Monday, April 15, 2013

ಗಾನ ಗಾರುಡಿಗ-ಪಿಬಿ ಎಸ್


                             ಹೊಟೇಲ ಸಂತೆಯಲ್ಲೊಬ್ಬ ಸಂಗೀತ ಸಂತ


ಹೆಸರಿಗೆ ಪ್ರತಿವಾದಿ ಭಯಂಕರ. ವ್ಯಕ್ತಿತ್ವ ಮಾತ್ರ ತದ್ವಿರುದ್ಧ.  ಎಲ್ಲರೂ ಬೇಕು –ಗೊತ್ತಿರಲಿ, ಗೊತ್ತಿಲ್ಲದಿರಲಿ.  ಪ್ರತಿವಾದಿ ಭಯಂಕರ ಶ್ರೀನಿವಾಸರನ್ನು (ಪಿ.ಬಿ. ಶ್ರೀನಿವಾಸ) ಬಲು ಹತ್ತಿರದಿಂದ ಕಾಣುವ ಭಾಗ್ಯ ನನ್ನದಾಗಿತ್ತು.  ಅವರು ಚೆನ್ನೈನಲ್ಲಿದ್ದಾರೆಂದರೆ, ಅವರಿಲ್ಲದೇ, ಮೈಲಾಪುರದ ನ್ಯೂ ವುಡ್ ಲ್ಯಾಂಡಿನಲ್ಲಿ ಸಂಜೆಯೇ ಆಗುತ್ತಿರಲಿಲ್ಲ. ಸಂಜೆ ನಾಲ್ಕೂವರೆಗೆ ಬಂದರೆಂದರೆ, ರಾತ್ರಿ ಎಂಟು- ಎಂಟೂವರೆಗೆ ಅವರ ನ್ಯೂ ವುಡ್ ಲ್ಯಾಂಡ್ ಹೋಟೇಲೇ ಅವರ ಅಡ್ಡೆ.
ಅವರ ಮೊದಲ ಭೇಟಿ ಇನ್ನೂ ನೆನಪಿದೆ.  ಯಾವ ವಿಚಾರಕ್ಕೋ ಗೆಳಯರ ಗುಂಪಿನೊಂದಿಗೆ, ನ್ಯೂ ವುಡ್ ಲ್ಯಾಂಡ್ ಹೋಟೆಲಿಗೆ ಹೋಗಿದ್ದಾಗ, ಬಾಗಿಲ ಬದಿಯಲ್ಲಿನ ದೊಡ್ಡ ಟೇಬಲ್ಲೊಂದರ ಮುಂದೆ ಮೈಸೂರು ಪೇಟ, ಹಣೆಯ ಮೇಲೆ ಉದ್ದನೆಯ ಕೆಂಪು ತಿಲಕ ಧರಿಸಿದ್ದ ಯಜಮಾನರು ಕುಳಿತಿದ್ದರು. ಮುಂದೆ ಒಂದು ಕಂತೆ ಕಡತ. ದಪ್ಪನೆಯ ಕನ್ನಡಕ, ಜೇಬಿನಲ್ಲಿ ಆರು ಬಣ್ಣದ ಪೆನ್ನುಗಳು. ಆಗೀಗ ಅವರ ಗುನುಗು, ದೊಡ್ಡ ಪ್ರಮಾಣದ ಹಮ್ಮಿಂಗ್ ಆಗಿ ಒಂದು ರೀತಿಯ ಮೋಜು ತರಿಸುತ್ತಿತ್ತು.  ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಅವರ ಧ್ಯಾನಕ್ಕೆ ಭಂಗ ತರಲು ಯಾರೊಬ್ಬರೂ ಬಯಸಿರಲಿಲ್ಲ –ಹೊಟೇಲಿನವರು ಬಿಡಿ, ಹೊಟೇಲಿಗೆ ಬಂದು ಹೋಗುವವರೂ. ಹೊಟೇಲಿನ ಆ ಗೋಜಲು, ಅವರ ಧ್ಯಾನಕ್ಕೂ ಭಂಗ ತರಲಿಲ್ಲ. ಅಷ್ಟರಲ್ಲಿ ತುಂಟ ಹುಡುಗನೊಬ್ಬ ಅವರೊಂದಿಗೆ ಇವರಾರೋ ವಿಚಿತ್ರ ಗಿರಾಕಿ ಎಂಬಂತೆ ನೋಟ ಎಸೆಯುವುದಕ್ಕೂ ಮುನ್ನವೇ, ಅವರಾರು ಗೊತ್ತಾ ಎಂದು ಮಾಣಿಯೊಬ್ಬ ಬಂದು ತಿಳಿ ಹೇಳಿದ. ಅಷ್ಟರಲ್ಲಿ ತಿಂಡಿ ತಿಂದು ಹೊರಟಿದ್ದ ಒಂದು ಗುಂಪು ಅವರನ್ನು ಗುರುತಿಸಿ ಬಿಟ್ಟಿತ್ತು.  ಅವರಿಗೆ ಸಂತೋಷವಾಗಿತ್ತು.  ಯಾರೋ ಒಬ್ಬರು ಉಭಯಕುಶಲೋಪರಿ ಶುರುವಿಟ್ಟು. ಆಹಾ.. ತಮ್ಮ ಹಾಡು... ಎಂದರು.  ಅಷ್ಟು ಸಾಕಾಗಿತ್ತು ಸ್ವರ ಸಾಮ್ರಾಟನಿಗೆ ಇಡೀ ಹಾಡನ್ನೇ ಪ್ರಸ್ತುತ ಪಡಿಸಲು.  ಕನ್ನಡದಿಂದ ಶುರುವಾಗಿ, ತಮಿಳು, ತೆಲುಗು, ಮಲೆಯಾಳ  ಭಾಷೆಗಳ ಹಾಡುಗಳ ಮಿನಿ ಮೆರವಣಿಗೆಯನ್ನೇ ಹೊರಡಿಸಿಬಿಟ್ಟರು.  ಬೇಂದ್ರೆ, ಕಣ್ಣದಾಸನ್, ವೇಟೂರಿ, ಉದಯಶಂಕರ್ ಎಲ್ಲರೂ ಬಂದು ಬಿಟ್ಟರು. ಜೊತೆಗೆ ಎಂಟೋ ಹತ್ತು ಭಾಷೆಗಳಲ್ಲಿ ತಾವು ಬರೆದ ಶಾಯಿರಿಗಳು, ಪದ್ಯಗಳನ್ನೂ ಓದಿ ಕೇಳಿಸಿದರು.   ಎಲ್ಲರೂ ಖುಷ್.  ಇಂಥ ಹಲವು ಸಂಜೆಗಳನ್ನು ಕಳೆಯಲೆಂದೇ ವುಡ್ ಲ್ಯಾಂಡಿಗೆ ಹೋಗುತ್ತಿದ್ದವರಲ್ಲಿ ನಾನೂ ಒಬ್ಬ.  ಚಿಕ್ಕವರಿರಲಿ, ದೊಡ್ಡವರಿರಲಿ, ತಾನು ಗೊತ್ತಿರಲಿ, ಗೊತ್ತಿಲ್ಲದವರಿರಲಿ, ಎಲ್ಲರನ್ನೂ ಏಕ ಪ್ರಕಾರವಾಗಿ ಗೌರವದಿಂದ ಕಾಣುತ್ತಿದ್ದರು.
ಮೊದಲು, ಈಚಿನ ಕೆಲ ವರ್ಷಗಳ ವರೆಗೂ ಅಮೆರಿಕನ್ ದೂತಾವಾಸದೆದುರಿನ ಡ್ರೈವ್ ಇನ್ ವುಡ್ ಲ್ಯಾಂಡ್ಸ್ ಹೊಟೇಲೇ, ಅವರ ದೈನಂದಿನ ಚಟುವಟಿಕೆಯ ಭಾಗವಿತ್ತು.  ಮುಂಜಾನೆಯಿಂದ ಮುಸ್ಸಂಜೆಯವರೆಗೂ ಅವರು ಅಲ್ಲಿಯೇ. ಬಂದವರೊಂದಿಗೆ, ನಿರಂತರ ಮಾತಾಡುತ್ತ, ಕಾಫಿ ಕುಡಿಯುತ್ತ, ಹಾಡಿನಿಂದ ಹಾಡಿಗೆ ಜಿಗಿಯುತ್ತ, ತಮ್ಮ ವೃತ್ತಿ ಸಂಬಂಧಿ ಭೇಟಿ ನಡೆಸುತ್ತಿದ್ದರು. ದಟ್ಟವಾದ ಕಾಡಿನ ನಡುವೆಯಿದ್ದಂತೆ ತೋರುತ್ತಿದ್ದ ಆ ಹೊಟೇಲನ್ನು ಅಲ್ಲಿಂದ ತೆರವುಗೊಳಿಸಿದ ಮೇಲೆ, ನ್ಯೂ ವುಡ್ ಲ್ಯಾಂಡ್ಸ್ ಹೊಟೇಲಿಗೆ ಸ್ಥಳಾಂತರಗೊಂಡರು. ತಮ್ಮ ಹಳೆಯ ಹಾಡನ್ನು, ವೃತ್ತಿ ಜೀವನದ ಸಂಧ್ಯೆಯಲ್ಲಿ ತಮ್ಮ ಉಚ್ಛ್ರಾಯ ದಿನಗಳನ್ನು ಮೆಲುಕು ಹಾಕಲು ಅವರು ಅಡ್ಡಾ ಆಗಿ ರೂಪುಗೊಂಡಿದ್ದು ಮೈಲಾಪುರದ ನ್ಯೂ ವುಡ್ ಲ್ಯಾಂಡ್ ಹೊಟೇಲು. ಅಲ್ಲಿಯೇ ಅವರು ತಮ್ಮ ಅಭಿಮಾನಿಗಳನ್ನು, ಗೆಳೆಯರನ್ನು, ವೃತ್ತಿಬಾಂಧವರನ್ನು ಭೇಟಿ ಮಾಡುತ್ತಿದ್ದರು.
ಅವರ ಕಡೆಯ ದಿನವನ್ನೂ ಅವರು ಅಲ್ಲಿಯೇ ಕಳೆದರು.  ಎಂದಿನಂತೆ ಬಂದಿದ್ದ ಶ್ರೀನಿವಾಸರು, ಒಂದಿಷ್ಟು ತಿಂಡಿ ತಿಂದರು, ಯಾಕೋ ಎಂದಿನಂತೆ ಗೆಲುವಾಗಿರಲಿಲ್ಲ.  ಒಂದಿಷ್ಟು ವಾಂತಿಯಾಯಿತು. ಅಸ್ವಸ್ಥರಾದರು.  ಕೂಡಲೇ ಅವರ ಮನೆಗೆ ಸುದ್ದಿ ಮುಟ್ಟಿಸಲಾಯಿತು ಎಂದು ಹೊಟೇಲಿನ ಮೂಲಗಳು ಹೇಳಿದವು. ಮುಂದಿನದು ಇತಿಹಾಸ.  ಸಾವಿರ ಸಾವಿರ ಹಾಡುಗಳನ್ನು ಹಾಡಿದ ಅವರಿಗೆ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬ ಕವನ ಬಲು ಇಷ್ಟದ್ದಾಗಿತ್ತು.  ಯುಗಾದಿಯಂತೆ (ಸೌರಮಾನ –ತಮಿಳು ಪಂಚಾಂಗದ ಪ್ರಕಾರ) ನೆನಪಿನ ನಕ್ಷತ್ರವಾದ ಪ್ರತಿವಾದಿ ಭಯಂಕರ ಶ್ರೀನಿವಾಸ ಅವರು ವಿಪರ್ಯಾಸ.
***

Sunday, April 14, 2013

Prayoga

Slideshow prayoga..
2013-01-08

Intro Audio

ಬಿಸಿ ಬಿಸಿ ಬಳೆ


ಬಣ್ಣ ಬಣ್ಣದ  ಬಿಸಿ ಬಳೆ

ಬಿಸಿ ಬಳೆ ಎಂದರೆ ಕೋಡುಬಳೆ ಎಂದುಕೊಂಡು ಬಾಯಲ್ಲಿ ನೀರುಬರುವುದು ಸಹಜ..ಆದರೆ ಇದು ತಿನ್ನಲಾಗದ ಬಳೆ. ಅಂದರೆ ಕೈಗೆ ಹಾಕಿಕೊಳ್ಳುವ ಬಳೆ.   ಬಳೆ ಹೇಗೆ ಬಿಸಿ ಇರಲು ಸಾದ್ಯ ಎಬ ಅನುಮಾನ ಬೇಡ. ಖಚಿತಮಾಡಿಕೊಳ್ಳ ಬೇಕಿದ್ದರೆ ಚನ್ನೈನಲ್ಲಿನ ದಕ್ಷಿಣ ಚಿತ್ರ ಸಂಸ್ಥೆಯ ಕಲಾಬಜಾರ್‌ಗೆ ಬನ್ನಿ.    ಅಲ್ಲಿ ಕಣ್ಣಾರೆ ಕಂಡು ಕೈಗೆ ಬಿಸಿಯಾರಿಸಿದ ತಾಜಾ ಬಳೆ ತೊಡ ಬಹುದು.ಅದೂ ನಿಮಗೆ ಬೇಕಾದ ಬಣ್ಣ ಮತ್ತು ಬಯಸಿದ ವಿನ್ಯಾಸದಲ್ಲಿ.


