Saturday, July 6, 2013

Open Air gym

ಬಯಲು ವ್ಯಾಯಾಮ ಶಾಲೆ

ಬೆಳಗಿನ ನಸಕು ಮೊಬೈಲಿನಲ್ಲಿ ಡಣಡಣ ಸದ್ದು ಕೇಳಿಸಿತು .ಅಲರಾಂ ಇಟ್ಟವರಾರು ಎಂದು ಒಂದುಕ್ಷಣ ಯೋಚಿಸಿದೆ.ಎಪ್ಪತ್ತರ ವಯಸ್ಸಿನ ನನಗೆ  ಅದು ವಾಕಿಂಗ್‌ .ಸಮಯ ಐದೂವರೆ. ತುಸು ಚಳಿಇದೆ  ನಂತರ ಹೋಗೋಣ ಎಂದು ಮುಸಕುಎಳೆದಕೊಂಡೆ.. ಪಕ್ಕದ ರೂಮಿನಿಂದ ಮೊಮ್ಮಗಳು ಹಿತಾ ಎದ್ದುಬಂದು . ಗುಡ್‌ ಮಾರ್ನಿಂಗ್‌ , ತಾತ ಎಂದಳು . ಇಪ್ಪತ್ತು ವರ್ಷದ ಕಾಲೇಜು ಕನ್ನೆ ಇಷ್ಟು ಬೇಗ ಎದ್ದು ದು ಅಚ್ಚರಿಗೆ ಕಾರಣ ವಾಗಿತ್ತು,  ವೆರಿ ಗುಡ್‌ಮರ್ನಿಂಗ್‌, ಮಗೂ, ಏನು ಇಷ್ಟು ಬೇಗ ಎದ್ದೆ , ಎಂದೆ..
 ನಾನೂ  ಇನ್ನು ಮೇಲೆ ನಿಮ್ಮ ಜೊತೆ ಬೆಳಗ್ಗೆ ಪಾರ್ಕಿಗೆ ಬರುವೆ ತಾತ ಎಂದಾಗ ಒಂದು ಕ್ಷಣ ನಂಬಲಾಗಲಿಲ್ಲ. ಆದರೆ ಬಹಳ ಸಂತೋಷ ವಾಯಿತು. . ಇಬ್ಬರೂ ಸೇರಿ ಬಸವನ ಗುಡಿಯ ಕೃಷ್ಣರಾವ್‌ ಪಾರ್ಕಗೆ ಹೋದಾಗ ಇನ್ನೂ ಐದೂಕಾಲು. 
ಆಗಲೆ ಅನೇಕರು ಸ್ವೆಟರ್‌, ಟೋಪಿಧರಿಸಿ ವಾಕ್‌ಮಾಡುತಿದ್ದರು. ಕೆಲವರಂತೂ ಷಾರ್ಟ್ಸ ಮತ್ತು ಟೀ ಷರ್ಟ ಧರಿಸಿದ್ದರು.  ಹಿತಾ ಒಂದು ಸುತ್ತು ಹಾಕಿ ನಂತರ , ತಾತಾ ನೀವು ವಾಕ್‌ ಮಾಡುತ್ತಿರಿ ನಾನು ಜಿಮ್‌ಗೆ ಹೋಗುವೆ ಎಂದು ಹೊರಟಳು. ಆಗ ಹೊಳೆಯಿತು ಅವಳು ನನ್ನ ಜೊತೆ ಬಂದ ಕಾರಣ.ಕೆಲವೇ ದಿನಗಳ ಹಿಂದೆ ಪ್ರಾರಂಭವಾದ ಬಯಲು ಜಿಮ್‌ ಆವಳ ಆಕರ್ಷಣೆಗೆಯ ಕೇಂದ್ರವಾಗಿತ್ತು..ಕಾರಣ ತುಸು ಗುಂಡುಗುಂಡಗೆ ಇದ್ದ ಅವಳು ತೂಕವಿಳಿಸಲು ಜಿಮ್‌ ಮೊರೆ ಹೊಕ್ಕಿದ್ದಳು. ಎರಡು ಸುತ್ತು ಪಾರ್ಕನಲ್ಲಿ ಹೋಗಿ ನಂತರ ಮಧ್ಯದಲ್ಲಿ ಹಿರಿಯ ನಾಗರಿಕರ ವಲಯಕ್ಕೆ ಬಂದಾಗ ಅಚ್ಚರಿ ಕಾದಿತ್ತು.ಅಲ್ಲಿರುವ ಹತ್ತಾರು ಆಧುನಿಕ ಉಪಕರಣಗಳ ಮೇಲೆ ಯುವಕರು ವೃದ್ಧರು ಗಂಡು, ಹೆಣ್ಣು  ಬೇಧವಿಲ್ಲದೆ ವರ್ಕ ಔಟ್‌ ಮಾಡುತಿದ್ದರು.ಅಲ್ಲಿರುವ ಸುಮಾರು  ಹತ್ತು ಉಪಕರಣಗಳ ಮುಂದೆ ಎರಡು ಮೂರು ಜನ ಸಾಲು ಗಟ್ಟಿ ನಿಂತು ಕ್ರಮವಾಗಿ ತಮ್ಮ ಸರದಿಗೆ ಕಾಯುತಿದ್ದರು. 
