Tuesday, March 18, 2014

ಸಾರ್ಥಕ ಸಂಸ್ಥೆ

ಸಾರ್ಥಕ  ಸಂಸ್ಥೆ ಬಿ.ಎಂ. ಶ್ರೀ. ಸ್ಮಾರಕ  ಪ್ರತಿಷ್ಠಾನ

-                                                                                                                            -ಎಚ್‌.ಶೇಷಗಿರಿರಾವ್‌

ಯಾವುದೇ  ಶ್ರೇಷ್ಟ ಸಾಧನೆ ಮಾಡಿದ  ವ್ಯಕ್ತಿಗೆ ಗೌರವ ಸಲ್ಲಿಸಲು,  ಅಭಿಮಾನ ಸೂಚಿಸಲು ಹಲವು ಮಾರ್ಗಗಳಿವೆ.  ಅವರ ಹೆಸರನ್ನು  ಬಡಾವಣೆಗೆ, ರಸ್ತೆಗೆ, ವೃತ್ತಕ್ಕೆ ಇಡುವುದು ,  ರಸ್ತೆಯ ನಡುವೆ ಪ್ರತಿಮೆ ಸ್ಥಾಪಿಸುವುದು ಸಾಮಾನ್ಯ. ಆದ್ದರಿಂದಲೇ ನಮ್ಮಲ್ಲಿ ಹಲವಾರು ಗಾಂಧಿನಗರ, ನೆಹರೂ ರಸ್ತೆ, ಕುವೆಂಪು ವೃತ್ತಗಳಿವೆ. ಕೆಲವಂತೂ ಅಪಭ್ರಂಶವಾಗಿ ಮೂಲವನ್ನೇ ಮರೆಸುವವು. ಎಂ. ಜಿ. ರಸ್ತೆ, ಜೆ.ಸಿ ರಸ್ತೆ, ಎನ್‌.ಆರ್. ಕಾಲನಿ  ,ಸಿ.ಜಿ ಪುರ, ಕೆ.ಆರ್‌.ನಗರ , ಆರ್‌.ಟಿ. ನಗರ ,ಜೆ.ಜೆ ನಗರ ಬೆಂ. ಬ.ನಿ ಗಳ ಮೂಲಸ್ವರೂಪ  ಕೇಳಿದರೆ ಕಣ್ಣು ಕಣ್ಣು ಬಿಡುವವರೆ ಬಹಳ.ಬರಬಬರುತ್ತಾ ಗಾಂಧಿ ಎಂದರೆ ಯಾರು ಎಂದರೆ ಸೋನಿಯಾ,ಗಾಂಧಿ ರಾಹುಲ್‌ಗಾಂಧಿ ಎನ್ನುವ ದಿನಗಳೂ ಬರಬಹುದು.. ಹಾಗೆಂದು ಅವರ ಸ್ಮಾರಕ ನಿರ್ಮಾಣ ಮಾಡಬಾರದು ಎಂದೇನೂ ಅಲ್ಲ. ಹಿರಿಯರ ಹೆಸರು ಶಾಶ್ವತವಾಗಿರ ಬೇಕಾದರೆ ಅವರ ತತ್ವ ,ಆದರ್ಶ.ಮತ್ತು ನಂಬಿಕೆಗಳನ್ನು ಬಿಂಬಿಸುವ ಕೆಲಸ ಆಗ ಬೇಕು ,ಅವರ ಕಾರ್ಯವನ್ನು ಮುಂದುವರಿಸುವ ವ್ಯವಸ್ಥೆಯೇ ಅವರಿಗೆ ಸೂಕ್ತ ಸ್ಮಾರಕ.
ಬಿ. ಎಂ. ಶ್ರೀ ಕಲಾಭವನ
