Sunday, April 14, 2013

ಬಿಸಿ ಬಿಸಿ ಬಳೆ


ಬಣ್ಣ ಬಣ್ಣದ  ಬಿಸಿ ಬಳೆ

ಬಿಸಿ ಬಳೆ ಎಂದರೆ ಕೋಡುಬಳೆ ಎಂದುಕೊಂಡು ಬಾಯಲ್ಲಿ ನೀರುಬರುವುದು ಸಹಜ..ಆದರೆ ಇದು ತಿನ್ನಲಾಗದ ಬಳೆ. ಅಂದರೆ ಕೈಗೆ ಹಾಕಿಕೊಳ್ಳುವ ಬಳೆ.   ಬಳೆ ಹೇಗೆ ಬಿಸಿ ಇರಲು ಸಾದ್ಯ ಎಬ ಅನುಮಾನ ಬೇಡ. ಖಚಿತಮಾಡಿಕೊಳ್ಳ ಬೇಕಿದ್ದರೆ ಚನ್ನೈನಲ್ಲಿನ ದಕ್ಷಿಣ ಚಿತ್ರ ಸಂಸ್ಥೆಯ ಕಲಾಬಜಾರ್‌ಗೆ ಬನ್ನಿ.    ಅಲ್ಲಿ ಕಣ್ಣಾರೆ ಕಂಡು ಕೈಗೆ ಬಿಸಿಯಾರಿಸಿದ ತಾಜಾ ಬಳೆ ತೊಡ ಬಹುದು.ಅದೂ ನಿಮಗೆ ಬೇಕಾದ ಬಣ್ಣ ಮತ್ತು ಬಯಸಿದ ವಿನ್ಯಾಸದಲ್ಲಿ.


ದಕ್ಷಿಣ ಚಿತ್ರ ಒಂದು ನಶಿಶಿಹೋಗುತ್ತಿರುವ ಜನಪದ ಕಲಾಪ್ರಕಾರಗಳನ್ನು ಉಳಿಸುವ , ಪರಿಚಯ ಮಾಡುವ  ಗುರಿ ಹೊಂದಿದ ಸಂಸ್ಥೆ.  ತಮಿಳುನಾಡು  ಸರ್ಕಾರ ಮತ್ತು ಕಲಾಸಕ್ತ ಕಾರ್ಪೊರೇಟ್  ಕಂಪನಿಗಳ ಸಹಯೋಗ ಅದಕ್ಕಿದೆ.ದಕ್ಷಿಣ ಚಿತ್ರಕ್ಕೆ ಭೇಟಿ ನೀಡಿದಾಗ  ಮೂವರು ಮೊಮ್ಮಕ್ಕಳು ಮತ್ತು ಸೊಸೆ ಸಹಾ ನಮ್ಮೊಡನೆ ಬಂದಿದ್ದರು.ಮಹಿಳೆಯರ ಸಹಜ ಗುಣ ಎಲ್ಲಿ ಹೋದರೂ ಬಳೆ, ಪದಕ, ಸರ, ಹೆರ್‌ಪಿನ್ನು ಮೊದಲಾದ ಅಲಂಕಾರಿಕ ಸಾಮಗ್ರಿಗಳ ಖರೀದಿಸುವುದು.ಇದಕ್ಕೆ ವಯಸ್ಸಿನ ಮಿತಿಇಲ್ಲ. ಅಜ್ಜಿಯಾಗಲಿ ಮೊಮ್ಮಗಳಾಗಲಿ ಅಂಥಹ  ಅಂಗಡಿಗಳ ಮುಂದೆ ಕಾಲ ಕಳೆಯುವುದರಲ್ಲಿ ಬಹಳ ಖುಷಿ ಪಡೆಯುವರು.  ಕೊಳ್ಳವುದು ಬಿಡುವುದು ಬೇರೆ ಮಾತು. ಆದರೆ ನೋಡಲು ಮಾತ್ರ ಯಾರೂ ಅವರನ್ನು ತಡೆಯಲಾಗದು. ನೋಡುನೊಡುತ್ತಾ ಚಂದ ಕಂಡುದದನ್ನುಕೊಳ್ಳುವರು. ಸಮರಸದ ಸಹಬಾಳ್ವೆ ಗಮನದಲ್ಲಿರಿಸಿಕೊಂಡು ಗಂಡನೋ, ತಂದೆಯೋ ಅಣ್ಣನೋ ನೋಡಿಯೂ ಇದನ್ನೆಲ್ಲಾ ನೋಡಿಯೂ ನೋಡದಂತೆ  ಇರುವುದುಅನಿವಾರ್ಯ.
 ಅಲ್ಲಿನ ಎಲ್ಲ ಮಳಿಗೆಗಳಲ್ಲಿ ದಟ್ಟಣೆ ಕೆಲವು ಅಂಗಡಿಗಳ ಮುಂದೆ  ಬಹಳ. ಅದು ಬಣ್ಣದ ಉಡುಪುಧರಿಸಿದ ಹೆಂಗೆಳೆಯರೇ ಹೆಚ್ಚು.ಅವು ಕೃತಕ ಬಳೆ ಅಮದರೆ ಅರಗಿನ ಬಳೆ ಮಾರುವ ಅಂಗಡಿಗಳು. ಅವರೆಲ್ಲ ರಾಜಾಸ್ತಾನಿಯರು ಎಂದು ನಂತರ ತಿಳಿಯಿತು
    ಕಲಾ ಬಜಾರ್‌ನಲ್ಲಿ ಹೆಸರಿಗೆ ತಕ್ಕಂತೆ ಕಲಾತ್ಮಕವಾದ ಓಲೆ, ಸರ, ಬಳೆ ಮಿಂಚುತಿದ್ದವು. ಈಗ ಬಹುತೇಕ ಆಧುನಿಕ ಮಹಿಳೆಯರು ಬಳೆಯನ್ನು ಸೌಭಾಗ್ಯದ ಸಂಕೇತ ಎಂದು ಪರಿಗಣಿಸಿಲ್ಲ. ಕೈತುಂಬ ಹಸಿರುಗಾಜಿನ ಬಳೆ ಹಾಕಿಕೊಳ್ಳುವ  ಕಾಲ ಹಿಂದಾಯಿತು.  ಸೀರೆ ಕುಪ್ಪುಸ ಯಾವಾಗಲಾದರೂ ಧರಿಸಿದರೆ ಅವುಗಳಿಗೆ ಮ್ಯಾಚ್‌ಆಗುವ ಬಣ್ಣದ ಬಳೆ ಬೇಕೆ ಬೇಕು. ಅದಕ್ಕಾಗಿಯೇ ವಿರಳವಾಗಿ ತೊಟ್ಟರೂ ವೈವಿದ್ಯಮಯ ಬಣ್ಣ ಬಣ್ಣದ ಅಲಂಕಾರಿಕ ಕೈಬಳೆಗಳ ಸಂಗ್ರಹ ಇರಲೆಬೇಕು.ಆದರೆ ಅವು ಗಾಜಿನ ಬಳೆಗಳೇ ಆಗ ಬೇಕೆಂದಿಲ್ಲ.

