Monday, March 24, 2014

ಶ್ರೀ ಸಾಹಿತ್ಯ ಪ್ರಶಸ್ತಿ


ಬಿ.ಎಂ.ಶ್ರೀ ಪ್ರತಿಷ್ಠಾನವು ನೀಡುವ “ ಶ್ರೀ ಸಾಹಿತ್ಯ ಪ್ರಶಸ್ತಿ” ಯ ಪ್ರಥಮ ಪ್ರದಾನ ಸಮಾರಂಭವು ಭಾನುವಾರ ಬೆಳಗ್ಗೆ ೧೦ ಗಂಟೆಗೆ ಮಿಥಿಕ್‌ ಸೊಸೈಟಿ ಸಭಾಂಗಳದಲ್ಲಿ ನಡೆಯಿತು..
 ಸುಪ್ರಸಿದ್ದ ವಿಮರ್ಶಕ ಡಾ. ಜಿ.ಎಸ್‌. ಅಮೂರ್‌ ಅವರು ಪ್ರಶಸ್ತಿ ಪ್ರದಾನ ಮಾಡುತ್ತಾ ಬಿ. ಎಂ.ಶ್ರೀ ನವೋದಯ ಸಾಹಿತ್ಯಕ್ಕೆ ನಾಂದಿ ಹಾಡಿದ ಮಹಾಪುರುಷ. ಇಂದು ಕನ್ನಡವು ಭಾರತೀಯ ಭಾಷೆಗಳಲ್ಲಿ ಅಗ್ರ ಸ್ಥಾನದಲ್ಲಿ ಇರಲು ಕಾರಣ ಅವರ  ಹಿರಿಯ ಕಾಣಿಕೆ. . ಕನ್ನಡಿಗರಲ್ಲಿ ದ್ರಾವಿಡ ಪ್ರಜ್ಞೆಯನ್ನು ಜಾಗೃತ ಗೊಳಿಸಿ ದವರು  ಅವರು,ಕನ್ನಡದ ದುರಂತ ನಾಯಕ ಪ್ರಧಾನನಾಟಕಗಳಾದ  “ಅಶ್ವತ್ಥಾಮ “ ಗಧಾಯುದ್ಧ, ಪಾರಸಿಕರು ಅವರ ಹೊಸ ದೃಷ್ಟಿಯ ಕೊಡುಗೆಗಳು, ಭಾಷೆ ಛಂದಸ್ಸು, ವಿಷಯ  ಜೊತೆಗೆ ಕನ್ನಡ ಅಭಿಮಾನ ಬೆಳೆಸುವಲ್ಲಿನ ಅವರ ಕಾಣಿಕೆ ಅಸದೃಶ ಆದರೆ ಅವರ ಕೊಡುಗೆಯನ್ನು ಗುರುತಿಸುವ ಕೆಲಸ ಸರ್ಕಾರ ಒಂದು ಶತಮಾನ ಕಳೆದರೂ ಮಾಡಿಲ್ಲ. ಯಾವ ಸಾಹಿತಿಗೂ ಅದರ ಬಗ್ಗೆ ನೆನಪು ಆಗಲಿಲ್ಲ. 