‘ಇಂಥಹ ಕಾರ್ಯಮಾಡುವ ಸಂಸ್ಥೆಗಳು ನಮ್ಮ ನಾಡಿನಲ್ಲಿ ಹಲವಿವೆ. ಅವು ವ್ಯಕ್ತಿನಿಷ್ಠವಾಗಿರಬಹುದು.  ಸರ್ಕಾರದ ನೆರವಿನ ಏಕೋದ್ದೇಶದ ಸಂಸ್ಥೆಗಳಾಗಿರಬಹುದು .ಆದರೆ ಖಾಸಗಿನ ವ್ಯಕ್ತಿಯೊಬ್ಬರು ತಮ್ಮ ಗುರುಗಳ ಮೇಲಿನ ಅಭಿಮಾನದಿಂದ ಅವರ ಅನಿಸಿಕೆಯನ್ನು ನಿಜ ಮಾಡಲು,ಅವರ ಗುರಿಯನ್ನು ಸಾಧಿಸಲು, ಯಾವುದೇ ವ್ಯಕ್ತಿಯ , ಪಂಥದ ಉದ್ದೇಶ ಸಾಧನೆಗಿಂತ ಸಾಮೂಹಿಕ. ಏಳಿಗೆ ಸಮುದಾಯದ ಜಾಗೃತಿ, ಸಾಹಿತ್ಯದ ಬೆಳವಣಿಗೆಗ ಮೀಸಲಾಗಿರುವ ಕೆಲವೇ ಸಂಸ್ಥೆಗಳಲ್ಲಿ  ಒಂದು .ಪ್ರೊ.ಎಂ.ವಿ. ಸಿತಾರಾಮಯ್ನವರು ಸ್ಥಾಪಿಸಿದ ತಮ್ಮ ಗುರುಗಳ ಗುರುಗಳಾದ ಕನ್ಡ ದ ಸಾಹಿತ್ಯದ ಹೊಸ ಹುಟ್ಟಿಗೆ ಕಾರಣರಾದ ಬಿ. ಎಂ. ಶ್ರೀ  ಸ್ಮಾರಕ ಪ್ರತಿಷ್ಠಾ.ನ... ಬಿ. ಎಂ ಶ್ರೀ ಕಂಠಯ್ಯ ಅವರನ್ನು  ಕನ್ನಡ ದ ಕಣ್ವ, ನವೋದಯದ ಹರಿಕಾರ, ಕನ್ನಡ ಸ್ನಾತಕೋತ್ತರ ಅಧ್ಯಯನಕ್ಕೆ  ಕಾರಣ ಪುರುಷ, ಕನ್ನಡದ ಪ್ರಪ್ರಥಮ ಪ್ರೊಫೆಸರ್‌, ನಾಡು ನುಡಿಗೆ ಮರುಜೀವನ ನೀಡಿದ ಮಹಾಪುರುಷ ಎಂದೆಲ್ಲ ಹೊಗಳಿಕೆಯ ಹೊಳೆ ಹರಸಿದರೂ ಅವರ ಸ್ಮರಣೆಗೆ ಯಾವದೇ ಕೆಲಸ ಮಾಡದಿರುವುದನ್ನು ಗಮನಿಸಿ ತಾವೇ ಅವರ ಆಶಯಗಳಾದ, ಹಸ್ತಪ್ರತಿ ಸಂಗ್ರಹ, ಸಂರಕ್ಷಣೆ, ಶೋಧನೆ,ಪ್ರಕಟಣೆ,ಮತ್ತು ಸಾಹಿತ್ಯ ಪ್ರಸಾರದ ಉದ್ಧೇಶದಿಂದ ಬಿ.ಎಂ,ಶ್ರೀ ಪ್ರತಿಷ್ಠಾನ.ಸ್ಥಾಪಿಸಿದರು.
 ಹಾಗೆ ನೋಡಿದರೆ ಎಂ.ವಿ.ಸೀ ಯವರು ನೇರ ಶಿಷ್ಯರೇನಲ್ಲ. ಆದರೆ ಇವರ ಬರಹದ ಬದುಕಿಗೆ ಸ್ಪೂರ್ತಿಯಾದುದು ಗುರುಗಳಾದ ತಿ. ನಂ.ಶ್ರೀಯವರು ಇವರ ಹದಿನಾರಮನೆಯ ಹುಟ್ಟು ಹಬ್ಬದಂದು ಕೊಡುಗೆಯಾಗಿ ನೀಡಿದ “ ಇಂಗ್ಲಿಷ್‌ಗೀತೆಗಳು”  ”ಅಂದು ಪ್ರಾರಂಭಿಸಿದ ಸಾಹಿತ್ಯ ಯಾತ್ರೆಯ ಫಲವಾಗಿ ಅವರಿಂದ ಸಾಹಿತ್ಯರಂಗಕ್ಕ ಅನೇಕ ಕೊಡುಗೆಗಳು ಸಂ