ಡಬಲ್‌‌ವಾಕರ್‌ನಲ್ಲಿ ದಂಪತಿಗಳ ನಡಗೆ
ನಾನು ಹಲವಾರು ದಿನಗಳಿಂದ ನೋಡುತಿದ್ದರೂ ಅದರ ಉಪಯುಕ್ತತೆ ಮತ್ತು ಬಳಕೆ ಕುರಿತು ಯೋಚಿಸಿಯೇ ಇರಲಿಲ್ಲ.ಆಗ ತಿಳಿಯಿತು  ನನ್ನಂಥಹ ಹಿರಿಯನಾಗರೀಕರೂ ಅಲ್ಲಿ ಖುಷಿಯಿಂದ ಆ ಸಾಧನಗಳ ಬಳಕೆ ಮಾಡುವುದನ್ನು ನೋಡಿ  ನಾನೂ ಒಂದು ಕೈ ನೋಡಿಯೇ ಬಿಡೋಣ ಎಂದುಕೊಂಡೆ . ಆಗ ಅಲ್ಲಿಯೇ ಇದ್ದ ಎಪ್ಪತ್ತೈದರ ಯುವಕ ಬಿ. ಎನ್‌ ಚಂದ್ರಶೇಖರ್‌ ಬನ್ನಿ ಸಾರ್‌ ,ಎಂದು ಕರೆದು ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಟ್ಟರು.
Add caption
 ತುಸು ಹೊತ್ತಿನ ನಂತರ ವಿರಾಮವಾಗ ಅವರೊಡನೆ ಮಾತಿಗೆ ಇಳಿದೆ. ಬಿ.ಎನ್‌ಚಂದ್ರಶೇಖರ್‌ ವಾಕರ್ ಗುಂಪಿನ ಅಧ್ಯಕ್ಷರು. ಕೃರ್ಷರಾವ್‌ ಪಾರ್ಕನ ಸದ್ಬಳಕೆಗೆ ಸದಾ ಶಮಿಸುಸುತ್ತಿರುವ ವ್ಯಕ್ತಿ. . ಅವರು ತಮ್ಮ ಆಶಯಗಳನ್ನು ಬಿಚ್ಚಿ ಇಟ್ಟರು. ಮೊದಲು ಹಿರಿಯ ನಾಗರೀಕರ ಹಿತಕ್ಕೆಂದು ಅವರು ನಿಮಾಹ್ನನ್ಸ ಸಹಯೋಗದಿಂದ ಎರಡುವೈಜ್ಞಾನಿಕವಾಗಿ ರೂಪಿಸಿದ ಉಪಕರಣಗಳನ್ನು ಸ್ಥಾಪಿಸಿದ್ದರು. ಅವೇ   ತಿರುಗು ಚಕ್ರ. ಮತ್ತು ಹಗ್ಗ ಎಳೆವ ರಾಟೆ.. ಅವೆರಡು ವಿಶಿಷ್ಟವಾಗಿ ಭುಜ ಮತ್ತು ತೋಳಿನ ವ್ಯಾಯಾಮಕ್ಕೆ ಹೇಳಿ ಮಾಡಿಸಿದವು. 
ರಾಟೆಯಹಗ್ಗ ಜಗ್ಗಿದರೆ ಭುಜದ ನೋವು ಮಾಯ
ಸ್ಪಾಂಡಿಲೈಟಿಸ್‌ ಮತ್ತು ಬೆನ್ನುಹುರಿ ಸಂಬಂಧಿತ ನೋವಿನಿಂದ ನೆರಳುವವರು ಫಿಜಿಯೋ ಥೆರಪಿಗೆ   ಯಾರಾದರೂ ಪರಿಣಿತರ ಬಳಿಗೆ ಹೋಗಿ ಅಲ್ಲಿರುವ ವಿಶೇಷ ಉಪಕರಣಗಳ ಸಹಾಯ ಪಡೆದು ನೋವು ನಿವಾರಣೆ ಪಡೆಯಬೇಕಿತ್ತು..ಅದಕ್ಕಾಗಿ ಸಮಯ ಮತ್ತು ಹಣ ಎರಡೂ ಅಗತ್ಯವಿತ್ತು .