Thursday, January 3, 2013

ಅಮೇರಿಕಾ ಅನುಭವ-೯


 ಮಳೆ ಕುಯಿಲು -  ಮನೆ ಹರಾಜು
ನ್ಯೂಯಾರ್ಕ ನಗರದ ಬ್ರೂಕ್ಲಿನ್‌ನಲ್ಲಿನ  ೮೧ ರಹರೆಯದ ಪರಿಸರ ಪ್ರೇಮಿಯೊಬ್ಬನ ಕಥೆ ಸರಕಾರಿ ವ್ಯವಸ್ಥೆಯ ದಪ್ಪಚರ್ಮಕ್ಕೆ ಜೀವಂತ ಸಾಕ್ಷಿಯಾಗಿದೆ. ಜಾನಸನ್‌ ಇಲ್ಲಿ ಕಳೆದ  ಐವತ್ತು ವರ್ಷಗಳಿಂದಲೂ ನೆಲಸಿರುವನು. ಅವನಿಗೆ ಈಗ ೮೧ ವರ್ಷದ  ಪಕ್ವ ಪ್ರಾಯ. ಅವನು ಈಗ ಜೀವನ ಸಾಗಿಸುತ್ತಿರುವುದು ಮಾಡುತ್ತಲಿರುವುದು ಸರಕಾರ ನೀಡುತ್ತಿರಯವ ಸೋಷಿಯಲ್‌ ಸೆಕ್ಯರಿಟಿ $೮೫೦  ಹಣದ ಮೇಲೆ.
 ಆತ . ೧೯೫೦ ರ ಸುಮಾರಿಗೆ  ಈ ಮನೆ  ಕೊಂಡು ಕೊಂಡ.  ಅವನದು  ಹೆಂಡತಿ ಮತ್ತು  ಮೂರು ಮಕ್ಕಳಿರುವ ತುಂಬು ಸಂಸಾರ.. ಆಗ ಮನೆ ಕಳ್ಳಲು ಅವನು ನೀಡಿದ  ಬೆಲೆ  $8000ಅವನು ಪರಿಸರ ಕಾಳಜಿ ಉಳ್ಳವ. . ನೈಸರ್ಗಿಕ ಸಂಪನ್ಮೂಮೂಲ ಉಳಿಸ ಬೇಕೆಂಬ ಹಂಬಲದಿಂದ ಮನೆಯ ಅರ್ಧ ಭಾಗವನ್ನೇ ಪ್ರಯೋಗಶಾಲೆಯಾಗಿ ಪರಿವರ್ತಿಸಿದ. ಅದಕ್ಕೆ ಅವನು ಮಾಡಿದ ಮೊದಲ ಕೆಲಸವೆಂದರೆ ಗ್ಯಾಸ್ ಮತ್ತು ತೈಲ ಪಳೆಯುಳಿಕೆ ಇಂಧನದ ಬಳಕೆ ನಿಲ್ಲಿಸಿದನು, ನೀರಿನ  ಬಳಕೆಯನ್ನು ಬಹಳ ಕಡಿಮೆ ಮಾಡಿದ. ಸಾರ್ವಜನಿಕ ನೀರಿನ ಸೌಲಭ್ಯದ ಬಳಕೆ ನಿಲ್ಲಿಸಿದ.. ಅದಕ್ಕೆ ತಕ್ಕಂತೆ ಮನೆಯವಿನ್ಯಾಸ ಮಾಡಿದ . ಮೊದಲು ಮಳೆಕೊಯಿಲಿಗೆ ಕೈ ಹಾಕಿದ.ಮೇಲ್ಷಾವಣಿಯಲ್ಲಿ ತಗಡನಿಂದ ಗುಳಿಯಾಕಾರದ ಅನೇಕ ರಚನೆ ಮಾಡಿ ಅಲ್ಲಿ ಮಳೆ ನೀರು ಸಂಗ್ರಹಕ್ಕೆ ಮುಂದಾದ. ಆ ನೀರನ್ನು ಸೆಲರ್‌ ನಲ್ಲಿರುವ ಕಾರು ಟ್ಯೂಬ್‌ಗಳಿಂದ ಮಾಡಿದ ತೊಟ್ಟಿಯಲ್ಲಿ ಸಂಗ್ರಹಿಸಿದ. ಅದನ್ನೇ ನಿತ್ಯ ಬಕೆಗೆ ಉಪಯೋಗಿಸಿದ... ಅಂದರೆ ಅವನ ಮನೆಗೆ ಸದಾ ಹರಿಯುವ ನಲ್ಲಿಯ ನೀರಿನ ಸೌಕರ್ಯವಿಲ್ಲ.