ಪ್ರಥಮ ಗೌರವಾದ್ಯಕ್ಷರು- ನಿಟ್ಟೂರು ಶ್ರೀನಿವಾಸ ರಾವ್‌

ತಮ್ಮ ಗುರುವಿನ ಹೆಸರಲ್ಲಿ ಏನಾದರೂ ಮಾಡ ಬೇಕೆಂಬ ಅವರ ಹಂಬಲಕ್ಕೆ ಇಂಬು ಕೊಟ್ಟುದುದು ಅವರ ಮೈಸೂರಿನಲ್ಲಿನ ಮನೆತನಕ್ಕೆ ಸೇರಿದ ದೇವಾಲಯದ ಕೋಣೆಯೊಂದರಲ್ಲಿ ಪೇರಿಸಿಸಿಟ್ಟ  ಹಾಳಾಗುತಿದ್ದ  ಹಸ್ತಪ್ರತಿಗಳು. ಜೊತೆಗೆ .ತಿಮ್ಮಪ್ಪದಾಸರ ವಂಶದವರಾದ ಅವರ ಮನೆಯಲ್ಲಿ ಅನೇಕ ಹಸ್ತಪ್ರತಿಗಳು..   ತಕ್ಷಣ ಅವರಿಗೆ ನೆನಪಿಗೆ ಬಂದದ್ದು ಬಿ.ಎಂ . ಶ್ರೀ ಯವರು ಧಾರವಾಡದಲ್ಲಿ ಮಾಡಿದ್ದ “ ಕನ್ನಡ ಮಾತು ತಲೆಎತ್ತುವ ಬಗೆ ಭಾಷಣ” . ಅದರಲ್ಲಿ ಅವರು ಪ್ರಮುಖವಾಗಿ ಹಸ್ತಪ್ರತಿಗಳಲ್ಲಿ ಅಡಗಿದ ಜ್ಞಾನ ಸಂಪತ್ತನ್ನು ಸಂಗ್ರಹಿಸಿ, ಸಂರಕ್ಷಿಸಿ,ಸಂಶೋಧನೆ ಮಾಡಿ ಮುದ್ರಿಸುವ ಅಗತ್ಯದ ಕುರಿತು ಹೇಳಿದ್ದರು;  ಅರಿಂದ ಸ್ಪೂರ್ತಿ ಪಡೆದ ಅವರು ೧೯೭೯-ಮೇ ೬ ರಂದು ತಮ್ಮ ಮನೆಯಲ್ಲಿಯೇ ಪ್ರತಿಷ್ಠಾನ ಸ್ಥಾಪಿಸಿದರು
 
ಪ್ರತಿಷ್ಠಾನ ಉದ್ಘಾಟಿಸುತ್ತಿರುವ ಕುವೆಂಪು


 ರಾಷ್ಟ್ರ ಕವಿ ಕುವೆಂಪು ಅವರು ತಮ್ಮ ಇಳಿವಯಸ್ಸಿನಲ್ಲಿಯೂ ಗುರುಗಳ ಮೇಲಿನ ಗೌರವ ಮತ್ತು ಶಿಷ್ಯನ ಮೇಲಿನ ಅಭಿಮಾನದಿಂದ  ಪ್ರತಿಷ್ಠಾನದ ಉದ್ಘಾಟನೆ ಮಾಡಿದರು.  ಮಾಸ್ತಿಯವರು ದಿನವೂ ಒಂದು ಸಲವಾದರೂ ಭೆಟಿಕೊಡದೇ ಹೋಗುತ್ಬತಿರಲಿಲ್ದ.ಖ್ಯಾತ ನಾಮ ಸಾಹಿತಿಗಳಿಗೆ ಇದು ಒಂದು ವೇದಿಕೆಯಾಗಿತ್ತು 