ಜೊತೆಗೆ ಸಂಚಾರ ದಟ್ಟಣೆಯ ಸಮಯದಲ್ಲಿ ಒನ್ನರೇ ಹೋಗಲು ಆಗದೆ ಸಹಾಯಕರು ಬೇಕಿತ್ತು. ಹೀಗಾಗಿ ಅದು  ಇಂದಿನ ಈ ಕೆಲಸದಒತ್ತಡದಲ್ಲಿ ಕಷ್ಟ ಸಾಧ್ಯವಾಗಿತ್ತು ಇದನ್ನರಿತ ವಾಕರ್ಸ್‌ ಗುಂಪು  ಈ ಸಾಧನಗಳನ್ನು ಅಳವಡಿಸಿದ್ದರು. ಹೇಗಿದ್ದರೂ ಪಾರ್ಕಿಗೆ ವಾಕಿಂಗ್‌ಬರುವ ಹಿರಿಯರು ಎರಡು ನಿಮಿಷ ಈ ಉಪಕರಣಗಳ ಬಳಕೆಯಿಂದ ವೈಜ್ಞಾನಿಕ ವ್ಯಾಯಾಮದಿಂದ  ನೋವು ಪರಿಹರಿಸಿಕೊಳ್ಳಲು ಅನುಕೂಲವಾಯಿತು. ಅಲ್ಲಿ ಅದರಲ್ಲಿ ಬಳಕೆಯಲ್ಲಿ ನುರಿತ ಹಿರಿಯ ನಾಗರೀಕರೇ ಮಾರ್ಗದರ್ಶನ ನೀಡುತಿದ್ದರು. ಅದರಿಂದ ಹಣ ಸಮಯ ಎರಡರ ಚಿಂತೆ ಇಲ್ಲದೇ ಉಚಿತವಾದ ಫೀಜಿಯೋ ಥೆರಪಿ ಚಿಕಿತ್ಸೆ ಎಲ್ಲರಿಗೂ ಲಭ್ಯವಾಗಿತ್ತು.
ಗಾಲಿ ತಿರುಗಿಸಿ ಕೈ ನೋವು ಓಡಿಸಿ
 ಸಾಮಾನ್ಯ ಜನರಿಗೆ ಈ ಎಲ್ಲ ಸೌಲಭ್ಯವರಿರುವ ಕ್ಲಬ್‌ಗೆ ಹೋಗುವುದು ಕನಸಿನ ಮಾತು. ಸೆಂಚರಿಕ್ಲಬ್‌, ಬೆಂಗಳೂರು ಕ್ಲಬ್‌, ಕಾಸ್ಮೊಪಾಲಿಟಿಯನ್‌ಕ್ಲಬ್‌ಗಳ ಸದಸ್ಯರಾಗಲು ಲಕ್ಷಾಂತರ ರೂಪಾಯಿ ಶುಲ್ಕ. ಹಣ ಕೊಡುತ್ತೇವೆ ಎಂದರೂ  ಕಾದು ಕುಳಿತಿರ ಬೇಕು ವರ್ಷಾನು ಗಟ್ಟಲೆ. ಅದಕ್ಕೆ  ಕ್ಲಬ್‌ ಅನ್ನೇ ಪಾರ್ಕಿಗೆ ತರವು ಯತ್ನ ಸದಸ್ಯರದು, ಕ್ಲಬ್‌ನಲ್ಲಿ ಕ್ಯಾಂಟೀನ್‌ ಮತ್ತು ಕಾರ್ಡ್ಸ ಆಟ ಹೊರತು ಪಡಿಸಿ ಉಳಿದೆಲ್ಲ ಸೌಲಭ್ಯವನ್ನೂ ಉಚಿತವಾಗಿ ಒದಗಿಸಲು ಮಾಡಿದ ಪ್ರಯತ್ನದ ಫಲ . ಈಗ ಪಾರ್ಕಿನಲ್ಲಿ ಕಣ್ಣಿಗೆ ಕಾಣುತ್ತಿದೆ.ಜನಸಾಮಾನ್ಯರಂತು ಪ್ರತಿಷ್ಠಿತ ಕ್ಲಬ್ಬಿಗೆ ಹೋಗುವ  ಹಾಗಿಲ್ಲ ಅದಕ್ಕೆ ಕ್ಲಬ್‌ ಅನ್ನೇ ಜನ ಸಾಮಾನ್ಯರ ಬಳಿಗೆ ಕರೆತರುವ ಪ್ರಯತ್ನ ಇದಾಗಿದೆ.ಪ್ರತಿಷ್ಠಿತ ಕ್ಲಬ್‌ಗಳ ಇನ್ನೊಂದು ಮಿತಿ ಎಂದರೆ ಅಲ್ಲಿನ ಡ್ರೆಸ್‌ ಕೋಡ್‌.   ಷೂ ಹಾಕಿಲ್ಲ ಎಂದು ಅಂತರಾಷ್ಟ್ರೀಯ ಖ್ಯಾತಿಯ   ಎಫ್‌... ಎಂ. ಹುಸೆನ್‌ ಅವರಿಗೆ ಪ್ರವೇಶ ನಿರಾಕರಿಸಿದ ಉದಾಹರಣೆ ಇದೆ. ಇನ್ನು ಜನ ಸಾಮಾನ್ಯರ ಪಾಡೇನು.
ಸೊಂಟ ಮತ್ತು ಕಾಲುಗಳಿಗೆ ಸಕತ್ತು ವ್ಯಾಯಾಮ.