ದಕ್ಷಿಣ ಚಿತ್ರ ಒಂದು ನಶಿಶಿಹೋಗುತ್ತಿರುವ ಜನಪದ ಕಲಾಪ್ರಕಾರಗಳನ್ನು ಉಳಿಸುವ , ಪರಿಚಯ ಮಾಡುವ  ಗುರಿ ಹೊಂದಿದ ಸಂಸ್ಥೆ.  ತಮಿಳುನಾಡು  ಸರ್ಕಾರ ಮತ್ತು ಕಲಾಸಕ್ತ ಕಾರ್ಪೊರೇಟ್  ಕಂಪನಿಗಳ ಸಹಯೋಗ ಅದಕ್ಕಿದೆ.ದಕ್ಷಿಣ ಚಿತ್ರಕ್ಕೆ ಭೇಟಿ ನೀಡಿದಾಗ  ಮೂವರು ಮೊಮ್ಮಕ್ಕಳು ಮತ್ತು ಸೊಸೆ ಸಹಾ ನಮ್ಮೊಡನೆ ಬಂದಿದ್ದರು.ಮಹಿಳೆಯರ ಸಹಜ ಗುಣ ಎಲ್ಲಿ ಹೋದರೂ ಬಳೆ, ಪದಕ, ಸರ, ಹೆರ್‌ಪಿನ್ನು ಮೊದಲಾದ ಅಲಂಕಾರಿಕ ಸಾಮಗ್ರಿಗಳ ಖರೀದಿಸುವುದು.ಇದಕ್ಕೆ ವಯಸ್ಸಿನ ಮಿತಿಇಲ್ಲ. ಅಜ್ಜಿಯಾಗಲಿ ಮೊಮ್ಮಗಳಾಗಲಿ ಅಂಥಹ  ಅಂಗಡಿಗಳ ಮುಂದೆ ಕಾಲ ಕಳೆಯುವುದರಲ್ಲಿ ಬಹಳ ಖುಷಿ ಪಡೆಯುವರು.  ಕೊಳ್ಳವುದು ಬಿಡುವುದು ಬೇರೆ ಮಾತು. ಆದರೆ ನೋಡಲು ಮಾತ್ರ ಯಾರೂ ಅವರನ್ನು ತಡೆಯಲಾಗದು. ನೋಡುನೊಡುತ್ತಾ ಚಂದ ಕಂಡುದದನ್ನುಕೊಳ್ಳುವರು. ಸಮರಸದ ಸಹಬಾಳ್ವೆ ಗಮನದಲ್ಲಿರಿಸಿಕೊಂಡು ಗಂಡನೋ, ತಂದೆಯೋ ಅಣ್ಣನೋ ನೋಡಿಯೂ ಇದನ್ನೆಲ್ಲಾ ನೋಡಿಯೂ ನೋಡದಂತೆ  ಇರುವುದುಅನಿವಾರ್ಯ.
 ಅಲ್ಲಿನ ಎಲ್ಲ ಮಳಿಗೆಗಳಲ್ಲಿ ದಟ್ಟಣೆ ಕೆಲವು ಅಂಗಡಿಗಳ ಮುಂದೆ  ಬಹಳ. ಅದು ಬಣ್ಣದ ಉಡುಪುಧರಿಸಿದ ಹೆಂಗೆಳೆಯರೇ ಹೆಚ್ಚು.ಅವು ಕೃತಕ ಬಳೆ ಅಮದರೆ ಅರಗಿನ ಬಳೆ ಮಾರುವ ಅಂಗಡಿಗಳು. ಅವರೆಲ್ಲ ರಾಜಾಸ್ತಾನಿಯರು ಎಂದು ನಂತರ ತಿಳಿಯಿತು
    ಕಲಾ ಬಜಾರ್‌ನಲ್ಲಿ ಹೆಸರಿಗೆ ತಕ್ಕಂತೆ ಕಲಾತ್ಮಕವಾದ ಓಲೆ, ಸರ, ಬಳೆ ಮಿಂಚುತಿದ್ದವು. ಈಗ ಬಹುತೇಕ ಆಧುನಿಕ ಮಹಿಳೆಯರು ಬಳೆಯನ್ನು ಸೌಭಾಗ್ಯದ ಸಂಕೇತ ಎಂದು ಪರಿಗಣಿಸಿಲ್ಲ. ಕೈತುಂಬ ಹಸಿರುಗಾಜಿನ ಬಳೆ ಹಾಕಿಕೊಳ್ಳುವ  ಕಾಲ ಹಿಂದಾಯಿತು.  ಸೀರೆ ಕುಪ್ಪುಸ ಯಾವಾಗಲಾದರೂ ಧರಿಸಿದರೆ ಅವುಗಳಿಗೆ ಮ್ಯಾಚ್‌ಆಗುವ ಬಣ್ಣದ ಬಳೆ ಬೇಕೆ ಬೇಕು. ಅದಕ್ಕಾಗಿಯೇ ವಿರಳವಾಗಿ ತೊಟ್ಟರೂ ವೈವಿದ್ಯಮಯ ಬಣ್ಣ ಬಣ್ಣದ ಅಲಂಕಾರಿಕ ಕೈಬಳೆಗಳ ಸಂಗ್ರಹ ಇರಲೆಬೇಕು.ಆದರೆ ಅವು ಗಾಜಿನ ಬಳೆಗಳೇ ಆಗ ಬೇಕೆಂದಿಲ್ಲ.

ಅಲ್ಲಿ ಅರಗಿನ ಮಣಿಸರ,ನೆಕ್‌ಲೆಸ್‌,ಬಳೆಗಳ ರಾಸಿಯೇಇದ್ದಿತು. ಇಬ್ಬರೂ ಮೊಮ್ಮಕ್ಕಳೂ ಎರಡುಮೂರುಜತೆ ಕಿವಿಯಲ್ಲಿಧರಿಸಲು ಝುಂಕಿಗಳನ್ನು ಕೊಂಡರು. ಅದಕ್ಕ ಹೊಂದುವ ಕಡಗವನ್ನು ತಯಾರಿಸಿಕೊಡುವುದಾಗಿ ಹೇಳಿದುದನ್ನು ಕೇಳಿ ಅಚ್ಚರಿಆಯಿತು.ಪಕ್ಕದಲ್ಲಿನ ತಮ್ಮ ಅಂಗಡಿಯಲ್ಲಿಯೇ ಮಾಡಿಸಬಹುದೆಂದು ತಿಳಿಸಿದಳು. ಈ ಅಂಗಡಿಯಲ್ಲಿದ್ದವಲ ಹೆಸರು ಝೀನತ್ .ಅವಳ ಗಂಡನ ಹೆಸರು ಮಹಮ್ಮದ್‌ಖಾನ್.. ಅಲ್ಲಿ ಆತ ಒಂದು ಇದ್ದಿಲ ಒಲೆ ಇಟ್ಟುಕೊಂಡು ಕುಳಿತಿದ್ದ.ಜೊತೆಗೆ ಅನೆಕ ಉಪಕರಣಗಳು ಇದ್ದವು. ಆತನು ಹ್ಯಾಂಗಿಂಗ್‌ಗಳನ್ನು ಕೈಗೆ ತೆಗೆದು ಅವುಗಳ ಬಣ್ಣ.  ನೊಡಿದ ನಂತರ ಕೈನಲ್ಲಿ ಇದ್ದ ಕೋಲಿಗೆ  ಅಂಟಿಸಿದ್ದ  ಅರಗನ್ನು  ಕಾಯಿಸ ತೊಡಗಿದ.ಅವರದು ಬಳೆತಯಾರಿಸುವ ಖಾಂದಾನ್‌ ಎಂದು ತಿಳಿಸಿದ. ಅವರು ರಾಜಾಸ್ತಾನ ಮೂಲದವರು.ಮತ್ತು ಈ ದಂಧೆಯಲ್ಲಿ ತಮ್ಮ ಕೋಮಿನವರು ಮಾತ್ರ ಮಾಡುವರು ಎಂದು ತಿಳಿಸಿದ. ಮಾತ ಮಾತನಾಡುತ್ತಾ ಕರಗಿದ ಅರಗಿಗೆ ಬಣ್ಣ ಸೇರಿಸಿದ. ಅದು ಮೆತ್ತಗಾದ ಮೇಲೆ ನೆನಸಿದ ಹಿಟ್ಟಿನಂತಾಯಿತು. ಒಂದೆ ವ್ಯತ್ಯಾಸ . ಅದು ಬಹಳ ಬಿಸಿಯಾಗಿತ್ತು. ಕೆಲವು ಉಪಕರಣಗಳ ಸಹಾಯದಿಂದ ಮೆತ್ತಗಿದ್ದ ಬಣ್ಣದ ರಾಳವನ್ನು ಕೊಡುಬಳೆಯಂತೆ ದುಂಡಗೆ ಮಾಡಿ ನಂತರ ಬಳೆಯಾಕಾರಮಾಡಿ ನೀರಲ್ಲಿ ಹಾಕಿದ. ಕೆಲವೆ ನಿಮಿಷಗ ಳಲ್ಲಿ ಬೇಕಾದ ಬಳೆ ತಯಾರಾಯಿತು.



ಈ ದಂಧೆಯನ್ನು ಸುಮಾರು ಮುನ್ನೂರುವರ್ಷದಿಂದ  ತಲೆತಲಾಂತರದಿಂದ ಮಾಡಿಕೊಂಡಿರುವುದಾಗಿ ತಿಳಿಸಿದ. ಅದರ ತಯಾರಿಕೆಯ ರಹಸ್ಯ ತಮ್ಮ ವಂಶಜರಿಗೆ ಮಾತ್ರ ಗೊತ್ತು . ತನ್ನ ಎಲ್ಲ  ಸೋದರರು ಇದೇ ಕೆಲಸ ಮಾಡುತಿದ್ದಾರೆ, ಕಾಲೇಜು ಓದುತ್ತಿರುವ ಇಬ್ಬರು ಮಕ್ಕಳಿಗೂ ಈ ವಿದ್ಯ ಕಲಿತಿದ್ದಾರೆ , ಎಂದು ವಿವರ ನೀಡಿದ . ಬಳೆ ಎಂದರೆ ಎರಡೂ ಕೈಗೆ ಎಂಬ ನನ್ನ ನಂಬಿಕೆ ಹುಸಿಯಾಯಿತು


.ನಮ್ಮವರು ತೆಗೆದುಕೊಂಡದ್ದು ಒಂದೊಂದೆ ಕಡಗಗಳು. ಅದೇ ಫ್ಯಾಷನ್‌..
. ಒಂದು ಕೈನಲ್ಲಿ ವಾಚು ಇನ್ನೊಂದು  ಕೈನಲ್ಲಿ ಕಿವಿಯೊಡವೆಗೆ ಮ್ಯಾಚ್‌ ಆಗುವ ಕಡಗದಂಥಹ ಬಳೆ  ಧರಿಸ ಬೇಕಂತೆ. ನನಗಂತೂ ಸಂತೋಷ ವಾಯಿತು ಇನ್ನೊಂದು ಬಳೆಯ ಹಣ ಮಿಕ್ಕಿತ್ತು  ಎಂದು  .ಆದರೆ ಅವರು ತಮ್ಮ ಕಿವಿಗೆ ಧರಿಸಲು ಕೊಂಡಿದ್ದ  ಬೇರೆ ಬೇರೆವಿನ್ಯಾಸದ ಒಲೆಗಳಿಗೆ  ಹೊಂದಿಕೆಯಾಗುವ ಬಳೆಗಳನ್ನು ಕೊಂಡರು.ಮತ್ತು ಅವಕ್ಕೆ ಹೊಂದುವ ಬಣ್ಣದ ಉಡುಪಿಗಾಗಿ ಬೇಡಿಕೆ ಇಟ್ಟಾಗ ಸುಸ್ತಾದೆ.  ಆಯ್ತು ನೊಡೋಣ ಎಂದು ಮುಂದೆ ನಡೆದವು.

Friday, April 12, 2013

ತಾಳೆಗರಿ ಕಲಾಕೃತಿ-ಪಟ ಚಿತ್ರ


                                                    ಪಟ ಚಿತ್ರ

ಒರಿಸ್ಸಾದ ಪ್ರಕಾಶ್‌ ರಾಣಾ ನಮ್ಮದು “ಪಟ ಚಿತ್ರಕಲೆ ’  ಎಂದಾಗ ನನಗೆ ತುಸು ಗೊಂದಲವಾಯಿತು. ಚಿತ್ರಪಟ ಕೇಳಿ ಬಲ್ಲೆ.  ಆದರೆ ಇವರದು ತಿರುವು ಮುರುವು. ಬಹುಶಃ ಅವರ ಭಾಷೆಯ ಜಯಮಾನ ಹಾಗಿರಬಹುದು ಎಂದುಕೊಂಡು ಸುಮ್ಮನಾದೆ. ದಕ್ಷಿಣ ಚಿತ್ರಕ್ಕೆ ಭೇಟಿಕೊಟ್ಟಾಗ  ಕೇಳಿ ಬಂದ  ಮಾತು ಅದು. . ಅಲ್ಲಿನ ಕಲಾಬಜಾರ್‌ನಲ್ಲಿ ಬೇರೆಲ್ಲ ಅಂಗಡಿಗಳ ಜೊತೆ ಸ್ಪರ್ದೆ ಹೂಡಿ ಒಂದೆರಡು ಅಂಗಡಿಗಳಲ್ಲಿ ಹರಡಿರುವುದು ಬರಿ ತಾಳೆಗರಿಗಳುಮಾತ್ರ.


 ಒಂದು ಅಂಗುಲ ಅಗಲ,ಆರು ಅಂಗುಲ ಉದ್ದ ಗರಿಗಳಿಂದ ಹಿಡಿದು  ಎರಡು ಅಡಿ ಅಗಲ ಮತ್ತು ಮೂರು ಅಡಿ ಉದ್ದದ ವಾಲ್‌ಹ್ಯಾಂಗಿಂಗ್‌ವರೆಗ ಎಲ್ಲವೂ ತಾಳೆ ಗರಿಗಳಿಂದಲೇ ಮಾಡಿದವು.ಅಷ್ಟು ಉದ್ದದ ತಾಳೆಗರಿ ಸಿಗುವುದು ಸಹಜ ಆದರೆ ಅಡಿಗಟ್ಟಲೆ ಅಗಲದ ತಾಳೆಗರಿಗಳು ದೊರಕುವುದು ಸಾಧ್ಯವೇ ಇಲ್ಲ. ಆದರೆ ಅವರು ಹಲವು ಗರಿಗಳನ್ನು ಜೋಡಿಸಿ ತಮಗೆ ಬೇಕಾದ ಅಗಲದ ಗರಿಗಳ ಪಟಗಳನ್ನು ಮಾಡಿದ್ದರು . ಬಹುಶಃ ಅದಕ್ಕೇ ಅವರು ಪಟ ಚಿತ್ರ ಅಂದಿರಬಹುದು.
ತಾಳೆಗರಿಯಿಂದ ವಿವಿಧ ಆಕೃತಿಗಳನ್ನು ತಯಾರಿಸುವುದನ್ನು ನೋಡಿ ಬಲ್ಲೆ. ಹೂ ಬುಟ್ಟಿ, ಚಾಪೆ , ಬೀಸಣಿಕೆ , ಗಿಲಿಕಿ ಇತ್ಯಾದಿಗಳು ಒಂದುಕಾಲದಲ್ಲಿ  ಬೇಡಿಕೆ ಪಡೆದಿದ್ದವು ಪ್ಲಾಸ್ಟಿಕ್‌ ಬಂದ ಮೇಲೆ ಅವುಗಳು ಮಾಯವಾದವು ವಿಶೇಷವಾಗಿ ಚಿತ್ರಗಳು ಇರುವ   ಮಡಚಿದರೆ ಮುಷ್ಠಿಯಷ್ಟಾಗುವ ಬಿಚ್ಚಿದರೆ ವೃತ್ತಾಕಾರದ ಬೀಸಣಿಕೆಗಳು ಬೇಸಿಗೆಯಲ್ಲಿ ಸಿರಿವಂತರ ಮನೆಯಲ್ಲಿ ಕಾಣಸಿಗುತಿದ್ದವು ಅವುಗಳ ಮೇಲೆ ಬಣ್ಣದ ಚಿತ್ರಗಳೂ ಇರುತಿದ್ದವು ವಿದ್ಯುತ್‌ ಪಂಕಾ ಬಂದಮೇಲೆ ಅವುಗಳ ಗಾಳಿಗೆ ಗರಿಗಳ ಬಿಸಣಿಕೆ ಹಾರಿ ಹೊದವು.ಇದೆಲ್ಲ ಮೂತ್ತು ವರ್ಷದ ಹಿಂದಿನ ನೆನಪು.

