Wednesday, April 30, 2014

ಇ.ಸಿಗರೇಟ್‌

 ಬೆಂಕಿ   ಬೇಡದ  ಹಬೆ  ಬತ್ತಿ- ಇ. ಸಿಗರೇಟ್‌

ಕೆಲ ವರ್ಷದ ಹಿಂದೆ ಆರು ಜನ  ಕೊಡಚಾದ್ರಿಗೆ ಚಾರಣಕ್ಕೆ ಹೋದಾಗ  ಕತ್ತಲಾಯಿತು. ಟಾರ್ಚ ಏಕೋ ಹತ್ತಲಿಲ್ಲ. ಆಗ ಏನು ಮಾಡುವುದು ಎಂದು ಹಲಬುತಿದ್ದಾಗ ಹೆಮ್ಮೆಯಿಂದ ಹೊರತೆಗೆದ ಸಿಗರೇಟ್ ಪ್ರಿಯ, ತನ್ನಲ್ಲಿದ್ದ ಲೈಟರ್‌ ಅನ್ನು. ನೋಡ್ರಯ್ಯಾ,ನೀವೆಲ್ಲಾ ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಬಡಕೊಳ್ಳುವಿರಿ. ಸಿಗರೇಟಿನ  ಅಭ್ಯಾಸದಿಂದ ಎಷ್ಟು ಅನುಕೂಲವಾಯಿತು ಎಂದು ಕೊಚ್ಚಿಕೊಂಡಾಗ.  ಅದು ಕುತರ್ಕ ಎನಿಸಿದರೂ ಸುಮ್ಮನಿರಬೇಕಾಯಿತು. ಆದರೆ ಮೊನ್ನೆ  ಅಮೇರಿಕಾದಲ್ಲಿ  ಇ.ಸಿಗರೇಟ್‌  ನಿಯಂತ್ರಣಕ್ಕೆ ಜಾರಿಗೆ ಬಂದ ಹೊಸ ಕಾನೂನ್ನು ನೋಡಿ ದಂಗಾದೆ.ಅಲ್ಲಿ   “ಬೆಂಕಿ  ಇಲ್ಲದೆ ಹೊಗೆ ಬಾರದು”  ಎಂಬ ಮಾತನ್ನು ಸುಳ್ಳು ಮಾಡುವ ಸಾಧನವನ್ನು ಧೂಮಪಾನಾಸಕ್ತರು ಬಳಸುತ್ತಾರೆ ಎಂದು ಗೊತ್ತಾಯಿತು. ಅದು  ಹೊಗೆ ಬತ್ತಿ ಅಲ್ಲ. ಹಬೆ ಬತ್ತಿ.      ಅದೇ  ಇ-ಸಿಗರೇಟ್‌.

ಈಗ ಸುಮಾರು ನಾಲ್ವಕು ಐದು ರ್ಷಗಳಿಂದ ಇ.ಸಿಗರೇಟು ಇಲ್ಲಿ ಜನಪ್ರಿಯವಾಗಿದೆ  ಅಮೇರಿಕದ ಅನೇಕ ರಾಜ್ಯಗಳಲ್ಲಿ ಯುರೋಪಿನಲ್ಲಿ ಅದು ಜನಪ್ರಿಯ.  ಇತ್ತೀಚೆಗೆ ಹಲವೆಡೆ ಅದರಲ್ಲೂ  ನ್ಯೂಯಾರ್ಕ ಲಾಸ್‌ಎಂಜಲೀಸ್‌ ಮತ್ತು ಚಿಕಾಗೋದಲ್ಲಿ ನಗರದಲ್ಲಿ  ನೀಷೇಧಿಸಿಲಾಗಿದೆ. ಸಾರ್ವಜನಿಕರ ಕೆಂಗಣ್ಣಿಗೆ  ಈ ನಿಯಂತ್ರಣ ಕಾರಣವಾಗಿದೆ.ಅದೇನೆಂದು ಪರಿಶೀಲಿಸಿದಾಗ ನನಗೆ ಗೊತ್ತಾಯಿತು ಇ.ಸಿಗರೇಟ್‌. ಬಳಕೆ  ಭಾರತದಲ್ಲಿ ಇದೆ ಆದರೆ  ಅಷ್ಟು ವ್ಯಾಪಕ ಪ್ರಚಾರ ಪಡೆದಿಲ್ಲ
ಏನು    ಇದು ಇ. ಸಿಗರೇಟ್?
