Friday, December 28, 2012

ವಿಜಯ ಅಂಗಡಿ-ಸಾವಯವ ಕೃಷಿ- ಹರಿಕಾರ




ಜೀವನ ಪ್ರೀತಿಯ ಜೈವಿಕ ಮೇಳ



ಹಳೆಯವಿದ್ಯಾರ್ಥಿಯ ಒತ್ತಾಯದ ಕರೆಗ ಓ ಗೊಟ್ಟು ಸಾವಯವ ಮೇಳಕ್ಕೆ ಹಜರಾಗಲು ಹೊರಟಿದ್ದೆ. .ಸಕಲೇಶ ಪುರ ಹಾಸನ  ಹೈವೇ ಯಿಂದ  ಆಲೂರು ದಾಟಿದ ನಂತರ ಅಲ್ಲಿ ಹಲವು ಬ್ಯಾನರ್‌ಗಳ ನ್ನು ಕಂಡಾಗ ಇಲ್ಲಿಯೆ ಇದೆ ಕಾರ್ಯಕ್ರಮ ಅಂದುಕೊಂಡೆವು . ಬಸ್ಸಿನಿಂದ ಇಳಿದು ಒಳಗೆ ಸುಮಾರು ಇನ್ನೂರು ಮೀಟರ್ ದೂರದಲ್ಲಿನ  ಹೆಬ್ಬಾಗಿಲ ಕಡೆ ಹೊರಟಾಗ ಪಕ್ಕದಲ್ಲೆ ಕಾರೊಂದು ಬಂದು ನಿಂತಿತು. ಬನ್ನಿ ಕರೆದುಕೊಂಡುಹೋಗುವೆ , ಎಂದರು ಅದರಲ್ಲಿದ್ದ ಮಧ್ಯ ವಯಸ್ಕ ವ್ಯಕ್ತಿ.
ಬೇಡ , ವಂದನೆಗಳು. ನಡೆದೆ ಬರುವೆವು , ಎಂದಾಗ  ಕಾರು  ಮುಂದೆ ಸಾಗಿತು. ಎರಡು ನಿಮಿಷ ನಡೆದಾಗ ಪಕ್ಕದಲ್ಲೆ ಕಂಡವು ಹತ್ತಿಪ್ಪತ್ತು ತರಹೆ ವಾರಿ ಕಾರುಗಳು.
ಪರವಾಇಲ್ಲ ರೈತರಲ್ಲಿ   ಕಾರಿದ್ದವರೂ ಇದ್ದಾರೆ, ಎಂದುಕೊಂಡಾಗ ನೆನಪಾಯಿತು ಇದು ಕಾಫಿ ನಾಡೆಂದು.  ಕಾಫಿ ಪ್ಲಾಂಟರುಗಳೂ ಸಾವಯವ ಕೃಷಿಯಲ್ಲಿ ಆಸಕ್ತರಾಗಿರುವುದುಒಳ್ಳೆಯ ಬೆಳವಣಿಗೆ ಎನಿಸಿತು
ವಿಶಾಲವಾದ ಗೇಟು ದಾಟಿ ಒಳಗೆ ಹೋದಾಗ ಎಲ್ಲೆಲ್ಲು ಹಸಿರು ಮುರಿಯುತಿತ್ತು. ಆದರೆ ಷಾಮೀಯಾನಾದ ಸುಳಿವೆ ಇಲ್ಲ. ತುಸು ದೂರದಲ್ಲೆ ಅಡುಗೆಯ ಕಾಯಕ ನಡೆಯುತಿತ್ತು. ಹಲವು ಗ್ರಾಮೀಣ ಮಹಿಳೆಯರು ಒಂದಲ್ಲ ಒಂದು ಕೆಲಸ ದಲ್ಲಿ ತೊಡಗಿದ್ದರು.ದಟ್ಟವಾಗಿದ್ದ ಸಸ್ಯರಾಶಿಗಳ ನಡುವೆ ಏನೂ ಕಾಣಿಸುತ್ತಿರಲಿಲ್ಲ, ಅಲ್ಲಿರುವ ಪಾತ್ರೆಗಳ ಪ್ರಮಾಣ ನೋಡಿದರೆ ಕನಿಷ್ಟ  ಐದಾರು ನೂರು ಜನರಾದರೂ ಸೇರಿರಬಹುದು ಎನಿಸಿತು. ಆದರೆ ಅಷ್ಟುಜನ ಎಲ್ಲಿರುವರು ಎಂದೆ ಗೊತ್ತಾಗಲಿಲ್ಲ. ಬಹು ಕ್ಷೀಣವಾಗಿ ಮರಗಳ ಮರೆಯಲ್ಲಿ ಕಲರವದ ದನಿ ಕೇಳಿ ಬಂದಿತು. ಗಿಡಗಳ ನಡುವೆ ದಾರಿ ಮಾಡಿಕೊಂಡು  ಹಾಗೆ ಹೆಜ್ಜೆ ಹಾಕಿದಾಗ  ಅಲ್ಲಿ ಕುರ್ಚಿಯಲ್ಲಿ ಕುಳಿತ ನೂರಾರು ಜನ ಕಾಣಿಸಿದರು. ಆದರೆ ಯಾರೂ ಮಾತನಾಡುತ್ತಿರಲಿಲ್ಲ. ಮಧ್ಯಾಹ್ನದ ಬಿರು ಬಿಸಿಲು ಆದರೆ  ಅಲ್ಲಿ ಹಿತವಾದ ನೆರಳು. ಷಾಮೀಯಾನದ ಅಡಿಯಲ್ಲಿ ಕುಳಿತಷ್ಟೆ ನೆಮ್ಮದಿಯಾಗಿ ಅಲ್ಲಿರುವ ಗಸಗಸೆ ಹಣ್ಣಿನ  ಛತ್ರಿಯಂತೆ   ವಿಶಾಲ ವಾಗಿ ಹರಡಿದ ಎರಡು ಸಾಲು ಮರಗಳ ನಡುವಿನ ಜಾಗದಲ್ಲಿ ಕುಳಿತಿದ್ದರು. ಅಲ್ಲಲ್ಲಿ ನೆಳಲು ಬೆಳಕಿನ ಆಟ, ರೆಂಬೆಗಳು ಅಲುಗಿದಾಗ ಕಂಡುಬರುತಿತ್ತು. ಅಲ್ಲಿ  ಐದಾರು ನೂರು ಜನ ವೇದಿಕೆಯತ್ತ  ಕಣ್ಣು ಕಿವಿ ಕೀಲಿಸಿ ಕುಳಿತಿದ್ದರು.