ಈಗ ಮತ್ತೆ ಕಣ್ಣೆದುರಿಗೆ ತಾಳೆ ಗರಿಗಳು ಹರಡಿ ಕೊಂಡಿದ್ದವು. ತಾಳೆ ಗರಿಗಳು ಹಿಂದಿನ ಕಾಲದ ಬರಹದ ಮಾಧ್ಯಮವಾಗಿದ್ದವು, ಸುಮಾರು ಎರಡುನೂರು  ವರ್ಷದ ಹಿಂದಿನವರೆಗೆ ಅವುಗಳ ಮೇಲೆ ಲಿಪಿಕಾಕಾರರು ಗ್ರಂಥವನ್ನು ಕೊರೆಯುತಿದ್ದರು. ಆ ಹಸ್ತಪ್ರತಿಗಳ ರಕ್ಷಣೆಗೆ ಸರ್ಕಾರವು “ನ್ಯಾಷನಲ್ ಮ್ಯಾನ್ಯು ಸ್ಕ್ರಿ ಪ್ಟ್ ಮಿಶನ್‌ “ ಸ್ಥಾಪಿಸಿ ಕೋಟ್ಯಾಂತರ ರೂಪಾಯಿ ಹಣವನ್ನು ಅವುಗಳ ಸಂಗ್ರಹ ಮತ್ತು ಸಂರಕ್ಷಣೆಗ ವೆಚ್ಚ ಮಾಡುತ್ತಿದೆ. ಆದರೂ ಇದು ಒಂದು ಅಭಿಯಾನದ ರೂಪ ತಳೆದು ಜನ ಸಮುದಾಯದ ಮನ ಮುಟ್ಟ ಬೇಕಿದೆ.

ಬಿ ಎಂ ಶ್ರೀ ಪ್ರತಿಷ್ಠಾನದಲ್ಲಿ ಹಸ್ತ ಪ್ರತಿ ಕಾರ್ಯದಲ್ಲಿ ತೊಡಗಿಸಿ ಕೊಂಡ ನನಗೆ ಅಷ್ಟುಪ್ರಮಾಣದ ತಾಳೆಗರಿಗಳನ್ನು ನೋಡಿ ಬಹಳ ಸಂತೋಷವಾಯಿತು.ಅಲ್ಲದೆ ಎರಡು ಮೂರು ರೀತಿಯ ಕಂಟಗಳು ಅಲ್ಲಿದ್ದವು.
  .ಹಸ್ತ ಪ್ರತಿ ಅಧ್ಯಯನದ ಕುರಿತು ಆಸಕ್ತಿ ಬೆಳೆದಾಗ ದಕ್ಷಿಣ ಭಾರತದ ಪ್ರವಾಸದಲ್ಲಿ ಎಲ್ಲಿಯದರೂ ತಾಳೆ ಮರ ಕಂಡರೆ ಒಹೋ! ಇದರ ಗರಿಗಳನ್ನೆ ಪುರಾತನರು ಹಸ್ತಪ್ರತಿಗೆ ಬಳಸುತಿದ್ದರು. ಎಂದು ಮನದಲ್ಲಿ ಅಂದುಕೊಂಡು ಅದು ಯಾವ ಜಾತಿಯ ತಾಳೆ ಎಂದು ಅರಿಯಲು ಯತ್ನಿಸುವ ನನಗೆ ಅಲ್ಲಿನ ಅಂಗಡಿನೋಡಿ ಬಹಳ ಖುಷಿಯಾಯಿತು.
ತಾಳೆಗರಿಯಲ್ಲಿ ಚಿತ್ರ ಬರೆದು ಹಣ ಮಾಡಬಹುದೆಂಬ ಕಲ್ಪನೆಯೇ ಹೊಸದೆನಿಸಿತು. ನಮ್ಮಳ್ಲಿ ತಾಲೆಗರಿಗಲಲ್ಲಿ ಚಿತರವಿರುವು ಬಹಳ ವಿರಳ. ಜೈನ ಗ್ರಂಥಗಲಲ್ಲಿ ಚಿತ್ರಗಲಿರುವುದ, ರಾಮಾಯಣ ಮತ್ತು ಮಹಾಭಾರತದಲ್ಲಿ ಸಮಬಂಧಿಸಿರುವ ಚಿತ್ರಗಳಿರುವ ಪ್ರತಿ ಅಗೀಗ ಕಣ್ಣಿಗೆ ಬಿದ್ದಿವೆ.ಧವಳ ಗ್ರಂಥವು ಮಾತ್ರ ಸಚಿತ್ರವಾಗಿದ್ದು ಅದರ ವರ್ಣ ಚಿತ್ರಗಳಿಂದ ತುಂಬ ಆಕರ್ಷಕವಾಗಿದೆ.ನನಗೆ ತಿಳಿದಿರುವ ಮಟ್ಟಿಗೆ ಈ ಮಾಧ್ಯಮವನ್ನು ಕಲಾಪ್ರಕಾರವಾಗಿಸಿಕೊಂಡು ಬದುಕುವ ದಾರಿ ಕಂಡವರು ಬಹಳ ವಿರಳ.ಅದನ್ನುಕರ್ನಾಟಕದಲ್ಲಂತೂ ನಾನು  ಕಂಡೇ ಇಲ್ಲ. ಆದರೆ ತಮಿಳುನಾಡಿನಲ್ಲಿ ತಾಳೆಗರಿಯ ಮೇಲೆ ಚಿತ್ರ ಬಿಡಿಸಿರುವುದು ಬಹಳ ಅಚ್ಚರಿ ತಂದಿತು. ಆದರೆ ಚಿತ್ರ ಬಿಡಿಸುವವರು ಒರಿಸ್ಸಾದವರು. ತಾಳೆಗರಿಗಳಿಗೆ ದಕ್ಷಿಣ ಬಾರತ ಪ್ರಸಿದ್ಧ. ಆದರೆ ಅದರ ಇನ್ನೊಂದು ಸಾಧ್ಯತೆಯನ್ನುಬಳಸಿಕೊಂಡವರು ಮಾತ್ರ ನೆರೆಯವರಾದ ಒರಿಸ್ಸಾದವರು.


ಪ್ರಕಾಶ್‌ ರಾಣ ಅವರು ಇಲ್ಲಿ ಕಳೆದ ಹತ್ತಾರು ವರ್ಷದಿಂದ ಪಟ ಚಿತ್ರವನ್ನೇ ಜೀವನಾಧಾರ  ಮಾಡಿಕೊಂಡಿರುವರು. ಅವರ ಸೋದರ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಈಪ್ರಕಾರದ ಕಲಾವಿದರು.ಅವರೇ ಅನೇಕರಿಗೆ ಈಪ್ರಕಾರದ ಕಲಾಶಿಕ್ಷಣ ನೀಡುವರು.ಮೊದಲನೆಯದಾಗಿ ಕಲಿಯುವ ವ್ಯಕ್ತಿ ಕಲಾವಿದನಾಗಿರಬೇಕು ನಂತರ ಈ ಮಾಧ್ಯಮದ  ಬಳಕೆಯವಿಧಾನವನ್ನು ಕಲಿಸಲಾಗುವುದು ಎಂದು ತಿಳಿಸಿದರು. ವಿಶೇಷವೆಂದರೆ ಅವರಿ ತಾಳೆಯೋಲೆಗಳನ್ನು ಸಿದ್ಧ ಪಡಿಸಲು ಪುರಾತನ ಪದ್ದತಿಯನ್ನೇ ಬಳಸುವರು. ಮತ್ತು ಚಿತ್ರವನ್ನು ಕಂಟ ದಿಂದ ಬರೆದು ನಂತರ ಬಣ್ಣ ಹಾಕುವರು.ಅಲ್ಲಿ ಗಮನಿಸಿದಂತೆ ಬಹು ವರ್ಣದ ಚಿತ್ರಗಳು  ಜನಪ್ರಿಯವಾಗಿವೆ..
ಇದನ್ನು ವಾಣಿಜ್ಯದೃಷ್ಟಿಯಿಂದ ಯಶಸ್ವಿಯಾಗಲು ಅವರು ಹತ್ತು ರೂಪಾಯಿಯ ಸರಳ ಒಂಟಿ ಗರಿಯಿಂದ ಹಿಡಿದು ಇಪ್ಪತ್ತು ಸಾವಿರದ ವರೆಗಿನ ಕಲಾಕೃತಿಗಳನ್ನು ರಚಿಸುವಲ್ಲಿ ಸಿದ್ದ ಹಸ್ತರು, ಒಂಟಿಗರಿಗಳನ್ನು ಓದುಗರು ಪೇಜ್‌ಮಾರ್ಕರ್‌ ಆಗಿ ಬಳಸಲು ಇಷ್ಟ ಪಡುವರು ಎಮದು ತಿಳಿಯಿತು ಮತ್ತು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಿಂದೂಗಳಾದರೆ ಪುರಾಣ ಪ್ರಕರಣಗಳನ್ನು ಚಿತ್ರಿಸಿರುವರು,.ಕ್ರೈಸ್ತರಿಗೆ ಬೈಬಲ್ಲಿನ ಕಥಾನಕಗಳನ್ನು ಚಿತ್ರಿಸಿದರೆ ಇಸ್ಲಾಂಅನುಯಾಯಿಗಳಿಗೆ ಬಳ್ಳಿ, ಹೂವು ಖುರಾನ್‌ವಾಕ್ಯಗಳು  ಇರುವ ಚಿತ್ರ ಸಿದ್ಧ ಪಡಿಸಿ ಕೊಡುವರಂತೆ.,ಇನ್ನು ನಿಸರ್ಗದ ಚಿತ್ರಗಳು , ಜನ ಜೀವನ ಬಿಂಬಿಸುವ ಪಟಚಿತ್ರಗಳಿಗೆ ಎಲ್ಲರಿಂದಲೂ ಬೇಡಿಕೆ, ಅಂತೂ ಪಟ ಚಿತ್ರವು ಭಾರತದ ಎಲ್ಲ ಧರ್ಮದವರಿಗೂ ಬೇಕಾದ ಕಲಾ ಮಾದ್ಯಮವಾಗಿ ಹೊರ ಹೊಮ್ಮಿದೆ. .  

Thursday, April 11, 2013

ಹೊಸ ವರ್ಷದ ಶುಭಾಶಯಗಳು

 
                                            ಹೊಸ  ವರ್ಷ ತರಲಿ ನಿಮಗೆಲ್ಲ ಹರ್ಷ

 you ಗಾದಿ    
ನೀನೊಂದು ಮೆತ್ತನೆ ಹಾಸಿಗೆ
ದಣಿದು ಮಲಗಿದವಗೆ ಗಡದು ನಿದ್ದೆ
ಆದ ಆಯಾಸ ಪರಿಹಾರ
ಮಾರನೆ ದಿನ ಕೆಲಸಕ್ಕೆ ಸಿದ್ಧ
ಸುಖಾ ಸುಮ್ಮನೆ ಮಲಗಿದರೆ
ಬರುವುದು ಇರದ ತೊಂದರೆ
ಎಳವೆಯಲ್ಲಿ ಬಹಳ ನಿದ್ದಿ
ಕಾರಣ ಸರಳ ಕಡಿಮೆ ಬುದ್ದಿ
ದೀರ್ಘವಾದಂತೆ ಜೀವನ ಯಾತ್ರೆ
ತಲೆತುಂಬ ಯೋಚನೆ
ಮನದತುಂಬ ಕಹಿ
ರಕ್ತವಂತೂ ಬಹು ಸಿಹಿ
ನಿದ್ದೆ ಮಾಡಲು ಬೇಕು ಮಾತ್ರೆ
ಮೆತ್ತನೆಯ ಹಾಸಿಗೆಯೂ ಮೈ ಒತ್ತುವುದು
ಸಿವ ಸೊಂಟ ನೋವು
ಮಲಗಲು ಸುಖ ಕಡ್ಡಿಚಾಪೆ
ಚಿಂತೆ ಇಲ್ಲದವಗೆ ಸಂತೆಯಲು ನಿದ್ದೆ
ನೆಲವೆ ಹಾಸಿಗೆ ಮುಗಿಲೆ ಹೊದಿಕೆ
ಹೊಸ ವರ್ಷ ವಿಜಯ
ಮನದಲಿ ತುಂಬಿದವಗೆ ಭಯ
 ಹಳೆಯ ಹೊತ್ತಿಗೆ ಹೊಸ ರಟ್ಟು
ಲಾಡು, ಜಿಲೇಬಿ, ಹೋಳಿಗೆ ಚಿರೋಟಿ
 ತಿಂದಾಗ ನಾಲಗೆ ತುದಿಯಲ್ಲಿ ಸಿಹಿ
 ಮರುಗಳಿಗೆ ಮಟಾ ಮಾಯ
ಎಂದರಿತರೆ ಸಾಕು
ತಿಳಿವುದು ಸುಖ ಜೀವನದ ಗುಟ್ಟು. 

