Monday, April 28, 2014

ಪಾಟಿ ಪುರಾಣ

                              ಪಾಟಿ ಪುರಾಣ   
 ಮೊದಲೇ ಹೇಳಿ ಬಿಡುವೆ. ನಾನು ಬರೆಯುತ್ತಿರುವುದು ಚಿಕ್ಕವರು  ಬರವಣಿಗೆ ಕಲಿಯಲು ಬಳಸುವ ಪಾಟಿ ಬಳಪದ ಕುರಿತು ಅಲ್ಲ. ನಮ್ಮೆಲ್ಲರ ಬೆಳಗಿನ ಮೊದಲ ಕೆಲಸ  ಕುರಿತು. ಅಂದರೆ  ಹಳ್ಳಿಗಳಲ್ಲಿ  ಬೈಲುಕಡೆ ಹೋಗುವುದು ಎನ್ನುವರು  ಹಳ್ಳಿಗರು ಬೆಳಗ್ಗೆ   ಹೊಲದಲ್ಲಿ ತಂಬಿಗೆ ತೊಗಂಡು ಹೋಗಿ  ಮಾನವ ಗೊಬ್ಬರ ಹಾಕಿ ಬರುವುದು ವಾಡಿಕೆ,.ಬೇಲಿಯ ಬದಿ ಬಿಸಿನೀರು ಬಿಡುತಿದ್ದವರೂ ಉಂಟು.ಕೆರೆ,ಕುಂಟೆ ಬಾವಿ, ಹೊಳೆ ಇದ್ದರೆ ಮುಗಿಯಿತು. ಅಲ್ಲಿಯೇ ಎಲ್ಲ. ಆ  ಕಾರ್ಯಕ್ರಮಕ್ಕೆ ಮೀಸಲಾದ ಜಾಗವನ್ನು ಒಂದೊಂದು ಕಡೆ ಒಂದೊಂದು ಹೆಸರಿನಿಂದ ಕರೆಯುವರು. ಈಗ  ನಾಗರೀಕವಾಗಿ ಬಾತ್‌ರೂಮ್‌ ಎನ್ನುವರು. ನಮ್ಮಲ್ಲಿನ್ನೂ ಮನೆಗೊಂದು ಕಡ್ಡಾಯ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಹೊರಾಂಗಣ ಕಾರ್ಯಕ್ರಮಕ್ಕೆ  ಕೊನೆ ಹಾಡಲು ಯೋಜನೆ ಹಾಕಿಕೊಂಡಿದೆ. ಆದರೆ ಇಲ್ಲಿ ಆ ಸಮಸ್ಯೆ  ಇಲ್ಗ. ಮನೆಗೆ ಎರಡು ಮೂರು ಬಾತ್‌ರೂಮ್‌.
