Friday, April 5, 2013

ಗಾಜಲ್ಲಿ ಅರಳಿದ ಕಲೆ


                                  ಕರಗಿದ   ಗಾಜು   ಕಲಾಕೃತಿಯಾಯಿತು
ಚೆನ್ನೈ ಗೆ ಈಸಲ ಹೋದಾಗ ದಕ್ಷಿಣ ಚಿತ್ರ ಎಂಬಲ್ಲಿಗೆ ಭೇಟಿನೀಡಿದೆವು. ಅದು ದಕ್ಷಿಣ ಭಾರತದ ನಾಲ್ಕುರಾಜ್ಯಗಳ  ಕಾಣೆಯಾಗುತ್ತಿರುವ ಜನ ಜೀವನ ಪ್ರತಿಬಿಂಬಿಸುವ  ನಾಲ್ಕುವಿಭಾಗಗಳಿವೆ. ಹಾಗೆ ಹೋಗುತ್ತಿರುವಾಗ ಒಂದುಕಡೆ ಎರಡು ಗ್ಯಾಸ್‌ ಸಿಲಿಂಡರ್ ಜೊತೆಗೆ ವೆಲ್ಡಿಂಗ್‌ ಷಾಪಿನಂತಿರುವ ತಾಣ ಕಾಣಸಿಕ್ಕಿತು. ನಮಗೆ ಅಚ್ಚರಿ ಇಲ್ಲಿ ಏಕೆ ಈ ಗ್ಯಾಸ್‌ ವೆಲ್ಡಿಂಗ ಕೆಲಸ ನಡೆಯುತ್ತಿದೆ ಎಂದು. ಆದರೆ ಆಲ್ಲಿರುವ ವ್ಯಕ್ತಿ ಕಭ್ಭಿಣದ ಕೆಲಸ ಮಾಡುವ ಹಾಗೆ ಕಾಣಲಿಲ್ಲ. . ಸುಸಂಸ್ಕೃತನಾದ ಆಧುನಿಕ ಉಡುಪು ಧರಿಸಿದವ್ಯಕ್ತಿ . ಅವನ ಕೈನಲ್ಲಿ ಇದ್ದುದು ಗಾಜಿನಕಡ್ಡಿಗಳು.  ಮುಂದೆ ಹರಡಿದ್ದು ಗಾಜಿನ ನಳಿಕೆಗಳು.

Please come, and watch the demonstration of glassblowing art: ಎಂದು ನಗುತ್ತಾ ಆಹ್ವಾನಿಸಿದ.
ನಮಗೆ ಅದರ ತಲೆ ಬುಡ ತಿಳಿದಿರಲಿಲ್ಲ. ಸರಿ, ಏನೋ ಹೊಸದು ನೋಡೋಣ ಎಂದು ಅಲ್ಲಿ  ನಿಂತೆವು.
ನಮ್ಮನ್ನು ಕರೆದ ವ್ಯಕ್ತಿಯ ಹೆಸರು ಶ್ರೀನಿವಾಸ ರಾಘವನ್‌, ಆತ ಗಾಜಿನಲ್ಲಿ ಕುಸುರಿ ಕೆಲಸ  ಮಾಡುವ ಕಲಾವಿದ.
 ನಾವು ನೋಡುತ್ತಿರುವಂತೆ ಎರಡು ತೆಳುವಾದ ಗಾಜಿನ ಕಡ್ಡಿಗಳನ್ನು ಕೈನಲ್ಲಿ ಹಿಡಿದ. ನಂತರ ಗ್ಯಾಸ್‌ಸಿಲಿಂಡರ್‌ ಅನ್ನು ಆನ್‌ ಮಾಡಿದ. ತಿಳಿ ನೀಲಿ ಜ್ವಾಲೆ ಚಾಕುವಿನೋಪಾದಿಯಲ್ಲಿ ಹೊರ ಹೊಮ್ಮಿತು. ನೋಡ ನೋಡುತ್ತಿರುವಂತೆ ಅವನ ಕೈನಲ್ಲಿನ ಗಾಜಿನಕಡ್ಡಿಯ ತುದಿ  ಶಾಖಕ್ಕೆ ಕರಗಹತ್ತಿತು.. ಇನ್ನೊಂದು ಲೋಹದ ಕಡ್ಡಿಯನ್ನು ಬಳಸಿಒಂದೇ ನಿಮಿಷದಲ್ಲಿ ಗಾಜಿನ ಕಡ್ಡಿಯ ತುದಿಯಲ್ಲಿ ಹಂಸದ ಆಕೃತಿ ಅರಳಿತು. ಮುಂಗೈಅನ್ನು ಅತ್ತಿತ್ತ ತಿರುಗಿಸುತ್ತಾ ಕರಗಿದ ಗಾಜಿಗೆ ರೂಪ ಕೊಡತೊಡಗಿದ ನಮಗೆ ಆಗ ತಿಳಿಯಿತು ಅದೂ ಒಂದು ಕಲಾಪ್ರಕಾರ ಎಂದು.

