Thursday, July 24, 2014

ಶತಕವೀರ ಸಾಹಿತಿ ಎಸ್‌.ವಿ. ಶ್ರೀನಿವಾಸರಾವ್‌


ಸದ್ದಿಲದೆ ಸಾಹಿತ್ಯ ಕೃತಿ ಶತಕ ಬಾರಿಸಿದ  ಎಸ್‌.ವಿ.ಶ್ರೀನಿವಾಸ್ರಾವ್

ಮಾತಿಗಿಂತ ಕೃತಿಗೆ ಆದ್ಯತೆ ಕೊಡುವ ವಿರಳ ವ್ಯಕ್ತಿಗಳಲ್ಲಿ  ಪ್ರಮುಖರು ಎಸ್‌.ವಿ. ಶ್ರೀನಿವಾಸರಾವ್‌.ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ನೂರಕ್ಕೂ ಹೆಚ್ಚು ಕೃತಿರಚನೆ ಮಾಡಿ,ಸಮಾಜದ ಬೇರು ಮಟ್ಟದಿಂದ  ನಾಡಿನ ಮೇರು ಸಂಘಟನೆ ಸಾಹಿತ್ಯ ಪರಿಷತ್ತಿನವರೆಗೆ ವಿಭಿನ್ನ ಸಾಹಿತ್ಯ ಸಂಘಟನೆಗಳಲ್ಲಿ  ಆರು ದಶಕಗಳಿಗೂ ದುಡಿದರೂ ದಣಿವರಿಯದ ಜೀವ ಅವರದು.
 ಇವರ ತುಮುಕೂರು ಜಿಲ್ಲೆಯ ಚಿಕ್ಕಸಾರಂಗಿಯಲ್ಲಿ ೨೪-೧೨ -೩೧ ರಲ್ಲಿ ಜನಿಸಿದರು. ತಂದೆ  ಗುಂಡಪ್ಪ   ಮತ್ತು ತಾಯಿ ಪದ್ಮಾವತಮ್ಮ . ಆದರೆ ಬೆಳೆದಿದ್ದು ಸೋದರಮಾವ  ವೆಂಕಟರಾಮಯ್ಯ ಮತ್ತು ಪುಟ್ಟಚ್ಚಮ್ಮಅವರ ದತ್ತು ಪುತ್ರನಾಗಿ..ಎರಡು ಕುಟುಂಬಗಳ ಪ್ರೀತಿಯ ಧಾರೆಯಲ್ಲಿ ಬಾಲ್ಯ ಕಳೆಯಿತು. ಮನೆಯಲ್ಲಿನ ಸುಸಂಸ್ಕೃತ ವಾತಾವರಣ ಅವರಲ್ಲಿ ಸಾಹಿತ್ಯಾಭ್ಯಾಸಕ್ಕೆ  ಅನುವು ನೀಡಿತು.ಆದರ ಫಲವಾಗಿ ತಮ್ಮ ಹದಿ ವಯಸ್ಸಿನಲ್ಲಿಯೇ ಆರ್ಯನ್ಹೈಸ್ಕೂಲಿನಲ್ಲಿರುವಾಗಲೇ ಕಥಾಸ್ಪರ್ಧೆಯಲ್ಲಿ ಬಹುಮಾನಿತರಾದರು. ಅಂದು  ಸಾಹಿತ್ಯ ರಚನೆಯಲ್ಲಿ ತೊಡಗಿದ ಅವರು ೮೩ರ ವಯಸ್ಸಿನಲ್ಲೂ ಲೇಖನ ವ್ಯವಸಾಯ ನಡೆಸಿರುವರು.ಸಾಮಾನ್ಯವಾಗಿ ಸಾಹಿತ್ಯ ಲೋಕದಲ್ಲಿ ವಿಹರಿಸುವವರು ಕಲ್ಪನಾವಿಲಾಸಿಗಳು,ಸಮಾಜದ ಕಷ್ಠನಿಷ್ಠುರಗಳ ಜೀವನದದಲ್ಲಿ ಜರ್ಜರಿತರಾಗುವರು ಎಂಬ ಮಾತಿದೆ. ಅದಕ್ಕೆ ಅಪವಾದ ಇವರು. ವಿಜ್ಞಾನದಲ್ಲಿ ಪದವಿ ಪಡೆದು ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಇಪ್ಪತ್ತೆರಡನೆ ವಯಸ್ಸಿನಲ್ಲಿಯೇ ಉದ್ಯೋಗಕ್ಕೆ ಸೇರಿದರು..ಗಳಿಕೆಯ ಜೊತೆ ಕಲಿಕೆಯೂ ಮುಂದುವರಿಸಿ ಎ.ಎಮ್‌..ಇ ಪದವಿ ಮುಗಿಸಿ ವೃತ್ತಿಜೀವನದಲ್ಲಿ ಮೇಲೇರಿ ಸೈಂಟಿಫಿಕ್ಆಫೀಸರ್ಹುದ್ದೆಗೇರಿ ಮೂರೂವರೆ ದಶಕದ ಸೇವೆಯನಂತರ ನಿವೃತ್ತರಾದರು.
