Thursday, July 4, 2013

ಆರರಿಂದ ಅರವತ್ತು -ಸರಣಿ

 ಪಾಸು ಆಗದಿದ್ದರೆ ಹಣ ವಾಪಸ್ಸು

ನಾಗಪ್ಪ ಪದವಿ ಪೂರ್ವ ಕಾಲೇಜು ಉಪನ್ಯಾಸಕ. ತಮ್ಮವಂಶದಲ್ಲೇ ಮೊದಲ ತಲೆ ಮಾರಿನ ಸ್ನಾತಕೋತ್ತರ ಪದವಿಧರ ಎಂಬ ಹಿರಿಮೆ ಅವನದು.ಅವರ ಊರಿನಲ್ಲೆ ಪ್ರಥಮ ಪದವಿಧರ ಎಂಬ ಕೋಡು . ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕ. ನಾಯಿ ಕೊಡೆಯಂತೆ ಕಾಲೇಜುಗಳೇನೋ ತಲೆ ಎತ್ತಿದವು. ಎಲ್ಲ ಕಾಲೇಜುಗಳಿ ಯೋಜನಾ  ವೆಚ್ಚದ ಅಡಿಯಲ್ಲಿ ಖಾಯಂ ಸಿಬ್ಬಂದಿ ನೇಮಕದಲ್ಲಿ ಸರಕಾರಕ್ಕೆ ಇಲ್ಲದ ಇಬ್ಬಂದಿ.  ನೆಮಕಾತಿಯುಲೋಕಸೇವಾಆಯೋಗದ ಕೆಲಸ.ಅದಾಗಲು ಕನಿಷ್ಟ ೪-೫ ಷರ್ಷ ಬೇಕು.  ಹಾಗೆ ಬಿಡುವಹಾಗಿಲ್ಲ. ಸಾವಿರಾರು ಮಕ್ಕಳ ಭವಿಷ್ಯದ ಪ್ರಶ್ನೆ.ಹುದ್ದೆ ಖಾಲಿಇದ್ದರೆ ಇಲ್ಲದ ಗೊಂದಲ.ಹರತಾಳಚಳುವಳಿಬಂದ್‌ ಒಂದೆ ಎರಡೆ.ಸ್ಥಳೀಯ ರಾಜಕೀಯ ನಾಯಕರಿಗೂ ಮುಜುಗರ.ಸರಿ ಸಂತೆ ಹೊತ್ತಿಗೆ ಮೂರು ಮೊಳ ನೇಯುವಂತೆರ ಯಾರೋ ಒಬ್ಬ ಅಧಿಕಾರಿಗೆ ಪರಿಹಾರ ಹೊಳೆಯಿತು.. ಲಭ್ಯವಿರುವ ವಿದ್ಯಾರ್ಹತೆ ಇರುವವರನ್ನು ಗುತ್ತಿಗೆಯ ಆಧಾರದ ಮೇಲೆ ನೇಮಿಸಿಕೊಳ್ಳುವುದು. ಅವರಿಗೆ  ಆ ಹುದ್ದೆಯ ಮೂಲ ವೇತನಕ್ಕಿಂತ ತುಸು ಕಡಿಮೆ  ವೇತನ ನಿಗದಿ ಮಾಡಿ ಖಾಯಂ ನೌಕರನಿಗೆ ಇರುವ ಯಾವುದೆ ಇತರೆ ವೇತನ ಮತ್ತು ಸೇವಾ ಸೌಲಭ್ಯ ಇಲ್ಲ.ಕೆಲಸ ಮಾತ್ರ  ಅದೇ.ಈ ಯೋಜನೆಯಿಂದ ರಾಜಕಾರಣಿಗಳಿಗೂ ಅನುಕೂಲ.ತಮಗೆ ಬೇಕಾದವರನ್ನು ಕೆಲಸಕ್ಕೆ ಸೇರಿಸಬಹುದು. ಕನಿಷ್ಟ ಅರ್ಹತೆ ಇದ್ದರೆ ಸಾಕು. ಮೀಸಲಾತಿ ಮಾತು ಇಲ್ಲ.ಅರ್ಹತಾ ಪರಿಕ್ಷೆ ಹೋಗಲಿ ಮೌಖಿಕ ಪರೀಕ್ಷೆಯೂ ಇಲ್ಲ. ನಿರುದ್ಯೋಗಿ ಯುವಕರಿಗೂ ಇದು ಒಂದು ವರ ಎನಿಸಿತು. ಏನೋ ಸಂಬಳವಂತೂ ಬರುತ್ತದೆ. ಹುದ್ದೆಯ ಹೆಸರು ದೊಡ್ಡದು.