Tuesday, December 4, 2012

ಅಮೇರಿಕಾ ಅನುಭ -೪







ಕ್ಯಾಷ್‌ಕ್ಯಾಬ್‌
ಅಮಿತಾಬ್‌ಬಚನ್‌ನಿಂದಾಗಿ ಮನೆ ಮಾತಾದ  ಟಿವಿ ಸರಣಿ “ಕೌನ್‌ಬನೇಗಾ ಕರೋಡ್‌ಪತಿಯ”  ಮಿನಿ ಮಾದರಿ ನ್ಯೂಯಾರ್ಕನ ರಸ್ತೆಯಲ್ಲಿ ಕಂಡೆ. ನೀವೇನಾದರೂ ನ್ಯೂಯಾರ್ಕನಲ್ಲಿ  ಕ್ಯಾಬ್‌ಹಿಡಿದು ಓಡಾಡಲು ಹೋದರೆ ಈ ಅವಕಾಶ ಸಿಕ್ಕರೂ ಸಿಕ್ಕೀತು ಈ ಕಂಪನಿಯ . ಹದಿನೈದು ಸಾವಿರ ಕ್ಯಾಬ್‌ಗಳಿವೆ. ಅದರಲ್ಲಿ ಯಾವುದೋ ಒಂದರಲ್ಲಿ ಮಾತ್ರ ಈ ಸೌಲಭ್ಯವಿದೆ. ಹೊರ ನೋಟಕ್ಕೆ ಯಾವದು ಎಂದು ಗೊತ್ತಾಗುವುದೆ ಇಲ್ಲ.  ಎಲ್ಲಿಗೋ ಹೋಗಲು  ಟ್ಯಾಕ್ಸಿಗೆ  ಕೈ ಮಾಡಿ ಕರೆಯುವವಿರಿ.
 ಕ್ಯಾಬ್‌ಒಳಗೆ ಹತ್ತಿದೊಡನೆ ಚಾಲಕ ಕೇಳುವನು . "ನೀವು ಹಾದಿ ಸವೆಸುತ್ತಾ ಹಣ ಗೆಲ್ಲಲು ಬಯಸುವಿರಾ ?
 ಸ್ಪರ್ಧೆಯಲ್ಲಿ  ಭಾಗವಹಿಸಲು ಬಯಸಿದರೆ ಸರಿ  . ಇಲ್ಲವಾದರೆ  ಮುಲಾಜೆ ಇಲ್ಲ. ಇಳಿದು ಇನ್ನೊಂದು ಟ್ಯಾಕ್ಸಿ ಹುಡುಕಬೇಕು.
ಹತ್ತಿದ ಕೂಡಲೆ   ಹೇಳುವನು ರಸ ಪ್ರಶ್ನೆಯ ನಿಯಾಮಾವಳಿ .ನಿಮ್ಮ ಗಮ್ಯಸ್ಥಾನ ಸೇರುವವರೆಗೆ ಪ್ರಶ್ನೆ ಕೇಳುತ್ತಾ ಹೋಗುವನು .  ಒಂದೊಂದು ಸರಿ ಉತ್ತರಕ್ಕೆ ಐವತ್ತು ಡಾಲರ್‌ಬಹುಮಾನ. ನಾಲಕ್ಕು ಪ್ರಶ್ನೆಗಳಾದ ಮೇಲೆ ೧೦೦ ಡಾಲರ್‌. ನಂತರ ೨೫೦ ಡಾಲರ್‌,  ಪ್ರತಿ ಪ್ರ ಶ್ನೆಗೆ ಮೂರು ನಿಮಿಷ ಕಾಲಾವಧಿ. ಅಷ್ಟರೊಳಗೆ ಹೇಳದಿದ್ದರೆ ನಿಮಗೆ ಒಂದು ಕ್ರಾಸ ಗುರುತು. ಆ ರೀತಿಯ ಮೂರು ಗುರುತು ಬಂದರೆ ಆಟ ಮುಗಿಯಿತು. ನೀವು ಸೋತಂತೆ. ತಕ್ಷಣ ಕ್ಯಾಬ್‌ನಿಲ್ಲಿಸುವನು ಅಲ್ಲಿಯೆ ಇಳಿದು ಬಿಡಬೇಕು. ಆದರೆ ಟ್ಯಾಕ್ಸಿಗೆ ಯಾವುದೆ ಹಣ ಕೊಡ ಬೇಕಿಲ್ಲ. ಬೇರೊಂದು ಟ್ಯಾಕ್ಸಿ ಹಿಡಿದು ಹೋಗಬೇಕು.

