![]() |
appaaji@gmail.com |
ಸಂಜೆ ಮೂರು ಗಂಟೆಯ ಅಸು ಪಾಸು. ಎಸ ಎಸ್ ಎಲ್ ಸಿ ಪರೀಕ್ಷಾ ಮಂಡಳಿಯ ಕಚೇರಿಯಲ್ಲಿ ನಿರ್ದೇಶಕರು ಗಂಭೀರವಾಗಿ ಕುಳಿತಿರುವರು ಅವರೆದುರು ಅನತಿ ದೂರದಲ್ಲಿ ಹರೆಯದ ಹುಡುಗ ತಲೆ ತಗ್ಗಿಸಿ ಕೈ ಕಟ್ಟಿ ನಿಂತಿರುವನು. ಅವರ ಮುಂದಿನ ಉದ್ದನೆಯ ಮೇಜಿನ ಎರಡು ಕಡೆಗೆ ಹಾಕಿದ ಕುರ್ಚಿಯೊಂದರಲ್ಲಿ ಕುಳಿತ ಐವತ್ತು ದಾಟಿದ ವ್ಯಕ್ತಿ ಕೈನಲ್ಲಿನ ಪತ್ರ ತೋರಿಸುತ್ತಾ ವಿನಯವಾಗಿ ಮಾತನಾಡುತಿದ್ದಾನೆ
"ತಪ್ಪಿದ್ದರೆ ನನ್ನನ್ನು ಅಮಾನತ್ತು ಮಾಡಿ , ಚಿಂತೆ ಇಲ್ಲ. ಆದರೆ ಐವತ್ತೊಂದು ಅಮಾಯಕ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು. ದಯವಿಟ್ಟು ಅವರಿಗೆ ಪರೀಕ್ಷೆಗೆ ಕುಳಿತು ಕೊಳ್ಳಲು ಅವಕಾಶ ಕೊಡಿ"
ಅಲ್ರಿ ಪ್ರಿನ್ಸಿಪಾಲಾರೆ, ಅವರ ಅರ್ಜಿಗಳೇ ಬಂದಿಲ್ಲ , ಪರೀಕ್ಷಾ ಶುಲ್ಕ ಸಂದಾಯವಾಗಿಲ್ಲ. ಪ್ರವೇಶ ಪತ್ರ ಕೊಡುವುದು ಹೇಗೆ ಸಾಧ್ಯ?
"ಹೇಗಾದರೂ ಮಾಡಿ ಅವಕಾಶ ಕೊಡಿ ಸಾರ್ ,ಅವರು ಅರ್ಜಿ ತುಂಬಿದ್ದಾರೆ. ಹಣ ಕೊಟ್ಟಿದ್ದಾರೆ. ನಮ್ಮ ಗುಮಾಸ್ತನು ಇಲಾಖೆಗೆ ಕಳುಹಿಸಿಲ್ಲ.ದುರ್ಬಳಕೆ ಮಾಡಿರುವನು. ಅದು ಅವನ ತಪ್ಪು"
ಅವನು ತಪ್ಪು ಮಾಡಿದ , ಆದರೆ ನೀವು ಏನು ಮಾದುತಿದ್ದಿರಿ? ಮೇಲ್ವಿಚಾರಣೆ ನಿಮ್ಮ ಕರ್ತವ್ಯ ಅಲ್ಲವೇ? ಸರಕಾರಕ್ಕೆ ಸಲ್ಲಬೇಕಾದ ಹಣ ನುಂಗಿ ಹಾಕಿ , ಈಗ ಗೋಗರೆಯುವಿಲ್ಲ , ಇದು ಕರ್ತವ್ಯ ಚ್ಯುತಿ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳ ಬೇಕು. "
ಬೇಕಾದ್ರೆ ನನಗೆ ಶಿಕ್ಷೆ ಕೊಡಿ , ಈಗಲೇ ಅಮಾನತ್ತು ಮಾಡಿ . ನಿಮ್ಮ ಆದೇಶ ಪಾಲಿಸುವೆ., ಆದರೆ ದಯಮಾಡಿ ಮಕ್ಕಳಿಗೆ ಪರೀಕ್ಷೆಗೆ ಕುಳಿತು ಕೊಳ್ಳಲು ಅವಕಾಶ ಕೊಡಿ "