ಬೆಡ್‌ರೂಮಿಗೆ ಒಂದರಂತೆ ಬಾತ್‌ರೂಮ್‌ ಕಡ್ಡಾಯ. ಜೊತೆಗೆ  ಹೊರಗಿನವರಿಗಾಗಿ ಬೇರೊಂದು. ಇರುತ್ತವೆ. ಸಾರ್ವಜನಿಕ  ಸ್ಥಳಗಳಾದ  ಮಾಲ್ , ಹೋಟೆಲ್, ಗುಡಿ ,ಚರ್ಚ , ಮ್ಯೂಜಿಯಂ   ಎಲ್ಲ   ಕಡೆ ಇವು  ಇರಲೇ ಬೇಕು. ಇಲ್ಲಿ  ಟಾಯಿಲೆಟ್‌ ಸಂಡಾಸ, ಲೆಟ್ರಿನ್‌ ಅನ್ನುವ ಹಾಗಿಲ್ಲ. ಅವಕ್ಕೆ ರೆಸ್ಟ್‌  ರೂಂ ಅನ್ನುವರು. ಒಂದು ರೀತಿಯಲ್ಲಿ ಅನ್ವರ್ಥಕವಾಗಿರುತ್ತವೆ. ಆರಾಮಾಗಿ ಕುಳಿತು ವಿಶ್ರಾಂತಿ ಪಡೆಯುವಹಾಗಿರುತ್ತವೆ. .ಅಲ್ಲಿ ಕಮೋಡುಗಳು. ಅಂದರೆ  ಬುಟ್ಟಿಯ ತರಹದ ಬೇಸಿನ್‌ಗಳು  ಇರುತ್ತವೆ. . ಇತ್ತೀಚೆಗೆ ನಮ್ಮಲ್ಲೂ ಪಾಶ್ಚಿಮಾತ್ಯ ಶೌಚಾಲಯಗಳು ಬಂದಿವೆ. ಆದರೆ  ನಮ್ಮಲ್ಲಿ  ನೀರಿನ ಸೌಕರ್ಯ ಇರುತ್ತದೆ.  ಇಲ್ಲಿ ನೀರೇ ನಾಪತ್ತೆ.  ಹಾಗೆಂದು ನೀರು ಇಲ್ಲ ಎನ್ನುವ ಹಾಗಿಲ್ಲ. ನೀರಿನ ಕೊರತೆ ಇಲ್ಲಿ ಇಲ್ಲ.  ಇಲ್ಲಿ ಉಪ್ಪುನೀರು ಸವಳು ನೀರು ಎನ್ನುವ ಭಿನ್ನತೆ ಇಲ್ಲ. ಎಲ್ಲವೂ ಸಿಹಿ ನೀರೆ. ನಳದಲ್ಲಿ ಸದಾ ಹರಿಯುವ ನೀರು. ಅದೂ ಒಂದು ತರಹದ್ದಲ್ಲ. ಒಂದೇ ನಳದಲ್ಲಿ ಎಡಕ್ಕೆ ತಿರುಗಿಸಿದರೆ ಬಿಸಿ ನೀರು ಬಲಕ್ಕತಿರುಗಿಸಿದರೆ ತಣ್ಣೀರು.ಬಿಸಿನೀರಂತೂ  ಉಗುರು ಬೆಚ್ಚಗಿನಿಂದ ಹಿಡಿದು ಕೈ ಸುಡವಷ್ಟು ಬಿಸಿ..ಆದರೆ ತೊಳೆದು ಕೊಳ್ಳಲು ಪಡಿಪಾಟಲು. ಟಿಸ್ಯೂ ಪೇಪರ್‌ ಬಳಸುವರು. ಬಳಸುವ ಅಭ್ಯಾಸ ವಿಲ್ಲದವರದು ಸಂಕೋಚದ ಸ್ವಭಾದವರಿಗೆ ದೇವರೇ ಗತಿ.
