ಬಳ್ಳಾರಿ ಜಿಲ್ಲೆಯ ತಾಲೂಕು
ಕೇಂದ್ರದಲ್ಲಿನ ಕಾಲೇಜಿನ ಒಂದು ಅನುಭವ ನನಗೆ ಜೀವನದಲ್ಲಿ ದೊಡ್ಡ ಪಾಠ ಕಲಿಸಿತು. ಸಮಸ್ಯೆ
ಎದುರಾದಾಗ ಬೆನ್ನು ತೋರಿಸುವದಕ್ಕಿಂತ ಮುಖಾಮುಖಿಯಾದರೆ ಪರಿಹಾರ ಸುಲಭ ಎಂದು ಅರಿತೆ. ಅದು ತುಂಬ
ಹಿಂದುಳಿದ ಪ್ರದೇಶ. ಹೊಸ ಕಾಲೇಜು. ಅದೆ ತಾನೆ ಸ್ನಾತಕೋತ್ತರ ಪದವಿ ಪಡೆದು ಮೊದಲ ಬಾರಿ
ಕೆಲಸಕ್ಕೆ ಸೇರಿದ ತರುಣ ಉಪನ್ಯಾಸಕರು. ಎಲ್ಲ ಮಕ್ಕಳು ಗ್ರಾಮಾಂತರ ಪ್ರದೇಶದವರು. ನಯ ನಾಜೂಕು
ಇಲ್ಲ. ಬಹುಶಃ ಅವರ ವಂಶದಲ್ಲೆ ಕಾಲೇಜು ಕಟ್ಟೆ ಹತ್ತಿದ ಮೊದಲ ಪೀಳಿಗೆಯವರು. ಕೆಲವರು
ಮೂರನಾಯಲಕ್ಕು ವರ್ಷ ಮನೆಯಲ್ಲಿ ಇದ್ದು ಹತ್ತಿರದಲ್ಲೆ ಕಾಲೇಜು ಬಂದಿದೆ ಎಂದು ಸೇರಿದವರು.
ಗುರು ಶಿಷ್ಯರ ನಡುವೆ
ವಯಸ್ಸಿನ ಅಂತರ ಬಹಳವೇನೂ ಇರಲಿಲ್ಲ. ಆದರೆ ನಗರದಲ್ಲಿ ಕಲಿತು ಮೈಸೂರು, ಬೆಂಗಳೂರು, ಶಿವಮೊಗ್ಗದಂತಹ ದೂರದ ಊರಿಂದ ಬಂದು ಅವರೊಂದಿಗೆ ಬೆರೆತು ಕಲಿಸಲು ಶತಪ್ರಯತ್ನ
ಮಾಡುತ್ತಿದ್ದ ಯುವ ಉಪನ್ಯಾಸಕರ ಬಗ್ಗೆ ಅಪಾರ ಅಭಿಮಾನ. ಏನೇ ಕೆಲಸವಿದ್ದರೂ ಉತ್ಸಾಹದ
ಬುಗ್ಗೆಗಳಾಗಿ ಮಾಡಿ ಮುಗಿಸುತಿದ್ದರು. ಉಪನ್ಯಾಸಕರು ಬಹುತೇಕ ಅವಿವಾಹಿತರು. ಕಲಿತದನ್ನೆಲ್ಲ
ಪ್ರಯೋಗಿಸಬೇಕೆಂಬ ಹೊಸ ಹುರುಪಿನವರು. ಪಾಠಗಳ ಜತೆ ಆಟ, ನಾಟಕ, ಭಾಷಣ ಹೀಗೆ ಹಲವು ಪಠ್ಯೇತರ ಚಟುವಟಿಕೆಗಳನ್ನು
ಹಮ್ಮಿಕೊಳ್ಳತ್ತಿದ್ದರು. ಮಾತಿಗೆ ಮಾತು ಬಂದು ಶೈಕ್ಷಣಿಕ ಪ್ರವಾಸದ ಪ್ರಸ್ತಾಪ ಬಂದಿತು.
ವಿದ್ಯಾರ್ಥಿಗಳಿಗೆ ಅಪಾರ ಆನಂದ. ಅನೇಕರು ರೈಲನ್ನೂ ಸಹಾ ನೋಡಿದವರಲ್ಲ. ಜಿಲ್ಲಾ ಕೇಂದ್ರವನ್ನು
ಕೆಲವರು ಕಂಡಿರಲಿಲ್ಲ. ಒಂದೆ ಮಾತಿಗೆ ಎಲ್ಲ ಮುಗಿಬಿದ್ದರು. ಎಲ್ಲಿಗೆ ಹೋಗಬೇಕೆಂದು ಚರ್ಚೆ
ನಡೆಯಿತು.
ಹಂಪೆ, ಬಿಜಾಪುರ, ಮೈಸೂರು
ಮೊದಲಾದವುಗಳ ಹೆಸರು ಬಂದಾಗ ವಿದ್ಯಾರ್ಥಿಗಳೇನೋ ಎಲ್ಲಾದರು ಸರಿ ಎಂದರು. ಆದರೆ ಯುವ
ಉಪನ್ಯಾಸಕರಿಗೆ ಅವು ಹಳೆಯ ಜಾಗ. ಅವರು ಬರಲು ಮೂಗೆಳೆದರು. ಎಲ್ಲರೂ ಬರಬೇಕೆಂಬುದು ಹುಡುಗರ
ಬೇಡಿಕೆ. ಕೊನೆಗೆ ಗೋವಾಕ್ಕೆ ಹೋಗುವುದು ಎಂದು ನಿರ್ಧಾರವಾಯಿತು. ಹಾಗೆಯೇ ಕಾರವಾರ, ಬೆಳಗಾಂ, ಧಾರವಾಡ, ಗದಗ ಮೊದಲಾದ
ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕೆಂದು ಒಪ್ಪಲಾಯಿತು. ಎಲ್ಲ ಬೋಧಕರು ಮತ್ತು ಹುಡುಗಿಯರು
ಬರುತ್ತಿರುವುದರಿಂದ ಮದುವೆಯಾದ ಶಿಕ್ಷಕರು ತಮ್ಮ ಮಡದಿಯರನ್ನೂ ಕರೆ ತರಬೇಕೆಂದು ತಿಳಿಸಲಾಯಿತು.
ಇವರೆಲ್ಲರ ವೆಚ್ಚದ ಹೊರೆ ಮಕ್ಕಳ ಮೇಲೆ ಹಾಕಲು ಸರಿ ಎನಿಸಲಿಲ್ಲ. ಐದು ದಿನದ ಪ್ರವಾಸ.
ಅದಕ್ಕಾಗಿ ಪ್ರಯಾಣದ ವೆಚ್ಚವನ್ನು ಮಕ್ಕಳ ಮೇಲೆ ಹಾಕಬಾರದು. ಎಲ್ಲರೂ ಹಣ ನೀಡಬೇಕು.
ಮೇಲ್ವಿಚಾರಣೆ ಮಾಡುವ ಶಿಕ್ಷಕರ ಊಟ ಮತ್ತು ವಸತಿ ಮಾತ್ರ ಒಟ್ಟಿನ ಲೆಕ್ಕದಲ್ಲಿ ಭರಿಸಲು ಎಲ್ಲರೂ
ಸಮ್ಮತಿಸಿದರು. ಶೈಕ್ಷಣಿಕ ಪ್ರವಾಸದಲ್ಲಿ ಸಾಧಾರಣವಾಗಿ ಶಿಕ್ಷಕರು ಹಣ ನೀಡುವುದಿಲ್ಲ.
ಆದರೆ ಈಗಿನ ಪರಿಸ್ಥಿತಿ
ಬೇರೆ. ಎಲ್ಲರೂ ಸೇರಿ ಪ್ರವಾಸದ ಹೊಣೆಯನ್ನು ನನ್ನ ಹೆಗಲಿಗೆ ಹಾಕಿದರು. ಆಗಲೇ ಜನವರಿ
ಬಂದಿತ್ತು. ಕೊನೆ ವಾರದಲ್ಲಿ ಪ್ರವಾಸ ಹೊರಡಲು ಇಲಾಖೆಗೆ ಅನುಮತಿಗಾಗಿ ಪತ್ರ ಬರೆಯಲಾಯಿತು.
ಶನಿವಾರ, ಭಾನುವಾರ
ಸೇರಿದಂತೆ ಐದು ದಿನ ಹೋಗುವುದು, ಕೆಲಸದ ದಿನದ ನಷ್ಟವನ್ನು ಮುಂದೆ
ಬರುವ ಭಾನುವಾರಗಳಲ್ಲಿ ಕೆಲಸ ಮಾಡಿ ಸರಿದೂಗಿಸುವುದಾಗಿ ಇಲಾಖೆಗೆ ತಿಳಿಸಲಾಯಿತು. ಆಂಧ್ರದ
ಉರವಕೊಂಡದಿಂದ ಬಸ್ಸು ಗೊತ್ತು ಮಾಡಲಾಯಿತು. ಎಲ್ಲರೂ ಒಂದು ದಿನದ ಮಟ್ಟಿಗೆ ಬುತ್ತಿ ತರಲು
ತಿಳಿಸಿದೆವು. ಹೋಗುವ ದಿನ ಬಂದಿತು. ಬಾಳೆಗೊನೆ, ಅವಲಕ್ಕಿ, ಬೇಕರಿ ತಿಂಡಿಗಳನ್ನು ಧಂಡಿಯಾಗಿ ಕಾಲೇಜಿನ
ವತಿಯಿಂದ ಕೊಳ್ಳಲಾಯಿತು. ಇಲಾಖೆಯಿಂದ ಅನುಮತಿ ಪತ್ರ ಬರಲಿಲ್ಲ. ಮೊದಲೆ ಜಿಲ್ಲಾ ಕಛೇರಿ
ಸಮುದ್ರದಂತೆ ನಮಗೆ ಉತ್ತರಿಸಲು ಅವರಿಗೆ ಎಲ್ಲಿ ಸಮಯವಿರುವುದು ಎಂದುಕೊಂಡೆವು. ನಾವು ಹೋಗಿ
ಅನುಮತಿ ತರಬೇಕಿತ್ತು.
ಆದರೆ ಅಲ್ಲಿ ಹೋಗಿ
ಮೇಜಿನಿಂದ ಮೇಜಿಗೆ ಅಲೆದು ಸಂಬಂಧಿಸಿದವರ ಮರ್ಜಿ ಹಿಡಿದು ಕೈಯಲ್ಲಿ ಆದೇಶ ತರುವ ತಾಳ್ಮೆ, ಮನಸ್ಸು ಎರಡೂ ಇರಲಿಲ್ಲ. ಅವರಿಂದ
ಏನೂ ಬರದೆ ಇದ್ದುದರಿಂದ ನಮ್ಮ ಪ್ರವಾಸಕ್ಕೆ ತೊಂದರೆಯಿಲ್ಲ ಎಂದು ಯೋಚಿಸಿ ಎಲ್ಲ ಸಿದ್ಧತೆ
ಮುಗಿಸಿದೆವು. ಪ್ರವಾಸ ಹೊರಡುವ ದಿನ ಮೂರರ ಹೊತ್ತಿಗೆ ಹಳ್ಳಿಮಕ್ಕಳು ತಮ್ಮ ಲಗೇಜು ಸಹಿತ
ಬಂದಿಳಿದರು. ಬಸ್ಸೂ ಬಳ್ಳಾರಿ ಬಿಟ್ಟ ಸುದ್ದಿ ಬಂದಿತು. ಅಷ್ಟರಲ್ಲಿ ಉಪನಿರ್ದೇಶಕರ ಪತ್ರ
ಬಂದಿತು. ನಮಗೆಲ್ಲ ಖುಷಿಯೋ ಖುಷಿ. ಅನುಮತಿ ತಾನಾಗೆ ಬಂದಿತಲ್ಲ ಎಂದು. ಪ್ರಿನ್ಸಿಪಾಲು ಲಕೋಟೆ
ಒಡೆದು ಪತ್ರ ಓದಿ ತಲೆ ಮೇಲೆ ಕೈಹೊತ್ತು ಕುಳಿತರು. ಜನವರಿ ತಿಂಗಳಾದ್ದರಿಂದ ಶೈಕ್ಷಣಿಕ
ಪ್ರವಾಸಕ್ಕೆ ಹೋಗಕೂಡದು. ಅದನ್ನು ಏನಿದ್ದರೂ ಡಿಸೆಂಬರ್ ಒಳಗೆ ಮುಗಿಸಬೇಕಾಗಿತ್ತು ಎಂದು
ತಿಳಿಸಿದ್ದರು. ಪ್ರಾಂಶುಪಾಲರು ಹೋಗುವುದ ಬೇಡ ಎಂದರು.
ಆದರೆ ಕೊನೆ
ಗಳಿಗೆಯಾದ್ದರಿಂದ ಶಾಲೆಯ ಹೆಸರು,
ಮಕ್ಕಳ ಹಿತ ಗಮನಿಸಿ, ಹಣಕಾಸಿನ ತೊಡಕು ಗಮನಿಸಿ
ಆದದ್ದಾಗಲಿ ಹೊರಡಬೇಕೆಂದು ನಿರ್ಧರಿಸಲಾಯಿತು. ಪ್ರಾಂಶುಪಾಲರು ಬರಲು ಹಿಂದೇಟು ಹಾಕಿದರು. ಸರಿ
ಪ್ರವಾಸದ ವ್ಯವಸ್ಥಾಪಕನಾದ ನಾನೇ ಪೂರ್ಣ ಹೊಣೆ ಹೊರುವುದಾಗಿ ಸಮಾಧಾನ ಹೇಳಿದೆ. ಪ್ರವಾಸ
ಹೊರಟೆವು. ಕಡಲ ತಡಿಯಲ್ಲಿ ಎಲ್ಲರೂ ಸಂತಸದಿಂದ ಕುಣಿದಾಡಿದರು. ಈ ಖುಷಿ ನಡುವೆ ಒಂದು ಕಟು
ಅನುಭವವಾಯಿತು. ಗೋವಾದಲ್ಲಿ ವಿಶೇಷ ಆಕರ್ಷಣೆ ಎಂದರೆ ಸಂತ ಕ್ಸೇವಿಯರನ ಶರೀರ ಇರುವ ಪುರಾತನ
ಭವ್ಯ ಚರ್ಚು. ಶತಮಾನಗಳೇ ಕಳೆದರೂ ಇನ್ನೂ ಹಾಗೆಯೇ ಇರುವ ಅದರ ದರ್ಶನಕ್ಕೆ ದೇಶ ವಿದೇಶಗಳಿಂದ
ಪ್ರವಾಸಿಗರು ಮುಕುರಿರುತ್ತಾರೆ. ನಾವು ಹೋದಾಗ ಆಗಲೇ ಸಂಜೆಯ ಸಮಯ. ವಿಶೇಷ ಅನುಮತಿ ಪಡೆದು
ಎಲ್ಲರನ್ನೂ ಒಳಗೆ ಕಳುಹಿಸಲಾಯಿತು. ಶತ ಶತಮಾನಗಳ ಆ ಭವ್ಯತೆ, ದಿವ್ಯತೆ
ನಮ್ಮೆಲ್ಲರನ್ನೂ ಮೂಕರನ್ನಾಗಿತು. ಯಾರೋ ಕೆಲ ಹುಡುಗರು ಅಯ್ಯೋ ಹೆಣ ನೋಡಲು ಇಷ್ಟೇಕೆ
ಕಷ್ಟಪಡಬೇಕಾಗಿತ್ತು ಎಂದು ಗೊಣಗಿದ್ದರು. ಅಲ್ಲಿಯ ಜನರಿಗೆ ಕನ್ನಡ ಬಾರದು, ನಮ್ಮ ಮಾತು ತಿಳಿಯದು ಎಂದು ಅವರ ಭಾವನೆ. ಆದರೆ ಹೊರ ಬಂದಾಗ ಅಲ್ಲಿ ಪಾದ್ರಿಯೊಬ್ಬರು
ನಿಂತಿದ್ದರು. ಅವರು ನಮ್ಮನ್ನು ನೋಡಿ, ನಿಮ್ಮ ವಿದ್ಯಾರ್ಥಿಗಳಲ್ಲಿ
ಶಿಸ್ತು ಇಲ್ಲ. ನೀವು ಅವರಿಗೆ ಮೊದಲು ಮಾತನಾಡುವ ರೀತಿ ಕಲಿಸಬೇಕು ಎಂದು ಕಟುವಾಗಿಯೇ ಹೇಳಿದರು.
ಏನೂ ಗೊತ್ತಿರದ ನಮಗೆ ಗಾಬರಿ. ವಿವರವಾಗಿ ಪರಿಶೀಲಿಸಿದಾಗ ಭಾಷೆ ಬಾರದೆಂಬ ಒಂದೇ ಕಾರಣಕ್ಕೆ ಅವರ
ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಆ ಪಾದ್ರಿ ಪೋರ್ಚುಗೀಸರಾದರೂ ಅವರಿಗೆ ಕನ್ನಡ ಚೆನ್ನಾಗಿ
ಬರುವುದರಿಂದ, ನಮ್ಮ ಹುಡುಗರ ಕಪಿಚೇಷ್ಟೆ ಬಯಲಿಗೆ ಬಂದಿತ್ತು. ನಮಗೆ
ತಲೆತಗ್ಗಿಸುವಂತಾಯಿತು. ನಾವು ಕ್ಷಮೆ ಯಾಚಿಸಿದೆವು.
ಪ್ರವಾಸದ ಕೊನೆ ಹಂತದಲ್ಲಿ
ಎಲ್ಲ ಲೆಕ್ಕ ಪತ್ರ ಒಪ್ಪಿಸಿಲು ಎಲ್ಲರ ಸಭೆ ಕರೆಯಲಾಯಿತು. ಸುಮಾರು 1,000 ರೂ ಉಳಿತಾಯವಾಗಿರುವುದು ಕಂಡು
ಬಂತು. ಸಾಧಾರಣ ಶಾಲಾ ಪ್ರವಾಸಗಳಲ್ಲಿ ಉಳಿತಾಯದ ಪ್ರಶ್ನೆ ಬರುವುದೇ ಇಲ್ಲ. ಕಾರಣ ಎಲ್ಲರಿಗೂ ಗೊತ್ತು.
ಆದರೆ, ಪಾರದರ್ಶಕತೆಯ ಉದ್ದೇಶದಿಂದ ಸಂಗ್ರಹಿಸಲಾದ ಹಣ ಉಪನ್ಯಾಸಕರ
ಹತ್ತಿರವಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ಅದನ್ನು ಖರ್ಚು ಮಾಡುವ
ಹೊಣೆ ಮತ್ತು ಲೆಕ್ಕ ಇಡುವ ಜವಾಬ್ದಾರಿ ನೀಡಲಾಗಿತ್ತು. ಅವರು ಆ ಕೆಲಸವನ್ನು ತುಂಬ
ಪ್ರಾಮಾಣಿಕವಾಗಿ ನಿರ್ವಹಿಸಿದ್ದರು. ಹಣವನ್ನು ಹಿತಮಿತವಾಗಿ ಬಳಸಿ, ಅಪವ್ಯಯಕ್ಕೆ
ಅವಕಾಶವಿಲ್ಲದೆ ಸುಮಾರು ಸಾವಿರ ರೂಪಾಯಿ ಉಳಿಸಿದ್ದರು. ಉಳಿದ ಹಣ ಏನು ಮಾಡಬೇಕು ಎಂಬುದು ದೊಡ್ಡ
ಪ್ರಶ್ನೆಯಾಯಿತು. ಹಿಂದೆ ಶಿಕ್ಷಕರು ಉಚಿತವಾಗಿ ಪ್ರವಾಸ ಮಾಡುತ್ತಿದ್ದರು. ಈ ಬಾರಿ ಅವರೂ ಸಹ
ಪ್ರಯಾಣದ ವೆಚ್ಚ ನೀಡಿದ್ದರಿಂದ ಅದನ್ನು ಅವರಿಗೆ ವಾಪಸು ಮಾಡಬೇಕೆಂಬ ಸಲಹೆ ಬಂದಿತು. ಆದರೆ,
ಬಹುತೇಕ ಉಪನ್ಯಾಸಕರು ಅದನ್ನು ಬೆಂಬಲಿಸಲಿಲ್ಲ. ಇಲ್ಲವಾದರೆ ಉಳಿತಾಯವನ್ನು
ಎಲ್ಲರಿಗೂ ಸಮಾನವಾಗಿ ಹಂಚಬೇಕು ಎಂದು ಕೆಲವರು ವಾದಿಸಿದರು.
ಆದರೆ, ವಿದ್ಯಾರ್ಥಿಗಳು ಪ್ರವಾಸದ ಯಶಸ್ಸಿನ
ಖುಷಿಯಲ್ಲಿದ್ದರು. ಅಲ್ಲದೇ, ಆ ಹಣವನ್ನು ಎಲ್ಲರಿಗೆ ಹಂಚಿದರೆ
ಪ್ರತಿಯೊಬ್ಬರಿಗೆ ಅಂತಹ ದೊಡ್ಡ ಮೊತ್ತವೇನೂ ಸಿಗುತ್ತಿರಲಿಲ್ಲ. ಅದರ ಬದಲು ಶಾಲೆಗೆ
ಅಗತ್ಯವಿದ್ದ ವಸ್ತು ನೀಡಬಹುದೆಂದು ಒಮ್ಮತಕ್ಕೆ ಬರಲಾಯಿತು. ನಮ್ಮ ಶಾಲೆ ಊರ ಹೊರಗೆ ಇದ್ದಿತು.
ವಿಶಾಲವಾದ ಪರಿಸರದಲ್ಲಿದ್ದರೂ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಜವಾನರು ಕೊಡದಲ್ಲಿ ತಂದು ಹಿತ್ತಾಳೆಯ ಟ್ಯಾಂಕುಗಳಲ್ಲಿ ತುಂಬುತ್ತಿದ್ದರು. ಆದರೆ,
ಅದು ಯಾವ ಮೂಲೆಗೂ ಆಗದು. ವಿಶೇಷವಾಗಿ ಮಧ್ಯಾಹ್ನದ ಬಿಡುವಿನಲ್ಲಿ, ಊಟದ ಸಮಯದಲ್ಲಿ ನೂರಾರು ಹುಡುಗರು ಒಟ್ಟಿಗೆ ಬರುತ್ತಿದ್ದರು. ದಾಹ ತೀರಿಸಲು
ಹಾಹಾಕಾರ. ಹುಡುಗರು ಹತ್ತಿರದಲ್ಲೇ ಇದ್ದ ಹಾಸ್ಟೆಲಿಗೆ ಹೋಗುತ್ತಿದ್ದರು. ಇಲ್ಲವೇ ಅಕ್ಕಪಕ್ಕದ
ಮನೆಯವರನ್ನು ಆಶ್ರಯಿಸುತ್ತಿದ್ದರು. ಆಗಿನ್ನೂ ಬಿಸ್ಲೇರಿ ಯುಗ ಅಂದರೆ, ನೀರು ಮಾರುವ ಕಾಲ ಬಂದಿರಲಿಲ್ಲ. ಹೀಗಾಗಿ ತುಂಬ ತೊಂದರೆ. ಪಟ್ಟಣ ಪಂಚಾಯ್ತಿಯಲ್ಲಿ
ನೀರು ಯಾವಾಗ ಬರುತ್ತದೆ ಎಂದು ಹೇಳುವ ಹಾಗಿಲ್ಲ. ವಿದ್ಯುತ್ತಿನ ಕಣ್ಣುಮುಚ್ಚಾಲೆ. ನೀರು
ಬಿಡುವವನು ಅವನಿಗೆ ಖುಷಿ ಬಂದಾಗ ಬಿಡುತ್ತಿದ್ದ. ಸಂಗ್ರಹಿಸುವ ವ್ಯವಸ್ಥೆ ಇಲ್ಲ. ಹೀಗಾಗಿ
ಸುಮಾರು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಕುಡಿಯುವ ನೀರಿಗೆ ಹಾಹಾಕಾರ. ಇದನ್ನು ನಿವಾರಿಸಲು
ಉಳಿಕೆ ಹಣವನ್ನು ದಾನ ಮಾಡಲು ಎಲ್ಲರೂ ಒಮ್ಮತದಿಂದ ಒಪ್ಪಿಕೊಂಡರು. ಒಂದು ದೊಡ್ಡ ಸಿಮೆಂಟ್
ನೀರಿನ ತೊಟ್ಟಿಯನ್ನು ನಿರ್ಮಿಸುವುದು, ಸುಮಾರು 6 ನಳಗಳನ್ನು ಜೋಡಿಸಿದರೆ ಸರಿ ಎಂದು
ತೀರ್ಮಾನಿಸಲಾಯಿತು. ಹೀಗೆ ಪ್ರವಾಸದಿಂದ ಕುಡಿಯುವ ನೀರಿನ ಪ್ರಯಾಸ ಪರಿಹಾರ ಆಗಬಹುದೆಂಬ ಸಂತಸ
ನಮ್ಮದಾಯಿತು.
ನಾಲ್ಕನೇ ದಿನ
ರಾತ್ರಿಯೆಲ್ಲ ಪ್ರಯಾಣಿಸಿ ಮುಂಜಾವಿನ ಹೊತ್ತಿಗೆ ಕಾಲೇಜಿನ ಬಂದಾಗ, ಸಿಡಿಲಿನಂಥ ಸುದ್ದಿ ಕಾದಿತ್ತು.
ನಮ್ಮ ಇಲಾಖೆಯ ಹಿರಿಯ ಅಧಿಕಾರಿಗಳು ಅವರ ಆದೇಶ ಮೀರಿ ನಾವು ಪ್ರವಾಸ ಹೊರಟ ವಿಷಯ
ವಿದಿತವಾಗಿತ್ತು. ಯಾರೋ ಟೆಲಿಗ್ರಾಂ ಮೂಲಕ ಅವರಿಗೆ ದೂರು ನೀಡಿದ್ದರು. ಅವರು ಬೆಂಕಿನವಾಬ.
ಹಿಂದಿನ ದಿನ ರಾತ್ರಿ ಬಂದು ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಮರುದಿನ ಬೆಳಿಗ್ಗೆ ವಿಚಾರಣೆ
ನಡೆಸಿ ತಪ್ಪಿತಸ್ಥರಿಗೆ ದಂಡಿಸುವರೆಂಬ ವದಂತಿ ದಟ್ಟವಾಗಿತ್ತು. ಮೊದಲೇ ಅಧಿಕಾರಿ ಶಿಸ್ತಿನ
ಸಿಪಾಯಿ. ಅವರ ಭೇಟಿ ಎಂದರೆ ಅಧಿಕಾರಿಗಳಲ್ಲಿ ನಡುಕ. ಹೊರಡುವ ಹೊತ್ತಿನ ತನಕ ಕಾರಿನ ಚಾಲಕನಿಗೂ
ಎಲ್ಲಿಗೆ ಹೋಗುವರು ಎಂದು ಹೇಳುತ್ತಿರಲಿಲ್ಲ. ಗುರುತರ ತಪ್ಪಿಗೆ ಅಮಾನತ್ತು, ಅನಧಿಕೃತ ಗೈರುಹಾಜರಿಗೆ ವೇತನಕಡಿತ. ಅವರು ಬರಹದಲ್ಲಿ ನೀಡಿದ್ದ ಆದೇಶವನ್ನು ಮೀರಿದ್ದೆವು.
ಅವರಿಗೆ ರೇಗಿ ಹೋಗಿರುವುದು ಸ್ವಾಭಾವಿಕ. ಜತೆಗೆ ಕೆಲವು ಪಿಸುಣರ ಒಗ್ಗರಣೆ. ವಾತಾವರಣ ಬಹಳ
ಬಿಸಿಯಾಗಿತ್ತು. ಪ್ರಾಶುಂಪಾಲರು ಪೂರ್ತಿ ತಣ್ಣಗಾಗಿದ್ದರು.
ಅಯ್ಯೋ ನಿಮ್ಮ ಮಾತು ಕೇಳಿ
ನಾನು ಕೆಟ್ಟೆ. ನಿವೃತ್ತಿ ಅಂಚಿನಲ್ಲಿರುವ ನನ್ನ ಗತಿ ಏನು? ಎಂಬುದು ಅವರ ಅಳಲು. ಇದೆಲ್ಲ ನನ್ನ ದುರಿಸಿನ ನಡೆಯ ಪರಿಣಾಮ
ಎಂಬುದು ಅನೇಕರ ಭಾವನೆ. ಆದದ್ದು ಆಗಿದೆ, ಪರಿಣಾಮ ಎದುರಿಸುವುದು
ಅನಿವಾರ್ಯ. ಕೈಕಾಲು ಕಳೆದುಕೊಳ್ಳುವುದು ಅರ್ಥಹೀನ ಎನಿಸಿ, ನಾನೇ
ಮುಂದಾಗಿ, ಸಾರ್ ಈ ಪ್ರವಾಸದ ಪೂರ್ಣ ಹೊಣೆ ನನ್ನದು. ಪರಿಣಾಮವನ್ನು
ನಾನೇ ಎದುರಿಸುವೆ. ಇದರ ಬಗ್ಗೆ ಚಿಂತಿಸಬೇಡಿ, ಎಂದು ಧೈರ್ಯ ಹೇಳಿದೆ.
ಮನೆಗೆ ಹೋಗುವಾಗ ಆಗಲೇ
ಬೆಳಗಾಗುತಿತ್ತು. ತುಸು ವಿರಾಮದ ನಂತರ ಸ್ನಾನ ಮಾಡಿ ಹೊರಟೆ. ಅವರಾಗಿ ಬಂದು ವಿಚಾರಣೆ
ನಡೆಸಿದಾಗ ಹೇಗಿದ್ದರೂ ಇದ್ದ ವಿಷಯ ಹೊರಬರಬಹುದು, ನಂತರದ ಪರಿಣಾಮ ಗೊತ್ತೇ ಇದೆ. ಅದರ ಬದಲು ನಾನೇ ಹೋಗಿ
ಅವರಿಗೆ ಖುದ್ದಾಗಿ ವಿಷಯ ನಿವೇದಿಸಿಕೊಳ್ಳುವುದೇ ಸರಿಯಾದ ಮಾರ್ಗ ಎನಿಸಿತು.
ಇನ್ನೊಬ್ಬ ಗೆಳೆಯರೊಡನೆ ಎಂಟು ಗಂಟೆಗೆ ಸರಿಯಾಗಿ ಪ್ರವಾಸಿ ಮಂದಿರಕ್ಕೆ ಹೋದೆ. ಹುಲಿಯ ಗುಹೆಗೆ ಹೋಗುವ ಮೊಲದಂತೆ ನನ್ನ ಎದೆ ಗುಂಡಿಗೆ ಬಡಿದು ಕೊಳ್ಳುತ್ತಿತು. ಅವರು ಅದೇ ತಾನೇ ಉಪಾಹಾರ ಮುಗಿಸಿ ಕುಳಿತಿದ್ದರು. ನಾನು ವಂದಿಸಿ ಪರಿಚಯ ಮಾಡಿಕೊಂಡೆ.
ಪ್ರಿನ್ಸಿಪಾಲರು ಇಲ್ಲವೇ
ಎಂದರು. ಇದ್ದಾರೆ ಸಾರ್ ಬರುತ್ತಾರೆ. ಆದರೆ, ಅವರು ತುಂಬ ಗಾಬರಿಯಾಗಿದ್ದಾರೆ. ತಮ್ಮ ಆದೇಶ ಪರಿಪಾಲಿಸದೇ
ಇರುವುದರಿಂದ ಭಯಭೀತರಾಗಿದ್ದಾರೆ ಎಂದೆ. ಶೈಕ್ಷಣಿಕ ಪ್ರವಾಸಕ್ಕೆ ಕರೆದುಕೊಂಡು ಹೋದವನು ನಾನು,
ತಮ್ಮನ್ನು ಕಾಣಲು ಬಂದೆ. ಅನುಮತಿ ನಿರಾಕರಿಸಿದರೂ, ಅದು
ಹೇಗೆ ಪ್ರವಾಸಕ್ಕೆ ಹೊರಟಿರಿ? ಇದು ತೀವ್ರ ಅಶಿಸ್ತು ಎಂದು
ಗುಡುಗಿದರು.