ವೇದಿಕೆ ಬರಿ ಹಸಿರು ಮಯ. ತೆಂಗಿನ ಗರಿ ,ಅಡಕೆ ಗರಿ ಅಲ್ಲೆ ಬೆಳೆದಿರುವ ಹೂವುಗಳಿಂದ ಅದರಲ್ಲೂ ಮುತ್ತುಗದ, ಎಕ್ಕೆಯ ಕಾಡು  ಹೂಗಳಿಂದ .ಅಮಡಿಕೆ ಕುಡಿಕೆಗಳಿಂದ ಲಂಕೃತವಾಗಿತ್ತು.ಅಂಗಡಿ ಹೂವು , ಪ್ಲಾಸ್ಟಿಕ್ಹೂ  ಇಲ್ಲ. ಎಲ್ಲ ಸಹಜ ಸರಳ ಮತ್ತು ಸುಂದರ.  ವೇದಿಕೆಯ ಮೇಲೆ ಐದೆ ಕುರ್ಚಿ ಅಲ್ಲಿ ಹಸಿರಂಗಿ ಧರಿಸಿವರು ಇಬ್ಬರು
ಸುತ್ತಮುತ್ತಲೂ ಓಡಾಡುವ ಸ್ವಯಂ ಸೇವಕರೂ ಹಸಿರುಡುಗೆ ತೊಟ್ಟಿದ್ದರು..ಸರಿ ಸುಮಾರು ಮಧ್ಯಮ ಗಾತ್ರದ ಸಭೆ. ಬಣ್ಣದ ಕಾಗದದ ಬಂಟಿಂಗ್‌ ಇಲ್ಲ. ಫ್ಯಾನುಗಳಿಲ್ಲ.  ಒಂದೆ ಮರದಡಿಯಾದರೆ ಶಾಂತಿನಿಕೇತನದ ತರಗತಿ ಎನ್ನಬಹುದು.  ಯೋಜನಾ ಬದ್ದವಾಗಿ ನೆರಳಿಗೆಂದೆ ಬೆಳಸಿದ ಸಿಹಿ ಹಣ್ಣು ನೀಡುವ ಸಿಂಗಪೂರ್‌ ಚೆರಿ  ಮರಗಳೆ ಅಲ್ಲಿ ಷಾಮೀಯಾನ.ಸಾವಯವ ಮೇಳವು ನಿಸರ್ಗದ ನಡುವೆ ನಡೆಯುತ್ತಿರುವುದು ಬಹುಅರ್ಥ ಪೂರ್ಣ ವಾಗಿತ್ತು. ಅಲ್ಲೆ ಮರದಡಿ ಕುರ್ಚಿಯಲ್ಲಿ ಕುಳಿತೆ.ಕಾರ್ಯಕ್ರಮ ಏನೆಂದು ಅರಿಯುವ ಕುತೂಹಲದಿಂದ. ಪಕ್ಕದಲ್ಲಿ ಕುಳಿತವರನ್ನು “ ದಯವಿಟ್ಟು ಆಮಂತ್ರಣ ಪತ್ರಿಕೆ ಕೊಡುವಿರಾ “ ಎಂದೆ. ಅವರು ನಸು ನಗುತ್ತಾ ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ , ಕರಪತ್ರ ಯಾರಲ್ಲೂ ಇಲ್ಲ. ಹಂಚಿಯೂ ಇಲ್ಲ.ಇಲ್ಲಿ ಎಲ್ಲ ಬಾಯಿಂದ ಬಾಯಿಗೆ ಹರಡಿದ ಮಾಹಿತಿಯಿಂದ ಬಂದವರು. ಕೆಲವರಿಗೆ ಚರ ದೂರವಾಣಿಯ ಮೂಲಕ ಕಿರು ಸಂದೇಶದ ರೂಪದಲ್ಲಿ ತಿಳಿಸಿರ ಬಹುದು. ಅದನ್ನು ಅವರು ಪರಿಚಿತರಿಗೆ  ತಿಳಿಸಿಸಿದ್ದಾರೆ.  ಯಾವುದೆ ವಾಹನ ಸೌಕರ್ಯ ಒದಗಿಸಿಲ್ಲ. ಅದರ ವ್ಯವಸ್ಥೆ ಬಂದವರದೆ ,ಎಂದರು.


 ದೂರದೂರಿನ ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ದಾಖಲೆಗಾಗಿ  ಐವತ್ತೋ ನೂರೋ ಮಾಡಿಸಿರಬಹುದು ಎಂದರು.ಇದು ಉಳಿತಾಯದ ವಿಧಾನವಿರಬಹುದು ಎಂದುಕೊಂಡೆ. ನಂತರ ತಿಳಿಯಿತು ಇದು ಅವರ ಸಸ್ಯ ಸಂಪತ್ತನ್ನು ರಕ್ಷಿಸುವ ನಡೆ ಎಂದು. ಪ್ರತಿ ಉಪನ್ಯಾಸದ ನಂತರ  ಪ್ರೇಕ್ಷಕರಿಗೆ ತಮಗೆ ಅಗತ್ಯ ಮಾಹಿತಿ ಪಡೆವ  ಅವಕಾಶವಿದೆ. ಆದರೆ ಯಾರೂ  ಮಾತನಾಡುವ ಹಾಗಿಲ್ಲ. ಕೇಳಿದವರಿಗೆ ಕಾಲು ಪುಟ ಬಿಳಿಹಾಳೆ ಕೊಡುವರು. ಅದರಲ್ಲಿತಮ್ಮ ಪ್ರಶ್ನೆ ಬರೆದು ಕೊಟ್ಟರೆ ಉತ್ತರಿಸುವರು. ಅದೂ ಕಾಗದ ಮರಗಳಿಂದ ಮಾಡುವರು. ದುರ್ಬಳಕೆ ಬೇಡ. ಅನಾವಶ್ಯಕ ಬರವಣಿಗೆ ಬೇಡ. ಸಂಕ್ಷಿಪ್ತವಾಗಿ ಬರೆಯಿರಿ ,ಮಿತವಾಗಿ ಬಳಸಿ ಎಂಬ ಹಿತವಚನ. ಕಾಗದದ ಚೂರು ಪಡೆದವರು ಹತ್ತಕ್ಕೂ ಹೆಚ್ಚಿರಲಿಲ್ಲ.
