Wednesday, June 5, 2013

ಆರರಿಂದ ಅರವತ್ತು-ಸರಣಿ-ಸಕ್ಕರೆಬೀಡಿನಿಂದ ಚಿನ್ನದ ನಾಡಿಗೆ

  ಹೋದೊಡನೆ ಹೊಸ ಸಮಸ್ಯೆ
ಮಂಡ್ಯ ಜಿಲ್ಲೆ ಎಂದರೆ ಸಕ್ಕರೆ ಯ ನಾಡು ಎಂದೆ ಪ್ರಖ್ಯಾತಿ. ಅಲ್ಲದೆ ಅದು ಬಹುಶಃ ಕರ್ನಾಟಕದಲ್ಲೆ ಬೇರೆ ಭಾಷೆಗಳ ಸೋಂಕಿಲ್ಲದ ಪ್ರದೇಶ ಎಂದರೆ  ಮಂಡ್ಯ ಮಾತ್ರ. ಅಲ್ಲಿನ ಜನರಾಡುವ  ಏಕ ಮೇವ ಭಾಷೆ ಕನ್ನಡ. ಅದೂ ಗೌಡರ ಗತ್ತಿನ ಕನ್ನಡ. ಕಾರಣ ಅದು ಅನ್ಯ ಭಾಷೆಗಳ ಪ್ರದೇಶದ ಸಂಪರ್ಕದಲ್ಲಿ ಇಲ್ಲ. ಅಲ್ಲಲ್ಲಿ ಕಬ್ಬಿನ ಗದ್ದೆಯಲ್ಲಿ ಕೂಲಿಗಾಗಿ ತಮಿಳರು ಇದ್ದಾರೆ. ಆದರೆ  ಒಕ್ಕಲಿಗ ಜನಾಂಗದ ಹೃದಯಭಾಗವಾದ ಈ ಪ್ರದೇಶದವರದು ಕಟ್ಟಾ ಕನ್ನಡಾಭಿಮಾನ. ಅಲ್ಲಿನ ಜನಸಾಮಾನ್ಯರು ಅದರಲ್ಲೂ ಹಳ್ಳಿಯ ಜನರಿಗೆ ಇಂಗ್ಲಿಷ್‌ ಬರಲ್ಲ.ಹಿಂದಿ ಕಲಿಯಲ್ಲ.  ಈಗ ತುಸು ಬದಲಾಗಿದೆ.ಹೀಗಾಗಿ ಭಾಷಾ ದೃಷ್ಟಿಯಿಂದ ಅನ್ಯರ ಪ್ರಭಾವಕ್ಕೆ ಒಳಗಾಗದ ಅಚ್ಚಗನ್ನಡ ಪ್ರದೇಶವೆಂದರೆ  ಮಂಡ್ಯ ಜಿಲ್ಲೆ. ಅಲ್ಲಿನವರ ಮನೆ ಮಾತು ಕನ್ನಡ  ಮನದ ಮಾತು ಕನ್ನಡ. ಮಂಡ್ಯ ಮತ್ತು ಕೋಲಾರಕ್ಕೆ ಶತಮಾನಗಳ ಸಂಬಂಧ .ಕರ್ನಾಟಕದಲ್ಲಿನ ಮೊದಲ  ಜಲವಿದ್ಯುತ್‌ ಉತ್ಪಾದಿಸಿದ  ಹಿರಿಮೆ ಮಂಡ್ಯಜಿಲ್ಲೆಯ ಷಿಂಷಾದ್ದು. ಅದರ ಮೊದಲ ಅನುಕೂಲ ಪಡೆದ ಸ್ಥಳ ಕೋಲಾರದ ಬಂಗಾರದ ಗಣಿಪ್ರದೇಶ.