`ಸಾರ್,
ಪ್ರಾಂಶುಪಾಲರು ಪ್ರವಾಸ ರದ್ದುಗಳಿಸಲು ತಿಳಿಸಿದರು. ನಾನೇ ಒತ್ತಾಯ ಮಾಡಿ
ಅವರನ್ನು ಒಪ್ಪಿಸಿದೆ. ಕೊನೇ ಗಳಿಗೆಯಲ್ಲಿ ಆದೇಶ ಬಂದಿತು. ಬಸ್ಸು ಬಂದಾಗಿತ್ತು. ಪ್ರವಾಸ
ರದ್ದು ಮಾಡುವ ಅವಕಾಶವೇ ಇರಲಿಲ್ಲ. ದಯಮಾಡಿ ಕ್ಷಮಿಸಿ, ಏನಾದರೂ ಕ್ರಮ
ತೆಗೆದುಕೊಳ್ಳುವ ಹಾಗಿದ್ದರೆ ಅದಕ್ಕೆ ನಾನು ಮಾತ್ರ ಅರ್ಹ’ ಎಂದು
ವಿನಂತಿಸಿದೆ.
ಅವರ ಹುಬ್ಬು ಗಂಟು ತುಸು ಸಡಲಿಸಿದಂತೆ ಕಂಡಿತು. ಕಾಲೇಜು ಪ್ರಾರಂಭವಾದ ಮೇಲೆ 10.30ಕ್ಕೆ ಬರುವೆ ಯಾವುದಕ್ಕೂ ಅಲ್ಲಿ ವಿಚಾರಿಸೋಣ, ಎಂದರು.
ಈ ಪ್ರವಾಸದ ಉಳಿತಾಯದ
ಹಣದಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಯೋಜನೆಯಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನು
ತಾವೆ ಪರಿಹರಿಸಿಕೊಂಡಿದ್ದಾರೆ ಎಂದು ನಿವೇದಿಸಿದೆ. ಪ್ರತಿಕ್ರಿಯೆ ಬರಲಿಲ್ಲ. ಕಾಲೇಜಿಗೆ ಬಂದು
ಪ್ರಾಚಾರ್ಯರಿಗೆ ವಿಷಯ ತಿಳಿಸಿದೆ. ಬೀಸುವ ದೊಣ್ಣೆ ತಪ್ಪಿತಲ್ಲಾ ಎಂದು ನಿಟ್ಟುಸಿರಿಟ್ಟರು.
ಅಷ್ಟರಲ್ಲಿ ಅಧಿಕಾರಿಗಳ
ಸವಾರಿ ಆಗಮಿಸಿತು. ಎಲ್ಲರೂ ಕೈ ಕಟ್ಟಿಕೊಂಡು ನಿಂತೆವು. ಅನುಮತಿ ಇಲ್ಲದೆ ಪ್ರವಾಸ ಕ್ಕೆ
ಹೋದಿರೆಂದು ದೂರು ಬಂದಿದೆ ಎಂದರು
ಮತ್ತೆ ನಡೆದ ಸಂಗತಿ ಅವರ ಗಮನಕ್ಕೆ ತರಲಾಯಿತು.
ಅನುಮತಿ ಇಲ್ಲದೇ
ಹೋಗಬಾರದು. ಇನ್ನು ಮೇಲೆ ಸಾಕಷ್ಟು ಮುಂಚಿತವಾಗಿ ಮನವಿ ಸಲ್ಲಿಸಿ ಎಂದರು.
ನಮ್ಮೆಲ್ಲರ ಮನಸು
ನಿರಾಳವಾಯಿತು.
ನಾನು “ಸಾರ್ ಕುಡಿವ ನೀರಿನ ತೊಟ್ಟಿ
ಕಟ್ಟಿಸಲು ಗುತ್ತಿಗೆದಾರ ಬಂದಿದ್ದಾನೆ. ಎಲ್ಲ ಮಾತುಕತೆ ಮುಗಿದಿದೆ. ತಮ್ಮ ಅಮೃತಹಸ್ತದಿಂದ
ಗುದ್ದಲಿ ಪೂಜೆಯಾದರೆ ನಮಗೆಲ್ಲ ಸಂತೋಷ” ಎಂದೆ. ಸರಿ ಅರ್ಧ
ಗಂಟೆಯಲ್ಲಿ ನಾನು ಹೊರಡಬೇಕು ತಡಮಾಡದೆ ಸಿದ್ಧತೆ ಮಾಡಿ ಎಂದರು.
ತಕ್ಷಣ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ನೀರಿನ ತೊಟ್ಟಿ
ನಿರ್ಮಿಸುವ ತಾಣದಲ್ಲಿ ಸಭೆ ಸೇರಿಸಿದ್ದಾಯಿತು. ಸಾಹೇಬರು ಗುದ್ದಲಿ ಪೂಜೆ ಮಾಡಿ, ಕುಡಿವ ನೀರಿನದು ಎಲ್ಲ ಕಡೆ ಸಮಸ್ಯೆ, ಎಲ್ಲವನ್ನೂ ಇಲಾಖೆಯ
ಮಾಡಲಾಗುವುದಿಲ್ಲ. ಅದನ್ನು ನೀವಾಗಿಯೇ ಪರಿಹರಿಸಿಕೊಂಡಿದ್ದಕ್ಕೆ ಇಲಾಖೆಗೆ ಸಂತೋಷವಾಗಿದೆ.
ನಿಮ್ಮ ಒಳ್ಳೆಯ ಕಾರ್ಯಕ್ಕೆ ಇಲಾಖೆಯಿಂದ ನೂರು ರೂಪಾಯಿ ಅನುದಾನ ಮಂಜೂರು ಮಾಡಿದೆ ಎಂದರು.
ಎಲ್ಲರೂ ಖುಷಿಯಿಂದ
ಚಪ್ಪಾಳೆ ತಟ್ಟಿದರು. ಇಲ್ಲದ ಉಸಾಬರಿ ಮಾಡಿದ ಇವನಿಗೆ ಗತಿ ಕಾಣಿಸುತ್ತಾರೆ ಎಂದು ಮನಸ್ಸಿನಲ್ಲಿ
ಮಂಡಿಗೆ ತಿನ್ನುತ್ತಿದ್ದವರಿಗೆ ನಿರಾಶೆಯಾಯಿತು. ಶಿಕ್ಷೆ ಅನುಭವಿಸಲು ಸಿದ್ಧನಾಗಿದ್ದ ನನಗೆ
ಅವರ ಹಾರೈಕೆಯಿಂದ ಹೆಚ್ಚು ಕೆಲಸ ಮಾಡಬೇಕೆಂಬ ಹುರುಪು ಹುಟ್ಟಿತು.
ಸುಮಾರು ಮೂರು ದಶಕಗಳ ಕಾಲ
ಸಾವಿರಾರು ಮಕ್ಕಳ ದಾಹ ತಣಿಸಿದ ನೀರಿನ ತೊಟ್ಟಿ ಇತ್ತೀಚೆಗೆ ಕಾಲೇಜಿನ ಮುಂದಿನ ರಸ್ತೆ
ಅಗಲೀಕರಣದ ಸಮಯದಲ್ಲಿ ಕಾಲೇಜಿನ ಕಾಂಪೌಂಡಿನೊಳಗೆ ಇದ್ದುದು ಹೊಸ ಕಾಂಪೌಂಡಿನ ಹೊರಗೆ ರಸ್ತೆ
ಬದಿಗೆ ಬಂದಿತು. ಆದರೂ ಇನ್ನೊಂದು ರೀತಿಯಲ್ಲಿ ಉಪಯುಕ್ತವಾಗಿದೆ. ನೀರು ಸಂಗ್ರಹಿಸುತಿದ್ದ
ತೊಟ್ಟಿ ಈಗ ಕಸ ಕಡ್ಡಿ ಹಾಕಲು ಬಳಕೆಯಾಗಿ ಶುಚಿತ್ವ ಕಾಪಾಡಲು ಸಹಾಯವಾಗಿದೆ.
|
Monday, August 20, 2012
ಹಿಡಿಯ ಬಂದವರು ಹಾರೈಸಿ ಹೋದರು
ಸಮಯಕ್ಕೊಂದು ಸುಳ್ಳಿನಿಂದ ಶಾಲೆಗೆ ಸಿಕ್ಕ ಸೌಲಭ್ಯ
ಅಮೇರಿಕಾದಲ್ಲಿನ ಮಗಳ
ಮನೆಗೆ ಹೋದಾಗ ನನಗೆ ಒಂದು ವಿಶೇಷ ಅನುಭವ ಆಯಿತು. ಒಂದು ದಿನ ಎಲ್ಲರೂ ಪಾರ್ಕ್‌ಗೆ
ಹೋಗಿದ್ದೆವು. ಅಲ್ಲಿ ಒಂದು ಮುದ್ದಾದ ಮಗು ಆಟವಾಡುತ್ತಿತ್ತು. ಅದನ್ನು ನೋಡಿ ಅಕ್ಕರೆ ಉಕ್ಕಿ
ಬಂದಿತು. ಹತ್ತಿರ ಹೋದೆ ಇನ್ನೇನು ಅದರ ಗಲ್ಲ ಸವರಿ ಮಾತನಾಡಿಸಬೇಕು. ಪಕ್ಕದಲ್ಲೆ ಇದ್ದ ಮಗಳು
ಅಪ್ಪಾಜಿ, ಬೇಡ,
ಬೇಡ ಎಂದು ಅರಚಿದಳು. ಇವಳಿಗೆ ಏನಾಯಿತಪ್ಪಾ ಎಂದು ಗಾಬರಿಯಿಂದ ಹಾಗೆ ನಿಂತೆ.
ಅವಳು ಬಂದವಳೆ ನನ್ನ ಕೈ ಹಿಡಿದು ದೂರ ಕರೆದುಕೊಂಡು ಹೋದಳು.
ಏನಾಯಿತಮ್ಮ? ಎಂದು ಗಾಬರಿಯಿಂದ ಕೇಳಿದೆ.
ಅಪ್ಪಾಜಿ ಇಲ್ಲೆಲ್ಲ ಹಾಗೆ
ಮಕ್ಕಳನ್ನು ಮುಟ್ಟುವ ಹಾಗಿಲ್ಲ. ಮುಟ್ಟಿದರೆ ಪೊಲೀಸ್‌ಗೆ ದೂರು ನೀಡುತ್ತಾರೆ ಎಂದಳು. ನಾನು
ಕಕ್ಕಾಬಿಕ್ಕಿಯಾದೆ. ನಾನೇನು ಆ ಮಗುವಿಗೆ ತೊಂದರೆ ಕೊಡಲು ಹೋಗಿಲ್ಲ, ಗಲ್ಲ ಸವರಿ ಮುದ್ದಿಸಲು
ಮುಂದಾಗಿದ್ದೆ, ಎಂದು ಸಮರ್ಥಿಸಿಕೊಂಡೆ.
ತೊಂದರೆ ಆಗುವುದೋ ಇಲ್ಲವೋ
ಅದು ಬೇರೆ ಮಾತು, ಆದರೆ
ಮಕ್ಕಳಿಗೆ ಇಲ್ಲಿ ವಿಶೇಷ ಹಕ್ಕುಗಳಿವೆ. ಅವರ ರಕ್ಷಣೆಗೆ ಕಾನೂನುಗಳಿವೆ. ಹೊರಗಿನವರು ಮಾತ್ರ
ಅಲ್ಲ, ತಂದೆ ತಾಯಿಯರೆ ಮಕ್ಕಳನ್ನು ಹೊಡೆದು ಬೈದು ಮಾಡುವ ಹಾಗಿಲ್ಲ,
ಮಕ್ಕಳಿಗೆ ಸಹಾಯ ಮಾಡಲು ಪ್ರತ್ಯೇಕ ಪೊಲೀಸು ವಿಭಾಗವೆ ಇದೆ. ಒಂದು ಪ್ರತ್ಯೇಕ
ದೂರವಾಣಿ ಸಂಖ್ಯೆ ಇದೆ. ಅದಕ್ಕೆ ಫೋನು ಮಾಡಿದರೆ ಸಾಕು ಧಾವಿಸಿ ಬರುವರು, ಮಕ್ಕಳ ಮೇಲೆ ದೌರ್ಜನ್ಯವಾಗಿದೆ ಎಂದರೆ ಸಾಕು ಬಂಧಿಸುವರು, ಎಲ್ಲ
ಮಕ್ಕಳಿಗೂ ಆ ಸಹಾಯವಾಣಿಯ ಸಂಖ್ಯೆಯನ್ನು ಶಾಲೆಗೆ ಸೇರಿದ ಕೂಡಲೆ ತಿಳಿಸುವರು, ಅವರು ಎಲ್ಲೆ ಇರಲಿ ಒಂದು ದೂರವಾಣಿ ಕರೆ ಮಾಡಿದರೆ ಸಾಕು ಕ್ರಮ ತೆಗೆದುಕೊಳ್ಳುವರು
ಎಂದು ವಿವರಿಸಿದಳು. ನಮ್ಮಲ್ಲಿ ಮಹಿಳಾ ಸಹಾಯವಾಣಿ ನಗರಗಳಲ್ಲಿ ಇತ್ತೀಚೆಗೆ ಬಂದಿದೆ. ಅದರೆ
ಮಕ್ಕಳ ದೂರು ನೀಡಿದರೆ ಅಥವಾ ಮಕ್ಕಳ ಪರವಾಗಿ ಅಕ್ಕ ಪಕ್ಕದವರು ದೂರು ನೀಡಿದರೆ ತಂದೆ ತಾಯಿಯರ
ಮೇಲೆ ಕ್ರಮ ತೆಗೆದುಕೊಳ್ಳುವ ಸಂಗತಿ ನನಗೆ ದಿಗ್‌ಭ್ರಮೆ ಮೂಡಿಸಿತು. ಸಹಜವಾಗಿ ಅಪರಿಚಿತರು
ಮುಟ್ಟಿದರೆ ಸೋಂಕು ತಗಲೀತು ಎಂಬ ಶಂಕೆ ಅಲ್ಲಿನ ತಾಯ್ತಂದೆಗಳದು.
ಇದಕ್ಕೆ ಕಾರಣ ಮಕ್ಕಳ ಬಗೆಗಿನ ಕಾಳಜಿ. ಮಕ್ಕಳ ಸುರಕ್ಷತೆಗಾಗಿ ಇತ್ತೀಚೆಗೆ ನಮ್ಮಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ನಿಷೇಧಿಸಿ ಕಾನೂನು ಬಂದಿದೆ. ಆದರೆ ಅದು ಇನ್ನೂ ಅಷ್ಟು ಪರಿಣಾಮಕಾರಿಯಾಗಿ ಆಚರಣೆಯಲ್ಲಿ ಇಲ್ಲ. ಆಗೀಗ ಶಿಕ್ಷಕರ ಅನಿಯಂತ್ರಿತ ಕೋಪಕ್ಕೆ ಬಲಿಯಾದ ವಿದ್ಯಾರ್ಥಿಗಳ ವರದಿ ಬರುತ್ತಲೇ ಇರುತ್ತವೆ. ಆಗ ಸರ್ಕಾರ ಕ್ರಮಕ್ಕೆ ಮುಂದಾಗುವುದು.
ನಮ್ಮಲ್ಲಿ ಇನ್ನೂ `ಬೆತ್ತ ಬಳಸು ವಿದ್ಯ ಕಲಿಸು’ ಎಂಬ ಮಾತು ಮರೆಯಾಗಿಲ್ಲ. ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಪೋಷಕರೆ ಬಂದು,
ಇವನು ಬಹಳ ತುಂಟತನ ಮಾಡುತ್ತಾನೆ, ಹೇಳಿದ ಮಾತು
ಕೇಳುವುದಿಲ್ಲ ಸಮಾ ಹೊಡೆದು ಬುದ್ಧಿ ಹೇಳಿ ಎನ್ನುವುದೂ ಉಂಟು.
ನನ್ನ ಸೇವೆಯ ಮೊದಲಲ್ಲಿ
ಅದೇಕೋ ವಿದ್ಯಾರ್ಥಿಗಳಿಗೆ ಗುರುಗಳನ್ನು ಕಂಡರೆ ಪ್ರೀತಿಗಿಂತ ಭೀತಿಯ ಜಾಸ್ತಿ ಎನಿಸುತಿತ್ತು.
ಮದುವೆಯಾದ ಹೊಸದರಲ್ಲಿ ನಾನು ಪ್ರತಿ ಭಾನುವಾರವೂ ಪತ್ನಿಯೊಡನೆ ಸಿನೆಮಾಕ್ಕೆ ಹೋಗುವುದು
ವಾಡಿಕೆಯಾಗಿತ್ತು. ತುಸು ಮಂಚೆಯೆ ಹೋದಾಗ ಅನೇಕರು ದುಬುದುಬನೆ ಎದ್ದು ಹೊರಹೋಗುವುದು
ಕಂಡುಬಂದಿತು. ನಂತರ ಗಮನಿಸಿದಾಗ ಅವರೆಲ್ಲ ನನ್ನ ವಿದ್ಯಾರ್ಥಿಗಳು. ಊರಲ್ಲಿ ಇದ್ದುದು ಒಂದೆ
ಥೇಟರ್. ಥೇಟರ್ ಮ್ಯಾನೇಜರು ಪರಿಚಿತರು. ಒಂದು ಸಲ ಅವರೆ ಬಂದು ಸಾರ್ ನೀವು ಬಂದರೆ
ಹುಡುಗರೆಲ್ಲ ಎದ್ದು ಹೋಗುತ್ತಾರೆ. ದಯವಿಟ್ಟು ಏನಾದರೂ ಮಾಡಿ, ಎಂದು ಮನವಿ ಮಾಡಿದರು. ನಾನು ಸಂದಿಗ್ಧದಲ್ಲಿ
ಬಿದ್ದೆ. ಒಂದು, ಮಕ್ಕಳಿಗೆ ಕರೆದು `ಪರವಾಇಲ್ಲ
ಸಿನೆಮಾಕ್ಕೆ ಹೋಗಿ’ ಎಂದು ಉತ್ತೇಜನ ಕೊಡಬೇಕು. ನಾನೆ ಸಿನಮಾ
ನೋಡುವಾಗ ವಿದ್ಯಾರ್ಥಿಗಳಿಗೆ ಅದು ತಪ್ಪು ಎಂದು ಹೇಳುವುದು ಮನಕೊಪ್ಪದ ಮಾತು. ಇಲ್ಲವಾದರೆ ನಾನೆ
ಹೋಗುವುದನ್ನು ಬಿಡಬೇಕು. ಅವಿಭಕ್ತ ಕುಟುಂಬದಲ್ಲಿ ವಾರವೆಲ್ಲ ಮನೆಯಲ್ಲೆ ಇದ್ದ ಹೆಂಡತಿಯ ಜೊತೆ
ನಾಲಕ್ಕಾರು ತಾಸು ಸಮಯ ಏಕಾಂತ ಸಿಗುವುದೆ ಆಗ. ಕೊನೆಗೆ ಹಾವೂ ಸಾಯಬಾರದು ಕೋಲೂ ಮುರಿಯಬಾರದು
ಎಂದುಕೊಂಡು ಒಂದು ತೀರ್ಮಾನಕ್ಕೆ ಬಂದೆ. ನಾವು ಸಿನೆಮಾಕ್ಕೆ ಹೋಗುವುದು ಬಿಡಲಿಲ್ಲ. ಆದರೆ
ಸಿನೆಮಾ ಶುರುವಾದ ಮೇಲೆ ಹೋಗುತಿದ್ದೆವು ಮತ್ತು ಸಿನೆಮಾ ಬಿಡುವ ಮುಂಚೆಯೆ ಅಲ್ಲಿಂದ ಹೊರಗೆ
ಬರುತಿದ್ದೆವು. ಹಾಗಾಗಿ ಸಿನೆಮಾ ಹಾಲಿನಲ್ಲಿ ವಿದ್ಯಾರ್ಥಿಗಳೊಡನೆ ಮುಖಾಮುಖಿಯಾಗುವುದು
ತಪ್ಪಿತು. ಆದರೂ ಇಂಟರ್‌ವೆಲ್‌ನಲ್ಲಿ ನಾನು ಅತ್ತಿತ್ತ ನೋಡದೆ ಕುಳಿತಿರುತಿದ್ದೆ. ಆದರೂ
ಅಲ್ಲಿಲ್ಲಿ ಮುಖ ಮುಚ್ಚಿ ಕುಳಿತವರು ಕಾಣುತಿದ್ದರು. ಬಹುಶಃ ನಮ್ಮನ್ನು ಗಮನಿಸಿದ
ವಿದ್ಯಾರ್ಥಿಗಳು ನನಗೆ ಕಾಣಬಾರದೆಂದು ಮಂಡಿಗೆ ತಲೆಯೂರಿ ಸೀಟಿನಲ್ಲಿ ಕುಳಿತಿರುತ್ತಿದ್ದರು.
ಹುಡುಗರದು ಹೀಗಿದ್ದರೆ
ಹುಡುಗಿಯರದು ಇನ್ನೊಂದು ರೀತಿ. ಸಂಜೆ ಮನೆ ಮುಂದಿನ ಕಟ್ಟೆಯ ಮೇಲೆ ಹೆಂಗಸರು ಮಕ್ಕಳು ಕುಳಿತು
ಹರಟೆ ಹೊಡೆಯುವುದು ಆಗ ಸಾಮಾನ್ಯ. ನಾನು ಬೀದಿಯಲ್ಲಿ ಹೋಗುತ್ತಿರುವಾಗ ನಾನು ಬರುವುದನ್ನು
ಕಂಡೊಡನೆ ಧಡಕ್ಕನೆ ಎದ್ದು ಒಳ ಓಡುತಿದ್ದರು. ಅದೇನು ಭಯವೋ ಗೌರವವೋ ಎಂದು ನನಗೆ ಗೊತ್ತಾಗಲೆ
ಇಲ್ಲ. ಹಲವು ತಾಯಂದಿರು ಮನೆಯಲ್ಲಿ ಎದೆಯುದ್ದ ಬೆಳೆದ ಮಗಳಿಗೆ, ಎದುರು ಮಾತನಾಡಿದಾಗ, ನಿಮ್ಮ ಮಾಸ್ಟರಿಗೆ ಹೇಳುತ್ತೇನೆ ನೋಡು, ಎಂದರೆ ಮಂತ್ರ
ಹಾಕಿದ ಹಾವಿನಂತೆ ಹೆಡೆಮುದುರಿಕೊಳ್ಳುವಂತೆ ಅವರ ಪ್ರತಿಭಟನೆ ಕರಗಿ ನೀರಾಗುವದು. ಆಗ ನನಗೆ ಅದು
ಮುಜುಗರ ತರುತಿತ್ತು. ಆದರೆ ನಲವತ್ತು ವರ್ಷಗಳ ತರುವಾಯ ಸಿಂಗಾಪುರ
ವಾಸಿಯಾದ ಮಹಿಳೆಯೊಬ್ಬಳು ನಾನಿರುವುದನ್ನು ತಿಳಿದು ಮನೆಗೆ ಹುಡುಕಿಕೊಂಡು ಬಂದಳು. ಎಷ್ಟು
ಹೇಳಿದರೂ ನನ್ನ ಎದುರು ಕುರ್ಚಿಯಲ್ಲಿ ಕೂಡಲು ಹಿಂದುಮುಂದು ನೋಡಿದಳು. ಅವಳು ನಲವತ್ತು ವರ್ಷದ
ಹಿಂದೆ ನನ್ನ ವಿದ್ಯಾರ್ಥಿನಿ. ಸರ್, ನಾನಿಷ್ಟು ಮುಂದುವರೆಯಲು ನೀವೆ
ಕಾರಣ, ನಮ್ಮ ಮಕ್ಕಳಿಗೂ ನಿಮ್ಮ ಸುದ್ದಿ ಸದಾ ಹೇಳುತ್ತಾ ಇರುವೆ.
ಅವಳಿಗೂ ಆಶೀರ್ವಾದ ಮಾಡಿ ಎಂದು ಆ ಆಧುನಿಕ ತರುಣಿಗೂ ನಮಸ್ಕರಿಸಲು ಸೂಚಿಸಿದಳು. ಹಳೆಯ ಹುಡುಗರು
ಯಾವಾಗ ಕಂಡರೂ ಇದೆ ಮಾತು. ನಿಮ್ಮಂಥವರು ಈಗ ಇಲ್ಲ.
ಅಮೇರಿಕಾದಲ್ಲಂತೂ ಶಿಕ್ಷಕರ
ಪರಿಸ್ಥಿತಿ ಬಹುಸೂಕ್ಷ್ಮ. ನಾನು ಅಲ್ಲಿದ್ದಾಗಲೆ ಹದಿ ಹರೆಯದ ವಿದ್ಯಾರ್ಥಿಯೊಬ್ಬ ಕಡಿಮೆ
ಗ್ರೇಡು ಬಂದಿದೆ ಎಂದು ಸಹಪಾಠಿಗಳ ಮತ್ತು ಶಿಕ್ಷಕರ ಮೇಲೆ ಶಾಲಾ ಆವರಣದಲ್ಲೆ ಗುಂಡಿನ ಮಳೆ
ಕರೆದ. ಸುದ್ದಿ ಓದಿ ದಂಗಾದೆ. ಅಷ್ಟುದೂರ ಏಕೆ, ಇತ್ತೀಚಿಗೆ ಅವಮಾನ ಮಾಡಿದರು ಎಂದು ವಿದ್ಯಾರ್ಥಿಯೊಬ್ಬ
ಚನ್ನೈನಲ್ಲಿ ಶಿಕ್ಷಕಿಗೆ ಚೂರಿ ಹಾಕಿದ. ಕಳೆದ ತಿಂಗಳು ರಾಮನಗರ ಹತ್ತಿರ ಮಹಿಳಾ
ಪ್ರಿನ್ಸಿಪಾಲರೊಬ್ಬರ ಮೇಲೆ ಹುಡುಗನಿಗೆ ಶಿಕ್ಷೆ ಕೊಟ್ಟರು ಎಂದು ಸಾರ್ವಜನಿಕರೆ ಟಿವಿ ಕ್ಯಾಮರಾ
ಎದುರೆ ಹಲ್ಲೆ ನಡೆಸಿದರು. ಇದೆಲ್ಲ ಬದಲಾದ ಮೌಲ್ಯಗಳ ಸಂಕೇತ. ನಾನೂ ಮೊದಲು ಬೆತ್ತ
ಬಳಸುತಿದ್ದೆ. ಕೊನೆ ಕೊನೆಗೆ ಬಹಳ ಬದಲಾಗಿದ್ದೆ. ಪ್ರಾಂಶುಪಾಲನಾದ ಮೇಲೂ ಕೈನಲ್ಲಿ ಬೆತ್ತ
ಹಿಡಿದು ಕಾಲೇಜಿನಲ್ಲಿ ಓಡಾಡಿದರೂ ಅದನ್ನು ಬಳಸಿದ ನೆನಪಿಲ್ಲ. ಅದು ಒಂದು ರೀತಿಯ ತೋರಿಕೆಯ
ಅಧಿಕಾರ ದಂಡ ಮಾತ್ರ. ದೈಹಿಕ ಶಿಕ್ಷೆಗಿಂತ ಮಾನಸಿಕ ಪ್ರಭಾವ ಅತಿ ಮುಖ್ಯ. ಕೋಲಿನ ಭೀತಿಗಿಂತ
ಕಣ್ಣಿನ ನೋಟ ಸಾಕು ಎಂತಹ ಒರಟರನ್ನು ಮೃದುವಾಗಿಸಲು ಎಂಬ ಪಾಠವನ್ನು ಅನುಭವ ಕಲಿಸಿತ್ತು.
ತರಗತಿಯಲ್ಲೂ ಅಷ್ಟೆ. ಪಾಠದ ಮಧ್ಯ ತುಸುವೆ ದನಿ ಕೇಳಿದರೂ ಪಾಠ ನಿಲ್ಲಿಸಿ ಎರಡುಕ್ಷಣ ಸುಮ್ಮನೆ
ನಿಂತು ದಿಟ್ಟಿಸಿ ನೋಡಿದರೆ ಸಾಕು ಮಹಾಮೌನ ನೆಲಸುತಿತ್ತು. ಪಾಠ ಆಸಕ್ತಿದಾಯಕವಾಗಿದ್ದರೆ
ಶಿಸ್ತಿನ ಸಮಸ್ಯೆಯೆ ಬಾರದು.
ಈ ಘಟನೆಯ ನಂತರ ನನಗೆ
ನಲವತ್ತು ವರ್ಷದ ಹಿಂದಿನ ನೆನಪು ಮರುಕಳಿಸಿತು. ಆಗ ತಾನೆ ಗ್ರಾಮಾಂತರ ಪ್ರದೇಶದಲ್ಲಿ ಹೈಸ್ಕೂಲು
ಶಿಕ್ಷಕನಾಗಿದ್ದೆ. ಎಲ್ಲವನ್ನೂ ಒಮ್ಮೆಗೆ ಕಲಿಸುವ ಹಂಬಲ. ತಪ್ಪು ಮಾಡಿದ ಮಕ್ಕಳಿಗೆ ಏಟಿನ ಭೀತಿ
ಮೂಡಿಸಿದರೆ ಶಿಸ್ತು ತನ್ನಿಂದ ತಾನೆ ಬರುವುದು ಎಂದು ನಂಬಿದ್ದ ಕಾಲ. ಅದರಲ್ಲೂ ಗಣಿತದ ತರಗತಿ
ಎಂದರೆ ಮೇಜಿನ ಮೇಲೆ ಬೆತ್ತ ಇರಲೆಬೇಕು. ಏಕೆಂದರೆ ಹಳ್ಳಿಯ ಮಕ್ಕಳಿಗೆ ಗಣಿತ ಕಬ್ಬಿಣದ ಕಡಲೆ.
ತರಗತಿ ಮಾನೀಟರ್‌ನ ಕೆಲಸ ಅಂದರೆ ಶಿಕ್ಷಕರು ತರಗತಿಗೆ ಬರುವ ಮೊದಲೆ ಬೋರ್ಡನ್ನು ಒರಸುವುದು.