ಸಾಮಾಜಿಕ ಪ್ರತಿಷ್ಠೆಯೂ ಸಿಗುವುದು. ಹೀಗಾಗಿ ಅವರಿವರನ್ನು ಹಿಡಿದು ಗಾಳಿ ಬಂದಾಗ ತೂರಿಕೊಂಡವರು ಅನೇಕ ಜನ. ಸರ್ಕಾರಕ್ಕೂ ಹಣ ಉಳಿತಾಯ.ಲೋಕ ಸೇವಾ ಅಯೋಗ ಮೂಲಕ ನೇಮಕ ವಾಗಲೂ ಹಲವು ವರ್ಷಗಳೇ ಬೇಕು. ತಕ್ಕ  ಮಟ್ಟಿಗೆ ಸರಕಾರಕ್ಕೆ ಉಳಿತಾಯ.. ಈ ಯೋಜನೆಯ ಅಡಿಯಲ್ಲಿ ವಿದ್ಯಾ ಇಲಾಖೆಯಲ್ಲಿ ಅನೇಕ ನೇಮಕವಾದವು.ಅದರಲ್ಲೂ  ಪದವಿ ಪೂರ್ವ ಇಲಾಖೆಯಲ್ಲಿ ಸಾವಿರಾರು ಜನ ಪತ್ರಾಂಕಿತ ಅಧಿಕಾರಿಗಳು ನೇಮಕಗೊಂಡರು. ಮೊದ ಮೊದಲು ಅವರಿಗೆ ಖುಷಿಯೋ ಖುಷಿ.ತಾವೂ ಗೆಜಟೆಡ್ ಅಧಿಕಾರಿಗಳು ಎಂದು. ಅದೂ ತಹಸಿಲ್ದಾರರ ಗ್ರೇಡು. ನೇಮಕಾತಿ ಹೇಗಾದರೇನೂ ಹೆಸರಂತೂ ಇದೆಯಲ್ಲ   . ಆಗ ಇನ್ನೂ  ಜೆರಾಕ್ಸ ಬಾರದ ಕಾಲ. ಏನೇ ಅರ್ಜಿ  ಹಾಕ ಬೇಕೆಂದರೂ ಮುದ್ರಿತ  ಖಾಲಿ ನಮೂನೆಯನ್ನು ಕೊಂಡು ಅದರನ್ನು ತುಂಬಿ  ಯಾರಾದರೂ  ಪತ್ರಾಂಕಿತ ಅಧಿಕಾರಿ ಯಿಂದ ಸಹಿ  ಮಾಡಿಸಿ ದೃಢಿಕರಣ  ಮಾಡಿದ ಪ್ರತಿಯನ್ನು ಲಗತ್ತಿಸ ಬೇಕು.  ಎಪ್ಪತ್ತರ ದಶಕದಲ್ಲಿ  ತಾಲುಕಿನಲ್ಲೆ ಪತ್ರಾಂಕಿತ ಅಧಿಕಾರಿ ಎಂದರೆ ತಹಸಿಲ್ದಾರರು,ಇಂಜನಿಯರ್‌ ಮತ್ತು ಸರ್ಕಾರಿ ಡಾಕ್ಟರು. ಅವರನ್ನು ಕಾಣುವುದು  ಕಷ್ಟದ ಕೆಲಸ. ತಹಸಿಲ್ದಾರರ ಕಚೆರಿಯಲ್ಲಿ  ಯಾರೋ ಜವಾನನ ಕೈಗೆ ಕೊಟ್ಟು ಅವರ ಕೈ ಬೆಚ್ಚಗೆ  ಮಾಡಿ ಸಾಹೇಬರ . ಸಹಿ ಪಡೆಯ ಬೇಕೆಂದರೆ ಕುರಿ ಕೋಣ ಬೀಳುತ್ತಿತ್ತು. ಆ ಜವಾನರೋ ದಿವಾನನಂತೆ ಡೌಲು ಮಾಡುತ್ತಿದ್ದರು. ಇನ್ನು ಡಾಕ್ಟರ ವಿಷಯ ಹೇಳುವ ಹಾಗೆ ಇಲ್ಲ. ಸಾಲು ಗಟ್ಟಿ ನಿಂತ ರೋಗಿಗಳನ್ನು ನೋಡಿ ಅವರಿಗೆ ಔಷಧಿ ಚೀಟಿ ಬರೆಯಲೆ ಬಿಡುವಿಲ್ಲ. ಇನ್ನು ಶಾಲಾ ಕಾಲೇಜು ಹುಡುಗರ  ದಾಖಲೆ ಪರಿಶೀಲಿಸಿ ಸಹಿ ಮಾಡಲು ಅವರಿಗೆ ವ್ಯವಧಾನವೆ ಇರುತ್ತಿರಲಿಲ್ಲ.