ಎಂ.ವಿ ಸೀ ಯವರು ಅನಾರೋಗ್ದ ನಡುವೆಯೂ ಸಾಹಿತ್ಯ ಸಂರಕ್ಷಣೆ ಕೆಲಸವನ್ನು ತಮ್ಮ ಶಿಷ್ಯರಾದ ಪರಮಶಿವ ಮೂರ್ತಿ, ಗೀತಾಚಾರ್ಯ, ದೇವರ ಕೊಂಡಾ ರೆಡ್ಡಿಯಮೊದಲಾದವರ ಸಹಕಾರದಿಂದ ಮುಂದುವರಿಸಿದರು. ನೆರವಿನ ಅಗತ್ಯವಿದ್ದ ಅವರಿಗೆ   ಶಿಕ್ಷಣ ಮುಂದುವರಿಸಲು ಆಸರೆನೀಡಿ ಬಿಡುವಿನಲ್ಲಿ  ಹಸ್ತಪ್ರತಿ ಕೆಲಸದಲ್ಲಿ ತೊಡಗಿಸಿದರು
ಹಾ.ಮಾ. ನಾಯಕ ಮತ್ತು ಗೋರೂರು
ನಿಟ್ಟೂರು ಶ್ರೀನಿವಾಸರಾವ್‌ ಇದರ ಪ್ರಥಮ ಅಧ್ಯಕ್ಷರು . ಎಂವಿಸೀ ಯವರೇ ಕಾರ್ಶ್ರೀಯದರ್ಶಿ ನಂತರ  ಜಿ ನಾರಾಯಣ, ಡಾ. ಜಿ.ವೆಂಕಟ ಸುಬ್ಬಯ್ಯ, ದಿ. ಶ್ರೀನಿವಾಸ ರಾಜು, ಪ್ರೊ. ಲಿಂಗಯ್ಯ ಅಧ್ಯಕ್ಷರಾಗಿದ್ದರು ಈಗ ಪ್ರೊ. ಎಂ ಎಚ್ ಕೃಷ್ಣಯ್ಯ ಗೌರಾವಾದ್ಯಕ್ಷರು ಮತ್ತು . ಡಾ., ಪಿ.ವಿ.ನಾರಾಶಿ ಅಧ್ಯಕ್ಷರು.ಸಂಸ್ಥೆಯ ಚಟುವಟಿಕೆಗಳನ್ನು ಪದಾಧಿಕಾರಿಗಳ ನೆರವಿನೊಡನೆ ನಿರ್ವಹಿಸುತ್ತಿರುವರು..
ಮಾಸ್ತಿ ಮತ್ತು ಕುವೆಂಪು ಮಾತುಕಥೆ
ಪ್ರತಿಷ್ಠಾನವು ಕೆಲವು ವರ್ಷಗಳ ನಂತರ ಮಾಸ್ತಿಯವರ ಮನೆಯಲ್ಲಿ, ನಂತರ ಗೋಖಲೆ ಸಾರ್ವಜನಿಕ ಸಂಸ್ಥೆಯ ಆವರಣದಲ್ಲಿ ಕಾರ್ಯ ನಿರ್ವಹಿಸಿ ೨೦೦೦ ದಲ್ಲಿ ಮಹಾನಗರಪಾಲಿಕೆಯಿಂದ ನಿವೇಶನ ಪಡೆಯಿತು.   ಎನ್ದು‌ಆರ್‌ ಕಾಲನಿಯಲ್ಲಿ ಮೂರನೆಯ ಮತ್ತು ನಾಲ್ಕನೆಯ ಮುಖ್ಯ ರಸ್ತೆಗಳನ್ನು ಸೇರಿಸುವ ಜಾಗ ಅದು. ಅದರಲ್ಲಿ ಟ್ರಾನ್ಸಫಾರ್ಮರ್‌ ಬೇರೆ ಇದ್ದಿತು. ಅಕ್ಕಪಕ್ಕದ ಆಕ್ಷೇಪಣೆಯ ನಡುವೆ ಅಂದಿನ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರ ಸಹೃದಯತೆಯಿಂದ
 ನಿವೇಶನ ಲೀಜ್‌ಮೇಲೆ ದೊರೆತು ಕಟ್ಟಡ ಪ್ರಾರಂಭ ವಾಯಿತು
ನಿರ್ಮಾಣ ಹಂತದ ಭವನ 


