Tuesday, July 29, 2014

ನಿಸರ್ಗದ ನಡುವೆ ಜನ್ಮದಿನಾಚರಣೆ


ಕಡಲ ತಡಿಯಲ್ಲಿ ಹ್ಯಾರಿಸ್‌ ಹುಡುಕಾಟ

 ರಜಾ  ಎಂದರೆ ಮಜಾ ಎಂಬುದು ಬೇಸಿಗೆಯಲ್ಲಿ ಅಮೇರಿಕಾದ ಬಹುತೇಕರ ಅನಿಸಿಕೆ. ಈ ವಾರಾಂತ್ಯದಲ್ಲಿ  ಮೊನ್ನೆ ತಾನೇ ಸೆಸ್ಮೆ ಸ್ಟ್ರೀಟ್ ಎಂಬ ವಾಟರ್‌ಪಾರ್ಕಗೆ ಹೋಗಿದ್ದೆವು  ಮತ್ತೆ ಶನಿವಾರ ಏಕೆ ಮನೆಯಲ್ಲಿ ಕಾಲ ಕಳೆಯ ಬೇಕೆಂದು ಕಡಲತಡಿಗೆ ಸಂಜೆ ಭೇಟಿ ನೀಡಿದೆವು. ವಿವೇಕ ಪ್ರಸಾದ್‌ಕುಟುಂಬವೂ ನಮ್ಮ ಜೊತೆ  ಸೇರಿತ್ತು.ನಾಲ್ಕು ಗಂಟೆಗೆ ಬಿಡಬೇಕೆಂದಿದ್ದೆವು.. ಸಮಯದ ವಿಷಯದಲ್ಲಿ ಮಾತ್ರ ಅಪ್ಪಟ ಭಾರತೀಯರಾಎದ ನಾವು. ಯಥಾರೀತಿ ಒಂದು ಗಂಟೆ ತಡವಾಗಿ ಹೊರಟೆವು. ಕಡಲ ತೀರ ಸೇರಿದಾಗ ಆಗಲೇ ಐದೂವರೆ ಗಂಟೆನಮ್ಮ ಮನೆಯಿಂದ ಮೂರು ನಾಲ್ಕು ಬೀಚುಗಳಿಗೆ
 ಗಂಟೆಯೊಳಗೆ ಕಾರಲ್ಲಿ ಹೋಗಬಹದು . ಅಲ್ಲಿ ಇಲ್ಲಿ ಎಂದು ಚರ್ಚಿಸಿ ಕೊನೆಗೆ ಬ್ರಾಡ್ಲೆ ಬೀಚ್‌ಗೆ ಹೋದೆವು. ಇದು ಒಂದು ಚಿಕ್ಕಗ್ರಾ. ಜನ ಸಂಖ್ಯೆ ನಾಲ್ಕು ಸಾವಿರದ ಅಸು ಪಾಸು. ರೈಲು ಬಸ್ಸಿನ ಸಂಪರ್ಕವೂ ಇದೆ. ಅಮೇರಿಕಾದ ಜನವಸತಿಯ ಒಂದು ಮಾದರಿ ಗ್ರಾಮ. ಪ್ರವಾಸೋದ್ಯಮವೇ ಇಲ್ಲಿನ ಜನರ ಬದುಕಿನ ಜೀವಾಳ. ತೀರದ ಉದ್ದಕ್ಕೂ ಅಗಲವಾದ ರಸ್ತೆ. ಅಲ್ಲಿಯೇ ಕಾರು ನಿಲ್ಲಿಸಲು ನಿಗದಿಯಾದ ಸ್ಥಳ. ಇನ್ನೊಂದು ಬದಿಯಲ್ಲಿ ಸಾಲು ಸಾಲುಮನೆಗಳು. ವಾಣಿಜ್ಯ ಕಟ್ಟಡಗಳು. ನೋಡಲು ಮನೆಯಂತೆ ಆಗಿದ್ದರೂ ಅವು ಬೇಸಿಗೆ ಕಾಲದ ವಸತಿ ಗೃಹಗಳು.ಹೋಟೆಲ್ ಮತ್ತು ಇತರೆ ವ್ಯಾಪಾರ ಕೇಂದ್ರಗಳು.    ಡಲ ತೀರ ಶುಲ್ಕ ಸಹಿತವಾದುದು. ಅಂದರೆ ಹಣ  ನೀಡಿಯೇ ಒಳ ಹೋಗಬೇಕು. ಆದರೆ ಬೆಳಗ್ಗೆ ೯ ಗಂಟೆಯ ಒಳಗೆ ಮತ್ತು ಸಂಜೆ ಆರುಗಂಟೆಯ ನಂತರ ಮುಕ್ತ ಪ್ರವೇಶ. ಒಂದು ರೀತಿಯಲ್ಲಿ ನಾವು ತೀರ ತಡವಾಗಿ ಹೋದುದು ಅನುಕೂಲವೇ ಆಯಿತು. ಉಚಿತ ಪ್ರವೇಶ ಮತ್ತು ಕಾರ್‌ ಪಾರ್ಕಿಂಗ್ ದೊರೆಯಿತು

