Friday, December 21, 2012

ಅಮೇರಿಕಾ ಅನುಭವ-೫








ಧರ್ಮ- ಮನಸ್ಸಿಗೆ ನೆಮ್ಮದಿ, ದೇಹಕ್ಕೆ ಆರೋಗ್ಯ.
ಎಲ್ಲ ಧರ್ಮದ ಪೂಜಾ ಮಂದಿರಗಳು ಭಕ್ತರಿಗೆ ಮನಶ್ಯಾಂತಿ ನೀಡುವ ತಾಣಗಳಾಗಿವೆ. ಅವು ಜೀವನದಲ್ಲಿ ನಂಬಿಕೆಯ ಮಹತ್ವವನ್ನು  ಸಾರುತ್ತವೆ.ಸಮುದಾಯದ ಧಾರ್ಮಿಕ ಅಗತ್ಯಗಳನ್ನು ಪೂರೈಸುತ್ತವೆ. ಅ  ಸಮುದಾಯದ ಸದಸ್ಯರ ನಾಮಕರಣ, ಮದುವೆ , ಧಾರ್ಮಿಕ ಆಚರಣೆ ಮೊದಲಾದ ಜೀವನದ ಅಗತ್ಯ ಕಾರ್ಯಕ್ರಮಗಳಿಗೆ ಅನುವು ಮಾಡಲು ಸೌಕರ್ಯವನ್ನೂ ಒದಗಿಸತೊಡಗಿವೆ.ಪ್ರವಚನ ಮಂದಿರ, ಧ್ಯಾನ ಮಂದಿರಗಳು ಸನ್ಮಾರ್ಗದತ್ತ ಸಾಗಲು , ಜೀವನದ  ಜಂಜಡದಿಂದ ದೂರವಾಗಲು ಮನಸ್ಸಿಗೆ ಶಾಂತಿ ನೀಡಲುಸಹಾಯಕವಾಗಿವೆ.
ಎಲ್ಲ ಧರ್ಮಗಳಲ್ಲೂ  ಆಹಾರದ  ವಿಷಯದಲ್ಲಿಅವರವೆ ಆದ ಇತಿಮಿತಿಗಳನ್ನು ವಿಧಿಸಿವೆ. ಧರ್ಮ ಸಾಧನೆಗೆ ದೇಹದ ಆರೋಗ್ಯ ಮುಖ್ಯ ಎಂದು ಸಾರಿ ಹೇಳಿದರೂ  ಅಲ್ಲಿ ದೈಹಿಕ ವಿಷಯಗಳಿಗೆ , ಚಟುವಟಿಕೆಗಗೆ ಮಹತ್ವ ಬಹು ಕಡಿಮೆ.
ಆದರೆ ಅಮೇರಿಕಾದ  ಧಾರ್ಮಿಕ ಕೇಂದ್ರಗಳಲ್ಲಿ ಹೊಸ ಅಲೆ ಎದ್ದಿದೆ.ತಮ್ಮ ಸಮುದಾಯದ ಆರೋಗ್ಯದ ಬಗ್ಗೆಯೂ ಕಾಳಜಿ ಶುರುವಾಗಿದೆ.ಆರೋಗ್ಯವನ್ನು ಕಾಪಾಡು ಎಂದು ಪ್ರಾರ್ಥನೆ ಮಾಡುವುದಕ್ಕೆ ಮಾತ್ರ ಚರ್ಚು ಸೀಮಿತವಾಗದೆ ಆರೋಗ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನೂ ಹಮ್ಮಿಕೊಂಡಿದೆ.