 ಸಾರ್ವಜನಿಕರು, ಸಹಕಾರ, ಜನಪ್ರತಿನಿಧಿಗಳು ಮತ್ತು ಸದಸ್ಯರ ಸಹಕಾರದಿಂದ  ೨೦೦೪ ರಲ್ಲಿ ರಜತೋತ್ಸವ ಸಂದರ್ಭದಲ್ಲಿ ತನ್ನ ಸ್ವಂತ ಭವ್ಯ ಭವನದಲ್ಲಿ ಕಾರ್ಯ ನಿರ್ವಹಿಸತ್ತಿದೆ.. ಬಿ. ಎಂ. ಶ್ರೀ ಕಲಾಭವನವು ಸಾಹಿತ್ಯ ,ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ..


ಪ್ರತಿಷ್ಠಾನದೊಡನೆ ನಾಡಿನ ಖ್ಯಾತನಾಮ ಸಾಹಿತಿಗಳ ಒಡನಾಟವಿದೆ. 

ಶ್ರೀಯವರ ಹುಟ್ಟೂರಾದ ಬೆಳ್ಳೂರಿನಲ್ಲಿ೧೯೮೪ ರಲ್ಲಿ ಅವರ ಜನ್ಮ ಶತಮಾನದ ಸ್ಮರಣೆಗಾಗಿ’ಶ್ರೀ ಶತಮಾನ ಭವನ” ನಿರ್ಮಿಸಿಲಾಗಿದೆ.  ವಸ್ತುಸಂಗ್ರಹಾಲಯ, ಗ್ರಂಥಾಲಯ ಮತ್ತು ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಇದಕ್ಕ ಆದಿ ಚುಂಚನಗಿರಿ ಶ್ರೀಮಠದ ಮಹಾಸ್ವಾಮಿಗಳ ಸಹಾಯ ಮತ್ತು ಸಹಕಾರವಿದೆ.
ಈಗ ಪ್ರತಿಷ್ಠಾನ ಮೂವತ್ತು ಸಾವಿರಕ್ಕೂ ಅಧಿಕ ವಿರಳ ಪರಾಮರ್ಶನ ಪುಸ್ತಗಳಭಂಡಾರ, ೧೫೦೦ ಹಸ್ತಪ್ರತಿಗಳುಸಂಗ್ರಹ ಹೊಂದಿದೆ. ಈಗ ಹಸ್ತಪ್ರತಿಗಳ ಡಿಜಟಲೀಕರಣ ಕೈಗೆತ್ತಿಕೊಂಡಿದೆ.ಹಸ್ತಪ್ರತಿ ಅಧ್ಯಯನ ತರಗತಿ ಮತ್ತು ಹಳೆಗನ್ನಡ ತರಗತಿಗಳನ್ನು ನಡೆಸಿ ಪರಂಪರೆಯ ಜ್ಞಾನ ಆಸಕ್ತರಿಗೆ ದೊರಕಿಸುತ್ತಿದೆ. ಕರ್ನಾಟಕದಲ್ಲಿ ಸಂಶೋಧನೆ ಮತ್ತು ಪಾಂಡಿತ್ಯಗಳಿಗೆ ಮೀಸಲಾದ ಪ್ರಮುಖ ಸಂಸ್ಥೆ ಯಾಗಿದೆ. ಹಂಪಿ ಕನ್ನಡ ವಿಶ್ವದ್ಯಾಲಯದ ಪಿಎಚ್‌.ಡಿ ಮತ್ತು ಎಂಫಿಲ್‌ ಅಧ್ಯಯನಕ್ಕೆ  ಅವಕಾಶ ಕೊಡುವ ಮಾನ್ಯತೆ ಪಡೆದ ಸಂಶೋಧನಾ ಕೇಂದ್ರವಾಗಿದೆ.
ಹಸ್ತ ಪ್ರತಿ ವಿಭಾಗದಲ್ಲಿ ಕಾರ್ಯನಿರತರು-ಶ್ರೀಮತಿ ಮಧುರಾ, ಶ್ರೀಮತಿ ವೀಣಶಾ ಮತ್ತು ಶ್ರೀ ಗುರುಪ್ರಸಾದ್‌
ವಿದ್ವಾಂಸರ ಅಭಿವ್ಯಕ್ತಿಗೆ ಅವಕಾಶ ಕೊಡಲು ಅರ್ಧವಾರ್ಷಿಕ ನಿಯತಕಾಲಿಕ ವಿದ್ವತ್‌ ಪತ್ರಿಕೆ  “ಲೋಚನ” ವನ್ನು ೧೯೮೨ ರಲ್ಲಿ ಪ್ರಾರಂಭಿಸಿನಿರಂತರವಾಗಿ ಹೊರ ತರುತ್ತಲಿದೆ.ಇದರಲ್ಲಿ ಸಂಶೋಧನ ಲೇಖನಗಳು,ವಿಮರ್ಶೆ,ಟೀಕೆ ಟಿಪ್ಪಣಿ ಪ್ರಕಟವಾಗುತ್ತವೆ.ಇದನ್ನು ಸದಸ್ಯರಿಗೆ ಉಚಿತವಾಗಿ  ಒದಗಿಸುವುದು.
ಪ್ರತಿಷ್ಠಾನದಲ್ಲಿ ನಡೆಯುವ ಚಟುವಟಿಕೆಗಳ ಮಾಹಿತಿಯನ್ನು ನೀಡಲು ತ್ರೈ ಮಾಸಿಕ ನಿಯತಕಾಲಿಕವಾದ ವಾರ್ತಾಪತ್ರ ಹೊರ ತರಲಾಗುತ್ತಿದೆ. ಇನ್ನುಮುಂದೆ ಶ್ರೀಸುದ್ದಿ ಎಂಬ ಮಾಸ ಪತ್ರಿಕೆ ಹೊರ ತರುವ ಯೋಜನೆ ಇದೆ.
ದತ್ತಿ ಉಪನ್ಯಾಸಗಳು ಸಂಸ್ಥೆಯನ್ನು ಸದಾ ಚಟುವಟಿಕೆಯಲ್ಲಿಡುತ್ತಲಿವೆ. ಸುಮಾರು ನಲವತ್ತು ದತ್ತಿ ನಿಧಿಗಳುಇವೆ. ಸಾಹಿತ್ಯದ ವಿವಿಧ ಶಾಖೆಗಳನ್ನು  ಕುರಿತು ತಜ್ಞರಿಂದ ಉಪನ್ಯಾಸ ನಡೆಸಲಾಗುವುದು.

