Saturday, April 6, 2013

ಭಕ್ಷಕರೇ ರಕ್ಷಕರಾದ ಪಕ್ಷಿಧಾಮ-ವೇದಾಂತಂಗಳ್



  ತಮಿಳು ನಾಡಿನಲ್ಲಿ  ದೇಶದಲ್ಲಿಯೇ ಅತ್ಯಂತ ಹಳೆಯದರವುಗಳಲ್ಲಿ  ಒಂದಾದ  ಪಕ್ಷಿಧಾಮವಿದೆ..ಇದಕ್ಕೆ ಕನಿಷ್ಟ 250 ವರ್ಷಗಳ ಇತಿಹಾವಿದೆ. . ಅದು ಅಷ್ಟು ದೊಡ್ಡದೇನಲ್ಲ. ಆದರೆ ಅದರ ವಿಶೇಷತೆ ಇರುವುದು  ಅದರ ರಕ್ಷಣೆಗೆ ಅಲ್ಲಿನ ಜನರೇ ಕಂಕಣ ಬದ್ಧರಾಗಿರುವುದು. ಅದೂ ಶತಶತಮಾನಗಳಿಂದ. ತಮ್ಮ ಸ್ವಂತ ಆಸ್ತಿಯಂತೆ ಆ ಚಿಕ್ಕಗ್ರಾಮದ ಜನ ಕಾಪಾಡಿಕೊಂಡು ಬಂದಿರುವುರು. ಕಂಚೀಪುಪರಂ ಚಿಲ್ಲೆಯ ಚಂಗಲ್‌ಪೇಟೆ ತಾಲೂಕಿಗೆ ೧೦ ಮೈಲು ದೂರದಲ್ಲಿ ಇರುವ ಈ ಹಸಿರುಮಯಪ್ರದೇಶಕ್ಕೆ ದೇಶವಿದೇಶಗಳಿಂದ ಹಕ್ಕಿಗಳು ವಲಸೆಬರುತ್ತವೆ. ಅಲ್ಲಿರುವುದು  ಒಂದು ೩೦ ಹೆಕ್ಟೇರ್‌  ವಿಸ್ತೀರ್ಣದ ಕೆರೆ. ಅದೂ ಸಂಪೂರ್ಣ ಮಳೆಯಾಶ್ರಿತ. ಇದಕ್ಕೆ ಕನಿಷ್ಟ ಪಕ್ಷ ೨೫೦ ವರ್ಷಗಳ ಇತಿಹಾಸವಿದೆ. ಈ ಪ್ರದೇಶ ಮೊದಲಿನಿಂದಲೂ ಚಿಕಪುಟ್ಟ ಕೆರೆ ಕುಂಟೆಗಳಿಂದ ಕೂಡಿದ್ದು ಪಕ್ಷಿಗಳಿಗೆ ಸುಲಭವಾಗಿ ಆಹಾರ ದೊರೆಯುವುದು. ಎಲ್ಲ ಕಡೆ ಹಚ್ಚ ಹಸಿರಿನ ಭತ್ತದ ಗದ್ದೆಗಳು. ನಗರದ ಸದ್ದುಗದ್ದಲದಿಂದ ದೂರ.ವಿಚಿತ್ರ ಎಂದರೆ ಈ ಊರಿನ ಹೆಸರು ವೇದಾಂತಂಗಳ್‌ ಎಂದರೆ ತಮಿಳಲ್ಲಿ ಬೇಟೆಗಾರರ ಪಾಳ್ಯ ಎಂದು. ಆದರೆ ಭಕ್ಷಕರೇ  ಇಲ್ಲಿನ ಪಕ್ಷಿಗಳ ರಕ್ಷಕರಾಗಿದ್ದಾರೆ.
ಇದು ಜನರಿಂದ ಜನರಿಗಾಗಿ ಇರುವ ಪಕ್ಷಿಧಾಮ ಎಂದರೆ  ಅಚ್ಚರಿ ಬೇಡ. 

