ಪಾದಚಾರಿಯೇ ರಸ್ತೆಯ ರಾಜ!
ಅಮೇರಿಕಾದ ನೆಲದಮೇಲೆ ಮೊದಲ ಬಾರಿಗೆಕಾಲಿಟ್ಟ ಕೂಡಲೇ ಕಣ್ಣಿಗೆ ಎದ್ದು ಕಂಡದ್ದು ವಿಭಿನ್ನ ನೋಟ ಮತ್ತು ಆದ್ದು ವಿಶೇಷ ಅನುಭವ . ವಿಮಾನಿಲ್ದಾಣದಲ್ಲಿ ಚೆಕ್‌ಔಟ್ ಮಾಡಿಸಿ ಹೊರ ಬಂದಾಗ, ನನ್ನನ್ನು ಕಂಡ ತಕ್ಷಣ ಮಗಳು ಅಳಿಯ ನಗುನಗುತ್ತಾ ಸ್ವಾಗತಿಸಿ ಎಲ್ಲ ಬ್ಯಾಗೇಜುಗಳನ್ನು ಕಾರಿನಲ್ಲಿ ಹಾಕಿ ಮುಂದಿನ ಸೀಟಿನಲ್ಲಿ ಕೂಡಲು ಹೇಳಿದರು. ನಾನು ಕಾರಿನ ಮುಂಭಾಗದಲ್ಲಿ ಎಡ ಬದಿಯ ಬಾಗಿಲ ತೆರೆದು ಕೂಡಲು ನೋಡಿದರೆ ಅದು ಚಾಲಕನ ಸೀಟು. ಮತ್ತೆ ಸುತ್ತುಹಾಕಿ ಬಲ ಬದಿಗೆ ಬಂದು ಭಾಗಿಲು ತೆರೆದು ಕುಳಿತೆ. ಕಾರು ಹೊರಟಿತು. ಆದರೆ ಅದು ಚಲಿಸಿದ್ದು ರಸ್ತೆಯ ಬಲ ಭಾಗದಲ್ಲಿ. ಇದೇನು ರಾಂಗ್ ಸೈಡ್‌ನಲ್ಲಿ ಹೋಗುತ್ತಿರುವಿರಿ ಎಂದಾಗ . ಅವರು ನಗುತ್ತಾ ಇಲ್ಲಿ Right is right and left is wrong. ಎಂದರು ಅಲ್ಲದೇ ಇಲ್ಲಿನ ಎಲ್ಲವಾಹನಗಳೂ ಲೆಫ್ಟ ಹ್ಯಾಂಡ್ ಡ್ರೈವ್ ಅಂದರೆ ನಮ್ಮಲ್ಲಿನ ಸಂಚಾರಿ ನಿಯಮಗಳು ಇಲ್ಲಿ ಉಲ್ಟಾ..
ಈ ವಿಷಯ್ತ್ರದ ಮೂಲವನ್ನು ಹುಡುಕುತ್ತಾ ಹೊರಟಾಗ ಅಚ್ಚರಿಕಾದಿತ್ತು. ಜಗತ್ತಿನ ಸುಮಾರು ಮುಕ್ಕಾಲು ಪಾಲು ದೇಶಗಳಲ್ಲಿ ಇದೇ ಪದ್ದತಿ.ಇಂಗ್ಲೆಂಡ್ ಮತ್ತು ಅದರ ವಸಾಹತುಗಳಾಗಿದ್ದ ದೇಶಗಳಲ್ಲಿ ಮಾತ್ರ ವಾಹನಗಳು ರಸ್ತೆಯ ಎಡ ಬದಿಗೆ ಚಲಿಸುವ ನಿಯಮವಿದ್ದುದು ಕಂಡು ಬಂದಿತು.ಅದಕ್ಕೂ ಒಂದು ಐತಿಹಾಸಿಕ ಕಾರಣವಿದೆ.
ರಸ್ತೆಯಲ್ಲಿ ಹೋಗುವಾಗ ಎದುರಾದ ಪರಿಚಿತರ ಕೈಕುಲುಕುವ ಪದ್ದತಿ ಮೊದಲಿನಿಂದಲೂ ಇದೆ. ಅದಕ್ಕೆ ಬಲಗೈ ಬಿಡುವಾಗಿ ಬೇಕು. ಅದಕ್ಕೂ ಹೆಚ್ಚಾಗಿ ಶತೃಗಳು ಎದುರಿನಿಂದ ಬಂದು ದಾಳಿ ಮಾಡಿದರೆ ಖಡ್ಗ ಹಿಡಿದು ಹೋರಾಡಲು ಬಲಗೈ ಅನ್ನೇ ಬಹುತೇಕರು ಉಪಯೋಗಿಸುವರು. ಆದ್ದರಿಂದ ೧೮ನೆಯ ಶತಮಾನದಲ್ಲಿ ಕುದುರೆಗಾಡಿಗಳು ಅಥವ ಕೋಚ್ ಗಳು ಸಾರಿಗೆಯ ಸಾಧನವಾಗಿದ್ದವು. ಅವುಗಳ ಬಳಕೆ ಅಧಿಕವಾದಾಗ ವಾಹನಗಳು ಎಡ ಬದಿಯಲ್ಲೇ ಚಲಿಸ ಬೇಕೆಂಬ ನಿಯಮ ಇಂಗ್ಲೆಂಡಿನಲ್ಲಿ ಜಾರಿಗೆ ಬಂದಿತು.. ಇದಕ್ಕೆ ಪೋಪ್‌ಅವರ ಅನುಮತಿಯೂ ಪುಷ್ಟಿಕೊಟ್ಟಿತು.ವ್ಯಾಟಿಕನ್ ಬರುವ ಸಹಸ್ರಾರು ಭಕ್ತರು ಸಾಲಾಗಿ ಎಡಬಾಗದಲ್ಲೇ ಚಲಿಸಬೇಕೆಂದು ಅವರು ನಿರೂಪ ಹೊರಡಿಸಿದ್ದರು.