    ಕೋಲಾರದ ಕುವರ ಸರ್‌ಎಂ ವಿಸ್ವೇಶ್ವರಯ್ಯಯ  ಮಂಡ್ಯ ಜಿಲ್ಲೆಯ ರೈತಾಪಿ ಜನರ ಮನೆ ದೇವರು.ಹಳ್ಳಿಗಾಡಾದರೂ ತುಸು ದೊಡ್ಡ ಗ್ರಾಮವಾದರೆ ಮೂರು ಸೇರುವಲ್ಲಿ ಅವನದೊಂದು ಅವನ ಪುತ್ಥಳಿ. ಪ್ರತಿ ಮನೆಯಲ್ಲೂ ಅವನ ಪೋಟೋ. ನಗರದಲ್ಲಿ ಅವರ ಹೆಸರಿನಲ್ಲಿ ಒಂದು ಬಡಾವಣೆ. ಕಾರಣ ಹುರುಳಿ ಬೆಲೆಯುತಿದ್ದ ಮಂಡ್ಯಜಿಲ್ಲೆಯ ಒಣ ಭೂಮಿಗೆ ಕೃರ್ಷರಾಜ ಸಾಗರ ಆಣೆಕಟ್ಟು ಕಕಟ್ಟಿಸಿ ನೀರುಣೀಸಿ ಭತ್ತದ ಕಣಜ , ಸಕ್ಕರೆ ನಾಡು ಮಾಡಿದ್ದು ಅವರೇ.
 ಕೋಲಾರ ಪ್ರಜ್ಞಾನವಂತರ ಜಿಲ್ಲೆ  ಎಂದೆ ಹೆಸರುವಾಸಿ.. ಕೆ .ಎ. ಸ್‌  ಎಂದರೆ ಕರ್ನಾಟಕ ಆಡಳಿತ ಸೇವೆ ಅಲ್ಲ ಕೋಲಾರ ಆಡಳಿತ ಸೇವೆ ಎನ್ನುವ ಮಟ್ಟಿಗೆ ಕೋಲಾರದದ ಜನ ಆಡಳಿತ ನಿಪುಣರಿದ್ದಾರೆ. ಕೊಲಾರ
ವಿಶ್ವೇಶ್ವರಯ್ಯನವರ ಹುಟ್ಟುಜಿಲ್ಲೆ.ಡಿವಿ. ಗುಂಡಪ್ಪ, ಮಾಸ್ತಿ ಜನಿಸಿದ ನಾಡು. ಇದು ನೀರ ಕೊರತೆ ಎದುರಿಸುವ ಪ್ರದೇಶವಾದರೂ . ಆದರೆ ರೆಷ್ಮೆ ಮತ್ತು ತರಕಾರಿ ಬೆಳೆಗೆ ಎತ್ತಿದ ಕೈ.
ಸಕ್ಕರೆ ನಾಡಿನಲ್ಲಿ ಐದುವರ್ಷದ ಸೇವೆ ಸಾಗಿತ್ತು. ಅಲ್ಲಿನ ಅತಿ ಹಳೆಯ ಆದರೆ ಬೇರೆ ಕಾರಣಗಳಿಗಾಗಿ ಹೆಸರು ಮಾಡಿದ ಕಾಲೇಜು ಸಾಧಾರಣ ಸ್ಥಿತಿಗೆಬಂದಿತು. ಚುನಾವಣೆಆಯಿತು. ಅಲ್ಲಿನ ಶಾಸಕರೆ ಶಿಕ್ಷಣ  ಮಂತ್ರಿಯಾದರು. ಅವರು ತುಂಬ ನಿಷ್ಟುರವಾದಿ. ಪ್ರಾಮಾಣಿಕ ರಾಜಕಾರಣಿ. ನಾನು ಆಗಲೆ ಅಲ್ಲಿ ನಾಲಕ್ಕನೆ ವರ್ಷಕ್ಕೆ ಕಾಲಿಟ್ಟಿದ್ದೆ.