ಅಡುಗೆಗೂ ನೀರಿನ ಬಳಕೆ ಬಹಳ ಬೇಕಿರಲಿಲ್ಲ. ತಿನ್ನುವುದೆಲ್ಲ ಎಲ್ಲ ಬ್ರೆಡ್‌ ಅಧಾರಿತ ಆಹಾರ. ಕೊಂಡ ಬ್ರೆಡ್‌  ಬಿಸಿ ಮಾಡಲು  ಸೌರ ಒಲೆ ನಿರ್ಮಣಮಾಡಿಕೊಂಡ.. ಮೊದಲು ಟೈಮ್ಸ ಚೌಕದಲ್ಲಿ ಫೋಟೊ ಸ್ಟುಡಿಯೋದಲ್ಲಿ ಕೆಲಸಮಾಡುತ್ತಿದ್ದಾಗ ಬೆಳಕನ್ನು ಕೇಂದ್ರೀಕರಿಸಲು ಕೊಡೆ ಮಾದರಿ ಉಪಕರಣ ವನ್ನು ಆವಿಷ್ಕರಿಸಿದ್ದ., ಈಗ ಅದನ್ನೆ ತುಸು ಮಾರ್ಪಾಟು ಮಾಡಿ ಸೌರ ಒಲೆಯಾಗಿಸಿದ. ಅದರಲ್ಲಿ ಅರ್ಧ ಗಂಟೆಯಲ್ಲಿ ಅವನಿಗೆ ಅಗತ್ಯವಾದ ಆಹಾರ ಸಿದ್ಧವಾಗುತಿತ್ತು.,. ಇನ್ನು ಸ್ನಾನಕ್ಕೆ ಬೇಕಾದ ನೀರಿನ ಪ್ರಮಾಣ ಬಹಳ ಹೆಚ್ಚು. ಇಲ್ಲಿ ಎಲ್ಲ ನಲ್ಲಿಗಳಲ್ಲೂ ಬಿಸಿ ನೀರು ಮತ್ತು ತಣ್ಣೀರು ಒಂದೆ ನಳದಲ್ಲಿ ಬರುತ್ತವೆ. ಕೆಲವು ನಳಗಳಲ್ಲಿ ಹಿಡಿಯನ್ನು ಎಡಕ್ಕೆ ತಿರುಗಿಸಿದರೆ ಬಿಸಿ ನೀರು ಬರುವುದು. ಬಲಕ್ಕೆ ತಿರುಗಿಸದರೆ ತಣ್ಣೀರು  ಸುರಿಯುವುದು.. ಇನ್ನು ಹಲವು ಮೇಲೆ ಎತ್ತಿದರೆ ಬಿಸಿ ನೀರು,  ಕೆಳಕ್ಕೆ ಒತ್ತಿದರೆ ತಣ್ಣಿರು. ಅಂತೂ ಬೇಕೆಂದಾಗ ಬೇಕಾದ ಉಷ್ಣತೆಯ ನೀರು ಸದಾ ಲಭ್ಯ. ಕುದಿಯುವ ನೀರಿನಿಂದ  ಉಗುರು ಬೆಚ್ಚಗಿನ ನೀರು ಕ್ಷಣಾರ್ಧದಲ್ಲಿ  ಲಭ್ಯ. ಜತೆಗೆ ಇಲ್ಲಿ  ಪೂರ್ಣ ಪ್ರಮಾಣದ ಬಾತ್‌ ರೂಮ್‌ಎಂದರೆ ಬಾತ್‌ ಟಬ್ ಇರಲೆಬೇಕು .  ದಿನಾ ಬಳಸಲಿ ಬಿಡಲಿ. ಸ್ನಾನಕ್ಕೆ ನಮ್ಮಲ್ಲಿನಂತೆ ಮಗ್ಗಿನ ಬಳಕೆ ಇಲ್ಲವೇ ಇಲ್ಲ.  