 ಅಮೇರಿಕಾದಲ್ಲಿ ಇತ್ತೀಚೆಗೆ ಆಹಾರದ ಬಗ್ಗೆ ಅರಿವು ಮೂಡಿಸುವ ಚಳುವಳಿಯನ್ನು ಕೆಲ ಧಾರ್ಮಿಕ ಕೇಂದ್ರಗಳು ಕೈಗೆತ್ತಿಕೊಂಡಿವೆ. ಅದರಲ್ಲು ಮಿಸ್ಸಿಸಿಪಿರಾಜ್ಯದಲ್ಲಿ ಸೂಕ್ತ ಆಹಾರದ ಬಗ್ಗೆ ಬರಿ ಬೋಧನೆ ,ಮಾತ್ರವಲ್ಲ  ಅಚರಣೆಗೂ ಒತ್ತು ಕೊಡುತ್ತಲಿವೆ. ಅದಕ್ಕೆ ಕಾರಣವೂ ಇದೆ.ಅಮೇರಿಕಾ ಧಡಿಯರ ದೇಶ ಎಂದೆ ಹೆಸರಾಗಿದೆ.. ಜಗತ್ತಿನ ಬಹುಭಾಗದಲ್ಲಿ ಪೌಷ್ಟಿಕ ಆಹಾರದ ಕೊರತೆ  ದೊಡ್ಡ ಸಮಸ್ಯೆಯಾಗಿದ್ದರೆ,  ಇಲ್ಲಿ ಅತಿಯಾದ ಪೌಷ್ಟಿಕಾಹಾರವೆ ಸಮಸ್ಯೆಯ ಮೂಲವಾಗಿದೆ.ಜನರ ಅನಿಯಮಿತವಾದ ಆಹಾರಸೇವನೆಯಿಂದ ಅದೂ ಅತಿಯಾದ  ಮಾಂಸಾಹಾರದಿಂದ ದಿನದಿಂದ ದಿನಕ್ಕೆ ರೋಗಕ್ಕೆ ತುತ್ತಾಗುತ್ತಿದ್ದಾರೆ.
 ದೇಹದ ಗಾತ್ರ ಹಿಗ್ಗುತ್ತಿದೆ.ಎಲ್ಲಕಡೆ ಹಸಿವಿನಿಂದ ಜನ ಬಳಲುತ್ತಿದ್ದರೆ ಇಲ್ಲಿನ ಜನರು ಅತಿ  ಆಹಾರದಿಂದ ನರಳುತಿದ್ದಾರೆ
. ಮಿಸ್ಸಿಸಿಪಿರಾಜ್ಯವು ಸ್ಥೂಲ ಕಾಯಸ ಮಕ್ಕಳ ಸಂಖ್ಯೆಯಲ್ಲಿ ರಾಷ್ಟ್ರಕ್ಕೆ ಮೊದನೆಯದು. ಅಲ್ಲಿನ ಶಾಲೆಗಳಲ್ಲಿ  ಪೀಠೋಪಕರಣಗಳುವಿಶೇಷವಾಗಿವೆ.ಇನ್ನು ವಯಸ್ಕರ ವಿಷಯಕ್ಕೆಬಂದರೆ ಅದು ಭಾರಿಗಾತ್ರದವರಲ್ಲಿ ಅದಕ್ಕೆ ಎರಡನೆ ಸ್ಥಾನದಲ್ಲಿದೆ. ಅಲ್ಲಿನ ಮಾಲ್‌ಗಳಲ್ಲಿ ಉಡುಪುಗಳ ವಿಭಾಗದಲ್ಲಿ ಎಲ್ಲಿ ನೋಡಿದರೂ ಎಕ್ಸಟ್ರಾಲಾರ್ಜ ಅಳತೆಯವೆ ರಾರಾಜಿಸುತ್ತವೆ ಹೋಟೇಲುಗಳಲ್ಲಿ.ಚಿಕ್ಕ ಪ್ರಮಾಣದ  ತಂಡಿ ತಿನಿಸುಗಳಿಗೆ ಬೇಡಿಕೆಯೆ ಇಲ್ಲ