ಆ ಸ್ಥಳ  ಮೈಸೂರು ಮೂಲದವರಿಗೆ ಅನುಕೂಲ. ಮೈಸೂರು ಸಿಗದಿದ್ದರೆ ನಮ್ಮಕಾಲೇಜಿಗೆ ಆದ್ಯತೆ.ಅವರ ಮೇಲೆ ನನ್ನ ಬದಲಾವಣೆಗೆ ಸಾಕಷ್ಟು ಒತ್ತಡ ಬಂದಿತು. ಅಲ್ಲಿ ಕೆಲಸಮಾಡಿ ಅಮಾನತ್ತಿಗೆ ಒಳಗಾಗಿದ್ದವರಿಗೆ ಅದೆ ಜಾಗಕ್ಕೆ ಬರುವ ಛಲ ಇದ್ದೆ ಇತ್ತು. ಸರಿ ಅವರಾಗಿ ಮಾಡುವ ಮೊದಲೇ  ಜಾಗ ಖಾಲಿಮಾಡಲು ನಿಶ್ಚಯಿಸಿದೆ. ಅಲ್ಲದೆ  ನನ್ನ ಹೆಂಡತಿಯ ಇಬ್ಬರು ಅಣ್ಣಂದಿರ ಮಕ್ಕಳನ್ನೂ ನಮ್ಮಲ್ಲೆ ಓದಿಸಬೇಕೆಂಬ ಪ್ರೀತಿಯ ಒತ್ತಾಯ ಇತ್ತು . ಅಲ್ಲದೆ ಮನೆಯವರ ಸೋದರಿಯರೂ ಅಲ್ಲಿಯೆ ಇದ್ದರು.ತಮ್ಮ ಅಣ್ಣಂದಿರ ಮಗ ಮತ್ತು ಮಗಳು ಓದಲು ಬಂದರೆ ಒಬ್ಬರಿಗೊಬ್ಬರು ಒತ್ತಾಸೆ ನೀಡಬಹುದೆಂದು ಅಲ್ಲಿಗೆ ವರ್ಗಮಡಿಸಿಕೊಳ್ಳಲು ತಿಳಿಸಿದರು. ಅವರು ತಮಗೆ ಆತ್ಮೀಯರೊಬ್ಬರ ಪ್ರಭಾವ ಬಳಸಿ ಮಂತ್ರಿಗಳ ಶಿಪಾರಸ್ಸು ಪತ್ರ ಬರೆಸಿ ಕೋಲಾರ  ಜಿಲ್ಲೆ ಯಲ್ಲಿ ನಿವೃತ್ತಿಯಿಂದ ಖಾಲಿಯಾಗುತಿದ್ದ ಕಾಲೇಜಿಗೆ ವರ್ಗ ಮಾಡಿಸಿದರು.ನನಗೆ ಚಿನ್ನದ ನಾಡಿಗೆ ವರ್ಗ ವಾಯಿತು. ಎರಡು ಜಿಲ್ಲೆಗಳಿಗೆ ಇತ್ತೀಚಿನ ದಿನಗಳಲ್ಲಿ ಇನ್ನು ಒಂದು ಸಾಮ್ಯತೆ ಇದೆ. ಎರಡೂ ಜಿಲ್ಲೆಗಳು ಎಸ್ ಎಸ್ ಎಲ್‌‌ ಸಿ ಮತ್ತು ಪಿಯುಸಿ ಫಲಿತಾಂಶ  ಪಟ್ಟಿಯಲ್ಲಿ ಕೊನೆಯ ಐದು ಸ್ಥಾನಗಳಿಗಾಗಿ ಪೈ ಪೋಟಿ. ಶೈಕ್ಷಣಿಕವಾಗಿ ಎರಡೂ ಜಿಲ್ಲೆಗಳು ಹಿಂದುಳಿದಿವೆ.