ಅದಕ್ಕೆ ಹ್ಯಾಂಡ್‌ ಷವರ್‌ ಅಂತೂ ಅನಿವಾರ್ಯ. ಜತೆಗೆ ತುಂತುರುಸ್ನಾನವನ್ನೂ ಮಾಡಬಹುದು. ಆದರೆ ಈ ಸಮಸ್ಯಗೆ ಆತ ಬಹು ಸುಲಭವಾಗಿ ಪರಿಹಾರ ಕಂಡುಕೊಂಡ. ಆತನದು ಏನಿದ್ದರೂ ಸ್ಪಾಂಜು ಬಾತು. ಒಂದು ಮಗ್‌ ನೀರಿನಲ್ಲಿ ಸ್ನಾನದ ಶಾಸ್ತ್ರ  ಮುಕ್ತಾಯ. ಅದಕ್ಕೆ ಬಿಸಿ ನೀರು ಬೇಕೆಂದರೆ ಮಾಳಿಗೆಯಲ್ಲಿ ಜೋಡಿಸಿದ ಪಾನೀಯಗಳ ಬಾಟಲಿಗಳ ಕ್ಯಾನಿನ ತಗಡು ಜೋಡಿಸಿ ಮಾಡಿದ ಕೋಳವೆಗಳ ಮೂಲಕ ನೀರು ಹಾಯಿಸಿ ಬಿಸಿಯಾಗುವಂತೆ ಮಾಡಿ ಅದನ್ನೆ ಬಳಸುವನು.  ಒಳ ಚರಂಡಿಗೆ ಮಾತ್ರ ಮಿತವಾಗಿ  ನೀರಿನ ಸಂಪರ್ಕ   ಪಡೆದ. ನೀರಿನ ಬಳಕೆ ಲೆಕ್ಕಹಾಕಿ.ಸಾರ್ವಜನಿಕ ಮೂಲದಿಂದ  ನೀರಿನ ಬಳಕೆಯನ್ನುಸಂಪೂರ್ಣವಾಗಿ ನಿಲ್ಲಿಸಿದ. ಆಂದ ಮೇಲೆ ನೀರಿನ ಬಿಲ್ಲು ಕಟ್ಟವ ಅಗತ್ಯವಿಲ್ಲ ಎಂದುಕೊಂಡ. ಜತೆಗ ಲಕ್ಷಾಂತರ ಗ್ಯಾಲನ್‌  ನೀರು ಉಳಿಸಿ ನಿಸರ್ಗ ಸಂಪತ್ತಿನ ಸಂರಕ್ಷಣೆಗೆ ತನ್ನ ಕಿರು ಕಾಣಿಕೆ ಸಲ್ಲಿಸಿದ.  ಆದರೆ ಆತನಿಗೆ ಸ್ಥಳೀಯ ಆಡಳಿತದ ಅಧಿಕಾರಿಗಳು ಸುಮ್ಮನೆ ಬಿಡಲೇ ಇಲ್ಲ.  ಅವನಿಗೆ  $ 35೦೦೦ ನೀರಿನ ಬಿಲ್ಲು ಕಳುಹಿಸಿದ್ದಾರೆ. ಅದರಜೊತೆಗ ಮನೆ ತೆರಿಗೆ  $ 25 00 ಕೊಡಲು ನೋಟೀಸು ಕಳುಹಿಸಿದರು. ಅದರ ಫಲ ಈಗ ಅವನ  ಮನೆ ಹರಾಜಿಗೆ ಬಂದಿದೆ. ಸ್ಥಳಿಯ ನಗರ ಸಭೆಯ ಅಧಿಕಾರಿಗಳ ಪ್ರಕಾರ ಜಾನಸ್‌ನ್‌  ನೀರು ಬಳಸದಿದ್ದರೂ ಅದರ ಬಗ್ಗೆ ಅಂದಿನ ನಗರ ಸಭಾ ಅಧಿಕಾರಿಗಳಿಗೆ ಮಾಹಿತಿಯನ್ನು ಬರಹದಲ್ಲಿ ನೀಡಿಲ್ಲ. ನೀರು ಬೇಕಿಲ್ಲ ಎಂದು ಜತೆಗೆ ಮೀಟರ್‌ ಅಳವಡಿಸಲು ಬಂದಾಗ ಸಹಕರಿಸಲು