Tuesday, July 1, 2014

ಅಮೇರಿಕದ   ಹಳ್ಳಿಯಲ್ಲಿ  ವಿದೇಶಿ   ಟೀ     ದಹನ
 ಅಮೇರಿಕಾದ ಸ್ವಾತಂತ್ರ್ಯ ಹೋರಾಟದ ತೊಟ್ಟಿಲು  ಮೆಸೆಚುಟೆಸ್‌  ರಾಜ್ಯದರಾಜಧಾನಿ . ಚಳುವಳಿಗೆ ನಾಂದಿ ಹಾಡಿದ  ನಗರ ಬಾಸ್ಟನ್‌.  ಅಂದಿನ ಅಮೇರಿಕನ್‌ರು ಬ್ರಿಟಿಷ್‌ ಸಾಮ್ರಾಟರ ವಿಧೇಯ ಪ್ರಜೆಗಳಾಗಿದ್ದರು.  ವಸಾಹತಿನ ಪ್ರಜೆಗಳ   ಒಂದೇ ಬೇಡಿಕೆ ಸಂಸತ್ತಿನಲ್ಲಿ ತಮಗೂ ಪ್ರಾತಿನಿಧ್ಯ. ಅದು ಆಳರಸರ ಕಿವಿಗೆ ಬೀಳಲೇ ಇಲ್ಲ. ಆಗ ಮೊದಲಾದುದು ಪ್ರಾತಿನಿಧ್ಯ ವಿಲ್ಲದೆ ತೆರಿಗೆ ಕೊಡೆವು ಎಂಬ ಪ್ರತಿಭಟನೆ. ಯಾವಾಗ ಜನರ ಮಾತನ್ನು ತಿರಸ್ಕರಿಸಿ ಟೀಯನ್ನು ಹಡಗಿನಲ್ಲಿ ಅಮೇರಿಕಾಕ್ಕೆ ತಂದು ಅದರ ಬಳಕೆಗೆ ತೆರಿಗೆ ಹೇರಿದರೋ ಆಗ ಮೊದಲಾಯಿತು ಚಳುವಳಿ. ಅಮೇರಿಕಾದ ಎಲ್ಲ ಬಂದರುಗಳಲ್ಲಿ ಟೀ ತಂದ ಹಡುಗಗಳಿಗೆ ಪ್ರವೇಶ ನಿರಾಕರಿಸಲಾಯಿತು. ಹಟ ಮಾಡಿ ಬಾಸ್ಟನ್‌ ಬಂದರಿನಲ್ಲಿತಿಂ ಗಳುಗಟ್ಟಲೆ ಲಂಗರು ಹೂಡಿದ  ಹಡಗಿನಲ್ಲಿನ ಸುಮಾರು  ಇಂದಿನ ಮೌಲ್ಯದಲ್ಲಿ ಒಂದು ಮಿಲಿಯನ್‌ಮೌಲ್ಯದ ಟೀಯನ್ನು ೧೭೭೩ ರಲ್ಲಿ  ದೋಣಿಯಲ್ಲಿ ಹೋದ ಚಳುವಳಿಗಾರರು ಸಮುದ್ರಕ್ಕೆ ಚೆಲ್ಲಿದರು. 