ಅಲ್ಲಿ ಕರಿದ ಪದಾರ್ಥಗಳಿಗೆ ಬಹಳ ಆದ್ಯತೆ. ಅದರಲ್ಲೂ ಮಾಂಸಾಹಾರಿಗಳಿಗಂತೂ ಮಜವೆ ಮಜ. ಅಷ್ಟು ವೈವಿದ್ಯಮಯ . ಧಾರಾಳವಾಗಿ ಕರಿದ ಹುರಿ ಭಕ್ಷ್ಯಗಳು  ಅದರಜೊತೆ ಸಮೃದ್ಧವಾಗಿ ಚೀಸು ಮತ್ತು ಬೆಣ್ಣೆ.ರಸ್ತೆಯಲ್ಲಿ ಎಲ್ಲಿ  ನೋಡಿದರೂ ಬಲ ಭೀಮರೆ.ಬದುಕು ಇರುವುದೆ ತಿನ್ನುವುದಕ್ಕಾಗಿ ಎಂಬಂತಿದೆ ಅಲ್ಲಿನ ಜೀವನ ಶೈಲಿ.  ವಯಸ್ಕರಾದ ಮೇಲೂ ಜೀವನ ಶೈಲಿಯ ಬದಲಾವಣೆ ಕಾಣದೆ  ಜತೆಗೆ  ಮದ್ಯಪಾನವೂ ಸೇರುವುದರಿಂದ ಪರಿಸ್ಥಿತಿ ಸುಧಾರಿಸಲು ಅವಕಾಶವೆ ಇಲ್ಲ
.ದೇಶದ 2-5 ವರ್ಷದ.ಮಕ್ಕಳಲ್ಲಿ  14% ರು ದಪ್ಪಗಿದ್ದರೆ, 6-11 ವರ್ಷದವರಲ್ಲಿ 19 % ಸ್ಥೂಲಕಾಯರು. 12-19 ವರ್ಷದವರಲ್ಲಿ  ಅವರ ಸಂಖ್ಯೆ 17%  ಆಗಿದೆ.  ಮಕ್ಕಳು ಬೆಳೆದಂತೆತೂಕವೂ , ಗಾತ್ರವೂ ಬೆಳೆಯುವುದು. ನಲವತ್ತು ದಾಟಿದ ಮೇಲೆ ಬಹುತೇಕರು ಭಾರಿ ತೂಕದ ಅಸಾಮಿಗಳೆ..
ಇದಕ್ಕೆ ಕಾರಣ ದೈಹಿಕ ಚಟುವಟಕೆಯ ಕೊರತೆ. ಟಿವಿ ಮತ್ತು ವಿಡಿಯೋ ಆಟದ ಗೀಳು. ಗಂಟೆಗಟ್ಟಲೆ ಟಿವಿ ನೋಡುತ್ತಾ, ವಿಡಿಯೋ ಗೇಮ್‌ಆಡುತ್ತಾ ಕುರುಕುಲುತಿಂಡಿ ತಿನ್ನುವುದರಿಂದ ಸ್ವಾಭಾವಿಕವಾಗಿ ತೂಕ ಹೆಚ್ಚುವುದು
 ದೈಹಿಕ ಚಟುವಟಿಕೆಯಲ್ಲಿ ಮಿಸ್ಸಿಸಿಪಿಯದು ಕೊನೆಯಸ್ಥಾನ.ಅದರ ಪರಿಣಾಮ ಹೃದಯರೋಗದಲ್ಲಿ ಪ್ರಥಮಸ್ಥಾನ ಪಡೆದರೆ,  ಮಧುಮೇಹದಲ್ಲಿ ದ್ವಿತಿಯ ಸ್ಥಾನ. ಇನ್ನು  ಹಣ್ಣು ತರಕಾರಿ ಸೇವನೆಯಲ್ಲಿ ಕಟ್ಟಕಡೆಯವರು. ಮಧ್ಯವಯಸ್ಕರಲ್ಲಿ ಅನಾರೋಗ್ಯ ಹೆಚ್ಚಿದೆ. ಇಳಿವಯಸ್ಸಿನಲ್ಲಿ ವೈದ್ಯಕೀಯ ವೆಚ್ಚ  ಅಧಿಕವಾಗಿದೆ. , ಅವರ ಆರೈಕೆ ದೊಡ್ಡ ಹೊರೆಯಾಗಿದೆ.ಮೆಡಿಕೇರ್‌ವೆಚ್ಚ ಮುಗಿಲು ಮುಟ್ಟಿದೆ.