Saturday, April 6, 2013

ಭಕ್ಷಕರೇ ರಕ್ಷಕರಾದ ಪಕ್ಷಿಧಾಮ-ವೇದಾಂತಂಗಳ್



  ತಮಿಳು ನಾಡಿನಲ್ಲಿ  ದೇಶದಲ್ಲಿಯೇ ಅತ್ಯಂತ ಹಳೆಯದರವುಗಳಲ್ಲಿ  ಒಂದಾದ  ಪಕ್ಷಿಧಾಮವಿದೆ..ಇದಕ್ಕೆ ಕನಿಷ್ಟ 250 ವರ್ಷಗಳ ಇತಿಹಾವಿದೆ. . ಅದು ಅಷ್ಟು ದೊಡ್ಡದೇನಲ್ಲ. ಆದರೆ ಅದರ ವಿಶೇಷತೆ ಇರುವುದು  ಅದರ ರಕ್ಷಣೆಗೆ ಅಲ್ಲಿನ ಜನರೇ ಕಂಕಣ ಬದ್ಧರಾಗಿರುವುದು. ಅದೂ ಶತಶತಮಾನಗಳಿಂದ. ತಮ್ಮ ಸ್ವಂತ ಆಸ್ತಿಯಂತೆ ಆ ಚಿಕ್ಕಗ್ರಾಮದ ಜನ ಕಾಪಾಡಿಕೊಂಡು ಬಂದಿರುವುರು. ಕಂಚೀಪುಪರಂ ಚಿಲ್ಲೆಯ ಚಂಗಲ್‌ಪೇಟೆ ತಾಲೂಕಿಗೆ ೧೦ ಮೈಲು ದೂರದಲ್ಲಿ ಇರುವ ಈ ಹಸಿರುಮಯಪ್ರದೇಶಕ್ಕೆ ದೇಶವಿದೇಶಗಳಿಂದ ಹಕ್ಕಿಗಳು ವಲಸೆಬರುತ್ತವೆ. ಅಲ್ಲಿರುವುದು  ಒಂದು ೩೦ ಹೆಕ್ಟೇರ್‌  ವಿಸ್ತೀರ್ಣದ ಕೆರೆ. ಅದೂ ಸಂಪೂರ್ಣ ಮಳೆಯಾಶ್ರಿತ. ಇದಕ್ಕೆ ಕನಿಷ್ಟ ಪಕ್ಷ ೨೫೦ ವರ್ಷಗಳ ಇತಿಹಾಸವಿದೆ. ಈ ಪ್ರದೇಶ ಮೊದಲಿನಿಂದಲೂ ಚಿಕಪುಟ್ಟ ಕೆರೆ ಕುಂಟೆಗಳಿಂದ ಕೂಡಿದ್ದು ಪಕ್ಷಿಗಳಿಗೆ ಸುಲಭವಾಗಿ ಆಹಾರ ದೊರೆಯುವುದು. ಎಲ್ಲ ಕಡೆ ಹಚ್ಚ ಹಸಿರಿನ ಭತ್ತದ ಗದ್ದೆಗಳು. ನಗರದ ಸದ್ದುಗದ್ದಲದಿಂದ ದೂರ.ವಿಚಿತ್ರ ಎಂದರೆ ಈ ಊರಿನ ಹೆಸರು ವೇದಾಂತಂಗಳ್‌ ಎಂದರೆ ತಮಿಳಲ್ಲಿ ಬೇಟೆಗಾರರ ಪಾಳ್ಯ ಎಂದು. ಆದರೆ ಭಕ್ಷಕರೇ  ಇಲ್ಲಿನ ಪಕ್ಷಿಗಳ ರಕ್ಷಕರಾಗಿದ್ದಾರೆ.
ಇದು ಜನರಿಂದ ಜನರಿಗಾಗಿ ಇರುವ ಪಕ್ಷಿಧಾಮ ಎಂದರೆ  ಅಚ್ಚರಿ ಬೇಡ. 

ಅಲ್ಲಿನ ಜನ  ಹಕ್ಕಿಗಳು ತಮ್ಮ ಜಮೀನಿನಲ್ಲಿ ಹಕ್ಕಿಗಳು ಹಾಕುವ ಹಿಕ್ಕೆಯಿಂದ ಬೆಳೆ ಹೆಚ್ಚಾಗಿ ಬರುವುದೆಂಬ ಸತ್ಯವನ್ನು ಬಹಳ ಹಿಂದೆಯೇ ಮನಗಂಡರು.. ಕೆರೆಯಲ್ಲಿ ಹಕ್ಕಿಗಳ ವಸತಿಯಿಂದಾಗಿ ನೀರಿನಲ್ಲಿನ ಸಾರಜನಕದ ಅಂಶ ಅಧಿಕವಾಗಿ ಯಾವದೇ ಗೊಬ್ಬರ ಹಾಕದೆ ಬರಿ ಕೆರೆಯ ನೀರಿನಿಂದಲೇ ಉತ್ತಮ ಫಸಲು ದೊರೆಯುವಾಗ ತಮ್ಮ ಆದಾಯದ ಮೂಲವನ್ನು ರಕ್ಷಿಸಲು ಮುಂದಾದರು. ೧೮ನೇ ಶತಮಾನದ ಕೊನೆಯಲ್ಲಿ ಅಲ್ಲಿರುವ ಪಕ್ಷಿಗಳ ಬೇಟೆಯಾಡಲು ಬರುತಿದ್ದ  ಆಂಗ್ಲ  ಸೈನಿಕರ ವಿರುದ್ಧ ಕಲೆಕ್ಟರ್‌ರಿಗೆ ದೂರು ಸಲ್ಲಿಸಿದರು. ಬ್ರಿಟಿಷರ ಆಡಳಿತವಿದ್ದಾಗ ಅವರ ಸೈನಿಕರ ವಿರುದ್ಧವೇ ದೂರು ಸಲ್ಲಿಸಲು ಎರಡು ಗುಂಡಿಗೆ ಬೇಕು. ಅವರ ಪಕ್ಷಿ ಪ್ರೀತಿ ಜೊತೆಗೆ ಅದರಿಂದ ತಮಗಾಗುವ ಲಾಭ ಅವರಿಗೆ ಧೈರ್ಯ ಕೊಟ್ಟಿತು.೧೭೯೮ ರಲ್ಲಿಯೇ ಆ ಬಗ್ಗೆ ಸರ್ಕಾರವು  ಜನರ ಒತ್ತಾಯದ ಮೇರೆಗೆ  ಆದೇಶ ಹೊರಡಿಸಿತು. ೧೯೩೬ ರಲ್ಲಿ ಅದನ್ನು ಅಧಿಕೃತ ಪಕ್ಷಿಧಾಮವಾಗಿ ಘೋಷಿಸಲಾಯಿತು.. ಪರಿಸರ ರಕ್ಷಣೆಗೆ  ಜನಪರ ಚಳುವಳಿ ಮಾಡಿದುದು  ಅದೇ ಮೊದಲುಎನ್ನಬಹುದು.
 ಕೆರೆಯಲ್ಲಿ ಬೇಸಿಗೆಯಲ್ಲಿನೀರಿನ ಸಂಗ್ರಹ  ಕಡಿಮೆಯಾಗುವುದು. ಮಳೆಗಾಲದಲ್ದ್ಲಿಬಂದ ನೀರನ್ನು ಸಂಗ್ರಹಿಸಲು ಮೈಲುದ್ದದ  ಕೆರೆ ಏರಿಯನ್ನು ಭದ್ರ ಪಡಿಸಲಾಗಿದೆ. ಅಲ್ಕೆಲಿ ರಸ್ರೆತೆ ಪಕ್ಯಷಿ ವೀಕ್ಲ್ಲಿಷಣೆ ಗೋಪುರ , ಬೆರಲಲ್ಲಿ ಕುಳಿತು ನೋಡಲು ಬೆಂಚುಗಳು ಇವೆ. ಕೆರೆಯಲ್ಲಿ  ಹೆಚ್ಚು ಜಲ ಸಸ್ಯಗಳುಇಲ್ಲ . ಮೊದಲು ಅಲ್ಲಿರುವ ೫೦೦ ಮರಗಳೇ ಹಕ್ಕಿಗಳಿಗೆ ಆಧಾರ.ಮತ್ತೆ ೧೯೭೩ ರಲ್ಲಿ ೧೦೦ ಗಿಡಗಳನ್ನು ೧೯೯೬ ರಲ್ಲಿ ೧೦೦೦ ಗಿಡಗಳನ್ನೂ ನೆಟ್ಟು  ಬೆಳೆಸಲಾಗಿದೆ
ಅತಿ ಚಿಕ್ಕದಾದ ಆದರೆ ಚೊಕ್ಕವಾಗಿರುವ ಈ ಸ್ಥಳವು ಸುಮಾರು ೩೦೦೦೦ ಹಕ್ಕಿಗಳ ವಲಸೆ ತಾಣವಾಗಿದೆ. ಮಳೆಗಾಲದಲ್ಲಿ  ಅತಿಹೆಚ್ಚು ಮಳೆಯಾದಾಗ ಮರಗಳು ಮುಳುಗಿದರೂ ಅವುಗಳ ತುದಿಯಲ್ಲಿ ಹಕ್ಕಿಗಳು ಗುಂಪಾಗಿ ಗುಡುಕಟ್ಟಿ ನೆಲಸಿರುವುದು ನೋಡಿದರೆ ಹಕ್ಕಿಗಳ  ದ್ವೀಪದಂತೆ ಕಾಣುವ ನೋಟ  ಬಹು ಚಂದ.ಅಕ್ಟೋಬರ್‌ನಿಂದ  ಜನವರಿವರೆಗ ಹಕ್ಕಿಗಳ ದಟ್ಟಣೆ ಬಹಳ. ಅದು ಪಕ್ಷಿವೀಕ್ಷಣೆ ಉತ್ತಮ ಅವಕಾಶ ಕೊಡುವುದು ಅದರಲ್ಲ್ಲೂ ಸಾವಿರಾರು ಹಕ್ಕಿಗಳನ್ನು ಹತ್ತಿರದಿಂದ ನೋಡಲು ಸಾಧ್ಯವಿದೆ.
ಇಲ್ಲಿಗೆ ಮೊದಲು ಬರುವುದು ತೆರೆದ ಕೊಕ್ಕಿನ ಕೊಕ್ಕರೆ. ಅದು ವಾಪಸ್ಸು ಹೋಗುವುದರೊಳಗೆ ಎರಡು ಸಲ ಮರಿಮಾಡುವುದು.ಇಲ್ಲಿಗೆ ಸುಮಾರು ನಲವತ್ತು ಪ್ರಬೇಧದದ ಹಕ್ಕಿಗಳು ಸಾವಿರಾರು ಸಂಖ್ಯೆಯಲ್ಲಿ  ಬಂದು ಸಂತಾನಾಭಿವೃದ್ದಿ ಮಾಡಿಕೊಂಡು ಹೋಗುತ್ತವೆ. ಇವಗಳೂ ಅಲ್ಲದೆ 
ಇಲ್ಲಿ ಕಾಡು ಬೆಕ್ಕು ,ನರಿ, ಮೊಲ., ಕರಡಿ ಮಂಗ ಮೊದಲಾದ ಪ್ರಾಣಿಗಳೂ ಕಾಣ ಸಿಗುತ್ತವೆ

ಇಲ್ಲಿಗೆ ಯುರೋಪು ನಿಂದ ಅಲ್ಲಿನ ಅತಿ ಚಳಿತಾಳಲಾರದೆ  ವಲಸೆ ಬರುವಹಕ್ಕಿಗಳೇ ಹೆಚ್ಚು , ಬಂಗ್ಲಾದೇಶ, ಶ್ರೀಲಂಕಾದಿಂದಲೂ ಬರುತ್ತವೆ.ಅವುಗಳನ್ನು ಗುರುತಿಸುವುದ ಬಹು ಸುಲಭ.


ಇಲ್ಲಿ ಪಕ್ಷಿ ವೀಕ್ಷಕರಿಗೆ ಬಹಳ ಅನುಕೂಲವಿದೆ. ಕೆರೆಯ ದಂಡೆಯಮೇಲೆ  ಉದ್ದಕ್ಕೆ ಓಡಾಡುತ್ತಾ ಕೇವಲ ಕೆಲವೇ ಮೀಟರ್‌ಗಳ ಅಂತರದಲ್ಲಿರುವ ಪಕ್ಷಿಗಳ ಚಟುವಟಿಕೆಯನ್ನು ಗಮನಿಸಬಹುದು.ಅಲ್ಲದೆ ದೋಣಿಗಳ ಮೂಲಕ ಮರಗಳ ಹತ್ತಿರವೇ ಹೋಗಲು ಸಾಧ್ಯ.ಇಲ್ಲಿನ ಜನರ ಇನ್ನೊಂದ ಸಾಧನೆ ಎಂದರೆ ಈ ಪ್ರದೇಶವು ಸಂಪೂರ್ಣ ಪ್ಲಾಸ್ಟಿಕ್‌ ಮುಕ್ತವಾಗಿದೆ. ಅಷ್ಟೇ ಅಲ್ಲ. ಅಲ್ಲಿ ಯಾವುದೇ ಜಂಕ್‌ ಫುಡ್‌ ಮಾರಾಟ ಮಾಡುವುದಿಲ್ಲ. ಏನಿದ್ದರೂ ಹಣ್ಣು ಹಂಪಲು ಮಾತ್ರ   ಅವೂ ತಾಜಾ ಹಾಗೂ ಬಹಳ ಅಗ್ಗವಾಗಿ ದೊರೆಯುತ್ತವೆ.
ಪ್ರವಾಸಿಗರಿಗೆ ಚಿತ್ರ ಸಹಿತ ಮಾಹಿತಿ ನೀಡಲು ವ್ಯವಸ್ಥೆ ಮಾಡಿರುವರು,ಪೂರ್ಣ ವಾತಾವರಣವೇ ಪಕ್ಷಿಮಯ ವಾಗಿದೆ..ಅಲ್ಲಲ್ಲಿ ವಿವರವಿರುವ ಫಲಕಗಳು, ನೀರು  ಕುಡಿಯುವ ನಳವೂ ಸಹಿತ ಪ್ರಾಣಿ , ಪಕ್ಷಿಗಳ ಆಕಾರದಲ್ಲಿ ರೂಪಿಸಿರುವುದು ಪ್ರವಾಸಿಗರಿಗೆ ಉತ್ತಮ ಸಂದೇಶ ರವಾನೆ ಮಾಡಲು ಸಹಾಯಕ.
.ಕೆರೆಯ ಸುತ್ತಮುತ್ತಲೂ ಹರಡಿರುವ ಹಸಿರು ಮುರಿಯುವ ಗದ್ದೆಗಳಲ್ಲಿ ಜನ ಕೆಲಸ ಮಾಡುತಿದ್ದರೂ  ಅವರ ಪಕ್ಕದಲ್ಲೇ ಯಾವದೇ ಭೀತಿಇಲ್ಲದೆ ಹಕ್ಕಿಗಳು ತಮ್ಮ ಪಾಡಿಗೆ ತಾವು ಹುಳು ಹುಪ್ಪಡಿ  ಹುಡುಕುತ್ತಾ ಇರುವುದು ಸಾಮಾನ್ಯ ದೃಶ್ಯ. ಮಾನವ ಮತ್ತು ಹಕ್ಕಿಗಳ ಸಾಮರಸ್ಯ ನೋಡಲು ಇಲ್ಲಿ ಸಾಧ್ಯ .ಇದಕ್ಕೆ ಕಾರಣ ಶತಶತಮಾನದಿಂದ ಬಂದ ಪರಸ್ಪರ ನಂಬಿಕೆ ವಿಶ್ವಾಸ.