ಆದ್ದರಿಂದ ನಕಲು ದಾಖಲೆಗಳನ್ನು ದೃಢೀಕರಿಸುವುದು ಪುನಃ ಪರೀಕ್ಷೆ ಬರೆದಷ್ಟೆ ಕಷ್ಟವಾಗುತ್ತಿತ್ತು. ಆ ಸಮಯದಲ್ಲಿ  ಕಾಲೇಜಿಗೆ ಅರೆಂಟು ಜನ ಗೆಜೆಟೆಡ್ ಅಧಿಕಾರಿಗಳು ಬಂದಾಗ ದೃಢೀಕರಣದ ಸಮಸ್ಯೆ  ಮಟಾ ಮಾಯ ವಾಯಿತು. ಉತ್ಸಾಹಿ ಉಪನ್ಯಾಸಕರು ಕೆಲವರು ರಬ್ಬರ್ ಸಿಕ್ಕೆ ಮಾಡಿಸಿ ಕೊಂಡು ನಮಸ್ಕಾರ ಹೊಢೆದು  ಮುಂದೆ ಚಾಚಿದವಕ್ಕೆಲ್ಲ ಹಸಿರು ಇಂಕಿನ ಸಹಿ ಮಾಡಿ ಸಿಕ್ಕೆ ಹೊಡೆದು ಬೀಗುತ್ತಿದ್ದರು.ಅವರಲ್ಲೆ ಕೆಲವರು ಮುಂದಾಲೋಚನೆ ಮಾಡಿ ಪ್ರತಿ ಸಹಿಗೂ ಶಕ್ತ್ಯಾನುಸಾರ ಕಾಣಿಕೆ ಪಡೆದವರೂ ಇದ್ದರು. ಅವರಂತೂ ಸೀಲು ಪ್ಯಾಡನ್ನು ತಮ್ಮೊಂದಿಗೆ ಸದಾ ಇಟ್ಟುಕೊಂಡಿರುತ್ತಿದ್ದರು.  ಆ ಮಟ್ಟಕ್ಕೆ ಏರಿದವರು ವಿರಳ.
ನಾಗಪ್ಪನೂ ಗುತ್ತಿಗೆ ಉಪನ್ಯಾಸಕ.ಒಳ್ಳೆಯ ಮಾತುಗಾರ. ಜನ ಬೇಕು. ಅವನು ಸದಾ ಹುಡುಗರ ನಡುವೆ ಇರುತ್ತಿದ್ದ. ಯಾರೆ ಹೋದರೂ ನಗುತ್ತ ಮಾತನಾಡಿಸುತ್ತಿದ್ದ. ಬಹು ಬೇಗ ಜನಪ್ರಿಯನಾದ
ಗುತ್ತಿಗೆ ಉಪನ್ಯಾಸಕರು ಮೊದಲ ವರ್ಷ ಸಂತೋಷವಾಗಿಯೆ ಇದ್ದರು. ವರ್ಷ ಕಳೆದ ಮೇಲೂ ಸಂಬಳ ಇದ್ದಷ್ಟೆ ಇದ್ದಾಗ ಮನಸ್ಸಿಗೆ ಕಿರಿಕಿರಿಯಾಯಿತುಖಾಯಂ ನೌಕರರದು ಮತ್ತು .ಅವರದು ಒಂದೇ  ರೀತಿಯ ಕೆಲಸ.ವೇತನ ಮಾತ್ರ ವ್ಯತ್ಯಾಸ. ಅಲ್ಲದೆ ನೌಕರಿ ತಾತ್ಕಾಲಿಕ ಎಂಬ ಆತಂಕ.ಅನಿಶ್ಚತತೆಯ ಕತ್ತಿ  ಸದಾ ತಲೆಯ ಮೇಲೆ. ಅದರೆ  ಇದ್ದ ಅವಕಾಶದ ಉಪಯೋಗ ಪಡೆದವರೂ ಇದ್ದರು. ಅದರಲ್ಲೂ ಗ್ರಾಮಾಂತರ ಪ್ರದೇಶದಿಂದ ಬಂದವರೂ ಮತ್ತು ಮುಂದುವರಿಯದ ಸಮಾಜದಿಂದ ಬಂದವರು ತಮಗೆ ದೊರೆತ ಅವಕಾಶ ಎಂದು ಚೆನ್ನಾಗಿ ಕೆಲಸ ಮಾಡುತ್ತಿದ್ದರು ಅವರ ಜನರಿಗೂ ಸಮಾಧಾನ. ಹುಡುಗ ವಿದ್ಯಾವಂತ.ನಮ್ಮ ಜಾತಿಯಲ್ಲೇ ಇಷ್ಟು ಓದಿದವರಿಲ್ಲ.ಮೇಲಾಗಿ ಸರ್ಕಾರಿ ನೌಕರಿ.ಮದುವೆಯ ಮಾರುಕಟ್ಟೆಯಲ್ಲಿ ಅವರಿಗೆ ಬಲು ಬೇಡಿಕೆ. ನಾಗಪ್ಪನಿಗೂ ಒಂದು ಉತ್ತಮ ಸಂಬಂದ ಕೂಡಿ ಬಂದಿತು.ಅವರ ಮಾವ ಬಹಳ ಶ್ರೀಮಂತ. ಅಲ್ಲದೆ ಮಾಜಿ ಶಾಸಕ.ಅನಕ್ಷರಸ್ಥ. ಕಟ್ಟಾ ಮೊಟಾ ಅಸಾಮಿ.ಮೊದಲು ಶಾಸಕರ ಅಂಗರಕ್ಷಕ ಸದಾ ಅವರ ಜತೆ. ಶಾಸಕರದು ಒಂದು ಹಳೆಯ ಜೀಪು. ಹಳ್ಳಿಗಾಡಿನ ರಸ್ತೆಯಲ್ಲಿ ಅದು ಅಗಾಗ ಮುಷ್ಕರ ಹೂಡುತ್ತಿತ್ತು ಅಂಗ ರಕ್ಷಕ ಅಗ ಕೆಲಸಕ್ಕೆ ಬರುತ್ತಿದ್ದ. ಒಬ್ಬನೆ ಅದನ್ನು ದೂಡಬಲ್ಲಷ್ಟು  ಬಲಶಾಲಿ. ಹೀಗಾಗಿ ಅವರ ಬಲ ಗೈ ಬಂಟನಾದ. ಅವನನ್ನು ತಾಲೂಕು ಅಭಿವೃದ್ಧಿ ಮಂಡಳಿ ಸದಸ್ಯನನ್ನಾಗಿ ಮಾಡಿದರು. ನಂತರ  ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್ ಸಿಗಲಿಲ್ಲ. ಅವರ ಬದ್ಧ ವೈರಿಗೆ ಪಕ್ಷ ಚುನಾವಣೆ ಟಿಕೆಟ್‌ ನೀಡಿತು.ಅವರು ಪಕ್ಷದ ನಿಷ್ಠಾವಂತರು. ಪಕ್ಷ ಬಿಡುವಹಾಗಿಲ್ಲ ಆದರೆ ಜಿದ್ದಿನ ಪ್ರಶ್ನೆ. ಮರ್ಯಾದೆ ಉಳಿಸಿಕೊಳ್ಳಲೇ ಬೇಕು. ಆಗ ಕಣ್ಣಿಗೆ ಬಿದ್ದವನು ತಮ್ಮ ಬಲಗೈ ಬಂಟನಾದ ಪಟ್ಟದ ಶಿಷ್ಯ.ಸರಿ ಅವನನ್ನು ಪಕ್ಷೇತರನನ್ನಾಗಿ ಕಣ ಕ್ಕಿಳಿಸಿದರು.ಅವನು ಗೆದ್ದೂ ಬಿಟ್ಟ. ಅವರು ಹೇಳಿದಂತೆ ಕೇಳಿಕೊಂಡು ಹೆಚ್ಚಿನ ನೀರಿಗೆ ಇಳಿಯದೆ ಹೇಳಿದಲ್ಲಿ ಹೆಬ್ಬಟ್ಟು ಒತ್ತಿ ಹಾಯಾಗಿ ಕಾಲ ಕಳೆದ. ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ದೊರೆಯಿತು . ಇವನು ಮಾಜಿ ಶಾಸಕನಾದ .ಅವನಿಗೆ ಒಂದೆ ಹಳ ಹಳಿ.  ತನಗೆ ಅಕ್ಷರಜ್ಞಾನ ಇಲ್ಲ. ಇದ್ದರೆ ಆ ಮಾತೆ  ಬೇರೆಯಾಗುತಿತ್ತು..  