ವಿವರ ವಿಚಾರಿಸಿದೆವು. ಅವನು ಮೂಲತಃ ಗ್ಲಾಸ್‌ವರ್ಕ್ಸನಲ್ಲಿ ಕೆಲಸ ಮಾಡಿದವನು. ಅಲ್ಲಿ ವೈಜ್ಞಾನಿಕ ಉಪಕರಣಗಳಾದ ಟೆಸ್ಟ್‌ಟ್ಯೂಬ್, ಬೀಕರ್‌ಇತ್ಯಾದಿಗಳನ್ನು ತಯಾರಿಸುವರು. ಅದಕ್ಕೆ ಅಗತ್ಯವಾದ ಮೂಲವಸ್ತು ಸಿಲಿಕಾನ್. ಅದನ್ನುಕಾಯಿಸಿ ಕರಗಿಸಿ ಬೇಕಾದ ಆಕಾರ ಕೊಡಲಬಹುದಿತ್ತು.ಕೆಲದಿನ ಫರಿದಾಬಾದ್‌ನ ಬಳೆ ತಯಾರಿಕಾ ಘಟಕದಲ್ಲೂ ಕೆಲಸ ಮಾಡಿ ಅನುಭವ ಪಡೆದನಂತರ ಅವನಲ್ಲಿದ್ದ ಕಲಾವಿದ ಹೊಸದು ಮಾಡಲು ಹಂಬಲಿಸಿದ. ಅದರ ಪರಿಣಾಮವೇ ಗ್ಲಾಸ್‌ ಬ್ಲೋಯಿಂಗ್‌ ಕಲೆ. ಇಲ್ಲಿ ಬೇರೆ ಕಚ್ಚಾ ಸಾಮಗ್ರಿ ಬೇಕಿಲ್ಲ. ಗಾಜಿನಕಡ್ಡಿಗಳಾದರೆ ಸಾಕುಬೇಕಾದ ಬಣ್ಣಗಳನ್ನು ಹಾಕಿ ವರ್ಣಮಯ ಕಲಾಕೃತಿಗಳನ್ನೂ ಮಾಡಬಹುದು
ಇದನ್ನು ನೋಡಿದಾಗ ಬಳೆತಯಾರಿಕೆ ಗೃಹ ಉದ್ಯಮವಾಗಿದ್ದ ಕಾಲ ನೆನಪಾಯಿತು. ಬಳೆಚೂರು ಮತ್ತು ಗಾಜಿನ ಚೂರುಗಳನ್ನು ಸಂಗ್ರಹಿಸುತಿದ್ದರು.ಅವನ್ನು ಬಳೆತಯಾರಿಕಾ ಘಟಕಗಳು ಕೊಳ್ಳುತಿದ್ದವು ಗೃಹ ಕೈಗಾರಿಕೆಯಾಗಿ ಬಳ್ಳಾರಿಯಲ್ಲಿ ನಲವತ್ತು ವರ್ಷದ ಹಿಂದೆ ಬಳ್ಳಾರಿಯಲ್ಲಿಯೇ ಇದ್ದವು. ಅಲ್ಲಿಂದಲೇ ಜಿಲ್ಲೆಯಾದ್ಯಂತ ಗಾಜಿನ ಬಳೆಗಳು ಮತ್ತು ಗೋಲಿಗಳು ಸರಬರಾಜು ಆಗುತಿದ್ದವು ಪ್ಲಾಸ್ಟಿಕ್ ಪ್ರಚಾರಕ್ಕೆ ಬಂದನಂತರ ಅವು ಕೊನೆಯುಸಿರು ಎಳೆದವು.ಅದರ ಜೊತೆ ಬಳೆಯ ಮಲ್ಹಾರ ಹೊತ್ತು ಮಾರುವ ಬಳೆಗಾರರ ಚೆನ್ನಯ್ಯನ ಅನುವಂಶಿಕ ವೃತ್ತಿಯೂ ಕೊನೆಗೊಂಡಿತು.