.ಕೆ.ಜಿ.ಎಫ್‌ ತಮಿಳುನಾಡಿನ ಭಾಗದಂತಿರುವ ಪ್ರದೇಶ. ಅಲ್ಲಿನ ಚಿನ್ನದ ಗಣಿಗಳಲ್ಲಿ ಕೆಲಸಮಾಡಲು ಬಂದವರು ಅನ್ಯ ಭಾಷಿಕರೇ ಹೆಚ್ಚು. ಅದರಲ್ಲೂ ತಮಿಳರ ಪ್ರಾಬಲ್ಯ ಬಹಳ.ನಮ್ಮರಾಜ್ಯದಲ್ಲಿ ಕೈಗಾರಿಕೆ ಬೃಹತ್‌ ಕಾಮಗಾರಿ ನೆಡೆವ ಎಲ್ಲ ಕಡೆ ತಮಿಳು ಕಾರ್ಮಿಕರೆ ಹೆಚ್ಚು. ಹೊಸಪೇಟೆಯ ಆಣೆಕಟ್ಟು ಕಟ್ಟಿದಾಗ,ಭದ್ರಾವತಿ ಕಬ್ಬಿಣ ಕಾರ್ಖಾನೆ ಶುರುವಾದಾಗ,ಕೋಲಾರದ ಬಂಗಾರದ ಗಣಿ ಅಗಿಯಲು ಬಂದವರು ಕನ್ನಡೇತರರು. ಅದಕ್ಕಾಗಿಯೆ ಕೋಲಾರದಲ್ಲಿ ತೆಲುಗು  ಮಲೆಯಾಳಿ, ಉರ್ದು  ಮತ್ತು ತಮಿಳು ಪ್ರಾಥಮಿಕ ಶಾಲೆಗಳೂ ಇದ್ದವು.ಹೈಸ್ಕೂಲಿನಲ್ಲಿ ತಮಿಳು ಕೂಡಾ ಒಂದು ಭಾಷೆಯಾಗಿ ಕಲಿಯಲು  ಅವಕಾಶವಿದೆ. ಕೋಲಾರ ಜಿಲ್ಲೆಯ್ಲಿ ಬಹುತೇಕರು ದ್ವಿಭಾಷಾ ಪ್ರವೀಣರು. ಮನೆ ಮಾತು ಸಾಧಾರಣವಾಗಿ ತೆಲುಗು. ಕೆ ಜಿಎಫ್‌ ಮಾತ್ರ ಅಪವಾದ. ಅಲ್ಲಿ ಎಲ್ಲ ತಮಿಳುಮಯ. ಕೆಜಿಎಫ್‌ಗೆ ಬರುವಾಗಲೆ ನನಗೆ ಮುನ್ನೆಚ್ಚರಿಕೆ ನೀಡಲಾಯಿತು. ಇಲ್ಲಿನ ಜನ ಒರಟರು. ಗುಂಡಾಗಿರಿಗೆ  ಹೆಸರುವಾಸಿ. ಪರೀಕ್ಷೆಯಲ್ಲಂತೂ ಅವರನ್ನು ಹಿಡಿಯುವವರೆ ಇಲ್ಲ. ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗಿ. ಕಂಡರೂ ಕಾಣದಂತೆ ಇದ್ದರೆ ಬಚಾವು.  ನಿಯಮ , ನೀತಿ ಎಂದರೆ ಇಲ್ಲದ ಫಜೀತಿ .  ಬಿಲ್ಲು ಬೆಲ್ಲು ಎಂದು ಅರಾಮಾಗಿರಿ. ಯಾರೂ ನಿಮ್ಮ ತಂಟೆಗೆ ಬರುವುದಿಲ್ಲ ಎಂದೆಲ್ಲ ಮಾಹಿತಿ ನೀಡಿದ್ದರು.
 ಅವರ ಮಾತು ಕೇಳಿ ನಾನು ಮುಗಳ್ನಕ್ಕೆ. ನಾನು ಒಂದು ರೀತಿಯಲ್ಲಿ  ಶುಚಿ ಮಾಡುವ ಹಕ್ಕಿ. ಎಲ್ಲಿ ಹೊಲಸು ಕಂಡರೂ ಅದು ನನ್ನ   ವ್ಯಾಪ್ತಿಯಲ್ಲಿದ್ದರೆ ಸರಿಮಾಡದೆ ಬಿಡದವನು. ಹಿಂದಿನ ಕಾಲೇಜಿನ ಅನುಭವ ಇಲ್ಲಿ ದಾರಿ ದೀಪವಾಗುವುದು ಎಂದು ಕೊಂಡೆ.