.ಮೂರುವರ್ಷದ ಹಿಂದೆ ಹೋದಾಗ್ಯೂ ಈಗ ಬಹಳ ವ್ಯತ್ಯಾಸ ಕಂಡು ಬಂದಿತು. ಆಗ ಪಾದಚಾರಿಗಳ ಪಥ ಕಟ್ಟಿಗೆಯದಾಗಿತ್ತು ಮತ್ತು ಬೀಚಿನಲ್ಲಿರುವ ಮನೆಗಳು ಹಳೆಯವು. ಈಗ ನೋಡಿದರೆ ಎಲ್ಲ ಲಕಲಕ ಹೊಳೆಯುತ್ತಿವೆ. ನಿರಂಚಿನಿಂದ ಸುಮಾರು ೧೦೦ ಮೀಟರ್‌ ನಂತರ ಎತ್ತರದ ಕಾಂಕ್ರೀಟ್‌ ಕಟ್ಟೆ ಅದರ ಮೇಲೆ ದಾರಿ, ಬೆಂಚುಗಳು, ವಿಶ್ರಾಂತಿಗೃಹ  ಇತ್ಯಾದಿ. ವಿಕಲಚೇತನರೂ ಗಾಲಿಕುರ್ಚಿಯಲ್ಲಿ ಬರಲು ಸೌಲಭ್ಯ.ಇದಿಷ್ಟು ಆದದ್ದು ಸ್ಯಾಂಡಿ ಚಂಡ ಮಾರುತ ಬಂದ ಮೇಲೆ. ಆಗ ಬಹುತೇಕ ನಾಶವಾಗಿದ ಎಲ್ಲವನ್ನು ಪುನರ್‌ನಿರ್ಮಿಸಲಾಗಿತ್ತು. ಅದಕ್ಕೆ ಸಕ್ಕಾರವು ವಿಶೇಷ ಅನುದಾನ ನೀಡಿತ್ತು. ಇಲ್ಲಿನ ಎಲ್ಲ ಮನೆಗಳಿಗೂ ಚಂಡ ಮಾರುತದಿಂದ ರಕ್ಷಣೆ ಪಡೆಯಲು ಎತ್ತರ ಹೆಚ್ಚಿಸಲು ತಲಾ ೩೦ಸಾವಿರ ಡಾಲರ್‌ ಅನುದಾನ ದೊರಕಿತ್ತು 