ಈ ನಿಯಮಗಳಿಗೆ ಪ್ರತಿರೋಧ ಬಂದುದು ಮೊದಲು ಫ್ರಾನ್ಸನಲ್ಲಿ.ಅದೂ ಫ್ರೆಂಚ್‌ಕ್ರಾಂತಿಯ ನಂತರ. ಮುಂಚೆ ಅಲ್ಲಿನ ಆಢ್ಯರು ಮತ್ತು ಶ್ರೀಮಂತರು ಹಮ್ಮಿನಿಂದ ರಸ್ತೆಯ ಎಡಬದಿಗೆ ವೇಗವಾಗಿ ತಮ್ಮ ಕೋಚುಗಳಲ್ಲಿ ಸಂಚರಿಸುತಿದ್ದರು. ಜನ ಸಾಮಾನ್ಯರು ಜೀವ ಕೈನಲ್ಲಿ ಹಿಡಿದು ರಸ್ತೆಯ ಬಲ ಬದಿಗೆ ಸರಿಯುತಿದ್ದರು. ಕ್ರಾಂತಿಯನಂತರ ಜನಸಾಮಾನ್ಯರು ಚಲಿಸುತಿದ್ದ ರಸ್ತೆಯ ಬಲಭಾಗವೇ ಅಧಿಕೃತವಾಯಿತು ಇದೊಂದು ಪ್ರತಿಭಟನೆಯ ಸಂಕೇತವಾಯಿತು. ಇದನ್ನೇ ಜಗತ್ತಿನ ಬಹುತೇಕ ದೇಶಗಳು ಅನುಸರಿಸಿದವು. ಬ್ರಿಟನ್ ನ ವಸಾಹತು ಅಲ್ಲದಿದ್ದರು ಅವರ ಸಂಚಾರಿ ನಿಯಮಗಳನ್ನು ಅನುಸರಿಸುತ್ತಿರುವ ದೇಶ ವೆಂದರೆ ಜಪಾನ್. ಕಾರಣ ಜಪಾನ್‌ನೊಡನೆ ವ್ಯಾಪಾರಕ್ಕಾಗಿ ಅಲ್ಲಿನ ಬಂದರುಗಳನ್ನು ಮುಕ್ತವಾಗಿಸಲು ಹೋಗಿದ್ದ ರಾಯಭಾರಿಯ ಚಾಣಾಕ್ಷತನ..ಅಲ್ಲಿನ ಅರಸರ ಮನ ಒಲಿಸಿ ತಮ್ಮಲ್ಲಿಯ ಸಂಚಾರಿ ನಿಯಮಗಳನ್ನು ಅನುಸರಿಸುವಂತೆ ಮಾಡಿದನು.


ಸಂಚಾರಿಸಾಧನಗಳಲ್ಲಿ ಕ್ರಾಂತಿಯಾದುದು ಆಟೋ ಮೋಬೈಲ್ ಬಂದನಂತರ. ಮೊದ ಮೊದಲ ಕಾರುಗಳಲ್ಲಿ ಡ್ರೈವರ್‌ನ ಸೀಟು ಕೋಚ್ ಗಳಲ್ಲಿ ಇದ್ದಂತೆ ಮಧ್ಯದಲ್ಲಿಯೇ ಇದ್ದಿತು. ಆದರೆ ಯಾರೋ ಒಬ್ಬ ಮೋಜುಗಾರ ಕಾರಿನಲ್ಲಿ ಹೋಗುವಾಗ ಪ್ರೇಯಸಿ ಅಥವ ಹೆಂಡತಿ ಪಕ್ಕದಲ್ಲಿ ಕುಳಿತಿದ್ದರೆ ಸೊಗಸೆಂದು ಕೊಂಡು ಕಾರಿನ ಮುಂಭಾಗದಲ್ಲಿ ಇಬ್ಬರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದನು. ಆಗ ಮೊದಲಾಯಿತು ಕಾರಿನಲ್ಲಿ ಲೆಫ್ಟ್ ಹ್ಯಾಂಡ್ ಡ್ರೈವ್ ಮತ್ತು ರೈಟ್ ಹ್ಯಾಂಡ್ ಡ್ರೈವ್ ಎಂಬ ವ್ಯತ್ಯಾಸ., ಜಪಾನ್ ಮತ್ತು ಬ್ರಿಟನ್ ಕಾರು ತಯಾರಿಕೆಯ ಕಾರ್ಖಾನೆಗಳಲ್ಲಿ ಸ್ಥಳಿಯ ಬೇಡಿಕೆಗೆ ತಮ್ಮಲ್ಲಿನ ಸಂಚಾರಿ ನಿಯಮಗಳಿಗೆ ಅನುಗುಣವಾಗಿ ರೈಟ್ ಹ್ಯಾಂಡ್ ಡ್ರೈವ್‌ಕಾರುಗಳು ತಯಾರಿಸಿದರೆ ರಫ್ತು ಮಾಡಲು ಲೆಫ್ಟ್ ಹ್ಯಾಂಡ್ ಡ್ರೈವ್‌ಕಾರುಗಳನ್ನು ತಯಾರಿಸುವರು. ಈಗಲೂ ವಿಶೇಷವಾದ ರೇಸ್ ಕಾರುಗಳಲ್ಲಿ ಡ್ರೈವರನ ಸೀಟು ಒಂದೇ ಅದೂ ಮಧ್ಯಭಾಗದಲ್ಲಿ.