 ಈಗ  ಗಾಜುತಯಾರಿಕೆ ಬೃಹತ್  ಉದ್ಯಮ.  ಅಮೇರಿಕಾದಲ್ಲಿ ಕಾರ್ನಿಂಗ್‌ ಗ್ಲಾಸ ಫ್ಯಾಕ್ಟರಿಯ ಮ್ಯೂಜಿಯಂ ಗೆ ಭೇಟಿನೀಡಿದಾಗ ಹೊಸ ಲೋಕಕ್ಕೆ ಕಾಲಿಟ್ಟಂತೆ  ಆಗಿತ್ತು. ಅಲ್ಲಿನ ಆಧುನಿಕ ಯಂತ್ರೋಪಕರಣಗಳು, ಕೆಲಸಗಾರರು  ಮೇಣದಲ್ಲಿ ಮಾಡುವಂತೆ ಕಲಾಕೃತಿಗಳನ್ನು ರೂಪಿಸುವ ವಿಧಾನ ಬೆರಗು ಮೂಡಿಸಿತ್ತು.ಅವರಲ್ಲಿನ ಗಾಜಿನವಸ್ತುಗಳ ವರ್ಣವೈಖರಿ , ವಿನ್ಯಾ ಸ ಬೆರಗು ಮೂಡಿವಂತಿದ್ದವು.
ಆದರೆ ರಾಘವನ್‌ ಅವರದು ಸಿದ್ಧ ಗಾಜು ಕರಗಿಸಿ ಸೂಕ್ಷ್ಮ ಕಲಾ ಕೃತಿ ಮಾಡುವುದು ಹವ್ಯಾಸ. ಜೊತೆಗೆ ವೃತ್ತಿಯೂ ಹೌದು
.ನಮ್ಮ ಆಸಕ್ತಿ ಯಿಂದ ಅವನಿಗೆ ಸಂತೋಷವಾಯಿತು. ಹತ್ತಿರದಲ್ಲೆ ಇದ್ದ ಕಲಾಕೃತಿಗಳತ್ತ ನಮ್ಮ ಗಮನ ಸೆಳೆದ. ಗಣೇಶ, ಮುರುಳಿಕೃಷ್ಣ , ಅಂಕೃತ ದೋಣಿ, ಸಾರೋಟು ಬಹಳ ಕಲಾತ್ಮಕವಾಗಿದ್ದವು. ಪ್ರತಿಯೊಂದನ್ನು ತಯಾರಿಸಲು ಒಂದು ಗಂಟೆಯಿಂದ ಒಂದು ದಿನದ ವರೆಗೆ ಬೇಕಾಗಬಹುದೆಂದು ತಿಳಿಸಿದ. ಅವುಗಳನ್ನು  ೫೦೦ ರಿಂದ ೧೦೦೦ ರೂವರೆಗೆ ಬೆಲೆ ಕೊಟ್ಟು ಕೊಳ್ಳುವ ಕಲಾಪ್ರಿಯರು ಇರುವುದಾಗಿತಿಳಿಸಿದನು

