Sunday, June 30, 2013

ಆರರಿಂದ ಅರವತ್ತು

                                                ಹೀಗೊಂದು ಹರತಾಳ

ಗಣೇಶನನ್ನು ಮಾಡಲು ಹೋದರೆ ಅವರಪ್ಪನನ್ನು ಮಾಡಿದ ಅನುಭವ ಒಮ್ಮೆ ಆಯಿತು. ಕಾರವಾರದ ಪರಿಸರ ಸುಂದರ. ಕಣ್ಣಿಗೆ ಸೊಂಪು. ಮನಸ್ಸಿಗೆ ಇಂಪು. ಆದರೆ ನನಗೆ ಒಂದು ಕೊರತೆ ಕಾಣುತಿತ್ತು. ಅಲ್ಲಿ ಸಿಬ್ಬಂದಿ ಯಾರಿಗೆ ಯಾರೋ ಪುರಂದರವಿಠಲ. ಕಾಲೇಜಿನಲ್ಲಿ ನಯ ವಿನಯದಿಂದ ವರ್ತಿಸಿದರೂ ನಂತರ ಬೇರೆ ಕಡೆ ಅನುಭವಿಸಿದ ಆತ್ಮೀಯತೆ ಇಲ್ಲಿ ಇರಲಿಲ್ಲ.. ಮಲೆನಾಡು ಆತಿಥ್ಯಕ್ಕೆ ಹೆಸರಾದರು ಕರಾವಳಿ  ಮಾತ್ರ ವಿಭಿನ್ನ.ಘಟ್ಟದ ಮೇಲೆ ಹೋದರೆ ಅತಿಥೀ ದೇವೋ ಭವ  .  ಇಲ್ಲಿ  ಅನ್ಯ. ಇದು ಗೋವಾದ ಗಡಿಯಲ್ಲಿರುವುದೆ ಅದಕ್ಕೆ ಕಾರಣ. ಇನ್ನೊಂದು ಆಹಾರಾಭ್ಯಾಸ. ಅವರಿಗೆ ಮೀನಿಲ್ಲದೆ ಊಟ ಯೋಚಿಸು ಹಾಗೆ ಇಲ್ಲ. ಅನ್ನವಿಲ್ದದ್ದರೆ ಚಪಾತಿ ತಿಂದಾರು ಆದರೆ ಮೀನಂತೂ ಒಂದಲ್ಲ ಒಂದು ರೂಪದಲ್ಲಿ ಅವರ ತಟ್ಟೆಯಲ್ಲಿರಲೆ ಬೇಕು.ತರಕಾರಿ ಮಾರಿಕಟ್ಟೆಗಿಂತ ಮೀನು ಮಾರುಕಟ್ಟೆ ದೊಡ್ಡದು ಮತ್ತು ವೈವಿಧ್ಯಮಯ. ಸಸ್ಯಾಹಾರಿಗಳಗೆ ತಾಜಾ ತರಕಾರಿ ಬೇಕೆಂದರೆ ಸಂತೆಯ ತನಕ ಕಾಯಲೆ ಬೇಕು. ಆ ದಿನ ನಮಗಂತೂ ಖುಷಿ. ತರಕಾರಿ ಜತೆ ಹುಬ್ಬಳ್ಳಿ , ಧಾರವಾಡದ ಗಂಡು ಭಾಷೆ ಮಾತನಾಡುವ ಜನ ಸಿಗುತಿದ್ದರು. ಸಾಧಾರಣ ವಾಗಿ ತರಕಾರಿ ಬರುತಿದ್ದುದು ಆ ಭಾಗದಿಂದಲೆ. ಸಹಜವಾಗಿ ಬೆಲೆ ದುಬಾರಿ.  ನಿತ್ಯ ನೀರಿನಿಂದ ತೆಗೆದು  ಸೀದಾ ಸಾರಿಗೆ ಹಾಕುವ ಸೌಲಭ್ಯವಿರುವಾಗ ಅದೂ ಸೋವಿಯಾಗಿ ಬಗೆಬಗೆಯ ಮೀನುಗಳು ದೊರೆಯುವಾಗ ತುಟ್ಟಿಯ ತರಕಾರಿ ತಿನ್ನುವವರು ದಡ್ಡರು ಅಷ್ಟು   ಮಾತ್ರ. ಅಲ್ಲದೆ ಅದು ಪೌಷ್ಟಿಕಾಹಾರ. ಔಷಧಿಯೆಂದು ಮೀನೆಣ್ಣೆ ಕುಡಿಯುವುದಕ್ಕಿಂಡ ಖಾದ್ಯವೆಂದು ತಿನ್ನುವುದೆ ಸುಖ.  