   ಪ್ರಯಾಣ ಮಾಡುವಾಗ ಉತ್ತರ ಹೊಳೆಯದಿದ್ದರೆ  ನಿಮಗೆ ಬೇಕೆಂದರೆ ಸಹಾಯ ಪಡೆಯಲು ಎರಡು ಅವಕಾಶಗಳಿವೆ. ಯಾರಿಗೆ ಬೇಕಾದರೂ ದೂರವಾಣಿ ಕರೆ ಮಾಡಿ ಅವರಿಂದ ಸರಿಯುತ್ತರ ಪಡೆಯಬಹುದು.   ಇನ್ನೊಂದು  ಸಲ ಟ್ಯಾಕ್ಸಿ ನಿಲ್ಲಿಸಿ  ಅಲ್ಲಿ ಓಡಾಡುವ ಯಾರ ಜೊತೆ ಬೇಕಾದರೂ  ಮಾತನಾಡಿ ಉತ್ತರ ಪಡೆಯಬಹುದು.ವಿಶೇಷ ವೆಂದರೆ ನೀವು ಸರಿ ಉತ್ತರ ಕೊಡುತ್ತಾ ಹೋದಂತೆ ಪ್ರತಿ ಪ್ರಶ್ನೆಯ ಹಣದ ಮೊತ್ತ ಹೆಚ್ಚುತ್ತಾ ಹೋಗುವುದು. ಅಕಸ್ಮಾತ್‌ಟ್ರಾಫಿಕ್‌ನಲ್ಲಿ ಕೆಂಪುದೀಪ ಬಂದು ಅಲ್ಲಿ ಟ್ಯಾಕ್ಸಿ  ನಿಂತರೆ ಉತ್ತರದ ಮೌಲ್ಯ ಇನ್ನೂ ಹೆಚ್ಚು.ಅದಕ್ಕೆ ಕೆಂಪು ದೀಪದ ಸವಾಲುಎನ್ನುವರು. ಆದರೆ ಅದಕ್ಕೂ ಒಂದು ಶರತ್ತು ಇದೆ . ಅಷ್ಟರೊಳಗೆ ೨೦೦ ಡಾಲರ್‌ನಿಮ್ಮಖಾತೆಯಲ್ಲಿದ್ದರೆ ಮಾತ್ರ ನೀವು ಅದಕ್ಕೆ ಅರ್ಹರು.ಆ ಪ್ರಶ್ನೆ ಚಿಕ್ಕ ಚಿಕ್ಕ ಐದು ಉತ್ತರ ಬಯಸುವುದು. ಸರಿ ಉತ್ತರ ಕೊಟ್ಟರೆ ೨೦೦ ಡಾಲರ್‌, ತಪ್ಪಾದರೆ ಅದರೆ ಏನೂ ತೊಂದರೆ  ಇಲ್ಲ. ಕ್ರಾಸ್‌ಮಾರ್ಕ ಬರುವುದಿಲ್ಲ.

 ನಾವು ತಲುಪಬೇಕಾದ ಸ್ಥಳವು ಪ್ರಶ್ನಾವಳಿ ಮುಗಿರಯುವುದಕ್ಕಿಂತ ಮುಂಚೆಯೆ ಬಂದರೆ  ಮೂರಕ್ಕಿಂತ ಕಡಿಮೆ ಸಲ ಉತ್ತರ ಹೇಳಲಾಗದಿದ್ದರೂ ಪ್ರಯಾಣಿಕರು ಗೆದ್ದಂತೆ. ತಾವು ಇಳಿಯುವ ಜಾಗದಲ್ಲಿ ಹಣ ಪಡೆಯಬಹುದು. ಆಗಲೂ ಒಂದು ವಿಶೇಷ ಅವಕಾಶ.ನಿಮ್ಮ   ಬಹುಮಾನದ ಹಣ ದ್ವಿಗುಣ ಗೊಳಿಸಿಕೊಳ್ಳಬಹುದು. ಅದೂ ಒಂದು ಶರತ್ತಿನ ಮೇಲೆ. ಸರಿ ಉತ್ತರ ನೀಡಿದರೆ ಎರಡು ಪಟ್ಟು ಹಣ.  ಉತ್ತರ  ತಪ್ಪಾದರೆ ಗೆದ್ದದ್ದೂ  ಗೋವಿಂದ. ಬಿಟ್ಟಿ ಟ್ಯಾಕ್ಸಿ  ಪ್ರಯಾಣವಾಯಿತು ಎಂದುಕೊಳ್ಳಬೇಕು.. ಜತೆಗೆ  ಗೆಲ್ಲಲಿ ಸೋಲಲಿ ಟ್ಯಾಕ್ಸಿ ಬಾಡಿಗೆ ಕೊಡಬೇಕಿಲ್ಲ.