ನಮ್ಮಲ್ಲಿ ರಸ್ತೆಗಳಲ್ಲಿ ಮೊದಲ ಆದ್ಯತೆ ವಾಹನಗಳಿಗೆ..ಅದಕ್ಕೆ ಪಾದಚಾರಿಗಳು ರಸ್ತೆ ದಾಟುವಾಗ ಅಂಚಿನಲ್ಲಿ ನಿಂತು ಅಚೀಚೆ ನೋಡಿ ದಾಟಬೇಕು.ನಮ್ಮಲ್ಲಿ ಅಕಸ್ಮಾತ್ ನೋಡದೇ ಯಾರಾದರೂ ರಸ್ತೆಗೆ ಇಳಿದರೆ . ‘ ರಸ್ತೆ ನಿಮ್ಮ ಅಪ್ಪನದಾ
/ ಮನೆಯಲ್ಲಿ ಹೇಳಿಬಂದಿರುವೆಯಾ ? ಎಂದು ಕಾರಿನಲ್ಲಿ ಹೋಗುವವರು ಗದರುವುದು ಸಾಮಾನ್ಯ. ಅಪಘಾತವಾದರೂ ಅಚ್ಚರಿ ಇಲ್ಲ. ಈ ಅನುಭವದ ಹಿನ್ನೆಲೆಯಲ್ಲಿ ನಾನು ಅಮೇರಿಕಾದಲ್ಲಿ ಗ್ರಂಥಾಲಯಕ್ಕೆ,ವಾಯುವಿಹಾರಕ್ಕೆ ಹೋಗುವಾಗ ಸಂಚಾರಿ ದೀಪವಿಲ್ಲದ ಕಡೆ ರಸ್ತೆ ದಾಟಬೇಕಾದಾಗ. ರಸ್ತೆ ಅಂಚಿನಲ್ಲಿ ಎಂದಿನಂತೆ ಕಾರು ಬರುವುದು ಕಂಡರೆ ನಿಲ್ಲುತಿದ್ದೆ. ಆದರೆ ರಸ್ತೆ ಅಂಚಿಗೆ ಬರುತಿದ್ದ ನನ್ನನ್ನು ನೋಡಿ ಚಲಿಸುತ್ತಿರುವ ಕಾರುಗಳ ಗಕ್ಕನೆ ನಿಲ್ಲುತಿದ್ದವು. ಅಷ್ಟೇ ಅಲ್ಲ ಅವರು ಕೈ ಮಾಡಿ ರಸ್ತೆ ದಾಟಲು ಸೂಚಿಸುತಿದ್ದರು. ಇಲ್ಲಿ ಪಾದಚಾರಿಯೇ ರಸ್ತೆಯ ರಾಜ.ಅವನಿಗೆ ಮೊದಲ ಆದ್ಯತೆ. ಇನ್ನು ರಸ್ತೆಗಳಲ್ಲಿ ಸಂಚಾರೀ ದೀಪಗಳು ಇದ್ದರೆ ಅ ರಸ್ತೆಯ ಅಂಚಿನಲ್ಲಿರುವ ಕಂಬದ ಮೇಲೆ ಒಂದು ಸ್ವಿಚ್ ಇರತ್ತದೆ. ಅದನ್ನು ಅದುಮಿದರೆ ವಾಹನಗಳಿಗೆ ನಿಲ್ಲುವ ಸೂಚನೆಯ ಕೆಂಪುದೀಪ ಬೆಳಗುತ್ತದೆ ಮತ್ತು ಪಾದಚಾರಿಗಳಿಗೆ ರಸ್ತೆ ದಾಟಲು ಹಸಿರು ದೀಪ ಬೆಳಗುತ್ತದೆ..

ಮನುಷ್ಯರಿಗೆ ಮಾತ್ರ ಅಲ್ಲ ಇಲ್ಲಿನ ವಿಚಿತ್ರ ಎಂದರೆ ಪ್ರಾಣಿ ಪಕ್ಷಿಗಳಿಗೂ ರಸ್ತೆ ದಾಟುವ ವಿಷಯದಲ್ಲಿ ಮೊದಲ ಆದ್ಯತೆ .ಇಲ್ಲಿನ ಬಹುತೇಕ ಕಡೆ ರಸ್ತೆಯ ಎರಡೂ ಬದಿಗೂ ಮರಗಿಡಗಳು ದಟ್ಟವಾಗಿರುತ್ತವೆ.. ಅಂಥಲ್ಲಿ ಜಿಂಕೆಗಳು ಕಂಡುಬರುತ್ತವೆ. ಅವು ನಿರ್ಭಯವಾಗಿ ಓಡಾಡುತ್ತವೆ.