ಅದು ಬರಿ ಕೃಷಿ ಮೇಳ ವಾಗಿರಲಿಲ್ಲ. ಅದು ಜೈವಿಕ ಮೇಳ. ಎಲ್ಲ ಜೀವ ಜಗತ್ತಿಗೆ ಸಂಬಂಧಿಸಿದ ವಿಷಯ ಅದರ ವ್ಯಾಪ್ತಿ. ಕೃಷಿ, ಪರಿಸರ , ಆಹಾರ ಮತ್ತು ಆರೋಗ್ಯ ಮೇಳದ ಮೂಲ ಉದ್ದೇಶಗಳು. ಮೇಳವನ್ನು ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಅರಣ್ಯ ಇಲಾಖೆ ,  ರೇಷ್ಮೆ ಇಲಾಖೆ ,ಜಲಾನಯನ ಇಲಾಖೆಗಳು ಪ್ರಾಯೋಜಿಸಿದ್ದವು. ಆದರೆ ಅದರ ನೇತೃತ್ವ ಮಾತ್ರ ಪುಣ್ಯ ಭೂಮಿಯದು. ಅದು ಎರಡು ದಿನದ ಮೇಳ.ಜೈವಿಕ ಕೃಷಿ, ಜೇನು ಕೃಷಿ, ವೃಕ್ಷಾಧಾರಿತ ಕೃಷಿ,ಅರಣ್ಯೀಕರಣ , ನೆಲ ಜಲ ಸಂರಕ್ಷಣೆ, ಕೃಷಿ – ಕಾಡುಪ್ರಾಣಿಗಳು , ಆಹಾರ – ಆರೋಗ್ಯ ಮತ್ತು ಕೃಷಿ ಬರವಣಿಗೆ ವಿಷಯಗಳ ತಜ್ಞರು ಮಾರ್ಗದರ್ಶನ ನೀಡುವರು..ಜಿಲ್ಲಾದಿಕಾರಿ  ಮೊದಲು ಗೊಂಡು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ರೈತರ ಅನಿಸಿಕೆಗೆ ಸ್ದಂದಿಸಲಿದ್ದರು

ವಿವರ ತಿಳಿದಾಗ ಈ ಮೇಳದ  ವಿಭಿನ್ನತೆಯ ಅರಿವಾಯಿತು. ಯಾವುದೆ ಆಮಂತ್ರಣ ಪತ್ರಿಕೆ ಇಲ್ಲದಿದ್ದರೂ ಐದು ನೂರಕ್ಕೂ ಹೆಚ್ಚು ಜನ ಸೇರಿದ್ದರು. ವಿಶೇಷ ಎಂದರೆ ಬೀದರ್‌ , ಬಿಜಾಪುರ, ದಕ್ಷಿಣ ಕನ್ನಡ ಉತ್ತರ ಕನ್ನಡದ ರೈತರೂ ಬಂದಿದ್ದರು. ಅವರಿಗೆ ರಾತ್ರಿ ತಂಗಲು ತೋಟದಲ್ಲೆ ವ್ಯವಸ್ಥೆ ಇದ್ದಿತು. ಆದರೆ ಬಹು ಸರಳ ವ್ಯವಸ್ಥೆ. ಸಾಧಾರಣ ರೈತರು  ಇರುವ ವತಾವರಣ ಅಲ್ಲಿತ್ತು. ಆದರೆ ಅಲ್ಲಿ  ಕಾಫಿ ,ಟೀ , ಮಧ್ಯ ಪಾನ,  ಧೂಮಪಾನ ಹೊರಗಿನ ಆಹಾರ ಪಾಪನೀಯಗಳಿಗೆ   ಅವಕಾಶವಿಲ್ಲ. ಪ್ಲಾಸ್ಟಿಕ್   ಬಳಕೆ ಕೂಡದು.  ನಿಯಮ ಪಾಲನೆ ಮಾಡದವರಿಗೆ ಅವಕಾಶವಿಲ್ಲ.  ಅವರ ಗುರಿ ಜನ ಸೇರಿಸುವುದುಲ್ಲ. ಆಸಕ್ತರಿಗೆ ಮಾಹಿತಿ ಮುಟ್ಟಿಸುವುದಾಗಿತ್ತು.
ಮೇಟಿಕುರ್ಕಿಯ ಶಾಂತ ವೀರಯ್ಯಬವರು ನಿವೃತ್ತ ಉಪನನಿರ್ಧೇಶಕರು. ಜೇನು ಸಾಕಣೆಯ ತಜ್ಞರು.ಬೆಂಗಾಡಾದ ಚಿತ್ರದುರ್ಗದಲ್ಲಿ ಜೇನು ಸಾಕಣೆಮಾಡುತ್ತಾ ಆಸಕ್ತರಿಗೆ ತರಬೇತಿನೀಡುತ್ತಾ ಜೀವನವನ್ನೆ ಮುಡುಪಾಗಿಟ್ಟುಕೊಂಡವರು. ಅವರು ಜೇನುಹುಳು  ಹೇಗೆ ಕೃಷಿಯ ಅನಿವಾರ್ಯ ಅಂಗ  ಯಾವುದೆ ಸಸ್ಯ ಫಲ ಭರಿತವಾಗ ಬೇಕಾದರೆ ಪರಾಗ ಸ್ಪರ್ಶವಾಗಲೆ ಬೇಕು ಅದು ಬಹುತೇಕ ಆಗುವುದು ಜೇನು ನೊಣ ಗಳಿಂದ. ಪರಸರದ ಪರಿಶುದ್ಧತೆಯ ಸೂಚಕ ಜೇನು ಹುಳುಗಳು, ಜೇನು ಒಂದು ಸಂಪೂರ್ಣ ಸಮೃದ್ಧ ಆಹಾರ ಮತ್ತು ಅದರ ಔಷಧಿಯ ಗುಣ ಅಪಾರ ಹೀಗೆ ಪದರು ಪದರಾಗಿ ಜೇನಿನ ಮಹಿಮೆಯನ್ನು ಬಿಡಿಸಿದರು. ನಂತರ ಪ್ರಾತ್ಯಕ್ಷಿಕೆ ತೋರಿಸಲು ಸಿದ್ಧರಾದರು. ಪ್ರವೇಶ ದ್ವಾರದ ಹತ್ತಿರವಿದ್ದ ಜೇನು ಪೆಟ್ಟಿಗೆಗಳ ಹತ್ತಿರ  ಮಾಹಿತಿ ಪ್ರದರ್ಶಿಸಿದ್ದರು.  ಹತ್ತು ಜನರ  ಆಸಕ್ತ ರಿಗೆತಂಡತಂಡವಾಗಿ ಉಪನ್ಯಾಸ ಮುಗಿದ ಮೇಲೆ    ತರಬೆತಿ ಶುರು ಮಾಡಿಯೆ ಬಿಟ್ಟರು.