ಈ ಸಂಭಾಷಣೆ ನಡೆದದ್ದು ಬೆಂಗಳೂರಿನಲ್ಲಿ . ನಾನು ಮಂಡ್ಯ ಜಿಲ್ಲೆಯ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿ ಪಾಲ ನಾಗಿದ್ದಾಗ. ನಮ್ಮದು ಸಂಯುಕ್ತ ಪದವಿ ಪೂರ್ವ ಕಾಲೇಜು. ಅಲ್ಲಿ ಹೈಸ್ಕೂಲು ಮತ್ತು ಕಾಲೇಜು ಎರಡು ವಿಭಾಗಕ್ಕೂ ಒಬ್ಬರೇ ಮುಖ್ಯಸ್ಥರು
ಹೈಸ್ಕೂಲು ವಿಭಾಗಕ್ಕೆ ಹಿರಿಯ ಸಹಾಯಕರು ಇರುವರು. ಶೈಕ್ಷಣಿಕ ವಿಚಾರಗಳ ಉಸ್ತುವಾರಿ ಮಾಡುವರು ಆದರೆ ಹಣ ಕಾಸು, ಶಿಸ್ತು ಮೊದಲಾದವುಗಳ ಅಂತಿಮ ಹೊಣೆ ಅವರದಲ್ಲ..ಪ್ರಾಂಶುಪಾಲರದು
ಆ ವರ್ಷ ಎಸ ಎಸ ಎಲ್ ಸಿ ಪೂರಕ ಪರೀಕ್ಷೆಗೆ ವೇಳಾ ಪಟ್ಟಿ ಬಂದಿದೆ..ನಮ್ಮಲ್ಲಿ ನೂರ ಐವತ್ತಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಗೆ ಕಟ್ಟಿರುವರು ಮೊದಲ ಹಂತದಲ್ಲಿ ೯೫ ಮತ್ತು ಎರಡನೆ ಹಂತದಲ್ಲಿ ೫೬ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು ನೂರಾ ಐವತ್ತು ಒಂದು ಜನ ರ ಪಟ್ಟಿ ನಮ್ಮಲ್ಲಿದೆ.ಆದರೆ ನಮಗೆ ಬಂದದ್ದು ೯೫ ಪ್ರ ವೇಶ ಪತ್ರಗಳು, ನಾಮಿನಲ್ ರೋಲ್ ಮತ್ತು ಇತರ ದಾಖಲೆಗಳುಮಾತ್ರ.
ಗುಮಾಸ್ತನು ಎರಡನೆ ಬ್ಯಾಚಿನವು ತಡವಾಗಿ ಬರುವವು ಎಂದು ಹೇಳಿದ. ಇರಬಹುದು ಎಂದು ಕೊಂಡೆವು.ಆಗಾಗ ಅಂಚೆ ಇಲಾಖೆಯವರು ವಿಳಂಭ ಮಾಡುವುದು ಸಾಮಾನ್ಯ
ಪ್ರ ವೇಶ ಪತ್ರಗಳ ವಿತರಣೆ ಪ್ರಾರಂಭ ವಾಯಿತು. ಪರೀಕ್ಷೆಗೆ ನಾಲಕ್ಕೆ ದಿನ ಬಾಕಿ. ಉಳಿದ ಪ್ರವೇಶ ಪತ್ರಗಳ ಸುಳಿವೇ ಇಲ್ಲ.ಇದರ ಮೇಲೆ ಗುಮಾಸ್ತನು ಎರಡು ದಿನ ರಜೆ ಹಾಕಿದ.ಬೇರೆ ಶಾಲೆಗಳಲ್ಲಿ ವಿಚಾರಿಸಲಾಗಿ ಎಲ್ಲ ಕಡೆ ಯಾವಾಗಲೋ ಬಂದಿವೆ. ಆದ್ರೆ ನಮಗೆ ಮಾತ್ರ ಬಂದೇ ಇಲ್ಲ.