ಅದರ ಜೊತೆ ತಾವೂ ಹಣ ಹಾಕಿ ಬೇಸಿಗೆ ಬರುವಷ್ಟರಲ್ಲಿ ಎಲ್ಲ ದುರಸ್ತಿ ಮಾಡಿದ್ದರು ನಾಲ್ಕುಸಾವಿರದ ಜನ ಸಂಖ್ಯೆ ಈ ಗ್ರಾಮದಲ್ಲಿ ಬೇಸಿಗೆಯಲ್ಲಿ ಸುಮಾರು ೪೦,೦೦೦ಜನ ಪ್ರವಾಸಿಗಳುಬರುತ್ತಾರೆ. ಅವರಿಗೆ ಸಕಲ ಸೌಲಭ್ಯ ದೊರಕಿದರೆ ಮಾತ್ರ ಮರು ಭೇಟಿ. ಅದಕ್ಕೆ ಮೊದಲಿಗಿಂತ ಚೆನ್ನಾದ  ವ್ಯವಸ್ಥೆ ಮಾಡಿದ್ದರು. ಬೀಚಿನತ್ತ ಕಣ್ಣ ಹಾಯಿಸಿದರೆ ಬಹಳ ಖುಷಿಯಾಯಿತು ಎಲ್ಲೆಲ್ಲೂ ಕಸ ರಹಿತ ಮರಳು . ನೂರು ಮೀಟರ್‌ಗೆ ಒಂದರಂತೆ ಎತ್ತರದ ಲೈಫ್ ಗಾರ್ಡ ಗೋಪುರಗಳು, ಅದರ ಮೇಲೆ ಕಣ್ಗಾವಲಿನ ಪಡೆ.ಅಲ್ಲಲ್ಲಿ ಸಮುದ್ರದೊಳಗೆ ಒಳಚಾಚಿರುವ ಕಲ್ಲುಬಂಡೆಗಳಿಂದ ನಿರ್ಮಿಸಿದ ಜಟ್ಟಿಗಳು ಅದರ ಮೇಲೆ ಫಿಷಿಂಗ್ ‌ರಾಡ್ ಹಿಡಿದು ಮೀನು ಹಿಡಿಯುವಲ್ಲಿ ಮಗ್ನರಾದ ಹವ್ಯಾಸಿಗಳು. ಅವರ ಏಕಾಗ್ರತೆ ಧ್ಯಾನಮಾಡುವವರನ್ನು ಹೋಲುತಿತ್ತು. ಅರ್ಧ ಗಂಟೆಯಾದರೂ ಒಂದು ಮೀನೂ ಗಾಳಕಚ್ಚಿರಲಿಲ್ಲ. ಆದರೂ ಅವರು ತಮ್ಮ ಕಾಯಕ ಮುಂದುವರಿಸಿದ್ದರು. ಇದು ಅವರ ಹವ್ಯಾಸ , ಹಣ ಗಳಿಸುವ ಮಾರ್ಗವಲ್ಲ ಅಂದುಕೊಂಡೆ. ಸಾಗರದ ಅಲೆಗಳ ಮೇಲೆ ತೇಲು ಹಲಗೆ ಹಿಡಿದುಈಜುವ, ಬೋಟಿನಲ್ಲಿ ಹುಟ್ಟುಹಾಕುತ್ತಾ ಬಾತುಕೋಳಿಯಂತೆ ಕಾಣುವ ಹವ್ಯಾಸಿಗಳು . ತುದಿಯಲ್ಲಿ ನಿರಾಟವಾಡುವ ಹುಡುಗರು,ಖುಷಿ ಕೊಡುತಿದ್ದರು. ನೀರಲ್ಲಿ ಬಹುದೂರದ ವರೆಗೆ ತೇಲುಬುರುಡೆಗಳಿಂದ ಕೂಡಿದ ಬಲವಾದ ಪ್ಲಾಸ್ಟಿಕ್‌ ಹಗ್ಗಗಳು  ಬೀಚಿಗೆ ಬರುವವರಿಗೆ ಎಲ್ಲ ಸುರಕ್ಷತೆಯ ಆಶ್ವಾಸನೆ ನೀಡುವಂತಿದ್ದವು
.
ಹೊರಗಡೆಯ ತಾಪಮಾನ ೮೬ ಡಿಗ್ರಿ ಎಫ್ . ಬಿಸಿಲೋ ಬಿಸಿಲು. ಸರಿ ಮಕ್ಕಳ ಮರಿಗಳ ಸಮುದ್ರಸ್ನಾನಕ್ಕೆಂದು ಸ್ವಿಮ್ಮಿಂಗ್‌ ಉಡುಪು ಸಮೇತ ಹೊರಟೆವು. ಇಲ್ಲಿನದು ವಿಶೇಷವೆಂದರೆ ಯಾರೂ ಈಜುಡುಗೆ ತೊಡದೆ ನೀರಿಗೆ ಇಳಿಯುವ ಹಾಗಿಲ್ಲ. .ಕ್ಕಳಿಗಂತೂ  ಡಯಫರ್ ಕಡ್ಡಾಯ. ನಮ್ಮಲ್ಲಿಯಂತೆ ಹುಟ್ಟುಡುಗೆಯಲ್ಲಿ ನೀರಿಗೆ ಇಳಿಯುವ ಹಾಗಿಲ್ಲ. ಚಿಕ್ಕಮಗುವಾದರೂ ಡಯಫರ್ ಹಾಕಿರಲೇ ಬೇಕು.. ಯುವಜನಾಂಗ ಕನಿಷ್ಠ ಉಡುಪುಧರಿಸಿದರೂ ಆಕ್ಷೇಪವಿಲ್ಲ . ಕಾರಣ ಸ್ಪಷ್ಟ. ನೀರು  ಮಕ್ಕಳಿಂದ  ಮಲಿನವಾಗದಿರಲು ಕಾಳಜಿ. ಅಷ್ಟೇ ಅಲ್ಲ ತೀರದಲ್ಲಿಯೇ ನಿಯಮಾವಳಿಗಳ ಪಟ್ಟಿ. ಚರ್ಮರೋಗವಿರವವರು,ಹೊಟ್ಟೆ ನೋವು, ಅತಿಸಾರ ರೋಗಿಗಳು ನೀರಿಗಿಳಿಯಬಾರದು.  ಹೊಟ್ಟೆ ನೋವಿಗೂ ಸಮುದ್ರಸ್ನಾನಕ್ಕೂ ಏನು ಸಂಬಂಧ ಎನಿಸಿದರು ಯೋಚಿಸಿದಾಗ ಫಕ್ಕನೆ ಹೊಳೆಯಿತು. ಮೆರಿನಾ  ಬೀಚಿನಲ್ಲಿ ಬೆಳಗ್ಗೆ ಸಾಲು ಸಾಲುಜನ ಮಲವಿಸರ್ಜಸಿ ತೊಳೆದುಕೊಳ್ಳುವ ದೃಶ್ಯ. ಇಲ್ಲಿ ಅದಂತೂ ಸಾಧ್ಯವೇಇಲ್ಲ ಕಾರಣ ತೀರದುದ್ದಕ್ಕೂ ಭದ್ರವಾದ ಬೇಲಿ. ಜೊತೆಗೆ ಕಡಲ್ಗಾವಲು ಪಡೆ. ಪ್ರವೇಶ ದ್ವಾರದಲ್ಲಿಯೇ ರೆಸ್ಟ್ ರೂಮ್‌ಗಳು. ಅಲ್ಲಿಯೇ ಎಲ್ಲ ಮುಗಿಸಿ ನೀರಿಗಿಳಿಯ ಬೇಕು.