ಡಸ್ಟರ್ ಮತ್ತು ಬೆತ್ತವನ್ನು ಮೇಜಿನ ಮೇಲೆ ತಂದಿರಿಸುವುದು. ಅವನು ಸೋಮಾರಿಯಾಗಿದ್ದರೆ ಅವನ
ಕರವಸ್ತ್ರವೆ ಡಸ್ಟರ್. ಅದು ಇಲ್ಲದಿದ್ದಾಗ ಅವನ ಅಂಗಿಯನ್ನೆ ಡಸ್ಟರ್ ಆಗಿ ಬಳಸುವೆವು ಎಂದು
ಹೆದರಿಸುತ್ತಿದ್ದರು. ಅದಕ್ಕೆ ಅವನು ಸಾಧಾರಣವಾಗಿ ತನಗೆ ಗೊತ್ತಿದ್ದ ಸಿಂಪಿಗನೊಬ್ಬನ ಹತ್ತಿರ
ಹೋಗಿ ಡಸ್ಟರ್ ಹೊಲಿಸಿ ತಂದಿಡುತ್ತಿದ್ದ. ಅದು ಹಳ್ಳಿಗಾಡು. ಅಲ್ಲಿ ಹೊನ್ನಂಬರಿಕೆ ಗಿಡ
ಜಾಸ್ತಿ. ಮಾನೀಟರ್ ಶಾಲೆಗೆ ಬಂದರೆ ಮಾಡುವ ಮೊದಲ ಕೆಲಸ ಎಂದರೆ ಉದ್ದನೆ ಹೊನ್ನಂಬರಿಕೆ
ಟೊಂಗೆಯನ್ನು ಕಿತ್ತು ತಂದು ಅದರ ಎಲೆಗಳನ್ನೆಲ್ಲ ಸವರಿ ಇಡುವುದು. ಅದು ಮುರಿದರೆ ಮತ್ತೊಂದು
ತರುವುದು. ಅದರಿಂದ ಹೊಡೆದರೆ ಚುರು ಚುರು ನೋವಾಗುತ್ತಿತ್ತೆ ವಿನಃ ಅಂತಹ ಅಪಾಯವೇನೂ
ಆಗುತ್ತರಲಿಲ್ಲ. ಒಂದು ಸಲ ಹುಡುಗಿಯೊಬ್ಬಳು ಮನೆ ಲೆಕ್ಕ ಮಾಡಿಕೊಂಡು ಬಂದಿರಲಿಲ್ಲ. ಯಥಾರೀತಿ
ಬೆತ್ತ ಬೀಸಿದಾಗ ಅವಳು ತಲೆ ಮುಂದೆ ತಂದಳು ಕೈಗೆ ಬೀಳಬೇಕಾದ ಏಟು ತಪ್ಪಿತು. ಆದರೆ ಬೆತ್ತದ
ತುದಿ ಕಣ್ಣಿಗೆ ತಾಗಿತು. ಅಲ್ಲಿ ತುಸು ತೆರೆದಂತಾಯಿತು. ತುಸುವೆ ಪೆಟ್ಟಾಗಿತ್ತು. ಹುಡುಗಿ
ಅಳತೊಡಗಿದಳು. ಅವಳ ಕಣ್ಣಿಗೆ ತಣ್ಣೀರು ಹಾಕಿ ತೊಳೆದು ಪ್ರಥಮ ಚಿಕಿತ್ಸೆ ಮಾಡಲಾಯಿತು. ತುಸು
ಹೊತ್ತಿನ ನಂತರ ಅಳು ನಿಲ್ಲಿಸಿದಳು.
ಮಾರನೆಯ ದಿನ ಮೂರು
ನಾಲಕ್ಕು ಜನ ಊರ ಹಿರಿಯರು ಮುಖ್ಯೋಪಾಧ್ಯಾಯರಲ್ಲಿಗೆ ಬಂದರು. ಶಾಲೆಯಲ್ಲಿ ಹೀಗಾದರೆ ಹೇಗೆ? ನೋಡಿ ಹುಡುಗಿಯ ಕಣ್ಣಿಗೆ ಪೆಟ್ಟು
ಬಿದ್ದಿದೆ. ಮಗುವಿನ ಕಣ್ಣಿಗೆ ಏನಾದರೂ ಆಗಿದ್ದರೆ ಗತಿ ಏನು? ಎಂದು
ದೂರತೊಡಗಿದರು. ಮುಖ್ಯೋಪಾಧ್ಯಾಯರಿಗೆ ಅವರ ಮಾತಿನ ತಲೆ ಬುಡ ತಿಳಿಯಲಿಲ್ಲ. ಅವರಿಗೆ ಹಿಂದಿನ
ದಿನದ ಘಟನೆ ಗೊತ್ತಿರಲಿಲ್ಲ. ಆ ಹುಡುಗಿಯನ್ನೆ ಕರೆಸಿ ಕೇಳಿದರು. ಏನಮ್ಮ, ಏನಾಯಿತು? ನಿನ್ನ ಕಣ್ಣಿಗೆ ತೆರಚಿದ್ದು ಹೇಗೆ? ಎಂದು ಪ್ರಶ್ನಿಸಿದರು. ಅವಳು ಏನನ್ನೂ ಹೇಳದೆ ಹಾಗೆ ನಿಂತಿದ್ದಳು. ಭಯಪಡಬೇಡ
ಆದದ್ದನ್ನು ಹೇಳು. ಇಲ್ಲದಿದ್ದರೆ ನಮಗೆ ಗೊತ್ತಾಗುವುದು ಹೇಗೆ, ಎಂದು
ಒತ್ತಾಯ ಮಾಡಿದರು. ಅವಳು ನಾಚುತ್ತಾ ನಿನ್ನೆ ಇಂಟರ್ ವೆಲ್‌ನಲ್ಲಿ ಹೊರಗೆ ಹೋದಾಗ ಆಯಿತು
ಎಂದಳು. ಯಾರು ಮಾಡಿದರು ಹೇಳು, ಭಯಪಡಬೇಡ ಎಂದು ಧೈರ್ಯ ತುಂಬಿದರು.
ಯಾರೂ ಏನು ಮಾಡಿಲ್ಲ, ಸಾರ್ ತಾನಾಗಿಯೆ ಆಗಿದೆ ಎಂದಳು.
ಅದು ಹೇಗೆ ತಾನಾಗಿಯೇ ಆಗುವುದು, ನಿಜ ಹೇಳು ಒತ್ತಾಯ ಮಾಡಿದರು. ಅಲ್ಲ
ಸಾರ್, ಇಂಟರ್‌ವೆಲ್ ಆದಾಗ ನಾವೆಲ್ಲ ಒಂದಕ್ಕೆ ಜಾಲಿಗಿಡದ ಕಂಟಿಯ
ಮರೆಯಲ್ಲಿ ಹೋಗುತ್ತೇವೆ. ಅಲ್ಲಿ ಮುಳ್ಳಿನ ಗಿಡದ ತುದಿ ತೆರೆಚಿತು ಎಂದು ನಾಚುತ್ತಾ
ತಿಳಿಸಿದಳು. ಸರಿ ಹೋಗಮ್ಮ ಇನ್ನು ಮೇಲೆ ಸ್ವಲ್ಪ ಹುಷಾರಾಗಿರು. ಕಣ್ಣಿಗೆ ಏನಾದರೂ
ತೊಂದರೆಯಾಗಬಹುದಿತ್ತು ಎಂದು ಅವಳನ್ನು ತರಗತಿಗೆ ಕಳುಹಿಸಿದರು.
ನಮ್ಮದು ಹಳ್ಳಿಯಲ್ಲಿನ
ತಾಲೂಕು ಬೋರ್ಡ ಶಾಲೆ. ಶೌಚಾಲಯದ ಸೌಲಭ್ಯವಿರಲಿಲ್ಲ. ಅದು ಎಲ್ಲರಿಗೂ ಗೊತ್ತಿದ್ದ ವಿಷಯ.
ಅದನ್ನು ಊರ ಹಿರಿಯರ ಗಮನಕ್ಕೆ ಆಗಾಗ ತಂದಿದ್ದರೂ ಕಿವಿಯ ಮೇಲೆ ಹಾಕಿಕೊಂಡಿರಲಿಲ್ಲ.
ಮುಖ್ಯೋಪಾಧ್ಯಾಯರು, ನೋಡಿ,
ಶೌಚಾಲಯವಿಲ್ಲ. ಹೆಣ್ಣು ಮಕ್ಕಳು ಬಯಲಲ್ಲಿ ಹೋಗಬೇಕು, ಏನಾದರೂ ಮಾಡಿ, ಎಂದು ಬಂದವರಿಗೆ ವಿನಂತಿ ಮಾಡಿಕೊಂಡರು.
ಬಂದವರು ಸ್ವಲ್ಪ ಹೊತ್ತು
ಯೋಚಿಸಿ, ಮಾಷ್ಟ್ರೆ,
ನಾವು ತಾಲೂಕು ಬೋರ್ಡು ಅಧ್ಯಕ್ಷರ ಹತ್ತಿರ ಮಾತನಾಡುತ್ತೇವೆ. ಆದರೆ ಅದು
ಅಗುವುದು ಯಾವ ಕಾಲಕ್ಕೋ, ಸದ್ಯಕ್ಕೆ ಏನು ಮಾಡಬೇಕು ಹೇಳಿ ಮಾಡೋಣ
ಎಂದರು. ಅವರೆಲ್ಲರೂ ಸೇರಿ ಐದಾರು ಅಡಿ ಎತ್ತರದ ಎಂಟು ಬಂಡೆಗಳನ್ನು ಗೋಡೆಯ ಬದಿಗೆ ನೆಡಿಸಿ
ಮರೆಮಾಡಿ ತಾತ್ಕಾಲಿಕ ಮೂತ್ರಾಲಯದ ಅನುಕೂಲ ಮಾಡಿಕೊಡಬೇಕೆಂದು ನಿರ್ಧಾರ ಮಾಡಿದರು.
ಇದೆಲ್ಲ ನಡೆದಾಗ ನಾನು
ಅಲ್ಲಿಯೇ ಕುಳಿತಿದ್ದೆ. ನನಗೆ ಬಾಯಿಗೆ ಹೃದಯ ಬಂದಿತ್ತು. ಏನಾಗುವುದೋ ಎಂದು ಎದೆ ಢವಢವ
ಹೊಡೆದುಕೊಳ್ಳುತ್ತಿತ್ತು. ಆ ಹುಡುಗಿಯ ಮಾತು ಕೇಳಿ ಹೋದ ಜೀವ ಮತ್ತೆ ಬಂದಂತಾಯಿತು. ಬದುಕಿದೆಯಾ
ಬಡಜೀವವೆ ಎಂದುಕೊಂಡೆ. ನಂತರ ಆ ವಿದ್ಯಾರ್ಥಿನಿಯನ್ನು ತರಗತಿಯಲ್ಲಿ ಕೇಳಿದೆ. ಯಾಕಮ್ಮ ಸುಳ್ಳು
ಹೇಳಿದೆ. ನಾನು ಹೊಡೆದೆ
ಎಂದು ಏಕೆ ಹೇಳಲಿಲ್ಲ?
ಸಾರ್, ನೀವು ನನಗೆ ಬೇಕೆಂದೇನೂ ಹೊಡೆದಿಲ್ಲ.
ನನ್ನ ಒಳ್ಳೆಯದಕ್ಕೆ ಹೊಡೆದಿರಿ. ಪಾಠ ಕಲಿಸಲು ಹಾಗೆ
ಮಾಡಿದಿರಿ. ನಿಮ್ಮ ಮೇಲೆ ನಾನು ಹೇಗೆ ದೂರು ಕೊಡಲಿ? ಮತ್ತೆ ಊರ ಜನ
ಶಾಲೆಗೆ ಬಂದಿದ್ದರಲ್ಲ? ಕೇಳಿದೆ. ಮನೆಯಲ್ಲೂ ನಾನು ಹಾಗೆಯೇ
ಹೇಳಿದ್ದೆ. ಆದರೆ ಮುಳ್ಳು ಕಣ್ಣಿಗೆ ತಾಗಿ ಅಪಾಯವಾಗಿದ್ದರೆ ಏನು ಗತಿ? ಏನಾದರೂ ವ್ಯವಸ್ಥೆಯಾಗಬೇಕು ಎಂದು ನಮ್ಮ ಅಪ್ಪ ಅವರೆಲ್ಲರನ್ನೂ ಕರೆದುಕೊಂಡು ಬಂದರು
ಎಂದು ಹೇಳಿದಳು. ನಾನು ಬೆತ್ತ ಬಳಸುವುದನ್ನು ಬಿಟ್ಟೆನೆಂದು ಹೇಳುವ ಅಗತ್ಯವಿಲ್ಲ. ಕೆಲವೆ
ದಿನಗಳಲ್ಲಿ ಬಂಡೆ ನೆಡಿಸಿ ಮರೆಯ ವ್ಯವಸ್ಥೆ ಮಾಡಿದರು. ಹುಡುಗಿಯರಿಗೆ ಮುಳ್ಳು ಕಂಟಿಗಳ
ಮರೆಯಲ್ಲಿ ಕೂಡುವ ತೊಂದರೆ ತಪ್ಪಿತು.
ಆ ವಿದ್ಯಾರ್ಥಿನಿ
ಸಮಯಕ್ಕೊಂದು ಸುಳ್ಳು ಹೇಳಿದ್ದರಿಂದ ಶಾಲೆಗೆ ಸೌಲಭ್ಯ ದೊರೆಯಿತು.
|
ನಕಲು ಮಾಡಿದ ನಾಗಪ್ಪ
ಗಾಂಧೀಜಿಯವರ “ಸತ್ಯಶೋಧನೆ” ಓದಿದವರಿಗೆ ಅವರು ಪರೀಕ್ಷೆಯಲ್ಲಿ ನಕಲು ಮಾಡುವುದಕ್ಕೆ ನಿರಾಕರಿಸಿದ ಸಂಗತಿ
ಮನಸ್ಸಿಗೆ ಮುಟ್ಟುವುದು. ಶಿಕ್ಷಕರೆ ಹೇಳಿದರೂ ಅವರು ನಕಲು ಮಾಡಲಿಲ್ಲ. ಇತ್ತೀಚೆಗೆ
ಬೆಂಗಳೂರಿಗೆ ಬಂದಿದ್ದ ಅಣ್ಣಾ ಹಜಾರೆಯವರೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವುದು
ಕೂಡಾ ಭ್ರಷ್ಟಾಚಾರವೆ ಎಂದು ತಿಳಿಸಿದರು. ಅಂದರೆ ಈ ನಕಲು ಹಾವಳಿ ಸರ್ವವ್ಯಾಪಿ ಮತ್ತು ಶತಮಾನಗಳ
ಇತಿಹಾಸ ಹೊಂದಿದೆ ಎಂದಾಯಿತು.
ಪಬ್ಲಿಕ್ ಪರೀಕ್ಷೆ ಬಂದರೆ
ವಿದ್ಯಾರ್ಥಿಗಳ ಜತೆಗೆ ಪಾಲಕರಿಗೂ ಮತ್ತು ಶಿಕ್ಷಕರಿಗೂ ಆತಂಕ. ಅನೇಕ ಪೋಷಕರು ಮಕ್ಕಳು ಹೆಚ್ಚಿನ
ಅಂಕ ಪಡೆಯಲೆಂದು ಕಣ್ಣಲ್ಲಿ ಎಣ್ಣೆ ಹಾಕಿಕೊಂಡು ಅವರ ಜತೆಗೆ ಕಷ್ಟ ಪಡುತ್ತಾರೆ. ಕಾರಣ ಎಸ್‌ಎಸ್‌ಎಲ್‌ಸಿ
ಮತ್ತು ಪಿಯುಸಿಗಳ ಜೀವನದಲ್ಲಿನ ಪ್ರಮುಖ ಹಂತಗಳು. ಅಲ್ಲಿ ದೊರೆತಿರುವ ಅಂಕಗಳೆ ಮುಂದಿನ ಜೀವನದ
ಗತಿ ಬದಲಿಸಬಲ್ಲವು.. ಇನ್ನು ಪರೀಕ್ಷೆ ನಡೆಸುವುದಂತೂ ಕಳ್ಳ ಪೊಲೀಸ್ ಆಟದಂತೆ. ಹೇಗಾದರೂ ಮಾಡಿ
ಉತ್ತಮ ಅಂಕ ಪಡೆಯುವುದು ಮಕ್ಕಳ ಗುರಿಯಾದರೆ. ಪ್ರೀತಿ ಮತ್ತು ಭೀತಿಯಿಲ್ಲದೆ ಸರಿಯಾಗಿ ಪರೀಕ್ಷೆ
ನಡೆಸುವುದು ಶಿಕ್ಷಕರ ಉದ್ದೇಶ. ಮಾರ್ಚಿ ತಿಂಗಳಲ್ಲಿ ಬರುವ ಈ ಪರೀಕ್ಷಾ ಜ್ವರಕ್ಕೆ ಸರಿಯಾದ
ಮದ್ದು ಇನ್ನೂ ಹುಡುಕಬೇಕಿದೆ.
ಅನೇಕ ಖಾಸಗಿ ಸಂಸ್ಥೆಗಳ
ಉಳಿವು ಅಳಿವು ಫಲಿತಾಂಶವನ್ನೆ ಅವಲಂಬಿಸಿದೆ. ಉತ್ತಮ ಫಲಿತಾಂಶ ಬಂದರೆ ಅವರ ಕಿರೀಟಕ್ಕೊಂದು
ಗರಿ. ಇಲ್ಲವಾದರೆ ಅನುದಾನಕ್ಕೆ ಖೋತಾ. ಏನಕೇನ ಉತ್ತಮ ಫಲಿತಾಂಶ ಅವರ ಗುರಿ.
ಆದರೆ ಅನೇಕರು ವರ್ಷಪೂರ್ತಿ
ಪಾಠ ಮಾಡುವುದಕ್ಕಿಂತ ಪರಿಕ್ಷಾ ಸಮಯದಲ್ಲೆ ಶ್ರಮಿಸಿ ಫಲಿತಾಂಶ ತರ ಬಯಸುವರು. ಆಗ
ವಿದ್ಯಾರ್ಥಿಗಳಿಗೆ ಹಬ್ಬ, ಇನ್ನು
ಕೆಲ ಮೇಲ್ವಿಚಾರಕರು ಜನಪ್ರಿಯರಾಗಲು ಕಂಡೂ ಕಾಣದಂತೆ ಇರುವರು. ಹಲವರು ತಮಗೆ
ಗೊತ್ತಿಲ್ಲದಿದ್ದರೂ ಸರ್ವಜ್ಞರಂತೆ ತಪ್ಪು ಉತ್ತರ ಬರೆಸಿ ಹುಸಿ ಗೌರವ ಭಾಜನರಾಗುವರು. ಕೆಲವು
ಕಡೆ ಪರೀಕ್ಷಾರ್ಥಿಗಳು ಡೆಸ್ಕನ ಮೇಲೆ ಚಾಕು ಚುಚ್ಚಿ ಎಚ್ಚರಿಸಿದರೆ, ಹಲವು
ಕಡೆ ಪ್ರತಿ ಪರೀಕ್ಷಾರ್ಥಿಯ ಕಂಪಾಸಿನಲ್ಲಿ ಹಣ ಇಟ್ಟು ಸಹಕರಿಸುವರು.
ಈ ಕೆಲಸದಲ್ಲಿ ಸಂಸ್ಥೆಯು
ಶಾಮೀಲಾಗುವದೂ ಉಂಟು. ಗುಲ್ಬರ್ಗ ಜಿಲ್ಲೆಯ ಕಾಲೇಜೊಂದರಲ್ಲಿ ಪ್ರಶ್ನೆಪತ್ರಿಕೆ ಪಾಲಕನಾಗಿ
ಹೋದಾಗ ಒಂದು ಅನುಭವವಾಯಿತು. ಅಲ್ಲಿ ಐದಾರು ನೂರು ಅಭ್ಯರ್ಥಿಗಳು. ವಿಜ್ಞಾನದ ವಿದ್ಯಾರ್ಥಿಗಳನ್ನೆಲ್ಲ
ಒಂದು ದೊಡ್ಡ ಹಾಲಿನಲ್ಲಿ ಹಾಕಿ ಇಬ್ಬರನ್ನು ಮೇಲ್ವಿಚಾರಣೆಗೆ ನೇಮಿಸಿದ್ದರು. ತುಸುವೂ ಗಡಿಬಿಡಿ
ಇಲ್ಲ. ಅಲ್ಲಿನ ಪ್ರಾಂಶುಪಾಲರು ಜಿಲ್ಲೆಯ ಅವಳಿ ಜವಳಿ ಮಂತ್ರಿಗಳ ಗೆಳೆಯರು. ತಮ್ಮ
ಕಾಲೇಜಿನಲ್ಲಿ ಎಲ್ಲ ಸರಿಯಾಗಿದೆ ಎಂಬುದು ಅವರ ಹೆಗ್ಗಳಿಕೆ. ಸುಮಾರು ೨೦ ಕೋಣೆಗಳಲ್ಲಿ ಪರೀಕ್ಷೆ
ಬರೆಯುತಿದ್ದರು. ಒಂದು ಸುತ್ತು ಹಾಕಿ ಬರಬೇಕೆಂದರೆ ಮುಕ್ಕಾಲುಗಂಟೆ ಹಿಡಿಯುವುದು. ನನ್ನ
ಕಣ್ಣಿಗೆ ಅಸಹಜವಾಗಿರುವುದು ಏನೂ ಬೀಳುತ್ತಿರಲಿಲ್ಲ.. ನನಗಂತೂ ಈ ಶಿಸ್ತುಬದ್ಧ ನಡವಳಿಕೆ ಖುಷಿ
ತಂದಿತು. ರಸಾಯನ ಶಾಸ್ತ್ರದ ಪರೀಕ್ಷೆಯ ದಿನ ನಾನು ಮೊದಲಿನಿಂದ ಕೊನೆವರೆಗೂ ಅದೆ ಹಾಲಿನಲ್ಲಿ
ಸುಮ್ಮನೆ ಕುಳಿತೆ. ಯಾರನ್ನೂ ತಪಾಸಣೆ ಮಾಡಲಿಲ್ಲ. ಆದರೂ ಏನೋ ಒಂದುರೀತಿಯ ಕಸಿವಿಸಿ ಕಂಡಿತು.
ಪರೀಕ್ಷೆಯಾದ ಮೇಲೆ ಪ್ರಾಂಶುಪಾಲರು,
``ಏನು,
ಸಾರ್ ಹೀಗೆ ಮಾಡಿದಿರಿ?’’ ಎಂದು ಆಕ್ಷೇಪಿಸಿದರು.
ಮಕ್ಕಳು ತುಂಬ ಶಿಸ್ತಿನಿಂದ
ಬರೆಯುತಿದ್ದರು, ಅದನ್ನೆ
ಗಮನಿಸುತ್ತಾ ಕುಳಿತೆ. ಹೇಗಿದ್ದರೂ ನಿಮ್ಮಲ್ಲಿ ಅವ್ಯವಹಾರದ ಸುಳಿವೆ ಇಲ್ಲ, ಎಂದು ಸಮಜಾಯಿಷಿ ಹೇಳಿದೆ. ಫಲಿತಾಂಶ ಬಂದ ನಂತರ ಗೊತ್ತಾಯಿತು ಆ ವರ್ಷ ಎಲ್ಲ
ವಿದ್ಯಾರ್ಥಿಗಳೂ ಒಂದೆ ವಿಷಯದಲ್ಲಿ ನಪಾಸು! ಪಾಪ, ವಿಷಯ ಪರಿಣಿತ
ಮೇಲ್ವಿಚಾರಕರಿಗೆ ಅವಕಾಶವೆ ದೊರಕಿರಲಿಲ್ಲ.
ಆದರೆ ಎಲ್ಲ ಕಡೆ ಈ ಸೂಕ್ಷ್ಮಜ್ಞತೆ ಇರುವುದಿಲ್ಲ. ಎಲ್ಲವೂ ಮುಕ್ತ ಮುಕ್ತ. ಪರೀಕ್ಷೆಗೆ ಕುಳಿತವರಿಗಿಂತ ಹೊರಗೆ ಸಹಾಯಕ್ಕಾಗಿರುವವರ ಗುಂಪೆ ದೊಡ್ಡದಿರುವುದು. ಅನೇಕ ವೇಳೆ ಪಾಲಕರೆ ಕಿಟಕಿಯ ಮೂಲಕ ಸಹಾಯ ಹಸ್ತ ಚಾಚುವರು.. ಒಂದೆ ದುರಂತವೆಂದರೆ ಬಹುತೇಕರಿಗೆ ತಿಳಿದಿರುವುದು ಅಷ್ಟಕಷ್ಟೆ.
ಒಂದು ಆ ಪ್ರದೇಶದಲ್ಲೆ ಅತಿ
ದೊಡ್ಡ ಕಾಲೇಜು. ಅವರವು ಜಿಲ್ಲೆಯಾದ್ಯಂತ ಅನೇಕ ವಿದ್ಯಾ ಸಂಸ್ಥೆಗಳು. ಅಲ್ಲಿನ ಮುಖ್ಯಸ್ಥರದು
ಒಂದೆ ವಾದ. ಪ್ರಶ್ನ ಪತ್ರಿಕೆ ಪಾಲಕರದು. ಅದು ಬಯಲಾಗದಂತೆ ನೋಡಿಕೊಳ್ಳುವ ಕೆಲಸ ಮಾತ್ರ ಉಳಿದೆಲ್ಲ
ಚಿಂತೆ ಅನಗತ್ಯ. ಈ ಸೂಚನೆಯನ್ನು ಬರಹದಲ್ಲಿ ಕೊಡಿ ಎಂದಾಗ ಆಸಾಮಿ ಗಪ್‌ಚುಪ್.
ಚಿನ್ನದ ನಾಡಿನ ಒಂದು
ಸಂಸ್ಥೆಯು ಬಹಳ ಹೆಸರುವಾಸಿ, ಎಲ್ಲ
ಉಳ್ಳವರ ಮಕ್ಕಳು ಸೇರುವುದು ಅಲ್ಲಿಯೆ. ಓದಿನಲ್ಲಿ ಬಹು
ಮುಂದು. ಶಿಕ್ಷಕರೂ ಅಷ್ಟೆ ಉತ್ತಮ ಬೋಧಕರೆಂದು ಜಿಲ್ಲೆಗೆ ಹೆಸರಾದವರು. ಪ್ರತಿವರ್ಷ ನೂರಕ್ಕೆ
ನೂರು ಫಲಿತಾಂಶ. ಅಲ್ಲಿ ಪ್ರವೇಶಕ್ಕೆ ನೂಕುನುಗ್ಗಲು ಯಾಕೋ ಒಬ್ಬ ಅಧಿಕಾರಿಗೆ ಅನುಮಾನ ಬಂದು
ಬೇರೆ ಮುಖ್ಯ ಅಧೀಕ್ಷಕರಿಗೆ ಪರೀಕ್ಷೆಯ ಹೊಣೆ ಕೊಟ್ಟರು. ಅವರು ಎಲ್ಲ ಪರೀಕ್ಷಾ ಸಿಬ್ಬಂದಿಯನ್ನು
ಹೊರಗಿನಿಂದ ಕರೆಸಿ ಪರೀಕ್ಷೆ ನಡೆಸಿದರು.
``ನಮ್ಮ
ಸಂಸ್ಥೆಗೆ ಅವಮಾನವಾಯಿತು, ಯಾರು ಬೇಕಾದರೂ ಬಂದು ಚೆಕ್ ಮಾಡಲಿ.
ಒಂದು ಚೀಟಿ ಸಿಕ್ಕಿದರೆ ರಾಜಿನಾಮೆ ಕೊಡುವೆ’’ ಸಂಸ್ಥೆಯ ಮುಖ್ಯಸ್ಥರು
ಗುಡುಗಿದರು. ಶಾಲೆಯ ಅಭಿಮಾನಿಗಳು ತುಸು ಗೊಂದಲ ಉಂಟು ಮಾಡಿದರು. ಆದರೂ ಪಟ್ಟು ಬಿಡದೆ ಪರೀಕ್ಷೆ
ನಡಸಿದರು ಫಲಿತಾಂಶ ಬಂದಾಗ ಆ ಶಾಲೆಯ ಇತಿಹಾಸದಲ್ಲೆ ಮೊದಲಬಾರಿ ಶೇಕಡಾ ೫೦ ರಷ್ಟು ಮಾತ್ರ
ಫಲಿತಾಂಶ. ಮಕ್ಕಳು ಚೀಟಿ ಪಾಟಿ ತರದಂತೆ ನೋಡಿಕೊಂಡು, ಐವತ್ತಕ್ಕೂ
ಹೆಚ್ಚು ಅಂಕಗಳಿಗೆ ಶಿಕ್ಷಕರೊಬ್ಬರು ಕೋಣೆಯಿಂದ ಕೋಣೆಗೆ ಹೋಗಿ ಸರಿ ಉತ್ತರ ಬರೆಸುತಿದ್ದರು.
ಅದು ಅವರ ಸಾಧನೆಯ ಒಳಗುಟ್ಟು.
ಸರ್ಕಾರಿ ಸಂಸ್ಥೆಗಳದು
ಬೇರೆಯದೆ ಕಥೆ. ಅಲ್ಲಿ ಸಿಬ್ಬಂದಿಯ ಕೊರತೆ. ವರ್ಷಪೂರ್ತಿ ಪಾಠ ಪ್ರವಚನ ನಡೆಯುವುದೆ ಇಲ್ಲ.
ಆದರೆ ಪರೀಕ್ಷೆ ಮಾತ್ರ
ನಿಯಮಾನುಸಾರ ನಡೆಸ ಬಯಸುವರು. ಕಲಿಯದ ಮಕ್ಕಳು ಬರೆವುದಾದರೂ ಏನು? ಅನಿವಾರ್ಯವಾಗಿ
ಅವ್ಯವಹಾರಕ್ಕೆ ಮುಂದಾಗುವರು.
ಪ್ರಜ್ಞಾವಂತರೆಲ್ಲ ಚಿಂತನೆ
ನಡೆಸಬೇಕಾದ ವಿಷಯೊಂದಿದೆ. ಸರ್ಕಾರಿ ಶಾಲೆಗಳಲ್ಲಿ ಅರ್ಹತೆಯ ಮೇಲೆ ನೇಮಕವಾಗುತ್ತದೆ. ಕೈತುಂಬ
ಸಂಬಳ. ಹೆಚ್ಚಿನ ಕಿರಿಕಿರಿ ಇಲ್ಲ ಆದರೆ ಫಲತಾಂಶ ಮಾತ್ರ ಹೇಳಿಕೊಳ್ಳುವ ಹಾಗಿಲ್ಲ. ಆದರೆ ಖಾಸಗಿ
ಸಂಸ್ಥೆಗಳಲ್ಲಿ ಕಡಿಮೆ ಸಂಬಳ, ಅಧಿಕ
ಹೊರೆ. ಅಲ್ಲಿಗೆ ಬರುವವರ ಶೈಕ್ಷಣಿಕ ಸಾಧನೆ ಹೇಳಿಕೊಳ್ಳುವಂತಹದಲ್ಲ. ಆದರೆ ಉತ್ತಮ ಫಲಿತಾಂಶ
ಬರುವುದು. ಮೇಲುನೋಟಕ್ಕೆ ಇದು ವಿಪರ್ಯಾಸ ಎನಿಸಿದರೂ ಇದು ಸತ್ಯಕ್ಕೆ ಸಮೀಪ.
ನಕಲು ಮಾಡುವ ಹವ್ಯಾಸ
ವಿಶ್ವವ್ಯಾಪಿ. ಅಮೇರಿಕಾ ಯೂರೋಪುಗಳೂ ಇದಕ್ಕೆ ಹೊರತಲ್ಲ. ಅಲ್ಲಿನ ಬಹಳಷ್ಟು ವಿದ್ಯಾರ್ಥಿಗಳಿಗೆ
ನಕಲು ಮಾಡುವ ವ್ಯವಧಾನವಿಲ್ಲ. ಕೆಲ ಸಂಸ್ಥೆಗಳು ಉತ್ತಮ ಫಲಿತಾಂಶಕ್ಕಾಗಿ ಉತ್ತರ ಪತ್ರಿಕೆಗಳ
ಮೌಲ್ಯಮಾಪನದಲ್ಲೆ ಕೈವಾಡ ನಡೆಸಿದ ವರದಿಯಾಗಿತ್ತು.