ನಿರಾಕರಿದ.. ಅದಕ್ಕಾಗಿ ಹಿಂದಿನ ಬಳಕೆಯ ಆಧಾರದ ಮೇಲೆ ಸರಾಸರಿ ಬಳಸಬಹುದಾದ ನೀರಿಗೆ ಶುಲ್ಕ ವಿಧಿಸಿದರು. ಸುಮಾರು  ಮೂವತ್ತು ವರ್ಷದಿಂದ ತೆರಿಗೆಗೆ  ನೋಟೀಸು ಬರುತ್ತಲೆ ಇದೆ. ಈತ ತೆರಿಗೆ ಕಟ್ಟಲು ನಿರಾಕರಿಸುತ್ತಾಲೇ ಇದ್ದಾನೆ. ಈಗ ಮನೆ ಹರಾಜಿಗೆ ಬಂದಿದೆ..ಉಳಿಸಿಕೊಂಡಿದ್ದ  ತೆರಿಗೆಯೊಂದಿಗೆ  ಬಡ್ಡಿ , ದಂಡ ಸೇರಿ  ದೊಡ್ಡ ಮೊತ್ತವಾಗಿದೆ.  ಈಗ ಸಮಸ್ಯೆಗೆ ಕಾರಣವಾಗಿದೆ. . ಆದರೆ ಇದನ್ನು ಜಾನ್ಸನ್‌ ಒಪ್ಪುವುದಿಲ್ಲ. ನೀರಿನ ಸಂಪರ್ಕವೇ ಇಲ್ಲದ  ತನ್ನ ಮನೆಗ ನೀರಿನ ತೆರಿಗೆ ವಿಧಿಸಿರುವುದು ಅನ್ಯಾಯ ಎಂಬುದು ಅವನ ವಾದ. ಬಳಸದ ಸೌಲಭ್ಯಕ್ಕೆ ಹಣ ಏಕೆ ಕೊಡಬೇಕು ಎಂಬುದು ಅವನ ತಕರಾರು. ಬಳಸಿಲ್ಲ ಎನ್ನುವುದಕ್ಕೆ ದಾಖಲೆ ಇಲ್ಲ ಎನ್ನುತ್ತದೆ ನಗರ ಸಭೆ. ಅವನು ಮನೆ ಕೊಂಡದ್ದು ೧೯೬೦ ರಲ್ಲಿ ಆಗಿನಂದಲೆ ನೈಸರ್ಗಿಕ ಸಂಪತ್ತುಗಳಾದ ನೀರು ಇಂಧನ ಉಳಿಸಲು ಪ್ರಯೋಗಕ್ಕೆ ಮೊದಲಿಟ್ಟ. ಮನೆಯಲ್ಲಿರುವುದು  ವಿದ್ಯುತ್‌ ದೀಪ ಮಾತ್ರ.ಮನೆಯ. ಒಳ ಮಾಳಿಗೆಗೆ ಮತ್ತು ಗೋಡೆಗಳಿಗೆ ದೀಪದಿಂದ ಬರುವ ಉಷ್ಣತೆಯನ್ನು  ಗ್ರಹಿಸಿ ಮನೆ ಬೆಚ್ಚಗಿರುವ ಫಲಕಗಳ ಅಳವಡಿಕೆಯಾಗಿರುವುದರಿಂದ ಏರ್‌ ಕಂಡೀಷನರ್‌ ಅಗತ್ಯವಿಲ್ಲ. ತುರ್ತು ಪರಿಸ್ಥಿಗೆ ಅಂತ ಕಡಿಮೆ  ಕಟ್ಟಿಗೆ ಬಳಸಿ ಬಿಸಿ ಮಾಡುವ ಆಧುನಿಕ ಒಲೆಯೂ ಅವನದೆ ಸೃಷ್ಟಿ. ಹಾಗಂತ ಅವನ್ನೆಲ್ಲ ತನ್ನ ಸಂಶೋಧನೆ ಎಂದು ಪೇಟೆಂಟ್‌ ಮಾಡಿಸುವ ಗೊಡವೆಗೆ ಹೋಗಿಲ್ಲ.