 ಕೆಲಸಕ್ಕೆ ವರದಿ ಮಾಡಿದ ಕ್ಷಣವೆ ನಾನು ಗಮನಿಸಿದ್ದು ಪ್ರಾಂಶುಪಾಲರ ಕಚೇರಿಯನ್ನು ಅವರು ಓರಣ ವಾಗಿಟ್ಟ ರೀತಿ. ನನಗೆ ಗೊತ್ತಿದ್ದಂತೆ ಅಲ್ಲಿ ನಿವೃತ್ತರಾದವರು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು. ಇಲ್ಲಿ ನೋಡಿದರೆ  ಪ್ರಾಂಶುಪಾಲರ ಕೋಣೆಯಲ್ಲಿ ವೆಂಕಟೇಶ್ವರ, ಸರಸ್ವತಿ ಮತ್ತು ಗಣೇಶ ರ ದೊಡ್ಡ ಫೋಟೋಗಳು ರಾರಾಜಿಸುತ್ತಿವೆ. ಜತೆಗೆ ಅವಕ್ಕೆ ಗಂಧದ ಹಾರ, ಮುಂದೆ ಸುಗಂಧ ಬೀರುವ ಊದುಬತ್ತಿ.ಜತೆಗೆ ಪಕ್ಕದ  ಗೋಡೆಯ ಮೇಲೆ ಗಾಂಧೀಜಿ ಮತ್ತು ವಿವೇಕಾನಂದರ ಪೋಟೋಗಳು. ನನಗೆ ಅಚ್ಚರಿಯಾಯಿತು. ಹಿಂದಿನ ಪ್ರಾಂಶುಪಾಲರ ಪರಧರ್ಮ ಸಹಿಷ್ಣತೆಯ ಬಗ್ಗೆ. ಮೆಚ್ಚಿಗೆ ಸೂಚಿಸಿದೆ.ಅಲ್ಲಿರುವ ಗುಮಾಸ್ತರು. ಇಲ್ಲ ಸಾರ್‌,
ಹಿಂದಿನ ವರು.  ದೇವರ ಫೋಟೋಗಳನ್ನು ತೆಗೆಸಿಹಾಕಿದ್ದರು. ಅವರಿಗೆ ಮೊದಲಿದ್ದವರು ಇವನ್ನು ತರಿಸಿದ್ದರು.   ನೀವು ಬರುವ ಆದೇಶ ಬಂದ ಮೇಲೆ ನಾವೆ ಮೊದಲಿನಂತೆ ಹಾಕಿದ್ದೇವೆ. ಎಂದರು. ಅವರು ನನಗೆ ಖುಷಿಯಾಗಲಿ ಎಂದು ಬದಲಾವಣೆ ಮಾಡಿದ್ದರು.
ನಾನು ಅವರಿಗೆ ಮಹಾತ್ಮ ಗಾಂಧಿ,ಅಂಬೇಡ್ಕರ್‌ ಮತ್ತು  ವಿವೇಕಾನಂದರ ಚಿತ್ರಗಳನ್ನು ಮಾತ್ರ ನನ್ನ ಛೇಂಬರ್‌ನಲ್ಲಿ ಹಾಕಿ ದೇವರ ಫೋಟೋಗಳನ್ನು ಪಕ್ಕದಲ್ಲೆ ಇದ್ದ  ಗುಮಾಸ್ತರ ಕೋಣೆಯಲ್ಲಿ ಹಾಕಲು ಹೇಳಿದೆ. ನಂತರ ದಿನದ  ಪೂಜೆ ಪುನಸ್ಕಾರದ ಅಗತ್ಯ ಇಲ್ಲವೆಂದು, ಸೂಚಿಸಿದೆ.
ಪ್ರಾಂಶುಪಾಲರ ಆಸನದ ಹಿಂಭಾಗದ ಗೋಡೆಯಮೇಲೆ ವಿವೇಕಾನಂದರ ಮತ್ತು ಎದುರಿನ ಗೋಡೆಯ ಮೇಲೆ ಮಹಾತ್ಮ ಗಾಂಧಿಯವರ ಫೋಟೋ ಪಕ್ಕದಲ್ಲಿ ಅಂಬೇಡ್ಕರ್‌ ತೂಗುಹಾಕಿಸಿದೆಕೆಲವರ ಮುಖದಲ್ಲಿ ಅಸಮಧಾನದ ಗೆರೆ ಸುಳಿದತೆ ಕಂಡಿತು.