ಹೊರ ನೋಟಕ್ಕೆ ಸಾಮಾನ್ಯ ಸಿಗರೇಟಿನಂತೆ ಕಂಡರೂ ಅವುಗಳಂತೆ ಹೊಗೆಯಂಥಹದನ್ನು ಹೊರಡಿಸಿದರೂ ಇವು ನಿಕೋಟಿನ್‌ ಆಧಾರಿತ ಹೊಗೆಯಲ್ಲ.   ಇದು ಹಬೆ..ಅಂದರೆ ಇದರಲ್ಲಿ ಕ್ಯಾನ್ಸರ್‌ ತರಬಹುದಾದ ತಂಬಾಕಿನ ಅಪಾಯಕರ ಅಂಶ ಇರುವುದಿಲ್ಲ. ಇದು ಒಂದು  ಚಾಕೊಲೇಟ್‌ ಪರಿಮಳದ ನಿಕೊಟಿನ್‌ ಹಬೆ. ಇದಕ್ಕೆ ಬೆಂಕಿ ತಗುಲಿಸುವ ಅಗತ್ಯ ಇಲ್ಲ.  ಬೆಂಕಿ ಇಲ್ಲದೆ ಹೊಗೆ ಬಾರದು  ಎಂಬ ಹಳೆಯ ಗಾದೆ ಮಾತನ್ನು ಹುಸಿ ಮಾಡಿದೆ. ಈ ನಿಯಂತ್ರಣದ ಪ್ರತಿಪಾದಕರು ಧೂಮಪಾನವು ಮತ್ತೆ ಹೊಸ ರೂಪದಲ್ಲಿ ಸಾಮಾಜಿಕ ಮನ್ನಣೆ ಗಳಿಸುವತ್ತ ದಾಪುಗಾಲು ಹಾಕುತ್ತಿದೆ ಎನ್ನುತ್ತಾರೆ. ಅದರಲ್ಲೂ ವಿಶೇಷವಾಗಿ ಹದಿಹರೆಯದವರು ವಿವಿಧ ಸುವಾಸನೆ ಹೊರ ಹೊಮ್ಮಿಸುವ ಇ-ಸಿಗರೇಟಿನ ಪ್ರಿಯರಾಗುತ್ತಿದ್ದಾರೆ.ಇದನ್ನು ಒಂದು ಸಲ ಕೊಂಡರೆ ಸಾಕು ಪದೇ ಪದೇ ಅಂಗಡಿಗೆ ಹೋಗ ಬೇಕಿಲ್ಲ.ಜೊತೆಗೆ ಮ್ಯಾಚ್‌ಬಾಕ್ಸ ಅಥವ ಲೈಟರ್‌ ಬೇಕಿಲ್ಲ. ಸಾಮಾನ್ಯ ಪೆನ್ನಿನಂಥಹ ಒಂದು ಉಪಕರಣ ಇದು.  ಗುಂಡಿ ಒತ್ತಿದರೆ ಸಾಕು ಹಬೆ ಹೊಮ್ಮುತ್ತದೆ. ಅಕ್ಕ ಪಕ್ಕದವರೂ ಆಕ್ಷೇಪ ಎತ್ತುವ ಹಾಗೂ ಇಲ್ಲ. ಅದೂ ಪರಿಮಳ ಯುಕ್ತ ಹಬೆ ಗೆಳತಿಯರನ್ನು ಆಕರ್ಷಿಸಲು ಒಂದು ಉತ್ತಮ ಸಾಧನ. ಜೊತೆಗೆ ಅತ್ಯಾದುನಿಕ ಎಲೆಕ್ಟ್ರಾನಿಕ್‌ ಉಪಕರಣ ಹೊಂದಿರುವ ಹೆಮ್ಮೆ ಬೇರೆ..ಆಧುನಿಕ   ಐ ಫೋನು, ಐ ಪ್ಯಾಡ ಗಳಂತೆ ಇದೂ ಒಂದು ವೈಭೋಗದ ಹೆಗ್ಗುರತು ಆಗಿ ಯುವಜನರನ್ನುಇಲ್ಲಿ ಸೆಳೆದಿದೆ.