ಲ್ಲಿಂದ ಮೊದಲಾಯಿತು ಸ್ವಾತಂತ್ರ್ಯಕ್ಕಾಗಿ ಚಳುವಳಿ.ಅದಕ್ಕಾಗಿಯೇ ಫಿಲೆಡೆಲಫಿಯಾವನ್ನುಸ್ವಾತಂತ್ರ್ಯ ಹೋರಾಟದ ತೊಟ್ಟಿಲು ಎನ್ನುವರು. ಅಲ್ಲಿರುವ  ಲಿಬರ್ಟಿ ಬೆಲ್‌ ಅದಕ್ಕೆ ಸಾಕ್ಷಿ. ಆದರೆ ಈ ಚಳುವಳಿಯ ಕಿಡಿ ಅಷ್ಟಕ್ಕೆ ಆರಲಿಲ್ಲ. ಅದು ನಾಲ್ಕಾರು ನ ಕಡೆ ಬೇರೆ ಬೇರೆ ರೂಪದಲ್ಲಿ ಹೊರಬಿದ್ದಿತು.ಅದರ ಕೊನೆಯ ಮತ್ತು ಅತ್ಯಂತ ಚಿಕ್ಕ  ಪ್ರತಿಭಟನೆ ನಡೆದುದು ಗ್ರೀನ್‌ವಿಚ್‌ನಲ್ಲಿ.ಗ್ರೀನ್‌ವಿಚ್‌ ಎಂದರೆ ಸಾಮಾನ್ಯವಾಗಿ ನಾವುತಿ ಳಿದಿರುವುದು ಅಂತರಾಷ್ಟ್ರೀಯ   ಮಟ್ಟದಲ್ಲಿ ಅನುಸರಿಸುವ ಇಂಗ್ಲೇಂಡಿನ ಗ್ರೀನ್‌ವಿಚ್‌ ಎಂಬಲ್ಲಿನ  ಸಮಯದ ಊಹಾರೇಖೆ. ಆದರೆ ಅಮೇರಿಕಾದಲ್ಲೂ ಒಂದು ಗ್ರೀನ್‌ವಿಚ್‌ ಇದೆ. ಜನರಿಗೆ ತಾಯ್ನಾಡು ತೊರೆದರೂ ಮೂಲ ಬೇರಿನ ಮೋಹ ಬಿಡದು. ಕುಟುಂಬದಲ್ಲಿ   ಅಜ್ಜನ ಹೆಸರನ್ನುಮೊಮ್ಮಗುವಿಗೆ ಇಡುವ  ಪದ್ದತಿಯ ಹಾಗೆ. ಇಲ್ಲಿನ ಜನ ತಾವು ಬಿಟ್ಟುಬಂದ ಪ್ರದೇಶದ  ಹೆಸರನ್ನು ವಲಸೆಬಂದ ಜಾಗಕ್ಕೂ ಇಟ್ಟರು. ಅದಕ್ಕೆ ಇಲ್ಲಿ ನ್ಯೂ ಇಂಗ್ಲೆಂಡ್‌, ಲಂಡನ್‌,,ನ್ಯೂಯಾರ್ಕ್, ಸಾಮರ್‌ಸೆಟ್‌,ಲಿಸ್ಬನ್‌,ಮಿಡಲ್‌ಸೆಕ್ಸ್‌ , ಬ್ರಿಸ್ಟಲ್‌ , ಇಂಡಿಯಾಸ್ಟ್ರೀಟ್‌, ಚೈನಾಟೌನ್‌ ಮೊದಲಾದ ಹೆಸರನ್ನು ಹಲವಡೆ ಕಾಣಬಹುದು.  ಗ್ರೀನ್‌ವಿಚ್‌ ಸಹಾ ಫಿಲೆಡೆಲ್ಫಿಯಾಕ್ಕೆ ೪೦ ಮೈಲು ದೂರದಲ್ಲಿರುವ ಆದರೆ ನ್ಯೂಜರ್ಸಿ  ರಾಜ್ಯಕ್ಕೆ  ಸೇರಿದ  ಪುಟ್ಟ ಗ್ರಾಮ..ಅಲ್ಲಿನವರಿಗೆ ತಾವೂ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದೇವೆಂಬ ಹೆಮ್ಮೆ. ಅದಕ್ಕೆ ಕಾರಣ ಅಮೇರಿಕಾದ ಬಂದರುಗಳಲ್ಲಿ ಟೀ ತರುವ ಹಡುಗುಗಳಿಗೆ ಬಹಿಷ್ಕಾರ ಹಾಕಿದಾಗ ತೀರದಲ್ಲಿರುವ ಪುಟ್ಟ ಪ್ರದೇಶಗಳಲ್ಲಿ ದೋಣಿಯಲ್ಲಿ ತಂದು ಟೀ ಇಳಿಸುವ ಹುನ್ನಾರ  ಆಂಗ್ಲರು ನಡೆಸಿದರು..