ಸಮಸ್ಯೆಗೆ ಸರ್ಕಾರದ
ಶಿಕ್ಷಣ ನೀತಿಯ ಕೊಡುಗೆಯೂ ಗಣನೀಯ. ಸರ್ವರಿಗೂ ಶಿಕ್ಷಣ ನಮ್ಮ ನೀತಿ. ಒಂದನೆ ತರಗತಿಯಿಂದ
ಹತ್ತನೆ ತರಗತಿವರೆಗೆ ಯಾವುದೆ ಕಾರಣಕ್ಕೂ ಫೇಲು ಮಾಡುವಂತಿಲ್ಲ. ಸರಿ ಒಂದರಿಂದ ಹತ್ತರ ವರೆಗೆ
ಅವರನ್ನು ಮುಂದಿನ ತರಗತಿಗೆ ದೂಡುತ್ತಾ ಹೋಗಲಾಗುವುದು. ಅಲ್ಲಿ ಧಡಕ್ಕನೆ ಎಡವಿ ಬೀಳುವರು.
ಇತ್ತೀಚೆಗೆ ವಿಶೇಷ ಕಾಳಜಿ ವಹಿಸಿ ಗಮನ ಕೊಡಲಾಗುತಿದ್ದರೂ ಮಾಡಬೇಕಾದದ್ದು ಬಹಳವಿದೆ.
ಪರೀಕ್ಷೆ ಪ್ರಾರಂಭವಾದ
ದಿನದಿಂದ ಪ್ರತಿ ದಿನ ಪತ್ರಿಕೆಯಲ್ಲಿ ನಕಲು ಮಾಡಿ ಸಿಕ್ಕಿಬಿದ್ದವರ ವಿವರ ಬರುತ್ತದೆ. ಜತಗೆ
ಪರೀಕ್ಷೆಗಳಲ್ಲಿ ಅನೇಕ ನಕಲಿ ವಿದ್ಯಾರ್ಥಿಗಳು ಸಿಕ್ಕಿಬೀಳುವರು ಪರೀಕ್ಷಾ ವಿಧಾನದಲ್ಲಿ
ಸುಧಾರಣೆ ಬರುತ್ತಲಿದೆ. ಇಲಾಖೆಗೆ ಆ ಅವಧಿ ಅಗ್ನಿದಿವ್ಯದ ಕಾಲ. ಸೈಬರ್ ಯುಗದಲ್ಲಿ
ಪರೀಕ್ಷೆಯಲ್ಲಿ ಅಗುತ್ತಿರುವ ಅವ್ಯವಹಾರಗಳಿಗೆ ಕಾರಣವೇನು ಎಂಬ ಚಿಂತನೆಯ ಅಗತ್ಯವಿದೆ. ವಂಚನೆ
ಮಾಡುವುದು ಇಂದು ನಿನ್ನೆಯದಲ್ಲ. ಎಂದೆಂದಿಗೂ ಇತ್ತು. ಆದರೆ ಆಗ ಅದು ಕದ್ದು ಮುಚ್ಚಿ ಇತ್ತು. ಇಂದು
ರಾಜಾರೋಷವಾಗಿ ನಡೆಯುತ್ತದೆ.
ಆಗ ಅದು ತಪ್ಪು ಎಂಬ ಭಾವನೆ
ಬಲವಾಗಿ ಬೇರೂರಿತ್ತು. ಈಗಿನ ಹೈ ಟೆಕ್ ಯುಗದಲ್ಲಿ ಅದಕ್ಕೆ ತಂತ್ರಜ್ಞಾನದ ಮೆರಗು ಬೇರೆ ಬಂದಿದೆ.
ಮೇಲಾಗಿ ಅದು ಒಂದು ದೊಡ್ಡ ಸಾಧನೆ ಎಂದು ಹಾಡಿ ಹೊಗಳುವವರೂ ಇದ್ದಾರೆ. ಈಗ ಆನ್ ಲೈನ್ ಟೆಸ್ಟ್
ಗಳು ಬರೆಯುವವರ ಶ್ರಮವನ್ನು ಬಹುತೇಕ ಕಡಿಮೆಗೊಳಿಸಿವೆ. ಟೆಲಿಫೋನಿಕ್ ಸಂದರ್ಶನಗಳು ಮುಖಾಮುಖಿ
ಆಗುವುದು ಕಡಿಮೆ. ಅಮೆರಿಕಾದಲ್ಲಿದಾಗ ಅಲ್ಲಿನ ಭಾರತದ ಒಂದು ರಾಜ್ಯದ ಜನ ತಮ್ಮವರಿಗೆ ಸಹಾಯ
ಮಾಡಲು ಒಬ್ಬರ ಬದಲಾಗಿ ಇನ್ನೊಬ್ಬರು ಪ್ರಾಥಮಿಕ ಹಂತದ ಪರೀಕ್ಷೆಗಳನ್ನು ಆನ್ ಲೈನ್‌ನಲ್ಲಿ ಮತ್ತು
ಟೆಲಿಫೋನ್‌ನಲ್ಲಿ ಮುಗಿಸಿಕೊಟ್ಟ ವಿಷಯ ಅಗಾಗ ಗಮನಕ್ಕೆ ಬರುತ್ತಿತ್ತು. ಅದು ಅವರಿಗೆ ನಾಚಿಕೆಯ ಸಂಗತಿಯಾಗಿರದೆ ಹೆಮ್ಮೆಯ ವಿಷಯವಾಗಿರುವುದು ಬದಲಾದ ಮೌಲ್ಯಗಳ
ಸೂಚಕವಾಗಿದೆ. ಅಷ್ಟು ದೂರದಲ್ಲಿ ಏಕೆ ನಮ್ಮಲ್ಲಿಯೇ ಕೆಎಎಸ್ ಪರೀಕ್ಷೆಯಲ್ಲಿಯೇ ಸಂಬಂಧಿಸಿದವರು
ಷಾಮೀಲಾಗಿ ಅಡಳಿತ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಪಡೆಯಲು
ಸಹಾಯ ಮಾಡಿರುವುದನ್ನು ಪತ್ರಿಕೆಗಳಲ್ಲಿ ಓದಿದಾಗ ಮನಸ್ಸು ನಾಲಕ್ಕು ದಶಕಗಳ ಹಿಂದಿನ ಘಟನೆಯನ್ನು
ನೆನೆಯಿತು.
ಕೆಲಸಕ್ಕೆ ಸೇರಿದ ಹೊಸತು.
ಕಗ್ಗಲ್ಲನ್ನು ಕಟೆದು ವಿಗ್ರಹ ಮಾಡಬಲ್ಲೆ ಎಂಬ ಆತ್ಮವಿಶ್ವಾಸ. ಎಲ್ಲ ಸರಿಯಾಗಿರಬೇಕು.. ನಿಯಮ
ಮೀರಿ ನಡೆಯಲು ಅವಕಾಶ ನೀಡಬಾರದು ಎನ್ನುವ ಅತ್ಯುತ್ಸಾಹ. ನಾನು ಕೆಲಸಕ್ಕೆ ಸೇರಿದ ಒಂದೆ
ವಾರದಲ್ಲಿ ಅರ್ಧ ವಾರ್ಷಿಕ ಪರೀಕ್ಷೆ. ಹತ್ತನೆ ತರಗತಿಯ ವಿದ್ಯಾರ್ಥಿಗಳ ಕೋಣೆಗೆ ನನ್ನನ್ನು
ಮೇಲ್ವಿಚಾರಕನನ್ನಾಗಿ ಹಾಕಿದರು. ಪ್ರಶ್ನೆ ಪತ್ರಿಕೆ ಹಂಚಿದ ಮೇಲೆ ಎಲ್ಲರನ್ನೂ ಕಣ್ಣಲ್ಲಿ
ಕಣ್ಣಿಟ್ಟು ಕಾಯತೊಡಗಿದೆ. ಆಗಿನ್ನೂ ಅವರು ಹದಿ ಹರೆಯದವರು. ಅತ್ತಿತ್ತ ಅಲುಗಲೂ ಅವಕಾಶ
ಕೊಡಲಿಲ್ಲ. ಅವರೆಲ್ಲರಿಗೂ ಡೆಸ್ಕ ಸಹ ಇರಲಿಲ್ಲ. ಕೆಲವರು ನೆಲದ ಮೇಲೆ ಕುಳಿತು ತೊಡೆಯ ಮೇಲೆ
ರಟ್ಟು ಇಟ್ಟುಕೊಂಡು ಬರೆಯಬೇಕಿತ್ತು. ಪರೀಕ್ಷೆ ಪ್ರಾರಂಭದ ಮೊದಲೆ ಎಲ್ಲರನ್ನೂ ತಪಾಸಣೆ
ಮಾಡಿದ್ದೆ. ನಕಲು ಮಾಡಲು ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಲಾಗಿತ್ತು. ಮಕ್ಕಳೆಲ್ಲ ತುಂಬಾ
ಚೆನ್ನಾಗಿ ಬರೆಯುತ್ತಿದ್ದರು. ಅತಿತ್ತ ಅಲುಗದೆ ಬರೆಯುವುದರಲ್ಲಿ ಮಗ್ನರಾಗಿದ್ದರು. ಎಷ್ಟು ಸ್ಟಿಕ್ಟ್ರಾಗಿ ಮೇಲ್ವಿಚಾರಣೆ ಮಾಡುತ್ತಿರುವೆ ಎಂದು
ಎದೆಯುಬ್ಬಿ ಬಂತು.
ಇನ್ನು ಪರೀಕ್ಷೆ ಮುಗಿಯಲು
ಅರ್ಧ ಗಂಟೆ ಇತ್ತು.. ಬಾಗಿಲ ಹತ್ತಿರ ಕೂಳಿತ ಹುಡುಗನೊಬ್ಬ ಬಹಳ ಬಾಗಿರುವುದು ಗಮನಕ್ಕೆ ಬಂತು.
ಯಾಕೋ ಅನುಮಾನ ಬಂತು. ಎದ್ದು ನಿಲ್ಲಿಸಿದೆ. ಅವನ ರಟ್ಟು ನೋಡಿದೆ. ಕ್ಲಿಪ್ಪಿನ ಅಡಿಯಲ್ಲಿ
ಚಿಕ್ಕ ಚೀಟಿ ಕಾಣಿಸಿತು. ಮಾಲು ಸಮೇತ ಕಳ್ಳನನ್ನು ಹಿಡಿದ ಹೆಮ್ಮೆ ನನ್ನದಾಯಿತು. ಅವನು
ಹೆದರಿಕೆಯಿಂದ ನಡುಗತೊಡಗಿದ. ತಪ್ಪಾಯಿತು ಬಿಟ್ಟುಬಿಡಿ ಎಂದು ಅಂಗಲಾಚಿದ. ನಾನು ಅವನ
ಉತ್ತರಪತ್ರಿಕೆ, ಪ್ರಶ್ನೆಪತ್ರಿಕೆ
ಕಸಿದುಕೊಂಡು ಅವನನ್ನು ಮುಖ್ಯೋಪಾಧ್ಯಾಯರಲ್ಲಿಗೆ ಕರೆದೊಯ್ದೆ.
ಸಾರ್, ಇವನು ಕಾಪಿ ಮಾಡುವಾಗ
ಸಿಕ್ಕಿಬಿದ್ದಿದ್ದಾನೆ. ನಿಮ್ಮಲ್ಲಿಗೆ ಕರೆತಂದಿದ್ದೇನೆ. ಕ್ರಮ ತೆಗೆದುಕೊಳ್ಳಿ ಎಂದು ವರದಿ
ಒಪ್ಪಿಸಿದೆ.
ಅವರು ಘೊಳ್ಳನೆ
ನಗತೊಡಗಿದರು.
ನನಗೆ ಬಹಳ ಅವಮಾನ ಎನಿಸಿತು.
ಏನು ಸಾರ್, ತಪ್ಪು
ಮಾಡಿದವನನ್ನು ಹಿಡಿದು ತಂದರೆ ಅವನಿಗೆ ಶಿಕ್ಷೆ ಕೊಡುವುದು ಬಿಟ್ಟು ನಗುತ್ತಿರುವಿರಿ, ಖಾರವಾಗಿ ಕೇಳಿದೆ.
ಅವರು ನಗು ನಿಲ್ಲಿಸಲೇ
ಇಲ್ಲ. ನನ್ನ ಮಾತಿಗೆ ಗಮನ ಕೊಡಲೂ ಇಲ್ಲ. ಅವರ ಜತೆ ಅಲ್ಲಿಯೇ ಇದ್ದ ಹಿರಿಯ ಶಿಕ್ಷಕರೂ ಮತ್ತು
ಗುಮಾಸ್ತರೂ ನಗತೊಡಗಿದರು.
ಈಗ ಕಕ್ಕಾಬಿಕ್ಕಿಯಾಗುವ
ಸರದಿ ನನ್ನದಾಯಿತು. ನಾನು ಅವರ ಮುಖ ಮಿಕಮಿಕ ನೋಡತೊಡಗಿದೆ.
ಅವರು ನಗುವನ್ನು
ತಡೆಹಿಡಿದು ಆ ಹುಡುಗನಿಗೆ, ನೀನು
ಮೊದಲು ಮನೆಗೆ ಹೋಗು, ತಕ್ಷಣ ಹೊರಡು ಎಂದು ಒತ್ತಾಯಿಸಿದರು. ಅಷ್ಟೆ
ಅಲ್ಲ, ಜವಾನನ್ನು ಕರೆದು ಇವನನ್ನು ಹೊರಗೆ ಕರೆದುಕೊಂಡು ಹೋಗು
ಎಂದರು.
ಕದ್ದ ಮಾಲು ಸಮೇತ
ಕಳ್ಳನನ್ನು ಹಿಡಿದು ಕೊಟ್ಟಾಗ ಅವನನ್ನು ಬಿಟ್ಟರಲ್ಲ ಇವರು ಎಂದು ಮನಸ್ಸಿಗೆ ಬೇಸರವಾಯಿತು.
ಏನು ಸಾರ್ ಹೀಗೆ
ಮಾಡಿದಿರಿ. ಹೀಗಾದರೆ ಇನ್ನು ಮೇಲೆ ಶಾಲೆಯಲ್ಲಿ ಶಿಸ್ತು ಇರುವುದೆ? ಎಂದು ಅವರನ್ನು ಗಟ್ಟಿಸಿ ಕೇಳಿದೆ.
ನೀವು ಅವನನ್ನು ಸರಿಯಾಗಿ
ನೋಡಿದಿರಾ? ಎಂದು
ಕೇಳಿದರು.
ನೋಡಿಯೇ ಹಿಡಿದು ತಂದೆ, ಎಂದು ದೃಢವಾಗಿ ನುಡಿದೆ.
ಅದನ್ನಲ್ಲ ನಾನು ಹೇಳಿದ್ದು.
ಅವನು ಚಡ್ಡಿ ಒದ್ದೆ ಮಾಡಿಕೊಂಡಿದ್ದಾನೆ. ಎಷ್ಟು ಹೆದರಿಸಿರುವಿರಿ ಎಂದರು.
ಆಗ ನನಗೆ ಗೊತ್ತಾಯಿತು
ಅವರೆಲ್ಲರ ನಗುವಿನ ಕಾರಣ. ಪಾಪ. ಸಭ್ಯಸ್ಥನಾದ ಹುಡುಗ ಗಾಬರಿಯಾಗಿ ಹಿಡಿದ ತಕ್ಷಣ ಚೆಡ್ಡಿಯಲ್ಲೆ
ಮೂತ್ರ ಮಾಡಿಕೊಂಡಿದ್ದ. ನಾನು ಏನೋ ಮಹಾ ಸಾಧಿಸಿದೆ ಎಂಬ ಭ್ರಮೆಯಲ್ಲಿ ಅದನ್ನು ಗಮನಿಸಿಯೇ
ಇರಲಿಲ್ಲ,
ಅವನು ನಿಜವಾಗಿಯೂ ಜಾಣ.
ಏನೋ ಅಕಸ್ಮಾತ್ತಾಗಿ ಚೀಟಿಯೊಂದು ಸಿಕ್ಕಿದೆ. ಅದನ್ನೆ ನಾನು ವಿಪರೀತ ಮಾಡಿದ್ದೆ.
ಆ ಹುಡುಗ ಆ ವರ್ಷ ಎಸ್ಎಸ್‌ಎಲ್‌ಸಿಯಲ್ಲಿ
ಶಾಲೆಗೆ ಪ್ರಥಮನಾಗಿ ಬಂದ. ನಂತರವೂ ಚೆನ್ನಾಗಿ ಕಲಿತ. ಈಗ ದೊಡ್ಡ ಕಾರ್ಖಾನೆಯೊಂದರ ಪ್ರಧಾನ
ವ್ಯವಸ್ಥಾಪಕ. ಇದಕ್ಕೆ ಕಾರಣ ಅವನ ಸರಿ ತಪ್ಪು ಅರಿಯುವ ಪ್ರಜ್ಞೆ.
ಮಕ್ಕಳಲ್ಲಿ ಕಲಿಯುವ ಹಂಬಲ
ಹುಟ್ಟಿಸುವದೆ ನಕಲುಮಾಡುವ ವ್ಯಾಧಿಗೆ ಮಹಾನ್ ಮದ್ದು . ಇದರ ಹೊಣೆಯನ್ನು ತಾಯ್ತಂದೆ, ಶಿಕ್ಷಕರು, ಸರಕಾರ ಮತ್ತು ಸಮಾಜ ಒಟ್ಟಾಗಿ ಹೊರಬೇಕಿದೆ.
(ಮುಂದುವರಿಯುವುದು)
|
||||
|
| ||||
ಎಲ್ಲ ಬಿಟ್ಟು ಅಲ್ಲೇಕೆ ಸೇರುವೆ
|
ನನ್ನ ಬಿಎಸ್‌ಸಿ ಪರೀಕ್ಷೆ ಮುಗಿಯಿತು. ಇನ್ನೂ ಫಲಿತಾಂಶ
ಬರಬೇಕಿತ್ತು. ಆಗಲೆ ನನಗೆ ಕೆಲಸದ ಅವಕಾಶ ದೊರಕಿತು. ಜಿಲ್ಲಾ ಬೋರ್ಡುಗಳು ಹೋಗಿ ತಾಲೂಕು
ಬೋರ್ಡುಗಳು ಅಸ್ತಿತ್ವಕ್ಕೆ ಬಂದಿದ್ದವು. ಸ್ಥಳೀಯ ನಾಯಕರಿಗೂ ರಾಜಕೀಯ ಸ್ಥಾನಮಾನ ದೊರಕಿತು.
ತಾಲೂಕ ಅಭಿವೃದ್ಧಿ ಮಂಡಳಿಯಲ್ಲಿ ಮೊದಲು ಮಾಡಿದ ಕೆಲಸವೆಂದರೆ ಹೈಸ್ಕೂಲುಗಳ ಮಂಜೂರಾತಿ. ಹೀಗಾಗಿ
ನಮ್ಮ ಹೋಬಳಿಯಲ್ಲೆ ಮೂರು ಶಾಲೆಗಳು ತಲೆ ಎತ್ತಿದವು. ಇದ್ದ ಪ್ರಾಥಮಿಕ ಶಾಲೆಯಲ್ಲೆ ಹೈಸ್ಕೂಲು
ಶುರುವಾದವು. ಆದರೆ ಸಿಬ್ಬಂದಿಗೆ ಏನು ಮಾಡುವುದು. ಜಿಲ್ಲಾ ಬೋರ್ಡುಗಳಲ್ಲಿ ಇದ್ದವರು ನಗರ
ಪ್ರದೇಶಗಳನ್ನು ಆಯ್ದುಕೊಂಡರು. ಆದರೆ ಹಳ್ಳಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳವಾಯಿತು.
ನೇಮಕಾತಿ ಪ್ರಕ್ರಿಯೆ ಕಠಿಣವಾಗಿರಲಿಲ್ಲ. ತಾಲೂಕ ಬೋರ್ಡು ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿತ್ತು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಅಭ್ಯರ್ಥಿಗಳ ಪಟ್ಟಿ ಕರೆದು ಸಂದರ್ಶನ ನಡೆಸಿ ನೇಮಕಾತಿ
ಆದೇಶ ನೀಡುತಿದ್ದರು. ಅಲ್ಲಿ ಲಭ್ಯವಿಲ್ಲವೆಂದರೆ ಸ್ಥಳೀಯವಾಗಿ ನೇಮಕ ಮಾಡಲು ಅವಕಾಶವಿತ್ತು.
ಬೇರೆ ವಿಷಯಗಳ ಪದವೀಧರರು ದೊರೆಯುತಿದ್ದರು. ಆದರೆ ವಿಜ್ಞಾನ ಮತ್ತು ಗಣಿತದ ಪದವೀಧರರ ಕೊರತೆ
ಬಹಳವಾಗಿತ್ತು. ಸುಮಾರು ನಾಲ್ಕಾರು ಶಾಲೆಗಳಲ್ಲಿ ಆ ಹುದ್ದೆಗಳು ಖಾಲಿ ಖಾಲಿ.
ನಾನು ನಮ್ಮ ಗ್ರಾಮದಲ್ಲಿ ಮೊದಲ ಪದವೀಧರ ಮತ್ತು ನಮ್ಮ
ಭಾಗದಲ್ಲಿ ವಿಜ್ಞಾನ ಪದವಿ ಓದಿದ ಪ್ರಥಮವ್ಯಕ್ತಿ. ಅದರಿಂದ ಹಿತೈಷಿಗಳೊಬ್ಬರು ನಮ್ಮ ಊರಿಗೆ
ನಾಲ್ಕು ಮೈಲು ದೂರವಿರುವ ತಾಲೂಕು ಬೋರ್ಡು ಶಾಲೆಯಲ್ಲಿ ಗಣಿತ ಶಿಕ್ಷಕ ಹುದ್ದೆ ಖಾಲಿ ಇರುವುದು.
ಅದೆ ಊರಿನವರಾದ ಗೌಡರು ಉಪಾಧ್ಯಕ್ಷರು ಅವರಿಗೆ ಒಂದು ಮಾತು ಹೇಳಿದರೆ ಕೆಲಸ ದೊರಕುವುದು ನಿಮ್ಮ
ಹುಡುಗನನ್ನು ಕೆಲಸಕ್ಕೆ ಸೇರಿಸುವಿರಾ?
ಎಂದು ಕೇಳಿದರು. ಅದೆ ಸಮಯದಲ್ಲಿ ನನಗೆ ಆಗಲೆ ಲೋಕಲ್ ಅಡಿಟ್ ಸರ್ಕಲ್
ನಲ್ಲಿ ಸಂದರ್ಶನದ ಕರೆ ಬಂದಿತ್ತು. ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ
ಸಹಾಯಕನ ಹುದ್ದೆಗೆ ಸಂದರ್ಶನವೂ ಮುಗಿದಿತ್ತು. ಆ ಸಮಯದಲ್ಲಿ ಕಚೇರಿಯ ಅಗತ್ಯಕ್ಕೆ ತಕ್ಕಂತೆ
ಅಲ್ಲಿನ ಅಧಿಕಾರಿಗಳೆ ನೇಮಕ ಮಾಡುವ ಅಧಿಕಾರವಿತ್ತು. ನಂತರ ಅದನ್ನು ಹಿರಿಯ ಅಧಿಕಾರಿಗಳು
ಅನುಮೋದಿಸುತಿದ್ದರು. ಪದವೀಧರರಿಗೆ ನಿರುದ್ಯೋಗದ ಮಾತೆ ಇರಲಿಲ್ಲ.
ಆ ವರ್ಷ ನನಗೆ ನೆನಪಿರುವಂತೆ ನಮ್ಮ ಜಿಲ್ಲೆಯ
ಕಾಲೇಜಿನಲ್ಲಿ ಬಿಎಯಲ್ಲಿ ಇಬ್ಬರು,
ವಾಣಿಜ್ಯದಲ್ಲಿ ಒಬ್ಬರು ಮಾತ್ರ ಪದವಿ ಪಡೆದಿದ್ದರು ಮತ್ತು ವಿಜ್ಞಾನದಲ್ಲಿ
ಯಾರೂ ಪಾಸಾಗಿರಲಿಲ್ಲ. ನಮ್ಮ ಜಿಲ್ಲೆ ಹೊಸದಾಗಿ ಮೈಸೂರು ರಾಜ್ಯಕ್ಕೆ ಸೇರಿದ್ದರಿಂದ ಬೇರೆ
ಕಡೆಯವರು ಯಾರೂ ನಮ್ಮ ಜಿಲ್ಲೆಗೆ ಬರಲು ಇಷ್ಟಪಡುತ್ತಿರಲಿಲ್ಲ. ಪ್ರೌಢಶಾಲೆಗಳನ್ನು
ತೆರೆದಿದ್ದರು. ಆದರೆ ಸೂಕ್ತ ಸಿಬ್ಬಂದಿಯ ಕೊರತೆ ಬಹಳವಾಗಿತ್ತು. ಆಗ ತಾನೆ ಅಧಿಕಾರದ ಕುರ್ಚಿ
ಏರಿದ್ದ ನಾಯಕರಿಗೆ ಜನರಿಗೆ ಉತ್ತರ ಹೇಳುವುದು ತಮ್ಮ ಕೆಲಸ ಎಂದು ಕೊಂಡಿದ್ದರು. ನನಗೆ ಒಂದೆ
ಬಾರಿ ಮೂರು ಅವಕಾಶಗಳು ಸಿಕ್ಕಿದ್ದವು. ಯಾವುದಕ್ಕೆ ಹೋಗಬೆಕು, ಯಾವುದನ್ನು
ಬಿಡಬೇಕು ಎಂಬುದೆ ಸಂದಿಗ್ಧವಾಗಿತ್ತು. ಬಳ್ಳಾರಿಯ ಕೆಲಸ ಬೇಡ ಎಂದು ಒಮ್ಮತದ ತಿರ್ಮಾನವಾಯಿತು.
ಅದುವರೆಗೆ ನಾನೂ ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಹೋಗಿರಲಿಲ್ಲ. ಅಲ್ಲಿಗೆ ಪೂರ್ತಿ
ಅಪರಿಚಿತನಾಗಿದ್ದೆ. ಇನ್ನು ಕೃಷಿ ಇಲಾಖೆಯ ಗುಮಾಸ್ತನ ಕೆಲಸ. ಅದು ಸರ್ಕಾರಿ ಕೆಲಸ. ದೂರದ
ಊರಿಗೆ ವರ್ಗವಾಗುವ ಅವಕಾಶವಿತ್ತು. ನಾಲಕ್ಕೆ ಮೈಲು ದೂರದಲ್ಲಿದ್ದ ಪ್ರೌಢಶಾಲಾ ಶಿಕ್ಷಕನ
ಹುದ್ದೆಗೆ ಸೇರಬೇಕೆಂದು ಒಮ್ಮತದಿಂದ ಒಪ್ಪಲಾಯಿತು.
ಕೆಲಸ ಹತ್ತಿರದಲ್ಲೆ. ಮನೆಯಿಂದ ಓಡಾಡಬಹುದು. ಎಲ್ಲ ನಾವು
ಕಂಡುಂಡ ಜನ. ಮೇಲಾಗಿ ನೇಮಕಾತಿ ಆದೇಶವನ್ನು ಮನೆಗೆ ತಂದು ತಲುಪಿಸಿದ್ದರು. ಹೇಗೂ ಬಸ್ಸಿನ
ಅನುಕೂಲ ಇತ್ತು. ಸೈಕಲ್ಲಾದರೆ ಅರ್ಧ ಗಂಟೆ ಪ್ರಯಾಣ. ಮನಸ್ಸು ಮಾಡಿದರೆ ನೆಡದೆ ಹೋಗಬಹುದಿತ್ತು.
ಅರ್ಜಿ ಹಾಕದೆ, ಪರೀಕ್ಷೆ
ಬರೆಯದೆ, ಸಂದರ್ಶನ ನೀಡದೆ ನೇಮಕಾತಿ ಆದೇಶ ಕೈಗೆ ಬಂದಿತ್ತು. ಬಹುಶಃ ಆಗಿನ ವೇತನ ನೂರು ರೂಪಾಯಿಗೂ ತುಸು ಹೆಚ್ಚು ಎಂದು
ನೆನಪು.
ಒಂದು ಶುಭ ದಿನ ನೋಡಿ ದೇವರಿಗೆ, ಅಪ್ಪ ಅಮ್ಮಗೆ ಅಡ್ಡಬಿದ್ದು
ಕೆಲಸಕ್ಕೆ ಸೇರಲು ಹೊರಟೆ. ಆಗ ನನಗೆ ಇಪ್ಪತ್ತೊಂದು ವರ್ಷ ವಯಸ್ಸು. ಆಕೃತಿಯಲ್ಲಿ ವಾಮನ. ಐದು
ಅಡಿ ಎರಡು ಅಂಗುಲಕ್ಕೆ ಎತ್ತರ ಸೀಮಿತವಾಗಿತ್ತು. ಭಾರಿ ಗಾತ್ರದ ಆಳಲ್ಲ. ಆಗಲೂ ಕಡ್ಡಿ
ಪೈಲವಾನನೆ. ತೂಕ ನೂರು ಮೇಲೊಂದು ಹತ್ತು ಪೌಂಡು. ಮೀಸೆ ಅದೆ ತಾನೆ ಕಪ್ಪಾಗಿದ್ದವು. ಗಡ್ಡ
ವಾರಕೊಮ್ಮೆ ಮಾಡಿಕೊಂಡರೂ ನಡೆಯುತಿತ್ತು. ಬೆಂಗಳೂರಿನಲ್ಲಿ ಓದಿದವನಾದರೂ
ಬಟ್ಟೆ ಬರೆಯಲ್ಲಿ ಹೇಳಿಕೊಳ್ಳುವ ಒಪ್ಪ ಓರಣ ಇರಲಿಲ್ಲ. ಪ್ಯಾಂಟು, ಪೂರ್ಣ
ತೋಳಿನ ಸ್ಲಾಕ್ ಷರ್ಟ್. ಕಾಲಲ್ಲಿ ಚಪ್ಪಲಿ. ಅಲ್ಲಿಗೆ ಮುಗಿಯಿತು ಅಲಂಕಾರ. ಬೆಳಗ್ಗೆ ಒಂಬತ್ತು
ಗಂಟೆಗೆ ಮನೆಯಿಂದ ಹೊರಟೆ. ಸ್ವಲ್ಪ ಕಾದ ನಂತರ ಬಸ್ಸು ಬಂದಿತು. ಜನ ಅದರಲ್ಲಿ
ಕಿಕ್ಕಿರಿದಿದ್ದರು. ಹೇಗೋ ತೂರಿಕೊಂಡು ಒಳಗೆ ಹೋಗಿ ಮೇಲಿನ ಕಂಬಿ ಹಿಡಿದು ನೇತಾಡುತ್ತಾ
ನಿಂತುಕೊಂಡೆ. ಸುತ್ತಮುತ್ತಲೂ ನಿಂತವರು ಕೈನಲ್ಲಿ ಪುಸ್ತಕ ಹಿಡಿದಿದ್ದರು. ಎಲ್ಲ ಹಳ್ಳಿಯ
ಹುಡುಗರು. ರೈತರ ಮಕ್ಕಳು. ದಾಂಡಿಗರು. ನನಗಿಂತ ಅರ್ಧ ಅಡಿ ಎತ್ತರ ಇದ್ದಿರಬಹುದು. ನಾನು
ಕೈನಲ್ಲಿ ಪುಸ್ತಕ ಹಿಡಿದಿದ್ದೆ. ಅವರು ಕೂಡಾ ನಾನು ಸೇರಲಿರುವ ಶಾಲೆಯ ವಿದ್ಯಾರ್ಥಿಗಳೆ
ಇರಬಹುದು ಎನಿಸಿತು. ಏಕೆಂದರೆ ಆ ದಿಕ್ಕಿನಲ್ಲಿ ಇದ್ದುದು ಅದೊಂದೆ ಶಾಲೆ. ನಾನು ಆ ಮಾತು ಈ
ಮಾತು ಆಡುತ್ತಾ ಎಲ್ಲಿಗೆ ಹೋಗುತ್ತಿರುವಿರಿ? ಎಂದು ಕೇಳಿದೆ. ಖಾಸಗಿ
ಪಾಠ ಮುಗಿಸಿ ಶಾಲೆಗೆ ಹೊಗುತ್ತಿರುವುದಾಗಿ ತಿಳಿಸಿದರು. ಅವರು ತಾವು ನಾನು ಹೋಗಲಿರುವ
ಹೈಸ್ಕೂಲಿನಲ್ಲಿ ಓದುತ್ತಿರುವುದಾಗಿ ತಿಳಿಸಿದರು. ಆ ಶಾಲೆ ಹೇಗಿದೆ, ನಾನೂ
ಅಲ್ಲಿಗೆ ಹೋಗಬೇಕಾಗಿದೆ ಎಂದೆ. ಅವರು ನನ್ನನ್ನು ಮಿಕಿ ಮಿಕಿ ನೋಡಿದರು. ನೀನೂ ಆ ಶಾಲೆಗೆ
ಹೊರಟಿರುವೆಯಾ ಎಂದರು.