  ನಾವು ಮೊದಲ ಸಲ ಹೋದಾಗ ನಮ್ಮ ಮಗಳ ಗೆಳತಿಯ ಮನೆಗೆ ಹೋಗಿದ್ದೆವು ಅವರು ಆಂಧ್ರದ ಕಡೆವರು ತಾಯಿ ಹಳ್ಳಿಯ ಹೆಂಗಸು.ಬಂದು ಮೂರುದಿನವಾಗಿತ್ತು ಊಟ ತಿಂಡಿ ಸೇವಿಸದೆ ಊರಿಗೆ ಕಳುಹಿಸು ಎಂದು ಹಟ ಹಿಡಿದು ಕುಳಿತಿರುವರು.ಆ ಹುಡುಗಿ,”  ಆಂಟಿ , ನೀವಾದರೂ ಹೇಳಿ” ಎಂದಾಗ ನನ್ನ ಹೆಂಡತಿ ಅವರೊಡನೆ ತುಸು ಹೊತ್ತು ಮಾತನಾಡಿ ನಗುತ್ತಾ ಹೊರಬಂದರು.ಬಂದವರಿಗೆ ದೊಡ್ಡ ಸಮಸ್ಯೆ  ಎಂದರೆ ಸಂಡಾಸಕ್ಕೆ ಹೋಗುವುದು. ಅವರಿಗೆ  ಕಮೋಡು ಮೇಲೆ ಕೂಡುವುದು ಹೊಸದು. ಬಂದ ದಿನವೇ ಅದರ ಮೇಲೆ ನೆಲದ ಮೇಲೆ ಕೂಡುವಂತೆ ಕಾಲೂರಿಕೊಂಡು ತುದಿಗಾಲಲ್ಲಿ ಕೂತಿದ್ದಾರೆ. ಕಮೋಡ್‌ ಮೇಲಿನ ಮೇಲಿನ ಪ್ಲಾಸ್ಟಿಕ್‌  ಜಾರಿದೆ.. ಅವರಿಗೆ ಕೂತ ಜಾಗ ನಡುಗಿದಂತೆ.ಅನಿಸಿ ಭೂಕಂಪವಾಗಿದೆ ಎಂದು ಗಾಬರಿ ಗೊಂಡಿರುವರು.ನಂತರ ಶುಚಿ ಮಾಡಿಕೊಳ್ಳಲು ನೀರೇ ಇಲ್ಲ. . ಕಾಗದದಿಂದ ಶುಚಿಮಾಡಿಕೊಳ್ಳಲು ಅವರಿಗೆ ಮುಜುಗರ. ಅದಕ್ಕೆಂದೆ ಏನಾದರೂ ತಿಂದರೆ ತಾನೆ ಹೊರ ಹೋಗುವುದು . ಮಗಳಿಗೆ ಅಳಿಯನಿಗೆ ಹೇಗೆ ಹೇಳುವುದು.  ಅದಕ್ಕೆ ಅನ್ನಸತ್ಯಾಗ್ರಹ ಮಾಡಿದ್ದರು.ನಮ್ಮ ಮನೆಯವರು ಸರಳ ಪರಿಹಾರ ಸೂಚಿಸಿದ್ದರು ಅದರ ಮೇಲೆ  ಕೂಡುವ ವಿಧಾನವನ್ನು ತಿಳಿಸಿ ಜೊತೆಗೆ. ಹೋಗುವಾಗ ಒಂದುಪಾತ್ರೆ ಒಯ್ದು ನೀರು ತುಂಬಿ ಬಳಸಲು ತಿಳಿ ಹೇಳಿದ್ದರು.  ಹಳ್ಳಿಯಿಂದ ಬಂದವರಿಗೆ ಇದೊಂದು ದೊಡ್ಡ ಸಮಸ್ಯೆ ಎನಿಸಿತ್ತು.. 
ಒಂದು ರೀತಿಯಲ್ಲಿ ಹೀಗೆ ಹೋಗುವುದ ನಮ್ಮಲ್ಲಿ ಹೊಸದೇನು ಅಲ್ಲ. ನಮ್ಮಲ್ಲಿ ಫ್ಲಷ್‌  ಔಟ್ ಸಂಡಾಸ ಬರುವ ಮೊದಲು ಉಳ್ಳವರು ಮನೆಯಲ್ಲಿ ಹೆಣ್ಣು ಮಕ್ಕಳಿಗಾಗಿ ನಿರ್ಮಿಸಿದ್ದ ಸಂಡಾಸವೇ ತಲೆಯ ಮೇಲೆ ಮಲ ಹೊರುವ ಪದ್ದತಿಗೆ ಮೂಲವಾಗಿತ್ತು. ಪ್ರತಿ ದಿನ  ಬುಟ್ಟಿಯಲ್ಲಿ ಸಂಗ್ರಹವಾದದನ್ನು ಒಯ್ಯಲು ಊರಿಗೆ ಒಬ್ಬರು ಇರುತಿದ್ದರು. ಅದೂ ಬಹುತೇಕ ಕೆಳವರ್ಗದವರು.  ಬಸವಲಿಂಗಪ್ಪ  ಮಂತ್ರಿಯಾದ ನಂತರ  ಆ ಕೆಟ್ಟ ಪದ್ದತಿ  ಕೊನೆ ಆಯಿತು.ಅದಕ್ಕೇ ನಾನು ಪುಟ್ಟಿಯಲ್ಲಿ ವಿಸರ್ಜನೆ ಎಂದದ್ದು.