ಕಡಲ ತಡಿಯಲ್ಲಿ ಮೀನು ತಿನ್ನದವರು ಮಹಾಪಾಪಿಗಳು. ಅವರ ಮನೆ ಯಾರೂ ಬಾರರು. ಮತ್ತು ಅವರನ್ನು ಯಾರೂ ಊಟಕ್ಕೆ ಕರೆಯರು. ಇದೆ ನಮಗೆ ಎಲ್ಲರೊಡನೆ  ಬೆರೆಯಲು ತಡೆ. ಅದರ ಜೊತೆ ಇನ್ನೊಂದು ವಿಷಯ ಎಂದರೆ, ಭಾಷೆ. ಅಲ್ಲಿ ಎಲ್ಲ ಕಡೆ  ಕೊಂಕಣಿ ಬಾಷೆಯ ಕಿಂಕಣ. ಕನ್ನಡ ಮಾತನಾಡಿದರೆ ಕಣ್ಣರಳಿಸಿ ನೋಡವವರು  ಆ ಜನ,
ಜನರು ಬೇಕು ಎಂದು ನಾನು ಹೋದ ಪ್ರದೇಶಗಳಲ್ಲೆಲ್ಲ ಅಲ್ಲಿನ ಆಹಾರಾಭ್ಯಾಸ ಅಳವಡಿಸಿ ಕೊಂಡಿದ್ದೆ. ಮಲೆ ನಾಡಿಗೆ ಹೋದಾಗ ಗಂಜಿಅನ್ನ ಅಭ್ಯಾಸ ವಾಗಿತ್ತು.. ಈಗ ಎಲ್ಲೆ ಇರಲಿ ತಿಂಗಳಿಗೊಮ್ಮ ಗಂಜಿ ಊಟ ಬೇಕು. ಮಂಡ್ಯಕ್ಕೆ ಹೋದಾಗ  ರಾಗಿ ಮುದ್ದೆ ಮನೆ ದೇವರಾಯಿತು. ಜೊತೆಗೆ ಸೊಪ್ಪುಸಾರು, ಬಸ್ಸಾರು ಇದ್ದರೆ ಸುರಿದು ಕೊಂಡು ಊಟ. ಅದೂ ಅಲ್ಲದೆ ಅದು ಸಕ್ಕರೆ ರೋಗದವರಿಗೆ ಅದು ಅಕ್ಕರೆಯ ಊಟ. ಗುಲ್ಬರ್ಗದಲ್ಲಿ ಬಿಳಿ ಜೋಳದ ರೊಟ್ಟಿ ,ಬ್ಯಾಳಿ, ಕಡ್ಲಿ ಹಿಂಡಿ ಗಟ್ಟಿ ಮೊಸರು, ಬೆಣ್ಣೆ ಉಳ್ಳಾಗಡ್ಡಿ ಸೊಪ್ಪಿನ ಪಚಡಿ , ಆಹಾ! ಅಮೃತ ಸಮಾನ. ರೊಟ್ಟಿಯನು ತಿಂದವನು ಜಟ್ಟಿಯಾಗುವನು ಎಂದು ಹಾಡಿಕೊಳ್ಳುವ ಹಾಗೆ ನಾನು ಜಟ್ಟ್‌ಇಆಗದಿದ್ದರೂ ಗಟ್ಟಿಯಂತೂ ಆಗಿದ್ದೆ, ಆದರೆ ಇಲ್ಲಿ ಮಾತ್ರ ಅದಕ್ಕೆ ಅಪವಾದ.ಕಡಲ ತಡಿಯ ಬ್ರಾಹ್ಮಣರೂ ಸಮುದ್ರದ ತರಕಾರಿ ಬಳಸುವರು. ಆದರೆ ಹುಟ್ಟಾ ಸಸ್ಯಾಹಾರಿಯಾದ ನನಗೆ ಈ ಅಪರ ವಯಸ್ಸಿನಲ್ಲಿ ಹೊಸದು ಕಲಿಯುವ ಹಂಬಲ ಇರಲಿಲ್ಲ. ಇದ್ದರೂ ಆಗುತ್ತಿರಲಿಲ್ಲ
ಮೀನು ತಿನ್ನಲು ಕಲಿಯುವುದು ಆಗದ ಮಾತು. ಇನ್ನು ಕೊಂಕಣಿಭಾಷೆ ಕಲಿತರೆ ತಪ್ಪಿಲ್ಲ. ಆದರೆ ಅದಕ್ಕೆ ಸಮಯ ಬೇಕಲ್ಲ. ನನಗಂತೂ ಅವರಾಡುವ ಮಾತುಕೇಳಿದಾದ ತಾಮ್ರದ ತಂಬಿಗೆಯಲ್ಲಿ ನಾಣ್ಯಹಾಕಿ ಅಲ್ಲಾಡಿಸದಾಗಿನ ಕಿಣಕಿಣಿ ನಾದವೆ ಕೇಳಿದಂತಾಗುವುದು.