ಗಾಬರಿಯಾಯಿತು. ಯಾಕೋ ಅನುಮಾನ ಬಂದಿತು. ಹಿರಿಯ ಸಹಾಯಕರನ್ನು ಕರೆದು ಗುಮಾಸ್ತನ ಬೀರುವಿನಲ್ಲಿ ಹುಡುಕಲು ಹೇಳಿದೆ.
ಅವ್ರು ತುಸು ಸಮಯದ ನಂತರ ಕೈನಲ್ಲಿ ಒಂದು ಕಡತ ಹಿಡಿದು ಬಂದರು ., " ಸಾರ್, ಅರ್ಜಿ ಇಲ್ಲೇ ಇವೆ ಕಳುಹಿಸಿಯೇ ಇಲ್ಲ."
ತಕ್ಷಣ ಗುಮಾಸ್ತನ ಮನೆಗೆ ಜವಾನನ್ನು ಕಳುಹಿಸಿದೆ. ಅರ್ಧ ಗಂಟೆಯಲ್ಲಿ ಬಂದ.
ಏನು ಮಾದಯ್ಯ ಇನ್ನು56 ಪ್ರವೇಶ ಪತ್ರಗಳು ಬಂದೆ ಇಲ್ಲ, ಏಕೆ ? ಎಂದು ಕೇಳಿದೆ.
ಸಾರ್ ನಾನಂತು ಹಣ ತುಂಬಿ ಅರ್ಜಿ ಕಳುಹಿಸಿರುವೆ. ಅಲ್ಲಿಯೇ ಏನಾದರೂ ವ್ಯತ್ಯಾಸವಾಗಿರಬಹುದು . ಬೇಕಾದರೆ ಖುದ್ದಾಗಿ ಹೋಗಿ ತರುವೆ " ಎಂದು ಉತ್ತರಿಸಿದ.
ಹಿರಿಯ ಸಹಾಯಕರು ಕಡತವನ್ನು ಅವನ ಮುಂದೆ ಹಿಡಿದು " ಅರ್ಜಿಗಳು ಇಲ್ಲಿಯೇ ಇವೆ. ನೀನು ಅವನ್ನು ಕಳುಹಿಸಿಲ್ಲ. ಸುಳ್ಳು ಯಾಕೆ ಹೇಳುತ್ತಿರುವೆ" ಎಂದು ಗದರಿದರು.
ಅವನು ಪೆಚ್ಚಾದ . ಬೇ ಬೇ ಎನ್ನ ತೊಡಗಿದ.
ನಿಜ ಹೇಳು , ಆದದ್ದಾದರೂ ಏನು , ಎಂದು ಗದರಿದಾಗ ಬಾಯಿ ಬಿಟ್ಟ
ಹುಡುಗರು ಪರಿಕ್ಷಾ ಶುಲ್ಕ ಕಟ್ಟಿದ್ದಾರೆ. ಸುಮಾರು ೧೫೦೦ ರುಪಾಯಿ ಆಗಬಹುದು.ಹಣ ಬಂದ ಬಂದ ಹಾಗೆ ಬಳಸಿ ಕೊಂಡಿರುವ . ಕೊನೆಗೆ ಕಟ್ಟಲು ಕೈನಲ್ಲಿ ಕಾಸಿಲ್ಲ. ಆದದ್ದಾಗಲಿ ಎಂದು ಸುಮ್ಮನಾಗಿದ್ದಾನೆ. ಪ್ರವೇಶ ಪತ್ರಗಳು ಬಂದಾಗ ಗೊತ್ತಾಗಿದೆ. ಆದರೆ ಕೈ ಮೀರಿದೆ.ಅದಕ್ಕೆ ರಜೆ ಹಾಕಿದ್ದಾನೆ..