ನಾನು ಸಹಿ ಮಾಡಿ ಕುರ್ಚಿಯಲ್ಲಿ ಕುಳಿತಿರುವಂತೆಯೆ ಬಂದ ದ್ದು  ವೃತ್ತಿ ಶಿಕ್ಷಣ  ಕಾಂಪ್ಯೂಟರ್‌ ವಿಜ್ಞಾನದ ಪ್ರವೇಶದ ವಿಷಯ. ಹಿಂದಿನ ಪ್ರಾಂಶುಪಾಲರು ನಿವೃತ್ತರಾದ ದಿನ ರಾತ್ರಿಯೇ  ಆಯ್ಕೆ ಪಟ್ಟಿಯನ್ನು ಸಿದ್ಧಮಾಡಿ ಮಾರನೆ ದಿನ ಪ್ರಕಟಿಸಲು ತಿಳಿಸಿದ್ದರು. ಅಭ್ಯರ್ಥಿಗಳ  ಅಯ್ಕೆಯನ್ನು ಪ್ರವೇಶ ಪರೀಕ್ಷೆಯ ಆಧಾರದ ಮೇಲೆ ಮಾಡಿದ್ದರು.ಸಂಬಂಧಿಸಿದ ಕಡತ ತರಿಸಿ ಪರಿಶಿಲಿಸ ತೊಡಗಿದೆ. ಅಷ್ಟರಲ್ಲಿ ಹೊರಗೆ ಸುಚನಾಫಲಕದ ಮುಂದೆ ಗಲಭೆಯಾಯಿತು.
ವಿಚಾರಿಸಲಾಗಿ ಅಯ್ಕೆ ಪಟ್ಟಿಯಲ್ಲಿ ಹೆಸರಿಲ್ಲದ ವರು ಅವ್ಯವಹಾರವಾಗಿದೆ. ಹಣ ಕೊಟ್ಟವರಿಗೆ ಸೀಟು ಕೊಡಲಾಗಿದೆ ಎಂದು ದೂರುತ್ತಿರುವುದು ಗೊತ್ತಾಯಿತು.  ನನಗೆ ಸಂದಿಗ್ಧವಾಯಿತು.ಸಂಬಂಧಿಸಿದ ಉಪನ್ಯಾಸಕರನ್ನು ಮತ್ತು ಗುಮಾಸ್ತರನ್ನೂ ಈ ಅಪಾದನೆಯಬಗ್ಗೆ  ಮಾಹಿತಿನೀಡಲು ಕೇಳಿದೆ.
ಅವರು ತುಸು ಹಿಂದು ಮುಂದು ನೋಡಿದರು. ನಂತರ ಬಾಯಿಬಿಟ್ಟರು.ಮೂವತ್ತು ಜಾಗೆಗಳಿಗೆ ೧೦೦ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅದಕ್ಕಾಗಿ ಪ್ರವೇಶ  ಪರೀಕ್ಷೆ ನಡೆಸಿ ಅಲ್ಲಿ  ಪಡೆದ ಅಂಕೆಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು. ಅವರು ಯಾರಿಗೂ ಅನ್ಯಾಯ  ಆಗಬಾರದೆಂದು ಈ ಕ್ರಮ ಅನುಸರಿಸಿದ್ದರು. ಆದರೂ ಸೀಟು ದೊರಕದವರು  ಹಣ ಕೊಟ್ಟವರಿಗೆ ಸೀಟು ಕೊಡಲು ಪರೀಕ್ಷೆಯನ್ನು ಸಾದನ ವಾಗಿಸಿಕೊಂಡದ್ದಾರೆ. ಒಂದೆ ವರ್ಗದವರಿಗೆ ಹೆಚ್ಚುಸ್ಥಾನ ನೀಡಿದ್ದಾರೆ ಎಂದು ಬಲವಾಗಿ ವಾದಿಸಿದರು..