ಭಕ್ಷಕರೇ ರಕ್ಷಕರಾದಾಗ ಸುರಕ್ಷತೆಗೆ  ಬೇರೆ ಇನ್ನೇನು ಬೇಕು.
ವಲಸೆ ಬರುವ ಕೆಲ ಹಕ್ಕಿಗಳು

















Migrating Avian-Fauna: Garganey teals, glossy ibis, grey heron, grey pelican, open-billed stork, painted stork,vsnake bird, spoonbill, spot bill duck, cormorants, darter, grebes, large egret, little egrets, moorhen, night herons, paddy bird, painted stork, pintails, pond heron, sandpiper, shovellers, terns, white ibis.


Friday, April 5, 2013

ಗಾಜಲ್ಲಿ ಅರಳಿದ ಕಲೆ


                                  ಕರಗಿದ   ಗಾಜು   ಕಲಾಕೃತಿಯಾಯಿತು
ಚೆನ್ನೈ ಗೆ ಈಸಲ ಹೋದಾಗ ದಕ್ಷಿಣ ಚಿತ್ರ ಎಂಬಲ್ಲಿಗೆ ಭೇಟಿನೀಡಿದೆವು. ಅದು ದಕ್ಷಿಣ ಭಾರತದ ನಾಲ್ಕುರಾಜ್ಯಗಳ  ಕಾಣೆಯಾಗುತ್ತಿರುವ ಜನ ಜೀವನ ಪ್ರತಿಬಿಂಬಿಸುವ  ನಾಲ್ಕುವಿಭಾಗಗಳಿವೆ. ಹಾಗೆ ಹೋಗುತ್ತಿರುವಾಗ ಒಂದುಕಡೆ ಎರಡು ಗ್ಯಾಸ್‌ ಸಿಲಿಂಡರ್ ಜೊತೆಗೆ ವೆಲ್ಡಿಂಗ್‌ ಷಾಪಿನಂತಿರುವ ತಾಣ ಕಾಣಸಿಕ್ಕಿತು. ನಮಗೆ ಅಚ್ಚರಿ ಇಲ್ಲಿ ಏಕೆ ಈ ಗ್ಯಾಸ್‌ ವೆಲ್ಡಿಂಗ ಕೆಲಸ ನಡೆಯುತ್ತಿದೆ ಎಂದು. ಆದರೆ ಆಲ್ಲಿರುವ ವ್ಯಕ್ತಿ ಕಭ್ಭಿಣದ ಕೆಲಸ ಮಾಡುವ ಹಾಗೆ ಕಾಣಲಿಲ್ಲ. . ಸುಸಂಸ್ಕೃತನಾದ ಆಧುನಿಕ ಉಡುಪು ಧರಿಸಿದವ್ಯಕ್ತಿ . ಅವನ ಕೈನಲ್ಲಿ ಇದ್ದುದು ಗಾಜಿನಕಡ್ಡಿಗಳು.  ಮುಂದೆ ಹರಡಿದ್ದು ಗಾಜಿನ ನಳಿಕೆಗಳು.

Please come, and watch the demonstration of glassblowing art: ಎಂದು ನಗುತ್ತಾ ಆಹ್ವಾನಿಸಿದ.
ನಮಗೆ ಅದರ ತಲೆ ಬುಡ ತಿಳಿದಿರಲಿಲ್ಲ. ಸರಿ, ಏನೋ ಹೊಸದು ನೋಡೋಣ ಎಂದು ಅಲ್ಲಿ  ನಿಂತೆವು.
ನಮ್ಮನ್ನು ಕರೆದ ವ್ಯಕ್ತಿಯ ಹೆಸರು ಶ್ರೀನಿವಾಸ ರಾಘವನ್‌, ಆತ ಗಾಜಿನಲ್ಲಿ ಕುಸುರಿ ಕೆಲಸ  ಮಾಡುವ ಕಲಾವಿದ.
 ನಾವು ನೋಡುತ್ತಿರುವಂತೆ ಎರಡು ತೆಳುವಾದ ಗಾಜಿನ ಕಡ್ಡಿಗಳನ್ನು ಕೈನಲ್ಲಿ ಹಿಡಿದ. ನಂತರ ಗ್ಯಾಸ್‌ಸಿಲಿಂಡರ್‌ ಅನ್ನು ಆನ್‌ ಮಾಡಿದ. ತಿಳಿ ನೀಲಿ ಜ್ವಾಲೆ ಚಾಕುವಿನೋಪಾದಿಯಲ್ಲಿ ಹೊರ ಹೊಮ್ಮಿತು. ನೋಡ ನೋಡುತ್ತಿರುವಂತೆ ಅವನ ಕೈನಲ್ಲಿನ ಗಾಜಿನಕಡ್ಡಿಯ ತುದಿ  ಶಾಖಕ್ಕೆ ಕರಗಹತ್ತಿತು.. ಇನ್ನೊಂದು ಲೋಹದ ಕಡ್ಡಿಯನ್ನು ಬಳಸಿಒಂದೇ ನಿಮಿಷದಲ್ಲಿ ಗಾಜಿನ ಕಡ್ಡಿಯ ತುದಿಯಲ್ಲಿ ಹಂಸದ ಆಕೃತಿ ಅರಳಿತು. ಮುಂಗೈಅನ್ನು ಅತ್ತಿತ್ತ ತಿರುಗಿಸುತ್ತಾ ಕರಗಿದ ಗಾಜಿಗೆ ರೂಪ ಕೊಡತೊಡಗಿದ ನಮಗೆ ಆಗ ತಿಳಿಯಿತು ಅದೂ ಒಂದು ಕಲಾಪ್ರಕಾರ ಎಂದು.

ವಿವರ ವಿಚಾರಿಸಿದೆವು. ಅವನು ಮೂಲತಃ ಗ್ಲಾಸ್‌ವರ್ಕ್ಸನಲ್ಲಿ ಕೆಲಸ ಮಾಡಿದವನು. ಅಲ್ಲಿ ವೈಜ್ಞಾನಿಕ ಉಪಕರಣಗಳಾದ ಟೆಸ್ಟ್‌ಟ್ಯೂಬ್, ಬೀಕರ್‌ಇತ್ಯಾದಿಗಳನ್ನು ತಯಾರಿಸುವರು. ಅದಕ್ಕೆ ಅಗತ್ಯವಾದ ಮೂಲವಸ್ತು ಸಿಲಿಕಾನ್. ಅದನ್ನುಕಾಯಿಸಿ ಕರಗಿಸಿ ಬೇಕಾದ ಆಕಾರ ಕೊಡಲಬಹುದಿತ್ತು.ಕೆಲದಿನ ಫರಿದಾಬಾದ್‌ನ ಬಳೆ ತಯಾರಿಕಾ ಘಟಕದಲ್ಲೂ ಕೆಲಸ ಮಾಡಿ ಅನುಭವ ಪಡೆದನಂತರ ಅವನಲ್ಲಿದ್ದ ಕಲಾವಿದ ಹೊಸದು ಮಾಡಲು ಹಂಬಲಿಸಿದ. ಅದರ ಪರಿಣಾಮವೇ ಗ್ಲಾಸ್‌ ಬ್ಲೋಯಿಂಗ್‌ ಕಲೆ. ಇಲ್ಲಿ ಬೇರೆ ಕಚ್ಚಾ ಸಾಮಗ್ರಿ ಬೇಕಿಲ್ಲ. ಗಾಜಿನಕಡ್ಡಿಗಳಾದರೆ ಸಾಕುಬೇಕಾದ ಬಣ್ಣಗಳನ್ನು ಹಾಕಿ ವರ್ಣಮಯ ಕಲಾಕೃತಿಗಳನ್ನೂ ಮಾಡಬಹುದು
ಇದನ್ನು ನೋಡಿದಾಗ ಬಳೆತಯಾರಿಕೆ ಗೃಹ ಉದ್ಯಮವಾಗಿದ್ದ ಕಾಲ ನೆನಪಾಯಿತು. ಬಳೆಚೂರು ಮತ್ತು ಗಾಜಿನ ಚೂರುಗಳನ್ನು ಸಂಗ್ರಹಿಸುತಿದ್ದರು.ಅವನ್ನು ಬಳೆತಯಾರಿಕಾ ಘಟಕಗಳು ಕೊಳ್ಳುತಿದ್ದವು ಗೃಹ ಕೈಗಾರಿಕೆಯಾಗಿ ಬಳ್ಳಾರಿಯಲ್ಲಿ ನಲವತ್ತು ವರ್ಷದ ಹಿಂದೆ ಬಳ್ಳಾರಿಯಲ್ಲಿಯೇ ಇದ್ದವು. ಅಲ್ಲಿಂದಲೇ ಜಿಲ್ಲೆಯಾದ್ಯಂತ ಗಾಜಿನ ಬಳೆಗಳು ಮತ್ತು ಗೋಲಿಗಳು ಸರಬರಾಜು ಆಗುತಿದ್ದವು ಪ್ಲಾಸ್ಟಿಕ್ ಪ್ರಚಾರಕ್ಕೆ ಬಂದನಂತರ ಅವು ಕೊನೆಯುಸಿರು ಎಳೆದವು.ಅದರ ಜೊತೆ ಬಳೆಯ ಮಲ್ಹಾರ ಹೊತ್ತು ಮಾರುವ ಬಳೆಗಾರರ ಚೆನ್ನಯ್ಯನ ಅನುವಂಶಿಕ ವೃತ್ತಿಯೂ ಕೊನೆಗೊಂಡಿತು.

 ಈಗ  ಗಾಜುತಯಾರಿಕೆ ಬೃಹತ್  ಉದ್ಯಮ.  ಅಮೇರಿಕಾದಲ್ಲಿ ಕಾರ್ನಿಂಗ್‌ ಗ್ಲಾಸ ಫ್ಯಾಕ್ಟರಿಯ ಮ್ಯೂಜಿಯಂ ಗೆ ಭೇಟಿನೀಡಿದಾಗ ಹೊಸ ಲೋಕಕ್ಕೆ ಕಾಲಿಟ್ಟಂತೆ  ಆಗಿತ್ತು. ಅಲ್ಲಿನ ಆಧುನಿಕ ಯಂತ್ರೋಪಕರಣಗಳು, ಕೆಲಸಗಾರರು  ಮೇಣದಲ್ಲಿ ಮಾಡುವಂತೆ ಕಲಾಕೃತಿಗಳನ್ನು ರೂಪಿಸುವ ವಿಧಾನ ಬೆರಗು ಮೂಡಿಸಿತ್ತು.ಅವರಲ್ಲಿನ ಗಾಜಿನವಸ್ತುಗಳ ವರ್ಣವೈಖರಿ , ವಿನ್ಯಾ ಸ ಬೆರಗು ಮೂಡಿವಂತಿದ್ದವು.
ಆದರೆ ರಾಘವನ್‌ ಅವರದು ಸಿದ್ಧ ಗಾಜು ಕರಗಿಸಿ ಸೂಕ್ಷ್ಮ ಕಲಾ ಕೃತಿ ಮಾಡುವುದು ಹವ್ಯಾಸ. ಜೊತೆಗೆ ವೃತ್ತಿಯೂ ಹೌದು
.ನಮ್ಮ ಆಸಕ್ತಿ ಯಿಂದ ಅವನಿಗೆ ಸಂತೋಷವಾಯಿತು. ಹತ್ತಿರದಲ್ಲೆ ಇದ್ದ ಕಲಾಕೃತಿಗಳತ್ತ ನಮ್ಮ ಗಮನ ಸೆಳೆದ. ಗಣೇಶ, ಮುರುಳಿಕೃಷ್ಣ , ಅಂಕೃತ ದೋಣಿ, ಸಾರೋಟು ಬಹಳ ಕಲಾತ್ಮಕವಾಗಿದ್ದವು. ಪ್ರತಿಯೊಂದನ್ನು ತಯಾರಿಸಲು ಒಂದು ಗಂಟೆಯಿಂದ ಒಂದು ದಿನದ ವರೆಗೆ ಬೇಕಾಗಬಹುದೆಂದು ತಿಳಿಸಿದ. ಅವುಗಳನ್ನು  ೫೦೦ ರಿಂದ ೧೦೦೦ ರೂವರೆಗೆ ಬೆಲೆ ಕೊಟ್ಟು ಕೊಳ್ಳುವ ಕಲಾಪ್ರಿಯರು ಇರುವುದಾಗಿತಿಳಿಸಿದನು