ಈಗಲೂ  ಬುಟ್ಟಿಯಲ್ಲಿ ವಿಸರ್ಜನೆ ಮಾಡುವುದು ಹೊಸದೇನಲ್ಲ. ಆಧುನಿಕರೂ ವಿಶೇಷ ಸಮಯದಲ್ಲಿ   ಬಳಸುವರು.  ಅದನ್ನೇ   ಬೆಡ್‌ಪ್ಯಾನ್‌ ಎಂದು ಆಸ್ಪತ್ರೆಯಲ್ಲಿ ಎನ್ನುವರು.  ನನಗೆ ಐವತ್ತು ವರ್ಷದ ಹಿಂದಿನದು ಜ್ಞಾಪಕ ಬರುವುದು ಆ ಸಮಯದಲ್ಲಿ ಹೆರಿಗೆಯಾದರೆ ಪ್ರತ್ಯೇಕವಾಗಿ  ತಿಂಗಳು ಗಟ್ಟಲೆ ಕತ್ತಲ ಕೋಣೆಯಲ್ಲಿ ಇಡುತಿದ್ದರು . ಅಲ್ಲಿ ಹೋಗಲು   ಹೊರಗಿನವರಿಗೆ ಅವಕಾಶವೇ ಇರಲಿಲ್ಲ.ಬಾಣಂತಿಯೂ  ಹೊರ ಬರುತ್ತಿರಲಿಲ್ಲ. ಊಟ , ವಿಸರ್ಜನೆ  ಎಲ್ಲಾ ಅಲ್ಲಿಯೇ.   ವಿಸಜರ್ಜನೆಗೆ   ಮರದಲ್ಲಿ ಬೂದಿ   ಹಾಕಿ ಕೊಡುತಿದ್ದರು ನಂತರ ಅದನ್ನು ತಿಪ್ಪೆಯಲ್ಲಿ ಹಾಕುತಿದ್ದರು.ಕಾರಣ ಸರಳ. ಸೋಂಕು ಆಗದಿರಲಿ ಎಂದು. ಈಗ ಬೂದಿಯೂಇಲ್ಲ, ಮರವೂ ಮರೆಯಾಗಿದೆ.ಅದರ ಜಾಗಕ್ಕೆ ಬೆಡ್‌ಪ್ಯಾನ್‌ಬಂದಿದೆ,
ವಿದೇಶಕ್ಕೆ ಹೋಗುವವರು  ಮೊದಲು ಅಭ್ಯಾಸ ಮಾಡಿಕೊಳ್ಳ ಬೇಕಾದ ವಿಷಯ ಇದು.  ಸಾಧ್ಯವಾದರೆ  ಬೆಂಗಳೂರಿನಲ್ಲಿರುವ ಮಲ್ಟಿ ಪ್ಲೆಕ್ಸ್‌ನಲ್ಲಿ ಸಿನೆಮಾಕ್ಕೆ ಹೋದರೆ ಅಲ್ಲಿರುವ ಶೌಚಾಲಯಗಳ್ಲಿ ಅತ್ಯಾಧುನಿಕ ವ್ಯವಸ್ಥೆ ಇದೆ. ಇನ್ನು ನೀರು ಬಳಸದಿರುವ ವಿಷಯ. ಅದು ಅಂಥಹ ದೊಡ್ಡದೇನೂ ಅಲ್ಲ. ಎಷ್ಟೋ ಹಳ್ಳಿಗರ ಮನೆಯಲ್ಲಿ ಚಿಕ್ಕ ಮಕ್ಕಳೂ  ಇಸಿ  ಮಾಡಿಕೊಂಡಾಗ ಬಟ್ಟೆ ಯಿಂದ ಒರೆಸುವರು. ಮನೆಯಲ್ಲಿ ಎಲ್ಲಂದರಲ್ಲಿ ಮಾಡಿದ್ದರೆ ಕಾಗದದಿಂದ ಒರಸಿ ಹೊರಗೆ ಎಸೆಯುವುದುನ್ನು ನಾವೆಲ್ಲ ಚಿಕ್ಕವರಿದ್ದಾಗ ನೋಡಿರವೆವು.  