ಆದರೂ ಏನಾದರೂ ಮಾಡಲೆ ಬೇಕಲ್ಲ. ಅದಕ್ಕೆ ಕಾಲೇಜಿಗೆ ಹೋದ ಹೊಸದರಲ್ಲೆ ವಾರ ಎರಡುವಾರಕ್ಕೊಂದು ದಿನ ಎಲ್ಲರಿಗೂ ಒಬ್ಬರೇ ತಿಂಡಿ ಕೊಡಿಸುವುದು ಮತ್ತು ಒಟ್ಟಾಗಿತಿನ್ನುವುದು ಒಳ್ಳೆಯ ಅಭ್ಯಾಸ ಎಂದು ಸಲಹೆ ಮಾಡಿದೆ. ಮೊದಲಲ್ಲಿ ನಾನೆ ಕೊಡಿಸಲು ಮುಂದಾದೆ. ಆದರೆ ಒಂದೆ ಸಮಸ್ಯೆ. ನಮ್ಮ ಕಾಲೇಜಿರುವ ಹಳ್ಳಿಯಲ್ಲಿ ಎಲ್ಲರೂ ತಿನ್ನುವ ತಿಂಡಿ ಸಿಗದು, ಒಂದೆ  ಕಾರವಾರದಿಂದ ಇಲ್ಲವೆ ಅಂಕೋಲೆಯಿಂದಲೆ ತರಿಸಬೇಕು. ಅದಕ್ಕಾಗಿ ಮೊದಲೆ ನಿಗದಿಮಾಡಿದ ದಿನ  ನಮ್ಮ ಜವಾನ ಅಂಕೋಲೆಯಿಂದ ಬರುವಾಗಲೆ ಅಲ್ಲಿಂದ ತಿಂಡಿ ತರಲು ಹೇಳಿದೆವು.
ಶನಿವಾರದ ದಿನವಾದರೆ ಮನೆಯಲ್ಲಿ ತಿಂಡಿ ಮಾಡುವ ತೊಂದರೆಯೂ ತಪ್ಪವುದು ಎಂದು ಶಿಕ್ಷಕಿಯರು ಸಲಹೆ ಮಾಡಿದರು. ತರಗತಿಗಳಿಗೆ ತೊಂದರೆಯಾಗದಂತೆ ಸಹ ಉಪಹಾರದ ವ್ಯವಸ್ಥೆಯಾಯಿತು. ಬೆಳಗಿನ ಹತ್ತೂವರೆ ಸಮಯ. ಕಾಲೇಜಿನ  ಮೂಂದೆಯೆ ಬಸ್ಸು ನಿಂತಿತು. ಆಗಲೆ ಪ್ರಾರ್ಥನೆಯ ಸಮಯ. ಗಡಿ ಬಿಡಿಯಿಂದ ಕಾಲೇಜಿನ ಒಳಗೆ ನಡೆದೆ. ಆದರೆ ಮುಖ್ಯದ್ವಾರದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಜಮಾಯಿಸಿದ್ದರು. ನಾನು ಹತ್ತಿರ ಹೋದಕೂಡಲೆ ಡೌನ್  ಡೌನು ಎಂಬ ಸಾಮೂಹಿಕ ಧ್ವನಿ ಕೇಳಿತು ಹತ್ತಿರ ಹೋದಾಗ ಗೊತ್ತಾಯಿತು ಪಿಯುಸಿ ಮಕ್ಕಳು ಹರತಾಳದಲ್ಲಿ ತೊಡಗಿದ್ದರು. ಹತ್ತಿಪ್ಪತ್ತು ಹುಡುಗರು ಕೆಲ ಹುಡುಗಿಯರೂ ಗುಂಪಾಗಿ ನಿಂತಿದ್ದರು. ಅವರ ಕೈನಲ್ಲಿ ಬರಹವಿದ್ದ ರಟ್ಟಿನ ಫಲಕ ಇದ್ದವು ಆಗ  ನನಗೆ ಹೊಳೆಯಿತು ಹಿಂದಿನ ದಿನ ನಾನು ತೆಗೆದು ಕೊಂಡ ನಿರ್ಧಾರದ ಫಲ ಇದಾಗಿತ್ತು.
ಕಾಲೇಜು ವಿಭಾಗದಲ್ಲಿ  ಒಬ್ಬರ ವಿನಃ ಎಲ್ಲರೂ ಒಂದೆ ಜನಾಂಗದವರು. ಹೈಯಸ್ಕೂಲಿನಲ್ಲೂ  ಲ್ಲು ಅವರದೆ ಪ್ರಾಭಲ್ಯ.ಅಂಕೋಲೆಯಲ್ಲಿ  ತಾಲೂಕಿನಲ್ಲಿ ಮಾತ್ರ  ಹೆಚ್ಚಾಗಿರುವ ಮುಂಗೈ ಜೋರಿನ ಜನಾಂಗಕ್ಕೆ ಸೇರಿದವರು. ಅವರಲ್ಲಿ ಬಹುಪಾಲು ಶಿಕ್ಷಕ ವೃತ್ತಿಯವರೆ. ಗಂಡು ಹೆಣ್ಣು ಬೇಧವಿಲ್ಲದೆ ಶಿಕ್ಷಣ ಪಡೆಯುವರು. ಮತ್ತು ಬಹುತೇಕ ಸುತ್ತ ಮುತ್ತಲಿನ ಸ್ಥಳದಲ್ಲೆ ಕೆಲಸ ಮಾಡುವವರು. ಉತ್ತಮ ಕೆಲಸಗಾರರು ಆದರೆ ಅವರು ಮಾಡಿದ್ದೆ ಸರಿ ಎಂಬ ಮನೋಭಾವ.