ಆಸಕ್ತರಿಗೆ ಈ ಕಲೆಯನ್ನು ಕಲಿಸಲು ಅತಿಥಿ ಉಪನ್ಯಾಸಕನಾಗಿ ಕಲಾಶಾಲೆ ಗಳಿಗೆ ಹೋಗುವುದಾಗಿಯೂ ಹೇಳಿದ.ದಕ್ಷಿಣ ಚಿತ್ರಸಂಸ್ಥೆಯಲ್ಲಿ ಅದು ಪ್ರಾರಂಭವಾದಾಗಿನಿಂದಲೂ , ಅಂದರೆ ಹದಿನೇಳು ವರ್ಷಗಳಿಂದಲೂ ಕಲಾಪ್ರದರ್ಶನ ಮಾಡುತ್ತಿರುವುದಾಗಿ ತಿಳಿಸಿದನು. ಗ್ಲಾಸ್‌ ಬ್ಲೋಯಿಂಗ್‌ ತರಬೇತಿನೀಡುವ ಸಂಸ್ಥೆಗಳು ಭಾರತದಲ್ಲಿ ಇವೆ. ಚೆನ್ನೈನಲ್ಲೂ ಇದೆ. ಆದರೆ ಅವು ಪ್ರಧಾನವಾಗಿ ಪ್ರಯೋಗಶಾಲಾ ಉಪಕರಣ, ವಾಹನಗಳು , ಗೃಹೋಪಯೋಗಿ ಗಾಜಿನಫಲಕಗಳ ತಯಾರಿಕೆಗೆ ಒತ್ತುಕೊಡುತ್ತವೆ..ಅಲ್ಲದೆ ಅವುಗಳ ಪ್ರಮಾಣವೂ ಬೃಹತ್ತಾಗಿರುವುದು. ಆದರೆ  ಹೀಗೆ ಕರಕುಶಲ ಕಲೆಯಾಗಿಸಿಕೊಂಡವರು ಕಡಿಮೆ. ಇದು ಒಂದು ಅಸಂಪ್ರದಾಯಿಕ ಕಲೆ, ಹಾಗಾಗಿ ಎಲ್ಲಿಯೂ ಸಾಂಸ್ಥಿಕ ತರಬೇತಿಯ ವ್ಯವಸ್ಥೆ ಇಲ್ಲ ಬಹುತೇಕ ಹವ್ಯಾಸಿ ಕಲಾವಿದರೇ ಕಲಾ ಕೃತಿನಿರ್ಮಾಣದಲ್ಲಿ ತೊಡಗಿರುವುರು. ಅವರ ಸಂಖ್ಯೆಯೂ ವಿರಳ.  ಎಂದನು ಮತ್ತು ತನ್ನ ಇಬ್ಬರು ಮಕ್ಕಳಲ್ಲಿ ಯಾರು ಆಸಕ್ತಿವಹಿಸಿಲ್ಲ ಎಂದು ವಿಷಾದಿಸಿದ.ಇದರಿಂದ ವೈಭೋಗದ ಜೀವನ ನಡಸಲು. ಸಾಧ್ಯ ವಾಗದಿದ್ದರೂ ಹೊಟ್ಟೆ ಬಟ್ಟೆಗೆ ತೊಂದರೆ ಇಲ್ಲ ಮೇಲಾಗಿ ಕಲಾವಿದನೆಂಬ ಗೌರವ  ಇದೆ ಎಂದು ತೃಪ್ತಿ ವ್ಯಕ್ತ ಪಡಿಸಿದನು. ನಿಜ ಬಹುತೇಕ ಕಲಾವಿದರ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ.ಹಾಗೂ ಹೀಗೂ ಕುಟಕು ಜೀವ ಹಿಡಿದು ಜೀವನ ಸಾಗಿಸುತ್ತಿರುವರು..ಅಲ್ಲದೆ ದಕ್ಷಿಣ ಸಂಸ್ಥೆಯವು ಉಚಿತವಾಗಿ ಎಲ್ಲ ವ್ಯವಸ್ಥೆ ಮಾಡಿ ಗೌರವ ಕಲಾವಿದನೆಂದು ಪರಿಗಣಿಸಿರುವುದು ಸಂತೋಷದ ವಿಷಯ ಎನಿಸಿತು. 

ಈಗ ಬೃಹತ್‌ಪ್ರಮಾಣದಲ್ಲಿ ಕಾರ್ಖಾನೆಗಳಲ್ಲಿ ಗಾಜುಕರಗಿಸುವ ಕುಲುಮೆ, ಲೇತ್‌ ಮತ್ತು ಇತರೆ ಉಪಕರಣಗಳನ್ನು ಬಳಸುವರು..ಕೆಲವು ಕಲಾವಿದರು ತಮ್ಮದೆ ಆದ ಸ್ಟುಡಿಯೋ ಕೂಡಾ ಇಟ್ಟುಕೊಂಡಿರುವರು. ಆದರೆ ಸಣ್ಣ ಪ್ರಮಾಣದಲ್ಲಿ ಆಮ್ಲಜನಕ ಮತ್ತು ಅಸಿಟೆಲಿನ್‌ಜ್ವಾಲೆಬಳಸಿ ಈಗಾಲೆ ತಯಾರಾಗಿರುವ ಬೊರೊಸಿಲಿಕೇಟ್‌ಗಾಜನ್ನು ಬಳಸಿ ಕಲಾಕೃತಿ ತಯಾರಿಸುವವರು ವಿರಳ. ಅವರು  ಸ್ಟೈನ್‌ಲೆಸ್‌ ಸ್ಟೀಲ್‌ ಅಥವ ಕಬ್ಬಿಣದ ತೆಳು ಸಲಾಕೆ ಬಳಸುವುರು. ಅದನ್ನು ಪುಂಟಿ ಎನ್ನವರು ಕರಗಿದ ಗಾಜಿಗೆ ಗಾಳಿಊದಿ ಆಕಾರ ಕೊಡುವರು.ಅವಕ್ಕೆ ಬಣ್ಣ ಹಾಕುವುದು ವಿವಿಧ ರೂಪ ಕೊಡುವದು ಸಂಕೀರ್ಣ ಕಾರ್ಯ.. ಈ ಕೆಲಸಕ್ಕೆ ಬ್ಲೊ ಪೈಪ್, ಬೇಕು. ಅದರ ತುದಿಯನ್ನು ಕರಗಿದ ಗಾಜಿನಲ್ಲಿ ಅದ್ದಿ ನಂತರ ಗಾಳಿಊದುವರು ರೂಪು ಕೊಡುವರು.ವಿವಿಧ ಆಕಾರಕೊಡಲು ಟ್ವೀಜರ್‌ ಬಳಸುವರು.

ಗಾಜಿಗೆ ಪುರಾತನ ಇತಿಹಾಸವಿದೆ. ವಿದೇಶಿಯರ ದಾಳಿಯ ಕಾಲದಲಿ ಭಾರತಕ್ಕೆ ಬಂದಿತು ಪರ್ಶಿಯನ್‌ ಗ್ಲಾಸ್‌, ವೆನಿಟಿಯನ್ ಗ್ಲಾಸ್‌ ಬಹಳ ಪ್ರಖ್ಯಾತ. ಆಗ ವಿದ್ಯುತ್‌ ಇರಲಿಲ್ಲ. ಅರಮನೆಗಳಲ್ಲಿ ಗಾಜಿನ ಚಾಂಡಿಲಿಯರ್‌ಗಳಲ್ಳ್ಲಿ ದೀಪ  ಹಚ್ಚುತಿದ್ದರು.. ಈಗಲೂ ಅಲಂಕಾರಿಕವಾಗಿ ಅವು ಬಳಕೆಯಲ್ಲಿವೆ.,ಈಗಂತೂ ಫೈಬರ್ ಗ್ಲಾಸ್‌ ಸರ್ವ ವ್ಯಾಪಿ. ಅಂತರಿಕ್ಷಯಾನಕ್ಕೂ ಅನಿವಾರ್ಯವಾಗಿದೆ.
ವಾಣಿಜ್ಯ ಉದ್ದೇಶದ ತರಬೇತಿ ಸಂಸ್ಥೆಗಳು ಭಾರತದಲ್ಲಿ ಇವೆ. ಚೆನ್ನೈನಲ್ಲಿಯೇ ಗಿಂಡಿಯಲ್ಲಿ ಒಂದು ಇದೆ. ಕಲಾತರಬೇತಿಯು ಮಾತ್ರ ವೈಯುಕ್ತಿಕಸಾಧನೆಯ ಫಲ. ಕಲಾಕೃತಿಯ ಪ್ರಾತ್ಯಕ್ಷಿಕೆ ಕೊಡುತ್ತಿರುವ  ಇಲ್ಲಿನ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಯಿತು
  







Wednesday, April 3, 2013

ಚೀನಾಲಿಪಿ

appaaji@gmail.com








ಚೀನಾದ ಲಿಪಿಪದ್ದತಿಯು ವರ್ಣಮಾಲೆಯ ಆಧುನಿಕ ಯುಗದಲ್ಲಿ ಒಂದು ಅನನ್ಯ  ಸಂಗತಿ..ಕೆಲವೆ ಡಜನ್‌ ಅಕ್ಷರಗಳ ಬದಲಾಗಿ ಅವರು ಸಂಕೀರ್ಣವಾದ ಸಾವಿರಾರು ಸಂಕೇತಗಳನ್ನು ಅಥವ ಅಕ್ಷರಗಳನ್ನು  ಅಭಿವೃದ್ಧಿ ಪಡಿಸಿದರು. ಅವು ಧ್ವನಿ ಮತ್ತು ಪದಗಳೆರಡನ್ನೂ ಪ್ರತಿನಿಧಿಸುತ್ತವೆ .ಚೀನಾ ಲಿಪಿಯೊಂದಿಗೆ ಸಂಬಂಧ ಹೊಂದಿದ ಜಪಾನೀಸ್‌ ಮತ್ತು ಕೋರಿಯನ್‌ ಲಿಪಿಗಳು ಕೆಲವು ಸಾಮಾನ್ಯ ಸಂಗತಿಗಳನ್ನು ಹೊಂದಿದ್ದರೂ ಅವು ಸ್ವತಂತ್ರವಾದ  ಲಿಪಿಗಳಾಗಿ  ಕಾರ್ಯನಿರ್ವಿಸುತ್ತವೆ.  ಇದು ಆಧುನಿಕ ಪ್ರಪಂಚದಲ್ಲಿನ ಏಕಮಾತ್ರ ಜೀವಂತ ಚಿತ್ರಲಿಪಿಯಾಗಿದೆ. ಅಲ್ಲದೆ ನೂರಾರು ಕೋಟಿ ಜನರ ಬರವಣಿಗೆಯ ಮೂ ಲಸಾಧನವಾಗಿಯು ಬಳಕೆಯಲ್ಲಿದೆ.
ಚೀನದ ಬರಹವು ಮೊದಲು ಸುಮಾರು  3,500 ಪುರಾತವಾದುದು.ಕೆಲವರ ಅಭಿಪ್ರಾಯದಂತೆ ಅದು ಇನ್ನೂ  ಪ್ರಚೀನವಾದುದು ಎನ್ನುವರು.ಅದು ಏನೇ ಇರಲಿ ಜಗತ್ತಿನಲ್ಲಿ ಸತತ ಬಳಕೆಯಲ್ಲಿರುವ ಅತ್ಯಂತ ಪುರಾತನ ಲಿಪಿಯಾಗಿದೆ..
ಮೂಲ
ಒಂದು ಅಭಿಪ್ರಾಯದಂತೆ ಚೀನಾದಲ್ಲಿ ಭಾಷೆಯಲ್ಲಿ  ಸಂಕೇತ ಪದ್ದತಿಯ ವಿಕಾಸವು ಮೊದಲು ಆಯಿತು. ಅದು ನೂತನ ಶಿಲಾಯುಗದಲ್ಲೇ ಆಯಿತು, ಅಂದರೆ ಮೂರನೆ ಸಹಸ್ರಮಾನದ ಮಧ್ಯ ಭಾಗದಲ್ಲಿ ಆಗಿದೆ.  ಆಗಿನಿಂದ ಅನೇಕ ಸಂಕೇತಗಳು ಮತ್ತು ಚಿತ್ರಲಿಪಿಗಳನ್ನು   ಮಡಕೆ  ಮತ್ತು ಜೇಡ್‌ಗಳ ಮೇಲೆ ಬರೆಯಲಾರಂಭಿಸಿದರು.ಅವು ಕುಟುಂಬದ ಸಂಕೇತಗಳಾಗಿದ್ದ  ಮಾಲಕತ್ವ  ಅಥವ ಪ್ರದೇಶವನ್ನುನಿರ್ಧರಿಸುತಿದ್ದವು.

ಮೊದಲು ಲಿಪಿ ಇರಲಿಲ್ಲ. ಆದರೆ ಲಾಂಛನಗಳು ಇದ್ದವು.ಅಲ್ಲಿಂದಲೇ ಲಿಪಿ ಪ್ರಾರಂಭವಾಯಿತು.
ಇವು ಪೂರ್ಣವಾಗಿ ಚೀನೀ ಚಿತ್ರಲಿಪಿಗಳು ಆಗಿರಲಿಲ್ಲ  ಆದರೆ ಹೋಲಿಕೆಯಂತೂ ಇದೆ.ಅದರಲ್ಲೂ ಒಂದು ಹಕ್ಕಿ ಮತ್ತು  ಸೂರ್ಯನಿಗೆ ಇರುವ ಸಂಕೇತವು ಅವರ ಲಾಂಛನವಾಗಿತ್ತು. ಅದು ಷಾಂಗ್‌ ರಾಜವಂಶದವರ ಲಾಂಛನವಾಗಿರುವುದು ದೊರೆತಿರುವ ಕಂಚಿನ ಲಾಂಛನದಿಂದ ಸುವ್ಯಕ್ತ..ಈಗ ಅಂದು ಕೊಂಡಿರುವುದು. ಅವುಗಳು ಲಿಪಿಯ ವಸ್ತುಗಳನ್ನು ಪ್ರತಿನಿಧಿಸದಿದ್ದರೂ ಪದಗಳ  ಸಂಕೇತವಾಗಿದ್ದವು.ಅಂದರೆ ಭಾಷಾ ಮೌಲ್ಯ ಪಡೆದವು.ಅವನ್ನು  ಕನಿಷ್ಠ ಚೀನಾ ಲಿಪಿಗಳ ಪೂರ್ವಜರೆಂದು ಹೇಳಬಹುದಾಗಿದೆ.

