈ ಪ್ರ ಶಸ್ತಿಯ ವೈಶಿಷ್ಠ್ಯವೆಂದರೆ ಸಾಹಿತ್ಯ ಲೋಕದಲ್ಲಿ ಗಣನೀಯ ಸಾಧನೆ ಮಾಡಿದ ಆದರೆ ಈ ವರೆಗೂ ಯಾವುದೇ ಹೆಸರಾಂತ ಪ್ರಶಸ್ತಿಗಳಾದ ಜ್ಞಾನಪೀಠ, ಪಂಪ ಮೊದಲಾದವುಗಳು ದೊರಕದ ಪ್ರತಿಭಾವಂತರನ್ನು ಗುರುತಿಸುವುದಾಗಿದೆ.ಈ ಪ್ರಶಸ್ತಿಗೆ ಯಾವುದೇ ಅರ್ಜಿ ಹಾಕಬೇಕಿಲ್ಲ. ಕರ್ನಾಟಕದ ಐದುವಿಭಾಗಗಳನ್ನು ಪ್ರತಿನಿಧಿಸುವ ಖ್ಯಾತ ಸಾಹಿತಿಗಳ ಸಮಿತಿಯು ಪುರಸ್ಕಾರಕ್ಕೆ ಅರ್ಹರಾದರವನ್ನು ಗುರುತಿಸಿ ಆಯ್ಕೆ ಮಾಡುವುದು. ಆಯ್ಕೆ ಸಮಿತಿಗೆ ಸಮಿತಿಗೆ ಪೂರ್ಣ ಸ್ವಾತಂತ್ರವಿದ್ದು     ಅದು ಪಾರದರ್ಶಕವಾಗಿ ಕಾರ್ಯನಿರ್ವಹಿಸುವುದು.

                            ಪ್ರಥಮ ಶ್ರೀ ಪ್ರಶಸ್ತಿ ವಿಜೇತರು

ಎನ್‌.ಎಸ್‌ ಲಕ್ಮಿನಾರಾಯಣ ಭಟ್ಟ
              
 ಎನ್‌.ಎಸ್‌.ಲಕ್ಷ್ಮಿನಾರಾಯಣ ಭಟ್ಟ ಅವರು ಹೊಸ ತಲೆ ಮಾರಿನ  ಒಬ್ಬ ವಿಶಿಷ್ಟ ಕವಿ. ಅವರು  ಶಿವಮೊಗ್ಗ ಜನಿಸಿದರು. 
ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವರು ಅವರಿಗೆ ಕನ್ನಡ, ಇಂಗ್ಲಿಷ್‌ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ 
ಪ್ರಭುತ್ವವಿದೆ.ಕನ್ನಡ ಸಾಹಿತ್ಯದಲ್ಲಿ ಲಯ ಬದ್ದ ಕವನಗಳಿಂದ ಮನೆ ಮಾತಾಗಿರುವರು.
.ಅವರು ಷೇಕ್ಸಪಿಯರನ ಸಾನೆಟ್‌ಗಳನ್ನು ಮತ್ತು ಏಟ್ಸನನ ಕವನಗಳನ್ನು ಕನ್ನಡ ಓದುಗರಿಗೆ ತಮ್ಮ ಅನುವಾದಗಳ ಮೂಲಕ ಪರಿಚಯಿಸಿರುವರು. ಅವರ “ಹೊರಳು ಹಾದಿಯಲ್ಲಿ  “ಕೃತಿಗೆ ಸಾಹಿತ್ಯ ಅಕಾದಮಿ ಬಹುಮಾನ ಬಂದಿದೆ.ಅವರಿಗೆ ಮಾಸ್ತಿ ಪ್ರಶಸ್ತಿಯೂ ಸಂದಿದೆ.ಸಂತಶಿಶುನಾಳ ಷರೀಫ್‌ಅವರ ಗೀತೆಗಳನ್ನು ಕನ್ನಡ ನಾಡಿನ ಮೂಲೆ ಮೂಲೆಗೂ ಮುಟ್ಟಿಸಿದ ಕೀರ್ತಿ ಅವರದು.ಭಾವ ಗೀತೆಗಳನ್ನು ನಾಡಿನಾದ್ಯಂತ ಗುಣಗುಣಿಸುವಂತೆ ಮಾಡಿದವರಲ್ಲಿ ಅವರ ಪಾತ್ರ ಹಿರಿದು

            2013-14  ಶ್ರೀಪ್ರಶಸ್ತಿ “ಅವರ ಮುಡಿಗೇರಿದೆ.. ಪ್ರಥಮ ಪ್ರಶಸ್ತಿ ವಿಜೇಜೇತರೆಂಬ ಹಿರಿಮೆ ಅವರದಾಗಿದೆ

No comments:

Post a Comment