ಇ.ಸಿಗರೇಟುಗಳು ಸಾಧಾರಣವಾಗಿ ಸಿಲಿಂಡರಿನ ಆಕಾರದಲ್ಲಿ ಪೆನ್ನಿನಂತೆ  ಇರುವವು. ಆದರೆ ವಿವಿಧ ರೂಪದಲ್ಲೂ ಇರಹುದು. ಬಳಸಿ ಬಿಸಾಕುವ ಇಲ್ಲವೆ ಮರುಪೂರಣ ಮಾಡುವ ಎರಡು ರೀತಿಯ. ಸಿಗರೇಟುಗಳು ಇವೆ.
ಇದರಲ್ಲಿ ಮೂರುಭಾಗಗಳು. ಬ್ಯಾಟರಿ, ಆಟೊಮೈಜರ್‌ಮತ್ತು ದ್ರವಪೂರೈಸುವ ಸಾಧನ ಇರುವವು.
ಗುಂಡಿ ಅದುಮಿದಾಗ ದ್ರವವು ಕಾದ ತಂತಿಯ ಮೇಲೆ ಹಾಯ್ದು ಅದು ಆವಿಯಾಗಿ ಹೊರಬರುವುದು. ಅದನ್ನು ಸೇವಿಸಿದಾಗ ಧೂಮಪಾನದ ಅನುಭವ ಆಗುವುದು.ಶೀತ ಆದಾಗ ಬಿಸಿನೀರಲ್ಲಿ ಅಮೃತಾಂಜನ ಹಾಕಿ ಹಬೆಯನ್ನು ಸೇವಿಸುವ ಹಾಗೆ, ಅಥವ   ಅಸ್ತಮಾದವರು ಇನ್‌ಹೇಲರ್‌ ಬಳಸುವ ಹಾಗೆ. ಇದು ಒಂದು  ಹಬೆ ಹೊಮ್ಮಿಸುವ ಎಲೆಕ್ಟ್ರಾನಿಕ್‌ ಸಾಧನ.
ಅಟೊಮೈಜರ್‌,ಕಾರ್ಟೊಮೈಜರ್‌,  ಕ್ಲಿಯರ್ಟೊ ಮೈಜರ್‌ ಮೊದಲಾದ  ಹಲವು ವಿಭಿನ್ನ ತಂತ್ರಜ್ಞಾನ ಬಳಸುವ ಇ. ಸಿಗರೇಟುಗಳಿವೆ
ಇ.ಸಿಗರೇಟು ಸಾಂಪ್ರದಾಯಿಕ ಧೂಮಪಾನದ ಸಂತಸ ( ಸ್ಪರ್ಶ ಮತ್ತು ಅನುಭವ) ನೀಡುವುದು. ಆದರೆ ತಂಬಾಕಿನಲ್ಲಿರುವ ೧೦೦೦ಕ್ಕೂ ಹೆಚ್ಚಿನ ಅಪಾಯಕಾರಿ ರಸಾಯನಿಕಗಳು ಇದರಲ್ಲಿ ಇಲ್ಲ.ಇದಕ್ಕೆ ಬೆಂಕಿ ತಗುಲಿಸ ಬೇಕಿಲ್ಲ...ಶ್ವಾಸಕೋಶಕ್ಕ ಧಕ್ಕೆಬಾರದು   ಅನಿಯಂತ್ರಿತ ಕೆಮ್ಮು ಇರದು.   ಈ ಉಪಕರಣವು ಗಾಳಿಯಲ್ಲಿ ಕರಗಿ ಹೋಗುವ ನೀರಾವಿಯನ್ನು ಹೊರ ಹಾಕುವುದು ಅದು ತಂಬಾಕು ಸೇವಿಸದೇ ಇದ್ದರೂ ಧೂಮಪಾನದ ಅನುಭವ ಕೊಡುವವು ಅದು ಕೆಲವೇ ಸೆಕೆಂಡ್‌ಗಳಲ್ಲಿ ಇಲ್ಲದಾಗುವುದು. ಆದ್ದರಿಂದ ಇನ್ನೊಬ್ಬರಿಗೆ ತೊಂದರೆ ಎನ್ನುವ  ಮಾತೇಇಲ್ಲ.  