ಇಲ್ಲಿಗೆ ಬಂದರೆ ಸಲ್ಮಾನ್‌ಖಾನ್‌ಗೆ ಅದೆಷ್ಟು ಖುಷಿಯಾಗುವುದೋ ಊಹಿಸಬಹುದು. ಅಷ್ಟು ಮುಕ್ತವಾಗಿ ಯಾವುದೇ ಭಯವಿಲ್ಲದೇ ಸಂಚರಿಸುತ್ತವೆ ಜಿಂಕೆಗಳು. ಆದರೆ ಅವಗಳಿಗೆ ಅಪಾಯವಾದರೆ ಕಠಿಣ ಶಿಕ್ಷೆ ಖಂಡಿತ. ಅದಕ್ಕಾಗಿ ಅವುಗಳು ಅಪಾಯವಿಲ್ಲದೆ ರಾಸ್ತೆ ದಾಟಲು ಮುನ್ನೆಚ್ಚರಿಕೆ ವಹಿಸಿರುವರು. ಅಂಥಹ ಸ್ಥಳಗಳಲ್ಲಿ ಜಿಂಕೆಗಳ ಸಂಖ್ಯೆ ಅಧಿಕವಿರುವಲ್ಲಿ Deer Xing ಫಲಕ ಇರುತ್ತದೆ.ಅಲ್ಲಿ ಎಚ್ಚರಿಕೆಯಿಂದ ವಾಹನಚಾಲನೆ ಮಾಡುವುದು ಅಗತ್ಯ.

ಮನುಷ್ಯರಿಗೆ ಮಾತ್ರ ಅಲ್ಲ ಇಲ್ಲಿನ ವಿಚಿತ್ರ ಎಂದರೆ ಪ್ರಾಣಿ ಪಕ್ಷಿಗಳಿಗೂ ರಸ್ತೆ ದಾಟುವ ವಿಷಯದಲ್ಲಿ ಮೊದಲ ಆದ್ಯತೆ .ಇಲ್ಲಿನ ಬಹುತೇಕ ಕಡೆ ರಸ್ತೆಯ ಎರಡೂ ಬದಿಗೂ ಮರಗಿಡಗಳು ದಟ್ಟವಾಗಿರುತ್ತವೆ.. ಅಂಥಲ್ಲಿ ಜಿಂಕೆಗಳು ಕಂಡುಬರುತ್ತವೆ. ಅವು ನಿರ್ಭಯವಾಗಿ ಓಡಾಡುತ್ತವೆ.
ಇಲ್ಲಿಗೆ ಬಂದರೆ ಸಲ್ಮಾನ್‌ಖಾನ್‌ಗೆ ಅದೆಷ್ಟು ಖುಷಿಯಾಗುವುದೋ ಊಹಿಸಬಹುದು. ಅಷ್ಟು ಮುಕ್ತವಾಗಿ ಯಾವುದೇ ಭಯವಿಲ್ಲದೇ ಸಂಚರಿಸುತ್ತವೆ ಜಿಂಕೆಗಳು. ಆದರೆ ಅವಗಳಿಗೆ ಅಪಾಯವಾದರೆ ಕಠಿಣ ಶಿಕ್ಷೆ ಖಂಡಿತ. ಅದಕ್ಕಾಗಿ ಅವುಗಳು ಅಪಾಯವಿಲ್ಲದೆ ರಾಸ್ತೆ ದಾಟಲು ಮುನ್ನೆಚ್ಚರಿಕೆ ವಹಿಸಿರುವರು. ಅಂಥಹ ಸ್ಥಳಗಳಲ್ಲಿ ಜಿಂಕೆಗಳ ಸಂಖ್ಯೆ ಅಧಿಕವಿರುವಲ್ಲಿ Deer Xing ಫಲಕ ಇರುತ್ತದೆ.ಅಲ್ಲಿ ಎಚ್ಚರಿಕೆಯಿಂದ ವಾಹನಚಾಲನೆ ಮಾಡುವುದು ಅಗತ್ಯ.
ಅದರಂತೆ ಜಲಾಶ್ರಯಗಳ ನಡುವೆ ರಸ್ತೆ ಹೋಗುತಿದ್ದರೆ ಅಲ್ಲಿ ಡಕ್ ಕ್ರಾಸಿಂಗ್ ಫಲಕವಿರುವುದು. ಬಾತು ಕೋಳಿಗಳ ಗುಂಪು ಸಾವಕಾಶವಾಗಿ ಕ್ವೆಕ್ ಕ್ವೆಕ್ ನ ಸದ್ದು ಮಾಡುತ್ತಾ ರಸ್ತೆ ದಾಟುವುದನ್ನು ಕಾರಿನಲ್ಲಿ ಕುಳಿತು ನೋಡುವುದೇ ಒಂದು ಮಜಾ.