ಸಾಹಿತ್ಯ ಪ್ರಶಸ್ತಿಗಳು- ಪ್ರತಿಷ್ಠಾನವು  ಸಾಹಿತ್ಯ ಸಾಧಕರಿಗೆ ವಾರ್ಷಿಕವಾಗಿ ಹಲವು ಪ್ರಶಸ್ತಿ ಪ್ರದಾನ ಮಾಡುವುದು.  ಈ ಪ್ರಶಸ್ತಿಗಳಿಗೆ ವಿಶೇಷ  ಗೌರವ ಇದೆ. ಪ್ರಶಸ್ತಿಯ ಮೊಬಲಗು ಕೆಲವೇ ಸಾವಿರವಾದರೂ ಅದಕ್ಕೆ ಅತಿ ಹೆಚ್ಚಿನ ಪ್ರತಿಷ್ಠೆ ಇದೆ. ಇದನ್ನು ಪಡೆಯಲು ದೆಹಲಿಯಂಥಹ ,ದೂರದ ಪ್ರದೇಶಗಳಿಂದ ಬರುವರು. ಅರಳುತ್ತಿರುವ ಪ್ರತಿಭೆಗಳು ಮಾತ್ರವಲ್ಲ ,ವಿಖ್ಯಾತ ವಿದ್ವಾಂಸರೂ ಈ ಪ್ರಶಸ್ತಿಯಿಂದ ಸಾರ್ಥಕತೆ ಪಡೆಯುವರು .ಅಂತರಾಷ್ಟ್ರೀಯ ಮಟ್ಟದ ಹೆಸರಾಂತ ಇತಿಹಾಸ ವಿದ್ವಾಂಸರಾದ  ಡಾ.ಷ.ಶೆಟ್ಟರ್‌  ತಮ್ಮ ಕೃತಿಯೊಂದನ್ನು  ಕಳುಹಿಸಿ , ಪ್ರಶಸ್ತಿ ಬಂದಾಗ  ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಧನ್ಯತಾಭಾವ ವ್ಯಕ್ತ ಪಡಿಸಿರುವುದು ಇದರ ಸಾಹಿತ್ಯಿಕ ಮೌಲ್ಯಕ್ಕೆ  ಪ್ರತೀಕವಾಗಿದೆ.
ಸಾಹಿತ್ಯೋಪಾಸನೆ ಕಾರ್ಯಕ್ರಮ ಬಹು ಜನಪ್ರಿಯ. ಕಳೆದ ಶತಮಾನದಿಂದ ಈ ವರೆಗಿನ ಕನ್ನಡಕ್ಕಾಗಿ ಶ್ರಮಿಸಿದ ಗಣ್ಯ ಸಾಹಿತಿಗಳನ್ನು ಕುರಿತಾದ ವಿಶೇಷ ಉಪನ್ಯಾಸ ಪ್ರತಿ ತಿಂಗಳು ನಡೆಸಲಾಗುವುದು ಇದರಿಂದ ಹಿರಿಯ ಸಾಧಕರ ನೆನಪನ್ನು ಯುವ ಪೀಳಿಗೆಗೆ ಕೊಡಲು ಅನುವಾಗುವುದು..

ಬರಿ ಸಾಹಿತ್ಯಕ್ಕೆ ಮಾತ್ರವಲ್ಲ ಸಂಗೀತಕ್ಕೂ ಅವಕಾಶ ಕಲ್ಪಿಸಲಾಗಿದೆ. ಸುಗಮ ಸಂಗೀತವೆಂದರೆ ಭಾವ ಗೀತೆಗಳನ್ನು ಕೇಳುಗರು ಮನ ಮುಟ್ಟುವಂತೆ ಸಾದರ ಪಡಿಸುವುದು. .ಅಲ್ಲಿ ಸಾಹಿತ್ಯಕ್ಕೂ ಸಾಕಷ್ಟು ಪ್ರಾಧಾನ್ಯತೆ ಇದೆ..ನಾಡಿನ ಹೆಸರಾಂತ ಸುಗಮ ಸಂಗೀತಗಾರರಾದ ಪಿ ಕಾಳಿಂಗರಾವ್‌, ಎಂ. ವಿ. ಸಿ. ಮತ್ತು ಬಿ.ಎಂಶ್ರೀ  ಅವರ ಹೆಸರಿನಲ್ಲಿ” ಸಿರಿ ಸಂಗಿತ”,ಕಾರ್ಯಕ್ರಮದಲ್ಲಿ ಪ್ರತಿ ತಿಂಗಳು  ಸುಗಮ ಸಂಗಿತದ ಕಾರ್ಯಕ್ರಮ ನಡೆಸಲಾಗುವುದು.,
ತಿಮ್ಮಪ್ಪದಾಸ ಹಸ್ತಪ್ರತಿ ವಿಭಾಗದಲ್ಲಿ ಕನ್ನಡ , ಸಂಸ್ಕೃತ, ಗ್ರಂಥ, ನಾಗರಿ, ತೆಲುಗು ತಮಿಳು ತಿಗಳಾರಿ ಲಿಪಗಳಲ್ಲಿನ ೧೫೦೦ ಹಸ್ತಪ್ರತಿಗಳನ್ನು ಸಂರಕ್ಷಿಸಲಾಗಿದೆ.. ಅವುಗಳ ಡಿಜಟಲೀಕರಣ ಮತ್ತು ವಿರಳ ಗ್ರಂಥಗಳ ಮುದ್ರಣಕ್ಕೆ ಕ್ಕೆ ಕ್ರಮ ತೆಗೆದುಕೊಳ್ಳ್ಲಲಾಗುತ್ತಿದೆ. ಅದರ  ಅಡಿಯಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ಹಸ್ತಪ್ರತಿ ಅಧ್ಯಯನ ಸಮಾವೇಶ ನಡೆಸಲಾಗುವುದು . ಮತ್ತು ಆ ಸಮಾವೇಶದಲ್ಲಿ ಮಂಡಿಸಿದ ಲೇಖನಗಳ ಸಂಕಲನವನ್ನು ಗ್ರಂಥರೂಪದಲ್ಲಿ ತರಲಾಗುವುದು.
ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು

ಹಸ್ತಪ್ರತಿಗಳ ಸೇವಾಕೇಂದ್ರ  ಸಾರ್ವಜನಿಕರಲ್ಲಿರುವ ಹಸ್ತಪ್ರತಿಗಳನ್ನು ವೈಜ್ಞಾನಿಕವಾಗಿ ಸಂರಕ್ಷಣೆ ಮಾಡಿ ಕೊಡಲಾಗುವುದು. ಹಸ್ತಪ್ರತಿಗಳನ್ನು ಕುರಿತು ಜಾಗೃತಿ ಮೂಡಿಸಲು  ಅನೇಕ ಕಡೆ ಹಸ್ತಪ್ರತಿ ಪ್ರದರ್ಶನ ನಡೆಸಲಾಗುತ್ತಿದೆ. ಯಾವುದೇ ಶೈಕ್ಷಣಿಕ  ಸಮಾರಂಭದಲ್ಲಿ ವೈವಿದ್ಯ ಪೂರ್ಣ ಹಸ್ತ ಪ್ರತಿಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿಯುಳ್ಳ ಪ್ರದರ್ಶಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ.
ಇತ್ತೀಚೆಗೆ ಇನ್ನೊಂದು ಶೈಕ್ಷಣಿಕ ಚಟುವಟಿಕೆ ಕೈಗೆತ್ತಿ ಕೊಂಡಿದೆ.  ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಕರಶಾಸ್ತ್ರ ಎಂಬ ವಿಷಯವಿದ್ದು ಅವರು ಕಾಲೇಜಿನಲ್ಲಿ ಬರಿ ತಾತ್ವಿಕ ಉಪನ್ಯಾಸಗಳಿಂದ ತೃಪ್ತಿ ಪಡಬೇಕಾಗುವುದು. ಅವರಿಗೆ ಹಸ್ತಪ್ರತಿಗಳ ಕುರಿತಾದ ಪ್ರಾತ್ಯಕ್ಷಿಕೆ ನೀಡಲು ಮತ್ತು ಸಂರಕ್ಷಣೆಯ ವಿಧಿವಿಧಾನಗಳನ್ನು ಕೈ ಮುಟ್ಟಿ ಮಾಡಿ ತಿಳಿದು ಕೊಳ್ಳಲು ಒಂದು ವಾರದ ಕಾರ್ಯಶಿಬಿರ ನಡೆಸಲಾಗುತ್ತಿದೆ.

  ಚಿ. ಶ್ರೀನಿವಾಸ ರಾಜು
ಹಸ್ತ ಪ್ರತಿ ಕುರಿತಾಗಿ ಜಾಗೃತಿ ಮೂಡಿಸಲು ’ ಹಸ್ತಪ್ರತಿ ಅಭಿಯಾನ’ ಕೈ ಕೊಳ್ಳಲಾಗಿದೆ.
 ಸಂಸ್ಥೆಯ ಪ್ರಕಟನ ವಿಭಾಗವು ಸಂಶೋಧನ ಕೃತಿಗಳನ್ನು, ಪ್ರಾಚೀನ ಗ್ರಂಥಗಳನ್ನು, ವಿಶೇಷ ಉಪನ್ಯಾಸಗಳನ್ನು ವಿವಿಧ ಸಾಹಿತ್ಯಮಾಲೆಗಳ ಮೂಲಕ ಪ್ರಕಟಿಸುತ್ತಲಿದ.
ಈ ವರೆಗೆ ಸುಮಾರು ಒಂದುನೂರು ಪುಸ್ತಕಗಳನ್ನು ಪ್ರಕಟಿಸಲಾಗಿದೆ.
ಈಗ ಸಾಹಿತ್ಯದ ಐದು ವಿಭಾಗಗಳಲ್ಲಿ ಪ್ರಶಸ್ತಿ  ಕೊಡಲಾಗುತ್ತಿದೆ. .ಮಕ್ಕಳ ಸಾಹಿತ್ಯ, ವಿಮರ್ಶಾ ಕೃತಿ, ಸಂಶೋಧನಾ ಕೃತಿ ಸಂಶೋಧನೆ, ಸೃಜನ ಶೀಲ ಮತ್ತು ಸಾಹಿತ್ಯ ಸಂಘಟನೆಗಳಿಗೆ ಸರದಿಯ ಮೇಲೆ , ಕಾದಂಬರಿ ಅಥವ ಕಥಾ ಸಂಕಲನಕ್ಕೆ ಸರದಿಯ ಮೇಲೆ ಪ್ರಶಸ್ತಿ ನೀಡುವುದುಮತ್ತು ಕನ್ನಡ ನಾಡು ನುಡಿಗೆ ಸಂಬಂಧಿಸಿದ ಗ್ರಂಥಕ್ಕೆ ಪ್ರತಿವರ್ಷ ಪುರಸ್ಕಾರ ನೀಡಲಾಗುವುದು.

