Thursday, March 13, 2014

ಸಾಹಿತ್ಯೋಪಾಸಕರು

ದೇವುಡು ಕೃತಿಗಳ ವಿವೇಚನೆ 


ದೇವುಡು ನರಸಿಂಹ ಶಾಸ್ತ್ರಿಗಳು ಕನ್ನಡ ಸಾಹಿತ್ಯ ರಂಗದಲ್ಲಿ ಒಬ್ಬ ವಿಶಿಷ್ಟ ಸಾಧಕರು. ಕನ್ನಡ , ಸಂಸ್ಕೃತ, ತೆಲುಗು ಮತ್ತು ಇಂಗ್ಲಿಷ್‌ನಲ್ಲಿ ವಿದ್ವಾಂಸರಾಗಿದ್ದ ಅವರ ಸಾಹಿತ್ಯ ಕೃಷಿ ವಿಫುಲ. ಅದರಲ್ಲೂ  ಮಹಾಬ್ರಾಹ್ಮಣ, ಮಹಾಕ್ಷತ್ರಿಯ ಮತ್ತು ಮಹಾದರ್ಶನ ಕಾದಂಬರಿಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ  ಚಿರಸ್ಥಾಯಿಯಾದ ಸ್ಥಾನ ಪಡೆದಿರುವರು.ಅವರದು ಸಂಪ್ರದಾಯ ಬದ್ಧವಾದ ಜೀವನ ಶೈಲಿಯಾದರೂ ತಮ್ಮ ಶಾಸ್ತ್ರಾಧ್ಯಯನವನ್ನು ಆಧುನಿಕತೆಯ ಒರೆಗಲ್ಲಿಗೆ ಹಚ್ಚಿ ಹೊಸಅರ್ಥ ಹೊರಹೊಮ್ಮಿಸಿರುವರಿಂದ ಅವಯ ವಿದ್ವಾಂಸರ ಮತ್ತು ಜನಸಾಮಾನ್ಯರ  ಮನ್ನಣೆ ಗಳಿಸಿವೆ.  ಹಲವು ಭಾಷೆಗಳಲ್ಲಿ ಅನುವಾದವೂ ಆಗಿವೆ. ಅವರ ಈ ಕೃತಿಗಳು ಈವರೆಗೆ ೩೭ ಮರುಮುದ್ರಣ ಕಂಡಿವೆ.ಅವರ ಪುತ್ರ ದೇವುಡು ಗಂಗಾಧರ ಅವರು ದೇವುಡು ಪ್ರತಿಷ್ಠಾನದ ಮೂಲಕ ಅವರ ಕೃತಿಗಳನ್ನು ಜನರಿಗೆ ತಲುಪಿಸುತಿದ್ದಾರೆ. 
ಇತ್ತೀಚೆಗೆ ವಿದ್ವಾನ್‌ ಡಾ.ಆರ್‌ ಗಣೇಶ್‌ ಅವರು ಈ ಕೃತಿಗಳ ಕುರಿತಾದ ವಿಸ್ತೃತವಾಗಿ ಪ್ರತಿಯೊಂದಕ್ಕೆ ನಾಲ್ಕುದಿನ ವ್ಯಾಖ್ಯಾನ ಪೂರಿತ ಉಪನ್ಯಾಸ ಮಾಡಿ ಅವುಗಳ ನ್ನು ಅರ್ಥೈಸಲು ಸಹಾಯ ಮಾಡಿರುವರು. ಇಂತಹ ಮತ್ತೊಂದು ಕಿರು ಪ್ರಯತ್ನ ಬಿ. ಎಂ.ಶ್ರೀ ಪ್ರತಿಷ್ಠಾನವು. ಎಂ. ಇ. ಎಸ್‌ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ  ಸಹಯೋಗದಲ್ಲಿ ಮಲ್ಲೇಶ್ವರದ ಕಾಲೇಜಿನ ಆವರಣದಲ್ಲಿ ದಿನಾಂಕ ೧೨-ನೆಯ ಮಾರ್ಚರಂದು ಸಾಹಿತ್ಯೋಪಾಸಕರು  ಕಾರ್ಯಕ್ರಮದ ಅಡಿಯಲ್ಲಿ ಉಪನ್ಯಾಸದ ವ್ಯವಸ್ಥೆ ಮಾಡಿತ್ತು. .  ಪ್ರೊ. ನೈಷಧಂ ಸೂರ್ಯನಾರಾಯಣಶಾಸ್ತ್ರಿಗಳು ದೇವಡು ಅವರ ಪರಿಸರದಲ್ಲಿ ಬೆಳೆದವರು. ಅವರು ದೇವಡುಅವರ ಕುರಿತಾದ ಉಪನ್ಯಾಸ ನೀಡಿದರು.ದೇವಡು ಅವರ ಪುತ್ರರಾದ ಗಂಗಾಧರ ಅವರು ತಮ್ಮ ತಂದೆಯವರ ಧೀಮಂತಿಕೆಯನ್ನು ತೋರುವ ಹಲವು ಸ್ವಾರಸ್ಯಗಳನ್ನು ಹಂಚಿಕೊಂಡರು ಆದ್ಯಕ್ಷತೆ ವಹಿಸಿದ್ಧ ಡಾ. ಜೆ, ಶ್ರೀನಿವಾಸ ಮೂರ್ತಿಗಳು  ಪ್ರಾಚೀನ ಮತ್ತು ಆಧುನಿಕ ಕೃತಿಗಳ ತೌಲನಿಕ ಅಧ್ಯಯನ ಮತ್ತು ಮರು ಮೌಲ್ಯಮಾಪನದ ಅಗತ್ಯವನ್ನು ಒತ್ತಿ ಹೇಳಿದರು. ಜಾನಪದ  ಮತ್ತು ಶಾಸ್ತ್ರ ಕೃತಿಗಳೆರಡರ  ಅಧ್ಯಯನ ಪೂರಕವಾಗಿರಬೇಕು ಎಂದರು.

 ವಿಭಾಗ ಮುಖ್ಯಸ್ಥರಾದ ಡಾ. ರಂಗಾರೆಡ್ಡಿ ಕೋಡಿರಾಂಪುರ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ ಎಲ್ಲರನ್ನೂ ಸ್ವಾಗತಿಸಿದರು. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣ ಮತ್ತು  ಪದಾಧಿಕಾರಿಗಳು , ಕಾಲೇಜಿನ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು



No comments:

Post a Comment