ಹೊರಗಿನ ಉಷ್ಣತೆ ೨೭ಡಿಗ್ರಿ ಸೆ. ಇದ್ದರೂ ನೀರಿನ ಉಷ್ಣತೆ ೧೫ ಡಿಗ್ರಿ ಮಾತ್ರ. ನಮಗಂತೂ ಕೊರೆವ ಚಳಿ ಎನಿಸುತಿತ್ತು. ಅದರಲ್ಲೂ ಖುಷಿಖುಷಿಯಾಗಿ ಈಜುಡುಗೆ ತೊಟ್ಟು ನೀರಿಗೆ ಇಳಿಯದಿದ್ದರೂ ತೀರದಲ್ಲಿ ನಲಿದಾಡುವವರೇ ಬಹಳ.ಜಿಂಕೆಯ ಮರಿಯಿಂದ ಹಿಡಿದು ಗುಜ್ಜಾನೆ, ನೀರಾನೆಗಳು ಸಹ ಚುರುಕಾಗಿ ಓಡಾಡುತ್ತಾ ಮಾತನಾಡುತ್ತಾ  ನೋಡುಗರ  ಕಣ್ಣು ತುಂಬಿಸಿದವು. ಮಕ್ಕಳು ಮರಳಾಟದಲ್ಲಿ ಮಗ್ನರು.ಅದಕ್ಕಾಗಿ ವಿಶೇಷ ಆಟಿಕೆಗಳು.ಅಲ್ಲ್ಲಿ ದೊಡ್ಡ ಬಣ್ಣದ ಕೊಡೆ ಏರಿಸಿ ಅದರ ಕೆಳಗೆ ಬಿಡಾರ ಹೂಡಿ ಹರಟುತ್ತಿರುವ ಸಂಸಾರಂದಿಗರು.ತಮ್ಮದೇ ರಾಜ್ಯದಲ್ಲಿ ವಿಹರಿಸುತಿದ್ದರು.ಇಲ್ಲಿನ ವಿಶೇಷವೇನೆಂದರೆ ಊಟ ತಿಂಡಿ ಯಾವುದನ್ನೂ ತೀರಕ್ಕೆ ಕೊಂಡೊಯ್ಯುವ ಹಾಗಿಲ್ಲ ನಿಯಮ ಮೀರಿದರೆ ತಕ್ಷಣ ಉಚ್ಚಾಟನೆ ಖಚಿತ. ಅದಕ್ಕೆ ಕಾಣುತ್ತದೆ ಬೀಚ್‌ ಅಷ್ಟು ಶುಚಿಯಾಗಿತ್ತು ಅಲ್ಲಿ ನೀರ ಸ್ನಾನಕ್ಕಿಂತ ಸೂರ್ಯ ಸ್ನಾನಕ್ಕೆ ಬಂದವರೇ ಹೆಚ್ಚು..ಮರಳ ಮೇಲೆ ಹಾಸು ಹಾಕಿ ಮುಖ ಮುಚ್ಚಿ ಮಲಗಿದವರು ಯೋಗನಿದ್ರಾ ನಿರತರಂತೆ ಕಂಡುಬಂದರು .
ಅಲ್ಲಿ ಇನ್ನೊಂದು ವಿಚಿತ್ರಕಂಡೆವು . ಸುಮಾರು ಹದಿನಾಲ್ಕುವರ್ಷ ವಯಸ್ಸಿನ ಹುಡುಗನೊಬ್ಬನು ಕೈನಲ್ಲಿ ಉದ್ದನೆಯ ಹಿಡಿಇರುವ ಉಪಕರಣ ಹಿಡಿದು ಮರಳಿನ ಮೇಲೆ ಅದರ ತುದಿಯನ್ನು ಆಡಿಸುತ್ತಾ ಹೊರಟಿದ್ದ. ಅದು ಎಲೆಕ್ಟ್ರಾನಿಕ್ ಮೆಟಲ್‌ಡಿಟೆಕ್ಟರ್. ಲೋಹದ ಸುಳಿವು ಕಂಡರೆ ತಲೆಗೆ ಹಾಕಿಕೊಂಡಿದ್ದ ಇಯರ್ ಫೋನ್‌ ನಲ್ಲಿ ಧ್ವನಿ ಮೂಡುತಿತ್ತು ಆಗ ಮರಳನ್ನು ಮೊಗೆದು ಜರಡಿಯ ತರದ ಉಪಕರಣದಲ್ಲಿ ಜಾಲಿಸುತಿದ್ದ ದೊರೆತ ನಾಣ್ಯಡೈಮ, ಕ್ವಾರ್ಟರ್, ಮತ್ತು ಡಾಲರ್‌ ನಾಣ್ಯವಾಗಿರುತಿತ್ತು. ಅವುಗಳನ್ನು ಪಸ್Fಲ್ಲಿ ಹಾಕಿಕೊಳ್ಳುತಿದ್ದ. .ಕುತೂಹಲದಿಂದ ಅವನನ್ನು ಮಾತನಾಡಿಸಿದೆವು. 