ಒಂದಂತೂ ಖಚಿತ. ಈ ಪ್ರಯಾಣ ಟಿವಿಯಲ್ಲಿ ಪ್ರಸಾರವಾಗುವುದು. ಎಲ್ಲ  ಕಡೆ  ನಿಮ್ಮನ್ನು ನೋಡುವ  ವಿಡಿಯೋ ಬೋನಸ್‌
ಇದನ್ನು ಡಿಸ್‌ಕವರಿ ಛಾನಲ್‌ನವರು ನಡೆಸುವರು ನಂತರ ಪ್ರಸಾರ ಮಾಡುವರು. ಈಗ ನ್ಯೂಯಾರ್ಕ ಮತ್ತು ಚಿಕಾಗೊದಲ್ಲಿ ನಡೆಯುತ್ತಿದೆ.ನ್ಯೂಯಾರ್ಕನಲ್ಲಿ ಬೆನ್‌ಬೆಯಲಿ ಎಂಬ ಸಿನಿಮಾ ನಟ ನಡೆಸಿಕೊಡುವನು ಅವನು ಹಾಲಿವುಡ್‌ನ ಹಾಸ್ಯ ನಟ. ಆದರೆ ಅವನು ಡ್ರೈವಿಂಗ್‌ಲೈಸೆನ್ಸು ಪಡೆದು ಅಧಿಕೃತವಾಗಿ ಟ್ಯಾಕ್ಸಿ ಚಾಲಕನಾಗಿದ್ದಾನೆ. ಈ ಮೊಬೈಲ್‌ಗೇಮ್‌ಷೋನಲ್ಲಿ ಭಾಗವಹಿಸುವವರನ್ನು  ಹಲವರನ್ನು ಅನಾಮತ್ತಾಗಿ ಆಯ್ಕೆ ಮಾಡುವರು. ಕೆಲವರಿಗೆ ಆಡಿಷನ್‌ಮಾಡಿರುವರು. ಆದರೆ ಟಿವಿ ಕಾರ್ಯ ಕ್ರಮಕ್ಕೆ ಅವರು ಸೂಕ್ತವೆಂದು ಕಂಡುಬಂದರೆ  ಅವರನ್ನು  ಫೂರ್ವ ಮಾಹಿತಿ ನೀಡದೆ ಆರಿಸಿ ಕೊಳ್ಳುವರು
ಪ್ರಶ್ನೆಗಳಿಗೆ ಯಾವುದೆ ನಿಗದಿತ ವಿಷಯ ಎಂದು ಇರದು ರಾಜಕೀಯ, ಇತಿಹಾಸ, ಭೂಗೋಳ , ಸಾಮಾನ್ಯ ಜ್ಞಾನ ಯಾವುದೆ ಆಗಿಬಹುದು. ಸಾಧಾರಣ ಅಮೇರಿಕಾಕ್ಕೆ ಸಂಬಂಧಿಸಿದ ವಿಷಯವೆ ಆಗಿರುವುದು.
 ಇಲ್ಲಿ ಇನ್ನೊಂದು ಅನುಮಾನ ಬರುವುದು  ಸಹಜ . ಅವನು ಪ್ರಶ್ನೆಗಳನ್ನು ಕೇಳಲು , ಅವನ ಮುಂದೆ  ಇರುವ  ಕಾಗದದಲ್ಲಿನದನ್ನು  ಓದವನೋ , ಇಲ್ಲವೆ ಕಂಠ ಪಾಠ ಮಾಡಿರುವನೋ ಎಂದು. ಎರಡೂ ಅಲ್ಲ ಚಾಲಕನು ಕಿವಿಯಲ್ಲಿ ಚಿಕ್ಕ ಮೈಕ್ರೋ ಫೋನು ಇರುವುದು. ಅದರ ಮೂಕ ಬಂದ ಪ್ರಶ್ನೆಗಳನ್ನು  ಅವನು ಕೇಳುವನು. ನಮ್ಮ ಜತೆ ಮಾತನಾಡುತ್ತಾ ಚಾಲನೆ ಮಾಡುವಾಗ ಅಫಘಾತ ವಾದರೆ ಗತಿ ಏನು ಎಂಬ ಗಾಬರಿ ಬೇಕಿಲ್ಲ.ಅದರಿಂದ ವಾಹನ ಚಾಲನೆಗೆ ಯಾವುದೆ ತೊಂದರೆಯಾಗದು.