ಹಬೆಯು ಸಾಂಪ್ರದಾಯಿಕ ತಂಬಾಕಿನ ಪರಿಮಳ ಹೊಂದಿರುವುದು. ಜೊತೆಗೆ ಬಯಸಿದ ಪರಿಮಳವನ್ನೂ ಪಡೆಯ ಬಹುದು.ಇದರಿಂದ ವಿಶಿಷ್ಟ ಅನುಭವ ದೊರೆಯುವುದು.ಇವುಗಳಲ್ಲಿ ನಿಕೊಟಿನ್‌ಪ್ರಮಾಣ ಬಯಸಿದಷ್ಟು ಪಡೆಯಬಹುದು 24 mg ಇರುವ  ಫಿಲ್ಟರ್ ಇಲ್ಲದ ಸಾಮಾನ್ಯ ಸಿಗರೇಟಿಗೆ ಸಮನಾದರೆ,16 mg ಯವುಘಾಟುವಾಸನೆ,  "12 mg ಇರುವವು ಲಘುವಾಗಿರುವವವು,  6 mg = ಬಹು ಲಘುವಾಗಿದ್ದು  ಮತ್ತು 0 mg ಯವು ನಿಕೊಟಿನ್‌  ರಹಿತವಾಗಿರುವವು.
ಇ.ಸಿಗರೇಟಿನಲ್ಲಿ ಆವಿಯನ್ನು ಉಂಟುಮಾಡುವ ದ್ರವವನ್ನು   ಇ-.ಜ್ಯೂಸ್  ಅಥವ ಇ. ದ್ರವ ಎನ್ನವರು.ಅದುಪ್ರೊಪಿಲಿನ್, ಗ್ಲಿಜರಿನ್ ಅಥವ ಪಾಲಿಥಿಲಿನ್‌ ಗ್ಲೈಕಾಲ್‌ ಆಗಿರುವುದು ಜೊತೆಗೆ ಬೇಕಾದ ಪರಿಮಳ ಮತ್ತು ಬೇಕೆಂದರೆ ವಿವಿಧ ಪ್ರಭಲತೆಯ ನಿಕೊಟಿನ್  ಸಾರವೂ ಇರುತ್ತದೆ.
 ಈ ದ್ರಾವಣವನ್ನು ಶೀಶೆ ಅಥವ ಮೊದಲೇ ಭರ್ತಿ ಮಾಡಿದ ಕ್ಯಾಟ್ರಿಜ್‌ನಲ್ಲಿ ದೊರೆಯುವುದು.ಅದರ ಮೇಲೆ mg/ml  ಎಂದು ನಿಕೋಟಿನ್‌ ಪ್ರಮಾಣವನ್ನು ನಮೂದಿಸಿರುವರು.
ಇದರಲ್ಲಿ ನೀರು ನಿಕೊಟಿನ್‌  ಮತ್ತು ಪ್ರೊಪಿಲಿನ್‌ ಗ್ಲೈ ಕಾಲ್‌ ( ಜಲಾಧಾರಿತ ಔಷಧಿಗಳಲ್ಲಿ ಬಳಸುವ ಮತ್ತುಆರೋಗ್ಯಕ್ಕೆ ಹಾನಿಮಾಡದ ವಸ್ತು )ಇರುವವು. ಇದರಲ್ಲಿ.ಕ್ಯಾನ್ಸರ್‌ ಗೆ ಕಾರಣವಾಗುವ ಅಂಶಗಳು ಇಲ್ಲ
ಇದರಲ್ಲಿನ ೪.೨ ಲಿಥಿಯಂ ಬ್ಯಾಟರಿಯು  ೩ ಗಂಟೆಯಿಂದ ೩ ದಿನದ ವರೆಗೆ ಬಳಕೆಯನ್ನು ಅವಲಂಬಿಸ ಕೆಲಸ ಮಾಡುವುದು.ಅದನ್ನು  ಕಾರಿನಲ್ಲಿಯೂ ರಿಚಾರ್ಜ ಮಾಡಬಹುದು.