ಈಗ ಏನು ಮಾಡುವುದು , ನೀನೆ ಹೇಳು, ಎಂದಾಗ ,
ಸಾರ್ , ಹೇಗಿದ್ದರೂ ರಿಪೀಟರಸ್ . ಅವರು ಹೇಗಿದ್ದರೂ ಪಾಸಾಗುವುದಿಲ್ಲ. ಮುಂದಿನ ಪರೀಕ್ಷೆಗೆ ಕೂಡಲಿ ನಾನೇ ಪರೀಕ್ಷಾ ಶುಲ್ಕ ಕಟ್ಟುವೆ, ಎಂದು ಉಡಾಫೆಯ ಮಾತನಾಡಿದ.
ಅವರು ಪಾಸಾಗುವರೋ ಬಿಡುವರೋ ಅದು ಬೇರೆ ಮಾತು ೫೧ ಜನ ಪರೀಕ್ಷೆ ಕಟ್ಟಿದ್ದಾರೆ. ಅವರಿಗೆ ಅನ್ಯಾಯವಾಗುವುದು, ಎಲ್ಲರಿಗು ಸಮಾಧಾನ ಮಾಡುವುದು ಸಾಧ್ಯವೇ ಇಲ್ಲ., ಎಂದರು ಹಿರಿಯ ಸಹಾಯಕರು.
ಮೊದಲೇ ನಮ್ಮಲ್ಲಿ ಹಿಂದುಳಿದ ಮತ್ತು ದಲಿತ ಮಕ್ಕಳೇ ಹೆಚ್ಚು. ದೊಡ್ಡ ಗಲಾಟೆಯಾಗುವುದು . ನಮ್ಮ ಊರು ಸೂಕ್ಷ್ಮ ಪ್ರದೇಶ ಮೊದಲೇ ಕೋಮು ಗಲಭೆ ಗೆ ಕಾರಣ ವಾದರೂ ಅಚ್ಚರಿ ಇಲ್ಲ. ಯಾವುದೇ ಅವ್ಯವಹಾರ ಗಳಿಗೆ ಅವಕಾಶ ಕೊಡದೆ ಬಿಗಿಯಾಗಿ ಪರೀಕ್ಷೆ ನಡೆಸುವುದರಿಂದ .ಅನೇಕರಿಗೆ ಅಸಮಾಧಾನವಿದೆ. ಈಗ ಕಾರಣ ಸಿಕ್ಕರೆ ತೊಂದರೆ ಖಂಡಿತ . ಅಂತೂ ನಾವು ಗಂಡಾಂತರಕ್ಕೆ ಸಿಕ್ಕು ಹಾಕಿ ಕೊಂಡಿದ್ದೇವೆ, ಎಂದು ಹೇಳಿದೆ.
ಅವನಿಗೆ ಮೆಮೋ ಕೊಡಲಾಯಿತು. ಅವನು ತನ್ನ ತಪ್ಪು ಒಪ್ಪಿಕೊಂಡು ಪತ್ರ ಬರೆದು ಕೊಟ್ಟ.ಅದನ್ನು ಅಂಧೇ ಇಲಾಖೆಯ ಗಮನಕ್ಕೆ ಸಲ್ಲಿಸಲಾಯಿತು. ಆದರೆ ಸಾರ್ವಜನಿಕರನ್ನು ಸಮಾಧಾನ ಮಾಡುವುದು ಆಗದ ಮಾತು.
ಎಲ್ಲ ದಾಖಲೆಗಳ ಸಮೇತ ಅವನನ್ನು ಕರೆದುಕೊಂಡು ಬೆಂಗಳೂರಿನ ಪರೀಕ್ಷಾ ಮಂಡಳಿಗೆ ಹೋದೆ.ಅಲ್ಲಿನ ಅಧಿಕಾರಿಗಳ ಮನ ಒಲಿಸಿ ಪ್ರವೇಶ ಪತ್ರ ಪಡೆಯುವುದೊಂದೇ ಈ ಸಮಸ್ಯೆಗೆ ಪರಿ ಹಾರವೆನಿಸಿತು.