ಆಸಕ್ತರಿಗೆ ಈ ಕಲೆಯನ್ನು ಕಲಿಸಲು ಅತಿಥಿ ಉಪನ್ಯಾಸಕನಾಗಿ ಕಲಾಶಾಲೆ ಗಳಿಗೆ ಹೋಗುವುದಾಗಿಯೂ ಹೇಳಿದ.ದಕ್ಷಿಣ ಚಿತ್ರಸಂಸ್ಥೆಯಲ್ಲಿ ಅದು ಪ್ರಾರಂಭವಾದಾಗಿನಿಂದಲೂ , ಅಂದರೆ ಹದಿನೇಳು ವರ್ಷಗಳಿಂದಲೂ ಕಲಾಪ್ರದರ್ಶನ ಮಾಡುತ್ತಿರುವುದಾಗಿ ತಿಳಿಸಿದನು. ಗ್ಲಾಸ್‌ ಬ್ಲೋಯಿಂಗ್‌ ತರಬೇತಿನೀಡುವ ಸಂಸ್ಥೆಗಳು ಭಾರತದಲ್ಲಿ ಇವೆ. ಚೆನ್ನೈನಲ್ಲೂ ಇದೆ. ಆದರೆ ಅವು ಪ್ರಧಾನವಾಗಿ ಪ್ರಯೋಗಶಾಲಾ ಉಪಕರಣ, ವಾಹನಗಳು , ಗೃಹೋಪಯೋಗಿ ಗಾಜಿನಫಲಕಗಳ ತಯಾರಿಕೆಗೆ ಒತ್ತುಕೊಡುತ್ತವೆ..ಅಲ್ಲದೆ ಅವುಗಳ ಪ್ರಮಾಣವೂ ಬೃಹತ್ತಾಗಿರುವುದು. ಆದರೆ  ಹೀಗೆ ಕರಕುಶಲ ಕಲೆಯಾಗಿಸಿಕೊಂಡವರು ಕಡಿಮೆ. ಇದು ಒಂದು ಅಸಂಪ್ರದಾಯಿಕ ಕಲೆ, ಹಾಗಾಗಿ ಎಲ್ಲಿಯೂ ಸಾಂಸ್ಥಿಕ ತರಬೇತಿಯ ವ್ಯವಸ್ಥೆ ಇಲ್ಲ ಬಹುತೇಕ ಹವ್ಯಾಸಿ ಕಲಾವಿದರೇ ಕಲಾ ಕೃತಿನಿರ್ಮಾಣದಲ್ಲಿ ತೊಡಗಿರುವುರು. ಅವರ ಸಂಖ್ಯೆಯೂ ವಿರಳ.  ಎಂದನು ಮತ್ತು ತನ್ನ ಇಬ್ಬರು ಮಕ್ಕಳಲ್ಲಿ ಯಾರು ಆಸಕ್ತಿವಹಿಸಿಲ್ಲ ಎಂದು ವಿಷಾದಿಸಿದ.ಇದರಿಂದ ವೈಭೋಗದ ಜೀವನ ನಡಸಲು. ಸಾಧ್ಯ ವಾಗದಿದ್ದರೂ ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ ಮೇಲಾಗಿ ಕಲಾವಿದನೆಂಬ ಗೌರವ  ಇದೆ ಎಂದು ತೃಪ್ತಿ ವ್ಯಕ್ತ ಪಡಿಸಿದನು. ನಿಜ ಬಹುತೇಕ ಕಲಾವಿದರ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.ಹಾಗೂ ಹೀಗೂ ಕುಟಕು ಜೀವ ಹಿಡಿದು ಜೀವನ ಸಾಗಿಸುತ್ತಿರುವರು..ಅಲ್ಲದೆ ದಕ್ಷಿಣ ಸಂಸ್ಥೆಯವು ಉಚಿತವಾಗಿ ಎಲ್ಲ ವ್ಯವಸ್ಥೆ ಮಾಡಿ ಗೌರವ ಕಲಾವಿದನೆಂದು ಪರಿಗಣಿಸಿರುವುದು ಸಂತೋಷದ ವಿಷಯ ಎನಿಸಿತು. 