ಬೆಟ್ಟ ಪ್ರದೇಶದಲ್ಲಿ ಕರಡಿ ಕ್ರಾಸಿಂಗ್ ಫಲಕ. ಹತ್ತಿರ ಹಳ್ಳಿಯಿದ್ದರೆ ಅಲ್ಲಿ cattle Xing ಫಲಕ. ಆ ಜಾಗದಲ್ಲಿ ಅಪಘಾತವಾದರೆ ಮಾಲಿಕರಿಗೆ ಪೂರ್ಣ ಪರಿಹಾರದೊರೆಯುತ್ತದೆ.ಉಳಿದಂತೆ ಎಲ್ಲ ಸಂಚಾರೀಫಲಕಗಳೂ ಕಂಡು ಬರುತ್ತವೆ.

ಬೆಟ್ಟ ಪ್ರದೇಶದಲ್ಲಿ ಕರಡಿ ಕ್ರಾಸಿಂಗ್ ಫಲಕ. ಹತ್ತಿರ ಹಳ್ಳಿಯಿದ್ದರೆ ಅಲ್ಲಿ cattle Xing ಫಲಕ. ಆ ಜಾಗದಲ್ಲಿ ಅಪಘಾತವಾದರೆ ಮಾಲಿಕರಿಗೆ ಪೂರ್ಣ ಪರಿಹಾರದೊರೆಯುತ್ತದೆ.ಉಳಿದಂತೆ ಎಲ್ಲ ಸಂಚಾರೀಫಲಕಗಳೂ ಕಂಡು ಬರುತ್ತವೆ.
ಎಕ್ಸ್‌ಪ್ರೆಸ್‌ವೇಗಳಲ್ಲಿ ಮಾತ್ರ ತಡೆ ರಹಿತವಾಗಿ ವಾಹನ ಚಾಲನೆ ಆಗಬೇಕು. ಅದೂ ನಿಗದಿತ ವೇಗದಲ್ಲಿ . ಅಲ್ಲಿ ಜನ ಹೋಗುವ ಪ್ರಮೇಯವೇ ಇಲ್ಲ. ನಿಯಮ ಮೀರಿದರೆ ಶಿಕ್ಷೆ ಖಂಡಿತ . ವೇಗ ಮಿತಿಯಲ್ಲಿ ವ್ಯತ್ಯಾಸ ಕೂಡದು . ಕೆಲವು ಬಾರಿ ದುಪ್ಪಟ್ಟು ದಂಡ. ಎಲ್ಲಂದರಲ್ಲಿ ಕಾರು ನಿಲ್ಲಿಸುವ ಹಾಗಿಲ್ಲ ಹಲವಾರು ಮೈಲಿಗೊಂದರಂತೆ ಸರ್ವೀಸ್ ಏರಿಯಾ ಇರುತ್ತದೆ. ಅಲ್ಲಿ ಎಲ್ಲ ಸೌಲಭ್ಯಗಳೂ ಲಭ್ಯ. ದಾರಿಯುದ್ದಕ್ಕೂ ಅವುಗಳು ಇರುವ ದೂರವನ್ನು ಸೂಚಿಸುವ ಫಲಕಗಳಿರುತ್ತವೆ.
ಅಲ್ಲಿ ಯಾರೂ ಇರಲಿಕ್ಕಿಲ್ಲ ಎಂದುಕೊಂಡು ಹೇಗಾದರೂ ಹೋಗಬಹುದೆಂದರೆ ಅದು ಭ್ರಮೆ ಎಲ್ಲ ಕಡೆ ಪೋಲೀಸರು ಇರುವುದೇ ಇಲ್ಲ. ಆದರೆ ಕಾಣದ ಕಣ್ಣುಗಳಾದ ರಹಸ್ಯ ಕ್ಯಾಮರಾಗಳು ಎಲ್ಲವನ್ನೂ ದಾಖಲಿಸುತ್ತವೆ.ಪೋಲೀಸರು ಕುಳಿತಲ್ಲಿಯೇ ಕಾರಿನಲ್ಲಿದ್ದರೂ ಸಹಾ ಕಾಂಪ್ಯೂಟರ್ ಮೂಲಕ ಪರಿಶೀಲಿಸುತ್ತಿರುತ್ತಾರೆ. ಮತ್ತು ಮನೆಗೆ ದಂಡ ಪಾವತಿಯ ನೋಟೀಸು ಬರುತ್ತದೆ. ದಂಡ ಪಾವತಿಸದಿದ್ದರೆ ಕಠಿಣ ಕ್ರಮ. ಗುರುತರ ಅಪರಾಧವಾದರೆ ಪೋಲೀಸ್ ಜೀಪು ಕೆಲವೇ ನಿಮಿಷದಲ್ಲಿ ಪ್ರತ್ಯಕ್ಷ.ಅವರಂತೂ ಸಕಲಶಸ್ತ್ರ ಸಜ್ಜಿತರಾಗಿರುವರು ಮತ್ತು ಗಣಕ ಯಂತ್ರದ ನೆರವು ಇದ್ದೇ ಇರುತ್ತದೆ. ಎಲ್ಲವನ್ನು ಕ್ಷಣಾರ್ಧದಲ್ಲಿ ಪರಿಶೀಲಿಸುವರು.