ಕೆಲವುಹಿಂದಿನ ಮುಂಚೆ ದ ತರಗತಿ ನಡೆಯುತಿದ್ದಾಗಲೆ  ಎರಡನೆ ಪಿಯುಸಿಯ ಆರು ಜನ ವಿದ್ಯಾಥಿಗಳು ಫುಟ್‌ ಬಾಲ್‌ ಆಡುತಿದ್ದುದು ಗಮನಕ್ಕೆ ಬಂತು. ಅವರನ್ನು ಕರೆಸಿ ತರಗತಿಗೆ ಏಕೆ ಗೈರು ಹಾಜರಾಗಿರುವಿರಿ ಎಂದು ವಿಚಾರಿಸಿದೆ. ಅವರು  ಉತ್ತರ ತುಸು ಉದ್ದಟ ತನ ದಾಗಿತ್ತು. ಅರಿಗೆ ಅವರ ಪೋಷಕರನ್ನು ಮಾರನೆ ದಿನ ಕರೆತರುವಂತೆ ಸುಚಿಸಿದೆ. ವಾಪಸ್  ಹೋದವರು ಮಾರನೆ ದಿನ ಕರೆತರಲಿಲ್ಲ. ಕರೆದು ವಿಚಾರಿಸಿದರೆ ಕರೆದು ತರುವುದು ಸಾಧ್ಯವಿಲ್ಲ ಎಂದು ಒರಟಾಗಿ ಹೇಳಿದರು. ಅದಕ್ಕೆ  ಕರೆದು ತರುವ ತನಕ ತರಗತಿಗೆ ಸೇರಿಸಬಾರದೆಂದು ತಿಳಿಸಿ ಎಲ್ಲ ಉಪನ್ಯಾಸಕರಿಗೆ  ಸೂಚನೆ ಕಳುಹಿಸಿದೆ.
ಆದರೆ  ರಾಜ್ಯ ಶಾಸ್ತ್ರದ ಉಪನ್ಯಾಸಕರು ಸೂಚನೆಯನ್ನು ಧಿಕ್ಕರಿಸಿ   ಅವರನ್ನು ತರಗತಿಗೆ ಸೇರಿಸಿದರು. ಅಷ್ಟೆ ಅಲ್ಲ ಮಕ್ಕಳಿಗೆ ತೊಂದರೆ ಕೊಡಲು ತಾವು ಬಿಡುವುದಿಲ್ಲ ಎಂದು ಎಲ್ಲರೆದುರೇ  ಹೇಳಿದರು. ಇದು ಅಶಿಸ್ತಿನ ವರ್ತನೆ .. ಅಂದೆ ಸಂಜೆ ಉಪನ್ಯಾಸಕರ ಸಭೆ ಕರೆದು ಮಕ್ಕಳಿಗೆ ಕುಮ್ಮಕ್ಕು ಕೊಟ್ಟಂತಾಗುವುದು  ಅಂಥವರ  ಮೇಲೆ ಕ್ರಮತೆಗೆದುಕೊಳ್ಳ ಬೇಕಾಗುವುದು ಎಂದು ಎಚ್ಚರಿದೆ. ಆ ಸಭೆಯಲ್ಲಿ ಕನ್ನಡ ವಯಸ್ಸಾದ ಉಪನ್ಯಾಸಕಿಯರು ಬಹಳ ಉದ್ವೇಗಗೊಂಡರು. ಅವರಿಗೆ ರಕ್ತದ ಏರೊತ್ತಡ  ಹಾಗೂ ಇತರೆ  ಅರೋಗ್ಯದ ಸಮಸ್ಯೆ ಇದ್ದಿತು.ಅವರು ಅಳ ತೊಡಗಿದರು. ಅವರನ್ನು ಸಮಾಧಾನ ಮಾಡಿ ಎಚ್ಚರಿಕೆ ನೀಡಿರುವುದು ಶಿಸ್ತಿನ ವರ್ತನೆ ಮಾಡಿದವರಿಗೆ. ಇತರರಿಗೆ ಅಲ್ಲ. ಶಿಸ್ತು ಸುವ್ಯವಸ್ಥೆಗೆ ಎಲ್ಲರ ಸಹಕಾರ ಅಗತ್ಯ ಅದಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆದುಕೊಂಡು ಕ್ರಮಜರುಗಿಸಲು ಸಭೆ ಕರೆಯಲಾಗಿದೆ . ವೈಯುಕ್ತಿಕವಾಗೆ ಅವರು ಚಿಂತೆ ಮಾಡಬಾರದು ಎಂದು ಸಮಾಧಾನ ಮಾಡಿದೆ. ಮಾರನೆ ದಿನ ಆ ವಿದ್ಯಾರ್ಥಿಗಳನ್ನುತರಗತಿಗೆ ಯಾರೂ ಸೇರಿಸ ಬಾರದು ಎಂದು ತಾಕೀತು ಮಾಡಿ ಸಭೆ ಮುಗಿಸಿದೆ.