ನಾನು ತಲೆಯಾಡಿಸಿದೆ. `ಅಲ್ಲಿಗೆ ಸೇರಬೇಡ. ನೀನು ಹಾಳಾಗಿ
ಹೋಗುತ್ತೀಯ. ಯಾರದೋ ಮಾತು ಕೇಳಿ ನಾವು ಅಲ್ಲಿ ಸೇರಿದೆವು. ಅಲ್ಲಿ ಪಾಠಗಳೆ ನಡೆಯುವುದಿಲ್ಲ’
ಎಂದರು.
ನಾನು ಕೂತೂಹಲದಿಂದ, ಏಕೆ ಹಾಗೆ ಹೇಳುವಿರಿ? ಎಂದೆ.
`ಆ ಶಾಲೆ ಶುರುವಾಗಿ ಮೂರು ವರ್ಷವಾಯಿತು ನಾವು ಈಗ ಎಸ್‌ಎಸ್‌ಎಲ್‌ಸಿಗೆ
ಬಂದಿದ್ದೇವೆ. ಅಲ್ಲಿ ಗಣಿತ ಮತ್ತು ವಿಜ್ಞಾನದ ಮೇಷ್ಟರೆ ಇಲ್ಲ. ನಾವು ನಗರದಲ್ಲಿ ಖಾಸಗಿ
ಪಾಠಕ್ಕೆ ಹೊಗುತ್ತೇವೆ. ಹಣ, ಸಮಯ ಹಾಳು. ಸುಮ್ಮನೆ ಇಲ್ಲಿಗೆ ಯಾಕೆ
ಹೋಗುವೆ. ಹೇಗೂ ನಿಮ್ಮ ಊರಿಗೆ ಪಟ್ಟಣ ಹತ್ತಿರವಿದೆ ಅಲ್ಲಿ ದೊಡ್ಡ ಶಾಲೆ ಸೇರು’ ಎಂದು ಸಲಹೆ ನೀಡಿದರು.
ನಾನು ಮುಗಳುನಗೆ ನಕ್ಕು ಸುಮ್ಮನೆ ತಲೆಯಾಡಿಸಿದೆ.
ಅವರು ನನ್ನ ಆಕಾರ ನೋಡಿ ನಾನು ಹೈಸ್ಕೂಲು ಸೇರಲು ಹೊರಟ
ಹುಡುಗ ಎಂದುಕೊಂಡಿದ್ದರು. ನಾನು ಶಾಲೆಯ ಕಛೇರಿಗೆ ಹೋಗಿ ವರದಿ ಮಾಡಿಕೊಂಡೆ. ಅಲ್ಲಿನ ಹೆಡ್
ಮೇಷ್ಟ್ರು ರಾಯಸಂ ವಂಶಸ್ಥರು. ಚೆನ್ನಾಗಿ ಓದಿಕೊಂಡವರು. ಉತ್ತಮ ಶಿಕ್ಷಕರು, ಅವರು ವಿಶ್ವಾಸದಿಂದ ಮಾತನಾಡಿಸಿದರು.
ಅಲ್ಲಿನ ಪರಿಸ್ಥಿತಿಯನ್ನು ತಿಳಿಸಿದರು. ಅಲ್ಲಿ ಗಣಿತ ಮತ್ತು ವಿಜ್ಞಾನ ಪಾಠ ಕುಂಠಿತವಾಗಿದೆ
ಆಸಕ್ತಿವಹಿಸಿ ಸುಧಾರಿಸಿ ಎಂದು ಹೇಳಿದರು. ಅಲ್ಲದೆ ನಾನು ಹೊಸಬನೆ ಅದರೂ ಎಸ್‌ಎಸ್ಎಲ್‌ಸಿ ಗಣಿತ
ಪಾಠ ಮಾಡುವ ಹೊಣೆ ನೀಡಿದರು.
ಮೊದಲನೆ ಪಿರಿಯಡ್‌ನಲ್ಲೆ ಎಸ್ಎಸ್‌ಎಲ್‌ಸಿ ತರಗತಿ.
ನನ್ನನ್ನು ತರತಿಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. `ನಿಮಗೆ ಈವರೆಗೆ ಪಾಠಕ್ಕೆ ತೊಂದರೆ
ಆಗಿತ್ತು. ಇನ್ನು ಆ ಚಿಂತೆ ಇಲ್ಲ ಅದೃಷ್ಟದಿಂದ ಗಣಿತಕ್ಕೆ ಶಿಕ್ಷಕರು ಬಂದಿರುವರು.
ಬೆಂಗಳೂರಲ್ಲಿ ಕಲಿತವರು. ಅವರೊಂದಿಗೆ ಸಹಕರಿಸಿ ಚೆನ್ನಾಗಿ ಕಲಿಯಿರಿ. ಅವರ ಅನುಭವದ ಲಾಭ
ಪಡೆಯಿರಿ’ ಹೀಗೆ ಹೇಳಿ ಹೊರಟರು.
ನಾನು ನನ್ನ ಪರಿಚಯ ಮಾಡಿಕೊಂಡೆ. ಎಲ್ಲರೂ ತಮ್ಮ ತಮ್ಮ
ಪರಿಚಯ ಮಾಡಿಕೊಳ್ಳಲು ಹೇಳಿದೆ. ನನಗೆ ಬಸ್ಸಿನಲ್ಲಿ ಸಿಕ್ಕ ಪಡ್ಡೆ ಹುಡುಗರು ಅಲ್ಲಿಯೆ ಇದ್ದರು.
ಅವರು ಎದ್ದು ನಿಂತು ತಮ್ಮ ತಮ್ಮ ಹೆಸರು ಹೇಳಿದರು. ತರಗತಿಯಲ್ಲಿ ಓಬಯ್ಯ, ಬೋರಯ್ಯ, ಜೋಗಯ್ಯ,
ಚೌಡಪ್ಪ ಎಂಬ ಹೆಸರಿನ ಹುಡುಗರು ಹೆಚ್ಚು ಇದ್ದರು. ಅಲ್ಲಿ ನಾಯಕ ಜನಾಂಗದವರೆ
ಬಹಳ. ಹೊಸದಾಗಿ ಹೈಸ್ಕೂಲ್ ಶುರುವಾದಾಗ ಶಾಲೆ ಬಿಟ್ಟವರನ್ನೂ ಕರೆದುಕೊಂಡು ಬಂದು ದಾಖಲು
ಮಾಡಿದ್ದರು. ಅದಕ್ಕೆ ವಯಸ್ಸಿನಲ್ಲೂ ಆಕಾರದಲ್ಲೂ ನನಗಿಂತ ದೊಡ್ಡ ವಿದ್ಯಾರ್ಥಿಗಳಿಗೆ ಪಾಠ
ಮಾಡುವ ಯೋಗ ನನಗೆ ಬಂದಿತು.
ಮೊದಲೆ ಪರಿಚಯವಾಗಿದ್ದ ಹುಡುಗರತ್ತ ನೋಡಿದೆ, `ನಿಮ್ಮ ಮಾತಿನಂತೆ ಬೇರೆ ಶಾಲೆಗೆ
ಹೋಗಲು ಆಗಲಿಲ್ಲ. ಅದಕ್ಕೆ ತಪ್ಪು ತಿಳಿಯಬಾರದು. ಇಲ್ಲಿ ನನ್ನ ಅಗತ್ಯವಿದೆ. ನಾನು ಇಲ್ಲಿ ಪಾಠ
ಕೇಳಲು ಬಂದಿಲ್ಲ. ಪಾಠ ಮಾಡಲು ಬಂದಿರುವೆ. ಇನ್ನು ನಿಮಗೆ ಯಾವುದೆ ಸಮಸ್ಯೆ ಇರದು’ ಎಂದು ನಗು ನಗುತ್ತಾ ಸಮಜಾಯಿಷಿ ನೀಡಿದೆ. ಅವರೆಲ್ಲ ಸಂಕೋಚದಿಂದ ತಲೆ ತಗ್ಗಿಸಿ
ಕುಳಿತಿದ್ದರು.
ಆ ವರುಷ ನಲವತ್ತು ಹುಡುಗರಲ್ಲಿ ಇಬ್ಬರೆ ಪಾಸಾದರು.
ಆರತಿಗೆ ಒಬ್ಬಳು ಮತ್ತು ಕೀರುತಿಗೆ ಒಬ್ಬ ಎಂಬಂತೆ ಒಬ್ಬ ಹುಡುಗಿ ಒಬ್ಬ ಹುಡುಗ ಮಾತ್ರ
ಪಾಸಾಗಿದ್ದರು. ಆದರೆ ಗಣಿತದಲ್ಲಿ ೨೦ಕ್ಕೂ ಹೆಚ್ಚು ಜನ ಪಾಸಾಗಿದ್ದರು. ವಿಜ್ಞಾನದಲ್ಲೆ
ನಪಾಸಾದವರು ಬಹಳ. ಅದಕ್ಕೆ ಮುಂದಿನ ವರ್ಷ ಗಣಿತ ಮತ್ತು ವಿಜ್ಞಾನ ಎರಡೂ ವಿಷಯಗಳನ್ನು ಎಸ್‌ಎಸ್ಎಲ್‌ಸಿಗೆ
ನಾನೆ ಪಾಠ ಮಾಡಬೇಕಾಯಿತು. ವರ್ಷದಿಂದ ವರ್ಷಕ್ಕೆ ಫಲಿತಾಂಶ ಸುಧಾರಿಸತೊಡಗಿತು. ನನಗೂ ಮಕ್ಕಳ
ಅಕ್ಕರೆ ಬೊಗಸೆಗಟ್ಟಲೆ ಸಿಕ್ಕಿತು.
ಕೆಲಸಕ್ಕೆ ಸೇರಿದ ಎರಡು ತಿಂಗಳಲ್ಲೆ ನನ್ನ ಪದವಿಯ
ಫಲಿತಾಂಶ ಬಂದಿತು. ನಾನು ತರಬೇತಿ
ರಹಿತ ಪದವೀಧರ ಶಿಕ್ಷಕನಾಗಿ ಬಡ್ತಿ ಪಡೆದೆ. ನನಗೆ ಅಲ್ಲಿ ದೊರೆತ ಅನುಭವ ಅಪಾರ. ಹೊಸದಾಗಿ
ಕೆಲಸಕ್ಕೆ ಸೆರಿದರೂ ಹೆಚ್ಚಿನ ಹೊಣೆ ಲಭಿಸಿತು. ಮಾಡಿದ ಪಾಠವನ್ನೆ ಮೆಚ್ಚಿ ಬೆನ್ನುತಟ್ಟುವ
ಶಾಲಾ ಮುಖ್ಯಸ್ಥರು, ಅವರು ಮದರಾಸಿನಲ್ಲಿ ಓದಿದವರು, ಸಾಹಿತ್ಯಾಸಕ್ತರು. ನನಗೆ ಓದುವ ಗೀಳು ಇರುವುದು ಅರಿತು ತಮ್ಮಲ್ಲಿನ ಪುಸ್ತಕಗಳನ್ನು
ಓದಲು ಕೊಡತೊಡಗಿದರು. ವಿಶೇಷವಾಗಿ ಅವರಲ್ಲಿ ಇಂಪ್ರಿಂಟ್ ಎಂಬ ನಿಯತಕಾಲಿಕದ ದೊಡ್ಡ ಸಂಗ್ರಹವೆ
ಇತ್ತು. ಅದು ಒಂದು ಇಂಗ್ಲಿಷ್ ಸಾಹಿತ್ಯ ಪತ್ರಿಕೆ. ಪ್ರತಿ ಸಂಚಿಕೆಯಲ್ಲೂ ಎರಡು ಮೂರು ಕಥೆಗಳು
ಮತ್ತು ಕಾದಂಬರಿ ಇರುತಿದ್ದವು. ಅದರಿಂದಾಗಿ ನನಗೆ ಹೊಸ ಅವಕಾಶ ಸಿಕ್ಕಿತು. ಜತೆಗೆ ಅವರು
ರೀಡರ್ಸ್ ಡೈಜೆಸ್ಟ್ ತರಿಸುತಿದ್ದರು. ನಾನು ಅವನ್ನೆಲ್ಲ ಕೊಂಡು ಓದುವುದಂತೂ ಕನಸಿನ ಮಾತು.
ಅವರಿಂದಾಗಿ ನನಗೆ ಇಂಗ್ಲಿಷ್ ಸಾಹಿತ್ಯದ ಆಳ ಅಗಲಗಳ ಪರಿಚಯವಾಯಿತು.
ಅಂತೂ ತಮ್ಮ ಮಕ್ಕಳಿಗೆ ಎಲ್ಲ ವಿಷಯದಲ್ಲೂ ಪಾಠ
ನಡೆಯುವುದೆಂಬ ನೆಮ್ಮದಿ ಪಡೆದ ಪೋಷಕರು ತೋರುವ ಆದರ ಗೌರವ ಮನತುಂಬಿಸಿತು. ಶಾಲಾ ವೇಳೆಯಾದ ಮೇಲೆ
ಮನೆಪಾಠ ಮಾಡಬೇಕೆಂದು ಒತ್ತಡವೂ ಬಂದಿತು. ಅದಕ್ಕೆ ಹೆಡ್ ಮಾಸ್ಟರ್ ಅವರ ಒತ್ತಾಸೆಯೂ ಇತ್ತು.
ಫಲಿತಾಂಶ ಸುಧಾರಿಸಿದರೆ ಶಾಲೆಗೆ ಕೀರ್ತಿ, ಅವರಿಗೂ ಹೆಸರು. ಕನಿಷ್ಠ ಪಕ್ಷ ಎಸ್‌ಎಸ್‌ಎಲ್‌ಸಿ
ಮಕ್ಕಳಿಗಾದರೂ ಸಹಾಯ ಮಾಡುವ ದೃಷ್ಟಿಯಿಂದ ಪಾಠ ಮಾಡಲೆಬೇಕೆಂದು ಒತ್ತಾಯ ಬಂದಿತು. ಅಲ್ಲಿಯೆ
ಹುಡುಗರು ಒಂದು ರೂಮು ಮಾಡಿಕೊಟ್ಟರು. ಶಾಲೆ ಬಿಟ್ಟ ಮೇಲೆ ಐದುವರೆಯಿಂದ ರಾತ್ರಿ ಏಳುವರೆವರೆಗೆ
ಮನೆಪಾಠ ಮಾಡಿ ನಂತರ ಊರಿಗೆ ಹೋಗುತಿದ್ದೆ. ಶನಿವಾರ ಭಾನುವಾರ
ಆ ಮಕ್ಕಳೆ ನಮ್ಮ ಊರಿಗೆ ಬಂದು ಪಾಠ ಹೇಳಿಸಿಕೊಂಡು ಹೊಗುತಿದ್ದರು. ಮೇಲಾದಾಯವೂ ಬರತೊಡಗಿತು.
ಲೆಕ್ಕದ ಮೇಷ್ಟ್ರು ಅಂದರೆ ರೊಕ್ಕದ ಮೇಷ್ಟ್ರು, ಅವರಿಗೇನು ಕಡಿಮೆ
ಎನ್ನುವಂತಾಯಿತು.
|
|
|
|
|
|
||||||||||||||||||||||||||||||||||||||||||||||||||||||
|
|
|||||||||||||||||||||||||||||||||||||||||||||||||||||||
ನನ್ನ ಬಿಎಸ್‌ಸಿ ಪರೀಕ್ಷೆ ಮುಗಿಯಿತು. ಇನ್ನೂ ಫಲಿತಾಂಶ
ಬರಬೇಕಿತ್ತು. ಆಗಲೆ ನನಗೆ ಕೆಲಸದ ಅವಕಾಶ ದೊರಕಿತು. ಜಿಲ್ಲಾ ಬೋರ್ಡುಗಳು ಹೋಗಿ ತಾಲೂಕು
ಬೋರ್ಡುಗಳು ಅಸ್ತಿತ್ವಕ್ಕೆ ಬಂದಿದ್ದವು. ಸ್ಥಳೀಯ ನಾಯಕರಿಗೂ ರಾಜಕೀಯ ಸ್ಥಾನಮಾನ ದೊರಕಿತು.
ತಾಲೂಕ ಅಭಿವೃದ್ಧಿ ಮಂಡಳಿಯಲ್ಲಿ ಮೊದಲು ಮಾಡಿದ ಕೆಲಸವೆಂದರೆ ಹೈಸ್ಕೂಲುಗಳ ಮಂಜೂರಾತಿ. ಹೀಗಾಗಿ
ನಮ್ಮ ಹೋಬಳಿಯಲ್ಲೆ ಮೂರು ಶಾಲೆಗಳು ತಲೆ ಎತ್ತಿದವು. ಇದ್ದ ಪ್ರಾಥಮಿಕ ಶಾಲೆಯಲ್ಲೆ ಹೈಸ್ಕೂಲು
ಶುರುವಾದವು. ಆದರೆ ಸಿಬ್ಬಂದಿಗೆ ಏನು ಮಾಡುವುದು. ಜಿಲ್ಲಾ ಬೋರ್ಡುಗಳಲ್ಲಿ ಇದ್ದವರು ನಗರ
ಪ್ರದೇಶಗಳನ್ನು ಆಯ್ದುಕೊಂಡರು. ಆದರೆ ಹಳ್ಳಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಹಳವಾಯಿತು.
ನೇಮಕಾತಿ ಪ್ರಕ್ರಿಯೆ ಕಠಿಣವಾಗಿರಲಿಲ್ಲ. ತಾಲೂಕ ಬೋರ್ಡು ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿತ್ತು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಅಭ್ಯರ್ಥಿಗಳ ಪಟ್ಟಿ ಕರೆದು ಸಂದರ್ಶನ ನಡೆಸಿ ನೇಮಕಾತಿ
ಆದೇಶ ನೀಡುತಿದ್ದರು. ಅಲ್ಲಿ ಲಭ್ಯವಿಲ್ಲವೆಂದರೆ ಸ್ಥಳೀಯವಾಗಿ ನೇಮಕ ಮಾಡಲು ಅವಕಾಶವಿತ್ತು.
ಬೇರೆ ವಿಷಯಗಳ ಪದವೀಧರರು ದೊರೆಯುತಿದ್ದರು. ಆದರೆ ವಿಜ್ಞಾನ ಮತ್ತು ಗಣಿತದ ಪದವೀಧರರ ಕೊರತೆ
ಬಹಳವಾಗಿತ್ತು. ಸುಮಾರು ನಾಲ್ಕಾರು ಶಾಲೆಗಳಲ್ಲಿ ಆ ಹುದ್ದೆಗಳು ಖಾಲಿ ಖಾಲಿ.
ನಾನು ನಮ್ಮ ಗ್ರಾಮದಲ್ಲಿ ಮೊದಲ ಪದವೀಧರ ಮತ್ತು ನಮ್ಮ
ಭಾಗದಲ್ಲಿ ವಿಜ್ಞಾನ ಪದವಿ ಓದಿದ ಪ್ರಥಮವ್ಯಕ್ತಿ. ಅದರಿಂದ ಹಿತೈಷಿಗಳೊಬ್ಬರು ನಮ್ಮ ಊರಿಗೆ
ನಾಲ್ಕು ಮೈಲು ದೂರವಿರುವ ತಾಲೂಕು ಬೋರ್ಡು ಶಾಲೆಯಲ್ಲಿ ಗಣಿತ ಶಿಕ್ಷಕ ಹುದ್ದೆ ಖಾಲಿ ಇರುವುದು.
ಅದೆ ಊರಿನವರಾದ ಗೌಡರು ಉಪಾಧ್ಯಕ್ಷರು ಅವರಿಗೆ ಒಂದು ಮಾತು ಹೇಳಿದರೆ ಕೆಲಸ ದೊರಕುವುದು ನಿಮ್ಮ
ಹುಡುಗನನ್ನು ಕೆಲಸಕ್ಕೆ ಸೇರಿಸುವಿರಾ?
ಎಂದು ಕೇಳಿದರು. ಅದೆ ಸಮಯದಲ್ಲಿ ನನಗೆ ಆಗಲೆ ಲೋಕಲ್ ಅಡಿಟ್ ಸರ್ಕಲ್
ನಲ್ಲಿ ಸಂದರ್ಶನದ ಕರೆ ಬಂದಿತ್ತು. ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಕಚೇರಿಯಲ್ಲಿ ಹಿರಿಯ
ಸಹಾಯಕನ ಹುದ್ದೆಗೆ ಸಂದರ್ಶನವೂ ಮುಗಿದಿತ್ತು. ಆ ಸಮಯದಲ್ಲಿ ಕಚೇರಿಯ ಅಗತ್ಯಕ್ಕೆ ತಕ್ಕಂತೆ
ಅಲ್ಲಿನ ಅಧಿಕಾರಿಗಳೆ ನೇಮಕ ಮಾಡುವ ಅಧಿಕಾರವಿತ್ತು. ನಂತರ ಅದನ್ನು ಹಿರಿಯ ಅಧಿಕಾರಿಗಳು
ಅನುಮೋದಿಸುತಿದ್ದರು. ಪದವೀಧರರಿಗೆ ನಿರುದ್ಯೋಗದ ಮಾತೆ ಇರಲಿಲ್ಲ.
ಆ ವರ್ಷ ನನಗೆ ನೆನಪಿರುವಂತೆ ನಮ್ಮ ಜಿಲ್ಲೆಯ
ಕಾಲೇಜಿನಲ್ಲಿ ಬಿಎಯಲ್ಲಿ ಇಬ್ಬರು,
ವಾಣಿಜ್ಯದಲ್ಲಿ ಒಬ್ಬರು ಮಾತ್ರ ಪದವಿ ಪಡೆದಿದ್ದರು ಮತ್ತು ವಿಜ್ಞಾನದಲ್ಲಿ
ಯಾರೂ ಪಾಸಾಗಿರಲಿಲ್ಲ. ನಮ್ಮ ಜಿಲ್ಲೆ ಹೊಸದಾಗಿ ಮೈಸೂರು ರಾಜ್ಯಕ್ಕೆ ಸೇರಿದ್ದರಿಂದ ಬೇರೆ
ಕಡೆಯವರು ಯಾರೂ ನಮ್ಮ ಜಿಲ್ಲೆಗೆ ಬರಲು ಇಷ್ಟಪಡುತ್ತಿರಲಿಲ್ಲ. ಪ್ರೌಢಶಾಲೆಗಳನ್ನು
ತೆರೆದಿದ್ದರು. ಆದರೆ ಸೂಕ್ತ ಸಿಬ್ಬಂದಿಯ ಕೊರತೆ ಬಹಳವಾಗಿತ್ತು. ಆಗ ತಾನೆ ಅಧಿಕಾರದ ಕುರ್ಚಿ
ಏರಿದ್ದ ನಾಯಕರಿಗೆ ಜನರಿಗೆ ಉತ್ತರ ಹೇಳುವುದು ತಮ್ಮ ಕೆಲಸ ಎಂದು ಕೊಂಡಿದ್ದರು. ನನಗೆ ಒಂದೆ
ಬಾರಿ ಮೂರು ಅವಕಾಶಗಳು ಸಿಕ್ಕಿದ್ದವು. ಯಾವುದಕ್ಕೆ ಹೋಗಬೆಕು, ಯಾವುದನ್ನು
ಬಿಡಬೇಕು ಎಂಬುದೆ ಸಂದಿಗ್ಧವಾಗಿತ್ತು. ಬಳ್ಳಾರಿಯ ಕೆಲಸ ಬೇಡ ಎಂದು ಒಮ್ಮತದ ತಿರ್ಮಾನವಾಯಿತು.
ಅದುವರೆಗೆ ನಾನೂ ಜಿಲ್ಲಾ ಕೇಂದ್ರಕ್ಕೆ ಒಮ್ಮೆಯೂ ಹೋಗಿರಲಿಲ್ಲ. ಅಲ್ಲಿಗೆ ಪೂರ್ತಿ
ಅಪರಿಚಿತನಾಗಿದ್ದೆ. ಇನ್ನು ಕೃಷಿ ಇಲಾಖೆಯ ಗುಮಾಸ್ತನ ಕೆಲಸ. ಅದು ಸರ್ಕಾರಿ ಕೆಲಸ. ದೂರದ
ಊರಿಗೆ ವರ್ಗವಾಗುವ ಅವಕಾಶವಿತ್ತು. ನಾಲಕ್ಕೆ ಮೈಲು ದೂರದಲ್ಲಿದ್ದ ಪ್ರೌಢಶಾಲಾ ಶಿಕ್ಷಕನ
ಹುದ್ದೆಗೆ ಸೇರಬೇಕೆಂದು ಒಮ್ಮತದಿಂದ ಒಪ್ಪಲಾಯಿತು.
ಕೆಲಸ ಹತ್ತಿರದಲ್ಲೆ. ಮನೆಯಿಂದ ಓಡಾಡಬಹುದು. ಎಲ್ಲ ನಾವು
ಕಂಡುಂಡ ಜನ. ಮೇಲಾಗಿ ನೇಮಕಾತಿ ಆದೇಶವನ್ನು ಮನೆಗೆ ತಂದು ತಲುಪಿಸಿದ್ದರು. ಹೇಗೂ ಬಸ್ಸಿನ
ಅನುಕೂಲ ಇತ್ತು. ಸೈಕಲ್ಲಾದರೆ ಅರ್ಧ ಗಂಟೆ ಪ್ರಯಾಣ. ಮನಸ್ಸು ಮಾಡಿದರೆ ನೆಡದೆ ಹೋಗಬಹುದಿತ್ತು.
ಅರ್ಜಿ ಹಾಕದೆ, ಪರೀಕ್ಷೆ
ಬರೆಯದೆ, ಸಂದರ್ಶನ ನೀಡದೆ ನೇಮಕಾತಿ ಆದೇಶ ಕೈಗೆ ಬಂದಿತ್ತು. ಬಹುಶಃ ಆಗಿನ ವೇತನ ನೂರು ರೂಪಾಯಿಗೂ ತುಸು ಹೆಚ್ಚು ಎಂದು
ನೆನಪು.
ಒಂದು ಶುಭ ದಿನ ನೋಡಿ ದೇವರಿಗೆ, ಅಪ್ಪ ಅಮ್ಮಗೆ ಅಡ್ಡಬಿದ್ದು
ಕೆಲಸಕ್ಕೆ ಸೇರಲು ಹೊರಟೆ. ಆಗ ನನಗೆ ಇಪ್ಪತ್ತೊಂದು ವರ್ಷ ವಯಸ್ಸು. ಆಕೃತಿಯಲ್ಲಿ ವಾಮನ. ಐದು
ಅಡಿ ಎರಡು ಅಂಗುಲಕ್ಕೆ ಎತ್ತರ ಸೀಮಿತವಾಗಿತ್ತು. ಭಾರಿ ಗಾತ್ರದ ಆಳಲ್ಲ. ಆಗಲೂ ಕಡ್ಡಿ
ಪೈಲವಾನನೆ. ತೂಕ ನೂರು ಮೇಲೊಂದು ಹತ್ತು ಪೌಂಡು. ಮೀಸೆ ಅದೆ ತಾನೆ ಕಪ್ಪಾಗಿದ್ದವು. ಗಡ್ಡ
ವಾರಕೊಮ್ಮೆ ಮಾಡಿಕೊಂಡರೂ ನಡೆಯುತಿತ್ತು. ಬೆಂಗಳೂರಿನಲ್ಲಿ ಓದಿದವನಾದರೂ
ಬಟ್ಟೆ ಬರೆಯಲ್ಲಿ ಹೇಳಿಕೊಳ್ಳುವ ಒಪ್ಪ ಓರಣ ಇರಲಿಲ್ಲ. ಪ್ಯಾಂಟು, ಪೂರ್ಣ
ತೋಳಿನ ಸ್ಲಾಕ್ ಷರ್ಟ್. ಕಾಲಲ್ಲಿ ಚಪ್ಪಲಿ. ಅಲ್ಲಿಗೆ ಮುಗಿಯಿತು ಅಲಂಕಾರ. ಬೆಳಗ್ಗೆ ಒಂಬತ್ತು
ಗಂಟೆಗೆ ಮನೆಯಿಂದ ಹೊರಟೆ. ಸ್ವಲ್ಪ ಕಾದ ನಂತರ ಬಸ್ಸು ಬಂದಿತು. ಜನ ಅದರಲ್ಲಿ
ಕಿಕ್ಕಿರಿದಿದ್ದರು. ಹೇಗೋ ತೂರಿಕೊಂಡು ಒಳಗೆ ಹೋಗಿ ಮೇಲಿನ ಕಂಬಿ ಹಿಡಿದು ನೇತಾಡುತ್ತಾ
ನಿಂತುಕೊಂಡೆ. ಸುತ್ತಮುತ್ತಲೂ ನಿಂತವರು ಕೈನಲ್ಲಿ ಪುಸ್ತಕ ಹಿಡಿದಿದ್ದರು. ಎಲ್ಲ ಹಳ್ಳಿಯ
ಹುಡುಗರು. ರೈತರ ಮಕ್ಕಳು. ದಾಂಡಿಗರು. ನನಗಿಂತ ಅರ್ಧ ಅಡಿ ಎತ್ತರ ಇದ್ದಿರಬಹುದು. ನಾನು
ಕೈನಲ್ಲಿ ಪುಸ್ತಕ ಹಿಡಿದಿದ್ದೆ. ಅವರು ಕೂಡಾ ನಾನು ಸೇರಲಿರುವ ಶಾಲೆಯ ವಿದ್ಯಾರ್ಥಿಗಳೆ
ಇರಬಹುದು ಎನಿಸಿತು. ಏಕೆಂದರೆ ಆ ದಿಕ್ಕಿನಲ್ಲಿ ಇದ್ದುದು ಅದೊಂದೆ ಶಾಲೆ. ನಾನು ಆ ಮಾತು ಈ
ಮಾತು ಆಡುತ್ತಾ ಎಲ್ಲಿಗೆ ಹೋಗುತ್ತಿರುವಿರಿ? ಎಂದು ಕೇಳಿದೆ. ಖಾಸಗಿ
ಪಾಠ ಮುಗಿಸಿ ಶಾಲೆಗೆ ಹೊಗುತ್ತಿರುವುದಾಗಿ ತಿಳಿಸಿದರು. ಅವರು ತಾವು ನಾನು ಹೋಗಲಿರುವ
ಹೈಸ್ಕೂಲಿನಲ್ಲಿ ಓದುತ್ತಿರುವುದಾಗಿ ತಿಳಿಸಿದರು. ಆ ಶಾಲೆ ಹೇಗಿದೆ, ನಾನೂ
ಅಲ್ಲಿಗೆ ಹೋಗಬೇಕಾಗಿದೆ ಎಂದೆ. ಅವರು ನನ್ನನ್ನು ಮಿಕಿ ಮಿಕಿ ನೋಡಿದರು. ನೀನೂ ಆ ಶಾಲೆಗೆ
ಹೊರಟಿರುವೆಯಾ ಎಂದರು.