ಇನ್ನು ಕಾರನ್ನೂ ಬೇಕೆಂದಲ್ಲಿ ನಿಲ್ಲಿಸುವ ಹಾಗಿಲ್ಲ. ಪ್ರತಿ ಮನೆಗೂ ಗರಾಜ್ ಇದ್ದೇ ಇರುವುದು. ಅದಿಲ್ಲದೆ ಇದ್ದರೆ ಅವರಿಗೆ ನಿಗದಿತ ಪಾರ್ಕಿಂಗ್ ಜಾಗ ಗುರುತಿಸಿರುವರು .ಅಲ್ಲಿಯೇ ನಿಲ್ಲಿಸ ಬೇಕು ಅನಧಿಕೃತವಾಗಿ ನಿಲ್ಲಿಸಿದ್ದರೆ ಅದನ್ನು ಟೋ ಮಾಡಿ ಒಯ್ಯುವರು. ಅದೂ ಮಾಲಿಕನ ವೆಚ್ಚದಲ್ಲಿ ಜೊತೆಗೆ ದೈನಂದಿನ ಲೆಕ್ಕದಲ್ಲಿ ದಂಡ ಹಾಕಲಾಗುವುದು. ಇಲ್ಲಿ ಮಾಲ್, ಹೋಟೆಲ್, ಚರ್ಚ್ ಗುಡಿ ಥೇಟರ್ ಅಥವ ಯಾವುದೇ ಸಾರ್ವಜನಿಕ ಸಮಾರಂಭವಾದರೂ ಅನುಮತಿಗೆ ಮೊದಲು ಕಾರ್‌ಪಾರ್ಕಿಂಗ್ ವ್ಯವಸ್ತೆ ಮಾಡುವುದು ಕಡ್ಡಾಯ. ಸಾಕಷ್ಟು ಸ್ಥಳಾವಕಾಶವಿದ್ದರೆ ಮಾತ್ರ ಅನುಮತಿ.. ಇನ್ನು. ಪ್ರತಿಯಂದು ಕಡೆಯಲ್ಲಿಯೂ ವಿಕಲ ಚೇತನರಿಗೆ ವಿಶೇಷ ವ್ಯವಸ್ಥೆ ಇರುವುದು. ಅವರಿಗೆ ಮೀಸಲಾದ ಸ್ಥಳ ಖಾಲಿಇದ್ದರೂ ಅಲ್ಲಿ ಯಾರೂ ಕಾರು ನಿಲ್ಲಿಸುವ ಹಾಗಿಲ್ಲ. ಅಲ್ಲಿ ಬೇರೆಯವರು ವಾಹನ ನಿಲ್ಲಿಸುವುದು ಅಪರಾಧ.


ಇಲ್ಲಿನ ಮನೆಗಳ ಸಮುಚ್ಚಯದಲ್ಲಿ ದಟ್ಟ ಕೆಂಪುಬಣ್ಣ ಬಳದುಕೊಂಡ ಜಲಮೂಲದ ವ್ಯವಸ್ಥೆ ಇದೆ. ಅವುಗಳ ಅಕ್ಕ ಪಕ್ಕದಲ್ಲಿ ಕಾರು ನಿಲ್ಲಿಸುವುದು ಅಪರಾದ . ಕಾರಣ ಇಲ್ಲಿ ಬಹುತೇಕ ಮನೆಗಳು ಕಟ್ಟಿಗೆಯವು ಬೆಂಕಿ ಬೀಳುವ ಅಪಾಯ ಇದ್ದೇ ಇರುತ್ತದೆ. ಅದಕ್ಕೆ ನೀರಿನ ವ್ಯವಸ್ಥೆಯ ಮುಂದಾಲೋಚನೆ. ಮನೆಯಲ್ಲು ಫೈರ್ ಅಲರಾಂ ವ್ಯವಸ್ಥೆ ಕಡ್ಡಾಯ. ನ್ಮ್ ಮನೆಯವರು ಹೋದ ಹೊಸದರಲ್ಲ ದೇವರ ಪೂಜೆ ಮಾಡಿ ಎಂದಿನಂತೆ ನಾಲ್ಕು ಅಗರ ಬತ್ತಿ ಹಚ್ಚಿದ್ದರು ಕಲವೆ ನಇಮಿದಲ್ಲಿ ಫೈರ್ ಅಲಾರಾಮ್ ಮೊಳಗ ತೊಡಗಿತು. ಎಲ್ಲ ರಿಗೂ ಗಾಬರಿ. ತಕ್ಷಣ ಫ್ಯಾನ್ ಹಾಕಿ, ಕಿಟಕಿಬಾಗಿಲು ತೆರೆದರು ಫೈರ್ ಅಲರಾಂ ಇದ್ದಲ್ಲಿಗೆ ಹೋಗಿ ಟವಲ್ ನಿಂದ ಅದರ ಹತ್ತಿರವಿರುವ ಹೊಗೆ ಚದುರಿಸಿದರು.ಅಕಸ್ಮಾತ್ ವಿಷಯ ತಿಳಿಯದ ವರು ಇದ್ದರೆ ಐದು ನಿಮಿಷದಲ್ಲಿ ಅಗ್ನಿಶಾಮಕ ದಳ ವಾಹನಗಳೊಂದಿಗೆ ಹಾಜರು.ಘಟನೆ ನೈಜವಾಗಿದ್ದರೆ ತಕ್ಷಣ ಪರಿಹಾರಕ್ರಮ , ಇಲ್ಲವಾದರೆ ಮೊಕದ್ದಮೆ ದಾಖಲು. ಕೋರ್ಟ ಕಚೆರಿ ಅಲೆಯಬೇಕಾಗುವುದು. ಅದಕ್ಕ ಅಡುಗೆ ಮಾಡುವಾಗಲು ಯಾವುದನ್ನೂ ಹೊತ್ತಿಸಬಾರದು ಎಂಬ ಸೂಚನೆ ಬಂದಿತು.