ಪ್ರತಿ ಭಾಷಣವಾದ ಮೇಲೆ  ವಿಷಯ ಕುರಿತು ಪ್ರಶ್ನೆ. ಉತ್ತರಿಸಿದವರಿಗೆ ಬಹುಮಾನ.
ಅದರಿಂದ ಕೇಳುಗರ ಗಮನ ಸೆಳೆದರು.ಮಧ್ಯವಿರಾಮ ವಿರಲಿಲ್ಲ ಆದರೆ  ಹೊಸ ವಿಷಯವಿರತಿತ್ತು.ಪರಿಸರ ಮತ್ತು ಅರೋಗ್ಯದ ವಿಷಯ ಬಂದಾಗ ಟಿವಿ ಹೇಗೆ ಮನೆಯ ಮಹಿಳೆಯರ ಮತ್ತು ಮಕ್ಕಳ ಸಮಯವನ್ನು ನುಂಗಿಹಾಕುತ್ತಿದೆ ಎಂಬುದರ ವಿವರಣೆ . ನೆರದಿದ್ದವರ ಮನೆ ಯಲ್ಲಿ  ಯಾರ ಮನೆಯಲ್ಲಿ ಟಿವಿ ಇಲ್ಲ ಎಂಬ ಪ್ರಶ್ನೆಗೆ ಮೆಲೆದ್ದ ಕೈಗಳು ಎರಡೆ. ಅವರಿಗೆ ಬಹುಮಾನ.
ಮೈಸೂರಿನ ಚಂದ್ರಶೇಖರ್‌ ಐಟಿ ಉದ್ಯೋಗ ಬಿಟ್ಟು ಕೃಷಿಕರಾದವರು.ಮಿತ ಬಳಕೆ ಮತ್ತು ಸಾವಯವ ಕೃಷಿಹೇಗೆ ಆಹಾರಸಮಸ್ಯೆಯನ್ನು ಪರಿಹರಿಸಬಲ್ಲವು ಎಂಬುದನ್ನು ವಿವರಿಸಿದರು.ಉತ್ಪನ್ನಗಳ ಮೌಲ್ಯವರ್ಧನೆಯ ವಿಧಾನ ತಿಳಿಸಿದರು..
ನಂತರ ಪದವಿಧರರರಾಗಿಯೂ ಮೊಬೈಲ್ ಬಳಸದವರ ಮಾಹಿತಿ ಕೇಳಿದಾಗ ಶೃತಿ ಎಂಬ ಹದಿ ಹರೆಯದ ಹುಡುಗಿ ಹಾಗೂ ಒಬ್ಬ ಮಧ್ಯವಯಸ್ಕರು ಮಾತ್ರ ಬಹುಮಾನಕ್ಕೆ ಅರ್ಹರಾದರು. ಇಪ್ಪತರ ಅಂಚಿನಲ್ಲಿದ್ದೂ ಮೊಬೈಲ್‌ ಬಳಸದ ಆ ಯುವತಿಯನ್ನಂತೂ ಜನ ಅಚ್ಚರಿಯಿಂದ ಮಿಕಿ ಮಿಕಿ ನೋಡಿದರು.
ಅಲ್ಲಿನ ಇನ್ನೊಂದು ಗಮನಾರ್ಹ ಸಂಗತಿ ಅತಿಥಿಗಳನ್ನು  ಸ್ವಾಗತಿಸಿದಂತೆ, ಸಭಾಂಗಣವನ್ನು ಪ್ರವೇಶಿಸಿದಪ್ರತಿಯೊಬ್ಬರನ್ನೂ ಹೆಸರು ಹಿಡಿದು ವಿವರದ ಸಮೇತ ಬಂದಬಂದಂತೆ ಸ್ವಾಗತಿದ್ದು.ಎಷ್ಟೊ ಸಲ ಅತಿಥಿಗಳ ಹೆಸರನ್ನೆ ತಪ್ಪುತಪ್ಪಾಗಿ ಹೇಳುವ ಜನರಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಲ್ಲಿ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಗಣ ಪತಿ ಭಟ್ಟರನ್ನು ವಿನಾಯಕ ಭಟ್ಟ ಎಂದು ಪದೇ ಪದೇ ಸಂಬೋಧಿಸಿದ ನಿರೂಪಕರ ನೆನಪಾಯಿತು. . ಆದರೆ ಇಲ್ಲಿನ ಜೈವಿಕ ಮೇಳದ ಪ್ರತಿ ಪ್ರೇಕ್ಷಕನನ್ನೂ ಸ್ವಾಗತಿಸುವ ರೀತಿ ಅವರ ಬದ್ಧತೆಯ ಸಂಕೇತ ವಗಿತ್ತು. ನೂರಾರು ಸಂಖ್ಯೆಯ ಪರಿರಸರ ಪ್ರೇಮಿಗಳನ್ನು ಬೆಳಸುವ ಪರಿ ಇದಾಗಿತ್ತು

ನಾನು ಹೋಗಿ ಒಂದು ತಾಸಾದರೂಶಿಷ್ಯ ಗಮನಿಸದಷ್ಟು ಕಾರ್ಯಕ್ರಮದಲ್ಲಿ ತಲ್ಲೀನ. ನಾನು ಣೊಡುತ್ತಾ ಕುಳಿತಿರುವಂತೆ ನನ್ನ ಗುರುಗಳು ಬಂದಿದ್ದಾರೆ. ವೇದಿಕೆಗೆ ಬರಬೇಕು ಎಂಬ ಕರೆ ಕೇಳಿ ಬೆಚ್ಚಿದೆ. ಬಿಡದೆ ವೇದಿಕೆಯಲ್ಲಿ ಕುಳ್ಳಿರಿಸಿ,”  ಇವರು ಬಹಳ ಕಠಿನ ನಿಯಮಪಾಲಕರು.ಉಪನ್ಯಾಸಕರಾಗಿ , ಪ್ರಾಂಶುಪಾಲರಾಗಿ ವೈಯುಕ್ತಿಕವಾಗಿ  ಶಿಸ್ತಿನ ಸಿಪಾಯಿ . ಮೂವತ್ತು ವರ್ಷವಾದರೂ  ಇಂದಿಗೂ ಇವರೆ ನನ್ನ ಆದರ್ಶ “ಎಂದಾಗ ಶಿಕ್ಷಕ ವೃತ್ತಿಯ ಸಾರ್ಥಕತೆಗೆ ಚಪ್ಪಾಳೆ ಬಿದ್ದವು. .