ನಿವೃತ್ತರಾದವರ ಮೇಲೆ ಅವರು ಮಾಡುತ್ತಿರುವ ಆಪಾದನೆಯಿಂದ ಇರಸು ಮುರಸಾಯಿತು. ನಾನು ಏನೂ ಮಾಡುವ ಹಾಗಿರಲಿಲ್ಲ. ಪ್ರವೇಶದ ಬಗೆಗಿನ ಸುತ್ತೋಲೆ ತರಿಸಿ ನೋಡಿದೆ. ಅದರಲ್ಲಿ ಪ್ರವೇಶ ಪರೀಕ್ಷೆ  ಮಾಡುವುದನ್ನು ನಿಷೇಧಿಸಿತ್ತು. ಅಲ್ಲದೆ ಸೀಟುಗಳನ್ನು ರೋಸ್ಟರ್‌ ಪ್ರಕಾರ  ಅವರು ಎಸ್‌.ಎಸ್‌.ಎಲ್. ಸಿ ಪರಿಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೆಲೆ ಸೀಟು ಕೊಡಲು ಸ್ಪಷ್ಟ  ಸೂಚನೆ ಇತ್ತು. ಅರ್ಜಿಗಳನ್ನು ಪರಿಶೀಲಿಸಲಾಗಿ ಎಸ್‌ಎಸ್‌ಎಲ್‌ಸಿ ಪರಿಕ್ಷೆಯಲ್ಲಿ ೭೫% ಅಂಕ ಬಂದವರಿಗೆ ಸೀಟು ಸಿಕ್ಕಿರಲಿಲ್ಲ. ಬರಿ ೪೫% ಬಂದವರಿಗೂ ದೊರಕಿತ್ತು. ಕಾರಣ ಅವರು ಪ್ರವೇಶ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿದ್ದರು.
ವಿಷಯವನ್ನು ಗಮನಿಸಿದೆ. ಇಲ್ಲಿ ನೈಸರ್ಗಿಕ ನ್ಯಾಯ ಕೆಲಸ ಮಾಡಿರಲಿಲ್ಲ. ನಿಯಮಾವಳಿಗಳ ಉಲ್ಲಂಘನೆ ಯಾಗಿತ್ತು. ಮೀಸಲಾತಿ ಫಾಲಿಸಿರಲಿಲ್ಲ. ಅನಿವಾರ್ಯ ವಾಗಿ ಆಯ್ಕೆಯ ಪಟ್ಟಿಯನ್ನು ತಡೆ ಹಿಡಿಯಲಾಯಿತು.  ಆಯ್ಕೆ ಪಟ್ಟಿಯನ್ನು ಮೂರುದಿನದಲ್ಲಿ ಪ್ರಕಟಿಸುವುದಾಗಿ ಸೂಚನೆ ನೀಡಲಾಯಿತು.
 ನಂತರ  ಸಂಬಂಧಿಸಿದವರಿಗೆ ಎಲ್ಲ ಅರ್ಜಿಗಳನ್ನೂ ಅವರ ಜಾತಿ ಮತ್ತು ವರ್ಗದ ಮೇರೆಗೆ ವಿಂಗಡಿಸಿ ನಂತರ ಅವರು ಪಡೆದ ಅಂಕಗಳ ಆಧಾರದ ಮೇಲೆ  ಅರ್ಹತಾಪಟ್ಟಿ ತಯಾರಿಸಲು ತಿಳಿಸಲಾಯಿತು.