.ನಗರ ಪ್ರದೇಶಗಳಲ್ಲಿ ಪೇ ಪಾಕರ್ಕಿಂಗ್‌ವ್ಯವಸ್ಥೆ ಇರುತ್ತದೆ. ರೈಲ್ವೇ ನಿಲ್ದಾಣ ಮತ್ತು ಇತರೆಡೆ ಸಾಮೂಹಿಕ ವ್ಯವಸ್ಥೆ ಇರುವುದು ತಿಂಗಳ ಪಾಸೂ ಕೊಡುತ್ತಾರೆ.ಜನ ನಿಬಿಡ ಪ್ರದೇಶದಲ್ಲಿ ರಸ್ತೆಯ ಬದಿಯಲ್ಲಿರುವ ಯಂತ್ರಗಳಲ್ಲಿ ಹಣಹಾಕಿ ನಿಲ್ಲಿಸ ಬಹುದು.ಸಂಚಾರಿ ನಿಯಮ ಉಲ್ಲಂಘಿಸಿದರೆ ಕಾರಿನ ವಿಂಡ್‌ಸ್ಕ್ರೀನ್ಗೆ ಟಿಕೆಟ್ ಅಂಟಿಸುವರು.ಸಕಾಲದಲ್ಲಿ ದಂಡ ಕಟ್ಟಲೇ ಬೇಕು ತಪ್ಪಿದರೆ ಪರಿಣಾಮ ತೀವ್ರ. ಜೈಲುಇ ಶಿಕ್ಷೆಯೂ ಆಗ ಬಹುದು. ಇಲ್ಲವೇ ಚಾಲನಾ ಪರವಾನಿಗೆಯೇ ರದ್ದಾಗುವುದು. ಇಲ್ಲಿ ಕಾಲಿಲ್ಲದಿದ್ದರೂ ಚಲನೆಗೆ ತೊಂದರೆ ಇಲ್ಲ ನೂರು ಅಂತಸ್ಥಿನ ಕಟ್ಟಡದಲ್ಲೂ ಗಾಲಿಕುಚರ್ಚಿಯಲ್ಲಿ ಕುಳಿತು ಹೋಬಹುದು. ಆದರೆ ಕಾರಿಲ್ಲದೆ ಇದ್ದರೆ ಜೀವನ ದುರ್ಭರ.. ಆದ್ದರಿಂದ ಸಂಚಾರಿ ನಿಯಮಗಳ ಕಡೆ ಇಲ್ಲಿನವರಿಗೆ ಬಹಳ ಗಮನ. ಟಿಕಟ್ ಪಡೆದರೆ ಅದು ವೈಯುಕ್ತಿಕ ವಿವರದಲ್ಲಿ ದಾಖಲಾಗುತ್ತದೆ. ವಾಹನ ವಿಮೆ ಮತ್ತು ,ಜೀವ ವಿಮೆಯ ಕಂತೂ ಅಧಿಕವಾಗುವುದು . ಸಂಚಾರ ನಿಯಮಗಳ ಉಲ್ಲಂಘನೆ ಚಾಲಕನ ಭವಿಷ್ಯಕ್ಕೇ ಸಂಚಕಾರ ತರುವ ಸಾಧ್ಯತೆ ಇದೆ. ಅದಕ್ಕಾಗಿ ಈ ಪ್ರಕರಣಗಳ ನಿರ್ವಹಿಸುವ ವಿಶೇಷ ವಕೀಲರ ಪಡೆ ಇರುತ್ತದೆ. ಅವರನ್ನು ಟಿಕೆಟ್ ಅಡ್ವೊಕೇಟ್ ಎನ್ನಲಾಗುತ್ತದೆ.
ಕಾರಿನಲ್ಲಿನ ಪಯಣಿಗರಿಗೆ ಸೀಟ್ ಬೆಲ್ಟ್ ಕಡ್ಡಾಯ.೧೦ ವರ್ಷದ ಒಳಗಿನ ಮಕ್ಕಳನ್ನುವಿಶೇಷ ಸೀಟಿನಲ್ಲಿಯೇ ಕೂಡಿಸಿ ಬೇಕು. ಬೆಲ್ಟ್ ಕಟ್ಟುವುದು ಕಡ್ಡಾಯ..ಒಂಟಿಯಾಗಿ ಮಕ್ಕಳನ್ನು ಕಾರಿನಲ್ಲಿ ಬಿಡುವ ಹಾಗಿಲ್ಲ. ಅದು ಗುರುತರ ಅಪರಾಧ.ಕಾರಿನಿಂದ ಯಾವುದೇ ವಸ್ತುವನ್ನು ಹೊರಗೆ ಎಸೆಯುವ ಹಾಗಿಲ್ಲ. ತಂಡಿ ತೀರ್ಥದ ಸೇವನೆ ಮಾಡಿದರೆ ಖಾಲಿ ಬಾಟಲು, ಕವರ್, ಪೇಪರ್‌ಗಳನ್ನು ಒಂದು ಚೀಲದಲ್ಲಿ ಸಂಗ್ರಹಿಸಿಕೊಂಡು ಅವನ್ನು ಅಲ್ಲ್ಲಲ್ಲಿ ಇಟ್ಟಿರುವ ಟ್ರಾಷ್ ಬಿನ್ನನಲ್ಲಿ ಹಾಕ ಬೇಕು.