ಈ ಯೋಜನೆ ರಾತ್ರೋರಾತ್ರಿ ಮೂಡಿದ್ದಲ್ಲ. ಕಳೆದ ಎಂಟು ಹತ್ತುವರ್ಷಗಳಿಂದ ಕ್ರಮವಾಗಿ ವಾಕರ್‌ಗ್ರೂಪ್‌ ನಡೆಸಿದ ಚಟುವಟಿಕೆಯ  ಪರಿಣಾಮ. ಮೊದ ಮೊದಲು ವೈದ್ಯಕೀಯ ಪರೀಕ್ಷೆ ಗಳನ್ನು ಮಾಡುವ ಮೂಲಕ ಸೇವಾಕರ್ಯ ಶುರುವಾಯಿತು. ಟ್ರಿನಿಟ ಕ್ಲಿನಿಕ್‌ನ  ಡಾ..ಮುರುಳೀಧರ ಅವರು ಹೃದಯ ಸಂಬಂಧಿ ತಪಾಸಣೆಯನ್ನು ಕಳೆದ ನಾಲ್ಕಾರು ವರ್ಷಗಳಿಂದ ಪಾರ್ಕಿನಲ್ಲಿ ಉಚಿತವಾಗಿ ನಡೆಸಿಕೊಂಡುವರು ಮುಂಚಿತವಾಗಯೀ ರಕ್ತ ಪರೀಕ್ಷೆ.  ಹಗೂ  ಲಿಪಿಡ್‌ಪ್ರೊಫೈಲ್ಲಮಾಡಲು ಒಂದು ತಂಡವೇ ಬಂದು ನೂರಾರು ಜನರ ರಕ್ತದ ಸ್ಯಾಂಪಲ್‌ ಪಡೆಯುತಿತ್ತು. ಮುಂದಿನ ಭಾನುವಾರ ಪರಿಣಿತರವೈದ್ಯತಂಡ  ವ್ಯ್ಯಕೀಯ ವರದಿಯ ಸಮೇತ ಪರೀಕ್ಷೆ ನಡೆಸಿ ಸಲಹೆ ಕೊಡುತಿದ್ದರು. ಅಗತ್ಯವಿದ್ದವರಿಗೆ ಈ.ಸಿ.ಜಿ ಪರೀಕ್ಷೆಯನ್ನು ಉಚಿತವಾಗಿ ಸ್ಥಳದಲ್ಲಿ ನಡೆಸಿ  ಆ ವರದಿ ನೋಡಿ ವೈದ್ಯಕೀಯ ಸಲಹೆ ಕೊಡುವರು. ಅಗತ್ಯವಿದ್ದವರಿಗೆ ಹೆಚ್ಚಿ ಕ್ರಮಮಕ್ಕಾಗಿ ಶಿಫಾರಸ್ಸು ಮಾಡುವರು
.
ಅದೇ ರೀತಿ ಹಿರಿಯನಾಗರೀಕರಿಗೆ ಸಾಮಾನ್ಯವಾದ ಸಕ್ಕರೆ ರೋಗದ ಶಿಬಿರಗಳನ್ನೂ ನಡೆಸುವರು. ಡಯಬೆಟಿಸ್‌ ತಜ್ಞರಾದ ಡಾ. ಚಿಕ್ಕಮೊಗ ಅವರ ನೇತೃಯತ್ವದಲ್ಲಿ ಬಂದ ವೈದ್ಯರ ತಂಡವು ರಕ್ತ ಪರೀಕ್ಷೆ ಮಾಡಿ ಆ ವರದಿಯ  ಆಧಾರದ ಮೇಲೆ ತಜ್ಞ ಸಲಹೆ ನೀಡುವರು..