ಈಗ ಬೃಹತ್‌ಪ್ರಮಾಣದಲ್ಲಿ ಕಾರ್ಖಾನೆಗಳಲ್ಲಿ ಗಾಜುಕರಗಿಸುವ ಕುಲುಮೆ, ಲೇತ್‌ ಮತ್ತು ಇತರೆ ಉಪಕರಣಗಳನ್ನು ಬಳಸುವರು..ಕೆಲವು ಕಲಾವಿದರು ತಮ್ಮದೆ ಆದ ಸ್ಟುಡಿಯೋ ಕೂಡಾ ಇಟ್ಟುಕೊಂಡಿರುವರು. ಆದರೆ ಸಣ್ಣ ಪ್ರಮಾಣದಲ್ಲಿ ಆಮ್ಲಜನಕ ಮತ್ತು ಅಸಿಟೆಲಿನ್‌ಜ್ವಾಲೆಬಳಸಿ ಈಗಾಲೆ ತಯಾರಾಗಿರುವ ಬೊರೊಸಿಲಿಕೇಟ್‌ಗಾಜನ್ನು ಬಳಸಿ ಕಲಾಕೃತಿ ತಯಾರಿಸುವವರು ವಿರಳ. ಅವರು  ಸ್ಟೈನ್‌ಲೆಸ್‌ ಸ್ಟೀಲ್‌ ಅಥವ ಕಬ್ಬಿಣದ ತೆಳು ಸಲಾಕೆ ಬಳಸುವುರು. ಅದನ್ನು ಪುಂಟಿ ಎನ್ನವರು ಕರಗಿದ ಗಾಜಿಗೆ ಗಾಳಿಊದಿ ಆಕಾರ ಕೊಡುವರು.ಅವಕ್ಕೆ ಬಣ್ಣ ಹಾಕುವುದು ವಿವಿಧ ರೂಪ ಕೊಡುವದು ಸಂಕೀರ್ಣ ಕಾರ್ಯ.. ಈ ಕೆಲಸಕ್ಕೆ ಬ್ಲೊ ಪೈಪ್, ಬೇಕು. ಅದರ ತುದಿಯನ್ನು ಕರಗಿದ ಗಾಜಿನಲ್ಲಿ ಅದ್ದಿ ನಂತರ ಗಾಳಿಊದುವರು ರೂಪು ಕೊಡುವರು.ವಿವಿಧ ಆಕಾರಕೊಡಲು ಟ್ವೀಜರ್‌ ಬಳಸುವರು.

ಗಾಜಿಗೆ ಪುರಾತನ ಇತಿಹಾಸವಿದೆ. ವಿದೇಶಿಯರ ದಾಳಿಯ ಕಾಲದಲಿ ಭಾರತಕ್ಕೆ ಬಂದಿತು ಪರ್ಶಿಯನ್‌ ಗ್ಲಾಸ್‌, ವೆನಿಟಿಯನ್ ಗ್ಲಾಸ್‌ ಬಹಳ ಪ್ರಖ್ಯಾತ. ಆಗ ವಿದ್ಯುತ್‌ ಇರಲಿಲ್ಲ. ಅರಮನೆಗಳಲ್ಲಿ ಗಾಜಿನ ಚಾಂಡಿಲಿಯರ್‌ಗಳಲ್ಳ್ಲಿ ದೀಪ  ಹಚ್ಚುತಿದ್ದರು.. ಈಗಲೂ ಅಲಂಕಾರಿಕವಾಗಿ ಅವು ಬಳಕೆಯಲ್ಲಿವೆ.,ಈಗಂತೂ ಫೈಬರ್ ಗ್ಲಾಸ್‌ ಸರ್ವ ವ್ಯಾಪಿ. ಅಂತರಿಕ್ಷಯಾನಕ್ಕೂ ಅನಿವಾರ್ಯವಾಗಿದೆ.
ವಾಣಿಜ್ಯ ಉದ್ದೇಶದ ತರಬೇತಿ ಸಂಸ್ಥೆಗಳು ಭಾರತದಲ್ಲಿ ಇವೆ. ಚೆನ್ನೈನಲ್ಲಿಯೇ ಗಿಂಡಿಯಲ್ಲಿ ಒಂದು ಇದೆ. ಕಲಾತರಬೇತಿಯು ಮಾತ್ರ ವೈಯುಕ್ತಿಕಸಾಧನೆಯ ಫಲ. ಕಲಾಕೃತಿಯ ಪ್ರಾತ್ಯಕ್ಷಿಕೆ ಕೊಡುತ್ತಿರುವ  ಇಲ್ಲಿನ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಯಿತು
  







No comments:

Post a Comment