ನಾನು ತಲೆಯಾಡಿಸಿದೆ. `ಅಲ್ಲಿಗೆ ಸೇರಬೇಡ. ನೀನು ಹಾಳಾಗಿ
ಹೋಗುತ್ತೀಯ. ಯಾರದೋ ಮಾತು ಕೇಳಿ ನಾವು ಅಲ್ಲಿ ಸೇರಿದೆವು. ಅಲ್ಲಿ ಪಾಠಗಳೆ ನಡೆಯುವುದಿಲ್ಲ’
ಎಂದರು.
ನಾನು ಕೂತೂಹಲದಿಂದ, ಏಕೆ ಹಾಗೆ ಹೇಳುವಿರಿ? ಎಂದೆ.
`ಆ ಶಾಲೆ ಶುರುವಾಗಿ ಮೂರು ವರ್ಷವಾಯಿತು ನಾವು ಈಗ ಎಸ್‌ಎಸ್‌ಎಲ್‌ಸಿಗೆ
ಬಂದಿದ್ದೇವೆ. ಅಲ್ಲಿ ಗಣಿತ ಮತ್ತು ವಿಜ್ಞಾನದ ಮೇಷ್ಟರೆ ಇಲ್ಲ. ನಾವು ನಗರದಲ್ಲಿ ಖಾಸಗಿ
ಪಾಠಕ್ಕೆ ಹೊಗುತ್ತೇವೆ. ಹಣ, ಸಮಯ ಹಾಳು. ಸುಮ್ಮನೆ ಇಲ್ಲಿಗೆ ಯಾಕೆ
ಹೋಗುವೆ. ಹೇಗೂ ನಿಮ್ಮ ಊರಿಗೆ ಪಟ್ಟಣ ಹತ್ತಿರವಿದೆ ಅಲ್ಲಿ ದೊಡ್ಡ ಶಾಲೆ ಸೇರು’ ಎಂದು ಸಲಹೆ ನೀಡಿದರು.
ನಾನು ಮುಗಳುನಗೆ ನಕ್ಕು ಸುಮ್ಮನೆ ತಲೆಯಾಡಿಸಿದೆ.
ಅವರು ನನ್ನ ಆಕಾರ ನೋಡಿ ನಾನು ಹೈಸ್ಕೂಲು ಸೇರಲು ಹೊರಟ
ಹುಡುಗ ಎಂದುಕೊಂಡಿದ್ದರು. ನಾನು ಶಾಲೆಯ ಕಛೇರಿಗೆ ಹೋಗಿ ವರದಿ ಮಾಡಿಕೊಂಡೆ. ಅಲ್ಲಿನ ಹೆಡ್
ಮೇಷ್ಟ್ರು ರಾಯಸಂ ವಂಶಸ್ಥರು. ಚೆನ್ನಾಗಿ ಓದಿಕೊಂಡವರು. ಉತ್ತಮ ಶಿಕ್ಷಕರು, ಅವರು ವಿಶ್ವಾಸದಿಂದ ಮಾತನಾಡಿಸಿದರು.
ಅಲ್ಲಿನ ಪರಿಸ್ಥಿತಿಯನ್ನು ತಿಳಿಸಿದರು. ಅಲ್ಲಿ ಗಣಿತ ಮತ್ತು ವಿಜ್ಞಾನ ಪಾಠ ಕುಂಠಿತವಾಗಿದೆ
ಆಸಕ್ತಿವಹಿಸಿ ಸುಧಾರಿಸಿ ಎಂದು ಹೇಳಿದರು. ಅಲ್ಲದೆ ನಾನು ಹೊಸಬನೆ ಅದರೂ ಎಸ್‌ಎಸ್ಎಲ್‌ಸಿ ಗಣಿತ
ಪಾಠ ಮಾಡುವ ಹೊಣೆ ನೀಡಿದರು.
ಮೊದಲನೆ ಪಿರಿಯಡ್‌ನಲ್ಲೆ ಎಸ್ಎಸ್‌ಎಲ್‌ಸಿ ತರಗತಿ.
ನನ್ನನ್ನು ತರತಿಗೆ ಕರೆದುಕೊಂಡು ಹೋಗಿ ಪರಿಚಯ ಮಾಡಿಸಿದರು. `ನಿಮಗೆ ಈವರೆಗೆ ಪಾಠಕ್ಕೆ ತೊಂದರೆ
ಆಗಿತ್ತು. ಇನ್ನು ಆ ಚಿಂತೆ ಇಲ್ಲ ಅದೃಷ್ಟದಿಂದ ಗಣಿತಕ್ಕೆ ಶಿಕ್ಷಕರು ಬಂದಿರುವರು.
ಬೆಂಗಳೂರಲ್ಲಿ ಕಲಿತವರು. ಅವರೊಂದಿಗೆ ಸಹಕರಿಸಿ ಚೆನ್ನಾಗಿ ಕಲಿಯಿರಿ. ಅವರ ಅನುಭವದ ಲಾಭ
ಪಡೆಯಿರಿ’ ಹೀಗೆ ಹೇಳಿ ಹೊರಟರು.
ನಾನು ನನ್ನ ಪರಿಚಯ ಮಾಡಿಕೊಂಡೆ. ಎಲ್ಲರೂ ತಮ್ಮ ತಮ್ಮ
ಪರಿಚಯ ಮಾಡಿಕೊಳ್ಳಲು ಹೇಳಿದೆ. ನನಗೆ ಬಸ್ಸಿನಲ್ಲಿ ಸಿಕ್ಕ ಪಡ್ಡೆ ಹುಡುಗರು ಅಲ್ಲಿಯೆ ಇದ್ದರು.
ಅವರು ಎದ್ದು ನಿಂತು ತಮ್ಮ ತಮ್ಮ ಹೆಸರು ಹೇಳಿದರು. ತರಗತಿಯಲ್ಲಿ ಓಬಯ್ಯ, ಬೋರಯ್ಯ, ಜೋಗಯ್ಯ,
ಚೌಡಪ್ಪ ಎಂಬ ಹೆಸರಿನ ಹುಡುಗರು ಹೆಚ್ಚು ಇದ್ದರು. ಅಲ್ಲಿ ನಾಯಕ ಜನಾಂಗದವರೆ
ಬಹಳ. ಹೊಸದಾಗಿ ಹೈಸ್ಕೂಲ್ ಶುರುವಾದಾಗ ಶಾಲೆ ಬಿಟ್ಟವರನ್ನೂ ಕರೆದುಕೊಂಡು ಬಂದು ದಾಖಲು
ಮಾಡಿದ್ದರು. ಅದಕ್ಕೆ ವಯಸ್ಸಿನಲ್ಲೂ ಆಕಾರದಲ್ಲೂ ನನಗಿಂತ ದೊಡ್ಡ ವಿದ್ಯಾರ್ಥಿಗಳಿಗೆ ಪಾಠ
ಮಾಡುವ ಯೋಗ ನನಗೆ ಬಂದಿತು.
ಮೊದಲೆ ಪರಿಚಯವಾಗಿದ್ದ ಹುಡುಗರತ್ತ ನೋಡಿದೆ, `ನಿಮ್ಮ ಮಾತಿನಂತೆ ಬೇರೆ ಶಾಲೆಗೆ
ಹೋಗಲು ಆಗಲಿಲ್ಲ. ಅದಕ್ಕೆ ತಪ್ಪು ತಿಳಿಯಬಾರದು. ಇಲ್ಲಿ ನನ್ನ ಅಗತ್ಯವಿದೆ. ನಾನು ಇಲ್ಲಿ ಪಾಠ
ಕೇಳಲು ಬಂದಿಲ್ಲ. ಪಾಠ ಮಾಡಲು ಬಂದಿರುವೆ. ಇನ್ನು ನಿಮಗೆ ಯಾವುದೆ ಸಮಸ್ಯೆ ಇರದು’ ಎಂದು ನಗು ನಗುತ್ತಾ ಸಮಜಾಯಿಷಿ ನೀಡಿದೆ. ಅವರೆಲ್ಲ ಸಂಕೋಚದಿಂದ ತಲೆ ತಗ್ಗಿಸಿ
ಕುಳಿತಿದ್ದರು.
ಆ ವರುಷ ನಲವತ್ತು ಹುಡುಗರಲ್ಲಿ ಇಬ್ಬರೆ ಪಾಸಾದರು.
ಆರತಿಗೆ ಒಬ್ಬಳು ಮತ್ತು ಕೀರುತಿಗೆ ಒಬ್ಬ ಎಂಬಂತೆ ಒಬ್ಬ ಹುಡುಗಿ ಒಬ್ಬ ಹುಡುಗ ಮಾತ್ರ
ಪಾಸಾಗಿದ್ದರು. ಆದರೆ ಗಣಿತದಲ್ಲಿ ೨೦ಕ್ಕೂ ಹೆಚ್ಚು ಜನ ಪಾಸಾಗಿದ್ದರು. ವಿಜ್ಞಾನದಲ್ಲೆ
ನಪಾಸಾದವರು ಬಹಳ. ಅದಕ್ಕೆ ಮುಂದಿನ ವರ್ಷ ಗಣಿತ ಮತ್ತು ವಿಜ್ಞಾನ ಎರಡೂ ವಿಷಯಗಳನ್ನು ಎಸ್‌ಎಸ್ಎಲ್‌ಸಿಗೆ
ನಾನೆ ಪಾಠ ಮಾಡಬೇಕಾಯಿತು. ವರ್ಷದಿಂದ ವರ್ಷಕ್ಕೆ ಫಲಿತಾಂಶ ಸುಧಾರಿಸತೊಡಗಿತು. ನನಗೂ ಮಕ್ಕಳ
ಅಕ್ಕರೆ ಬೊಗಸೆಗಟ್ಟಲೆ ಸಿಕ್ಕಿತು.
ಕೆಲಸಕ್ಕೆ ಸೇರಿದ ಎರಡು ತಿಂಗಳಲ್ಲೆ ನನ್ನ ಪದವಿಯ
ಫಲಿತಾಂಶ ಬಂದಿತು. ನಾನು ತರಬೇತಿ
ರಹಿತ ಪದವೀಧರ ಶಿಕ್ಷಕನಾಗಿ ಬಡ್ತಿ ಪಡೆದೆ. ನನಗೆ ಅಲ್ಲಿ ದೊರೆತ ಅನುಭವ ಅಪಾರ. ಹೊಸದಾಗಿ
ಕೆಲಸಕ್ಕೆ ಸೆರಿದರೂ ಹೆಚ್ಚಿನ ಹೊಣೆ ಲಭಿಸಿತು. ಮಾಡಿದ ಪಾಠವನ್ನೆ ಮೆಚ್ಚಿ ಬೆನ್ನುತಟ್ಟುವ
ಶಾಲಾ ಮುಖ್ಯಸ್ಥರು, ಅವರು ಮದರಾಸಿನಲ್ಲಿ ಓದಿದವರು, ಸಾಹಿತ್ಯಾಸಕ್ತರು. ನನಗೆ ಓದುವ ಗೀಳು ಇರುವುದು ಅರಿತು ತಮ್ಮಲ್ಲಿನ ಪುಸ್ತಕಗಳನ್ನು
ಓದಲು ಕೊಡತೊಡಗಿದರು. ವಿಶೇಷವಾಗಿ ಅವರಲ್ಲಿ ಇಂಪ್ರಿಂಟ್ ಎಂಬ ನಿಯತಕಾಲಿಕದ ದೊಡ್ಡ ಸಂಗ್ರಹವೆ
ಇತ್ತು. ಅದು ಒಂದು ಇಂಗ್ಲಿಷ್ ಸಾಹಿತ್ಯ ಪತ್ರಿಕೆ. ಪ್ರತಿ ಸಂಚಿಕೆಯಲ್ಲೂ ಎರಡು ಮೂರು ಕಥೆಗಳು
ಮತ್ತು ಕಾದಂಬರಿ ಇರುತಿದ್ದವು. ಅದರಿಂದಾಗಿ ನನಗೆ ಹೊಸ ಅವಕಾಶ ಸಿಕ್ಕಿತು. ಜತೆಗೆ ಅವರು
ರೀಡರ್ಸ್ ಡೈಜೆಸ್ಟ್ ತರಿಸುತಿದ್ದರು. ನಾನು ಅವನ್ನೆಲ್ಲ ಕೊಂಡು ಓದುವುದಂತೂ ಕನಸಿನ ಮಾತು.
ಅವರಿಂದಾಗಿ ನನಗೆ ಇಂಗ್ಲಿಷ್ ಸಾಹಿತ್ಯದ ಆಳ ಅಗಲಗಳ ಪರಿಚಯವಾಯಿತು.
ಅಂತೂ ತಮ್ಮ ಮಕ್ಕಳಿಗೆ ಎಲ್ಲ ವಿಷಯದಲ್ಲೂ ಪಾಠ
ನಡೆಯುವುದೆಂಬ ನೆಮ್ಮದಿ ಪಡೆದ ಪೋಷಕರು ತೋರುವ ಆದರ ಗೌರವ ಮನತುಂಬಿಸಿತು. ಶಾಲಾ ವೇಳೆಯಾದ ಮೇಲೆ
ಮನೆಪಾಠ ಮಾಡಬೇಕೆಂದು ಒತ್ತಡವೂ ಬಂದಿತು. ಅದಕ್ಕೆ ಹೆಡ್ ಮಾಸ್ಟರ್ ಅವರ ಒತ್ತಾಸೆಯೂ ಇತ್ತು.
ಫಲಿತಾಂಶ ಸುಧಾರಿಸಿದರೆ ಶಾಲೆಗೆ ಕೀರ್ತಿ, ಅವರಿಗೂ ಹೆಸರು. ಕನಿಷ್ಠ ಪಕ್ಷ ಎಸ್‌ಎಸ್‌ಎಲ್‌ಸಿ
ಮಕ್ಕಳಿಗಾದರೂ ಸಹಾಯ ಮಾಡುವ ದೃಷ್ಟಿಯಿಂದ ಪಾಠ ಮಾಡಲೆಬೇಕೆಂದು ಒತ್ತಾಯ ಬಂದಿತು. ಅಲ್ಲಿಯೆ
ಹುಡುಗರು ಒಂದು ರೂಮು ಮಾಡಿಕೊಟ್ಟರು. ಶಾಲೆ ಬಿಟ್ಟ ಮೇಲೆ ಐದುವರೆಯಿಂದ ರಾತ್ರಿ ಏಳುವರೆವರೆಗೆ
ಮನೆಪಾಠ ಮಾಡಿ ನಂತರ ಊರಿಗೆ ಹೋಗುತಿದ್ದೆ. ಶನಿವಾರ ಭಾನುವಾರ
ಆ ಮಕ್ಕಳೆ ನಮ್ಮ ಊರಿಗೆ ಬಂದು ಪಾಠ ಹೇಳಿಸಿಕೊಂಡು ಹೊಗುತಿದ್ದರು. ಮೇಲಾದಾಯವೂ ಬರತೊಡಗಿತು.
ಲೆಕ್ಕದ ಮೇಷ್ಟ್ರು ಅಂದರೆ ರೊಕ್ಕದ ಮೇಷ್ಟ್ರು, ಅವರಿಗೇನು ಕಡಿಮೆ
ಎನ್ನುವಂತಾಯಿತು.
|
|||||||||||||||||||||||||||||||||||||||||||||||||||||||
ಹಾಸ್ಟೆಲಿನಲ್ಲಿ ಹರತಾಳ
ಕಾಲೇಜಿಗೆ ಸೇರಿದ ಮಾರನೆದಿನ
ಬೆಳಗಿನ ಏಳು ಗಂಟೆಗೆ ಗಣನಗಣ ಗಂಟೆ ಕೇಳಿಸಿತು.. ಎಲ್ಲರು ಗಬಗಬನೆ ಡೈನಿಂಗ್ ಹಾಲ್‌ಗೆ
ಹೋಗುತಿದ್ದರು. ನಾನು ಅವರ ಜತೆ ಹೋದೆ. ಪ್ರತಿಯೊಬ್ಬರೂ ಕೈನಲ್ಲಿ ಲೋಟ ಹಿಡಿದಿದ್ದರು. ನಂತರ
ಗೊತ್ತಾಯಿತು. ಅದು ಕಾಫಿಗಂಟೆ ಎಂದು. ನಾನು ಕಾಫಿ ಕುಡಿಯುವುದಿಲ್ಲ ಎಂದು ಮೊದಲ ದಿನವೆ ಹೇಳಿದೆ.
ಮಾರನೆ ದಿನ ಪುನಃ ಬೆಲ್ ಆದ ತಕ್ಷಣ ನನಗೆ ಹೋಗುವ ಅಗತ್ಯ ಇರಲಿಲ್ಲ. ಆದರೆ ನನ್ನ ರೂಮು ಮೇಟುಗಳು
ಬಿಡಲಿಲ್ಲ.
ನೀನು ಕುಡಿದರೆ ಕುಡಿ, ಬಿಟ್ಟರೆ ಬಿಡು. ಆದರೆ ಬರಲೆಬೇಕು,
ಎಂದು ಒತ್ತಾಯ ಮಾಡಿದರು. ಸರಿ ಅವರ ಸಮಾಧಾನಕ್ಕೆ ಹೋದೆ. ಕಾಫಿ ಕಡ್ಡಾಯ ಮಾಡಿ
ಹಾಕಿಸಿದರು. ನಂತರ ಒಬ್ಬ ಗೆಳೆಯ ತನ್ನದು ಕುಡಿದಾದ ಮೇಲೆ ನನ್ನ ಕಾಫಿಯನ್ನೂ ಕುಡಿದ. ಆಗ ಅವರ
ಒತ್ತಾಯದ ಅರ್ಥವಾಯಿತು. ಅದರಿಂದ ಗೆಳೆಯರ ಬಳಗ ಹೆಚ್ಚಿತು.
ಅಲ್ಲಿ ಹೋದ ಹೊಸದರಲ್ಲಿ ಭಾಷಾ
ವಿಭಿನ್ನತೆಯಿಂದ ನಗೆ ಕಾರಂಜಿ ಚಿಮ್ಮುತಿತ್ತು. ಒಂದು ರಾತ್ರಿ ಊಟವಾದ ನಂತರ ಹಾಸಿಗೆಯ ಮೇಲೆ
ಒರಗಿದೆ. ನಮ್ಮ ಕೋಣೆಯ ಸಹ ನಿವಾಸಿ,
`ಏನ್ರೀ
ಹಾಗೆ ಮಲುಗುತ್ತಿರುವಿರಿ, ಹಾಸಿಗೆ ಒದರಿ ಮಲಗಿ’ ಎಂದ.
ನನಗೆ ಹಾಸಿಗೆಯನ್ನು ಹೇಗೆ
ಒದರುವುದು ಎಂದು ತಿಳಿಯಲಿಲ್ಲ. ನಮಗೆ ಜನರನ್ನು ಒದರುವುದು ಗೊತ್ತು. ನಮ್ಮಲ್ಲಿ ಒದರು ಎಂದರೆ
ಕೂಗಿ ಕರೆ ಎಂಬ ಅರ್ಥವಿದೆ.
ಆದರೂ ಬುದ್ಧಿ ಉಪಯೋಗಿಸಿ, `ನೀವು ಹಾಸಿಗೆ ಒದರಿದಿರಾ?’ ಎಂದೆ.
ಆದರೂ ಬುದ್ಧಿ ಉಪಯೋಗಿಸಿ, `ನೀವು ಹಾಸಿಗೆ ಒದರಿದಿರಾ?’ ಎಂದೆ.
ಈಗ ಒದರುವೆ, ಎನ್ನುತ್ತಾ ಹಾಸಿಗೆ ಝಾಡಿಸಿದ. ಆಗ
ನನಗೆ ತಿಳಿಯಿತು ಒದರು ಎಂಬ ಪದಕ್ಕೆ ಹಳೆ ಮೈಸೂರಿನಲ್ಲಿ ಝಾಡಿಸು ಎಂಬ ಅರ್ಥವಿದೆ ಎಂದು ಅವನಿಗೆ
ವಿಷಯ ತಿಳಿಸಿದಾಗ ಬಿದ್ದುಬಿದ್ದು ನಕ್ಕ.
ಇನ್ನೊಂದು ಸಾರಿ ಅಪ್ಪ
ಅಮ್ಮನನ್ನು ಕುರಿತು ಮಾತನಾಡುವ ರೀತಿ ಚರ್ಚೆಯಾಯಿತು. ಅಪ್ಪ ಬಂದ, ಅಮ್ಮ ಕೊಟ್ಟಳು, ಎಂದು ನಾವುಗಳು ಆಡುವ ಮಾತು ಅನಾಗರಿಕ ಎಂಬುದು ಅವರ ವಾದ.. ಆದರೆ ಅಲ್ಲಿ ಹಾಗಲ್ಲ.
ಹಿರಿಯರಿಗೆಲ್ಲ ಬಹುವಚನ ಪ್ರಯೋಗ. ತಂದೆಯವರು ಹೇಳಿದರು. ತಾಯಿ ಕೊಟ್ಟರು ಇತ್ಯಾದಿ
ಹಿರಿಯರೆಂದರೆ ನಿಮಗೆ ಗೌರವ
ಇಲ್ಲ, ಎಂದು
ಆಕ್ಷೇಪಿಸಿದರು. ಒಂದುಕ್ಷಣ ನನಗೂ ನಿಜ ಎನಿಸಿತು. ತುಸು ಬೇಸರವಾಯಿತು. ಆದರೆ ಯೋಚನೆ ಮಾಡಿದಾಗ
ಹೊಳೆಯಿತು.
ಅವರನ್ನು ಕೇಳಿದೆ. ನೀವು
ದೇವರ ಪ್ರಾರ್ಥನೆ ಹೇಗೆ ಮಾಡುವಿರಿ?
`ದೇವರೇ
ಆರೋಗ್ಯ ಕೊಡು, ದೇವಿ ಸಂಪತ್ತು ನೀಡು ಇತ್ಯಾದಿ’ ಎಂದರು.
ಆಗ ಚಕ್ಕನೆ ಕೇಳಿದೆ. ನೀವು
ದೇವರಿಗೆ ಏಕವಚನ ಬಳಸುವಿರಿ ಅಲ್ಲವೆ? ಎಂದೆ. ಅವರು ಅಹುದು ಎಂದರು.
ನಾನು ಹೇಳಿದೆ. ಅಪ್ಪ ಅಮ್ಮ
ನಮಗೆ ದೇವರು, ಅದಕ್ಕೆ
ಏಕವಚನ ಬಳಸುವುದು. ಅದು ಆತ್ಮಿಯತೆ, ಅಗೌರವದ ಅಲ್ಲ, ಎಂದಾಗ ಅವರ ಟೀಕೆ ನಿಂತಿತು.
ಅನ್ಯಭಾಷೆಯ ಬಳಕೆ ಕೆಲವು ಸಲ
ಅನರ್ಥಕ್ಕೆ ಕಾರಣವಾಗುತ್ತದೆ. ಒಂದು ಚರ್ಚಾ ಸ್ಪರ್ಧೆಯಲ್ಲಿ ಒಬ್ಬ ಆಗ ಪ್ರಖ್ಯಾತವಾಗಿದ್ದ ಲಾಲ್
ಬಹದ್ದೂರ್ ಶಾಸ್ತ್ರಿಯವರ. `ಜೈ ಜವಾನ್
ಜೈ ಕಿಸಾನ್’ ಘೋಷಣೆ ಬಳಸಿದ. ನಂತರ ಮಾತನಾಡಿದ ಹಿಂದಿ ಬಾರದ ಹುಡುಗ.
ನಮ್ಮ ದೇಶದ ಬೆನ್ನೆಲುಬಾದ ರೈತನನ್ನು ಜವಾನರ ಜತೆ ಸೇರಿಸಿ ಜೈ ಎಂದಿರುವುದನ್ನು ಖಂಡಿಸಿದ. ಪಾಪ,
ಅವನಿಗೆ ಜವಾನ್ ಎಂದರೆ ಸೈನಿಕ ಎಂಬುದು ಗೊತ್ತಿರಲೆ ಇಲ್ಲ.
ನಮ್ಮ ಸಹನಿವಾಸಿಯಾದ ತೆಲಗು ಹುಡುಗನೊಬ್ಬ ಭಾಷಣದಲ್ಲಿ ಗಾಂಧೀಜಿಯವರು ದೊಡ್ಡ ಜಾತೀಯ ನಾಯಕರು ಎಂದ.
ನಾವೆಲ್ಲ ಕಣ್ಣುಕಣ್ಣು ಬಿಟ್ಟೆವು. ಬಹು ಸಂಕುಚಿತ ದೃಷ್ಟಿ
ಎಂದುಕೊಂಡೆವು. ಆದರೆ ನಂತರ ತೆಲುಗಿನಲ್ಲಿ ಜಾತೀಯ ಎಂದರೆ ರಾಷ್ಟ್ರೀಯ ಎಂಬುದು ನಂತರ ಗೊತ್ತಾಯಿತು.
ಹಾಸ್ಟೆಲ್‌ನಲ್ಲಿ ಪಿಯುಸಿ, ಡಿಪ್ಲೊಮಾ, ಬಿಇ
ಮತ್ತು ಪದವಿ ವಿದ್ಯಾರ್ಥಿಗಳೂ ಸುಮಾರು ೧೦೦ ಜನ ಇದ್ದರು. ವಸತಿ ಚೆನ್ನಾಗಿಯೆ ಇತ್ತು. ಬೆಳಗ್ಗೆ
ಕಾಫಿ, ೯ಕ್ಕೆ ಊಟ ನಂತರ ರಾತ್ರಿ ೮ ಗಂಟೆಗೆ ಊಟ ಕೊಡುತಿದ್ದರು. ಅಲ್ಲಿ
ಅಂತಹ ವಿಶೇಷ ಕಟ್ಟು ಕಟ್ಟಲೆಗಳು ಇರಲಿಲ್ಲ. ವಾರ್ಡನ್ ಆಗೀಗ ಬಂದು ಹೋಗುತಿದ್ದರು. ಆಂಧ್ರ
ವಿದ್ಯಾರ್ಥಿಗಳು ಸಾಕಷ್ಟು ಸಂಖ್ಯೆಯಲ್ಲಿಯೆ ಇದ್ದರು. ಅವರೆಲ್ಲ ಸೇರಿ ಆಂಧ್ರಪ್ರಭ ಎಂಬ
ವಾರಪತ್ರಿಕೆ ತರಿಸುವರು. ಮತ್ತು ಘಂಟಸಾಲ ಅಭಿಮಾನಿಗಳ ಸಂಘ ಮಾಡಿಕೊಂಡಿದ್ದರು. ವಾರಕ್ಕೊಂದು ಸಲ
ಎಲ್ಲರೂ ಯಾವುದಾದರು ಒಂದು ರೂಮಿನಲ್ಲಿ ಸೇರಿ ತೆಲಗು ಹಾಡುಗಳನ್ನು ಹಾಡುತಿದ್ದರು.
ಕನ್ನಡ ಹಾಡುಗಳನ್ನು
ಸುಮಧುರವಾಗಿ ಹಾಡುವವರೂ ಒಬ್ಬಿಬ್ಬರಿದ್ದರು. ಕಾರ್ಯಕ್ರಮದಲ್ಲಿ ಅವನ ಹಾಡಿಗೆ ಬಹಳ ಬೇಡಿಕೆ
ಇತ್ತು. ಎರಡು ಭಾಷೆಯವರಲ್ಲಿ ಸ್ಪರ್ಧೆ ಇದ್ದರೂ ಒಂದು ವಿಷಯದಲ್ಲಿ ಒಮ್ಮತ ಇತ್ತು. ನಾವೆಲ್ಲ
ಬುಧುವಾರ ರಾತ್ರಿ ೮ ಗಂಟೆಗೆ ರೇಡಿಯೋ ಸಿಲೋನಿನಲ್ಲಿ ಬಿತ್ತರವಾಗುವ ಬಿನಾಕ ಗೀತಮಾಲೆಯನ್ನು
ತಪ್ಪದೆ ಕೇಳುತಿದ್ದೆವು. ಹಾಸ್ಟೆಲಿನಲ್ಲಿ ರೇಡಿಯೋ ಇರಲಿಲ್ಲ. ಟ್ರಾನ್ಸಿಟರ್ ವಿರಳ. ನಾವೆಲ್ಲ
ಹಾಸ್ಟೆಲಿನ ಕಾಂಪೌಂಡು ಗೋಡೆಯ ಮೇಲೆ ಕುಳಿತು ಪಕ್ಕದ ಮನೆಯವರು ಹಾಕಿರುವ ರೇಡಿಯೋದಲ್ಲಿ ಬರುವ
ಹಾಡುಗಳನ್ನು ಕೇಳುತಿದ್ದೆವು. ಅವರಿಗೆ ಯಾವುದೆ ಕಿರಿಕಿರಿಯಾಗದಂತೆ ಎಚ್ಚರ ವಹಿಸುತಿದ್ದೆವು.
ಅವರು ರೇಡಿಯೋ ಹಾಕಿದರೆ ತಾನೆ ನಮಗೆ ಹಾಡು ಕೇಳುವ ಅವಕಾಶ. ರಾತ್ರಿ ಎಂಟರಿಂದ ಒಂಬತ್ತರವರೆಗೆ
ಯಾರೆ ಬಂದರೂ ಅವರಿಗೆ ಕಾಂಪೌಂಡಿನ ಗೋಡೆ ಕಾಣುತ್ತಿರಲಿಲ್ಲ. ಬದಲು ಅದರ ಮೇಲೆ ಕೋತಿಗಳಂತೆ ಏರಿ
ಕುಳಿತ ಹುಡುಗರೆ ಇರುತಿದ್ದರು. ಎಲ್ಲರೂ ಅಮೀನ್ ಸಹಾನಿಯ ದನಿ ಎಂದರೆ ಮುಗಿಬೀಳುತಿದ್ದೆವು.
ಪರೀಕ್ಷೆ ಸಮಯ ಹೊರತುಪಡಿಸಿ ಉಳಿದೆಲ್ಲ ಬುಧವಾರ ರಾತ್ರಿ ಇದು ಸಾಮಾನ್ಯ.
ಮೊದಲ ವರ್ಷದ ಹಾಸ್ಟೆಲ್ ಡೇ
ಅಂಗವಾಗಿ ಭಾಷಣ ಸ್ಪರ್ಧೆ ಇತ್ತು. ನಾನೂ ಹೆಸರು ಕೊಟ್ಟೆ. ಆದಿನ ಹಾಲಿನಲ್ಲಿ ಕಾರ್ಯಕ್ರಮ ಇತ್ತು.
ಸರಿಯಾಗಿ ತಯಾರಿ ಮಾಡಿಕೊಂಡಿದ್ದೆ. ನನ್ನದೆ ಎರಡನೆ ಹೆಸರು. ಮೊದಲನೆಯವ ಬಂದು ಸುಮಾರಾಗಿ ಮಾತನಾಡಿದ.