ಅವನ ಹೆಸರು ಹ್ಯಾರಿಸ್. ಹೈಸ್ಕೂಲ್ ವಿದ್ಯಾರ್ಥಿ. ಬೇಸಿಗೆಯಲ್ಲಿ ಸಂಜೆ ಎರಡು ಗಂಟೆ ಈ ಶೋಧ ಕಾರ್ಯ ಮಾಡುವನು. ಮರಳಿನಲ್ಲಿ ಪ್ರವಾಸಿಗರು ಉದುರಿಸಿಕೊಂಡ ನಾಣ್ಯಗಳು ದೊರೆಯುತಿದ್ದವು ದಿನಕ್ಕೆ ೪-೫ ಡಾಲರ್‌ ಸಂಗ್ರಹವಾಗುತಿದ್ದವು. ಅದು ಅಷ್ಟು ದೊಡ್ಡ ಮೊತ್ತವಲ್ಲ. ಆದರೆ ಹಲವು ಸಲ ಚಿಕ್ಕ ಪುಟ್ಟ ಆಭರಣಗಳೂ ದೊರೆತಿವೆ. ಕಳೆದ ಬೇಸಿಗೆಯಲ್ಲಿ ವಜ್ರಖಚಿತ ಉಂಗುರ ಒಂದು ಸಿಕ್ಕಿತಂತೆ. ಅದರಿಂದ ಸುಮಾರು ಸಾವಿರ ಡಾರ್ ಸಂಪಾದನೆಯಾಗಿತ್ತು..ಅಕಸ್ಮಾತ್ ಯಾರಾದರೂ ಕಳೆದುಕೊಂಡುದನ್ನು ಗಮನಿಸಿ ಹುಡುಕ ಬಯಸಿದರೆ ಗಂಟೆಗೆ ಐವತ್ತು ಡಾಲರ್‌ ಬಾಡಿಗೆಗೆ ಉಪಕರಣವನ್ನುಬಳಸಿ ಅವರೆದುರೇ ಶೋಧನೆಯ ಕೆಲಸ ಮಾಡುತಿದ್ದ. ಅವರಿಗೆ ಕಳೆದ ವಾಸ್ತು ದೊರೆಯಲಿ ಬಿಡಲಿ ಹಣ ಸಂಪಾದನೆ ಆಗುತಿತ್ತು. ಗಮನಸದೆ ಇದ್ದರಂತೂ ಸರೇ ಸರಿ, ತನ್ನ ಕಾಯಕ ಮಾಡುತಿದ್ದ..ಕಲಿಕೆ ಮತ್ತು ಗಳಿಕೆಯ ಕಾರ್ಯ ಒಟ್ಟಿಗೆ ಆಗುತಿತ್ತು. ಆದರೆ ಇದು ಅವನ ಸ್ವಯಂ ಉದ್ಯೋಗ.ಆ ಹುಡುಗನ ದುಡಿಮೆಯ ಹೊಸ ಹಾದಿ ಮೆಚ್ಚುಗೆ ಮೂಡಿಸಿತು.   ಹ್ಯಾರಿಸ್ ಹುಡುಕುವುದೇನು ಎಂಬುದು ತಿಳಿದಂತಾಯಿತು.