ಅಲ್ಲಿನ ಜನ  ಹಕ್ಕಿಗಳು ತಮ್ಮ ಜಮೀನಿನಲ್ಲಿ ಹಕ್ಕಿಗಳು ಹಾಕುವ ಹಿಕ್ಕೆಯಿಂದ ಬೆಳೆ ಹೆಚ್ಚಾಗಿ ಬರುವುದೆಂಬ ಸತ್ಯವನ್ನು ಬಹಳ ಹಿಂದೆಯೇ ಮನಗಂಡರು.. ಕೆರೆಯಲ್ಲಿ ಹಕ್ಕಿಗಳ ವಸತಿಯಿಂದಾಗಿ ನೀರಿನಲ್ಲಿನ ಸಾರಜನಕದ ಅಂಶ ಅಧಿಕವಾಗಿ ಯಾವದೇ ಗೊಬ್ಬರ ಹಾಕದೆ ಬರಿ ಕೆರೆಯ ನೀರಿನಿಂದಲೇ ಉತ್ತಮ ಫಸಲು ದೊರೆಯುವಾಗ ತಮ್ಮ ಆದಾಯದ ಮೂಲವನ್ನು ರಕ್ಷಿಸಲು ಮುಂದಾದರು. ೧೮ನೇ ಶತಮಾನದ ಕೊನೆಯಲ್ಲಿ ಅಲ್ಲಿರುವ ಪಕ್ಷಿಗಳ ಬೇಟೆಯಾಡಲು ಬರುತಿದ್ದ  ಆಂಗ್ಲ  ಸೈನಿಕರ ವಿರುದ್ಧ ಕಲೆಕ್ಟರ್‌ರಿಗೆ ದೂರು ಸಲ್ಲಿಸಿದರು. ಬ್ರಿಟಿಷರ ಆಡಳಿತವಿದ್ದಾಗ ಅವರ ಸೈನಿಕರ ವಿರುದ್ಧವೇ ದೂರು ಸಲ್ಲಿಸಲು ಎರಡು ಗುಂಡಿಗೆ ಬೇಕು. ಅವರ ಪಕ್ಷಿ ಪ್ರೀತಿ ಜೊತೆಗೆ ಅದರಿಂದ ತಮಗಾಗುವ ಲಾಭ ಅವರಿಗೆ ಧೈರ್ಯ ಕೊಟ್ಟಿತು.೧೭೯೮ ರಲ್ಲಿಯೇ ಆ ಬಗ್ಗೆ ಸರ್ಕಾರವು  ಜನರ ಒತ್ತಾಯದ ಮೇರೆಗೆ  ಆದೇಶ ಹೊರಡಿಸಿತು. ೧೯೩೬ ರಲ್ಲಿ ಅದನ್ನು ಅಧಿಕೃತ ಪಕ್ಷಿಧಾಮವಾಗಿ ಘೋಷಿಸಲಾಯಿತು.. ಪರಿಸರ ರಕ್ಷಣೆಗೆ  ಜನಪರ ಚಳುವಳಿ ಮಾಡಿದುದು  ಅದೇ ಮೊದಲುಎನ್ನಬಹುದು.
 ಕೆರೆಯಲ್ಲಿ ಬೇಸಿಗೆಯಲ್ಲಿನೀರಿನ ಸಂಗ್ರಹ  ಕಡಿಮೆಯಾಗುವುದು. ಮಳೆಗಾಲದಲ್ದ್ಲಿಬಂದ ನೀರನ್ನು ಸಂಗ್ರಹಿಸಲು ಮೈಲುದ್ದದ  ಕೆರೆ ಏರಿಯನ್ನು ಭದ್ರ ಪಡಿಸಲಾಗಿದೆ. ಅಲ್ಕೆಲಿ ರಸ್ರೆತೆ ಪಕ್ಯಷಿ ವೀಕ್ಲ್ಲಿಷಣೆ ಗೋಪುರ , ಬೆರಲಲ್ಲಿ ಕುಳಿತು ನೋಡಲು ಬೆಂಚುಗಳು ಇವೆ. ಕೆರೆಯಲ್ಲಿ  ಹೆಚ್ಚು ಜಲ ಸಸ್ಯಗಳುಇಲ್ಲ . ಮೊದಲು ಅಲ್ಲಿರುವ ೫೦೦ ಮರಗಳೇ ಹಕ್ಕಿಗಳಿಗೆ ಆಧಾರ.