ಅದರಂತೆ ಮಂಡಳಿಯ ನಿರ್ದೇಶಕರಿಗೆ ವಿಷಯ ತಿಳಿಸಿ ಮನವಿ ಸಲ್ಲಿಸಲಾಯಿತು.
ಅವರು ಮೊದಲು ನಮ್ಮ ಮನವಿಯನ್ನು ಸಾರಾ ಸಗಟು ತಳ್ಳಿ ಹಾಕಿದರು
."ತಪ್ಪು ನಿಮ್ಮದು, ಅನುಭವಿಸಿ " ಎಂದು ಝಾಡಿಸಿದರು
" ನಾನು ಬಯಾವುದೇ ಸಬೂಬು ಹೇಳದೆ ಪ್ರಾಂಜಲ ಮನದಿಂದ ತಪ್ಪು ಒಪ್ಪಿಕೊಂಡೆ
" ಗುಮಾಸ್ತನೆ ಹಣ ತಿಂದಿದ್ದರು ಅದನ್ನು ತಡೆಯುವಲ್ಲಿ ನಾನು ವಿಫಲನಾಗಿದ್ದೆ.ಅವನು ಯಾವುದೊ ಚಲನ್ ತೋರಿಸಿ ಹಣ ಕಟ್ಟಿ ಬಂದಿರುವೆ ಎಂದರೆ ನಂಬಿದ್ದು ನನ್ನ ತಪ್ಪು. ಪರಿಶೀಲನೆ ಮಾಡ ಬೇಕಾದದ್ದು ನನ್ನ ಕರ್ತವ್ಯವಾಗಿತ್ತು. ನನ್ನ ಕರ್ತವ್ಯ ಲೋಪದಿಂದ ೫೬ ಜನಕ್ಕೆ ತೊಂದರೆಯಾಗಿತ್ತು.
ಪರಿಕ್ಷಾಆ ಸಮಯದಲ್ಲಿ ಅಷ್ಟು ಜನ ಪೋಷಕರನ್ನು , ವಿದ್ಯಾರ್ಥಿಗಳನ್ನೂ ಸಮಾಧಾನ ಮಾಡುವುದು ಆಗದ ಮಾತು. ತಪ್ಪು ಯಾರದೇ ಇರಲಿ, ಗುಮಾಸ್ತನದೋ , ಪ್ರಾಂಶುಪಾಲರದೋ, ಇಲ್ಲವೇ ಇಲಾಖೆಯದೋ ಅದು ಅವರಿಗೆ ಸಮಬಂಧಿಸಿಲ್ಲ. ಅವರಿಗೆ ಅನ್ಯಾಯವಾಗಿದೆ. ಪ್ರತಿಭಟನೆ ಮಾಡುವರು. ಕಾಲೇಜಿನ ಮತ್ತು ಊರಿನ ಶಾಂತಿ ಸುವ್ಯವಸ್ಥೆಗೆ ಭಂಗ ಬರುವುದು ಖಂಡಿತ.
ನನಗೆ ಏನೇ ಆದರು ಸರಿ . ಪ್ರವೇಶ ಪತ್ರ ಇಲ್ಲದೆ ಇಲ್ಲಿಂದ ಕದಲಬಾರದು. ಇಲಾಖೆ ಕೊಡದಿದ್ದರೆ ಕಾಲೇಜಿಗೆಗಂತೂ ಕಾಲಿಡುವುದಿಲ್ಲ , ಎಂದು ಅಲ್ಲಿಯೇ ಗಟ್ಟಿಯಾಗಿ ಕುಳಿತೆ.
ಗುಮಾಸ್ತನು ನೀಡಿದ್ದ ಹೇಳಿಕೆಯನ್ನು ಅವರಿಗೆ ಸಲ್ಲಿಸಿದೆ. ಇದ್ದ ವಿಷಯ ತಿಲಿಸಲು . ಅವನಿಗೆ ಸೂಚಿಸಿದೆ. .