ಇವರ ಬಾಳ ಸಂಗಾತಿ ಶ್ರೀಮತಿ ಅನುಸೂಯ..’ ವಿವಾಹಂ ವಿದ್ಯನಾಶನಂ’  ಎಂಬ ಲೋಕೋಕ್ತಿಗೆ ಅಪವಾದ. ಅವರು ಪತಿ ಯಜ್ಞಾನಾರ್ಜನೆಗೆ , ಸಾಹಿತ್ಯ ಕೃಷಿಗೆ ತುಂಬು ಹೃದಯದ ಒತ್ತಾಸೆ ನೀಡಿದ ಫಲ ಕನ್ನಡ ಎಂ. ಎ ಮತ್ತು  ರಷ್ಯನ್ಭಾಷೆಯ ಡಿಪ್ಲೊಮಾ. ವೃತ್ತಿ ನಿಮಿತ್ತ ಮೊದಲಲ್ಲಿ ಹೊರನಾಡಲ್ಲಿ ವಾಸ. ಮುಂಬಯಿ ಇವರ ಕಾರ್ಯಕ್ಷೇತ್ರ. ಅಲ್ಲಿ ಸಾಹಿತಿಗಳ ಸಹವಾಸ ಲಭ್ಯ. ಸಂಘಟನಾ ಕಾರ್ಯದಲ್ಲೂ ಸಕ್ರಿಯ. ನಂತರ ಬೆಂಗಳೂರಲ್ಲಿ ನೆಲಸಿರುವರು.
ವೃತ್ತಿಯಿಂದ ವಿಜ್ಞಾನಿಯಾದ ಅವರ  ಲೇಖನಿಯ ವೇಗ ಜೆಟ್ವಿಮಾನದಂತೆ. ಕಾದಂಬರಿ,ಅವರ ಹೃದಯಕ್ಕೆ ಹತ್ತಿರ. ಅದರ  ಫಲ ಹನ್ನೆರಡು ಸಾಮಾಜಿಕ , ಎರಡು ವೈಜ್ಞಾನಿಕ ಮತ್ತು ಒಂದು ಚಾರಿತ್ರಿಕ ಕಾದಂಬರಿಗಳು ಓದುಗರಿಗೆ ದಕ್ಕಿದವು. ಬಹುಶಃ ಅವರ ಓದುಗರ ಸಂಖ್ಯೆ ಒಂದು ದಾಖಲೆ . ಕಾರಣ ಕನ್ನಡ ನಿಯತ ಕಾಲಿಕಗಳ್ಲಲ್ಲಿ ಅತ್ಯಧಿಕ ಕೃತಿಗಳನ್ನು ಬರೆದ ಹಿರಿಮೆ ಅವರದು.. ಸುಧಾ, ಕನ್ನಡ ಪ್ರಭ , ಮಲ್ಲಿಗೆ ಬಾಲಮಂಗಳ , ಕರ್ಮವೀರ ಮೊದಲಾದ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ವರ್ಷಗಟ್ಟಲೇ ಅವರ ಕಾದಂಬರಿಗಳ ಧಾರೆ ಕಂತಿನ ಮೇಲೆ ಕಂತು ಹರಿದು ಸಾವಿರಾರು ಓದುಗರು ವಾರವಾರವೂ ಓದಲು ಕಾತುರರಾಗಿ ಕಾಯುವಂತೆ ಮಾಡಿದ ಅವರ ಕೃತಿಗಳ ಚುಂಬಕ ಶೈಲಿ ಅನನ್ಯ. ೧೯೬೫ ರಿಂದ ಪ್ರಾರಂಭವಾದ  ಸಾಹಿತ್ಯ ಧಾರೆ ಮೂರುವರೆ  ದಶಕಕಳೆದರೂ ರೂ ಒಂದಲ್ಲ ಒಂದು ನಿಯತಕಾಲಿಕದಲ್ಲಿ ಓದುಗರನ್ನು  ಈಗಲೂ ರಂಜಿಸುತ್ತಲಿವೆ. ಧಾರಾವಾಹಿಗಳೂ ವೈವಿದ್ಯ ಪೂರ್ಣ. ವೈಜ್ಞಾನಿಕ, ಚಾರಿತ್ರಿಕ ಮತ್ತು ಸಾಮಾಜಿಕ ಕೃತಿಗಳಾಗಿವೆ.