ಹೊಲದಲ್ಲಿ  ತುರ್ತಾಗಿ ಹೋದಾಗ ನೀರಿಲ್ಲದಿದ್ದರೆ ಕಲ್ಲು  ಇಲ್ಲವೇ ಲೆಕ್ಕಿ ಎಲೆ ಬಳಸಿ ಬಿಸಾಕುತಿದ್ದವರನ್ನು ನೋಡಿರುವೆವು.ಅದು ಅನಾಗರೀಕರ ರೀತಿ. ಅದಕ್ಕೆ ನಾಗರೀಕತೆಯ ರೂಪ ಕೊಟ್ಟರೆ ಈ ವಿಧಾನ .ಇನ್ನೊಂದು ವಿಷಯ ಗಮನಿಸ ಬೇಕು. ಇಲ್ಲಿನ ಎಲ್ಲ ಮನೆಗಳಲ್ಲಿ ನೆಲಕ್ಕೆ ಕಾರ್ಪೆಟ್‌ ಹಾಕಿರುವರು.ಹಾಗಾಗಿ ಕಸ ಬಳಿಯುವ ಪ್ರಮೇಯ ಇಲ್ಲ. ವಾರಕ್ಕೋ ತಿಂಗಳಿಗೋ ಒಮ್ಮೆ ವ್ಯಾಕ್ಯೂಮ್‌ ಕ್ಲೀನರ್‌ಬಳಸಿ ಶುದ್ಧ ಮಾಡುವರು. 
ಸಹಜವಾಗಿ ಏಳುವ ಪ್ರಶ್ನೆ ಎಂದರೆ ಚಿಕ್ಕ ಮಕ್ಕಳು ಎಲ್ಲಂದರಲ್ಲಿ ಒಂದು, ಎರಡು ಮಾಡಿಕೊಂಡರೆ ಹೇಗೆ ? ಅದನ್ನಂತು ತಡೆಯಲಾಗುವುದಿಲ್ಲ.ಒಂದು ಮಾತು ನಿಜ. ಇಲ್ಲಿನ ಮಕ್ಕಳೂ ನಮ್ಮಲ್ಲಿಯಂತೆ ಒಂದೂ ಎರಡೂ ಮಾಡಿಕೊಳ್ಳುದು ಸಹಜ. ಅದಕ್ಕೆ ಇಲ್ಲಿ ವಿಶೇಷ ಹೆಸರು ಇದೆ. ಒಂದಕ್ಕೆ ಪೀ ಎಂದರೆ ಎರಡಕ್ಕೆ ಪೂಪೂ ಎನ್ನುವರು..ಆದರೆ ಎರಡಕ್ಕೂ ಬಹಳ ಎಚ್ಚರಿಕೆ ವಹಿಸುವರು.  ಕರ್ಣನಂತೆ ಹುಟ್ಟಿದಾಗಿನಿಂದಲೇ ಚಿಕ್ಕಮಕ್ಕಳಿಗೆ ಕವಚ. ಸದಾ ಡಯಪರ್‌ ಹಾಕಿಯೇ ಇರುವರು.ಅವರದು ಎಲ್ಲ ಅಲ್ಲಿಯೇ..