ಚೀನಾದ ಲಿಪಿ ಪದ್ದತಿಯು ಈಗ ತಿಳಿದಿರುವ ಪ್ರಪಂಚದ ಭಾಷೆಗಳಬರಹಗಳಲ್ಲಿ ಪುರಾತನವಾದದ್ದುಚೀನದ ಅ ತಿಪುರಾತನ ಬರಹಗಳ ಕಾಲ   4,000 ವರ್ಷ ಹಿಂದಿನದು.ಚೀನಾದ ಬರಹವು ಚಿತ್ರ ಲಿಪಿಯಾಗಿದೆ. ( ಪೂರ್ಣ ಪದವನ್ನು ಪ್ರತಿನಿಧಿಸುವ ಅನೇಕ ಸಂಕೇತಗಳ ಸರಣಿಯಾಗಿದೆ),

ಚೈನಾದ ಬರಹವು ಅನೇಕ ವಿಧದಲ್ಲಿ ಅನನ್ಯವಾಗಿದೆ. ಅದು ಬೃಹತ್‌ ದೇಶ. ಅದರಲ್ಲಿ ಮುಖ್ಯವಾದ ಎರಡು ಭಾಷೆಗಳಿವೆ: ಮ್ಯಾಂಡ್ರಿನ್‌ ಚಿನೀಸ್‌ ಮತ್ತು ಕ್ಯಾಂಟೊನಿಸ್‌ ಚೀನೀಸ್‌. ಆ ಎರಡು ಭಾಷೆಗಳಿಂದ ಅನೇಕ ಆಡುಭಾಷೆಗಳು ಹುಟ್ಟಿವೆ ಚೀನಾದ ಲಿಪಿಯು ಎಲ್ಲ ಭಾಷೆಗಳನ್ನು ಒಗ್ಗೂಡಿಸುವ ಸಾಧನವಾಗಿದೆ.ಉದಾ ಹರಣೆಗೆ “ “ಒಂದು” ಎಂಬ ಪದದ ಉಚ್ಛಾರಣೆಯು ಮ್ಯಾಂಡ್ರಿನ್‌ ಮತ್ತು ಕ್ಯಂಟೋನಿಗಳಲ್ಲಿ ಬೇರೆ ಇರಬಹುದು ಆದರೆ ಬರಹದಲ್ಲಿ ಒಂದೆ ರೀತಿಯಲ್ಲಿರುತ್ತವೆ. ಚೀನಾದ ಆಡು ಭಾಷೆಯುಬಹಳಷ್ಟು ಬದಲಾಗಿದೆ. ಆದರೆ ಬರಹದ ಭಾಷೆಯು ಮೊದಲಿನಂತೆಯೇ ಇದೆ.

ಚೀನಾದ ಬರಹದ ಪದ್ದತಿಯು   ಬದಲಾಗಿರುವುದು ಬಹಳ ಕಡಿಮೆ ಆದರೂ ಅದರ ಬದಲಾವಣೆಯ ನಾಲ್ಕು ವಿಭಿನ್ನ  ಹಂತಗಳನ್ನು ಗುರುತಿಸಬಹುದು. ಆ ನಾಲ್ಕು ಹಂತಗಳು ಹೀಗಿವೆ.:
·        ಜಿಯಾ-ಗು-ವೆನ್‌ (  ಭವಿಷ್ಯ ಮೂಳೆ  oracle bone). ಇವು ಅತ್ಯಂತಪ್ರಾಚೀನ ಚೀನಾದ ಸಂಕೇತಗಳು.ಇವುಗಳ ಕಾಲ  (  ಕ್ರಿ. ಪೂ.1500 – 1000 .).ಈ ಸಂಕೇತಗಳನ್ನು ಆಮೆಯ ಚಿಪ್ಪಿನ ಮೇಲೆ ಮತ್ತು ಪ್ರಾಣಿಗಳ ಮೂಳೆಗಳ ಮೇಲೆ ಕೆತ್ತಲಾಗುತಿತ್ತು.  ಈ ಮೂಳೆಗಳನ್ನು ಚಾರಿತ್ರಿಕ ದಾಖಲೆಗಳಾಗಿ  ಷಾಂಗ್‌ವಂಶದವರ ಆಡಳಿತಾವಧಿಯಲ್ಲಿ ನಿರ್ವಹಿಸಲಾಗುತಿತ್ತು.
ಒರಾಕಲ್‌ಮೂಳೆಗಳು.
ಚೀನಾದ ಪ್ರಾಚೀನ ಲಿಪಿಯು ಮೊದಲುಬಹಳ  ಅಸ್ಪಷ್ಟವಾಗಿದ್ದರೂ,ಷಾಂಗ್‌ವಂಶದ  ಕಾಲದಲ್ಲಿ  ಸಂಕೀರ್ಣತೆಯ ಲಕ್ಷಣ ಕಾಣಿಸಿಕೊಂಡಿದ್ದವು. ಚೀನದ ಅತಿ ಪ್ರಾಚೀನ ಬರಹ ಪದ್ದತಿಯನ್ನು ಒರಕಲ್‌ ಬೋನ್‌ ಎನ್ನುವರು 
ಚೀನಾದ ಪ್ರಪ್ರಥಮ ಬರಹಗಳು ಕಂಡು ಬರುವುದು ಆಮೆಯ ಚಿಪ್ಪು ಮತ್ತು ದನದ ತೊಡೆಮೂಳೆಗಳ ಮೇಲಿನ ಬರಹಗಳಲ್ಲಿ ಅದುಕ್ರಿ. ಪೂ. 1500 ರಿಂದ 1000 ಅವಧಿಯಲ್ಲಿ ಪ್ರಾರಂಭವಾಯಿತು.
ಮೊದಲೆ ಮೂಳೆಯ ಮೇಲೆ ಅನೇಕ  ರಂದ್ರ ಕೊರೆದು ಸಿದ್ಧ ಪಡಿಸಿದ ಮೂಳೆಯನ್ನು ಜೋತಿಷಿಗೆ ನೀಡುವರು. ಅವನು ಅದನ್ನು ಕೈನಲ್ಲಿ ಹಿಡಿದು ಸಕರಾತ್ಮ  ಮತ್ತು ನಕಾರಾತ್ಮಕ ಹೇಳಿಕೆಗಳನ್ನು ಗಟ್ಟಿಯಾಗಿ  ಪಠಿಸುವನು. ನಂತರ ಕೆಂಪಗೆ ಕಾಯಿಸಿದ ಲೋಹದ ಡಬ್ಬಣದಂತಹ ವಸ್ತುವನ್ನು ರಂದ್ರದಲ್ಲಿ ತೂರಿಸುವನು.ಅದರ ಶಾಖಕ್ಕೆಮೂಳೆಯು ಸೀಳು ಬಿಡುವುದು . ನಂತರ ಮೂಳೆಗಳನ್ನು ಲಿಪಿಕಾರನಿಗೆ ಕೊಡುವರು.ಅವನು ದಿನಾಂಕ, ಭವಿಷ್ಯಕಾರ, ಅವನ ಹೇಳಿಕೆ ಮತ್ತು ಮೂಳೆಯಲ್ಲಿನ ಸೀಳುಗಳ ವಿವರ ದಾಖಲು ಮಾಡುವನು.
ನಂತರ ಭವಿಷ್ಯಕಾರ ಜೋತಿಷಿಯು ಮೂಳೆಯನ್ನು ಪರಿಶೀಲಿಸಿ ಅದರ ಮೇಲೆ ಯಾವ ಭಾಗದಲ್ಲಿ ಸೀಳು ಬಿಟ್ಟಿದೆ,  ಹೇಗೆ ಬಿಟ್ಟಿದೆ ಎಂಬುದನ್ನು ಪರಿಶೀಲಿಸಿ ಸಕಾರಾತ್ಮಕ ಅಥವ ನಕಾರಾತ್ಮಕ ಹೇಳಿಕೆಗಳಲ್ಲಿ ಯಾವುದು ಘಟಿಸುವುದು ಎಂದು ಭವಿಷ್ಯ ನುಡಿಯುವನು
 ಬಹುಶಃ ಇದು ನಮ್ಮಲ್ಲಿನ ಕವಡೆ ಶಾಸ್ತ್ರದ ಇನ್ನೊಂದು ರೂಪ ಎನ್ನಬಹುದು. ಆದರೆ ಇದರ ಪ್ರಾಮುಖ್ಯತೆ ಇರುವುದು, ಇದೇ ಹಲವು ಸಹಸ್ರಮಾನಗಳ ಹಿಂದೆ ಚೀನಾದ ಚಿತ್ರಲಿಪಿಯ  ಮೂಲವಾಗಿರುವುದಕ್ಕೆ.
ಇಂಥಹ ಸಹಸ್ರಾರು ಮೂಳೆಗಳು ಪ್ರಾಚ್ಯ ಸಂಶೋಧಕರಿಗೆ ಲಭ್ಯವಾಗಿರುವುದರಿಂದ ಚೀನಾ ಲಿಪಿಯ ಮೂಲ ಅರಿಯುವುದು ಸುಲಭವಾಗಿದೆ.
ಈವರೆಗೆ ಸುಮಾರು 400,000 ಬರಹಗಳಿರುವ ಮೂಳೆಗಳ ತುಣುಕುಗಳು ದೊರಕಿವೆ. ಅವುಗಳಿಂದ ಹಲವು ಸಾವಿರ ಭವಿಷ್ಯ ಮೂಳೆಗಳ  ಪುನರ್‌ರಚನೆ ಮಾಡಲಾಗಿದೆ. ಅದರಲ್ಲಿ ಸಾವಿರಾರು ಪಠ್ಯಗಳನ್ನು ಅಧ್ಯಯನ ಮಾಡಲಾಗಿದೆ. ಈ ಪಠ್ಯಗಳಲ್ಲಿ  30,000 ಸ್ಪಷ್ಟ ಲಿಪಿಗಳನ್ನು ಗುರುತಿಸಲಾಗಿದೆ.ಅವು ಸುಮಾರು 4,000 ಪ್ರತ್ಯೇಕ ಸಂಕೇತಗಳ ವಿಭಿನ್ನ ರೂಪಗಳಾಗಿವೆ. .ಅವುಗಳಲ್ಲಿ ವಿದ್ವಾಂಸರು ಅನಿಸಿಕೆಯಂತೆ  1,500 ರಿಂದ  2,000 ಸಂಕೇತಗಳನ್ನು ಅರ್ಥೈಸ ಬಹುದಾಗಿದೆ.. ಒರಾಕಲ್‌ ಮೂಳೆಗಳಲ್ಲಿ ಸರಿ ಸುಮಾರು 5,000 ದಷ್ಟು ಪ್ರತ್ತ್ಯಾಯೇ ಸಂಕೇತಗಳಿವೆ.( ಅವುಗಳ ವಿಭಿನ್ನ ರೂಪಗಳನ್ನು ಬಿಟ್ಟು ) ಮತ್ತು ಅದರ ಎರಡರಷ್ಟು  ಸಂಕೇತಗಳನ್ನು ಆಗ ದಿನನಿತ್ಯದ ಜೀವನದಲ್ಲಿ ಪುರಾತನ ಚೀನಿಯರು ಬಳಕೆ ಮಾಡಿರುವರು.


ಒರಾಕಲ್‌      ಮೂಳೆಗಳ ಮೇಲಿರುವ ಲಿಪಿಗಳ ರಚನೆ ಮತ್ತು ಸ್ವರೂಪವು ಆಧುನಿಕ ಚೀನಾ ಲಿಪಿಯಗಳನ್ನು ಬಹು ಮಟ್ಟಿಗೆ ಹೋಲುತ್ತ.ವೆ    ಅವುಗಳಲ್ಲಿ ಕೆಲವು ಒಂದಂತ ಹೆಚ್ಚು ಸಂಕೇತಗಳ ಸಂಯೋಜನೆಯಿಂದ ಮೂಡಿದಂತೆ. ತೋರುತ್ತವೆ ಅವುಗಳಲ್ಲಿ ಅಧಿಕ ಪ್ರಮಾಣದ ಅಮೂರ್ತತೆ ಇದೆ. ತೋರುತ್ತವೆ. ಇದರಿಂದ ಗೊತ್ತಾಗುವುದು ಏನೆಂದರೆ ಲಿಪಿಗಳು ಷಾಂ ಗ್‌ರಾಜವಂಶದವರ ಅವಧಿಗೂ ಬಹಳ ಮೊದಲೇ ಅವಿಷ್ಕಾರಗೊಂಡಿದ್ದವು ಎನ್ನಬಹುದು.



·        ಡ-ಝುವಾನ್‌ Da zhuan ( ಬೃಹತ್‌ ಮುದ್ರೆ Greater Seal). ಈ ಬರಹಗಳು ಕಂಚಿನ ಪಾತ್ರೆಗಳ ಮೇಲೆ ಬರೆಯಲಾಗುತಿತ್ತು. ಅವುಗಳ ಕಾಲ ಸರಿ ಸುಮಾರು ಕ್ರಿ. ಪೂ.. 1100 – 700
    ಕ್ಸಿಯೊ ಝೊವಾನ್ Xiao zhuan ( ಕಿರು ಮುದ್ರೆಗಳು Lesser Seal). ಇವುಗಳು  ಒಪ್ಪವಾದ , ಸುಗಮ ಹರಿವು ಇರುವ ಲಿಪಿ.ಸಾಧಾರಣವಾಗಿ ಚೀನಾದ ಲಿಪಿಗಳಲ್ಲಿ ಕಂಡು ಬರುವ ಲಕ್ಷಣ.. ಇದು ಚೀನಾದ ಲಿಪಿ ಶಾಸ್ತ್ರದ ಪೂರ್ವಜ ಎನ್ನಬಹುದು. ಕಿರು ಬರಹಗಳು ಮೂಲತಃ ಬೊಂಬಿನ ಸುರುಳಿಗಳ ಮೇಲೆ ಕಂಡು ಬಂದಿವೆ.ಈ ಸುಂದರ ಬರಹವು ಈಗಲೂ ರೇಷ್ಮೆ ಬಟ್ಟೆಯಮೇಲೆ ಮತ್ತು ಚಿತ್ರ ಪಟಗಳಲ್ಲಿ ಕಂಡು ಬರುವುದು.
ಲಿಸ್‌ ಷು  Lis shu ( ಕರಣಿಕರ ಲಿಪಿ). ಇದು ಆಧುನಿಕ ಚೀನಾದ ಲಿಪಿ ಪದ್ದತಿ .ಈ ಸಂಕೇತಗಳ ಸಮೂಹವು ಜನಪ್ರಿಯವಾಗಲು  ಕಾರಣ ಅವುಗಳ ಸುಗಮ ಹರಿವು , ವೇಗ ಮತ್ತು.ದಕ್ಷ ಬರವಣಿಗೆ. ಅಲ್ಲದೆ ಈ ಪದ್ದತಿಯ ಬರವಣಿಗೆಯಲ್ಲಿ ಲೇಖನಿ, ಬ್ರಷ್‌ ಮತ್ತು ಕಾಗದದ ಬಳಕೆ ಸುಲಭ.ಆದ್ದರಿಂದಲೇ ಇದನ್ನು ಆಧುನಿಕ ಚೀನಾದ (ಕ್ಯಾಲಿಗ್ರಫಿಯಲ್ಲಿ) ಬರವಣಿಗೆ ಪದ್ದತಿಯಲ್ಲಿ  ಅಳವಡಿಸಲಾಗಿದೆ.
ಚೀನಾದ ಸಂಕೇತಗಳನ್ನು ಕ್ಯಾಲಿಗ್ರಫಿ ಬಳಸಿ ಸುಂದರವಾಗಿ ಬರೆಯಲಾಗುವುದು. ಸಾಂಪ್ರದಾಯಿಕವಾಗಿ ಚೀನಾದ ಅಕ್ಷರಗಳನ್ನು ಕಂಬ ಸಾಲಿನಲ್ಲಿ ಬರೆಯಲಾಗುವುದು. ಅವುಗಳನ್ನು ಮೇಲಿನಿಂದ ಕೆಳಕ್ಕೆ.ಮತ್ತು ಬಲದಿಂದ ಎಡಕ್ಕೆ ಓದಲಾಗುವುದು.ಕಾರಣ ಈ ಪದ್ದತಿಯಲ್ಲಿ ಒಂದು ಅಕ್ಷರವು ಸಂಕೇತವು ಒಂದು ಪದವನ್ನು ಅಥವ ಪದ ಗುಚ್ಛವನ್ನು ಪ್ರತಿನಿಧಿಸುತ್ತದೆ.ವಾಸ್ತವವಾಗಿಸಾವಿರಾರು ಅಕ್ಷರಗಳಿವೆ,( ಹಂಝಿ,). ಅವು ೫೦,೦೦೦ ಹೆಚ್ಚು ಸಂಕೇತಗಳಿವೆ . ಅದರಿಂದ ಚೀನಾದಲ್ಲಿ ಅತಿ ಹೆಚ್ಚು ಅನಕ್ಷರತೆ ಇದೆ. ಈ ಸಮಸ್ಯೆಯ ನಿವಾರಣೆಗೆ  ಚೀನಾ ಗಣತಂತ್ರ ಭಾಷೆಯನ್ನು ಸರಳ ಗೊಳಿಸಲು ಕಾರ್ಯಕ್ರಮ ಹಾಕಿಕೊಂಡಿದೆ.ಸಾಮಾನ್ಯವಾಗಿ ಬಳಕೆಯಲ್ಲಿರುವ ಸಂಕೇತಗಳ ಸಮೂಹವನ್ನು ಗುರುತಿಸಿದೆ. ಸದ್ಯದ ಬರವಣಿಗೆಯು ಸುಮಾರು 6,000 ಸಂಕೇತಗಳಿಗೆ ಇಳಿಸಿದೆ. ಇದರಲ್ಲಿ ಅಂಕಿತ ನಾಮಗಳು ಮಾತ್ರ ವಿರಳವಾಗಿವೆ..