ಅವರ ಕಥಾಸಂಕಲನಗಳ ಸಂಖ್ಯೆ ಹತ್ತಕ್ಕೂ ಹೆಚ್ಚು. ನೂರಾರು ಕಥೆಗಳ ಸಮಗ್ರ ಕಥಾ ಸಂಕಲನ ಹೊರ ಬಂದಿದೆ. ಶಿಶು ಸಾಹಿತ್ಯದಲ್ಲೂ ತಮ್ಮ ಛಾಪು ಮೂಡಿಸಿರುವರು ಇಪ್ಪತ್ತೆರಡು ಕೃತಿಗಳು ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗಿವೆಅಖಿಲ ಕನರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ರಚಿಸಿ ಮೂರು ದಶಕಗಳಿಮದ ಸಲ್ಲಿಸಿದ ಸೇವೆಗೆ  ಇತ್ತೀಚೆಗೆ ಶಿವಮೊಗ್ಗ ಕರ್ನಾಟಕ ಸಂಘವು ಡಾ. ಶಿವರಾಮಕಾರಂತ  ಪ್ರಶಸ್ತಿ ನೀಡಿ ಅವರ ಜೀವಮಾನದ ಸಾಧನೆ ಗೌರವಿಸಿದೆ.
ಅನುವಾದ ರಂಗದಲ್ಲೂ ಅದ್ವಿತೀಯರು. ಕನ್ನಡ, ಹಿಂದಿ ಸಂಸ್ಕೃತ,ಇಂಗ್ಲಿಷ್‌  ಮತ್ತು ರಷ್ಯನ್ಭಾಷೆ ಬಲ್ಲರು. ಹೊರನಾಡಿ ಪರ ಭಾಷೆಯ ಶ್ರೇಷ್ಠ ಕೃತಿಗಳ ಪೆರಿಚಯವನ್ನು ಕನ್ನಡಿಗರಿಗೆ ಮಾಡಿಸಿರುವರು.,ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನ್ಯಾಷನಲ್ಬುಕ್ಟ್ರಸ್ಟ್ನಿಂದ ಅವರ ಕೃತಿಗಳು ಪ್ರಕಟ ಗೊಂಡಿವೆ.