ಸಮಾವೇಶಗಳಲ್ಲಿಯ ವೇದಿಕೆಯ ಮೇಲಿದ್ದವರು ಸರ್ವಜ್ಞರು  ಕೇಳುಗರು ತಿಳಿಯದವರು ಎಂಬ ನಡವಳಿಕೆಗೆ ಅಲ್ಲಿ ಆಸ್ಪದವೆ ಇರಲಿಲ್ಲ. ಹಸಿರಂಗಿ ತೊಟ್ಟು ಚುರಾಕಾಗಿ ಕೆಲಸ ಮಾಡುತಿದ್ದ ಯುವಕನೊಬ್ಬನ ಹೆಸರು ಕರೆದಾಗ ಅವನು ಏನೋ ಕೆಲಸವಿದೆ ಎಂದು ಕೊಂಡು ಧಾವಿಸಿ ವೇದಿಕೆಗೆ ಬಂದ. ದೇಶಿಯ ಹಸುಸಾಕಣೆಯಿಂದ ಹೇಗೆ ಚಿಕ್ಕ ಹಿಡುವಳಿಯನ್ನು ಲಾಭ ದಾಯಕ ವಾಗಿಸಿರುವನು  ಎಂಬುದನ್ನು ಕುರಿತು ಸಭೆಗೆ ವಿವರಿಸು,  ಎಂದಾಗ ಅವನು ಕಕ್ಕಾ ಬಿಕ್ಕಿ. ಮೊದಲು ಮಾತೆ ಹೊರಡಲಿಲ್ಲ. ಆದರೆ ತನ್ನಪ್ರಥಮ ಮಾತುಗಾರಿಕೆ ಪ್ರಯತ್ನವನ್ನು ಮುಂದುವರಿಸಿ ಹೇಗೆ ಗುಡ್ಡದ ಅಂಚಿನಲ್ಲಿರವ ತನ್ನ ಕುಟುಂಬ ,ನಾಲಕ್ಕುರಾಸುಗಳಿಂದ ೧೬ ರಾಸುಗಳ ವರೆಗೆಹೆಚ್ಚಿಸಿ ಅದನ್ನೆ ಸಾವಯವ ಕೃಷಿಗೆ ಪೂರಕವಾಗಿ ಬಳಸಿಕೊಂಡಿರುವುದನ್ನು ತಡವರಿಸುತ್ತಾ ತಿಳಿಸಿದಾಗ ಸಭೆಯಲ್ಲಿ ಮಿಂಚಿನ ಸಂಚಾರವಾಯಿತು.
ಇದಕ್ಕೂ ಮಿಗಿಲಾದ ದೃಶ್ಯ ಇನ್ನೂ ಕಾದಿತ್ತು. ಬಳ್ಳಾರಿಜಿಲ್ಲೆಯ ಯುವಕನೊಬ್ಬ ಬಿಫಾರ್ಮ ಮಾಡಿ ಗೊವಾದಲ್ಲಿ  ಕೈ ತುಂಬಾ ಹಣ ಬರುತಿದ್ದ ಕೆಲಸ ಬಿಟ್ಟು ತನ್ನ ಊರಿನಲ್ಲಿರುವ ಜಮೀನು ಸಾಗು ಮಾಡಲು ಮರಳಿರುವುದಕ್ಕೆ ಅಭಿನಂದನೆ ಸಲ್ಲಿಸಲಾಯಿತು .ಹೀಗೆ ಈ ಮರಳಿ ಮಣ್ಣಿಗೆಬರುವುದೆ ಇಂದಿನ ಕೃಷಿ ಸಮಸ್ಯೆಗಳಿಗೆ ಸೂಕ್ತ ಪರಿಹಾರವೆಂದು ಮನದಟ್ಟು ಮಾಡಿದರು. ಉಪನ್ಯಾಸ ಮುಗಿದ ಮೇಲೆ ಕೇಳುಗರ ಗ್ರಹಿಕೆ ಅರಿಯಲು ಆಯ್ದ ಒಬ್ಬಿಬ್ಬರಿಗೆ ಪ್ರಶ್ನೆ. ಸರಿಯುತ್ತರಕೊಟ್ಟರೆ ಹೊಗಳಿಕೆ ಬಹುಮಾನ.
ಅಲ್ಲಿ ಸನ್ಮಾನ ಪಡೆದ ನಾಲ್ವರು ಸಣ್ಣ ರೈತರೆ.ಕಡಿಮೆ ಭೂಮಿಯಲ್ಲಿ ಸಾವಯವ ಕೃಷಿವಿಧಾನ ದಿಂದ ಹೆಚ್ಚು ಬೆಳೆ ತೆಗೆದವರು.