ಶ್ರೀಮತಿ. ಕಮಲಿನಿ .ಷ. ಬಾಲುರಾವ್‌
ಆದರೆ ಬದಲಾಗುತ್ತಿರುವ ಈ ಕಾಲಮಾನದಲ್ಲಿ ತಮ್ಮ ಅಜ್ಜನ ಹೆಸರನಲ್ಲಿ ಪ್ರಶಸ್ತಿ ಕೊಡ ಮಾಡಿದ ಶ್ರೀಮತಿ ಕಮಲಿನಿ.ಷ. ಬಾಲುರಾವ್  ಅವರ  ಕೊಡುಗೆ ವಿಶೇಷವಾದದು , ಶ್ರೀಯವರು ಕನ್ನಡದ  ಮೊದಲ ಅನುವಾದಕರು. ಸಂಸ್ಕೃತದ ಹಿಡಿತದಿಂದ ಕನ್ನಡ ಭಾಷೆ,  ಬಿಡಿಸಿದವರು. ಅವರಂತೆ ಪ್ರಶಸ್ತಿ ವಿಜೇತ ಭಟ್ಟರು ಇಂಗ್ಲಿಷ್‌ನ ಮೇರು ಶಿಖರಗಳಾದ ಷೇಕ್ಸಪಿಯರ್‌, ಡಬ್ಲ್ಯ. ಬಿ. ಯೇಟ್ಸ್‌ ಮತ್ತು ಟಿ.ಎಸ್‌. ಈಲಿಯಟ್‌ರ ಕಾವ್ಯದ ಅನುವಾದ ಮಾಡಿ ಹೊಸಕಾವ್ಯದ ಹಾದಿ ಸುಗಮ ಗೊಳಿಸಿರುವರು. ಶ್ರೀಯವರು ಕನ್ನಡನಾಡಿನಾದ್ಯಂತ ಸಂಚರಿಸಿ ಕನ್ನಡದ ಏಳಿಗೆಗೆ ಉಪನ್ಯಾಸ ಮಾಡಿದ ಅಪ್ರತಿಮ ವಾಗ್ಮಿಗಳು ಭಟ್ಟರು ವಿದೇಶದಲ್ಲೂ ಕನ್ನಡದ ಕಂಪನ್ನು ಹರಡಿದವರು, ಮೇಲಾಗಿ ಗೇಯತೆ ಪ್ರಧಾನವಾದ ಕವಿಗಳು ಹೀಗಾಗಿ ಪ್ರಥಮ ಪ್ರಶಸ್ತಿಯು ಅವರಿಗೆ ಸಂದುದು ಬಹುಸೂಕ್ತ ಎಂದರು.

ಉದ್ಘಾಟನೆ
ಅಭಿನಂದನ ಭಾಷಣ ಮಾಡುತ್ತಾ ಡಾ. ಎಂ. ಎಚ್. ಕೃಷ್ಣಯ್ಯನವರು ತಮ್ಮ ಸಹಪಾಠಿಗೆ ಸಂದ ಈ ಗೌರವತಂದ ಸಂತೋಷ ವ್ಯಕ್ತ ಪಡಿಸಿ  ವಾಚಾಳಿಯಾದ ತಮ್ಮ ಗೆಳೆಯ ಹೇಗೆ ತನ್ನ ಮಾತುಗಾರಿಕೆಯನ್ನು ಕನ್ನಡದ ಪ್ರಚಾರಕ್ಕೆ ಬಳಸಿಕೊಂಡಿರುವನು, ಜಡವಾಗಿದ್ದ ಕಾವ್ಯಪ್ರಪಂಚಕ್ಕೆ  ಆಧುನಿಕತಂತ್ರ ಜ್ಞಾನದ ಬಳಕೆಯಿಂದ ಕ್ಯಾಸೆಟ್‌ ಯುಗಕ್ಕೆ ನಾಂದಿ ಹಾಡಿ ಚಲನ ಶೀಲತೆ ನೀಡಿದರು,ಶಿಶುನಾಳ ಷರೀಪ್‌ರ ಪದಗಳನ್ನು ಹಳ್ಳಿಹಳ್ಳಿಗಳಲ್ಲೂ ಗುಣಗುಣಿಸುವಂತೆ ಮಾಡಿ ಸುಗಮ ಸಂಗೀತದ ಹೊಸ ಸಾಧ್ಯತೆ ತೋರಿದರು, ಎಂಬುದನ್ನು ವಿವರಿಸಿದರು.