ಜ್ಞಾನಾರ್ಜನೆಗೆ ದೇಶ ನೋಡು ಇಲ್ಲವೇ  ಕೋಶ  ಓದು ಎನ್ನುವ ಮಾತಿದೆ. ಇವರು ಎರಡನ್ನೂ ವಿಸ್ತೃತವಾಗಿ ಮಾಡಿರುವರು. ಭಾರತದಲ್ಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ಅಸ್ಸಾಂನಿಂದ ಬದರಿಯವರೆಗೆ ಪ್ರವಾಸ ಮಾಡಿರುವರು ಅಮೇರಿಕಾದ ಭೇಟಿಯೂ ಆಗಿದೆ, ಅವೆಲ್ಲ ಅನುಭವ ಅಕ್ಷರಗಳಲ್ಲಿ ದಾಖಲಿಸಿದ್ದಾರೆ.ಹಲವು ಸಾರ್ಥಕ ಸೇವೆ ಸಲ್ಲಿಸಿದ ಸಂಘಟನೆಗಳ ರಜತೋತ್ಸವ ಸ್ಮರಣ ಸಂಚಿಕೆಗಳ ಸಂಪಾದನೆ ಮಾಡಿ  ಸಾಧನೆಯ ಪರಿಚಯ ಮಾಡಿಸಿರುವರು.ಕನ್ನಡ ಸಾಹಿತ್ಯದ ಯಾವುದೇ ಸಂಭಾವನಾ ಗ್ರಂಥವೂ ಇವರ ಲೇಖನವಲ್ಲದೆ ಅಪೂರ್ಣ ಎನ್ನಿಸುವಷ್ಟು ವಿಶೇಷ ಲೇಖನಗಳು ಇವೆ, ಕಾರಣ ಅವರೊಡಗಿನ ನಿಕಟ ಸಂಪರ್ಕ. ಹಲವಾರು ಸಂಕೀರ್ಣ ಕೃತಿಗಳ ಜೊತೆ ನೂರಾರು ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಮಾಹಿತಿ ಕೋಶ ಇವರ ಒಂದು ದು ವಿಶಿಷ್ಟ ಕೃತಿ ಕನ್ನಡ ಬರಹಗಾರರೆಲ್ಲರ ಸಮಗ್ರ ಮಾಹಿತಿಗಳನ್ನು ಒಳಗೊಂಡ ಈ ಕೃತಿಗೆ ರನ್ನ ಪ್ರಶಸ್ತಿ ದೊರಕಿದೆ. ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿದ ಎಲ್ಲ ಸಂಘಟನೆಗಳೂ  ಕೈಗೆಟಕುವಂತ ಇಟ್ಟುಕೊಳ್ಳಲೇ ಬೇಕಾದ   ಉಪಯುಕ್ತ ಕೃತಿ ಇದಾಗಿದೆ,
ಕಥೆ, ನಾಟಕ  ಶಿಶು ಸಾಹಿತ್ಯ, ವೈಜ್ಞಾನಿಕಪ್ರಬಂಧ  ರೇಡಿಯೋ ರೂಪಕ,ದೂರದರ್ಶನದಲ್ಲಿ ವಿಖ್ಯಾತರ ಸಂದರ್ಶನ,ಪ್ರವಾಸ ಕಥನ, ವ್ಯಕ್ತಿ ಚಿತ್ರಣ , ಕನ್ನಡಸಾಹಿತ್ಯದ ವೈವಿದ್ಯತೆ ಅರಿಯಲುಇವರ ಸಮಗ್ರ ಕೃತಿಸಂಪುಟ ನೋಡಿದರೆ ಸಾಕು
ಇವರದು ಸಮಾಜಮುಖಿ ಜೀವನತಾವು ನೆಲಸಿರುವ  ಬನಶಂಕರಿ ಬಡಾವಣೆಯ ಸಾಂಸ್ಕೃತಿಕ ಸಂಘನೆ ಕಾರ್ಯದಲ್ಲಿ ಮೂರು ದಶಕಗಳಿಂದಲೂ ಸತತ  ತೊಡಗಿರುವರು. ವಿವಿದ ಹುದ್ದೆಯಲ್ಲಿ ಸೇವೆ ಸಲ್ಲುತ್ತಲಿದೆ..ನಾಡಿನ ಹಿರಿಯ ಸಂಸ್ಥೆ  ಸಾಹಿತ್ಯ ಪರಿಷತ್ನಲ್ಲಿ ಖಜಾಂಚಿಯಾಗಿ ಮೂರುವರ್ಷ ಕನ್ನಡ ನುಡಿಯ ಸಂಪಾದಕರಾಗಿ ಮೂರುವರ್ಷ ಸೇವೆ ಸಲ್ಲಿಸಿರುವರು. ಇನ್ನೂ ಹತ್ತಾರು ಸಂಸ್ಥೆಗಳೊಡನೆಯು ಇವರು ನಿಕಟ ಸಂಪರ್ಕ ಹೊಂದಿರುವರು. ವಿಶೇಷವಾಗಿ  ಬಿ.ಎಂಶ್ರೀ. ಪ್ರತಿಷ್ಠಾದಲ್ಲಿ  ಕಾರ್ಯದರ್ಶಿಯಾಗಿ ಸಲ್ಲಿಸಿದ ಸೇವೆ ತುಂಬ  ದೊಡ್ಡದು  ಎಂಬತ್ತರ ಮಾಗಿದ ವಯಸ್ಸಿನಲ್ಲೂ ಯುವಕರೂ ನಾಚುವಂತೆ ಠಾಕೋಠೀಕಾಗಿ ಸಂಜೆ ೪  ಗಂಟೆಗೆ ಸ್ಕೂಟರ್ಸವಾರರಾಗಿ ಬಂದು ನಾಲ್ಕು ತಾಸು ದಣಿವಿಲ್ಲದೆ ದುಡಿಯುತಿದ್ದ ಇವರ ಪರಿ ಅನುಕರಣೀಯ.