 ಹತ್ತಿರದಲ್ಲೇ ಇರುವ ಅರ್ಥೋ ಪಡೆಕ್‌ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಕಿಂಚ ಅವರದೂ ಇಲ್ಲಿ ಸೇವೆ ಸಂದಿದೆ. ಕೀಲು ನೋವು ಸಂಧಿವಾತ ಮತ್ತಿತರ ವಯೋ ಸಹಜ ವ್ಯಾಧಿಗಳ ಪತ್ತೆಗೆಮಾಡಿ ಅವುಗಳಿಗೆ ಪರಿಹಾರ ಸೂಚಿಸಿರುವರು.
“ ರೋಗ ತಡೆಯುವುದು ಗುಣ ಮಾಡುವುದಕ್ಕಿಂತ ಉತ್ತಮ  “ ಬರಿ ಹಿರಿಯ ನಾಗರೀಕರಿಗಿಂಯತ ಎಲ್ಲ ವಯಸ್ಸಿನವರಿಗೂ ಅನುಕೂಲವಾಗುವ ಕ್ರಮದ ಯೋಚನೆ ಬದಿತು, ಅವರಿಗೆ, ಆಗ ಸದಾಶಿವ ನಗರದ ಪರ್ಕಿನಲ್ಲಿರುವ ಜಿಮ್‌ನ ಉದಾಹರಣೆ ಯಾರೋ ಕೊಟ್ಟರು
. ಆದರೆ ಅಲ್ಲಿ ಪ್ರವೇಶಕ್ಕೂ ಶುಲ್ಕವಿದೆ. ಆದರೆ ಇಲ್ಲಿ ಎಲ್ಲವೂ ಉಚಿತ. ಆಗ ಬಂದದ್ದು ಬೆಂ ನ. ಮಹಾನಗರ ಪಾಲಿಕೆ, ಆರ್‌ಎಂ ಜೆಡ್‌ (ರಹೆಜಾಗ್ರೂಪ್ _ ಮತ್ತು ವಾಕರ್‌ ಗ್ರೂಪ್‌  ಸಹಯೋಗದಿಂದ ಈ ಕನಸು ನೆನಸಾಯಿತು. ಸುಮಾರು ಇಪ್ಪತ್ತು ಲಕ್ಷ ಹಣವನ್ನು ನೀಡಿದ ರೆಹೆಜ ಸಮೂಹದವರ. ಅವರ ನೆರವಿನಿಂದ ಟರ್ಕಿ ಯಿಂದ ಅಗತ್ಯ ಉಪಕರಣಗಳನ್ನು . ಸ್ಥಳ ಮತ್ತು ಸ್ಥಾಪನೆಯ ಹೊಣೆ ಹೊತ್ತರು. ವಾಕರ್‌ ಮೇಲುಸ್ತುವಾರಿ ವಹಿಸಿದರು ಆಮದು ಮಾಡಲಾಯಿತು. ಜತೆಗೆ ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರವೂ ದೊರೆಯಿತು.. ಅದರ ಫಲವೇ ಮುಕ್ತ   ಜಿಮ್‌. ಇಲ್ಲಿ 
ಪಾರ್ಕಿಗೆ ಬರುವ ಎಲ್ಲರೂ ಲಾಭ ಪಡೆಯಬಹುದು. ಅದರ ಮಾಹಿತಿ ಇದ್ದ ನನ್ನ ಮೊಮ್ಮಗಳು ಹಿತಾ ಬೆಳಗ್ಗೆ ತಾನೂ ನನ್ನ ಜೊತೆ ವಾಕಿಂಗ್‌ಗೆ ಬಂದಳು. ಬೆಳಗ್ಗೆ ೫ ರಿಂದ  ಹತ್ತರವರೆಗೆ  ಅಲ್ಲಿರುವ ಹತ್ತು ಉಪಕರಣಗಳಲ್ಲಿ   ಸರಾಸರಿ ಮೂರು ನಿಮಿಷಕ್ಕೆ ಒಬ್ಬರಂತೆ ಗಂಟೆಗೆ ಇಪ್ಪತ್ತು ಜನ ಅಂದರೆ ಹತ್ತು ಉಪಕರಣಗಳಲ್ಲ್ಲಿ ಒಟ್ಟಿನಲ್ಲಿ ಎರಡು ನೂರು ಜನ ಭಾಗವಹಿಸುವರು ದಿನದಲ್ಲಿ ಆರು ಗಂಟೆ ಕೆಲಸ ಮಾಡಿದರೂ ಫಲಾನುಭವಿಗಳ ಸಂಖ್ಯೆ ಸಾವಿರಕ್ಕೂ ಮಿಗಿಲು. ಸಾವಿರ ಜನರು ಆರೋಗ್ಯವರ್ಧಕ ಚಟುವಟಿಕೆಯಲ್ಲಿ ಪಾಲುಗೊಳ್ಳುವರು.
 ಬೆಳಗ್ಗೆ ಐದು ಗಂಟೆಗೆ ಇಲ್ಲಿ ವ್ಯಾಯಾಮದ ಪ್ರಾರಂಭ.ಒಂದು ವಿಶೇಷವೆಂದರೆ ಇಲ್ಲಿಯಾರೂ ಅಧಿಕೃತ ತರಬೇತಿ ದಾರರಿಲ್ಲ. ತುಸು ಅನುಭವ ಇರುವವರು ಹೊಸಬರಿಗೆ ಹೇಗೆ ಮಾಡಬೇಕೆಂದು ತಿಳಿಸುವವರು. ಅಂದರೆ ಕಲಿಯುವ ಮತ್ತು ಕಲಿಸುವ ಪ್ರಕ್ರಿಯೆ ಇಲ್ಲಿ ನಿರಂತರ ಮತ್ತು ಮುಕ್ತ.. ಯಾವುದು ಕಡ್ಡಾಯವಲ್ಲ. ಅದರಿಂದ ವಯಸ್ಸು ಲಿಂಗ, ವರ್ಗ ಮತ್ತು ಜಾತಿಮತಗಳ ಅಂತರವಿಲ್ಲದೆ ಎಲ್ಲರೂ ಖುಷಿಯಿಂದ ಭಾವಹಿಸುವರು. ಸೀರೆ ಉಟ್ಟು ಹೂ ಮುಡಿದಮುತ್ತೈದೆ,   ಬುರುಖಾ ಧರಿಸಿದ ಮಹಿಳೆಯ ಜೊತೆ ಡಬಲ್‌ವಾಕರ್‌ನಲ್ಲಿ  ಜೊತೆ ಗೂಡಿರುವುದು ನಿಜಕ್ಕೂ ಪ್ರಜಾಪ್ರಭುತ್ವದ  ಪ್ರಭುದ್ಧತೆ ಮತ್ತು ಜ್ಯಾತ್ಯಾತೀತೆ ಹಾಗೂ ವರ್ಗ ಸಾಮರಸ್ಯಕ್ಕೆ ಪೂರಕಕವಾಗಿದೆ ಎನ್ನಬಹುದು .







