ನೀನಾಗಿರು
ಇನ್ನೊಬ್ಬನಂತಾಗಲ, ಏಕೆ
ಬಯಕೆ
ನೀನಾಗಿರುವಾಗಲೇ , ಹಿರಿಮೆ
ದೊರಕೆ
ಇನ್ನೊಬ್ಬರಂತೆ, ಯಾಕೆ
ಹಾಕುವೆ ವೇಷ
ಅನ್ಯರಂತಿಲ್ಲದಿರುವುದೆ ನಿನ್ನ ವಿಶೇಷ
ನಿನ್ನ ಬದುಕಿಗೆ ವಂಚನೆ ಮಾಡಿ ಕೊಂಡರೆ
ನೀನು
ಅನ್ಯರಿಗೆ ನೀ ನೀಡಬಹುದಾದ ಕಾಣಿಕೆ ಗತಿ
ಏನು
ನೀನು , ನೀನಾಗಿದ್ದಾಗಲೇ
ಕೊಡಬಹುದು ಬಹಳ
ಬೇರೆಯವರಂತೆ ಬದುಕ ಹೊರಟರೆ ಲಾಭ ವಿರಳ
ನೆನಪಿರಲಿ ನೀನೆಂದರೆ ದೇವನಿಗೆ ಪ್ರೀತಿ
ಅವನಿಗೆ ನೀನು ಆಗಲೇ ಹೊಳೆವ ತಾರೆ
ಮಡದಿ ಮಕ್ಕಳಿಗೆ ಒಡನಾಡಿಗಳಿಗೆ
ಪ್ರೀತಿಸಲು ನೀನೆ ಬೇಕು .
ನಿನ್ನ ನೀ ಅರಿತರೆ ಅವರಿಗೆ ಅದುವೇ
ಸಾಕು .
No comments:
Post a Comment