ಪ್ರಶಸ್ತಿ ಪ್ರದಾನ
ಪ್ರಶಸ್ತಿ ಸ್ವೀಕರಿಸಿದ ಡಾ. ಲಕ್ಷ್ಮೀನಾರಾಯಣಭಟ್ಟರು ಕನ್ನಡ ಕಾವ್ಯದ  ನವಯುಗಕ್ಕೆ ಶ್ರೀಕಾರ ಹಾಕಿದ ಯುಗ ಪುರುಷರ ಹೆಸರಿನ ಪ್ರಶಸ್ತಿ ದೊರೆತಿರುವುದು ಅತಿ ದೊಡ್ಡ ಗೌರವ. ಗುರುವರ್ಯರು ಕನ್ನಡಕ್ಕಾಗಿ ಎತ್ತಿದ ದನಿ ,ಎತ್ತಿ  ತೋರಿಸಿದ ಭಾಷೆಯ ಬೆಳವಣಿಗೆಯ ತೊಡಕುಗಳು ಇಂದಿಗೂ ಪ್ರಸ್ತುತ. ಅವರ ಹೆಜ್ಜೆಯಲ್ಲಿ ನಡೆದುದಕ್ಕೆ ಇಷ್ಟೆಲ್ಲ ಸಾಧನೆ ಸಾಧ್ಯವಾಯಿತು ಎಂದರು.
ಪ್ರಸ್ತಾವಿಕ ಭಾಷಣ ಮಾಡಿದ ಡಾ. ಪಿ.ವಿ. ನಾರಾಯಣ  ಬಿ.ಎಂ.ಶ್ರೀ ಸ್ಮಾರಕಪ್ರತಿಷ್ಠಾನಕ್ಕೆ ಅವರ ಹೆಸರಿನಲ್ಲಿ ಸಾಹಿತ್ಯ ಪ್ರಶಸ್ತಿ ನೀಡುವ ಕಾರ್ಯ ಸಾರ್ಥಕವೆನಿಸಿದೆ .. ಮತ್ತು ಇದನ್ನುಯಾವುದೇ ಒತ್ತಡ ಮತ್ತು ಪಕ್ಷಪಾತರಹಿತವಾಗಿ  ಆಯ್ಕೆ ಮಾಡಲು ಕೈಕೊಂಡ ಪ್ರಕ್ರಿಯೆಯನ್ನು ವಿವರಿಸಿದರು. ಶ್ರೀಯವರು ಕನ್ನಡ ಕಾವ್ಯ ಭಾಷೆಗೆ ಹೊಸ ಹುಟ್ಟು ಕೊಟ್ಟವರು, ಭಾಷೆ, ಛಂದಸ್ಸು ಮತ್ತು ಜನಪದರ ನುಡಿ ಬಳಕೆಗೆ ಹಾದಿ ಹಾಕಿಕೊಟ್ಟವರು ಸಂಸ್ಕೃತದ ಸಂಕೀರ್ಣತೆಯನ್ನು ಕೈಬಿಟ್ಟು ತಿಳಿಗನ್ನಡದ ಸರಳ ಭಾಷಾ ಬಳಕೆಗೆ ಒತ್ತು ಕೊಟ್ಟವರು , ಕನ್ನಡ  ಮೊದಲ ಚಳುವಳಿಗಾರರು ,ಕನ್ನಡದ ಮೊದಲ ಗೌರವ ಪ್ರಾಧ್ಯಾಪಕರು .ಅವರ ಕಾಣಿಕೆಯ ಪ್ರಮಾಣ ಎಷ್ಟು ಅಗಾಧವಾಗಿರುವುದೆಂದರೆ ನಂತರ ಬಂದ ಎಲ್ಲ ಕವಿಗಳೂ ಅವರಿಂದ ಪ್ರಭಾವಿತರೇ,  ಒಂದು ಶತಮಾನ ಕಳೆದರೂ  ಅವರ ಕಾವ್ಯ ಮತ್ತು ಮಾತು ಪ್ರಸ್ತುತವಾಗಿರುವುದು ಎಂದರು.