ಅವರು ನಡೆಸಿದ ಈ  ಕಾರ್ಯವನ್ನು ಪ್ರತಿಭಟಿಸಿದ ಕಟ್ಟ ಕಡೆಯ ಮತ್ತುಪುಟ್ಟಗ್ರಾಮ ಗ್ರೀನ್‌ವಿಚ್‌.  ಸರಿಸುಮಾರು  ಬಾಸ್ಟನ್‌  ಘಟನೆಯ  ಒಂದು  ವರ್ಷದ ನಂತರಅಂದರೆ ೧೭೭೪ ರ ಡಿಸೆಬರ್‌ ೨೨ನೆಯ ಗುರುವಾರದಂದು ಸಂಜೆ ಗ್ರೀನ್‌ವಿಚ್‌ ಹಳ್ಳಿಗರಿಗೆ ತಮ್ಮ ಊರಿಗೆ  ಡೆಲವೇರ್‌ನದಿಯ ಮುಖಾಂತರ ಸಮದ್ರದಲ್ಲಿದ್ದ ಹಡಗಿನಿಂದ ಟೀ  ಬಂಡಲ್‌ಗಳು ದೋಣಿಯಲ್ಲಿ ಬಂದ ಸುದ್ದಿ ಗೊತ್ತಾಯಿತು. ಅದನ್ನುಬ್ರಿಟಿಷ್‌ರಿಗೆ ನಿಷ್ಠನಾಗಿದ್ದ ಡೇನಿಯಲ್‌ ಬೋವೆನ್‌ಮನೆಯ ಬೇಸ್‌ ಮೆಂಟ್‌ನಲ್ಲಿ ಸಂಗ್ರಹಿಸಿದ್ದರು. ನಂತರ ನಾಮಮಾತ್ರ ತೆರಿಗೆ ಹಾಕಿ ಮಾರುವ ಯೋಜನೆಇತ್ತು. ಇಲ್ಲಿನ ಜನ ಮುಗ್ದರು    ಶಾಂತಿಪ್ರಿಯ ಪ್ರದೇಶ ಏನೂ ಆಗದು ಎಂಬ ನಂಬಿಕೆಯಿಂದ  ಈ ಕೆಲಸ ಸಾಗಿತ್ತು. ಆದರೆ ಜನ ಜಾಗೃತರಾಗಿದ್ದರು. ಅವರು ಪ್ರತ್ಯಕ್ಷವಾಗಿ ಯಾವುದೇ ಚಳುವಳಿಯಲ್ಲಿ ಭಾಗವಹಿಸದಿದ್ದರೂ ಮಾಹಿತಿಯಂತೂ ಇತ್ತು. ಅಂದು   ರಾತ್ರಿಯ ವೇಳೆಗೆ ಸುಮಾರು ೩೦ ಜನ ಟೀ ಸಂಗ್ರಹಿಸಿದ್ದ ಮನೆಯ ಮೇಲೆ ದಾಳಿ ಮಾಡಿ ಎಲ್ಲ ಬಂಡಲ್‌ಗಳನ್ನೂ ಗ್ರಾಮದ ಮಧ್ಯದ  ವೃತ್ತಕ್ಕೆ ತಂದು ಬೆಂಕಿಹಚ್ಚಿ ಸಂಭ್ರಮಿಸಿದರು.  
ವರಲ್ಲಿ ಕೆಲವರು ಅಮೇರಿಕಾ ಇಂಡಿಯನ್‌ರ ವೇಷಭೂಷಣ ಧರಿಸಿದ್ದರು ಎಂಬ ಮಾತೂಇದೆ.ಈ ಘಟನೆಯನ್ನು ಇಲ್ಲಿನ ಜನ ಇಂದಿಗೂ ಪ್ರತಿವರ್ಷ ಆಚರಿಸುವರು. ಗ್ರಾಮದ ಬಹುತೇಕ ಜನ ಭಾಗವಹಿಸಿದ್ದರಿಂದ ದೂರೂ ದಾಖಲಾಗಲಿಲ್ಲ. ಇದರಿಂದ ಯಾವುದೇ ಐತಿಹಾಸಿಕ ದಾಖಲೆಗಳು ಇಲ್ಲ. ಇದು ಮೌಖಿಕವಾಗಿ ಹೇಳಿಕೇಳಿ ಬಂದದ್ದು ಆದರೆ ಅಲ್ಲಿನ ಜನರಿಗೆ ಅದು ಹೆಮ್ಮೆಯ ಘಟನೆ. ಪ್ರತಿವರ್ಷ   ಸಾಂಕೇತಿಕವಾಗಿ ತಲೆ ತಲಾಂತರ ದಿಂದ ಆಚರಣೆ ಮಾತ್ರ ನಡೆದಿದೆ. ಕಾರಣ ಇಲ್ಲಿನ ಜನರ ಇತಿಹಾಸ ಪ್ರಜ್ಞೆ ಮತ್ತು  ಸ್ವಾತಂತ್ರ್ಯಪ್ರೇಮ. 