ಬೆಳಗಾಗುತ್ತಲೆ ಅದು ಬೇರೆ ಬಣ್ಣ ಪಡೆದಿತ್ತು. ತಕ್ಷಣ ನನಗೆ ಹಿನ್ನೆಲೆ ಹೊಳೆಯಿತು.  ಅವರನ್ನು ದಾಟಿಕೊಂಡು  ಹೋಗುತ್ತಾ ಅಲ್ಲಿದ್ದ   ಹುಡುಗೆಯರನ್ನು ನೋಡಿ ಗುಡ್‌ ಮಾರ್ನಿಂಗ್‌ ಗರ್ಲ್ಸ ಎಂದೆ. ಅವರೂ ಎಂದಿನಂತೆ ಗುಡ್‌ ಮಾರ್ನಿಂಗ್‌ ಸರ್‌,  ಎಂದರು. ನನಗೆ ನಗೆ ಬಂತು.
ನಾನು ಕೋಣೆ ಒಳಗೆ ಹೋಗುವುದು ತಡವಿಲ್ಲ ಆ  ಹುಡುಗೆಯರನ್ನು ಇತರರು ತರಾಟೆಗೆ ತೆಗೆದು ಕೊಂಡರು. ನಿಮಗೆ ಬುದ್ದಿ ಇದೆಯಾ? ನಾವು ಅವರ ವಿರುದ್ಧ ಸ್ಟ್ರೈಕ್‌  ಮಾಡುತಿದ್ದೇವೆ, ಅವರಿಗೆ ಗುಡ್‌ ಮಾರ್ನಿಂಗ್‌ ಹೇಳುವಿರಾ. ಆ ಹುಡುಗೆಯರು ನಾಲಗೆ ಕಚ್ಚಿಕೊಂಡರು. ಆದ ತಪ್ಪನ್ನು ಸರಿ ಪಡಿಸಲು ಜೋರಾಗಿ ಹೆಸರು ಹೆಸರು ಹಿಡಿದು ಡೌನ್ ರ್ಡನ್ ಎನ್ನ ತೊಡಗಿದರು. ಐದು ನಿಮಿಷ ಬಿಟ್ಟು ಹೊರಹೋದೆ.ಸ್ಟಾಫ್ ರೂಂಗೆ ಹೋಗಿ ಮಕ್ಕಳು ಬರಲಿ ಬಿಡಲಿ ತರಗತಿ ಇದ್ದವರು ಹೋಗಿ ಎಂದು ಸೂಚಿದೆ.  ಆಗ ಉಪನ್ಯಾಸಕಿಯರ ತರಗತಿಗೆ ಅವರು ಪುಸ್ತಕ ಹಿಡಿದು ಹೊರಟರು. ಹೈಸ್ಕೂಲು ವಿಭಾಗದಲ್ಲಿ ತೊಂದರೆ ಕಾಣ ಲಿಲ್ಲ. ಮಕ್ಕಳು ತರಗತಿಯಲ್ಲೆ ಇದ್ದರು ಅಷ್ಟರಲ್ಲೆ ಉಪನ್ಯಾಸಕರೊಬ್ಬರು ತರಗತಿಯಲ್ಲಿ ಕುಳಿತಿದ್ದ ಪ್ರಥಮ ಪಿಯುಸಿ ಮಕ್ಕಳನ್ನು ಗದರಿಸಿ ಹೊರಕಳುಹಿಸುವುದು  ಕಾಣಿಸಿತು.
ಇದು ಚಿತಾವಣೆ ಯಿಂದಾಗಿರುವುದು ಎಂದು ಖಚಿತವಾಯಿತು. ನಮ್ಮ ಸಿಬ್ಬಂದಿವರ್ಗದವರು ಯಾರೂ ಮಾತನಾಡಲೂ ಸಿದ್ಧರಿರಲಿಲ್ಲ.