ಮತ್ತೆ ೧೯೭೩ ರಲ್ಲಿ ೧೦೦ ಗಿಡಗಳನ್ನು ೧೯೯೬ ರಲ್ಲಿ ೧೦೦೦ ಗಿಡಗಳನ್ನೂ ನೆಟ್ಟು  ಬೆಳೆಸಲಾಗಿದೆ
ಅತಿ ಚಿಕ್ಕದಾದ ಆದರೆ ಚೊಕ್ಕವಾಗಿರುವ ಈ ಸ್ಥಳವು ಸುಮಾರು ೩೦೦೦೦ ಹಕ್ಕಿಗಳ ವಲಸೆ ತಾಣವಾಗಿದೆ. ಮಳೆಗಾಲದಲ್ಲಿ  ಅತಿಹೆಚ್ಚು ಮಳೆಯಾದಾಗ ಮರಗಳು ಮುಳುಗಿದರೂ ಅವುಗಳ ತುದಿಯಲ್ಲಿ ಹಕ್ಕಿಗಳು ಗುಂಪಾಗಿ ಗುಡುಕಟ್ಟಿ ನೆಲಸಿರುವುದು ನೋಡಿದರೆ ಹಕ್ಕಿಗಳ  ದ್ವೀಪದಂತೆ ಕಾಣುವ ನೋಟ  ಬಹು ಚಂದ.ಅಕ್ಟೋಬರ್‌ನಿಂದ  ಜನವರಿವರೆಗ ಹಕ್ಕಿಗಳ ದಟ್ಟಣೆ ಬಹಳ. ಅದು ಪಕ್ಷಿವೀಕ್ಷಣೆ ಉತ್ತಮ ಅವಕಾಶ ಕೊಡುವುದು ಅದರಲ್ಲ್ಲೂ ಸಾವಿರಾರು ಹಕ್ಕಿಗಳನ್ನು ಹತ್ತಿರದಿಂದ ನೋಡಲು ಸಾಧ್ಯವಿದೆ.
ಇಲ್ಲಿಗೆ ಮೊದಲು ಬರುವುದು ತೆರೆದ ಕೊಕ್ಕಿನ ಕೊಕ್ಕರೆ. ಅದು ವಾಪಸ್ಸು ಹೋಗುವುದರೊಳಗೆ ಎರಡು ಸಲ ಮರಿಮಾಡುವುದು.ಇಲ್ಲಿಗೆ ಸುಮಾರು ನಲವತ್ತು ಪ್ರಬೇಧದದ ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ  ಬಂದು ಸಂತಾನಾಭಿವೃದ್ದಿ ಮಾಡಿಕೊಂಡು ಹೋಗುತ್ತವೆ. ಇವಗಳೂ ಅಲ್ಲದೆ 
ಇಲ್ಲಿ ಕಾಡು ಬೆಕ್ಕು ,ನರಿ, ಮೊಲ., ಕರಡಿ ಮಂಗ ಮೊದಲಾದ ಪ್ರಾಣಿಗಳೂ ಕಾಣ ಸಿಗುತ್ತವೆ