ನಂತರ ನನ್ನ ಸರದಿ ಬಂತು. ಹೋಗಿನಿಂತೆ ಕಾಲುಗಡ ಗಡ ನಡುಗತೊಡಗಿತು. ಉರು ಹೊಡೆದಿದ್ದು
ಮರೆತುಹೋಯಿತು. ಒಂದು ನಿಮಿಷ ಹಾಗೆಯೆ ನಿಂತೆ. ನಂತರ `ಥೂ ತ್ತೇರಿ’ ಎಂದು ಅಲ್ಲಿಂದ ಕಾಲು
ಕಿತ್ತೆ. ಸಭೆಯಲ್ಲಿ ನಗುವೆ ನಗು. ಅದಾದ ನಂತರ ಸುಮಾರು ದಿನ ನನ್ನನ್ನು ಕಂಡಾಗ `ಥುತ್ ತ್ತೇರಿ’ ಎಂದೆ ಅಣಕಿಸುತಿದ್ದರು.
ನನಗೆ ತುಂಬ ಬೇಸರವಾಯಿತು.
ಮುಂದಿನ ವರ್ಷ ಯಾವುದೆ ಸಮಾರಂಭ ಬಂದರೂ ಭಾಗವಹಿಸಿ ಸ್ಟೇಜ್ ಫಿಯರ್ ಕಳೆದುಕೊಂಡೆ. ಅಂತರ್
ಹಾಸ್ಟೆಲುಗಳ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸತೊಡಗಿದೆ. ಎರಡನೆ ವರ್ಷದ ಹಾಸ್ಟೆಲ್ ಡೇ ಸಮಯದಲ್ಲಿ
ಎಲ್ಲ ಸಾಹಿತ್ಯಕ ಸ್ಪರ್ಧೆಗಳಲ್ಲಿ ಬಹುಮಾನ ಪಡೆದೆ. ಆಗ ಬಹುಮಾನದ ಮೊತ್ತ ಮೊದಲನೆಯ ಸ್ಥಾನಕ್ಕೆ ೫
ರೂಪಾಯಿ ಎರಡನೆಯ ಸ್ಥಾನಕ್ಕೆ ೩ ಮತ್ತು ಮೂರನೆ ಸ್ಥಾನಕ್ಕೆ ೧ ರೂಪಾಯಿ ಎಂದು ನಿಗದಿ ಮಾಡಿದ್ದರು.
ನನಗೆ ಸುಮಾರು ನಲವತ್ತು ರೂಪಾಯಿ ಬಹುಮಾನ ಬಂದಿತು. ಆ ಮೊತ್ತಕ್ಕೆ ನಾನು ಕ್ಯಾಲುಕಲಸ್ ಪುಸ್ತಕ
ತೆಗೆದುಕೊಂಡ ನೆನಪು. ಇದರಿಂದ ನಾನು ಹಾಸ್ಟೆಲ್‌ನಲ್ಲಿ ಚಿರಪರಿಚಿತನಾದೆ. ಪರಿಣಾಮವಾಗಿ ಮರುವರ್ಷ
ಸಂಘದ ಉಪಾಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾದೆ.
ಅದೆ ನನ್ನ ಸಮಸ್ಯೆಗೆ
ಕಾರಣವಾಗಬಹುದೆಂಬ ಕಲ್ಪನೆ ನನಗಿರಲಿಲ್ಲ. ಸಂಘದ ಪದಾಧಿಕಾರಿಗಳು ಸಾಧಾರಣವಾಗಿ ಆಡಳಿತ ವರ್ಗದ
ಪರವಾಗಿರಬೇಕೆಂಬುದು ಅಲಿಖಿತ ನಿಯಮ. ಅವರು ವಿದ್ಯಾರ್ಥಿಗಳ ನಡುವೆ ಇರುವ `ಟ್ರೋಜನ್ ಕುದುರೆ’. ಆಡಳಿತ ಮಂಡಳಿಯ ಒಬ್ಬರ ಮಗಳ ಮದುವೆಯನ್ನು ನಮ್ಮ ಹಾಸ್ಟಲ್‌ನಲ್ಲಿ ಮಾಡುವರೆಂದು ಮೂರು
ದಿನ ಎರಡು ಕೋಣೆಯಲ್ಲಿ ಎಲ್ಲರ ಸಾಮಾನು ಇಟ್ಟುಕೊಳ್ಳಬೇಕೆಂದು ವಿದ್ಯಾರ್ಥಿಗಳ ಸಭೆ ಕರೆದು
ತಿಳಿಸಿದರು. ಮೇಲಾಗಿ ಆ ಮೂರುದಿನವೂ ನಮಗೆಲ್ಲ ಭೂರಿ ಭೋಜನ ಸಿಗುವುದೆಂಬ ಆಸೆ ತೋರಿಸಿದರು.
ಕೆಲವರು ಅದಕ್ಕೆ ತಲೆದೂಗಿದರು. ಆದರೆ ನನಗೆ ಅದು ಸರಿ ಎನಿಸಲಿಲ್ಲ. ಮದುವೆ ಊಟ ಸಿಗುವುದೆಂದು
ಮೂರು ದಿನ ನಾವೆಲ್ಲ ಓದು ಬರಹ ಬಿಡುವುದು ಅಸಮಂಜಸ ಎನಿಸಿತು. ನಾನು ವಿದ್ಯಾರ್ಥಿಗಳ
ಪ್ರತಿನಿಧಿಯಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದೆ. ಅದುವರೆಗೂ ಸುಮ್ಮನಿದ್ದ
ಬಹುತೇಕರು ದನಿಗೂಡಿದರು. ಪರಿಣಾಮವಾಗಿ ಅವರಿಗೆ ಆಡಳಿತ ಮಂಡಳಿಗೆ ನನ್ನ ಮೇಲೆ ಮುನಿಸು ಮೂಡಿತು.
ಅಲ್ಲದೆ ಅಡುಗೆಗೆ ಬಳಸುವ
ತರಕಾರಿಯ ಬಗ್ಗೆ ಮೊದಲಿನಿಂದಲೂ ತಕರಾರು ಇತ್ತು. ಎಷ್ಟೊ ಸಲ ಹುಡುಗರಿಗೆ ಸಾಂಬಾರಿನಲ್ಲಿ ಹುಳುಗಳು
ಸಿಗುತಿದ್ದವು. ಕೆಲವರು ಅಸಹ್ಯ ಮಾಡಿಕೊಂಡು ಊಟ ಬಿಟ್ಟರೆ ಹಲವರು ಓಹೋ ಇವತ್ತು ನಾನ್‌ವೆಜಿಟೇರಿಯನ್
ಊಟ ಎಂದು ಕುಶಾಲು ಮಾಡುತ್ತಾ ಅದನ್ನು ಎತ್ತಿ ಇಟ್ಟು ಊಟ ಮುಂದುವರಿಸುವರು. ಹಿಂದಿನ
ಪ್ರತಿನಿಧಿಗಳು ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಆಸಕ್ತಿ ತೋರಿರಲಿಲ್ಲ.
ಈ ವಿಷಯ ನನ್ನ ಗಮನಕ್ಕೂ
ಬಂದಿತು. ಒಂದೆರಡು ಸಾರಿ ಅಡುಗೆಯವನಿಗೆ ಹೇಳಿದೆ. ಆದರೆ ಅವನು ಇದು ಕಾರ್ಯದರ್ಶಿಯವರ ಕೆಲಸ. ಅವರು
ತಂದದ್ದು ಬೇಯಿಸಿ ಹಾಕುವೆ. ಬೇಕಾದರೆ ತಿನ್ನಿ ಬೇಡವಾದರೆ ಬಿಡಿ ಎಂದು ಉದ್ಧಟತನದಿಂದ ಉತ್ತರಿಸಿದ.
ಕಾರ್ಯದರ್ಶಿಯವರನ್ನು ವಿಚಾರಿಸಿದರೆ, `ಇಷ್ಟು ದಿನ ಇಲ್ಲದಿದ್ದ ಸಮಸ್ಯೆ ಈಗ ಏಕೆ ಬಂದಿದೆ? ಯಾವಾಗಲೂ
ನಾವು ಸಿಟಿ ಮಾರುಕಟ್ಟೆಯ ಸಗಟು ವಿಭಾಗದಲ್ಲೆ ತರುವುದು’ ಎಂದು
ಜಾರಿಕೊಂಡರು. ಅಲ್ಲಿ ನಡೆಯುತ್ತಲಿದ್ದುದೆ ಬೇರೆ. ಅವರು ಉದ್ದೇಶಪೂರ್ವಕವಾಗಿ ಯಾರೂ ಕೊಳ್ಳದ
ಅರೆಬರೆ ಕೊಳೆತಿರುವ ತರಕಾರಿಯನ್ನು ಅಗ್ಗವಾಗಿ ದೊರಕುವುದು ಎಂದು ತರುತ್ತಿದ್ದರು.
ಒಂದು ದಿನ ತರಕಾರಿ
ಹೆಚ್ಚುತ್ತಿರುವಾಗಲೆ ಬದನೆಕಾಯಿ ಮತ್ತು ಈರುಳ್ಳಿಗಳು ಪೂರ್ಣವಾಗಿ ಕೊಳೆತಿರುವುದನ್ನು ನಮ್ಮ
ಗೆಳೆಯರು ನೋಡಿದರು. ಮತ್ತು ನಾವೆಲ್ಲ ಹೋಗಿ ಅದನ್ನು ಬಳಸಬಾರದೆಂದು ತಿಳಿಸಿದೆವು. ಆದರೆ
ಅಡುಗೆಯವನು ಸೊಕ್ಕಿನಿಂದ ಇದನ್ನೆ ನಾನು ಮಾಡುವುದು ಎಂದು ಒಂದು ಕೋಳಗದ ತುಂಬ ಸಾಂಬಾರು ಮಾಡಿದ.
ನಮಗೆ ರೇಗಿ ಹೋಯಿತು. ಎಲ್ಲರೂ ಸೇರಿ ಆದಿನ ಊಟ ಮಾಡದೆ ಹರತಾಳ ಮಾಡಬೇಕೆಂದು ತೀರ್ಮಾನಿಸಿದೆವು.
ಊಟದ ಗಂಟೆ ಹೊಡೆದರೂ ಯಾರೂ ಹೋಗಲಿಲ್ಲ. ಒಬ್ಬಿಬ್ಬರು ಹೋಗಲು ಸಿದ್ಧರಿದ್ದರೂ ಉಳಿದವರು ಅವರನ್ನು
ಬಿಡಲಿಲ್ಲ. ಅಂದು ಭಾನುವಾರ ಬೇರೆ. ಮಧ್ಯಾಹ್ನ ೨ ಗಂಟೆಯಾದರೂ ಬೇರೆ ವ್ಯವಸ್ಥೆ ಮಾಡಲಿಲ್ಲ. ಎಲ್ಲರ
ಹೊಟ್ಟೆಯಲ್ಲಿ ದೊಂಬರಾಟ ಶುರುವಾಗಿತ್ತು. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆವು. ಸರದಿಯ ಮೇಲೆ
ಬಡಿಸಬೇಕಾಗಿತ್ತು. ಆದಿನ ಸರದಿ ಇದ್ದವರಿಗೆ ಸಾಂಬಾರು ಮುಟ್ಟಬಾರದು ಮತ್ತು ಎಲ್ಲರೂ ಬರಿ ಮಜ್ಜಿಗೆ
ಅನ್ನ ಊಟಮಾಡಬೇಕೆಂದು ನಿರ್ಧರಿಸಿದೆವು. ಅದರಂತೆ ೨.೩೦ ಸುಮಾರಿಗೆ ಹೋಗಿ ಎಲ್ಲರೂ ಬರಿ ಮಜ್ಜಿಗೆ
ಅನ್ನ ಊಟ ಮಾಡಿದೆವು. ಅಲ್ಲಿಗೆ ಬಂದಿದ್ದ ಹಾಸ್ಟೆಲಿನ ಕಾರ್ಯದರ್ಶಿಗಳು ರೇಗಿಕೊಂಡು, ಈಗ ಊಟ ಮಾಡದಿದ್ದರೂ ಪರವಾಯಿಲ್ಲ
ರಾತ್ರಿಗೂ ಅದೆ ಸಾಂಬಾರನ್ನೆ ಬಿಸಿ ಮಾಡಿ ಬಡಿಸಿ ಎಂದು ಅಡುಗೆಯವರಿಗೆ ಆಣತಿ ನೀಡಿದರು. ಇದುವರೆಗೂ
ತಾಳ್ಮೆಯಿಂದ ಇದ್ದ ನಾವು ರೇಗಿದೆವು. ನಾಲಕ್ಕು ಜನ ಒಳಗೆ ಹೋಗಿ ಸಾಂಬಾರಿನ ದೊಡ್ಡ ಪಾತ್ರೆಯನ್ನು
ಹೊರಗೆ ಹೊತ್ತು ತಂದು ಎಲ್ಲವನ್ನು ಚೆಲ್ಲಿದೆವು. ಸುಮಾರು ನೂರಾರು ಜನರಿಗಾಗಿ ಮಾಡಿದ್ದ ಸಾಂಬಾರು
ನೆಲದ ಪಾಲಾಯಿತು. ಅದನ್ನು ನೋಡಿದ ಆಡಳಿತವರ್ಗದವರು ಗಾಬರಿಯಾದರು. ಅವರು ತುರ್ತಾಗಿ ಸಭೆ ಸೇರಿ
ನಮ್ಮನ್ನೂ ಕರೆಸಿದರು. ನಾವು ಕೊಳೆತ ತರಕಾರಿ ಬಳಕೆಯನ್ನು ಖಂಡಿಸಿದೆವು. ಕೊನೆಗೆ ಅವರು
ಎಲ್ಲವನ್ನೂ ಸರಿ ಮಾಡುವ ವಾಗ್ದಾನ ಮಾಡಿದರು. ಹೇಗಿದ್ದರೂ ಪರೀಕ್ಷೆಗೆ ಕೆಲವೆ ತಿಂಗಳುಗಳು
ಇದ್ದವು. ನಾವು ಆಹಾರದ ಗುಣಮಟ್ಟದ ಬಗ್ಗೆ ಕಣ್ಣಿಟ್ಟಿರಬೇಕೆಂದು ಅದೆಲ್ಲ ಅಡುಗೆಯವನ ಕೆಲಸವೆಂದು
ಸಬೂಬು ಹೇಳಿದರು. ಅಂದಿನಿಂದ ಊಟದ ಗುಣಮಟ್ಟ ಸುಧಾರಿಸಿತು.
ಆದರೆ ಮಾರನೆ ವರ್ಷ ಪದವಿಯ
ಕೊನೆವರ್ಷದಲ್ಲಿದ್ದ ನನಗೆ ಮತ್ತು ಇತರ ಮೂರು ಜನರಿಗೆ ಹಾಸ್ಟೆಲಿನಲ್ಲಿ ಪ್ರವೇಶ ಕೊಡಲಿಲ್ಲ. ನನಗೆ
ಕಮ್ಯುನಿಸ್ಟ್ ಎಂಬ ಪಟ್ಟ ಬಂದಿತು. ನಾನು ಆ ವರ್ಷ ಟ್ಯಾಂಕ್ ಬಂಡ್ ರಸ್ತೆಯಲಿದ್ದ ವಿದ್ಯೋದಯ ಎಂಬ
ಹಾಸ್ಟೆಲ್ ಸೇರಿದೆ. ಅಲ್ಲಿ ವಸತಿಗೆ ಮಾತ್ರ ಅವಕಾಶವಿತ್ತು, ಅಡುಗೆ ನಾವೆ ಮಾಡಿಕೊಂಡು ಊಟ ಮಾಡುತಿದ್ದೆವು.
ಅಲ್ಲಿಯೆ ನನಗೆ ನಮ್ಮ ಊರಿನ ಮಾಜಿಮಂತ್ರಿಗಳಾದ ಡಾ. ನಾಗನಗೌಡರ ಮಗನ ಸಾಂಗತ್ಯ
ಲಭ್ಯವಾಯಿತು. ರವಿ ಅವರ ಕಿರಿಯ ಮಗ. ಯಾವುದೋ ಕಾರಣಕ್ಕೆ ಅವನು ಪದವಿ ಪಡೆದಿರಲಿಲ್ಲ. ಆದರೆ
ಬೆಂಗಳೂರಿನಲ್ಲಿ ಖಾಸಗಿಯಾಗಿ ತರಬೇತಿ ಪಡೆಯಲು ಬಂದಿದ್ದ. ಮೊದಲು ನನಗೆ ನಂಬಲೆ ಆಗಲಿಲ್ಲ. ಅಧಿಕಾರ, ಅಂತಸ್ತು ಮತ್ತು ಹಣ ಉಳ್ಳವರ ಮಗ ಬಂದು
ನಮ್ಮ ಜತೆ ಇರುವುದು ಅಚ್ಚರಿ ಎನಿಸಿತು. ನಮ್ಮ ಗೆಳೆತನ ಊರಿಗೆ ಹೋದ ಮೇಲೆಯೂ ಮುಂದುವರಿಯಿತು. ಅವರ
ಮನೆಯಲ್ಲಿ ಸಾಕಷ್ಟು ಪುಸ್ತಕಗಳ ಸಂಗ್ರಹವಿತ್ತು. ಅದರಲ್ಲೂ ಮೈಸೂರ ಒಡೆಯರು ಪ್ರಕಟಿಸಿದ ವೇದಗಳ
ದೊಡ್ಡ ದೊಡ್ಡ ಪುಸ್ತಕಗಳ ಬಗ್ಗೆ ಕುತೂಹಲ ಬೆಳೆಯಿತು. ಅವು ಬೇರೆ ಎಲ್ಲೂ ಸಿಗುತ್ತಿರಲಿಲ್ಲ.
ಅವನ್ನು ಓದಲು ಪ್ರಯತ್ನಿಸಿದೆ. ಅವು ಬಹುತೇಕ ಸಂಸ್ಕೃತ ಶ್ಲೋಕಗಳ ಲಿಪ್ಯಂತರ ಮತ್ತು ಅರ್ಥವಿವರಣೆ
ಹೊಂದಿದ್ದವು. ಎಲ್ಲವೂ ದೇವತಾರಾಧನೆಯ ಸ್ತೋತ್ರಗಳಂತೆ ಗೋಚರವಾದವು. ಬಹುಶಃ ನಾನು ಅವುಗಳ ಅರ್ಥ
ಗ್ರಹಿಸುವ ಮಟ್ಟದಲ್ಲಿ ಇರಲಿಲ್ಲ. ಸ್ಥಳೀಯ ಲೋಕಲ್ ಲೈಬ್ರರಿಯಲ್ಲಿನ ಪುಸ್ತಕಗಳು ಸಮಯ ರಜೆಯಲ್ಲಿ
ಕಳೆಯಲು ಸಹಾಯವಾದವು..
ನನ್ನ ಕಾಲೇಜು ಕಲಿಕೆಯೂ
ಮುಗಿದಿತ್ತು. ಪದವಿಯ ಫಲಿತಾಂಶ ಬರಬೇಕಿತ್ತು. ಬೆಂಗಳೂರಿಗೆ ವಿದಾಯ ಹೇಳಿ ಹಳ್ಳಿ ಸೇರಿದೆ.ಪದವಿ ಶಿಕ್ಷಣದ ಕುರಿತು
ರಸಾಯನಶಾಸ್ತ್ರ ಮೇಜರ್
ವಿಷಯವಾಗಿ ಆರಿಸಿಕೊಂಡೆ. ಗಣಿತ ಮೈನರ್ ಆಗಿತ್ತು ಎರಡುವಾರ ತರಗತಿಗೆ ಹೋಗಿರಲಿಲ್ಲ, ನನಗೆ ಅದೇಕೋ ರಸಾಯನಶಾಸ್ತ್ರದ
ಪ್ರಯೋಗಾಲಯದಲ್ಲಿ ವಾರಕ್ಕೆ ಎರಡುದಿನ ಕೆಲಸ ಮಾಡುವುದು ಆಗದು ಎನ್ನಿಸಿತುಇಂಜನಿಯರಿಂಗ್
ಸೇರುವ ಕನಸು ಒಡೆದ ಮೇಲೆ ಬಿಎಸ್ಸಿ ಸೇರಲು ಸಿದ್ಧನಾದೆ. ನ್ಯಾಷನಲ್ ಕಾಲೇಜಿಗೆ ನಮಸ್ಕಾರ ಹೇಳಲೆ
ಬೇಕಾಯಿತು. ಅಲ್ಲಿಗೆ ಅರ್ಜಿಯನ್ನು ಹಾಕಿರಲೆ ಇಲ್ಲ. ನ್ಯಾಷನಲ್ ಕಾಲೇಜಿನಲ್ಲಿ ಬಿ.ಇ ಸಂದರ್ಶನ
ಮುಗಿಯುವ ಮೊದಲೆ ಪ್ರವೇಶ ಮುಗಿಸುವರು. ಅವರು ಆಗಲೆ ಪಾಠ ಪ್ರವಚನ ಪ್ರಾರಂಭಿಸಿದ್ದರು. ಕೆಲವರು
ಅಲ್ಲಿಯೂ ಪ್ರವೇಶ ಪಡೆದು ನಂತರ ಬಿಇ ಸೀಟು ಸಿಕ್ಕಿದರೆ ಆ ಕಾಲೇಜಿಗೆ ಹೋಗುತಿದ್ದರು. ಕಟ್ಟಿದ
ಶುಲ್ಕ ಹೋಗುತಿತ್ತು. ನಾನು ಯಥಾರೀತಿ ದುಡ್ಡು ದಂಡವಾಗುವುದೆಂದು ಅದರ ಯೋಚನೆ ಮಾಡಲೆ ಇಲ್ಲ. ಬೇರೆ
ಕಡೆ ಸೇರಲೆ ಬೇಕಾಯಿತು. ಸೆಂಟ್ರಲ್ ಕಾಲೇಜಿನ ಭವ್ಯತೆ ಭಯ ಹುಟ್ಟಿಸಿತು. ಸಮೀಪ ಎಂದು ಆನಂದರಾವ್
ಸರ್ಕಲ್ಲಿನ ಹತ್ತಿರದ ರೇಣುಕಾಚಾರ್ಯ ಕಾಲೇಜು ಆರಿಸಿದೆ. ಅದು ಮೊದಲು ಬಸಪ್ಪ ಇಂಟರಮಿಡಿಯಟ್
ಕಾಲೇಜು ಎಂದು ಹೆಸರಾಗಿತ್ತು. ಆಗ ಪಿಯುಸಿ ಬದಲು ಎರಡು ವರ್ಷದ ಇಂಟರ್‌ಮಿಡಿಯಟ್ ಇದ್ದಿತು...
ಅಲ್ಲಿಯೆ ಬಿಎಸ್‌ಸಿ ತರಗತಿಗೆ ಪ್ರವೇಶ ಪಡೆದೆ. ಆಗ ಪದವಿಗೆ
ಎರಡು ಮೇಜರ್ ಮತ್ತು ಒಂದು ಮೈನರ್ ಓದಬೇಕಿತ್ತು. ಭೌತಶಾಸ್ತ್ರ. ಅಲ್ಲಿನ ವಾಸನೆ ಹಿಡಿಸಲಿಲ್ಲ.
ಜತೆಗೆ ಕಡ್ಡಾಯವಾಗಿ ಪ್ರತಿವಾರ ಎರಡು ಪ್ರಯೋಗಗಳ ರೆಕಾರ್ಡ್
ಗಳನ್ನು ಬರೆಯಲೇಬೇಕಿತ್ತು. ಅದಕ್ಕೆ ಗಣಿತವನ್ನೆ ಮೇಜರ್ ವಿಷಯವಾಗಿ ಆಯ್ದುಕೊಂಡೆ.
ಪದವಿ ತರಗತಿಗೆ ಸೇರಿದ ಮೇಲೆ
ಓದಿನ ವಿಷಯದಲ್ಲಿನ ಒತ್ತಡ ತುಸು ಕಡಿಮೆಯಾಯಿತು. ಮೊದಲ ವರ್ಷ ಪರೀಕ್ಷೆಯೆ ಇರಲಿಲ್ಲ. ಎರಡನೆಯ
ವರ್ಷ ವಿಷಯಗಳಾದ
ಕನ್ನಡ ಇಂಗ್ಲಿಷ್ ಮತ್ತು ಸಾಮಾಜಿಕ ಅಭ್ಯಾಸ ಎನ್ನುವ ನಾಲ್ಕನೆ ವಿಭಾಗದ ಪರೀಕ್ಷೆ. ಅಂತಿಮವಾಗಿ
ಪ್ರಧಾನವಾದ ಎರಡು ವಿಷಯಗಳ ಮತ್ತು ಅವುಗಳ ಜೊತೆ ಮೈನರ್ ಪರೀಕ್ಷೆ ಎದುರಿಸಬೇಕಿತ್ತು.
ಹಾಗಾಗಿ ಪದವಿ ತರಗತಿಗೆ
ಸೇರಿದೊಡನೆ ಪೊರೆ ಬಿಚ್ಚಿದ ಹಾವಾದೆವು. ಸಾಹಿತ್ಯ, ಸಂಗೀತ, ನಾಟಕ ಮತ್ತು ಎಲ್ಲಕ್ಕಿಂತ
ಹೆಚ್ಚಾಗಿ ಸಿನೆಮಾಗಳ ಕಡೆ ಗಮನ ಹರಿಯಿತು. ಯಥಾರೀತಿ ಹಾಸ್ಟೆಲ್‌ನ ವಾಸ ಮುಂದುವರಿಯಿತು. ಆಗಲೆ
ಬೆಂಗಳೂರಿಗೆ ಹಳಬನಾಗಿದ್ದೆ.
ಪದವಿ ಓದುವಾಗ ಚಳುವಳಿಗಳಲ್ಲಿ
ಭಾಗವಹಿಸಿದೆ. ಮೊದಲನೆಯದು ವಿದ್ಯಾರ್ಥಿ ಚಳುವಳಿ. ಆಗ ಪದವಿ ಪಡೆಯುವವರು ತಾವು ಆಯ್ದ ಪ್ರಧಾನ
ವಿಷಯ ಮತ್ತು ಮೈನರ್‌ಗಳ ಜೊತೆಗೆ, ಎರಡು
ಭಾಷೆ ಇಂಗ್ಲಿಷ್ ಮತ್ತು ಕನ್ನಡ (ಸಂಸ್ಕೃತ), ವಿಷಯ ಮತ್ತು ಕಲಾವಿಭಾಗದವರು
ಸಮಾನ್ಯವಿಜ್ಞಾನ ಮತ್ತು ವಿಜ್ಞಾನ ಶಿಸ್ತಿನವು ಕಲಾ ವಿಷಯಗಳನ್ನು ಒಂದು ನೂರು ಅಂಕಗಳಿಗೆ ಓದಲೇ
ಬೇಕಿತ್ತು. ಅದನ್ನು IV ಪಾರ್ಟ್ ಎನ್ನುವರು, ಕಲಾ
ವಿಭಾಗದವರಿಗಂತೂ ವಿಜ್ಞಾನ ವಿಷಯ ಓದುವುದು ಬಹು ಕಠಿಣವೆನಿಸುವುದು. ಎಲ್ಲ ಪಾಸಾದರೂ ಅದೆ ಬಾಕಿ
ಉಳಿದು ಬಿಡುವುದು. ವಿಜ್ಞಾನ ಪದವಿಗೆ ಓದುವವರಿಗೆ ಇತಿಹಾಸ ಭೂಗೋಳ, ಇತ್ಯಾದಿಗಳ
ಅಧ್ಯಯನ ತಲೆಗೆ ಹತ್ತುತ್ತಿರಲಿಲ್ಲ. ಅದಕ್ಕಾಗಿ ರಾಜ್ಯಾದ್ಯಂತ ದೊಡ್ಡ ಚಳುವಳಿಯೆ ನಡೆಯಿತು ಆಗ
ಎಸ್ ಆರ್ ಕಂಠಿ ಶಿಕ್ಷಣ ಸಚಿವರಾಗಿದ್ದರು. ಅವರು ಮುಖ್ಯಮಂತ್ರಿ ನಿಜಲಿಂಗಪ್ಪನವರ ಆಪ್ತರು.
ಅವರಲ್ಲಿ ಅಪಾರ ವಿಶ್ವಾಸ. ಅದಕ್ಕೆ ಮುಖ್ಯಮಂತ್ರಿಗಳು ಹೊಳಲ್ಕೆರೆಯಲ್ಲಿ ಯಾರೂ ಅರಿಯದ
ಅಭ್ಯರ್ಥಿಯಿಂದ ಪರಾಜಿತರಾದರು. ಅನಿವಾರ್ಯವಾಗಿ ಮುಖ್ಯಮಂತ್ರಿ ಪಟ್ಟಕ್ಕೆ ಬೇರೆಯವರು
ಬರಬೇಕಾಯಿತು. ಆದರೆ ಪಕ್ಷದಲ್ಲಿ ನಿಜಲಿಂಗಪ್ಪನವರಿಗೆ ಅಪಾರ ಬೆಂಬಲ. ಅದಕ್ಕೆ ತಮ್ಮ ಬದಲಾಗಿ
ನಂಬುಗೆಗೆ ಅರ್ಹರಾದ ಎಸ್ ಆರ್ ಕಂಠಿಯವರನ್ನ ಮುಖ್ಯಮಂತ್ರಿ ಗಾದಿಯ ಮೇಲೆ ಕೂಡಿಸಿದರು. ಅಂದರೆ
ಲಾಲು ಪ್ರಸಾದ ಯಾದವರ ಬದಲು ರಾಬ್ಡಿದೇವಿ, ಜಯಲಲಿತಾ ಬದಲು ಪನ್ನೀರ
ಶೆಲ್ವಂ, ಈಗ ಯಡಿಯುರಪ್ಪನ ಬದಲು ಸದಾನಂದಗೌಡರು ಮುಖ್ಯಮಂತ್ರಿಯಾದಂತೆ.
ಈ ಅಧಿಕಾರವನ್ನು ಹೇಗಾದರೂ ಉಳಿಸಿಕೊಳ್ಳುವ ಸಂಪ್ರದಾಯಕ್ಕೆ ನಾಲ್ಕು ದಶಕಗಳ ಇತಿಹಾಸವಿದೆ. ಆದರೆ
ಒಂದೆ ವ್ಯತ್ಯಾಸ ನಿಜಲಿಂಗಪ್ಪನವರು ಭ್ರಷ್ಟಾಚಾರದ ಆಪಾದನೆಯಿಂದ ಕಳಂಕಿತರಾಗಿರಲಿಲ್ಲ. ಶ್ರೀ ಕಂಠಿ
ಅವರನ್ನು ಭರತ ಎಂದೆ ಕರೆಯಲಾಗುತಿತ್ತು. ರಾಮನು ವನವಾಸ ಮುಗಿಸಿ ಬರುವವರೆಗ ಸಿಂಹಾಸನ ಕಾದುಕೊಂಡು
ಬಂದ ತಕ್ಷಣ ಒಪ್ಪಿಸಿದಂತೆ ಕಂಠಿಯವರೂ ನಿಜಲಿಂಗಪ್ಪನವರು ಶಿಗ್ಗಾವಿಯ ಉಪಚುನಾವಣೆಯಲ್ಲಿ ಗೆದ್ದು
ಬರುವವರೆಗೂ ಮುಖ್ಯಮಂತ್ರಿಯಾಗಿದ್ದು ನಂತರ ನಿಯತ್ತಿನಿಂದ ಪದವಿಯನ್ನು ಒಪ್ಪಿಸಿದರು. ನಂತರವೂ
ಮಂತ್ರಿಯಾಗೆ ಮುಂದುವರೆದಂತೆ ನೆನಪು. ಅವರು ಶಿಕ್ಷಣ ಮಂತ್ರಿಯಾಗಿದ್ದಾಗಲೆ ವಿದ್ಯಾರ್ಥಿ ಚಳುವಳಿ
ಶುರುವಾದದ್ದು. ಗೊಣಗಾಟದಿಂದ ಶುರುವಾದದ್ದು ತೀವ್ರ ಚಳುವಳಿಯ ರೂಪ ತಾಳಿತು abolish IV
part ಎಂಬ ಘೋಷಣೆ ರಾಜ್ಯಾದ್ಯಂತ ಮೊಳಗತೊಡಗಿತು. ನಾವೆಲ್ಲ ದಿನಗಟ್ಟಲೆ
ಘೋಷಣೆ ಕೂಗುತ್ತಾ ಪ್ರದರ್ಶನ ಮಾಡಿದೆವು. ನಮ್ಮ ಕಾಲೇಜಿನ ಗುಂಪಿಗೆ ನನ್ನನ್ನೆ ಮುಂದೆ ಮಾಡಿದರು.