ಇದರಿಂದ ಅಲ್ಲಿನ ಜನನಾಯಕರು ಗಾಬರಿಯಾದರು. ಅದರಲ್ಲೂ ಬ್ಯಾಪಿಟಿಸ್ಟ ಕನವೆನ್‌ಷನ್ಸೆಂಟರ್‌ನವರು ಪರಿಹಾರ ಮಾರ್ಗ ಹುಡುಕತೊಡಗಿದರು.ಸರಿ ಸುಮಾರು ೧೦೦೦ ಚರ್ಚಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದವು.ಅದರಲ್ಲಿ ಮುನ್ನೆಡೆ ಸಾಧಿಸಿದವರು ಓಕ್‌ಹಿಲ್‌ನ ಹೆರ್ನಾಂಡೊದ ಚರ್ಚಿನ ಪಾದ್ರಿ ಶ್ರೀ. ಮ್ಯಾನರ್‌. ಅವರು ಹುಟ್ಟಿ ಬೆಳೆದಿದ್ದು ಮಿಸ್ಸಿಸಿಪಿಯಲ್ಲೆ. ನಂತರ ಹೆಚ್ಚಿನ ಶಿಕ್ಷಣಕ್ಕಾಗಿ ಬಾಸ್ಟನ್‌ಗೆ ಹೋದರು. ಅಲ್ಲಿ ಹಾರ್ವರ್ಡ ಕಾಲೇಜಿನಲ್ಲಿ ಕಲಿಯುವಾಗ ಗೊತ್ತಾಯಿತು ತಮ್ಮ ಪ್ರದೇಶದ ಜನರು ಭೀಮಕಾಯರು ಎಂದು.ಮೊದಲು ಅದು ಹೆಮ್ಮೆಯ ವಿಷಯವಾದರೂ ವಯಸ್ಸಾದಂತೆ ಅದರ ದುಷ್ಪರಿಣಾಮ ಎದ್ದು ಕಾಣತೊಡಗಿತು.ಚರ್ಚಿನಲ್ಲಿ ಪಾದ್ರಿಯಾದ ನಂತರ ಜನರ ನಿಕಟ ಸಂಪರ್ಕದಿಂದ ಸಮಸ್ಯೆಯ ತೀವ್ರತೆ ತಿಳಿಯಿತು..
ಮನಸ್ಸಿಗೆ ನೆಮ್ಮದಿ ಬರಲು ದೇಹದ ಆರೋಗ್ಯವೂ ಅಗತ್ಯ ಎನಿಸಿತು.ಅದರ ಫಲವಾಗಿ ಧಾರ್ಮಿಕ ಬೋಧನೆಯ ಜತೆ ಆಹಾರಾಭ್ಯಾಸದ ಬದಲಾವಣೆಗೆ ಒತ್ತು ಕೊಡತೊಡಗಿದರು.ಜನ ಮೊದ ಮೊದಲು ಅವರ ಪ್ರಚಾರಕ್ಕೆ ಕಿವಿಗೊಡಲಿಲ್ಲ. ನಮ್ಮ ಊಟ ತಿಂಡಿಯ ಗೊಡವೆ ಇವರಿಗೆ ಏಕೆ ಎಂದವರೂ ಉಂಟು. ಅಲ್ಲದೆ ಹೆಚ್ಚಾಗಿ ಮಹಿಳೆಯರು ನಮ್ಮ ಆಹಾರ ಪದ್ದತಿಯನ್ನು ಅನಾಚೂನವಾಗಿ ಅನುಸರಿಸಿ ಕೊಂಡು ಬಂದಿದ್ದೇವೆ. ನಮ್ಮ ತಾತ ಮುತ್ತಾತಂದಿರೂ ಇದೆ ರೀತಿ ಇದ್ದರು. ಹಿಂದೆ ಇಲ್ಲದ ಸಮಸ್ಯಗೆ ಇಂದು ಅದು ಕಾರಣ ವಾಗಲಾರದು ಎಂದು ವಾದ ಮಂಡಿಸಿದರು. ಅವರ ಮಾತಿನಲ್ಲಿ ಸತ್ಯವಿದೆ. ಆಹಾರಪದ್ದತಿ ಇಂದು ನಿನ್ನೆಯದಲ್ಲ. ಪರಂಪರಾಗತವಾದದ್ದು. ಅವರಿಗೆ ಆಹಾರ ಪದ್ದತಿ ಹಳೆಯದೆ ಆದರೂ ಜೀವನ ಶೈಲಿ ಬದಲಾಗಿರುವುದನ್ನು ಮನದಟ್ಟು ಮಾಡಲಾಯಿತು.