ಸದ್ಯದ ಚೀನಾದ ಬರಹವು ಮುಖ್ಯವಾಗಿ ಅಕ್ಷರ ಬರೆಯಲುಎರಡು ಪದ್ದತಿ ಬಳಸುತ್ತದೆ. ವೆನ್ಯನ್‌ವಿಧಾನವು ಪುರಾತನ ಸಂಕೇತ ಬಳಸುತ್ತದೆ. ಬಾಯಹುವಾ ವಿಧಾನವು ಪ್ರಾದೇಶಿಕ ಸಂಕೇತಗಳನ್ನು ಒಳಗೊಂಡಿದೆ. ಈ ಎರಡೂ ಪದ್ದತಿಗಳು ಒಗ್ಗೂಡಿ ಪುರಾತನ ಬರವಣಿಗೆ ಮತ್ತು ಆಧುನಿಕ ಬರವಣಿಗೆಯ ನಡುವಿನ ಅಂತರವನ್ನು ಸೇರಿಸುವ ಸೇತುವೆಯಾಗಿದೆ.

ಚೀನಾದ ಬರಹದ ಪದ್ದತಿಯು ಏಷಿಯಾದ ಅನೇಕ ಭಾಷೆಗಳ ಬರಹ ಪದ್ದತಿಗಳ ಮೂಲವಾಗಿದೆ. ಬರಹದ ಭಾಷೆಯನ್ನು ಆಧುನೀಕರಣ ಗೊಳಿಸದರೂ ಅದು ಸುಂದರವಾಗಿ ಮತ್ತು ನಿಗೂಢವಾಗಿಯೇ ತೋರುವುದು.
ಚೀನಾದ ಪ್ರಾಚೀನ ಲಿಪಿಯು ಮೊದಲುಬಹಳ  ಅಸ್ಪಷ್ಟವಾಗಿದ್ದರೂ,ಷಾಂಗ್‌ವಂಶದಕಾಲದಲ್ಲಿ  ಸಂಕೀರ್ಣತೆಯ ಲಕ್ಷಣ ಕಾಣಿಸಿಕೊಂಡಿದ್ದವು.ಚೀನದ ಅತಿ ಪ್ರಾಚೀನ ಬರಹ ಪದ್ದತಿಯನ್ನು ಒರಕಲ್‌ಬೋನ್‌ ಎನ್ನುವರು 
ಪುರಾತನ ಚೀನಿ ಬರಹದ ಲಕ್ಷಣವೆಂದರೆ ರಿಬಸ್‌ ಬರಹ ( ಬಹುಅರ್ಥ) ಒಂದೆ ಸಂಕೇತವು ಒಂದಕ್ಕಿಂತ ಹೆಚ್ಚು ಪದವನ್ನು ಸೂಚಿಸುವುದು .ಉದಾಹರಣೆಗಇಂಗ್ಲಿಷ್‌ನಲ್ಲಿ  "4" ಅನ್ನು ಎರ ಡುಪದಗಳನ್ನು ಪ್ರತಿನಿಧಿಸಲು ಬಳಸುವರು "four"  ಮ ತ್ತು"for".  ಅದೇ ರೀತಿ  2 ಅನ್ನು “ಎರಡು”  ಮತ್ತು “ಗೆ:  ( Way 2 wealth)  ಎಂದೂ ಬಳಕೆ ಮಾಡುವರು. ಚೀನಾ ಭಾಷೆಯು ಏಕಾಕ್ಷರ ಪದಗಳನ್ನು ಹೊಂದಿರುವುದರಿಂದ ರಿಬಸ್‌ ಬಹಳವಾಗಿ ಬಳಕೆಯಲ್ಲಿದೆ.ಒಂದೆ  ಸಂಕೇತದಿಂದ ಅನೇಕ ಪದ ಬರೆಯುವರು. 


ಮೇಲಿನ ಉದಾಹರಣೆಯಲ್ಲಿ ಪ್ರತಿ ಸಂಕೇತವೂ ಎರಡು ಪದಗಳನ್ನು ಪ್ರತಿನಿಧಿಸುವುದು.ಮೊದಲನೆಯದು ಮೂಲದ ಪ್ರತಿನಿಧಿ. ಎರಡನೆಯದು ಅದೇ ಉಚ್ಚಾರವಿರುವ ಅಥವ ಹೋಲಿಕೆ ಇರುವ ಆದರೆ ಬೇರೆ ಅರ್ಥ ಕೊಡುವ ಪದ.ಆನೆಯ ಚಿತ್ರಲಿಪಿಯ ಸಂಕೇತ ಮೂಲ ಅರ್ಥ ಆನೆ ಮತ್ತು ಇನ್ನೊಂದು ಅರ್ಥಪ್ರತಿಬಿಂಬ  ಉಚ್ಚಾರ ಎರಡಕ್ಕೂ ಒಂದೆ ಝೆಯನ್‌ (*ziaŋʔ),  .ಅದರಂತೆ ಕಡಾಯಿ(*teŋ  ಟೆನ್‌) )ಮೂಲ ಸಂಕೇತ ಮತ್ತು. ದೇವರಿಗೆ (*treŋ-  ಟೆನ್‌ )ಮೊತ್ತೊಂದ ಅರ್ಥ. ಕಾರಣ ಅವುಗಳ ಉಚ್ಚಾರ  (*teŋ) ರಗಳು ಬಹುತೇಕ ಹೋಲುತ್ತವೆ.ಆದ್ದರಿಂದ ಒಂದೆ ಸಂಕೇತವಿದೆ..ಇದನ್ನೆ ರಿಬಸ್‌ ಎನ್ನುವರು
ಇನ್ನೊಂದು ಸಂಕೀರ್ಣತೆ ಇದೆ. ಅದು ಪಾಲಿಸೆಮಿ("polysemy")ವಿಭಿನ್ನ ಧ್ವನಿಗಳಿರುವ ಪದಗಳಿಗೆ ಒಂದೇ ಸಂಕೇತ ಕಾರಣ ಅವುಗಳ ಅರ್ಥದಲ್ಲಿ ಪರಸ್ಪರ ಸಂಬಂಧ

ಕಣ್ಣು ಪದವು "eye" (*muk) ನೋಡು ಪದದೊಂದಿಗೆ "to see" (*kens),ಸಂಕೇತವನ್ನು ಹಂಚಿಕೊಂಡಿದೆ. ಕಾರಣ ಎರಡರ ಕಾರ್ಯ ಒಂದೇ.ಬಾಯಿ ಪದವು "name" ಮನುಷ್ಯ ಪದದೊಂದಿಗೆ ಕೇತವನ್ನು ಹಂಚಿಕೊಂಡಿದೆ. . ಇಲ್ಲಿ ಅಷ್ಟು ಸಂಬಂಧಕಾಣದು(*meŋ), .




ಇದರಿಂದ ಒಂದೆ ಪದಕ್ಕೆ ಅನೇಕ ಅರ್ಥವಿದ್ದರೆ ಬರಹವನ್ನು ಅರ್ಥ ಮಾಡುವಾಗ ತಪ್ಪುಗಳು ಆಗಬಹುದು.ಈ ದೋಷವನ್ನು ನಿವಾರಿಸಲು ಮೂಲ ಸಂಕೇತಕ್ಕೆ   ಹೆಚ್ವವರಿ   ಸಂಕೇತ ಸೇರಿಸುವುರು ಅವನ್ನು ಸೆಮೆಂಟಿಕ್‌ ನಿರ್ಣಾಯಕ ಮತ್ತು ಧ್ವನಿ ನಿರ್ಣಾಯಕ ಎನ್ನುವರು. ಅವುಗಳನ್ನು ಸೇರಿಸಿ ಸಂಯುಕ್ತ ಪದನಿರ್ಮಾಣ ಮಾಡುವರು. ಒಂದೆ ಉಚ್ಚಾರವಿದ್ದರೂ ತುಸು ಬದಲಾವಣೆಯಿಂದ ವಿಭಿನ್ನ ಪದವಾಗುವು.ದು ಕೆಳಗಿನ ಉದಾಹರಣೆ ಗಮನಿಸಿ .
 “ ಸೀಳು” ಪದ ಸಂಕೇತಕ್ಕೆ ನಿರ್ಣಾಯಕ ಸೇರಿಸಿದರೆ ಅದು ದೇವರಿಗೆ ಎಂದು ಆಗುವುದು. ಅಂದರೆ ಮೂಲ  ಸಂಕೇತವು ನಿರ್ಣಾಯಕ ಸೇರಿ ಹೊಸ ಪದ ಸಂಕೇತವಾಗುವುದು  ".ನಡೆ  " ಎಂಬ ಪದದ ಸಂಕೇತವು ಮುಂದೆ ಹೋಗು ಎಂದಾಗುವುದು. ಸೂರ್ಯ ಎಂಬ ಪದದ ಸಂಕೇತವು ನಿರ್ಣಾಯಕ ಸೇರಿದಾ "ಹೊಳಪು" ಆಗುವುದ. ಹೀಗೆ ಪ್ರತಿ ಪದಕ್ಕೂ ಪ್ರತ್ಯೇಕ ಸಂಕೇತ ಸಿಗುವುದು.

ಆಧುನಿಕ  ಚೀನಿಭಾಷೆಯಲ್ಲಿ ಸೆಮೆಂಟಿಕ್‌ ನಿರ್ಣಾಯಕಗಳನ್ನು “ರಾಡಿಕಲ್ಸ್ ಎನ್ನುವರು.ಅದರ ಅರ್ಥ  ಅವು ಮೂಲಪದಗಳು.( ಲ್ಯಾಟಿನ್‌ನಲ್ಲಿ radix,ಎಂದರೆ ಮೂಲ  ಅಥವ ಬೇರು"), ಆದರೆ ವಿಪರ್ಯಾಸವೆಂದರೆ ನಿರ್ಣಾಣಾಯಕಗಳು ಮೂಲ ಸಂಕೇತಗಳಲ್ಲ ಬರಿ ಹಳೆಯದಕ್ಕೆ ಅಲಂಕಾರಿಕ ಅಥವ ಅನುಷಂಗಿಕಗಳು ಮಾತ್ರ. ಕಾಲಕ್ರಮೇಣ ರಾಡಿಕಲ್ಸ್‌ಗಳನ್ನು ವ್ಯವಸ್ಥಿತ ಗೊಳಿಸಲಾಗಿದೆ.ಚೀನಾದ ನಿಘಂಟುಗಳು ರಡಿಕಲ್ಸ್‌ಗಳನ್ನು ಅನುಗುಣವಾಗಿ ವರ್ಗೀ ಕರಿಸಲಾಗಿದೆ, ಸಂಕೇತಕ್ಕೆಸೇರಿಸುವ ಗೆರೆಗಳ ಸಂಖ್ಯೆಯ ಪ್ರಕಾರ ವಿಂಗಡಿಸಿದೆ. 











ಒಂದು ಅರ್ಥ ಆದರೆ ವಿಭಿನ್ನ ಉಚ್ಚಾರವಿರುವ  (ಸಮಾನರ್ಥ) ಪದಗಳಿಗೆ ಸೇರಿಸುವ ಗುರುತುಗಳಿಗೆ ಧ್ವನಿಪೂರಕಗಳು ಎನ್ನುವರು. ಅವುಗಳಿಂದ ಉಚ್ಚಾರಣೆಗೆ ಸಾಕಷ್ಟು ಮಾರ್ಗದರ್ಶನ ಸಿಗುವುದು. ಬೇರೆ ಬೇರೆ ಅರ್ಥಕ್ಕೆ ಬೇರೆ ಬೇರೆ ಸಂಕೇತಗಳೇ ರಚನೆಯಾದಂತಾಗುವುದು . .

  ಉದಾಹರಣೆ - ಇಲ್ಲಿಬೇಳೆಯುವ ಸಸಿಯು ಇನ್ನೊಂದು ಸಂಕೇತದೊಂದಿಗೆ ಸೇರಿ ಸುಗ್ಗಿ ಆಗುವುದು.ಅದೇ ರೀತಿ ಹೆಸರು ಸಂಕೇತದೊಂದಿಗೆ ಫೊನಟಿಕ್‌ ಪೂರಕ ಸೇರಿ  ಮನುಷ್ಯ ಎಂದಾಗುವುದು.