ಎಂ ಶ್ರೀಯವರ ನೇರ ಶಿಷ್ಯರಾದ ಶತಾಯುಷಿ ನಾಡೋಜ ಡಾ. ಜಿ. ವೆಂಕಟ ಸುಬ್ಬಯ್ಯನವರು ಅಧ್ಯಕ್ಷತಾ ಭಾಷಣ ಮಾಡುತ್ತಾ ತಮ್ಮ ವಿದ್ಯಾರ್ಥಿ ಜೀವನದ ಅನುಭವ ಹಂಚಿಕೊಂಡರು. ಬೆಂಗಳೂರಿನಲ್ಲಿ ಸೆಂಟ್ರಲ್‌ ಕಾಲೇಜಿನಲ್ಲಿ  ಪ್ರಾದ್ಯಾಪಕರಾಗಿದ್ದ ಅವರು ಮೈಸೂರಿಗೆ ಬಂದು ಮಾಡುತಿದ್ದ ಪಾಠ ಮನದಲ್ಲಿ  ಅಚ್ಚೊತ್ತಿದಂತೆ ಉಳಿಯುತಿತ್ತು. ಆ ಕಾಲದಲ್ಲಿ ಮುದ್ರಿತವಾದ ಎಲ್ಲ ಪುಸ್ತಕಗಳನ್ನು ಓದಿರುತಿದ್ದರು.ರನ್ನ ಗಧಯುದ್ಧ ಪಾಠ ಮನದಲ್ಲಿ ಇಂದಿಗೂ ಅಚ್ಚೊತ್ತಿದಂತದೆ ಅವರು ಹಾಕಿದ ಭದ್ರ ಬುನಾದಿಯ ಮೇಲೆ ಇಂದು ಹೊಸಗನ್ನಡ ಕಾವ್ಯ ನಿಂತಿದೆ.ಆ ಯುಗಪ್ರವರ್ತಕೆ ಸ್ಮಾರಕ ಪ್ರಶಸ್ತಿ  ಮತ್ತೆ ನವೋದಯದ ಮರು ಹಟ್ಟಿಗೆ ಕಾರಣರಾದ,ಶಾಸ್ತ್ರ,ನಾಟಕ, ವಿಮರ್ಶೆ ಕ್ಷೇತ್ರಗಳಲ್ಲಿ ಹೆಜ್ಜೆ ಗುರುತ ಮೂಡಿಸಿರುವ ಡಾ. ಲಕ್ಷ್ಮೀ ನಾರಾಯಣಭಟ್ಟರಿಗೆ ದೊರೆತಿರುವುದದು ತಂಬ ಅರ್ಥ ಪೂರ್ಣ ಎಂದರು .

ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಪ್ರೊ. ಅಬ್ದುಲ್‌ಬಷೀರ್‌ ನಿರೂಪಣೆ ಮಾಡುತ್ತಾ ಪ್ರಶಸ್ತಿವಿಜೇತರು ತಮಗೆ ಗುರುಗಳಾಗಿದ್ದು ಅವರನ್ನು ಗೌರವಿಸುವ ಭಾಗ್ಯ ತಮ್ಮದಾಗಿರುವದಕ್ಕೆ ತೃಪ್ತಿ ವ್ಯಕ್ತ ಪಡಿಸಿದರು ಅವರ ತೋರಿದ ಹಾದಿಯಲ್ಲಿ ನಡೆದುದೇ ಸಾಹಿತ್ಯ ರಂಗದ ತಮ್ಮ ಕಿರು ಕೊಡುಗೆಗೆ ಕಾರಣ ಎಂದು ನೆನೆದರು.
ಕಾರ್ಯಕ್ರಮದ ಪ್ರಾರಂಭದಲ್ಲಿಶ್ರೀಮತಿ ಶೀಲಾ ಮತ್ತು ವೃಂದದವರಿಂದ ಎಂ.ವಿ. ಸಿ. ಮತ್ತು ಬಿ. ಎಂ. ಶ್ರೀಯವರ ಗೀತೆಗಳ ಗಾಯನವಾಯಿತು.ಕನ್ನಡದ ಖ್ಯಾತ ಸಾಹಿತಗಳು  ಉಪಸ್ಥಿತರಿದ್ದರು












No comments:

Post a Comment