ಹಿಂದೆ ಮೈಮುರಿಯೆ ದುಡಿಮೆ ಮಾಡುತ್ತಿದ್ದರು. ಕಾರುಬಂದ ಮೇಲೆ ಕಾಲು ಇರವುದು ಷೂ ಹಾಕಿಕೊಳ್ಳಲು ಮಾತ್ರಎನ್ನುವ ಹಂತ ಜನ ತಲುಪಿರುವರು.. . ಜತೆಗೆ ಆಗ ಮಾಂಸದೂಟ ಮಾಡಲು ಕುರಿ ತಂದು ಕತ್ತರಿಸಿ ಶುಚಿ ಮಾಡಿ ಅಡುಗೆ ಮಾಡಬೇಕಿತ್ತು. ಅದಕ್ಕೆ ಬಹಳ ಶ್ರಮ ಮತ್ತು ಸಮಯ ಬೇಕಿತ್ತು. ಅದರಿಂದ ಹದಿನೈದು ದಿನಕ್ಕೋ ತಿಂಗಳಿಗೋ ಒಮ್ಮೆ ಮಾಂಸದೂಟ ಇರುತಿತ್ತು. ಅಧೂ ಒಂದೊ ಎರಡೋ ಬಗೆಯ ಭಕ್ಷ್ಯಗಳು. ಕೆಡುವ ಮುನ್ನವೆ ತಿನ್ನ ಬೇಕಿತ್ತು. ಆದರೆ ಈಗ ಹಾಗಲ್ಲ.ವೈವಿದ್ಯಮಯ ಮಾಂಸದ ಭಕ್ಷ್ಯಗಳು ಸಿದ್ಧವಾಗಿ ಸಿಗುತ್ತವೆ. ಅಂಗಡಿಗೆ ಹೋಗುವುದೂ ಬೇಕಿಲ್ಲ ಒಂದು ಫೋನು ಮಾಡಿದರೂ ಸಾಕು ಊಟದ ಮೇಜಿನ ಮೇಲೆ ಅರ್ಧ ಗಂಟೆಯಲ್ಲಿ ಹಾಜರು .ಅದೂ ಬಿಸಬಿಸಿ ಮತ್ತು ಬಾಯಿಗೆ ಬೇಕಾದ  ಬಗೆ ಬಗೆಯ ರುಚಿ 
ಇದರಿಂದ ತಿನ್ನು ಬಾಕತನೆ ಹೆಚ್ಚಿದೆ. ಮನೆಯಲ್ಲೂ ಎಲ್ಲ ಕೆಲಸಕ್ಕೂ ಯಂತ್ರಗಳು.ದಣಿವಾಗುವ ಮಾತೆ ಇಲ್ಲ. ದಣಿವಾಗುವುದು ಊಟ ಮಾಡುವಾಗ ಮಾತ್ರ.. ಈ ವಿಷಯವನ್ನು ತನ್ನ ಸಮುದಾಯಕ್ಕೆ ಪದೇಪದೇ ಪ್ರಾರ್ಥನಾ ಸಮಯದಲ್ಲಿ  ಈ ವಿಷಯ  ತಿಳಿ ಹೇಳಿದರು..
ಹೆಚ್ಚಾಗಿ ಹಣ್ಣು ತರಕಾರಿ ಬಳಕೆಗೆ ಒತ್ತು ಕೊಡಲಾಯಿತು. ಅದು ಮಾತ್ರವಲ್ಲ ಚರ್ಚು ಪ್ರಾರ್ಥನಾ ನಂತರ ಏರ್ಪಡಿಸುವ ಭೋಜನ ಕೂಟದಲ್ಲಿ ಕರಿದ ಹುರಿದ ಮಾಂಸ  ಕೈಬಿಡಲಾಯಿತು. ಬರಿ ಹಣ್ಣು ತರಕಾರಿಗಳನ್ನು ಮಾತ್ರ  ನೀಡಲು ಮೊದಲು ಮಾಡಿದರು.. ಅವರಲ್ಲೆ ಕೆಲವರು ಸಸ್ಯಾಹಾರವೆಂದರೆ ಬರಿ ಸೊಪ್ಪು ಸದೆ ತಿನ್ನುವದು , ಸಪ್ಪನೆಯ ಆಹಾರ ಎನ್ನುವ ಭಾವನೆ ಬರದಿರುವಂತೆ   ಹಣ್ಣುಗಳಿಂದ ವೈವಿದ್ಯಮಯ  ತಿನಿಸುಗಳನ್ನು ರುಚಿಕಟ್ಟಾಗಿ ತಯಾರಿಸಲಾಯಿತು. ಪರಿಣಾವಾಗಿ ಆಹಾರಾಭ್ಯಾಸದಲ್ಲಿ ಸುಧಾರಣೆ ಕಂಡಿತು. ಜನರ ಆರೋಗ್ಯವೂ ಸುಧಾರಿಸ ತೊಡಗಿತು.