 ಈ ಅನ್ನ ದಾತರ ಮೇಳದಲ್ಲಿ  ಉಟ ಮಾಡಲು ವಿರಾಮದ ಅವಧಿಯೆ  ಇರಲಿಲ್ಲ. ಒಂದು ಗಂಟೆಯ ಸುಮಾರಿಗೆ ಅಡಿಗೆ ಸಿದ್ಧ ವಾಗಿತ್ತು. ಮೂವತ್ತು ಜನರ ತಂಡ ತಂಡ ವಾಗಿ ಆಹಾರವನ್ನು ಅಡಕೆ ತಟ್ಟೆಗಳಲ್ಲಿ ಪಡೆದು ಹಿಂಬಾಗದಲ್ಲಿ ಹಾಕಿದ್ದು ಆಸನದಲ್ಲಿ ಕುಳಿತು ಮಾಹಿತಿಯನ್ನು  ಕಿವಿಗೆ ಸೇರಿಸುತ್ತಾ ಆಹಾರವನ್ನು ಸೇವಿಸುವ ವ್ಯವಸ್ಥೆ ಇದ್ದಿತು. ಯಾರೂ ಚಕಾರವೆತ್ತದೆ ಮೌನವಾಗಿ ಆಹಾರ ಮತ್ತು  ವಿಚಾರಗಳೆರಡನ್ಣು ಪುಷ್ಕಳವಾಗಿ  ಪಡೆದರು.
 ಇನ್ನು ಅಲ್ಲಿ ಮಾಡಿದ ಅಹಾರ ವ್ಯವಸ್ಥೆಯನ್ನು ಕುರಿತು ಸ್ಥಳೀಯ ಶಾಸಕರ ಮಾತಿನಲ್ಲೆ ಹೇಳುವುದಾದರೆ, “ ನಾವು ಚಿಕ್ಕವರಿದ್ದಾಗ  ಹಳ್ಳಿಯಲ್ಲಿನ ಸಮಾರಂಭದದ ನೆನಪು ತಂದಿದೆ. ಆಗ ಮದುವೆ ಜಾತ್ರೆ  ಏನೆ ಆದರೂ ಊಟಕ್ಕೆ ಇರುತಿದ್ದುದು ಮೂರೆ ಪದಾರ್ಥಗಳು .ಅದೂ ಕೆಂಪಕ್ಕಿ ಅನ್ನ, ತರಕಾರಿಸಾರು ಮತ್ತು ಪಾಯಸ. ಅದನ್ನೂ ಊರಿನ ಜನರೆ ಸೇರಿ ಮಾಡುತಿದ್ದರು ಈಗಿನಂತೆ ಎಲೆ ತುಂಬ ಹತ್ತಾರು ಪದಾರ್ಥಗಳುನ್ನುಬಡಿಸಿ ತುಸು ತಿಂದು ಹೆಚ್ಚಿನದನ್ನು ಚೆಲ್ಲುವ ಪದ್ದತಿ ಇರಲಿಲ್ಲ. ಪುಣ್ಯ ಭೂಮಿಯಲ್ಲಿ ನಮ್ಮ ಹಿಂದಿನ ಕಾಲದ ಸಂಪ್ರದಾಯವನ್ನೆಅನುಸರಿಸಿರುವರು. ಅದಕ್ಕೆ ಊಟ ಮಾಡಲೆಂದೆ ಬಂದಿರುವೆ.  ವಿಜಯ ಅಂಗಡಿಯವರು ಕೃಷಿಕರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವ ಪ್ರಯತ್ನ ಮಾಡುತ್ತಿರುವರು. ವಿಜ್ಞಾನ , ತಂತ್ರಜ್ಞಾನದಲ್ಲಿ ಮುನ್ನಡೆ ಸಾಧಿಸಿದರೂ,  ಕೃಷಿಯಲ್ಲಿ ಖಷಿ ಪಡೆಯಲು ಹಿಂದಿನ ಪದ್ದತಿ ಅನಿರ್ವಾ ವಾಗಿದೆ ಅದಕ್ಕೆ  ಬೆಂಬಲ ನೀಡುವುದು ರೈತರ ಹಿತ ದೃಷ್ಟಿಯಿಂದ ಅಗತ್ಯ “ ಎಂದರು.
ಅಡಿಗೆಯನ್ನು ಮಾಡಿದ್ದು ಸ್ವಯಂ ಸೇವಕರೆ ಅದರಲ್ಲೂ ಮಹಿಳೆಯರೆ ಹೆಚ್ಚು.. ಸಾಮಗ್ರಿಗಳೆಲ್ಲ ಸಾವಯವ ರೈತರ ಕೊಡುಗೆಯೆ.   ಪಾಲಿಷ್ ಇಲ್ಲದ ಅಕ್ಕಿಯ ಅನ್ನ, ಹುರುಳಿ ಬದನೆ , ಮೆಂತ್ಯಸೊಪ್ಪು ಹಾಕಿದ ಸಾಂಬಾರು ಮತ್ತು ಪಾಯಸ. ಬೇಕಾದಷ್ಟು ನೀರು ಮಜ್ಜಿಗೆ. ಊಟ ಬಹು ರುಚಿಕರ ವಾಗಿತ್ತು. ಆದರೆ ಒಂದು ವಿಷಯ ಪದೇ ಪದೇ ನೆನಪು ಕೊಡುತಿದ್ದರು.ಹೊಟ್ಟೆ ತುಂಬ ತಿನ್ನಿ ಆದರೆ ವ್ಯರ್ಥಮಾಡಬೇಡಿ. ಒಂದು ಹೊತ್ತಿನ  ಅನ್ನಕ್ಕೆ ಗತಿ ಇಲ್ಲದವರ ನೆನಪು ಇರಲಿ.ಮಲ್ಲಿಗೆಯ ಅರಳಿನ ತರಹದ ಅನ್ನವನ್ನೂ ತುಸು ತಿಂದು ಹೆಚ್ಚಿನಪಾಲು ಕಸದ ತೊಟ್ಟಿಗೆ ಹಾಕುತಿದ್ದವರೂ ಅಡಕೆ ಹಾಳೆ ತಟ್ಟೆಯನ್ನು ಸವರಿ ಕೊಂಡು ತಿಂದರು. ಯಾವುದುಇಲ್ಲಿ. ಊಟ ಮಾಡಿ ನಳದ ನೀರು ಕುಡಿದರು..ಬಹುತೇಕ ಜನರಿಗೆ ಇಲ್ಲಿನ ಪದ್ದತಿಯ ಗೊತ್ತಿರುವುದರಿಂದ ಕಮಕ್ ಕಿಮಕ್ ಎನ್ನದೆ ಕಾರ್ಯಕ್ರಮ ಸಾಗುತ್ತಿರುವಂತೆಯೆ  ಎಲ್ಲರ ಊಟ ವೂ ಮುಗಿಯಿತು.ಸಂಜೆಯ ಹೊತ್ತಿಗೆ ಅಲ್ಲಿಯೆ ಬೆಳೆದ ಪಪ್ಪಾಯಿ ,ಸೀಬೆ ,ಬಾಳೆಹಣ್ಣುಗಳ ರಸಾಯನ. ಅದೂ ಅಲ್ಲಿರುವ ಮರದ ಎಲೆಗಳ ಮೇಲೆ.