ಅಲ್ಲಿ ಅರಗಿನ ಮಣಿಸರ,ನೆಕ್‌ಲೆಸ್‌,ಬಳೆಗಳ ರಾಸಿಯೇಇದ್ದಿತು. ಇಬ್ಬರೂ ಮೊಮ್ಮಕ್ಕಳೂ ಎರಡುಮೂರುಜತೆ ಕಿವಿಯಲ್ಲಿಧರಿಸಲು ಝುಂಕಿಗಳನ್ನು ಕೊಂಡರು. ಅದಕ್ಕ ಹೊಂದುವ ಕಡಗವನ್ನು ತಯಾರಿಸಿಕೊಡುವುದಾಗಿ ಹೇಳಿದುದನ್ನು ಕೇಳಿ ಅಚ್ಚರಿಆಯಿತು.ಪಕ್ಕದಲ್ಲಿನ ತಮ್ಮ ಅಂಗಡಿಯಲ್ಲಿಯೇ ಮಾಡಿಸಬಹುದೆಂದು ತಿಳಿಸಿದಳು. ಈ ಅಂಗಡಿಯಲ್ಲಿದ್ದವಲ ಹೆಸರು ಝೀನತ್ .ಅವಳ ಗಂಡನ ಹೆಸರು ಮಹಮ್ಮದ್‌ಖಾನ್.. ಅಲ್ಲಿ ಆತ ಒಂದು ಇದ್ದಿಲ ಒಲೆ ಇಟ್ಟುಕೊಂಡು ಕುಳಿತಿದ್ದ.ಜೊತೆಗೆ ಅನೆಕ ಉಪಕರಣಗಳು ಇದ್ದವು. ಆತನು ಹ್ಯಾಂಗಿಂಗ್‌ಗಳನ್ನು ಕೈಗೆ ತೆಗೆದು ಅವುಗಳ ಬಣ್ಣ.  ನೊಡಿದ ನಂತರ ಕೈನಲ್ಲಿ ಇದ್ದ ಕೋಲಿಗೆ  ಅಂಟಿಸಿದ್ದ  ಅರಗನ್ನು  ಕಾಯಿಸ ತೊಡಗಿದ.ಅವರದು ಬಳೆತಯಾರಿಸುವ ಖಾಂದಾನ್‌ ಎಂದು ತಿಳಿಸಿದ. ಅವರು ರಾಜಾಸ್ತಾನ ಮೂಲದವರು.ಮತ್ತು ಈ ದಂಧೆಯಲ್ಲಿ ತಮ್ಮ ಕೋಮಿನವರು ಮಾತ್ರ ಮಾಡುವರು ಎಂದು ತಿಳಿಸಿದ. ಮಾತ ಮಾತನಾಡುತ್ತಾ ಕರಗಿದ ಅರಗಿಗೆ ಬಣ್ಣ ಸೇರಿಸಿದ. ಅದು ಮೆತ್ತಗಾದ ಮೇಲೆ ನೆನಸಿದ ಹಿಟ್ಟಿನಂತಾಯಿತು. ಒಂದೆ ವ್ಯತ್ಯಾಸ . ಅದು ಬಹಳ ಬಿಸಿಯಾಗಿತ್ತು. ಕೆಲವು ಉಪಕರಣಗಳ ಸಹಾಯದಿಂದ ಮೆತ್ತಗಿದ್ದ ಬಣ್ಣದ ರಾಳವನ್ನು ಕೊಡುಬಳೆಯಂತೆ ದುಂಡಗೆ ಮಾಡಿ ನಂತರ ಬಳೆಯಾಕಾರಮಾಡಿ ನೀರಲ್ಲಿ ಹಾಕಿದ. ಕೆಲವೆ ನಿಮಿಷಗ ಳಲ್ಲಿ ಬೇಕಾದ ಬಳೆ ತಯಾರಾಯಿತು.