ಪುನಃ ದಿಕ್ಕಾರ ದ ಕೂಗು ಮೊಳಗಿತು. ಹೊರಬಂದು ಮಕ್ಕಳ ಮಧ್ಯೆ ನಿಂತುಕೊಂಡೆ. ಒಂದು ಸಲ ಎಲ್ಲರನ್ನೂ ದಿಟ್ಟಿಸಿ ನೋಡಿದೆ. ಅವರಲ್ಲಿ ಕೆಲವರು ಮುಖ ತಗ್ಗಿಸಿದರು. ಇತರರು ಅತ್ತಿತ್ತ ನೋಡ ತೊಡಗಿದರು
 ನೀವು ಹರತಾಳ ಮಡುತಿರುವಿರಿ . ಓ.ಕೆ. ಆದರೆ ನಿಮ್ಮ ದೂರು ಇರುವುದು ಪ್ರಾಂಶುಪಾಲರ ಮೇಲೆ. ಆದ್ದರಿಂದ ಪ್ರಾಂಶುಪಾಲರಿಗೆ ಡೌನ್ ಡೌನ್‌ ಅನ್ನಿ. ಧಿಕ್ಕಾರ ಕೂಗಿ ಆದರೆ ಹೆಸರು ಹಿಡಿದು ಹೇಳಿದರೆ ನಾನು ಸುಮ್ಮನಿರುವುದಿಲ್ಲ. ಪರಿಣಾಮ ಎದುರಿಸ ಬೇಕಾಗುವುದು ಎಂದು ಎಚ್ಚರಿಸಿದೆ. ಅವರು ಕೂಗುವುದನ್ನು ನಿಲ್ಲಿಸಿದರು
ನಿಮಗೆ ಯಾವುದೆಸಮಸ್ಯೆ ಇದ್ದರೆ ಬಂದು  ಗಮನಕ್ಕೆ ತನ್ನಿ ಇಲ್ಲವೆ  ಬರಹದಲ್ಲಿ ಮನವಿ  ಕೊಡಿ ಪರಿಶೀಲಿಸಬಹುದು.
ನಮ್ಮ ಉಪನ್ಯಾಸಕರಿಗೆ ಕಿರಿಕುಳ ಕೊಡುತ್ತಿರುವರಿ. ಅದಕ್ಕೆ ನಾವು ತರಗತಿಗೆ ಹೋಗುವದಿಲ್ಲ. ಪ್ರತಿಭಟಿಸುತ್ತೇವೆ , ಎಂದು ಮೂರುನಾಲಕ್ಕು ಜನ ಒಟ್ಟಿಗೆ ಹೇಳಿದರು
ತಕ್ಷಣ ನನಗೆ ಹೊಳೆಯಿತು.ಇದು ಉಪನ್ಯಾಸಕರ ಚಿತಾವಣೆ ಎಂದು
ಸರಿ ಇದು ಕಾಲೇಜಿನವರ ಸಮಸ್ಯೆ  ನಿಮಗೆ ಹರತಾಳ ಮಾಡಲು ಯಾವುದೆ ಅಭ್ಯಂತರವಿಲ್ಲ. ಆದರೆ ಹೈಯಸ್ಕೂಲು ಮಕ್ಕಳಿಗೆ ಯಾವುದೆ ತೊಂದರೆ ಯಾಗಲು ನಾನು ಬಿಡುವುದಲ್ಲ. ಎಂದು ಹೇಳಿ  ಜವಾನನಿಗೆ ಕುರ್ಚಿ ತಂದು ಅವರ ಮಧ್ಯದಲ್ಲೆ ಹಾಕಲು ಹೇಳಿದೆ. ನೀವು ಎಷ್ಟು ಹೊತ್ತು ಬೇಕಾದರೂ ಹರತಾಳಮಾಡಿ. ನಾನೂ ನಿಮ್ಮ ಜೊತೆಯೆ ಕೂತಿರುವೆ
ಅವರ ಜೊತೆಯೆ ನನು ಕುಳಿತಾಗ ಇದಕ್ಕೆ ಕಾರಣರಾದ ಉಪನ್ಯಾಸಕರಿಗೆ ಏನೂ ಮಾಡಲೂ ತೋಚದಾಯಿತು. ಅವರು ಹತ್ತಿರ ಬರಲು ಆಗದೆ ಸುಮ್ಮನಿರಲೂ ಆಗದೆ ಚಟಪಡಿಸ ತೊಡಗಿದರು. ನಾನು ಏನೂ ಮಾತನಾಡದೆ ಎಲ್ಲರನ್ನೂ ಗಮನಿಸುತ್ತಾ ಅಲ್ಲಿಯೆ ಕುಳಿತೆ.