 ಬ್ರಾಡ್‌ ವೇ ಗ್ರಾಮದ ಉಪವನದಲ್ಲಿ ಒಂದು ಹಿರಿಯ ನಾಗರೀಕರ ಸಂಗೀತ ಕಾರ್ಯಕ್ರಮ ಇದ್ದಿತು. ಅಲ್ಲಿನ ಹಿರಿಯರನ್ನು ನೋಡಿ ನನಗೆ ಐವತ್ತು ವರ್ಷದ ಹಿಂದಿನ ನಮ್ಮೂರು ಜ್ಞಾಕಕ್ಕೆ ಬಂದಿತು. ಆಗ ಅಲ್ಲಿನ ಜನ ಹೊರಸು, ಗುಡಾರ ಕಂಬಳಿ ತಂದು ಬಯಲಾಟ ನೋಡುತಿದ್ದೆವು ಅದೇರೀತಿ ಇಲ್ಲಿ ಜನ ತಮ್ಮ ತಮ್ಮ ಕುರ್ಚಿ ತಾವೇ ತಂದುಕೊಂಡು ಕುಳಿತುಕೊಂಡು ಸಂಗೀತ ಕೇಳುತಿದ್ದರು. ಅವರೆಲ್ಲ ಹೋದ ಮೇಲೆ ಮೊಮ್ಮಗು ಅದ್ವೈತನ ಜನ್ಮದಿನದ ಕಾರ್ಯವನ್ನು  ಉಪವನದಲ್ಲಿಯೇ ನಡೆಸಿದೆವು ಅಲ್ಲಿಯೇ ಕೇಕ್ ತಂದು ಕತ್ತರಿಸಲಾಯಿತು ಜತೆಯಲ್ಲಿದ್ದ ಮಕ್ಕಳೆಲ್ಲ ಖುಷಿ ಪಟ್ಟರು.ಅಮೇರಿಕಾ ಲೆಕ್ಕದಲ್ಲಿ ಅದು ಅತ್ಯಂತ ಸರಳವಾಗಿತ್ತು ಆದರೆ  ರಾತ್ರಿಯಲ್ಲಿ ನಿಸರ್ಗದ ಮದ್ಯದಲ್ಲಿ  ಹುಟ್ಟು ಹಬ್ಬದ ಆಚರಣೆ ಮಾಡಿದ್ದು
 ಬಹುಅರ್ಥಪೂರ್ಣವಾಗಿತ್ತು. 
  
 





No comments:

Post a Comment