ಅವನು ಅಳುತ್ತ ಅವರ ಕಾಲು ಹಿಡಿದ , " ಮೇಡಂ, ನಾನು ಪ್ರಾಂಶುಪಾಲರಿಗೆ ಮೋಸ ಮಾಡಿದೆ. . ಮಣ್ಣು ತಿನ್ನುವ ಕೆಅಸ ಮಾಡಿದೆ ನೀವೇ ಕಾಪಾಡಿ " ಅಳತೊಡಗಿದ.
..ನಿರ್ದೇಶಕರು ಮಹಿಳೆ. ಅವರ ಮನ ಕರಗಿತು.
ನೀವು ಏನು ಕ್ರಮ ತೆಗೆದುಕೊಂಡಿದ್ದೀರಿ? .ನನ್ನನ್ನು ಕೇಳಿದರು
ಮೆಮೋ ಕೊಟ್ಟಿರುವೆ. ಇಲಾಖೆಗೆ ವರದಿ ಮಾಡಿರುವೆ., ಮೊದಲು ಅನಾಹುತ ಆಗುವ ಮೊದಲೇ ತಪ್ಪು ಸರಿಪಡಿಸಲು ಇಲ್ಲಿಗೆ ಬಂದಿರುವೆ. ಪರೀಕ್ಷೆಗೆ ಕುಳಿತುಕೊಳ್ಳಲು ದಯಮಾಡಿ ಮಕ್ಕಳಿಗೆ ಅನುಮತಿ ಕೊಡಿ, ಎಂದು ಅರ್ಜಿಯ ಕಡತವನ್ನು ನೀಡಿದೆ.
ಅವರು ಸಂಭಂದಿಸಿದ ಅಧಿಕಾರಿಯನ್ನು ಕರೆದು ತಕ್ಷಣ ಪ್ರವೇಶ ಪತ್ರಗಳನ್ನು , ಅಗತ್ಯ ದಾಖಲೆಗಳನ್ನು ಸಿದ್ಧ ಪಡಿಸಲು ತಿಳಿಸಿದರು.
ಆದ ತಪ್ಪಿಗೆ ಕಠಿಣ ಶಿಕ್ಷೆ ಕೊಡುವುದಾಗಿ ಬೆದರಿಸಿದರು.
ನಾನು ನಿರಾಳವಾಗಿ ಒಪ್ಪಿಕೊಂಡೆ.ಮಕ್ಕಳಿಗೆ ಪರೀಕ್ಷೆಗೆ ಕೂಡಲು ಅನುಮತಿ ಸಿಕ್ಕಿತು. ಅದೇ ದೊಡ್ಡದು. ಗಂಡಾಂತರ ತಪ್ಪಿತು ನನಗೆ ಏನೇ ಆದರೂ ಪರವಾ ಇಲ್ಲ ಎಂದುಕೊಂಡೆ. ಅಂದೇ ಸಂಜೆ ಆರು ಗಂಟೆಗೆ ಎಲ್ಲದಾಖಲೆಗಳು ಕೈಗೆ ಬಂದವು.. ಸೂಕ್ತ ಕ್ರಮ ತೆಗೆದುಕೊಳ್ಳಲು ಉಪ ನಿರ್ದೆಶಕರಿಗೆ ಸೂಚನೆ ರವಾನಿಸಲಾಯಿತು. ರಾತ್ರಿ ಹತ್ತರ ಹೊತ್ತಿಗೆ ಊರಿಗೆ ವಾಪಾಸಾದೆವು
ಬೆಳಗ್ಗೆ ಕಾಲೇಜಿನಲ್ಲಿ ಎಲ್ಲರಿಗು ಅಚ್ಚರಿ ಪರೀಕ್ಷಾ ಶುಲ್ಕ ಪಾವತಿ ಮಾಡದೆ ಪ್ರವೇಶ ಪತ್ರ ಬಂದಿದ್ದವು..ಕೆಲವೇ ದಿನಗಳಲ್ಲಿ ಪರೀಕ್ಷಾ ಶುಲ್ಕವನ್ನು ಪ್ರತಿ ಅರ್ಜಿಗೆ ೧೦೦ ವಿಶೇಷ ದಂಡವನ್ನು ಸಲ್ಲಿಸಲು ತಿಳಿಸಲಾಗಿತ್ತು.