ಈ ದಂಧೆಯನ್ನು ಸುಮಾರು ಮುನ್ನೂರುವರ್ಷದಿಂದ  ತಲೆತಲಾಂತರದಿಂದ ಮಾಡಿಕೊಂಡಿರುವುದಾಗಿ ತಿಳಿಸಿದ. ಅದರ ತಯಾರಿಕೆಯ ರಹಸ್ಯ ತಮ್ಮ ವಂಶಜರಿಗೆ ಮಾತ್ರ ಗೊತ್ತು . ತನ್ನ ಎಲ್ಲ  ಸೋದರರು ಇದೇ ಕೆಲಸ ಮಾಡುತಿದ್ದಾರೆ, ಕಾಲೇಜು ಓದುತ್ತಿರುವ ಇಬ್ಬರು ಮಕ್ಕಳಿಗೂ ಈ ವಿದ್ಯ ಕಲಿತಿದ್ದಾರೆ , ಎಂದು ವಿವರ ನೀಡಿದ . ಬಳೆ ಎಂದರೆ ಎರಡೂ ಕೈಗೆ ಎಂಬ ನನ್ನ ನಂಬಿಕೆ ಹುಸಿಯಾಯಿತು


.ನಮ್ಮವರು ತೆಗೆದುಕೊಂಡದ್ದು ಒಂದೊಂದೆ ಕಡಗಗಳು. ಅದೇ ಫ್ಯಾಷನ್‌..
. ಒಂದು ಕೈನಲ್ಲಿ ವಾಚು ಇನ್ನೊಂದು  ಕೈನಲ್ಲಿ ಕಿವಿಯೊಡವೆಗೆ ಮ್ಯಾಚ್‌ ಆಗುವ ಕಡಗದಂಥಹ ಬಳೆ  ಧರಿಸ ಬೇಕಂತೆ. ನನಗಂತೂ ಸಂತೋಷ ವಾಯಿತು ಇನ್ನೊಂದು ಬಳೆಯ ಹಣ ಮಿಕ್ಕಿತ್ತು  ಎಂದು  .ಆದರೆ ಅವರು ತಮ್ಮ ಕಿವಿಗೆ ಧರಿಸಲು ಕೊಂಡಿದ್ದ  ಬೇರೆ ಬೇರೆವಿನ್ಯಾಸದ ಒಲೆಗಳಿಗೆ  ಹೊಂದಿಕೆಯಾಗುವ ಬಳೆಗಳನ್ನು ಕೊಂಡರು.ಮತ್ತು ಅವಕ್ಕೆ ಹೊಂದುವ ಬಣ್ಣದ ಉಡುಪಿಗಾಗಿ ಬೇಡಿಕೆ ಇಟ್ಟಾಗ ಸುಸ್ತಾದೆ.  ಆಯ್ತು ನೊಡೋಣ ಎಂದು ಮುಂದೆ ನಡೆದವು.

No comments:

Post a Comment