ಒಂದು ಕ್ಯಾಟರಿಜನಿಂದ ೨೫೦-೩೦೦ ದಮ್ಮು ಎಳೆಯಬಹುದು.ಅಂದರೆ ಹದಿನೈದು ಸಿಗರೇಟಿಗೆ ಸಮಾನ. ಇದನ್ನು ಎಲ್ಲ ವಯಸ್ಕರು ಬಳಸಬಹುದು. ಗರ್ಭಿಣಿ ಮಹಿಳೆ, ತೀವ್ರಹೃದಯ ಬೇನೆ, ಅಸ್ತಮಾ ಖಿನ್ನತೆ ಇರುವವರು ಬಳಸಬಾರದು.
ಇದರಿಂದ ಅನುಕೂಲಗಳೂ ಇವೆ. ಸತತ ಸಿಗರೇಟಿನ ಚಟ ಇರುವವರು ಆರೋಗ್ಯ ಹಾನಿ ಆಗುವುದೆಂದು ಕಂಡುಬಂದರೂ ಬಿಡಲಾರದೆ ಚಡಪಡಿಸುವರು. ಅಂಥವರು  ಆವಿ ಆಧಾರಿತ ಹೊಗೆಇಲ್ಲದ ಇವನ್ನು ಸಾಂಪ್ರದಾಯಿಕ ಸಿಗರೇಟಿಗೆ ಬದಲಾಗಿ ಬಳಸಬಹುದು.
ಅಧಿಕೃತವಾಗಿ ಇವು  ಧೂಮಪಾನದ ದುರಭ್ಯಾಸ ನಿವಾರಕ ಅಲ್ಲ. ಆದರೆ ನಿಕೊಟಿನ್‌ ಇಲ್ಲದ  ಹಬೆ ಸೇವನೆಯಿಂದ ಚಟ ಮುಕ್ತರಾಗಬಹುದು.  ತಂಬಾಕಿನಲ್ಲಿರುವ  ಯಾವುದೇ ಆತಂಕಕಾರಿ ರಸಾಯನಿಕಗಳು ಇಲ್ಲ. ಆರೋಗ್ಯಕ್ಕೆ  ಹಾನಿ ಇಲ್ಲ. ವಾಯು ಮಾಲಿನ್ಯವಿಲ್ಲ
ಪೀಟರ್‌ ಡೆನ್ಹಲ್ಟಜ ಪ್ರಕಾರ “ಇ.ಸಿಗರೇಟು”  ಮಾನವ ಜೀವ ರಕ್ಷಣೆಯ ಅತ್ಯತ್ತಮ ಸಂಶೋಧನೆ.ಅವರನ್ನು ಧೂಮಪಾನದಿಂದ ಆಗುವ  ಪ್ರಾಣ ಹಾನಿ ತಪ್ಪಿಸುವುದು.
ಇದು ಧೂಮಪಾನ ಚಟ ಬಿಡಿಸಲು ಬಹಳ ಸಹಕಾರಿ. ಇದರ ನಿಷೇಧದಿಂದ ತಂಬಾಕಿನ ಚಟದಿಂದ ಬಿಡುಗಡೆಹೊಂದ ಬಯಸುವವರಿಗೆ ಅನ್ಯಮಾರ್ಗ ಮುಚ್ಚಿ ಹೋಗುತ್ತದೆ.
ಭಾರತದಲ್ಲಿ  ಸಿಗರೇಟು ಸೇದುವುದ ಕಾನೂ ಬಾಹಿರ ಅಲ್ಲ.ಆದರೆ ಸಾರ್ವಜನಿಕ  ಸ್ಥಳಗಳಲ್ಲಿಕೂಡದು ಆದರೆ ಇದು ಧೂಮಪಾನ ಅಲ್ಲವಾದ್ದರಿಂದ ನಿಷೇಧಕ್ಕೆ ಒಳಗಾಗಿಲ್ಲ
ಇದು ಇತ್ತೀಚಿನದದ್ದಾರಿಂದ ಕಾನೂತ್ಮಕ ಸ್ಪಷ್ಟತೆ ಇಲ್ಲ.ಇದು ತಂಬಾಕು  ಅಲ್ಲ ಅಥವ ಅಮಲು ತರುವ ಪದಾರ್ಥವಲ್ಲ.ಆದ್ದರಿಂದ ನಿರ್ಧಿಷ್ಟ ನಿಲವು ತಳೆದಿಲ್ಲ. ಭಾರತದಲ್ಲಿ ನಿಷೇಧವಿಲ್ಲ. ಅಮೆರಿಕಾದಲ್ಲಿಫೆಡರಲ್‌ ಸರ್ಕಾರವು ನಿಯಂತ್ರಿಸಿದೆ. ಯುರೋಪಿನ ಒಂದೊಂದು ದೇಶದಲ್ಲಿಒಂದೊಂದು ನಿಲವು ಇದೆ.