ಬರಿ ಆಹಾರಾಭ್ಯಾಸದ ಕಡೆ ಮಾತ್ರವೆ  ಗಮನ ಕೊಡದೆ ದೈಹಿಕ ಆರೋಗ್ಯ ಸುಧಾರಿಸಲು ಅಗತ್ಯವಾದ ಚಟುವಟಕೆಗಳ ಕಡೆಯೂ ಗಮನ ಹರಿಸಲಾಯಿತು. ಚರ್ಚಿನ ಸುತ್ತಲೂ ನಡಿಗೆಯನ್ನು ಉತ್ತೇಜಿಸಲು ಸಮತಟ್ಟಾದ ಕಾಲು ದಾರಿ ನಿರ್ಮಾಣವಾಯಿತು. ಅದನ್ನು ಐದು ಸಲ ಸುತ್ತುಹಾಕಿದರೆ ಒಂದು ಮೈಲಿಯಾಗುವುದು..ಬಹುಶಃ ಈ ಕ್ರಮವು ನಮ್ಮ ಭಾರತಲ್ಲಿನ  ದೇಗುಲಗಳ ಪ್ರದಕ್ಷಣೆಗೆ ಸಂವಾದಿಯಾಗಿದೆ  ಎನ್ನಬಹುದು. ಪ್ರಾರ್ಥನೆಗೆ ಬಂದವರನ್ನು ಸಾಧ್ಯವಾದಷ್ಟು  ಸಲ ಸುತ್ತುಹಾಕಲು ಉತ್ತೇಜಿಸಲಾಯಿತು. ಕೆಲವೆ ತಿಂಗಳಲ್ಲಿ ಹೆಚ್ಚಿನ ಜನರಲ್ಲಿ ಲವಲವಕೆ ಮೂಡಿತು. ಇದೆ ಮಾದರಿಯನ್ನು ಸುತ್ತಮುತ್ತಲಿನವರೂ ಅನುಸರಿಸತೊಡಗಿದರು.
ಮಕ್ಕಳಿಗೂ ಅರಿವು ಮೂಡಿಸಲು ಶಾಲೆಯಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯ ಸ್ವರೂಪ ಬದಲಾಸಿದರು. ಸಿದ್ಧ ಪಪೊಟ್ಟಣಗಳಲ್‌ಇ ೧೯ ವೈಟಮಿನ್ ಮತ್ತು ಲವಣಾಂಶಗಳಿಂದ ಕೂಡಿದ ರುಚಿಕಟ್ಟಾದ ಸಿಧ್ಧ ಮಾಂಸದ ಬಳಕೆ ಬಂದಾಗಿನಿಂದ ಮುಚ್ಚಿ ಹೋದ ಶಾಲಾ ಪಾಕ ಶವಿಭಾಗ ಬಾಗಿಲು ತೆರದು ಅಲ್ಲಿಯೆ ಆಹಾರ ತಯಾರಿಸಲು ತೊಡಗಿದರು. ಇದರಿಂದ ತಾಜಾ ಮತ್ತು ಸರಳ ಸಹಝ ಆಹಾರ ದೊರೆಯತೊಡಗಿತು. ಅಲ್ಲದೆ ಆಹಾರಕ್ಕಾಗಿ ಮಾಡುತಿದ್ದ ಖರ್ಚು ಕಡಿಮೆಯಾಯಾಯಿತು. ಈ ಆಹಾರದಲ್ಲಿ ಮಿತವಾದ ಪೌಟಿಕಾಂಶ. ಲವಣ ಮತ್ತು ವ=ಜೀವಸತ್ವ ದ ಬಳಕೆಯಿಂದ  ದೇಹದ ಕೊಬ್ಬಿನ ಬೆಳವಣಿಗೆಯ ಪ್ರಮಾನ ತಗ್ಗ ತೊಡಗಿದೆ.ತಂದೆ ತಾಯಂದಿರ ಮಕ್ಕಳ ಆರೋಗ್ಯ ಚಿಂತೆಯೂ ಕಡಿಮೆ ಯಾಗಿದೆ.
ಮಾನಸಿಕ ನೆಮ್ಮದಿಯ ಜೊತೆಗೆ ದೈಹಿಕ ಸುಸ್ಥಿತಯನ್ನೂ ಕಾಪಾಡಿಕೊಳ್ಳಲು ಸಹಾಯಕವಾದ ಈ ನಡೆ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ.



No comments:

Post a Comment