Friday, September 28, 2012

ಸಾಸರಿನಿಂದ ನಾ ಕುಡಿವೆ



ಈ ವರೆಗೆ  ಸಿರಿಯ   ನಾ  ಗಳಿಸಿಲ್ಲ 
ಮುಂದೆ  ನಾ ಉಳಿಸುವುದು  ಇಲ್ಲ 
ಆದರೂ  ನನಗಿಲ್ಲ  ಯಾವುದೇ  ಚಿಂತೆ 
ಸುಖಿಯಾಗಿ  ನಾನಿರಲು  ಬೇರೆ  ಏಕಂತೆ ?
ಬಾಳದಾರಿಯಲ್ಲಿ  ನಾ ನಡೆಯುತಿರುವಾಗ  
 ಬಿತ್ತಿದಕಿಂತಲು ಪಡೆದ ಫಲ ಬಹಳ 
ಕಪ್ಪಿನಲ್ಲಿ  ಹಾಲು ತುಂಬಿ  ತುಳುಕಿದೆ  ತಾನು 
 ನನ್ನ  ಬಳಿ ಹಣ ಬಹಳ  ಏನಿಲ್ಲ 
ಕೆಲವು ಸಲ ಜೀವನ ನಡೆವುದೇ  ಕಠಿನ 
ಬಂದ ಬಂದವರು ನೀಡುತಿರೆ ಭರವಸೆ 
ಬೇಕೇನು    ಬದುಕಿಗೆ ಬೇರೆ  ಭರವಸೆ .
                                      
ಕರುಣಾಮಯ  ದೇವನಿಗೆ  ವಂದನೆ
ದಯೆಯ  ಮಳೆಗರೆದಿರುವ  ಎನ್ನ ಮೇಲೆ 
ಸಾಸರಿ ನಿಂದ ಸುಖವ  ಕುಡಿಯುತಿರುವೆ  
ಕಾರಣ  ತುಂಬಿ  ತುಳುಕಿದೆ  ಬಟ್ಟಲು 
                                        
ಶಕ್ತಿ  ಮತ್ತು ಧೈರ್ಯ ವದನು  ಅವನು 
ಬಾಳ ಬಟ್ಟೆಯಲ್ಲಿ  ಹರಡಿದಿರೆ ಮುಳ್ಳುಕಲ್ಲು 
ಹೆಚ್ಚೇನು  ಬೇಡಲಿ  ಅವನ ನಾನು 
ಈಗಾಗಲೇ  ನೀಡಿರುವ  ಎಲ್ಲ ತಾನು 
                                       
ನಮಗೆ  ಸದಾ ದೊರಕಲಿ  ಪುರುಸೊತ್ತು
ಆಸರೆ ನೀಡಲು  ಬಳಲಿದವರಿಗೆ ಹೊರೆಹೊತ್ತು 
ಆಗ  ನಾವೆಲ್ಲ  ಸುಖದಿಂದ ಕುಡಿಯೋಣ 
ತುಂಬಿ ತುಳಿಕಿರಲು ಎಲ್ಲರ  ಬಟ್ಟಲು  ತಾನು 


(ಅಂತರ್‌ಜಾಲದಲ್ಲಿ ಓದಿದ ಕವನ ಒಂದರಿಂದ ಪ್ರೇರಿತ)

No comments:

Post a Comment