ಐದು ವರ್ಷದ ಕೆಳಗೆ ೫೦ ಸಾವಿರದಿಂದ ಈಗ ನಾಲ್ಕು ವರ್ಷದಲ್ಲಿ ೩.೫ ಮಿಲಿಯನ್‌ ಬಳಕೆಯಾಗುತ್ತಿದೆ ಐವರಲ್ಲಿ ಒಬ್ಬ ಧೂಮಪಾನಿಗಳು ಇದನ್ನು ಬಳಸುತ್ತಿರುವರು.ಯುವಜನರಲ್ಲಿ ಇದರ ಬಳಕೆ ಒಂದೇ ವರ್ಷದಲ್ಲಿ ದುಪ್ಪಟ್ಟಾಗಿದೆ.
ಒಂದು ಸಮೀಕ್ಷೆಯಪ್ರಕಾರ.
. 67% ತಂಬಾಕುಬಳಕೆದದಾರ ಇ.ಸಿಗರೇಟಿನ ಬಳಕೆಯಿಂದ ತಂಬಾಕು ಸೇವನೆ ಕಡಿಮೆ ಮಾಡಿದ್ದಾರೆ.. ಇತ್ತೀಚೆಗೆ ಸಿಗರೆಟ್‌ ಸೇವನೆ ಬಿಟ್ಟವರಲ್ಲಿ, 84% ( ಸಮೀಕ್ಷೆಯ 1% ಜನ) ಚಟ ವಿಮುಕ್ತರಾಗಲು ಇ.ಸಿಗರೆಟ್‌ ಕಾರಣ ಎಂದಿರುತ್ತಾರೆ.
ಹಬೆಸೇವನೆ  ಮಾಡುವವರದೇ ಒಂದು ಉಪಸಂಸ್ಕೃತಿ ಯಾಗಿದೆ ಅದನ್ನು ವೇಪ್‌ಸಮುದಾಯ ಅಥವ ಹಬೆ ಸೇವನಾ ಸಮುದಾಯ ಎನ್ನಬಹುದು
ಸಾರ್ವಜನಿಕಾರೋಗ್ಯ ಅಧಿಕಾರಿಗಳು  ಯುವಜನರಲ್ಲಿ ಇ.ಸಿಗರೇಟಿನ ರೂಪದಲ್ಲಿ ಧೂಮಪಾನ ಜನಪ್ರಿಯವಾಗುತ್ತಿರವುದನ್ನು ಗಮನಿಸಿ ಅದರ ನಿಯಂತ್ರಣಕ್ಕೆ ಈ ಕ್ರಮ ತೆಗೆದುಕೊಂಡಿರುವರು.
ಒಂದುಕ್ಷಣ ಕಲ್ಪನೆ ಮಾಡಿಕೊಳ್ಳಿ ಬಾರ್ನಲ್ಲಿ ಇಪ್ಪತ್ತು ಜನಈ . ಸಿಗರೆಟು ಸೇದುತ್ತಿರುವರು.. ಅದರಲ್ಲಿ ತಂಬಾಕಿನ ವಾಸನೆಯೂ ಬರುವುದು. ಯಾರು ಧೂಮಪಾನ ಮಾಡುತ್ತಿರುವರು ಎಂದು ಗುರುತಿಸುವಲ್ಲಿ ಗೊಂದಲವಾಗುವುದು.