ಮಾಜಿಯಾದರೂ ಸಾಕಷ್ಟು ಹಣ ಮಾಡಿದ್ದರು. ಅವರಿಗೆ ಇದ್ದ ಆರು ಹೆಣ್ಣು ಮಕ್ಕಳನ್ನೂ ವಿದ್ಯಾವಂತರಿಗೆ ಕೊಟ್ಟು ಮದುವೆ  ಮಾಡಿದರು. ಕೊನೆಯವಳು ಮುದ್ದಿನ ಮಗಳು. ಅವರ ಕಣ್ಣಿಗೆ    ನಾಗಪ್ಪ ಸರಿಯಾದ ವರ ಎನಿಸಿದ. ಡಬ್ಬಲ್‌ ಗ್ರಾಜುಯೇಟ್‌.  ಬಳಗದಲ್ಲಿನ ಬಡ ಹುಡುಗ. ಕಟ್ಟಾ ಮೊಟಾ. ಇನ್ನೇನು ಬೇಕು. ಹೇಳಿದಂತೆ ಕೇಳುವನು ಎಂದು  ಕೈತುಂಬ ಹಣ ಕೊಟ್ಟು  ಹೆಣ್ಣು ಮಗಳನ್ನುಧಾರೆ ಎರೆದರು ಮಗಳನ್ನು .ಮನೆಯಲ್ಲಿಯೇ ಇಟ್ಟುಕೊಂಡರು. ಎರಡು ಮಕ್ಕಳು ಆದರೂ ಅವನು  ಬೇರೆಮನೆ ಮಾಡಿ ಸಂಸಾರ  ಹೂಡಲೇ ಇಲ್ಲ. ಆಗ ಈ ಯೋಜನೆ ಬಂದಿತು. ಯಾರಿಗೋ ಹೇಳಿ ಅಳಿಯನಿಗೆ ಗುತ್ತಿಗೆ ಉಪನ್ಯಾಸಕ ಹುದ್ದೆ ಗಿಟ್ಟಿಸಿದರು ವಾರಕ್ಕೊಮ್ಮೆ ಮಾವನ ಮನೆಗೆ ಭೇಟಿ ನೀಡಿ ಹೊಣೆ ಹರಿದು ಕೊಳ್ಳುತ್ತಿದ್ದ. ಅವರಿಗೆ ಅನುಮಾನ ಶುರುವಾಯಿತು. ಅದು ನಿಜವೂ ಆಗಿತ್ತು. ಗೆಳತಿಯ ಸಹವಾಸ ಮಾಡಿದ್ದ. ಖುದ್ದಾಗಿ ಅಳಿಯ ಕೆಲಸ ಮಾಡುವ ಸ್ಥಳ ಕ್ಕೆ  ಬಂದರು ಬಂದರು.ಸತ್ಯ ದರ್ಶನ ವಾಯಿತು.ಅವನು ನನಗೆ ಸರಿಯಾದ ಸಂಬಳವಿಲ್ಲ. ಗುತ್ತಿಗೆ ಕೆಲಸ. ಕೆಲಸ ಖಾಯಂ ಆದ ಮೇಲೆ ಕೈಯಲ್ಲಿ ಕಾಸು ಮಾಡಿಕೊಂಡು  ಮನೆ ಮಾಡುವೆ ಎಂದು ಕೈಯಾಡಿಸಿದ.ಅವರು ನಿಡಿದ್ದ ಹಣ ವೆಲ್ಲ ಖರ್ಚಾಗಿ ಬಿಟ್ಟಿತ್ತು. ವಿದ್ಯಾವಂತ  ಅಳಿಯ ಎಂದು ಹಿರಿಹಿರಿ ಹಿಗ್ಗಿದವರಿಗೆ ಬಹಳ ಬೇಸರ ವಾಯಿತು. ಅನ್ನುವ ಹಾಗಿಲ್ಲ   ಅನುಭವಿಸುವ ಹಾಗಿಲ್ಲ.ಮನೆಯಲ್ಲೂ ನೆಮ್ಮದಿಕೆಟ್ಟಿತು. ಗಂಡು ಮಕ್ಕಳೂ ಗೊಣಗತೊಡಗಿದರು.. ಅವರೆ ಖುದ್ದಾಗಿ ಬಂದು ನನ್ನನ್ನು  ಕಂಡರು. ಹೇಗಾದರೂ ಮಗಳ ಸಂಸಾರ ಹೊಂದಿಸಲು ವಿನಂತಿಸಿದರು. ತಾವೂ ಎಡಗಣ್ಣು ಬಲಗಣ್ಣು ನೋಡುವುದಾಗಿ ಭಾಷೆಕೊಟ್ಟರು. ಅಂತೂ ನಾಗಪ್ಪ ಮನೆ ಮಾಡಿದ.
