Friday, April 12, 2013

ತಾಳೆಗರಿ ಕಲಾಕೃತಿ-ಪಟ ಚಿತ್ರ


                                                    ಪಟ ಚಿತ್ರ

ಒರಿಸ್ಸಾದ ಪ್ರಕಾಶ್‌ ರಾಣಾ ನಮ್ಮದು “ಪಟ ಚಿತ್ರಕಲೆ ’  ಎಂದಾಗ ನನಗೆ ತುಸು ಗೊಂದಲವಾಯಿತು. ಚಿತ್ರಪಟ ಕೇಳಿ ಬಲ್ಲೆ.  ಆದರೆ ಇವರದು ತಿರುವು ಮುರುವು. ಬಹುಶಃ ಅವರ ಭಾಷೆಯ ಜಯಮಾನ ಹಾಗಿರಬಹುದು ಎಂದುಕೊಂಡು ಸುಮ್ಮನಾದೆ. ದಕ್ಷಿಣ ಚಿತ್ರಕ್ಕೆ ಭೇಟಿಕೊಟ್ಟಾಗ  ಕೇಳಿ ಬಂದ  ಮಾತು ಅದು. . ಅಲ್ಲಿನ ಕಲಾಬಜಾರ್‌ನಲ್ಲಿ ಬೇರೆಲ್ಲ ಅಂಗಡಿಗಳ ಜೊತೆ ಸ್ಪರ್ದೆ ಹೂಡಿ ಒಂದೆರಡು ಅಂಗಡಿಗಳಲ್ಲಿ ಹರಡಿರುವುದು ಬರಿ ತಾಳೆಗರಿಗಳುಮಾತ್ರ.


 ಒಂದು ಅಂಗುಲ ಅಗಲ,ಆರು ಅಂಗುಲ ಉದ್ದ ಗರಿಗಳಿಂದ ಹಿಡಿದು  ಎರಡು ಅಡಿ ಅಗಲ ಮತ್ತು ಮೂರು ಅಡಿ ಉದ್ದದ ವಾಲ್‌ಹ್ಯಾಂಗಿಂಗ್‌ವರೆಗ ಎಲ್ಲವೂ ತಾಳೆ ಗರಿಗಳಿಂದಲೇ ಮಾಡಿದವು.ಅಷ್ಟು ಉದ್ದದ ತಾಳೆಗರಿ ಸಿಗುವುದು ಸಹಜ ಆದರೆ ಅಡಿಗಟ್ಟಲೆ ಅಗಲದ ತಾಳೆಗರಿಗಳು ದೊರಕುವುದು ಸಾಧ್ಯವೇ ಇಲ್ಲ. ಆದರೆ ಅವರು ಹಲವು ಗರಿಗಳನ್ನು ಜೋಡಿಸಿ ತಮಗೆ ಬೇಕಾದ ಅಗಲದ ಗರಿಗಳ ಪಟಗಳನ್ನು ಮಾಡಿದ್ದರು . ಬಹುಶಃ ಅದಕ್ಕೇ ಅವರು ಪಟ ಚಿತ್ರ ಅಂದಿರಬಹುದು.
ತಾಳೆಗರಿಯಿಂದ ವಿವಿಧ ಆಕೃತಿಗಳನ್ನು ತಯಾರಿಸುವುದನ್ನು ನೋಡಿ ಬಲ್ಲೆ. ಹೂ ಬುಟ್ಟಿ, ಚಾಪೆ , ಬೀಸಣಿಕೆ , ಗಿಲಿಕಿ ಇತ್ಯಾದಿಗಳು ಒಂದುಕಾಲದಲ್ಲಿ  ಬೇಡಿಕೆ ಪಡೆದಿದ್ದವು ಪ್ಲಾಸ್ಟಿಕ್‌ ಬಂದ ಮೇಲೆ ಅವುಗಳು ಮಾಯವಾದವು ವಿಶೇಷವಾಗಿ ಚಿತ್ರಗಳು ಇರುವ   ಮಡಚಿದರೆ ಮುಷ್ಠಿಯಷ್ಟಾಗುವ ಬಿಚ್ಚಿದರೆ ವೃತ್ತಾಕಾರದ ಬೀಸಣಿಕೆಗಳು ಬೇಸಿಗೆಯಲ್ಲಿ ಸಿರಿವಂತರ ಮನೆಯಲ್ಲಿ ಕಾಣಸಿಗುತಿದ್ದವು ಅವುಗಳ ಮೇಲೆ ಬಣ್ಣದ ಚಿತ್ರಗಳೂ ಇರುತಿದ್ದವು ವಿದ್ಯುತ್‌ ಪಂಕಾ ಬಂದಮೇಲೆ ಅವುಗಳ ಗಾಳಿಗೆ ಗರಿಗಳ ಬಿಸಣಿಕೆ ಹಾರಿ ಹೊದವು.ಇದೆಲ್ಲ ಮೂತ್ತು ವರ್ಷದ ಹಿಂದಿನ ನೆನಪು.