ಎಲೆಯ ಮರೆಯ ಕಾಯಂತೆ ಕೆಲಸ ಮಾಡುವ ಇವರ ಕೊಡುಗೆಗೆ  ಸಲ್ಲಬೇಕಾದ ಗೌರವ ತುಸು ವಿಳಂಬವಾಗಿಯೇ ಸಂದಿದೆ.. ಇವರ ಕೃತಿಗಳಿಗೆ ಬಂದಿರುವ ಬಹುಮಾನಗಳು ಬಹಳ.  ಇವರಿಗೆ  ೨೦೦೫ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ  ಗೌರವಿಸಲಾಯಿತು. ಕರ್ನಾಟಕ ಶ್ರೀ,   ಕನ್ನಡ ಶ್ರೀ ವಿಶ್ವೇಶ್ವರಯ್ಯ ಪ್ರಶಸ್ತಿ , ಆರ್ಯಭಟ ಪ್ರಶಸ್ತಿ ಮುಖ್ಯವಾದವು

  ಸಾಹಿತ್ಯ ರಂಗದಲ್ಲಿನ ಸಮೃದ್ಧ ಸಾದನೆಯೊಂದಿಗೆ ವೃತ್ತಿ  ಬದುಕಿನಲ್ಲೂ ಯಶಸ್ವಿ. ತಮ್ಮ ಸಂಶೋಧನೆಗಳಿಂದ ಇಲಾಖೆಯಲ್ಲಿ ಸನ್ಮಾನಿತರು. ವೈಯುಕ್ತಿಕ ಬದುಕೂ ಅವರ ಸಾಹಿತ್ಯ ಶೈಲಿಯಂತೆ ಪ್ರಶಾಂತ. ಅನುಕೂಲೆಯಾದ ಸತಿ, ಒಬ್ಬ ಮಗ , ಇಬ್ಬರು ಪುತ್ರಿಯರು ನಾಲ್ವರು  ಮೊಮ್ಮಕ್ಕಳ ಸುಖೀ ಸಂಸಾರಜೊತೆಗೆ ಸಾಮಾಜಿಕವಾಗಿಯೂತಮ್ಮ ಮೃದು ಸ್ವಬಾವ, ಮಧುರ ನುಡಿ ಮತ್ತು ಸರಳ ನಡೆಯಿಂದಅಂದರಿಕೂ ಮಂಚಿವಾಡು ಅನಂತಯ್ಯ ‘’ ಆಗಿರುವರು. ಇದರ ಪಲ ಶೃತಿ ನೂರಾರು ಸಾಹಿತ್ಯ ಸಾಧಕರ ಗೆಳೆಯರ ಬಳಗ. ಸಹೋದ್ಯೋಗಿಗಳ ಆದರ, ಓದುಗರ ಅಭಿಮಾನ ಪಡೆದ ಸಾರ್ಥಕ ಬದುಕು.  ಸಹಸ್ರ ಚಂದ್ರದರ್ಶನ ಮಾಡಿ ಈಗಾಗಲೇ ಮೂರು ವರ್ಷ  ಕಳೆದಿವೆ.. ಅವರ ಕೃತಿಗಳಂತೆ ಇವರೂ ನೂರುವರ್ಷ ತಲುಪಲಿ ಎಂಬ  ಹಾರೈಕೆ ಅಭಿಮಾನಿಗಳದು.



No comments:

Post a Comment