ಆಗಾಗ ಡಯಪರ್‌ ಬದಲಾಯಿಸುವರು. ಇಲ್ಲಿ ಮಕ್ಕಳಿಗೆ ಆಹಾರಕ್ಕೆ ಆಗುವ ವೆಚ್ಚಕ್ಕಿಂತ ಅವರ ಡಯಫರ್‌ಗೆ ಹೆಚ್ಚಿನ ವೆಚ್ಚ. ಜೊತೆಗೆ ಸದಾ ಮುಚ್ಮಚಿಯೇ ಇರುವುದರಿಂದ ಆಗುವ ಚರ್ಮದ ತೊಂದರೆಗ ಔಷಧಿ ಉಪಚಾರ ಬೇರೆ. ಅದರಲ್ಲೂ ಅನೇಕ ವರೈಟಿಗಳು. ಅಂತಸ್ಥಿಗೆ ತಕ್ಕಂತೆ ಅವುಗಳ ವೆಚ್ಚ. ನಮ್ಮಲ್ಲಿ ಹಳೆಯ ಪಂಚೆಯಿಂದ ಹೊಲಿಯುತಿದ್ದ  ಒಳಚಡ್ಡಿಯ ಆಧುನಿಕ ರೂಪವೇ ಈ ಡಯಫರ್‌.ಅವನ್ನು ದಿನಕ್ಕೆ ಡಜನ್‌ಗಟ್ಟಲೇ ಬಳಸುವವರೂ ಇದ್ದಾರೆ. ಅದನ್ನು ನೋಡಿದರೆ ತಲೆ ತಿರುಗುತ್ತದೆ.ವಿಶೇಷವೆಂದರೆ ತಾಯಿಯಾಗುವ ಹುಡುಗಿಗೆ ಇಲ್ಲಿ ತರಬೇತಿ ಇದೆ. ಅದರಲ್ಲಿ ಮಗುವಿನ ಡಯಪರ್‌ ಬದಲಾಯಿಸುವುದನ್ನು ಹೇಳಿಕೊಡುವರು. ಅಷ್ಟೇ ಅಲ್ಲ ಅವಳ ಗಂಡನಿಗೂ ಅದರಲ್ಲಿ ತರಬೇತಿ ನೀಡಲಾಗುವುದು. ಪ್ರತಿಯೊಬ್ಬ ತಂದೆಯಾಗುವ ಗಂಡಸಿಗೂ  ಇದನ್ನು ಕಲಿಯುವುದು ಕಡ್ಡಾಯ. ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಪುರುಷರು, ಮಹಿಳೆಯರ   ರೆಸ್ಟ ರೂಮ್‌ ಜೊತೆ ಮಕ್ಕಳ ಡಯಪರ್‌ ಬದಲಾವಣೆಗೂ ವಿಶೇಷ ವ್ಯವಸ್ಥೆ ಇರುತ್ತದೆ.ಇನ್ನೊಂದು ಮಾತು. ಯಾವುದೇ ರಸ್ತೆಯಲ್ಲಿ ಹೋಗುವಾಗಲೂ ಎಲ್ಲಂದರಲ್ಲಿ ಕಾರು ನಿಲ್ಲಿಸಿ ನಿಸರ್ಗದ ಕರೆಗೆ ಓ ಗೊಡಲು ಹೋಗಲಾಗದು. ನಮ್ಮಲಿನ ಹೈವೇಗಳಿಗೆ ಇಲ್ಲಿ ಎಕ್ಸ ಪ್ರೆಸ್‌ ವೇ ಎನ್ನುವರು. ಕಾರಿನಲ್ಲಿ ಹೋಗುವವರಿಗಾಗಿ ಇಪ್ಪತ್ತು ಮೂವತ್ತು ಮೈಲಿಗೆ ಒಂದು ಸೇವಾ ಕೇಂದ್ರ ವಿರುವುದು. ಅಲ್ಲಿ ಜನರಿಗೆ ಊಟ ಉಪಹಾರ  ತಿಂಡಿ ತೀರ್ಥ ಬೇಕಾದ ಇತರೆ ಸಾಮಾನು ಕಾರಿನ ಪೆಟ್ರೋಲು ಹಾಗು ಇತರೆ ಸೇವೆ, ಜೊತೆಗ ಶೌಚಾಲಯಗಳ, ಔಷಧಿಅಂಗಡಿ ಇರುತ್ತವೆ. ಅದರಲ್ಲೂ ಹಲವು ಕಡೆ ಸಾಮಾನ್ಯ ಔಷಧಿಗಳನ್ನು ವೆಂಡರ್‌ ಮೆಷಿನ್‌ಗಳ ಮೂಲಕ ಪಡೆಯುವ ವ್ಯ ವಸ್ಥೆಯೂ ಇದೆ.  ಜನರು ಅಲ್ಲಿ ಮಾತ್ರ ತಮ್ಮ  ಅಗತ್ಯ ಪೂರೈಸಿಕೊಳ್ಳಬೇಕು  ಮಧ್ಯದಲ್ಲಿ ಹೋಗುವ ಮಾತೇ ಇಲ್ಲ. ಇತ್ತೀಚೆಗೆ ನಮ್ಮಲ್ಲೂ ಬಸ್‌ ನಿಲ್ದಾಣದಲ್ಲಿ ಈ ವ್ಯವಸ್ಥೆ  ಇದೆ. ರಾತ್ರಿ ದೂರದ ಪ್ರಯಾಣದಲ್ಲಿ ಬಸ್ಸು ನಿಲ್ಲಿಸುವರು. ಆದರೆ ಅಲ್ಲಿನ ಸ್ಥಿತಿ ದೇವರಿಗೇ ಪ್ರೀತಿ ಇಲ್ಲಿ  ಹಾಗಲ್ಲ. ಎಲ್ಲಕ್ಕೂ ಗುಣಮಟ್ಟ ಕಾಪಾಡಿಕೊಳ್ಳುವುದು ಕಡ್ಡಾಯ.ಅನೇಕ ಕಡೆ ತಿನ್ನುವ ಜಾಗಕ್ಕಿಂತ ಈ ಸ್ಥಳಗಳು ಆಕರ್ಷಕ ಮತ್ತು ಶುಚಿ ಯಾಗಿರುತ್ತವೆ.. 

ಜಾನಿ
ಇನ್ನು ಇಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಏರ್ಪಡಿಸಬೇಕಾದರೆ ಅನುಮತಿ ಪಡೆಯಲು ಮೊದಲ ಅಗತ್ಯ . ಜಸೇರುವ ಜನರ ಸಖ್ಯೆಗೆ ಅನುಗುಣವಾಗಿ ಸಾಕಷ್ಟು ಮೊಬೈಲ್ ಅಥವ ಜಂಗಮ  ರೆಸ್ಟರೂಮ್‌ ವ್ಯವಸ್ಥೆ ಮಾಡುವುದು  ಕಡ್ಡಾಯ. ಅವನ್ನು ನಮ್ಮಲ್ಲಿ ಷಾಮಿಯಾನ, ಕುರ್ಚಿ, ಮೇಜುಗಳನ್ನು ಬಾಡಿಗೆ ಕೊಡುವಂತೆ ಬಾಡಿಗೆ ಒದಗಿಸುವರು. ಅವುಗಳಲ್ಲೂ  ಆಯ್ಕೆಗೆ ಅವಕಾಶವಿದೆ.