ಇದರ ಜೊತೆಗ ಪ್ರಶ್ನೆಗೆ ಪ್ರಯಾಣಿಕರಿಂದ  ಬಂದ ಉತ್ತರ ಸರಿಯೋ? ತಪ್ಪೋ? ಅವರು ಉತ್ತರಿಸಲು ತೆಗೆದು ಕೊಂಡ ಸಮಯ ಎಲ್ಲವನ್ನೂ ಹಸಿರು , ಕೆಂಪು ದೀಪಗಳು ಸೂಚಿಸುವವು. ಅವನ್ನೂ ಸಹ ನೋಡಕೊಳ್ಳಲು ವ್ಯವಸ್ಥೆ ಇದೆ. ಪ್ರಯಾಣಿಕರು ಟ್ಯಾಕ್ಸಿ  ಹತ್ತಿದನಂತರ. ಕಾರ್ಯ ಕ್ರಮದಲ್ಲಿ ಭಾಗವಹಿಸಿಲು ಒಪ್ಪಿದರೆ ಅವರ ಜತೆ ಇನ್ನೊಬ್ಬರೂ ಏರಿ ಎಲ್ಲವನ್ನೂ ಗಮನಿಸುವರು. ಅಲ್ಲದೆ ಇದರ ನೇರ ಪ್ರಸಾರ ಟಿವಿಯಲ್ಲಿ ಆಗುವುದಿಲ್ಲ..ವಿತ್ರೀಕರಣದಲ್ಲಿ  ಯಾವುದೆ ತೊಂದರೆ ಬಂದರೆ ನಂತರ ಅದನ್ನು ಎಡಿಟ್‌ಮಾಡುವರು.  ಇದು ಅಮೇರಿಕಾದ ಒಂದೆರಡು ನಗರಗಳಲ್ಲೂ ನಡೆಯುವುದು.
ಈ ಮೊಬೈಲ್‌ಷೋ ಪ್ರಾರಂಭ ವಾದ್ದು  ಬ್ರಿಟನ್‌ನಲ್ಲಿ. . ಆಡಮ್‌ವುಡ್‌೨೦೦೫ರಲ್ಲಿ ಮೂಲ ಕಾರ್ಯಕ್ರಮ ರೂಪಿಸಿದ. ನಂತರ ಅದು ಯುರೋಪಿನ ಅನೇಕ ದೇಶಗಳಿಗೂ ಹರಡಿತು. ಆಷ್ಟ್ರೇಲಿಯಾ,ಕೆನಡಾ, ಜಪಾನ್‌ಮತ್ತು ನ್ಯೂಜಿಲೆಂಡ್‌ಗಳಲ್ಲೂ ಜನಪ್ರಿಯವಾಗಿದೆ.ಭಾರತದಲ್ಲಿ ಇನ್ನೂ ಪಾದಾರ್ಪಣೆ ಮಾಡಿಲ್ಲ
ಅದರಲ್ಲಿ ನೀಡುವ ಹಣ ನಿಜವಾದದಲ್ಲ. ಅದು ಕೇವಲ ಕ್ಯಾಮರಾ ಕಣ್ಣಿಗೆ  ಮಾತ್ರ.  ಹಣವನ್ನು ನಂತರ ಚೆಕ್‌ಮೂಲಕ  ಗೆದ್ದವರ ವಿಳಾಸಕ್ಕೆ ಕಳುಹಿಸುವರು. ನ್ಯೂಯಾರ್ಕ ನಗರದದಲ್ಲಿ ಚಲಿಸುವ ಸಾವಿರಾರು ಎಲ್ಲೋ ಟ್ಯಾಕ್ಸಿಗಳಲ್ಲಿ ಇದು ಯಾವುದು ಎಂದು ತಿಳಿಯದು. ಅದರ ವೀಶೇಷ ವೆಂದರೆ ಪ್ರಯಾಣಿಕರಲ್ಲಿ ಅಚ್ಚರಿ ಮೂಡಿಸುವುದು. ಅಲ್ಲದೆ ಎಲ್ಲ ಪ್ರಯಾಣಿಕರ ಪ್ರಸಂಗಗಳು ಪ್ರಸಾರ ವಾಗುವ ಖಾತ್ರಿ ಇಲ್ಲ.ಜನರಿಗೆ ಖುಷಿಕೊಡುವ ಹಾಗಿದ್ದರೆ ಮಾತ್ರ  ಪ್ರಸಾರ ವಾಗುವವು.ದಿನವೂ ಅದೃಷ್ಟವಿದ್ದ ಪ್ರಯಾಣಿಕ ಚುರುಕಾಗಿದ್ದರೆ ಬಹುಮಾನ ಪಡೆಯಬಹುದು.

No comments:

Post a Comment