ಈಗ ಮತ್ತೆ ಕಣ್ಣೆದುರಿಗೆ ತಾಳೆ ಗರಿಗಳು ಹರಡಿ ಕೊಂಡಿದ್ದವು. ತಾಳೆ ಗರಿಗಳು ಹಿಂದಿನ ಕಾಲದ ಬರಹದ ಮಾಧ್ಯಮವಾಗಿದ್ದವು, ಸುಮಾರು ಎರಡುನೂರು  ವರ್ಷದ ಹಿಂದಿನವರೆಗೆ ಅವುಗಳ ಮೇಲೆ ಲಿಪಿಕಾಕಾರರು ಗ್ರಂಥವನ್ನು ಕೊರೆಯುತಿದ್ದರು. ಆ ಹಸ್ತಪ್ರತಿಗಳ ರಕ್ಷಣೆಗೆ ಸರ್ಕಾರವು “ನ್ಯಾಷನಲ್ ಮ್ಯಾನ್ಯು ಸ್ಕ್ರಿ ಪ್ಟ್ ಮಿಶನ್‌ “ ಸ್ಥಾಪಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ಅವುಗಳ ಸಂಗ್ರಹ ಮತ್ತು ಸಂರಕ್ಷಣೆಗ ವೆಚ್ಚ ಮಾಡುತ್ತಿದೆ. ಆದರೂ ಇದು ಒಂದು ಅಭಿಯಾನದ ರೂಪ ತಳೆದು ಜನ ಸಮುದಾಯದ ಮನ ಮುಟ್ಟ ಬೇಕಿದೆ.

ಬಿ ಎಂ ಶ್ರೀ ಪ್ರತಿಷ್ಠಾನದಲ್ಲಿ ಹಸ್ತ ಪ್ರತಿ ಕಾರ್ಯದಲ್ಲಿ ತೊಡಗಿಸಿ ಕೊಂಡ ನನಗೆ ಅಷ್ಟುಪ್ರಮಾಣದ ತಾಳೆಗರಿಗಳನ್ನು ನೋಡಿ ಬಹಳ ಸಂತೋಷವಾಯಿತು.ಅಲ್ಲದೆ ಎರಡು ಮೂರು ರೀತಿಯ ಕಂಟಗಳು ಅಲ್ಲಿದ್ದವು.
  .ಹಸ್ತ ಪ್ರತಿ ಅಧ್ಯಯನದ ಕುರಿತು ಆಸಕ್ತಿ ಬೆಳೆದಾಗ ದಕ್ಷಿಣ ಭಾರತದ ಪ್ರವಾಸದಲ್ಲಿ ಎಲ್ಲಿಯದರೂ ತಾಳೆ ಮರ ಕಂಡರೆ ಒಹೋ! ಇದರ ಗರಿಗಳನ್ನೆ ಪುರಾತನರು ಹಸ್ತಪ್ರತಿಗೆ ಬಳಸುತಿದ್ದರು. ಎಂದು ಮನದಲ್ಲಿ ಅಂದುಕೊಂಡು ಅದು ಯಾವ ಜಾತಿಯ ತಾಳೆ ಎಂದು ಅರಿಯಲು ಯತ್ನಿಸುವ ನನಗೆ ಅಲ್ಲಿನ ಅಂಗಡಿನೋಡಿ ಬಹಳ ಖುಷಿಯಾಯಿತು.
ತಾಳೆಗರಿಯಲ್ಲಿ ಚಿತ್ರ ಬರೆದು ಹಣ ಮಾಡಬಹುದೆಂಬ ಕಲ್ಪನೆಯೇ ಹೊಸದೆನಿಸಿತು. ನಮ್ಮಳ್ಲಿ ತಾಲೆಗರಿಗಲಲ್ಲಿ ಚಿತರವಿರುವು ಬಹಳ ವಿರಳ. ಜೈನ ಗ್ರಂಥಗಲಲ್ಲಿ ಚಿತ್ರಗಲಿರುವುದ, ರಾಮಾಯಣ ಮತ್ತು ಮಹಾಭಾರತದಲ್ಲಿ ಸಮಬಂಧಿಸಿರುವ ಚಿತ್ರಗಳಿರುವ ಪ್ರತಿ ಅಗೀಗ ಕಣ್ಣಿಗೆ ಬಿದ್ದಿವೆ.ಧವಳ ಗ್ರಂಥವು ಮಾತ್ರ ಸಚಿತ್ರವಾಗಿದ್ದು ಅದರ ವರ್ಣ ಚಿತ್ರಗಳಿಂದ ತುಂಬ ಆಕರ್ಷಕವಾಗಿದೆ.ನನಗೆ ತಿಳಿದಿರುವ ಮಟ್ಟಿಗೆ ಈ ಮಾಧ್ಯಮವನ್ನು ಕಲಾಪ್ರಕಾರವಾಗಿಸಿಕೊಂಡು ಬದುಕುವ ದಾರಿ ಕಂಡವರು ಬಹಳ ವಿರಳ.ಅದನ್ನುಕರ್ನಾಟಕದಲ್ಲಂತೂ ನಾನು  ಕಂಡೇ ಇಲ್ಲ. ಆದರೆ ತಮಿಳುನಾಡಿನಲ್ಲಿ ತಾಳೆಗರಿಯ ಮೇಲೆ ಚಿತ್ರ ಬಿಡಿಸಿರುವುದು ಬಹಳ ಅಚ್ಚರಿ ತಂದಿತು. ಆದರೆ ಚಿತ್ರ ಬಿಡಿಸುವವರು ಒರಿಸ್ಸಾದವರು. ತಾಳೆಗರಿಗಳಿಗೆ ದಕ್ಷಿಣ ಬಾರತ ಪ್ರಸಿದ್ಧ. ಆದರೆ ಅದರ ಇನ್ನೊಂದು ಸಾಧ್ಯತೆಯನ್ನುಬಳಸಿಕೊಂಡವರು ಮಾತ್ರ ನೆರೆಯವರಾದ ಒರಿಸ್ಸಾದವರು.