ಒಂದೆರಡು ಬಾರಿ ಪ್ರಿನ್ಸಿಪಾಲ್ ಡೌನ್‌ ಡೌನ್ ಎಂದು ಕೂಗಿದರು. ನಾನು ಯಾವುದೆ ಪ್ರತಿಕ್ರಿಯೆ ನೀಡಲಿಲ್ಲ
 ಅರ್ಧ ಗಂಟೆಯಾಯಿತು. ಮುಕ್ಕಾಲು ಗಂಟೆಯಾಯಿತು ಯಾವುದೆ ಬೆಳವಣಿಗೆ ಯಾಗಲಿಲ್ಲ. ಹಯಸ್ಕೂಲಿನ ಮೊದಲ ಪಿರಿಯಡ್‌ ಮುಗಿದು ಎರಡನೆ ಪಿರಿಯಡ್‌ ಪ್ರಾರಂಭ ವಾಯಿತು. ತರಗತಿಗಳು ಯಥಾ ಪ್ರಕಾರ ಸಾಗಿದವು..
ಅಷ್ಟರೊಳಗೆ ಕಾಲೆಜು ಅಭಿವೃದ್ಧಿ ಸಮಿತಿಯ ಸದಸ್ಯರು ಒಬ್ಬೊಬ್ಬರಾಗಿ ಬಂದು ಸೇರಿದರು. ತಾಲೂಕಭಿವೃದ್ಧಿ ಮಂಡಳಿಯ ಉಪಾದ್ಯಕ್ಷೆಯೂ ಬಂದರು. ನಾನು ಸುಮ್ಮನೆ ಕುಳಿತಿದ್ದೆ.ಅವರೆ ಮುಂದಾಗಿ ಇಲ್ಲಿ ಏಕೆ ಕುಳಿತಿರುವಿರಿ ಸಭೆ ಸೇರಿಸಿ ಎಲ್ಲವಿಚಾರಿಸೋಣ ಅವರ ದೂರು ಏನೋ ಪರಿಶೀಲಿಸೋಣ , ಎಂದರು
ಎಲ್ಲ ವಿದ್ಯಾರ್ಥಿಗಳ ಸಭೆ ಸೇರಿತು. ಉಪನ್ಯಾಕರನ್ನೂ ಬರ ಹೇಳಿದೆ. ಅಷ್ಟರಲ್ಲಿ  ಉಪನ್ಯಾಸಕರೊಬ್ಬರು ಹುಡುಗೆಯರ ಜತೆ ಗುಸು ಗುಸು ಪಿಸ ಪಿಸ ಮಾತನಾಡುವುದೂ ಕಂಡುಬಂತು. ಅವರನ್ನೂ ಕರೆಸಿದರು.
ಎಲ್ಲರೂ ಕುಳಿತಾದ ಮೇಲೆ ಹರತಾಳದ ಕಾರಣ  ಕೇಳಿದರು. ಯಾರೂ ಉತ್ತರ  ಕೊಡುವ ಪ್ರಯತ್ನ ಮಾಡಲೆ ಇಲ್ಲ. ಆಗ ನಾನು ಕಳೆದೆರಡು ದಿನ ನಡೆದಘಟನೆ ವಿವರಿಸಿದೆ. ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ ಎಂದುಖಡಾಖಂಡಿತವಾಗಿತಿಳಿಸಿದೆ. ಅಷ್ಟರಲ್ಲಿ ಹಡುಗರಲ್ಲಿ ಒಬ್ಬರು ಪ್ರಿನ್ಸಿಪಾಲರು ಹುಡುಗೆಯರ ಜೊತೆ ಅಸಭ್ಯವಾಗಿ ವರ್ತಿಸುವರು ಅದಕ್ಕೆ ನಾವು ಹರತಾಳ ಮಾಡಿರುವೆವು. ಎಂದು ಹೇಳಿದ
 ನನಗೆ ಇನ್ನಿಲ್ಲದ ಕೋಪ ಉಕ್ಕಿತು. ಇದುವರೆಗೂ ಇಲ್ಲದ ವಿಷಯ ಈಗ ತಲೆ ಎತ್ತಿತು. ತಕ್ಷಣ ನಾನು ಕೆರಳಿ ನಿಂತೆ. ಕಾಲಲ್ಲಿದ್ದ ಚಪ್ಪಲಿಯನ್ನು ಮೇಜಿನ ಮೇಲೆ ಇಟ್ಟು ಹೇಳಿದೆ. ಈ ಆಪಾದನೆ ಮಾಡುವವರು  ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಲಿ. ಆಗ ಇದೆ ಚಪ್ಪಲಿಯಿಂದ ನನಗೆ ಹೊಡೆಯಿರಿ, ನಾನು ಕೆಲಸಕ್ಕೆ  ರಾಜಿನಾಮೆ ಕೊಟ್ಟು ಹೋಗುವೆ. ಇಲ್ಲದಿದ್ದರೆ ಆಪಾದನೆ ಮಾಡುವವರನ್ನು ಅದಕ್ಕೆ ಪ್ರಚೋದನೆ ನೀಡಿದವರನ್ನೂ ಇದೆ ಚಪ್ಪಲಿಯಿಂದ ಹೊಡೆಯುವೆ. ಎಂದುಘರ್ಜಿಸಿದೆ.