ಚಳಿಗಾಲದಲ್ಲಿ ಇನ್ನೊಂದು ಸಮಸ್ಯೆ. ರಸ್ತೆಯಲ್ಲಿ ಮನೆಯ ಮುಂದೆ ಹಿಮ ಶೇಖರವಾಗಿರುವುದು ವಸತಿ ಸಮುಚ್ಚಯಗಳಲ್ಲಾದರೆ ಕಮ್ಯನಿಟಿಯವರು ಹಿಮ ತೆಗೆಸಿ ಕಾರು ಹೋಗಲು ದಾರಿ ಮಾಡುವರು. ಸ್ವತಂತ್ರ ಮನೆ ಇದ್ದರೆ ರಸ್ತೆಯವರೆಗಿನ ಹಿಮವನ್ನು ಮನೆ ಮಾಲಿಕನೇ ತೆಗೆಯ ಬೇಕು. ಹಲವು ರಸ್ತೆಗಳಲ್ಲಿ ಕಾರುಗಳನ್ನು ನಿಲ್ಲಿಸುವ ಹಾಗೇಯೇ ಇಲ್ಲ. ತುಸುವೇ ಸಮಯದಲ್ಲಿ ಕಾರು ಮಟಾಮಾಯ.ಅದರ ಜಾಗದಲ್ಲಿಒಂದು ಪುಟ್ಟ ಬಿಳಿಯ ಬೆಟ್ಟ ಕಾರು ಹಿಮಾವೃತವಾಗುವುದು. ಅದರಿಂದ ಸಂಚಾರಕ್ಕ ಅಡಚಣೆ. ಅದಕ್ಕಾಗಿ ಅಲ್ಲಿ ಎಚ್ಚರಿಕೆಯ ಫಲಕಗಳುಇರುತ್ತವೆ.
ಇನ್ನುವೇಗ ಮಿತಿಯಿರುವ ರಸ್ತಗಳಲ್ಲಿ ಚಲಿಸುವ ಕಾರಿನ ವೇಗ ಅಳೆಯುವ ಉಪಕರಣ ಅಲ್ಲ್ಲಿ ಅಳವಡಿಸಿರುವರು. ಕಾರಿನ ವೇಗ ತಿಳಿಸುವ ಫಲಕಗಳೂ ಇರುತ್ತವೆ. ಇನ್ನುಳಿದಂತೆ ಸಾರ್ವತ್ರಿಕವಾದ ಎಲ್ಲ ಸಂಚಾರೀ ಸಂಕೇತಗಳು ಅಲ್ಲಿಯೂ ಇವೆ. ಜನವಿರುವ ಜಾಗದಲ್ಲಿ ಕಾಲು ನಡಗೆಯವರಿಗೆ ಕಾರಿನಲ್ಲಿ ಬರುವವರಿಗಿಂತ ಹೆಚ್ಚು ಆರಾಮ , ಸಂಚಾರವೂ ಸುಗಮ.
ಅಕಸ್ಮಾತ್ ಕಾರೇನಾದರೂ ಯಾರಿಗಾದರೂ ತಗುಲಿದರೆ ಸುಮಾರಾಗಿ ಗಾಯವಾದರು ಲಾಟರಿ ಹೊಡೆದಂತೆ. ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಜೊತೆಗೆ ಮಿಲಿಯನ್‌ಗಟ್ಟಲೆ ಪರಿಹಾರ.ಕೇಳುವವರೂ ಇದ್ದಾರೆ. ಅದಕ್ಕೂ ಕಾದು ಕೂತಿರುವ ವಕೀಲರೇ ಇರುತ್ತಾರೆ.ಆದ್ದರಿಂದ ಅತಿ ಎಚ್ಚರಿಕೆಯ ವಾಹನ ಚಾಲನೆ ಇಲ್ಲಿ ರಕ್ತಗತ ವಾಗಿರುತ್ತದೆ. ಇಲ್ಲಿ ಮನೆಗೊಂದು ಕಾರು ಎನ್ನವುದಕ್ಕಿಂತ ಜನಕ್ಕೊಂದು ಕಾರು ಸಹಜ ಎನ್ನಬಹುದು. ಅದರ ಫಲ ಎಲ್ಲಿ ನೋಡಿದರೂ ಕಾರುಗಳ ಕಾರುಬಾರು. ತುಸುವೇ ಹೆಚ್ಚು ಕಡಿಮೆಯಾದರೂ ಮೈಲುಗಟ್ಟಲೆ ರಸ್ತೆ ಸಂಚಾರ ಸ್ಥಗಿತ. ಅದಕ್ಕೆ ಸಂಚಾರವನ್ನು ಸುಗಮ ಗೊಳಿಸಲು ನಿಯಮಪಾಲನೆ ಕಡ್ಡಾಯ ತಪ್ಪಿದರೆ ಶಿಕ್ಷೆ ಅಥವ ದಂಡ ಖಚಿತ.
No comments:
Post a Comment