ಅದನ್ನೇನಾದರೂ ಮಾಡಿದರೆ ಮೂರನೆ ಜಗತ್ತಿನ ಅನೇಕ ದೇಶಗಳಲ್ಲಿ ಇಂಧನ ಉಳತಾಯದಲ್ಲಿ ಕ್ರಾಂತಿಯಾಗಬಹುದಿತ್ತು, ಗೋಡೆಗೆ ದೊಡ್ಡ  ಕಿಟಕಿಗಳನ್ನು ಮನೆಗೆ ಜೋಡಿಸಿರುವುದರಿಂದ ಗಾಳಿ ಬೆಳಕಿನ ವ್ಯವಸ್ಥೆ ಬೇಕಾದಷ್ಟಿದೆ. ಆದರೆ ಅದಕ್ಕೆ ಸ್ಥಳೀಯ ಆಡಳಿತ ಆಕ್ಷೇಪಣೆ ವ್ಯಕ್ತಪಡಿಸಿದೆ. ಸಮುದಾಯದಲ್ಲಿನ  ಮನೆಗಳಿಗೆ ಮಾರ್ಪಾಡು ಮಾಡಬೇಕಾದರೆ ಇಲ್ಲಿ ಆಡಳಿತಾತ್ಮಕ  ಅನುಮತಿ ಅಗತ್ಯ. ಮನಸ್ಸಿಗೆ ಬಂದ ಹಾಗೆ ಮಾಡಲಾಗುವುದಿಲ್ಲ. ಆದರೆ ದೊಡ್ಡ  ದೋಣಿಯಾಕಾರದ  ಈತನ ಎರಡಂತಸ್ಥಿನ ಮನೆಯು ವಾಸ ಗೃಹ ಮಾತ್ರವಲ್ಲ ವಸ್ತು ಸಂಗ್ರಹಾಲಯ ಮತ್ತು ಪ್ರಯೋಗಶಾಲೆ ಎಂಬುದು ಅವನ ವಾದ. ಅದು ತಕ್ಕಮಟ್ಟಿಗೆ ನಿಜವೂ ಹೌದು  ಅಲ್ಲಿ ಎಲ್ಲ ನೈಸರ್ಗಿಕ ಸಂಪನ್ಮೂಲಗಳ ಉಳಿತಾಯದ  ಪ್ರಯೋಗದ ಉಪಕರಣಗಳೆ ಇವೆ. ಅಲ್ಲದೆ ಹೈಸ್ಕೂಲು, ಕಾಲೇಜು ವಿದ್ಯಾರ್ಥಿಗಳಿಗೂ ಆತನ ಮನೆ ಒಂದು ಸಂದರ್ಶನ ಯೋಗ್ಯ ಸ್ಥಳ.ಅಲ್ಲಿಬಂದು ನೈಸರ್ಗಿಕ ಶಕ್ತಿಯ ಬಳಕೆಯ ಬಗ್ಗೆ ಚರ್ಚೆ , ವಿಚಾರ ವಿನಮಯ  ಮಾಡುವರು  ಸಲಹೆ ಪಡೆಯುವರು , ಮಾಹಿತಿ ದೊರೆಯುವುದು  ಎಲ್ಲವೂ ಸಾಧ್ಯ.
ಎಂಬತ್ತೊಂದರರ ಅಜ್ಜ ಈಗ ಒಂಟಿ ಜೀವ, ಆತನ ಮಡದಿ ಮಕ್ಕಳು ಇಪ್ಪತ್ತು ವರ್ಷದ ಹಿಂದೆಯೆ ಆ ಪ್ರದೇಶದಲ್ಲಿ ಕಳ್ಳ ಕಾಕರ ಹಾವಳಿ ಜಾಸ್ತಿ , ಸುರಕ್ಷತೆ ಇಲ್ಲ  ಎಂಬ ಕಾರಣಕ್ಕೆ ಬೇರೆ ಕಡೆ ಮನೆ ಮಾಡಿ  ವಾಸಿಸಲು ನಿರ್ಧರಿಸಿದರು. ಆದರೆ ಈತ ಮಾತ್ರ ಜಪ್ಪಯ್ಯ ಎಂದರೂತನ್ನ ಅರೆ ಪ್ರಯೋಗ ಶಾಲೆಯಾದ ಮನೆ ಬಿಡಲು  ಒಪ್ಪಲೇ  ಇಲ್ಲ. ಒಬ್ಬನೇ  ತನ್ನ ಕಾರ್ಯದಲ್ಲಿ ಮಗ್ನನಾಗದ್ದಾನೆ.