ಎಲ್ಲ ಸೇರಿ ಸರ್ಕಾರಿ ಕಾನೂನು ಕಾಲೇಜಿಗೆ ಹೋದೆವು. ಆಗ ಅರಿವಾಯಿತು. ಚಳುವಳಿ ಒಂದು ರೀತಿಯಲ್ಲಿ
ಸಮೂಹ ಸನ್ನಿ ಎಂದು. ಕೆಲವರು abolish IV parts ಎಂದು ಘೋಷಣೆ
ಕೂಗಿದರೆ ಇತರರು abolish all parts ಎಂದು ಬೇಡಿಕೆ ಮಂಡಿಸಿದರು.
ಯಾವುದೆ ಚಳುವಳಿ ಪ್ರಾರಂಭ ಸುಲಭ. ಆದರೆ ಅದರ ನಿಯಂತ್ರಣ ಸರಳವಲ್ಲ. ಚಳುವಳಿಯಲ್ಲಿ ಆರ್‌ಸಿ
ಕಾಲೇಜು ಮತ್ತು ಗ್ಯಾಸ್ ಕಾಲೇಜು ಹಾಗೂ ಸೆಂಟ್ರಲ್ ಕಾಲಜಿನವರದೆ ಪ್ರಾಬಲ್ಯ. ಸಾವಿರಾರು ಯುವಜನರು
ಮೆರವಣಿಗೆ ಹೊರಟೆವು. ಹಾದಿಯುದ್ದಕ್ಕೂ ಧಿಕ್ಕಾರ, ಎಲ್ಲಿಯವರೆಗೆ ಹೋರಾಟ
ಗೆಲ್ಲುವವರೆಗೆ ಹೋರಾಟ ಮೊದಲಾದ ಸಿದ್ಧ ಘೋಷಣೆಗಳು ಜತೆಗೆ, ಎಲ್ಲಿಯವರೆಗೆ
ಹೋರಾಟ ಎಂದರೆ ಗಲ್ಲಿಯವರೆಗೆ ಹೋರಾಟ ಎನ್ನುತ್ತಾ ಮಧ್ಯದಲ್ಲೆ ಕಳಚಿಕೊಳ್ಳುವವರೂ ಇದ್ದರು. ಶಿಕ್ಷಣ
ಮಂತ್ರಿ ಮಹಾಕಂತ್ರಿ, ಶುದ್ಧ ಶುಂಠಿ, ಫೋರ್‌ಟ್ವೆಂಟಿ
ಮೊದಲಾದ ಪ್ರಾಸಬದ್ದ ಅಪದ್ದಗಳು ಬೇರೆ. ನನಗೆ ತುಸು ಭ್ರಮನಿರಸನವಾಯಿತು. ಆದರೂ ಆ ಚಳುವಳಿ
ಯಶಸ್ವಿಯಾಯಿತು. ನಾಲ್ಕನೆ ವಿಭಾಗ ರದ್ದಾಯಿತು. ಆ ಮಟ್ಟಿಗೆ ಪದವಿ ವಿದ್ಯಾರ್ಥಿಗಳಿಗೆ ಹೊರೆ
ಕಡಿಮೆಯಾಯಿತು. ಅದರ ದೂರಗಾಮಿ ಪರಿಣಾವನ್ನು ಯಾರೂ ಗಮನಿಸಲಿಲ್ಲ. ಅದರಿಂದ ನಷ್ಟವಾದುದು ವಿದ್ಯಾರ್ಥಿಗಳಿಗೆ.
ವಿಜ್ಞಾನದ ಪದವೀಧರರಿಗೆ ಮಾನವಿಕ ಶಾಸ್ತ್ರದ ಗಂಧಗಾಳಿಯು ಇಲ್ಲದೆ ಅವರು ಕಲಿಕೆ ಬರಿ
ಶುಷ್ಕವಾಯಿತು. ಕಲಾ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ವಿಧಾನದ ಪರಿಚಯವಿಲ್ಲದೆ ಶಿಸ್ತುಬದ್ಧವಾಗಿ
ಕೆಲಸ ಮಾಡುವ ಅವಕಾಶದಿಂದ ವಂಚಿತರಾದರು.
ಅದೆ ಹುರುಪಿನಲ್ಲಿ ಪದವಿಯ
ಎರಡನೆ ವರ್ಷದ ಪ್ರಾರಂಭದಲ್ಲಿ ವಿದ್ಯಾರ್ಥಿ ಸಂಘದಲ್ಲಿ ಉಪಾಧ್ಯಕ್ಷನ ಹುದ್ದೆಗೆ ನಿಲ್ಲಲು
ಒತ್ತಾಸೆ ಬಂದಿತು. ಸರಿ ಎಂದು ಚುನಾವಣೆಗೆ ನಿಂತೆ. ನನ್ನೆದುರು ನಿಂತವರು ಹಿಂದೂಪುರದ
ವೆಂಕಟಸುಬ್ಬಾರೆಡ್ಡಿ. ಇಬ್ಬರಿಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲು ಅವಕಾಶ ಕೊಟ್ಟರು, ನಾನು ಮಾತನಾಡಿದೆ. ಆದರೆ ವೇದಿಕೆಗೆ
ರೆಡ್ಡಿ ಬರಲೆಇಲ್ಲ. ಆದರೆ ವಿದ್ಯಾರ್ಥಿಗಳನ್ನು ಗುಂಪುಗುಂಪಾಗಿ ಹೋಟೆಲಿಗೆ ಕರೆದುಕೊಂಡು ಹೋಗಿ
ತಿಂಡಿಕಾಫಿ ಸಮಾರಾಧನೆ ಶುರುಮಾಡಿದ, ನಾನು ಬರಿಗೈ ಬಂಟ. ಬೇಕಾದರೆ ಮತ
ಹಾಕಲಿ ಬೇಡವಾದರೆ ಬಿಡಲಿ ನನಗಂತೂ ಕಾಫಿ ಕುಡಿಸುವುದೂ ಆಗದ ಮಾತು ಎಂದು ಖಡಾಖಂಡಿತವಾಗಿ ಹೇಳಿದೆ.
ಬೀರು ಬಾರು ಬೇಡ, ಕೊನೆಗೆ ಸಿಗರೇಟು ಕಾಫಿ ಇಲ್ಲದಿದ್ದರೆ ಹೇಗೆ?
ಇವನು ಮರಿಗಾಂಧಿಯ ಹಾಗೆ ಆಡುತ್ತಾನೆ ಎಂದು ಆಕ್ಷೇಪಿಸಿದವರು ಹಲವರು. ಕೆಲವರಂತೂ
ಇವನು ಆರ್ ಎಸ್‌ಎಸ್ ನವನು ಎಂದೂ ಹೀಯಾಳಿಸಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ.
ಚುನಾವಣೆ ಮುಗಿಯಿತು. ನಾನು ಒಂದೆ ಮತದಿಂದ ಸೋತೆ. ನನಗೆ ಒಂದೆ ಸಮಾಧಾನ. ಅಷ್ಟೊಂದು ಜನ ನಾನು
ಯಾವುದೆ ಆಮಿಷ ಒಡ್ಡದಿದ್ದರೂ ಮತಹಾಕಿದರಲ್ಲ ಎಂದು. ಇದೆ ಹುರುಪಿನಲ್ಲಿ ಹಾಸ್ಟೆಲ್‌ನಲ್ಲಿಯೂ
ಚುನಾವಣೆ ಸ್ಪರ್ಧಿಸಿದೆ. ಆದರೆ ಅಲ್ಲಿ ಅವಿರೋಧವಾಗಿ ಆಯ್ಕೆಯಾದೆ.
ಅಂತರ್ ಕಾಲೇಜು ಮತ್ತು
ಹಾಸ್ಟೆಲ್ ಚರ್ಚಾ ಸ್ಪರ್ಧೆಗಳು ಮಾತುಗಾರಿಕೆ ಬೆಳೆಯಲು ಉತ್ತೇಜನ ಕೊಡುತಿದ್ದವು. ಲಾ ಕಾಲೇಜಿನ
ನರಸಿಂಹಸ್ವಾಮಿ ಮತ್ತು ಇಂಜನಿಯರ್ ವಿದ್ಯಾರ್ಥಿ ಜಯರಾಂ ಉತ್ತಮ ವಾಗ್ಮಿಗಳಾಗಿದ್ದರು. ಅವರಲ್ಲಿ
ಒಬ್ಬರು ಮುಖ್ಯಮಂತ್ರಿಗಳ ಚುನಾವಣಾ ಪ್ರಚಾರಕ್ಕೂ ಹೋದರು. ನಂತರ ದೊಡ್ಡ
ಅಧಿಕಾರಿಯಾದರು.ಇನ್ನೊಬ್ಬರು ಫುಲ್ ಬ್ರೈಟ್ ವಿದ್ಯಾರ್ಥಿ ವೇತನದ ಪಡೆದು ಅಮೇರಿಕಾಕ್ಕೂ ಹೋದರು.
ನಾನು ತಕ್ಕಮಟ್ಟಿಗೆ ಭಾಗವಹಿಸಿದೆ.
ವಿದ್ಯಾರ್ಥಿಗಳಿಗೆ ಬರಿ
ತರಗತಿಯ ಓದೆ ಮುಖ್ಯವಾಗಿರಲಿಲ್ಲ. ನಾಟಕದ ಪ್ರಭಾವವೂ ಬಲವಾಗಿತ್ತು ಕಾಲೇಜು ದಿನಾಚರಣೆಗೆ ನಾಟಕ
ಇರಲೆಬೇಕು. ಪರ್ವತವಾಣಿ, ಗುಂಡಣ್ಣ,
ಬೇಲೂರು, ರಾಮಮೂರ್ತಿ, ಕ್ಷೀರಸಾಗರ
ಮತ್ತು ಎಎಸ್ ಮೂರ್ತಿ ಅವರ ನಾಟಕಗಳು ಕಾಲೇಜಿನವರಿಗೆ ಅಚ್ಚುಮೆಚ್ಚು. ಕೈಲಾಸಂ ಮತ್ತು ಶ್ರೀರಂಗರ
ನಾಟಕ ಪ್ರದರ್ಶಿಸಲು ತುಸು ಹೆಚ್ಚಿನ ಅಭ್ಯಾಸ ಬೇಕಿತ್ತು. ಕಾಲೇಜು ವಿದ್ಯಾರ್ಥಿಗಳಲ್ಲಿ ಸುಪ್ತವಾದ
ಕಲೆಯನ್ನು ಜಾಗೃತಿಗೊಳಿಸಲು ಅನೇಕ ಸ್ಪರ್ಧೆಗಳು ಇದ್ದವು. ಅದರಲ್ಲೂ ೧೯೬೩ ರಲ್ಲಿ ವಿಶ್ವ ಕವಿ
ರವೀಂದ್ರನಾಥ ಠಾಕೂರರ ಶತಮಾನೋತ್ಸವದ ಸ್ಮರಣಾರ್ಥ ರವೀಂದ್ರ ಕಲಾಕ್ಷೇತ್ರ ನಿರ್ಮಾಣವಾಯಿತು.
ಅದುವರೆಗೆ ಯಾವುದೆ ಸಾರ್ವಜನಿಕ ಕಾರ್ಯಕ್ರಮಗಳಿಗೆ ಪುಟ್ಟಣ್ಣ ಚೆಟ್ಟಿ ಟೌನ್ ಹಾಲನ್ನೆ
ಆಶ್ರಯಿಸಬೇಕಿತ್ತು. ಕಲಾಕ್ಷೇತ್ರವಾದ ಮೇಲೆ ಉಲ್ಲಾಳ ಷೀಲ್ಡ್ ಬಹು ಆದರಣಿಯ ರಾಜ್ಯಮಟ್ಟದ ಕಾಲೇಜು
ವಿದ್ಯಾರ್ಥಿಗಳ ನಾಟಕ ಸ್ಪರ್ಧೆಯಾಗಿತ್ತು. ಸಾಮಾಜಿಕ ನಾಟಕಗಳ ಜೊತೆಗೆ ಅಂಗುಲಿಮಾಲ, ಕಿಸಾಗೌತಮಿ, ಸ್ಮಶಾನ ಕುರುಕ್ಷೇತ್ರ, ಬೆರಳ್ಗೆ ಕೊರಳ್ ನಂತಹ ಮೌಲ್ಯಯುತ ನಾಟಕಗಳೂ ಮನ ಸೆರೆ ಹಿಡಿಯುತ್ತಿದ್ದವು. ಈ
ನಾಟಕಗಳನ್ನು ನೋಡಲು ವಿದ್ಯಾರ್ಥಿಗಳು ಮುಗಿ ಬೀಳುತಿದ್ದರು, ಅದಕ್ಕೆ
ಪುಟ ಕೊಡಲು ಪ್ರಜಾವಾಣಿ ದಿನಪತ್ರಿಕೆಯು ನಾಟಕ ವಿಮರ್ಶೆ ಸ್ಪರ್ಧೆ ನಡೆಸಿ ದೊಡ್ಡ ಮೊತ್ತದ ಬಹುಮಾನ
ನೀಡುತಿತ್ತು. ಒಂದು ವರ್ಷ ನಾನೂ ಭಾಗವಹಿಸಿದೆ. ಬಹುಮಾನ ಬರಲಿಲ್ಲ ಅದು ಬೇರೆ ಮಾತು ಆದರೆ
ವಾರಗಟ್ಟಲೆ ವಿವಿಧ ತಂಡಗಳ ರಂಗ ಪ್ರಯೋಗ ನೋಡುವ ಭಾಗ್ಯ ನನ್ನದಾಯಿತು ಇದರಿಂದ ನಾಟಕ
ಕ್ಷೇತ್ರದಲ್ಲಿ ಆಸಕ್ತಿ ಹೆಚ್ಚಿತು.
ಸಾಹಿತ್ಯ ಸಮಾರಂಭಗಳಿಗೆ
ಸಾಹಿತ್ಯ ಪರಿಷತ್ತು, ಮಲ್ಲೇಶ್ವರದಲ್ಲಿ
ಗಾಂಧಿ ಭವನ, ಸಂಗೀತ ಕಚೆರಿಗಳಿಗೆ ಗಾಯನ ಸಮಾಜ ರಾಮನವಮಿಯಲ್ಲಂತೂ
ಅನೇಕ ಕಡೆ ಸಂಗಿತ ಸಮಾರಾಧನೆ ನಡೆದೆ ನಡೆಯುವುದು. ಆದರೆ ಹಾಸ್ಟೆಲಿನಲ್ಲಿದ್ದುದರಿಂದ ರಾತ್ರಿ
ಊಟಕ್ಕೆ ಸಮಯ ಹೊಂದಿಸಿಕೊಳ್ಳಲಾರದೆ ಆ ಕಡೆ ಹೆಚ್ಚು ಹೋಗಲು ಆಗಲೆ ಇಲ್ಲ.
ಅದೆ ಅವಧಿಯಲ್ಲಿ ಸಾಹಿತ್ಯ
ಲೋಕದಲ್ಲೂ ಹೊಸಗಾಳಿ ಬೀಸ ತೊಡಗಿತು. ನವೋದಯ ಕಾವ್ಯದ ಕಾಲ ಮುಗಿಯುತ್ತಾ ಬಂದು ನವ್ಯ ಕಾವ್ಯ ಜನಮನ
ಸೆಳೆಯಿತು. ಗೊಪಾಲಕೃಷ್ಣ ಅಡಿಗರ ಚಂಡೆ ಮದ್ದಳೆಯ ದನಿ ಯುವಕರನ್ನು ಆಕರ್ಷಿಸಿತು. ಕೆಎಸ್
ನರಸಿಂಹಸ್ವಾಮಿಯವರು ಮೈಸೂರು ಮಲ್ಲಿಗೆಯ ಪ್ರಭಾವ ಬೀಳದ ಕಾಲೇಜು ವಿದ್ಯಾರ್ಥಿಯೆ ಇರಲಿಲ್ಲ. ಎಲ್ಲರ
ಬಾಯಲ್ಲೂ “ರಾಯರು
ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು” ಸಾಲು
ಗುಣುಗುಣಿಸುವುದು... ಅದರಷ್ಟೆ ಜನಪ್ರಿಯವಾದವು ರಾಜರತ್ನಂ ಅವರ ರತ್ನನ ಪದಗಳು. ಯಾವುದೆ ಸುಗಮ
ಸಂಗೀತ ಕಾರ್ಯಕ್ರಮದಲ್ಲೂ ಅನಿವಾರ್ಯವಾಗಿ ಅವನ್ನು ಹಾಡಲೇಬೇಕು. ಅದರಲ್ಲೂ ಪಿ. ಕಾಳಿಂಗರಾಯರು
ಹಾಡುವರೆಂದರೆ ನಾವೆಲ್ಲ ಎಷ್ಟೆ ದೂರವಿರಲಿ ಅಲ್ಲಿಗೆ ಹೋಗಿ ಕೇಳುತಿದ್ದೆವು. ಅದರ ಪ್ರಭಾವಕ್ಕೆ
ಒಳಗಾಗದ ಯುವಕರೆ ಇರಲಿಲ್ಲ. ಕಾಳಿಂಗರಾಯರು ಶಿಸ್ತಾಗಿ ಸೂಟು ಧರಿಸಿ ಅಕ್ಕಪಕ್ಕದಲ್ಲಿ ಮೋಹನ
ಕುಮಾರಿ ಸೋಹನ್ ಕುಮಾರಿಯರು ಸಾತ್ ನೀಡುತ್ತಿರಲು ಇಳಿದು ಬಾ ತಾಯೆ ಇಳಿದು ಬಾ ಎಂದು ತಾರಕದಲ್ಲಿ
ಹಾಡುವಾಗ ದೇವಗಂಗೆಯೆ ಧರೆಗೆ ಇಳಿದು ಬಂದಂತಾಗುವ ಅನುಭವ. ಅದೆ ಸುಮಾರಿಗೆ ಶ್ಯಾಮಲಾಭಾವೆಯವರ
ಸಂಗೀತವೂ ಯುವ ಜನರ ಆಕರ್ಷಣೆಯಾಗಿತ್ತು.
ಅದೆ ಸಮಯದಲ್ಲಿ ಅನಕೃ
ನೇತೃತ್ವದಲ್ಲಿ ಪ್ರಗತಿಶೀಲ ಚಳುವಳಿ ಹಿರಿಯರ ವಿರುದ್ಧ ಷೆಡ್ಡು ಹೊಡೆಯಿತು. ಅವರ ನಗ್ನ ಸತ್ಯ, ಶನಿಸಂತಾನ, ತರಾಸು
ಅವರ ಮಸಣದ ಹೂವು ಸಂಪ್ರದಾಯಸ್ಥ ಓದುಗರ ಹುಬ್ಬು ಮೇಲೇರುವಂತೆ ಮಾಡಿದವು. ಉತ್ತರ ಕರ್ನಾಟಕ
ಭಾಗದಲ್ಲಿ ಬಸವರಾಜ ಕಟ್ಟಿಮನಿಯವರ ಜರತಾರಿ ಜಗದ್ಗುರು, ಮೋಹದ ಬಲೆಯಲ್ಲಿ
ಬಿರುಗಾಳಿಯನ್ನೆ ಎಬ್ಬಿಸಿದವು.
ವಿದ್ಯಾರ್ಥಿಗಳಿಗೆ ಸೆಂಟ್ರಲ್ ಕಾಲೇಜಿನ ಕನ್ನಡ ತರಗತಿ ಎಂದರೆ ಆದಮ್ಯ ಆಕರ್ಷಣೆ. ಅಲ್ಲಿ ಜಿ.ಪಿ. ರಾಜರತ್ನಂ ಅವರ ಕನ್ನಡ ಪಾಠ ಕೇಳಲು ಸದಾ ನೂಕು ನುಗ್ಗಲು. ಅವರ ವಿದ್ಯಾರ್ಥಿಗಳಲ್ಲದೆ ಬೇರೆ ತರಗತಿಯವರೂ ಅವರ ತರಗತಿಗೆ ಬಂದು ಕೂಡುತಿದ್ದರು. ಅವರದು ಕಂಚಿನ ಕಂಠ. ನೂರೈವತ್ತು ಇನ್ನೂರು ವಿದ್ಯಾರ್ಥಿಗಳಿದ್ದರೂ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಒಂದು ಗಂಟೆಯ ಹೊತ್ತು ಅವರ ಮಾತಿನ ಮೊರೆತ. ಬಿಳಿ ಅಡ್ಡ ಪಂಚೆ ಜುಬ್ಬ ಧರಿಸಿ ಸಾಧರಣ ಎತ್ತರದ ಕೆಂಪನೆ ಮುಖದಲ್ಲಿ ಎದ್ದು ಕಾಣುಹಾಗೆ ನಾಮ ಹಾಕಿ ಪುಟಪುಟನೆ ನಡೆದು ಬರುವ ಅವರನ್ನು ನೋಡಿದರೆ ತನ್ನಿಂದ ತಾನೆ ತಲೆ ಬಾಗುತಿತ್ತು. ಅವರ ಪುಸ್ತಕ ಪರಿಚಾರಿಕೆ ಅನನ್ಯ. ಅವರನ್ನು ಯಾವದೆ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಲು ಹೋದಾಗ ಅವರ ನೇರವಂತಿಕೆ ಪುಸ್ತಕ ಪ್ರೀತಿ, ಕಾರ್ಯಕ್ರಮದ ಸಂಘಟಕರನ್ನು ಬೆಚ್ಚಿ ಬೀಳಿಸುವಂತಿತ್ತು. ``ಏನ್ರಯ್ಯಾ ಶೇಷಾದ್ರಿಪುರದಲ್ಲಿ ಸಮಾರಂಭ ಎನ್ನುವಿರಿ, ಬಾಡಿಗೆ ಕಾರು ಜೀಪು ಮಾಡಿಕೊಂಡು ತರಬೇಡಿ. ನಾನು ನೆಡೆದೆ ಬರುವೆ. ಅಲ್ಲಿ ಹಾರ ತುರಾಯಿ ಬೇಡ. ಆದರೆ ನೀವು ನೂರು ರುಪಾಯಿ ಪುಸ್ತಕ ಕೊಂಡರೆ ಮಾತ್ರ ಬಂದು ಭಾಷಣ ಮಾಡುವೆ’’ ಎನ್ನುವರು.
ವಿದ್ಯಾರ್ಥಿಗಳಿಗೆ ಸೆಂಟ್ರಲ್ ಕಾಲೇಜಿನ ಕನ್ನಡ ತರಗತಿ ಎಂದರೆ ಆದಮ್ಯ ಆಕರ್ಷಣೆ. ಅಲ್ಲಿ ಜಿ.ಪಿ. ರಾಜರತ್ನಂ ಅವರ ಕನ್ನಡ ಪಾಠ ಕೇಳಲು ಸದಾ ನೂಕು ನುಗ್ಗಲು. ಅವರ ವಿದ್ಯಾರ್ಥಿಗಳಲ್ಲದೆ ಬೇರೆ ತರಗತಿಯವರೂ ಅವರ ತರಗತಿಗೆ ಬಂದು ಕೂಡುತಿದ್ದರು. ಅವರದು ಕಂಚಿನ ಕಂಠ. ನೂರೈವತ್ತು ಇನ್ನೂರು ವಿದ್ಯಾರ್ಥಿಗಳಿದ್ದರೂ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ದ. ಒಂದು ಗಂಟೆಯ ಹೊತ್ತು ಅವರ ಮಾತಿನ ಮೊರೆತ. ಬಿಳಿ ಅಡ್ಡ ಪಂಚೆ ಜುಬ್ಬ ಧರಿಸಿ ಸಾಧರಣ ಎತ್ತರದ ಕೆಂಪನೆ ಮುಖದಲ್ಲಿ ಎದ್ದು ಕಾಣುಹಾಗೆ ನಾಮ ಹಾಕಿ ಪುಟಪುಟನೆ ನಡೆದು ಬರುವ ಅವರನ್ನು ನೋಡಿದರೆ ತನ್ನಿಂದ ತಾನೆ ತಲೆ ಬಾಗುತಿತ್ತು. ಅವರ ಪುಸ್ತಕ ಪರಿಚಾರಿಕೆ ಅನನ್ಯ. ಅವರನ್ನು ಯಾವದೆ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಲು ಹೋದಾಗ ಅವರ ನೇರವಂತಿಕೆ ಪುಸ್ತಕ ಪ್ರೀತಿ, ಕಾರ್ಯಕ್ರಮದ ಸಂಘಟಕರನ್ನು ಬೆಚ್ಚಿ ಬೀಳಿಸುವಂತಿತ್ತು. ``ಏನ್ರಯ್ಯಾ ಶೇಷಾದ್ರಿಪುರದಲ್ಲಿ ಸಮಾರಂಭ ಎನ್ನುವಿರಿ, ಬಾಡಿಗೆ ಕಾರು ಜೀಪು ಮಾಡಿಕೊಂಡು ತರಬೇಡಿ. ನಾನು ನೆಡೆದೆ ಬರುವೆ. ಅಲ್ಲಿ ಹಾರ ತುರಾಯಿ ಬೇಡ. ಆದರೆ ನೀವು ನೂರು ರುಪಾಯಿ ಪುಸ್ತಕ ಕೊಂಡರೆ ಮಾತ್ರ ಬಂದು ಭಾಷಣ ಮಾಡುವೆ’’ ಎನ್ನುವರು.
ನೇರವಾಗಿ ಅವರು ಹೀಗೆ
ಹೇಳಿದುದು ಅನೇಕರಿಗೆ ಜೀರ್ಣಿಸಿಕೊಳ್ಳಲಾಗಲಿಲ್ಲ. ಬೇರೆಯವರೆಲ್ಲ ಕಾರು ಕಳುಹಿಸಿ, ಎಂದರೆ ಇವರು ಪುಸ್ತಕ ಕೊಳ್ಳಿ
ಎನ್ನುವರಲ್ಲ ಎಂದು ಅಚ್ಚರಿಯಾಯಿತು. ಅದರಲ್ಲೂ ಮೂರು ನಿಂಬೆಹಣ್ಣು ತರಲು ಕಾರು ಮಾಡಿಕೊಂಡು
ಹೋಗುತಿದ್ದ ಕೆಲವು ವಿದ್ಯಾರ್ಥಿನಾಯಕರಿಗೆ ಮಾತ್ರ ಇದು ಹಿಡಿಸುತ್ತಿರಲಿಲ್ಲ. ಆದರೆ ಅವರ ಕನ್ನಡ
ಪರಿಚಾರಿಕೆಯ ಪರಿ ಮೆಚ್ಚುವಂತಹದು.
ಆಗ ಸೆಂಟ್ರಲ್ ಕಾಲೇಜು
ಹಾಸ್ಟೆಲ್ ಮಹಾರಾಣಿ ಕಾಲೇಜಿಗೆ ಹೋಗುವ ರಸ್ತೆಯ ಆ ಬದಿ ಬಹುಶಃ ಈಗಿನ ಜನರಲ್ ಹಾಸ್ಟೆಲ್ ಇದೆ
ಎಂದು ಕಾಣುವುದು. ನೇರವಾಗಿ ಕಾಲೇಜಿನ ಕಾಂಪೌಂಡಿನ ಎದುರುಗಡೆ. ಅದರಲ್ಲಿ ಪದವಿ ಕಾಲೇಜು
ವಿದ್ಯಾರ್ಥಿಗಳ ವಸತಿ. ಸಾಧಾರಣವಾಗಿ ಅವರಿಗೆ ಗೇಟಿನಲ್ಲಿ ನಿಂತು ಕಾಲೇಜಿಗೆ ಹೋಗಿ ಬರುವ
ಹುಡುಗಿಯರನ್ನು ಚುಡಾಯಿಸುವ ಹವ್ಯಾಸ. ಒಂದು ಸಲ ನಾಲ್ಕಾರು ಹುಡುಗರು ತಮ್ಮ ನಿತ್ಯಕಾಯಕದಲ್ಲಿ
ನಿರತರಾಗಿದ್ದಾಗ ರಾಜರತ್ನಂ ಅದೆ ಮಾರ್ಗದಲ್ಲಿ ಬಂದಿದ್ದಾರೆ. ಇವರ ಮಂಗಚೇಷ್ಟೆ ನೋಡಿದವರೆ ಕೋಪ
ಗೊಂಡು, `ಏನು
ನೀವೆಲ್ಲಾ ಮಹಾ ಗಂಡಸರೋ! ಬನ್ನಿ ಒಂದು ಕೈ ನೋಡಿಯೆ
ಬಿಡುವೆ’ ಎಂದು ತೋಳೇರಿಸಿದಾಗ ರೋಡ್ ರೋಮಿಯೋಗಳು ಅಲ್ಲಿದ್ದರೆ
ಅವರಪ್ಪನಾಣೆ, ಸತ್ತೆವೋ ಕೆಟ್ಟೆವೋ ಎಂದು ಓಡಿದ್ದಾರೆ. ಅಂದಿನಿಂದ
ಒಬ್ಬರಾದರೂ ಹುಡುಗರು ಹೊರಗೆ ಬಂದರೆ ಕೇಳಿ. ಅ ಹಾದಿಯಲ್ಲಿ ಕಾಲೇಜು ಹುಡುಗಿಯರು ಎಗ್ಗಿಲ್ಲದೆ
ಓಡಾಡುವಂತಾಯಿತು.
ಆಗ ಸೆಂಟ್ರಲ್ ಕಾಲೇಜಿನಲ್ಲಿ
ಎದ್ದು ಕಾಣುವವರೆಂದರೆ ಲಂಕೇಶ್. ಅವರದು ಇಂಗ್ಲಿಷ್ ವಿಭಾಗ. ಉಪನ್ಯಾಸಕರಾಗಿದ್ದಾಗಿನ ಅವರ
ಹೆಸರು ಲಂಕೇಶಪ್ಪ. ಅವರು ಪಾಠಗಳಿಂದಾಗಿ ಅಷ್ಟೇನೂ ಜನಪ್ರಿಯರಾಗದಿದ್ದರೂ ಸಾಹಿತಿಯಾಗಿ, ಸಂಘಟಕರಾಗಿ ಮತ್ತು ತಮ್ಮ
ವಿಚಾರಧಾರೆಯಿಂದ ಯುವಜನರ ಆಕರ್ಷಣೆಯ ಕೇಂದ್ರವಾಗಿದ್ದರು. ಅದೆ ಸಮಯದಲ್ಲೆ ಬೆಂಗಳೂರು
ವಿಶ್ವವಿದ್ಯಾನಿಲಯದ ಅಂಕುರಾರ್ಪಣವೂ ಆಯಿತು.
Subscribe to:
Posts (Atom)