ಸಾಧಾರಣವಾಗಿ ಅವನ್ನು ಜಾನಿ ಎನ್ನುವರು.  ಅವುಗಳಲ್ಲೂ ವೈಭವೋಪೇತ  ಮಾದರಿಗಳೂ ಸಿಗುತ್ತವೆ. ನೂರಾರು ಜನ ದಿನಗಟ್ಟಲೆ ಸೇರ ಬಹುದಾದ ಕಾರ್ಯಕ್ರಮಗಳ್ಲಿ ನಾಲ್ಕಾರು  ಜಾನಿಗಳು ಕಡ್ಡಾಯವಾಗಿ ಇರಲೇ ಬೇಕು.


ಮತ್ತೊಂದು ಮೋಜಿನ ಸಂಗತಿ ಎಂದರೆ ಈ ದೇಶದಲ್ಲಿ ಅತ್ಯತ್ತುಮವಾದ ರೆಸ್ಟರೂಮಿಗೆ ರಾಷ್ಟ್ರ  ಮಟ್ಟದ ಸ್ಪರ್ಧೆ.ಅವಕ್ಕೆ ಲಕ್ಷಾಂತರ ಡಾಲರ್‌ ಬಹುಮಾನ ಮತ್ತು ಪ್ರಶಸ್ತಿ.ಅದನ್ನು ಪಡೆಯಲು ಪಂಚತಾರಾ ಹೋಟೆಲ್‌ಗಳು ಸಪ್ತತಾರಾ ಹೋಟೆಲ್‌ಗಳು ಕೂಡಾ ಭಾಗವಹಿಸುತ್ತವೆ. ಮತ್ತು ಹೆಮ್ಮೆಯಿಂದ ಪಾರಿತೋಷಕವನ್ನು ಪ್ರದರ್ಶಿಸುತ್ತವೆ.
ಈ  ವರ್ಷದ ಅತ್ಯತ್ತಮ ರೆಸ್ಟ ರೂಂಪ್ರಶಸ್ತಿ ಪಡೆದ ವಾರ್ಸಿಟಿ ಥೇಟರ್‌  ರೆಸ್ಟ ರೂಮ್‌ ವಿಶೇಷವೆಂದರ ಅಲ್ಲಿ ಕುಳಿತೇ ಸಂಗೀತ ಕೇಳಬಹದು ಮತ್ತು ನಡೆಯುತ್ತಿರುವ ಕಾರ್ಯಕ್ರಮ ನೋಡಬಹುದು ಜೊತೆಗೆ ಪಾನೀಯವನ್ನು ಸೇವಿಸಬಹುದು




ಕಣ್ಣಿಗೆ , ಕಿವಿಗೆ ರೆಸ್ಟ ಕೊಡದ ಥೇಟರಿನ ರೆಸ್ಟ ರೂಮ್‌



ಈ ದೇಶದಲ್ಲಿ  ಮಕ್ಕಳಿಗೆ ಮೊದಲ ಶಿಕ್ಷಣವೆಂದರೆ ಪಾಟಿ ತರಬೇತಿ. ಶಿಶುವಿಹಾರಕ್ಕೆ ಕಳುಹಿಸುವ ಮೊದಲು  Potty training ಅನ್ನು  ಕೊಡುವರು.  Pot  ನ ಇನ್ನೊಂದು ರೂಪ ಪಾಟಿ. ಈಗ ತಿಳಿಯಿತಲ್ಲ ಪಾಟಿ  (Potty)  ಪುರಾಣದ ಅರ್ಥ

.

ಅಂತಿಮ ಹಂತಕ್ಕೆ ಬಂದ ಇನ್ನೊಂದು ರೆಸ್ಟ ರೂಮ್‌

ರೆಸ್ಟರೂಮ್‌ ನಲ್ಲಿ ಐಸ್‌ಕ್ರೀಂನ ಬೇಕಾದ  ಪರಿಮಳ ಹೊರಹೊಮ್ಮುವುದು   




No comments:

Post a Comment