ಇದು ಒಂದು ರೀತಿಯಲ್ಲಿ ಭಾರತದ  ಸ್ವಾತಂತ್ರ್ಯ  ಚಳುವಳಿಯ ಉಪ್ಪಿನ ಸತ್ಯಾಗ್ರಹ  ಮತ್ತು     ವಿದೇಶಿ  ವಸ್ತ್ರಗಳ ಸುಡುವುದಕ್ಕೆ ಸ್ಪೂರ್ತಿ  ಎನ್ನಬಹುದು.  ಸ್ವಾತಂತ್ರ್ಯದ  ಹಂಬಲ ದೇಶಕಾಲ ಮೀರಿದ್ದು  ಎನ್ನುವುದು ಇದರಿಂದ ಗೊತ್ತಾಗುತ್ತದೆ. ಅಂದು ಅಮೇರಿಕಾದಲ್ಲಿ ಮಾಡಿದ್ದ ಕಾರ್ಯವನ್ನು ಇನ್ನೊಂದು ರೂಪದಲ್ಲಿ ಭಾರತದಲ್ಲೂ  ಚಳುವಳಿಯ ಸಮಯದಲ್ಲಿ ಮಾಡಿರುವೆವು. 
ಗ್ರೀನ್‌ವಿಚ್‌ ಅಮೇರಿಕಾದಲ್ಲಿರುವ ಅತ್ಯಂತ ಪುರಾತನ ವಲಸಿಗರ ಕಾಲನಿಗಳಲ್ಲಿ ಒಂದು. ಇವರ ಹೋರಾಟವನ್ನು ೧೯೦೪ ರಲ್ಲಿ ಗುರುತಿಸಿ  ಆ ಸ್ಥಳದಲ್ಲಿ ಒಂದು ಸ್ಮಾರಕ ನಿರ್ಮಿಸಲಾಗಿದೆ.

ಆದರೆ ಪ್ರತಿವರ್ಷ ಸಾಂಕೇತಿಕವಾಗಿ ಟೀ ಬಂಡಲ್‌ಗಳನ್ನು ಸುಡುವ ಉತ್ಸವ ನಿರಂತರ ಸಾಗಿಬಂದಿದೆ. ಅಷ್ಟೇ ಅಲ್ಲ ಆ ಹೆಸರಿನಲ್ಲಿ ಮೆರಥಾನ್‌ ಓಟ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು  ಸ್ಥಳೀಯರು ನಡೆಸುತ್ತಾರೆ. ಇಲ್ಲಿ ಗಣನೀಯ ಅಂಶವೆಂದರೆ ಕಂಬರ್‌ಲೇಂಡ್‌ ಕೌಂಟಿಯ  ಪುಟ್ಟ ಗ್ರಾಮದ ಜನರು ನೂರಾರು ವರ್ಷಗಳಿಂದ ಯಾವುದೇ ದಾಖಲೆ ಇಲ್ಲದೇ ಇರುವ ಘಟನೆಯನ್ನು ಆಚರಿಸಿಕೊಂಡು ಬಂದಿರುವುದು.ಈಗ ಅದಕ್ಕೆ ಮಾನ್ಯತೆ ದೊರಕಿದೆ. ಇತಿಹಾಸಕಾರರು  ದಾಖಲೆಇಲ್ಲದೆ ಇರುವುದರಿಂದ ಅನುಮಾನ ವ್ಯಕ್ತಪಡಿಸಿದರೂ ಮೌಖಿಕ ಪರಂಪರೆಯೂ ಜನಪದ ಆಚರಣೆಯೂ ಇತಿಹಾಸದ ಒಂದು ಭಾಗ ಎಂಬುದನ್ನು ಮರೆಯುವ ಹಾಗಿಲ್ಲ. ಈ ದಿಶೆಯಲ್ಲಿ  ಅಪರಂಪಾರ  ಐತಿಹಾಸಿಕ ಪರಂಪರೆಯುಳ್ಳ ಭಾರತದಲ್ಲಿ ಪ್ರತಿಯೊಂದು ಸ್ಮಾರಕವನ್ನೂ  ಸರ್ಕಾವೇ ಸಂರಕ್ಷಿಸಲಿ ಮತ್ತು  ಸರಕಾರಿ ವೆಚ್ಚದಲ್ಲಿ  ಆಚರಿಸಲಿ  ಅದಕ್ಕೂ ನಮಗೂ ಸಂಬಂಧವಿಲ್ಲ   ಎಂಬ ಮನೋಭಾವನೆ ಬೆಳಸಿಕೊಂಡಿರವವರು ಇದನ್ನು ಗಮನಿಸ  ಬೇಕಾದದ್ದು ಅತ್ಯಗತ್ಯವಾಗಿದೆ.










No comments:

Post a Comment