ಪ್ರಕಾಶ್‌ ರಾಣ ಅವರು ಇಲ್ಲಿ ಕಳೆದ ಹತ್ತಾರು ವರ್ಷದಿಂದ ಪಟ ಚಿತ್ರವನ್ನೇ ಜೀವನಾಧಾರ  ಮಾಡಿಕೊಂಡಿರುವರು. ಅವರ ಸೋದರ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಈಪ್ರಕಾರದ ಕಲಾವಿದರು.ಅವರೇ ಅನೇಕರಿಗೆ ಈಪ್ರಕಾರದ ಕಲಾಶಿಕ್ಷಣ ನೀಡುವರು.ಮೊದಲನೆಯದಾಗಿ ಕಲಿಯುವ ವ್ಯಕ್ತಿ ಕಲಾವಿದನಾಗಿರಬೇಕು ನಂತರ ಈ ಮಾಧ್ಯಮದ  ಬಳಕೆಯವಿಧಾನವನ್ನು ಕಲಿಸಲಾಗುವುದು ಎಂದು ತಿಳಿಸಿದರು. ವಿಶೇಷವೆಂದರೆ ಅವರಿ ತಾಳೆಯೋಲೆಗಳನ್ನು ಸಿದ್ಧ ಪಡಿಸಲು ಪುರಾತನ ಪದ್ದತಿಯನ್ನೇ ಬಳಸುವರು. ಮತ್ತು ಚಿತ್ರವನ್ನು ಕಂಟ ದಿಂದ ಬರೆದು ನಂತರ ಬಣ್ಣ ಹಾಕುವರು.ಅಲ್ಲಿ ಗಮನಿಸಿದಂತೆ ಬಹು ವರ್ಣದ ಚಿತ್ರಗಳು  ಜನಪ್ರಿಯವಾಗಿವೆ..
ಇದನ್ನು ವಾಣಿಜ್ಯದೃಷ್ಟಿಯಿಂದ ಯಶಸ್ವಿಯಾಗಲು ಅವರು ಹತ್ತು ರೂಪಾಯಿಯ ಸರಳ ಒಂಟಿ ಗರಿಯಿಂದ ಹಿಡಿದು ಇಪ್ಪತ್ತು ಸಾವಿರದ ವರೆಗಿನ ಕಲಾಕೃತಿಗಳನ್ನು ರಚಿಸುವಲ್ಲಿ ಸಿದ್ದ ಹಸ್ತರು, ಒಂಟಿಗರಿಗಳನ್ನು ಓದುಗರು ಪೇಜ್‌ಮಾರ್ಕರ್‌ ಆಗಿ ಬಳಸಲು ಇಷ್ಟ ಪಡುವರು ಎಮದು ತಿಳಿಯಿತು ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಿಂದೂಗಳಾದರೆ ಪುರಾಣ ಪ್ರಕರಣಗಳನ್ನು ಚಿತ್ರಿಸಿರುವರು,.ಕ್ರೈಸ್ತರಿಗೆ ಬೈಬಲ್ಲಿನ ಕಥಾನಕಗಳನ್ನು ಚಿತ್ರಿಸಿದರೆ ಇಸ್ಲಾಂಅನುಯಾಯಿಗಳಿಗೆ ಬಳ್ಳಿ, ಹೂವು ಖುರಾನ್‌ವಾಕ್ಯಗಳು  ಇರುವ ಚಿತ್ರ ಸಿದ್ಧ ಪಡಿಸಿ ಕೊಡುವರಂತೆ.,ಇನ್ನು ನಿಸರ್ಗದ ಚಿತ್ರಗಳು , ಜನ ಜೀವನ ಬಿಂಬಿಸುವ ಪಟಚಿತ್ರಗಳಿಗೆ ಎಲ್ಲರಿಂದಲೂ ಬೇಡಿಕೆ, ಅಂತೂ ಪಟ ಚಿತ್ರವು ಭಾರತದ ಎಲ್ಲ ಧರ್ಮದವರಿಗೂ ಬೇಕಾದ ಕಲಾ ಮಾದ್ಯಮವಾಗಿ ಹೊರ ಹೊಮ್ಮಿದೆ. .  

No comments:

Post a Comment