ವಾಕರ್‌
 ಏಕ ವ್ಯಕ್ತಿ ವಾಕರ್ ತೀವ್ರನಡಗೆಯ ಅನುಭವ ಕೊಡುವುದು. ಅವರವರ ಸಾಮರ್ಥ್ಯಕ್ತಕೆ ಕ್ಕಂತೆ ವೇಗ ವಾಗಿ ನಡೆಯಬಹುದು. ಇದರಲ್ಲಿ ಹತ್ತುನಿಮಿಷ ಕೆಲಸ ಮಾಡುವುದು ಸಾಮಾನ್ಯ ನಡಗೆಯ ಅರ್ಧ ಗಂಟೆಗೆ ಸಮ 





ಸ್ವಿಂಗರ್
ಲೋಲಕದಂತೆ ಆಚೀಚೆ ಚಲಿಸುವ ಈ ಉಪಕರಣದಿಂದ  ದೇಹದ  ಸಮತೋಲನ ಹೆಚ್ಚುವುದು. ಸಾಧಾರಣವಾಗಿ ರಕ್ತದ ಏರೊತ್ತಡ ಇರುವವರಿಗೆ ಇದು ಸಲ್ಲ.ಒಂದು ರೀತಿಯಲ್ಲಿ ಹಳೆಯಕಾಲದ ಜೋಕಾಲಿಗೆ ಸಮನಾಗಿರುವುದು