ತಂಬಾಕು ಮತ್ತು ನಿಕೊಟಿನ್ ಸಂಶೋಧನಾ ಪತ್ರಿಕೆಯ ಪ್ರಕಾರ ಸಾಮಾನ್ಯ  ಸಿಗರೇಟನ್ನು ಹೋಲುವ  ಇ.ಸಿಗರೇಟಿನಿಂದ ಅಂಥಹ ಹಾನಿಇಲ್ಲ  ಆದರೆ ಅಧಿಕಶಕ್ತಿಗಾಗಿ ಬಳಸುವ ಟ್ಯಾಂಕ್‌ ಕ್‌ಸಿಸ್ಟಮ್‌,  ಫಾರ್ಮಾಲ್ಡಿಹೈಡ್‌ ಅನ್ನು ಉತ್ಪಾದಿಸುವುದು. ಅದು ಕಾರ್ಸಿನೋಜೆನ್‌ ಉಗಮಕ್ಕೆ ಕಾರಣ. ಅತಿಅಧಿಕ ಉಷ್ಣತೆಯಲ್ಲಿ  ದ್ರವ ನಿಕೊಟಿನ್‌ನಿಂದ    ಉಂಟಾಗುವುದು.ಅದಲ್ಲದೆ ಹೆಚ್ಚುಪ್ರಭಾವಕ್ಕಾಗಿ ಕೆಲವರು  ನಿಕೊಟಿನ್‌  ದ್ರವದ ಹನಿಗಳನ್ನು ನೇರವಾಗಿ ಕಾದ ತಂತಿಯ  ಮೇಲೆ ಚಿಮುಕಿಸುವರು. ಇದನ್ನು ಡ್ರಾಪಿಂಗ್‌ ಎನ್ನವರು. ಇಲ್ಲಿಸಹಾ ಕ್ಯಾನಸರ್‌ ಕಾರಕ ಅಂಶಗಳು ಹೆಚ್ಚಾಗಿರುವ ಸಾಧ್ಯತೆ ಇದೆ.
ಇದನ್ನು -ಸಿಗರೇಟ್ ಎಂದು ಮಾರುಕಟ್ಟೆಗೆ ಬಿಟ್ಟುದುದರಿಂದ ಕಾನೂನಿನ ಕಳವಳಕ್ಕೆ ಕಾರಣ.ಇದರ ನಿಷೇಧದಿಂದ ತಂಬಾಕು ಸೇವನೆಗೆ ಪರ್ಯಾಯವೇ ಇಲ್ಲದಂತಾಗುವುದು ಚಟ ಮುಕ್ತರಾಗುವ ಅವಕಾಶದಿಂದ ವಂಚಿತರಾಗುವರು ಜೊತೆಗೆ ಮಾಜಿ ಧೂಮಪಾನಿಗಳೂ ಗಲಿಬಿಲಿಗೊಳಗಾಗುವರ ತಂಬಾಕುತುಂಬಿದ ಸಾಧಾರಣ ಸಿಗರೇಟಿಗೆ ಬದಲಾಗಿ ಧೂಮಪಾನಿಗಳಲ್ಲಿ ಜನಪ್ರಿಯವಾಗಿರುವ   ಧೂಮೋತ್ಪಾದನಾ ಉಪಕರಣವಾದ ಎಲೆಕ್ಟ್ರಾನಿಕ್ ಸಿಗರೇಟ್ ಅನ್ನು ಸಾಮಾನ್ಯ  ಸಿಗರೇಟಿನಂತೆ ಪರಿಗಣಿಸಿ ನಿಷೇಧ ಹೇರಿರುವುದು. ಅದರ ಉತ್ಪಾದಕರ,  ಮಾರಾಟಕಾರರ ಮತ್ತು ಬಳಕೆ ದಾರರಲ್ಲಿ   ಅಸಮಧಾನ ಉಂಟು ಮಾಡಿದೆಆದರೆ ಇದು ಧೂಮಪಾನವನ್ನು ಇನ್ನೊಂದು ರೂಪದಲ್ಲಿ ತುರುವುದು ಎಂದು ಕಾನೂನು ತಜ್ಞರ ಅನಿಸಿಕೆ.
ಅಂತೂ ಹೊಗೆ ಸೇವನೆ ಬಿಡಿ ಎನ್ನುವ ಬದಲು ಹಬೆ ಸೇವನೆ ಮಾಡಿ ಎಂದು ಹೇಳುವ ಕಾಲ ಬಂದಿದೆ.,







No comments:

Post a Comment