ಇಲ್ಲಿಗೆ ಯುರೋಪು ನಿಂದ ಅಲ್ಲಿನ ಅತಿ ಚಳಿತಾಳಲಾರದೆ  ವಲಸೆ ಬರುವಹಕ್ಕಿಗಳೇ ಹೆಚ್ಚು , ಬಂಗ್ಲಾದೇಶ, ಶ್ರೀಲಂಕಾದಿಂದಲೂ ಬರುತ್ತವೆ.ಅವುಗಳನ್ನು ಗುರುತಿಸುವುದ ಬಹು ಸುಲಭ.


ಇಲ್ಲಿ ಪಕ್ಷಿ ವೀಕ್ಷಕರಿಗೆ ಬಹಳ ಅನುಕೂಲವಿದೆ. ಕೆರೆಯ ದಂಡೆಯಮೇಲೆ  ಉದ್ದಕ್ಕೆ ಓಡಾಡುತ್ತಾ ಕೇವಲ ಕೆಲವೇ ಮೀಟರ್‌ಗಳ ಅಂತರದಲ್ಲಿರುವ ಪಕ್ಷಿಗಳ ಚಟುವಟಿಕೆಯನ್ನು ಗಮನಿಸಬಹುದು.ಅಲ್ಲದೆ ದೋಣಿಗಳ ಮೂಲಕ ಮರಗಳ ಹತ್ತಿರವೇ ಹೋಗಲು ಸಾಧ್ಯ.ಇಲ್ಲಿನ ಜನರ ಇನ್ನೊಂದ ಸಾಧನೆ ಎಂದರೆ ಈ ಪ್ರದೇಶವು ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತವಾಗಿದೆ. ಅಷ್ಟೇ ಅಲ್ಲ. ಅಲ್ಲಿ ಯಾವುದೇ ಜಂಕ್‌ ಫುಡ್‌ ಮಾರಾಟ ಮಾಡುವುದಿಲ್ಲ. ಏನಿದ್ದರೂ ಹಣ್ಣು ಹಂಪಲು ಮಾತ್ರ   ಅವೂ ತಾಜಾ ಹಾಗೂ ಬಹಳ ಅಗ್ಗವಾಗಿ ದೊರೆಯುತ್ತವೆ.
ಪ್ರವಾಸಿಗರಿಗೆ ಚಿತ್ರ ಸಹಿತ ಮಾಹಿತಿ ನೀಡಲು ವ್ಯವಸ್ಥೆ ಮಾಡಿರುವರು,ಪೂರ್ಣ ವಾತಾವರಣವೇ ಪಕ್ಷಿಮಯ ವಾಗಿದೆ..ಅಲ್ಲಲ್ಲಿ ವಿವರವಿರುವ ಫಲಕಗಳು, ನೀರು  ಕುಡಿಯುವ ನಳವೂ ಸಹಿತ ಪ್ರಾಣಿ , ಪಕ್ಷಿಗಳ ಆಕಾರದಲ್ಲಿ ರೂಪಿಸಿರುವುದು ಪ್ರವಾಸಿಗರಿಗೆ ಉತ್ತಮ ಸಂದೇಶ ರವಾನೆ ಮಾಡಲು ಸಹಾಯಕ.
.ಕೆರೆಯ ಸುತ್ತಮುತ್ತಲೂ ಹರಡಿರುವ ಹಸಿರು ಮುರಿಯುವ ಗದ್ದೆಗಳಲ್ಲಿ ಜನ ಕೆಲಸ ಮಾಡುತಿದ್ದರೂ  ಅವರ ಪಕ್ಕದಲ್ಲೇ ಯಾವದೇ ಭೀತಿಇಲ್ಲದೆ ಹಕ್ಕಿಗಳು ತಮ್ಮ ಪಾಡಿಗೆ ತಾವು ಹುಳು ಹುಪ್ಪಡಿ  ಹುಡುಕುತ್ತಾ ಇರುವುದು ಸಾಮಾನ್ಯ ದೃಶ್ಯ. ಮಾನವ ಮತ್ತು ಹಕ್ಕಿಗಳ ಸಾಮರಸ್ಯ ನೋಡಲು ಇಲ್ಲಿ ಸಾಧ್ಯ .ಇದಕ್ಕೆ ಕಾರಣ ಶತಶತಮಾನದಿಂದ ಬಂದ ಪರಸ್ಪರ ನಂಬಿಕೆ ವಿಶ್ವಾಸ.

ಭಕ್ಷಕರೇ ರಕ್ಷಕರಾದಾಗ ಸುರಕ್ಷತೆಗೆ  ಬೇರೆ ಇನ್ನೇನು ಬೇಕು.
ವಲಸೆ ಬರುವ ಕೆಲ ಹಕ್ಕಿಗಳು

















Migrating Avian-Fauna: Garganey teals, glossy ibis, grey heron, grey pelican, open-billed stork, painted stork,vsnake bird, spoonbill, spot bill duck, cormorants, darter, grebes, large egret, little egrets, moorhen, night herons, paddy bird, painted stork, pintails, pond heron, sandpiper, shovellers, terns, white ibis.


No comments:

Post a Comment