ಸೈಕಲ್‌ಸವಾರಿ
ಕಾಲುಗಳಿಗೆ ಸಾಕಷ್ಟು ವ್ಯಾಯಮ ನೀಡುವ ಸೈಕಲ್‌ಸವಾರಿ. ಕಾರಿನಲ್ಲೇ ಕುಳಿತು ಓಡಾಡುವವರಿಗೂ ಒಂದು ಹೊಸ ಅನುಭವ. ಇಲ್ಲಿ ಹಿಂದು ಮುಂದ ಎರಡೂ ಕಡೆ ಪೆಡಲ್‌ಹೊಡೆಯಬಹುದು. ವೇಗ ಅವರವರಿಗೆ ಬಿಟ್ಟದ್ದು

ಆಡುವವರಿಗೂ ಖಷಿ ನೊಡುವವರಿಗೂ ಖುಷಿ









ಜೋಡಿ ವಾಕರ್‌

ಜೀವನದಲ್ಲೂ ಜೋಡಿಯಾಗಿ ನಡೆವ ಚಂದ್ರಶೇಖರ್‌ ಮತ್ತು ಮಂಗಳ     ವಾಕರ್‌ನಲ್ಲೂ ಒಟ್ಟಿಗೆ ವ್ಯಾಯಾಮ ಮಾಡುತ್ತಿರುವರು.










No comments:

Post a Comment