ಸುಮಾರು ಎಂಟು ಸಾವಿರ ಸಾವಿರರೂಪಾಯಿ ಹಣವನ್ನು ಪ್ರಾಂಶುಪಾಲರೇ ಒಂದು ವಾರದಲ್ಲಿ ಇಲಾಖೆಗೆ ಕಟ್ಟ ಬೇಕೆಂದು ಕಟ್ಟು ನಿಟ್ಟಿನ ಆದೇಶ ಬಂದಿತು.ಆ ವೇಳೆಗೆ ಆಗಲೇ ಗುಮಾಸ್ತನ ಅಮಾನತ್ತು ಆಗಿತ್ತು.ನಾನು ಹೆಚ್ಚು ತಲೆ ಕೆಡಿಸಿ ಕೊಳ್ಳಲಿಲ್ಲ .ಇಲಾಖೆಯೇ ತಪ್ಪಿನ ಹೊಣೆಯನ್ನು ನಿಗದಿ ಮಾಡಿ ಆರೋಪಿಯ ಮೇಲೆ ಕ್ರಮ ಜರುಗಿಸಿದೆ. ಅವನಿಂದ ವಸೂಲು ಮಾಡಿ ಹಣ ಸಲ್ಲಿಸಲಾಗುವುದು ಎಂದು ವಿನಯ ಪೂರ್ವಕವಾಗಿ ಉತ್ತರಿಸಿದೆ.
ಸಿಡಿಲಿನಂತೆ ಬಂದ ಸಮಸ್ಯೆ ಬರಿ ಗುಡುಗಾಗಿ ಪರಿಹಾರ ವಾಗಿತ್ತು.
ನಿಜವಾಗಿಯೂ ನಮ್ಮ ಅದೃಷ್ಟ ದೊಡ್ಡದು. ನಮ್ಮದೇ ಜಿಲ್ಲೆಯಲ್ಲಿ ಮಂಡ್ಯದ ಹತ್ತಿರದ ಹಳ್ಳಿಯ ಶಾಲೆಯಲ್ಲಿ . ಹೀಗೆ ಆಗಿದೆ. ಮೂವತ್ತು ಹುಡುಗರಿಗೆ ಪ್ರವೇಶ ಪತ್ರ ಬಂದಿಲ್ಲ. ಅಲ್ಲಿನ ಮುಖ್ಯೋ ಪಾಧ್ಯಯರು ತುಂಬ ಭಯಸ್ಥರು,. ಸಜ್ಜನರು.ದೊಡ್ಡ ಗಲಭೆ ಯಾಗುವುದು. ಹಾಗಾದರೆ ಮರ್ಯಾದೆ ಹೋಗುವುದು ಎಂದು ಹೆದರಿ ಆತ್ಮ ಹತ್ಯೆ ಮಾಡಿಕೊಂಡ ಸುದ್ದಿ ಬಂದಿತು.
ನನಗೆ ಏನಾದರು ಸರಿ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎಂಬ ಮನೋಭಾವ ಮತ್ತು ಅಮಾನತ್ತು ಆದರೂ ಸರಿ , ಪ್ರವೇಶ ಪತ್ರವಿಲ್ಲದೆ ಕಾಲೇಜಿಗೆ ಹೋಗುವುದಿಲ್ಲ ಎಂಬ ನನ್ನ ನಿಲುವಿನಿಂದ ಸಮಸ್ಯೆ ಸರಳವಾಗಿ ಪರಿಹಾರವಾಯಿತು.
ಪಾಪ! ಗೆಳೆಯರೊಬ್ಬರು ಯಾರದೋ ತಪ್ಪಿಗೆ ತಲೆ ದಂಡ ಕೊಟ್ಟಿದ್ದರು. ಜೊತೆಗ ಮಕ್ಕಳದ್ದೂ ಒಂದುವರ್ಷ ವ್ಯರ್ಥವಾಗಿತ್ತು
No comments:
Post a Comment