ಸಂಸಾರಹೂಡಿದೊಡನೆ ಹೊರಗಿನ ಖರ್ಚು ವೆಚ್ಚಗಳಿಗೆ ಕೈಹಿಡಿತವಾಯಿತು. ಆದರೆ ಚಾಣಾಕ್ಷನಾದ ಅವರು ಅದಕ್ಕೆ ಬೇರೆ ವ್ಯವಸ್ಥೆ ಮಾಡಿಕೊಂಡಿರುವುದು ಎರಡು  ವರ್ಷದ ಮೇಲೆ ಗಮನಕ್ಕೆ ಬಂದಿತು
ಆಗ ಗುತ್ತಿಗೆ ಉಪನ್ಯಾಸಕರಿಗೆ ಮೌಲ್ಯ ಮಾಪನಕ್ಕೆ ಅವಕಾಶವಿರಲಿಲ್ಲ. ಆದರೂ ಮೌಲ್ಯ ಮಾಪನ ಸಮಯದಲ್ಲಿ  ಬೆಂಗಳೂರಿಗೆ ಹಾಜರಿ ಹಾಕುತಿದ್ದ. ಬಹುಶಃ ಬೇರೆ ಕೆಲಸಕ್ಕೆಕೆ ಬಂದಿರಬಹುದು ಎಂದು ಕೊಂಡೆ. ಎರಡೆ ವರ್ಷದಲ್ಲಿ ಅವರ ಗುಟ್ಟು ರಟ್ಟಾಯಿತು. ಫಲಿತಾಂಶ ಬಂದೊಡನೆ ಅನೇಕ ವಿದ್ಯಾರ್ಥಿಗಳು ಬಂದು ಅವರಿಗೆ ಕಾಣುತಿದ್ದರು. ಕಾಲೇಜಿನಲ್ಲಿ ಮಾತ್ರವಲ್ಲ ಮನೆಯಲ್ಲೂ ವಿದ್ಯಾರ್ಥಿಗಳ ಮತ್ತು ಪೋಷಕರ ಸಂದಣಿ ಇರುತಿತ್ತು. ಕೆಲವರು ಬಂದು ಕಾಲೇಜಿನಲ್ಲೂ ಹೊರಗೆ ಕರೆದು ಮಾತನಾಡುತಿದ್ದರು. ಏನೋ ನಗುಟ್ಟು ಗುಟ್ಟಾಗಿ ನಡೆಯುತ್ತಿದೆ ಎಂಬ ಅನುಮಾನ ಬಲವಾಯಿತು. ನಂತರ ಅವರ ಆತ್ಮೀಯರೊಬ್ಬರು ಬಾಯಿ ಬಿಟ್ಟರು. ಅವರು ಪಿಯುಸಿ ಪರೀಕ್ಷೆಗೆ ಕುಳಿತ ಮಕ್ಕಳಿಗೆ ಪಾಸು ಮಾಡುವ ಭರವಸೆ ನೀಡಿ  ಐದು ನೂರು,  ಸಾವಿರ ಹಣ ಪಡೆಯುತಿದ್ದರು. ನಮ್ಮವರೆಲ್ಲ ಹಳ್ಳಿಯ ಜನ. ನಂಬಿಕೊಡುತಿದ್ದರು. ಇವರು ಬೆಂಗಳೂರಿಗೆ ಬರುವರು. ಅಲ್ಲಿ ಫಲಿತಾಂಶ ಪ್ರಕಟವಾದಾಗ ತಪ್ಪದೆ ಹಾಜರಿದ್ದು ತಾವು ತಂದ ನಂಬರ್‌ಗಳು ಪಾಸು ಆಗಿರುವುದೊಇಲ್ಲವೋ ನೋಡಿಕೊಳ್ಳುವುರು. ಫೇಲಾಗಿದ್ದರೆ ಎಷ್ಟರಲ್ಲಿ ಫೇಲ್‌ ಆಗಿರುವುರು ಎಂದು ಬರೆದುಕೊಂಡ ತಕ್ಷಣ ಕಾಲೇಜಿಗೆ ಹಿಂತಿರುಗುವುರು.