ಸಭೆಯಲ್ಲಿ ನೀರವ ಮೌನ ನೆಲಸಿತು. ಯಾರಿಗೂ ದನಿ ಎತ್ತಲು ಧೈರ್ಯವೆ ಇರಲಿಲ್ಲ. ಕೊನೆಗೆ ಅಲ್ಲಿಸೇರಿದ್ದ ಹಿರಿಯರು ಪ್ರಿನ್ಸಿಪಾಲರೆ ಕೋಪ ಮಡಿಕೊಳ್ಳ ಬೇಡಿ, ಹುಡುಗರು ಏನೋ ತಪ್ಪು ಮಾತನಾಡಿದ್ದಾರೆ.ಇಂಥಹ ಮಾತನಾಡಬಾರದು. ಎಂದು ಮೊದಲಾಗಿ ಸಮಾಧನ ಮಾಡಿದರು. ಉಪನ್ಯಾಸಕರು ತಗ್ಗಿಸಿದ ತಲೆ ಎತ್ತಲಿಲ್ಲ..
ಕೊನೆಗೆ ನಾನೆ ಹೇಳಿದೆ. ಆದದ್ದಾಯಿತು. ಇನ್ನು ತರಗತಿಗೆ ಹೋಗಿ. ಈ ರೀತಿಯ ವರ್ತನೆ ಸಹಿಸಲು ಸಾಧ್ಯವೆ ಇಲ್ಲ ಮಾತಿನ  ಮತ್ತು ನಡತೆಯ ಮೇಲೆ ಹಿಡಿತವಿರಲಿ. ಆದರೆ
ಇಂದು ತರಗತಿ ಬೇಡ . ನಾಳೆ ಬನ್ನಿ ,ಎಂದು ನುಡಿದೆ.
ಎಲ್ಲರೂ ಜಾಗ ಖಾಲಿ ಮಾಡಿದರು.
ಮನೆಗೆ ಹೋದಾಗ ನನಗೆ ಒಂದು ಸುದ್ಧಿ ಕಾದಿತ್ತು. ಯಾರೋ ಒಬ್ಬ ಹುಡುಗಿ ನಮ್ಮ ಮನೆಗೆ ಫೋನು ಮಾಡಿ “ ಪ್ರಿನ್ಸಿಪಾಲರಿಗೆ ಹುಚ್ಚು ಕೆರಳಿದೆ, ಕೇಗೆ ಹೇಗೋ  ಮಾತ ನಾಡುತಿದ್ದಾರೆ.ಮನೆಯಲ್ಲಿಯೂ ಎಚ್ಚರದಿಂದ ಇರಿ , ಎಂದು ಮಾಹಿತಿ ಬಿತ್ತರಿಸಿದಳಂತೆ. ಹಿಂದಿನ ದಿನದ ಘಟನೆ ಮನೆಯಲ್ಲಿ  ತಿಳಿಸಿದ್ದೆ.  ಅವರು , ಅಮ್ಮಾ ತಾಯಿ, ಏನಾಗಿದೆ ?  ನಿನ್ನ ಹೆಸರು ಹೇಳು, ಎಂದಾಗ ಹೆಸರು ಏಕೆ ?  ನಿಮಗೆ ವಿಷಯತಿಳಿಸಿರುವೆ ಎಂದು ಫೋನು ಇಟ್ಟಳಂತೆ
ನಮ್ಮ ಮನೆವರಯ ಏನೋ ನಡೆದಿದೆ. ಅದಕ್ಕೆ ಹೀಗೆ ಅನಾಮಧೇಯ ದೂರವಾಣಿ ಬಂದಿದೆ.  ಹಾಗೇನಾದರೂ ಆಗಿದ್ದರೆ ಕಾಲೆಜಿನವರೆ ಯರಾದರೂ ತಿಳಿಸುತಿದ್ದರು . ಇದು ಕಿಡಿಗೇಡಿಗಳ ಕೆಲಸ ಎಂದುಕೊಂಡರು
ನಾನು ನಡೆದುದನ್ನು ತಿಳಿಸಿದೆ. ಕೇಳಿ ಚೆನ್ನಾಗಿ ನಿರ್ವಹಿಸಿದಿರಿ. ಬರಿ ಹೊಡಯುವೆ ಎಂದಿರಿ. ಹೊಡೆಯಲಿಲ್ಲವಲ್ಲಾ  ಅದೇ ಪುಣ್ಯ ., ಎಂದರು.
ಆಹಾ! ನಾನೆ ಧನ್ಯ.ಗಂಡನಿಗೆ ತಕ್ಕ ಹೆಂಡತಿ ಎಂದು ಬೆನ್ನುತಟ್ಟಿಕೊಂಡೆ. 


No comments:

Post a Comment