ಪ್ರೊ. ಅಬ್ದುಲ್‌ಬಷೀರ್‌,ರಾಮಪ್ರಸಾದ್‌, ಸುಮತೀಂದ್ರ ನಾಡಿಗ್‌ ಮತ್ತು ಪ್ರೊ. ಲಿಂಗಯ್ಯ
ಇವೆಲ್ಲಕ್ಕೂ ಶಿಖರ ಪ್ರಾಯವಾಗಿ ಈ ವರ್ಷದಿಂದ ಬಿ. ಎಂ. ಶ್ರೀ ಹೆಸರಿನಲ್ಲಿ  ಒಂದು ಲಕ್ಷ ರೂಪಾಯಿ ಮೌಲ್ಯದ  ಶ್ರೀಪ್ರಶಸ್ತಿ ಯನ್ನುಸಾಹಿತ್ಯ ರಂಗದಲ್ಲಿ ಶ್ರೇಷ್ಠ ಸಾಧನೆ ಮಾಡಿದ, ಈವರೆಗೆ ಯಾವುದೇ ರಾಷ್ಟ್ರೀಯ ಅಥವ ರಾಜ್ಯಮಟ್ಟದ  ಪ್ರತಿಷ್ಠಿತ ಪ್ರಶಸ್ತಿ ಪಡೆಯದ ಸಾಹಿತಿಗೆ ನೀಡಲಾಗುವುದು.ಈ ಪ್ರಶಸ್ತಿಯನ್ನು ಬಿ.ಎಂ.ಶ್ರೀ ಯವರ ಮೊಮ್ಮಗಳಾದ ಶ್ರೀಮತಿ ಕಮಲಿನಿ.ಷ.ಬಾಲುರಾವ್‌ ಅವರು ದೊಡ್ಡ ಮೊತ್ತವನ್ನು ನಿಶ್ಚಿತ ಠೇವಣಿಯಲ್ಲಿ ಇಡುವ ಮೂಲಕ ಪ್ರಾಯೋಜಿಸಿದ್ದಾರೆ. ಇನ್ನು ಮುಂದೆ ಬಿ. ಶ್ರೀಯವರ ಜನ್ಮ ದಿನದಂದು ಈ ಪ್ರಶಸ್ತಿ ನೀಡಲಾಗುವುದು.
ಶ್ರೀ ಪ್ರಶಸ್ತಿ ಫಲಕ
 ಇದರಲ್ಲಿ ಸರ್ಕಾರಿ ಪ್ರಾಯೋಜಕತ್ವ ಇಲ್ಲ. ಯಾವುದೇ ಪಂಗಡ , ಜಾತಿ, ಮತ ಮತ್ತು ಇಜಂಗಳ ಗೋಜಿಲ್ಲ.ರಾಜ್ಯದ ನಾಲ್ಕುವಿಭಿನ್ನ ಭಾಗಗಳಿಂದ ಬಂದ ಸಾಹಿತ್ಯ ಪರಿಣಿತರು ಪ್ರಶಸ್ತಿಗೆ ಅರ್ಹರಾದವರನ್ನು ಆರಿಸುವರು. ಅದರಲ್ಲಿ ಸಂಸ್ಥೆಯ ಪಾತ್ರವಿಲ್ಲ. ಆಯ್ಕೆ ಪಾರದರ್ಶಕವಾಗಿರುವುದು.. ಇದರಿಂದ ಒತ್ತಡ , ಪ್ರಭಾವಗಳಿಗೆ ಅವಕಾಶವೇ ಇಲ್ಲ..ಯಾರೂ ಅರ್ಜಿ ಹಾಕಬೇಕಿಲ್ಲ. ಅದಕ್ಕೆ ಒಬ್ಬ ಸಾಹಿತ್ಯಾಸಕ್ತರು ಈ ಪ್ರಶಸ್ತಿಯು ಕರ್ನಾಟಕದ ಜ್ಞಾನಪೀಠ ಎಂದು ಕರೆದಿರುವುದರಲ್ಲಿ ಅತಿಶಯೋಕ್ತಿ ಇಲ್ಲ ಎನ್ನ ಬಹುದು.
ಕನ್ನಡಪ್ರೇಮಿಗಳು  ಪೋಷಕರಾಗಿ,ದಾನಿಗಳಾಗಿ,ಆಜೀವ ಸದಸ್ಯರಾಗಿ ಅಥವ ಸ್ವಯಂಸೇವಕರಾಗಿ ಪ್ರತಿಷ್ಠಾನದ ಕೆಲಸದಲ್ಲಿ ಭಾಗಿಗಳಾಗಲು  ಕನ್ನಡ ಸೇವೆ ಮಾಡಲು ಸ್ವಾಗತವಿದೆ.



ವಿಳಾಸ .:  ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ (ನೊಂ) ೩ನೆಯ ಮುಖ್ಯ ರಸ್ತೆ, , ಎನ್‌ ಆರ್‌ ಕಾಲನಿ, ಬೆಂಗಳೂರು-  ೫೬೦೦೧೯. ದೂರವಾಣಿ – ೦೮೦-೨೬೬೧೫೮೭೭






No comments:

Post a Comment