 ಅದೆ ಸಮಯದಲ್ಲಿ ಅಲ್ಲಿ ಹಾಜರಿದ್ದ ಜಿಲ್ಲಾಧಿಕಾರಿಗಳು ಮತ್ತು ಕೃಷಿ ಪತ್ರಿಕೆ ಸಂಪಾದಕರೂ ಕೆಲವೆ
ದಿನಗಳ ಹಿಂದೆ ನೆಡೆದಿದ್ದ ಹಳ್ಳಿ ಹಬ್ಬಕ್ಕೂ ಇದಕ್ಕೂ ತುಲನೆ ಮಾಡಿ  ಅಚ್ಚರಿ ವ್ಯಕ್ತಪಡಿಸಿದರು. ಅಲ್ಲಿ ಸಾವಿರಾರು ಜನ ಸೇರಿದ್ದರು ಅಥವ ಸೇರಿಸಲಾಗಿತ್ತು ಕೋಟಗಟ್ಟಲೆ ಖರ್ಚು ಮಾಡಿ ಎಲ್ಲ ರೀತಿಯ ಅಹಾರ ಒದಗಿಸಲಾಗಿತ್ತು ಆದರೆ  ಅಲ್ಲಿ ಏನಾಯಿತು ಎಂದು ಕೇಳಿದರೆ ಯಾರಿಗೂ ಏನೂ ಗೊತ್ತಿಲ್ಲ. ಬಂದರುಗಡದ್ದು ಊಟ ಮಾಡಿದರು ನಂತರ ಢರ್‌ ಅಂತ ತೇಗಿ ವ್ಯವಸ್ಥೆ ಮಾಡಿದ್ದ ವಾಹನಗಳಲ್ಲಿ ತಮ್ಮ ಊರಿಗೆ ಹೋದರು. ಕಾರಣ ಅದು ಸರ್ಕಾರಿ ಕಾರ್ಯಕ್ರಮ.
ಇಲ್ಲಿ ಎರಡುವಾರಗಳಿಂದ  ತಯಾರಿ ನಡೆದಿದೆ. ಆದರೆ ಯಾರೂ ಕೂಲಿಗಾಗಿ ಬಂದವರಲ್ಲ. ಬಿಡುವಿನಲ್ಲಿ  ಬಂದು ಕೈ ಜೋಡಿಸಿರುವರು. ಆದರೆ ಅವರಿಗೆ ಹಣ ನೀಡದಿದ್ದರೂ ಅವರು ಹೋಗುವಾಗ ಉತ್ತಮ ತಳಿಯ ಮಾವು ಹೆಬ್ಬೇವು, ಹಲಸಿನ ಸಸಿಗಳನ್ನು ನಿಡಲಾಗಿದೆ. ಅವರು ಅದನ್ನು ತಮ್ಮಜಮೀನಿನಲ್ಲಿ ಇಲ್ಲವಾದರೆ ಮನೆಯಂಗಳದಲ್ಲಿ ನೆಟ್ಟು ಬೆಳಸಿದರೂ ಸರಿ ಪರಿಸರ ಸೇವೆಗೆ ಕಿರುಕಾಣಿಕೆ ಸಲ್ಲಿಸಿದಂತೆ.
ಪರಿಸರ ಎಂದರೆ  ಮರ ಗಿಡ, ಹಸಿರು ಬೆಟ್ಟ ಮಾತ್ರವಲ್ಲ. ನಾವಿರುವ ಮನೆಯೂ ಒಂದು ಕಿರು ಪರಿಸರವೆ. ಅದಕ್ಕೆ ಯಾರೆ  ತಮ್ಮ ವೈಯುಕ್ತಿಕ ಕೆಲಸ ಬಿಟ್ಟು ಪುಣ್ಯ ಭೂಮಿಯನ್ನು ಬೆಳೆಸುವೆವು ಎಂದು ಯೋಚಿಸುವಂತಿಲ್ಲ. ಮೊದಲು ವ್ಯಕ್ತಿ ಬೆಳೆಯಬೇಕು ನಂತರ ಸಂಘಟನೆ. ಅದರಿಂದ ಇಲ್ಲಿ ಯಾರೂ ಪೂರ್ಣಾವಧಿ ಕೆಲಸಗಾರರಿಲ್ಲ. ಬಿಡುವಿನ ವೇಳೆಯಲ್ಲಿ  ತಾವೂ ಕಲಿತು ಅನ್ಯರಿಗೂ ಕಲಿಸುವವರೆ ಎಲ್ಲ.
ಕಾರ್ಯಕ್ರಮದ  ಹೆಗ್ಗಳಿಕೆ ಎಂದರೆ ಅಧ್ಯಕ್ಷರು ಮೊದಲು ಗೊಂಡು ಯಾರೂ ವೇದಿಕೆಯ ಮೇಲೆ ಬೇರು ಬಿಟ್ಟು ಕೂರುವ ಹಾಗಿಲ್ಲ. ಅಗತ್ಯವಿದ್ದಾಗ ವೇದಿಕೆ ಬಂದು ಕೆಲಸ ಮುಗಿಸಿ ಪುನಃ ಇತರೆ ಕೆಲಸಕ್ಕೆ ಕೈಹಾಕುವರು.
ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ ನೀಡಿದ ನೆನಪಿನ ಕಾಣಿಕೆಯೂ   ಪರಿಸರ ಪೂರಕ. ಅವರಿಗೆ ಅಲ್ಲಿಯ ಹೂವಿನ ಹಾರ,ಆದರೆ   ಬುಕೆ, ಹಣ್ಣಿನ ಬುಟ್ಟಿ,  ಶಾಲು , ಸ್ಮರಣಿಕೆ ಗಳು ಇಲ್ಲ , ಸಾವಯವ ಪದ್ದತಿಯಲ್ಲಿ ಬೆಳೆ ಅಕ್ಕಿ ಬೆಲ್ಲ, ಕಾಫಿಪುಡಿ ಅರಿಷಿಣ, ಕೊಬ್ಬರಿ ಮತ್ತು ಹಣ್ಣುಗಳು..ಉದ್ಧೇಶ . ಹಾರಕ್ಕಿಂತ ಆಹಾರಕ್ಕೆ ಆದ್ಯತೆ. ಸ್ಮರಣಿಕೆ ಮನೆಯಲ್ಲಿ ಇಟ್ಟು ಮರೆಯುವರು. ಆದರೆ ಹೀಗೆ ದಿನ ಬಳಕೆಯ ಆಹಾರಪದಾರ್ಥಗಳನ್ನು ನೀಡಿದರೆ ಒಂದೆರಡು ವಾರ ಮನೆ ಮಂದಿಯೆಲ್ಲ  ಸಾವಯವ ಕೃಷಿಯನ್ನು  ನೆನಸುವರು. ಕಾಣಿಕೆ ಕೊಟ್ಟದ್ದೂ ಬಟ್ಟೆಯ ಕೈ ಚೀಲದಲ್ಲಿ.
 ಸಭಾಂಗಣದ ಸುತ್ತಲೂ ಇರುವ ಗಿಡ ಮರಗಳಿಗೆ ಸಾವಯವ ಕೃಷಿ ಮಾಹಿತಿ ನೀಡುವ ಬಟ್ಟೆಯ ಫಲಕ ಕಟ್ಟಿದ್ದರು.ಜತೆಗೆ ಸಾವಯವ ಕೃಷಿ ಕುರಿತ ಪುಸ್ತಕಗಳು, ಪ್ರಕಟಣೆಗಳು, ಪರಿಕರಗಳ ಪ್ರದರ್ಶನ ಮತ್ತು ಮಾರಾಟ  , ಜೇನು ,ಬೆಲ್ಲ, ಅಕ್ಕಿ , ಮೆಕ್ಕೆ ಜೋಳದ ರವೆ, ಹಣ್ಣುಗಳು, ಜಾಮು ಜೆಲ್ಲಿ, ಮೌಲ್ಯವರ್ಧಿತವಾದ ಸಾವಯವ ಉತ್ಪನ್ನಗಳು, ಬಗೆ ಬಗೆಯ ಸುಧಾರಿತ ತಳಿಗಳ ಸಸ್ಯಗಳು  ಎಲ್ಲವೂ ಮರಗಿಡಗಳಡಿಯಲ್ಲಿ.
ಇದರ ಸೂತ್ರಧಾರ ಹಾಸನ ಆಕಾಶವಾಣಿಯ ಕೃಷಿವಿಭಾಗದ ನಿರ್ವಾಹಕ ಡಾ. ವಿಜಯ ಅಂಗಡಿ.ದಿನವೂ ಮಾತಿನಲ್ಲಿ ಕೃಷಿ ಮಾಹಿತಿನೀಡಿ, ಅದನ್ನೆ ಕೃತಿಯಲ್ಲೂ ಪುಣ್ಯಭೂಮಿ ಎಂಬ ೧ ೧/೨ ಎಕರೆ ಭೂಮಿಯಲ್ಲಿ ಸಾವಯವ ಕೃಷಿಯ ಮಾದರಿ  ತೋರಿಸಿ, ನಾಡಿನಾದ್ಯಂತ ತಮ್ಮ ಬರಹಗಳಿಂದಲೂ ಹೆಸರಾಗಿ . ಸಾವಯವ ನಿಷ್ಠ ತಂಡ ಕಟ್ಟಿರುವ ವ್ಯಕ್ತಿ. ಇವರಿಗೆ ಕೃಷಿರತ್ನ ಪ್ರಶಸ್ತಿ  ಬಂದಿರುವುದ ದೊಡ್ಡದಲ್ಲ. ಜತೆಗೆ ಸರಳ ಜೀವನ, ಶಿಸ್ತಿನ, ಕಠಿನ ನಿಯಮಗಳಿಂದ ಗಾಂಧಿಯ ತುಂಡು ಎಂದು ಮೆಚ್ಚಿಕೆಯ  ಮೂದಲಿಕೆಗೂ ಪಾತ್ರ. ಅವರ ದನಿ ಕೇಳಿದವರು ಈ ಕೆಲಸದಲ್ಲಿ  ಕೈ ಕೂಡಿಸಿರುವರು.ಪುಣ್ಯ ಭೂಮಿಯ  ಗೌರವಾಧ್ಯಕ್ಷರು ನಿವೃತ್ತ ಶಿಕ್ಷಕರಾದ ಗಿಡ್ಡೆ ಗೌಡರು, ಜತೆಗೆ ನಾನೂರಕ್ಕೂ ಮಿಗಿಲಾದ ಸಂಖ್ಯೆಯ ಕ್ರಿಯಾ ಶೀಲ ಕೃಷಿಕ ಸದಸ್ಯರು. ಅನುದಾನ ಬೇಡದೆ , ಹದಿನೈದುವರ್ಷದಲ್ಲಿ ಕಣ್ಣು ಕುಕ್ಕುವ ಸಾಧನೆಯ ಹಿರಿಮೆ ಪುಣ್ಯ ಭೂಮಿಯದು.
ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ ,ಪಾರದರ್ಶಕತೆ ಮತ್ತು ಪರಿಶುದ್ಧತೆಇದ್ದರೆ , ಸಾರ್ಥಕತೆ ಮತ್ತು  ಗೌರವ ತನ್ನಿಂದ ತಾನೆ ಬರುವುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿತ್ತು


No comments:

Post a Comment