ನಮ್ಮದುಮೊದಲೆ ಹಳ್ಳಿ. ಪೋಸ್ಟು ಬರುವುದು ತುಸು ತಡ. ಹೀಗಾಗಿ ಇವರು ಮುಂಚಿತವಾಗಿಯೆ ದುಡ್ಡು ಕೊಟ್ಟವರಿಗೆ ಮಾಹಿತಿ ಮುಟ್ಟಿಸುವುರು.ಪಾಸದವರಿಗಂತೂ ಇವರು ದೇವರು. ಫೇಲಾದವರಿಗೆ  ನಾನು ಸಾಕಷ್ಟು ಪ್ರಯತ್ನ ಮಡಿದೆ. ನಿಮ್ಮ ಪೇಪರು ಕರಾವಳಿ ಜನರ ಕೈಗೆ ಹೋಗಿತ್ತು. ಅವರು ಬಹಳ ಬಿಗಿ  ಕೆಲಸ ಆಗಲಿಲ್ಲ. ಮುಂದಿನ ಸಲ ಮಾಡಿಸಿ ಕೊಢವೆ ಎಂದು ಸಮಾಧಾನ ಮಾಡುವರು. ನಾನು  ಈ ಕೆಲಸ ಮಾಡಿಲ್ಲ. ಏನೋ ಹಳ್ಳಿ ಹುಡುಗರು ಎಂದು ಸಹಾಯ ಮಾಡಲು ಒಪ್ಪಿಕೊಂಡೆ. ನಂಬುಗೆ ಇಲ್ಲದಿದ್ದರೆ ಹಣ ವಾಪಸ್ಸು ಕೊಡುವೆ ಎನ್ನವರು. ಬೆಂಗಳೂರಿಗೆ ಹೋಗಿ ವಾರಗಟ್ಟಲೆ ಇದ್ದೆ ಆ ಖರ್ಚು ಕೊಟ್ಟರೆ ಸಾಕು ಎಂದಾಗ ಬಂದವರು ಸುಮ್ಮನಾಗುತಿದ್ದರು . ಮುಂದಿನ ಸಲವಾದರೂ ಪಾಸು ಮಾಡಿಸಿ ಎಂದು ಬೇಡಿಕೊಳ್ಳುವರು.  ರಿಖಂಡಿತಾ ಮಾಡಿಸುವುದಾಗಿ ಭರವಸೆ ಕೊಡುವರು.ತೀರ ನಿಷ್ಠುರವಾದವರಿಗೆ ಅರ್ಧ ಹಣ ಕೊಡುವರು. ಇದೆ ಅವರ ಮೇಲಾದಾಯದ ಗುಟ್ಟಾಗಿತ್ತು ಯಾವುದೆ ಅಧಿಕೃತ ದೂರುಇಲ್ಲದೆ ಇರುವುದರಿಂದ ಕ್ರಮ ತೆಗೆದುಕೊಳ್ಳಲು ಸಾಧ್ಯವಿರಲಿಲ್ಲ.ಆದರೆ ಎರಡೆ ವರ್ಷದಲ್ಲಿ ಅವರ ಬಣ್ಣ  ಬಯಲಾಯಿತು. ಪಾಸು ಇಲ್ಲವಾದರೆ ಹಣ ವಾಪಾಸು ಯೋಜನೆ ವಿಫಲವಾಯಿತು

No comments:

Post a Comment