ನೀರಿನ ತೆರಿಗೆ ಮಾತ್ರವಲ್ಲ,  ಈತ ಆಸ್ತಿ ತೆರಿಗೆಯನ್ನೂ ಪಾವತಿಸಿಲ್ಲ. ಅದರ ಬಾಕಿ ೨೫೦೦೦ಡಾಲರ್‌ ಆಗಿದೆ. ಹಿರಿಯ ನಾಗರೀಕರಿಗೆ  ಮನೆ ತೆರಿಗೆಯಲ್ಲಿ ಸೋಡಿನೀಡುವ  ಸೌಲಭ್ಯ ಈ ದೇಶದಲ್ಲಿದೆ. . ಆದರೆ ಯಾವುದೋ ತಾಂತ್ರಿಕ ಕಾರಣಗಳಿಂದ  ಅವನಿಗೆ ಅದೂ  ದೊರೆತಿಲ್ಲ. ಎಂಬತ್ತರ ಮೇಲಾಗಿದ್ದರೂ ಸೌಲಭ್ಯ ವಂಚಿತನಾಗಿರುವುದಕ್ಕೆ ಈತನು ಸುಮ್ಮನೆ ಕುಳಿತಿಲ್ಲ. ಮನವಿ ಸಲ್ಲಿಸಿದ್ದಾನೆ. ಅದರಂತೆ ಶುಲ್ಕ ನಿಗದಿ ಮಾಡಿದರೆ ತೆರಿಗೆ ಕಟ್ಟುವುದಾಗಿ ಹೇಳುತ್ತಾನೆ. ಆದರೆ ಈಗಂತೂ ಅವನಿಗೆ ಮನೆಯನ್ನು  ಫೋರ್‌ಕ್ಲೋಷರ್‌ ಮಾಡುವ ಎಚ್ಚರಿಕೆ ಸೂಚನೆ ಬಂದಿದೆ. ಆದರೆ ಆತನದು ಒಂದೆ ಮಾತು. ನಾನು ಅಷ್ಟು ಸುಲಭವಾಗಿ ಕೈ ಚೆಲ್ಲುವುದಿಲ್ಲ, ಅಮೇರಿಕಾದಲ್ಲಿ ಅನೇಕ ರಾಜ್ಯಗಳಲ್ಲಿ ಅಗತ್ಯವಾದ ವಿದ್ಯುತ್‌ ಶಕ್ತಿಯ ೨೫ಅಷ್ಟನ್ನು ಪರ್ಯಾಯ ಮೂಲಗಳಿಂದ ಪಡೆಯಬೇಕೆಂಬ ಕಾನೂನು ಜಾರಿಯಲ್ಲಿದೆ. ಅದಕ್ಕಾಗಿ  ಸರ್ಕಾರವು ಹಲವು ಬಿಲಿಯನ್‌ ಡಾಲರ್‌ ವೆಚ್ಚ ಮಾಡುತ್ತಿದೆ.. ಪಳೆಯುಳಿಕೆ ಇಂಧನ ಮೂಲಗಳಾದ ಗ್ಯಾಸ್ , ತೈಲ ಮೊದಲಾದವುಗಳ ಮಿತವ್ಯಯಕ್ಕೆ ಇನ್ನಿಲ್ಲದಂತೆ ಪ್ರಯತ್ನ ಸಾಗಿದೆ. ಆದರೆ ಸಾಮಾನ್ಯ ವ್ಯಕ್ತಿಯೊಬ್ಬ ಮೂವತ್ತು  ವರ್ಷಗಳಿಂದಲೂ ಮಳೆ ಕೊಯಿಲು ಮಾಡಿ , ಇಂಧನ ಉಳಿಸಿ, ಸೌರ ಶಕ್ತಿ ಬಳಸಿ ಮನೆ ಕಳೆದು ಕೊಳ್ಳುವ ಹಂತ ತಲುಪಿದ್ದಾನೆ. ಈ ದಿಶೆಯಲ್ಲಿ ಕೊಡುಗೆ ನೀಡುತ್ತಿದ್ದರೂ ಅವನ ನೆಲೆಯನ್ನೆ ಕಿತ್ತುಕೊಳ್ಳುತ್ತಿರುವುದು ಆಡಳಿತದ ವಿಪರ್ಯಾಸವಾಗಿದೆ.

No comments:

Post a Comment