 ಇರುವ ೩೦ ಸೀಟುಗಳನ್ನು ಪ. ಜಾತಿ.  ಪ. ಪಂಗಡ, ಎ , ಬಿ , ಸಿ ಮತ್ತು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿದ  ಪ್ರಮಾಣದಲ್ಲಿ ಹಂಚಬೇಕು. ನಿಗದಿ ಪಡಿಸಿದ  ಗುಂಪಿನಲ್ಲಿ  ಅರ್ಜಿದಾರರ ಸಂಖ್ಯೆ ಕಡಿಮೆ ಇದ್ದರೆ ಸಮಸ್ಯೆಯೆ  ಇಲ್ಲ. ಎಲ್ಲರಿಗೂ ಸಿಗುವುದು.ಹೆಚ್ಚಾಗಿದ್ದರೆ  ತಲೆನೋವು. ಅದೂ  ಪ. ಜಾತಿಯವರಾದರೆ ಅವರಿಗೆ ನ್ಯಾಯದೊರಕುವಂತೆ  ನೋಡಿಕೊಳ್ಳುವುದು  ಆದ್ಯ ಕರ್ತವ್ಯ. ೧೫%  ಮೀಸಲಾತಿ ಇದ್ದರೆ ಮೂವತ್ತ ರಲ್ಲಿ ಅವರಿಗೆ ದೊರೆಯುವುದ ೪.೫ ಎಲ್ಲಾದರೂ ಅರ್ಧ ಸೀಟು ಕೊಡುವುದು ಸಾಧ್ಯವೆ.?  ಅದಕ್ಕೆ ಅವರಿಗೆ ೪ಸೀಟು ಕೊಡಲಾಗವುದು.ಅವರಲ್ಲಿ ಅಕಸ್ಮಾತ್‌ ೮೦% ೭೦% ಪಡೆದ ವಿದ್ಯಾರ್ಥಿ ಇದ್ದರೆ ಅವರಿಗೆ ಸುಲಭ ವಾಗಿ ಅವರ ಗುಂಪಿನಲ್ಲಿ ಸೀಟು ಸಿಗುವುದು. ಆದರೆ ಉಳಿದವರಿಗೆ ಸಿಗದು. ಹೀಗಾಗದಿರಲೆಂದು ಒಂದು ಸೂಕ್ಷ್ಮ ಸೂಚನೆ ಇದೆ. ಅಕಸ್ಮಾತ್‌ ಅವರಲ್ಲಿ ಹೆಚ್ಚಿನ ಅಂಕ ಪಡೆದವರು ಇದ್ದರೆ ಅವರನ್ನು ಸಾಮಾನ್ಯ ವರ್ಗದವರೆಂದು ಪರಿಗಣಿಸಬೇಕು. ಮತ್ತು ಆ ವರ್ಗದಲ್ಲಿನ ಇತರರಿಗೆ ಸೀಟು ಹಂಚಬೇಕು. ಈ ವಿವರವನ್ನು ಬೇಡಿಕೆ ಇರುವ ಕೋರ್ಸುಗಳಲ್ಲಿ  ಗಮನಿಸುವುದು ಅತಿ ಅಗತ್ಯ. ಆದರೆ ಅನೇಕರು ಯಾವುದೋ ಹಿತಾಸಕ್ತಿಯಿಂದ ಈ ಅಂಶವನ್ನು  ಕಡೆಗಣಿಸುವರು.   ಕೆಜಿಎಫ್‌ನಲ್ಲಿ ಪರಿಶಿಷ್ಟ ಜಾತಿಯವರು ಬಹು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅವರಿಗೆ ನ್ಯಾಯ ಒದಗಿಸುವುದು ಉಚಿತವಾಗಿತ್ತು. ಆ ಬಾರಿ ಪರಿಶಿಷ್ಟ ಜಾತಿಯವರಿಗೆ ೩೦  ಸ್ಥಾನಗಳಲ್ಲಿ ೧೩ ಸ್ಥಾನ ದೊರಕಿತು.ಸರಕಾರವು ಸಾಮಾಜಿಕ ನ್ಯಾಯ ಒದಗಿಸಲು ಮಾಡಿದ ನಿಯಮ  ಸರಿಯಾಗಿ ಪಾಲನೆಯಾಗದಿರುವುದೆ   ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನ ಬಹುದು.  ಈ ಘಟನೆಯಿಂದ  ಸಂಸ್ಥೆಗೆ ಮತ್ತು ನನಗೆ ಒಂದು ರೀತಿಯ ಅನುಕೂಲವೂ ಆಯಿತು. ಪ್ರಾಂಶುಪಾಲರು ಹಿಂದುಳಿದವರ ಹಿತ ಕಾಪಾಡುವರು ಎಂಬ ನಂಬಿಗೆ ಅವರಲ್ಲಿ ಬಲವಾಗಿ ಬೆರೂರಿತು.. ಸಾಧಾರಣವಾಗಿ  ಕೋಲಾರ ಜಿಲ್ಲೆಯಲ್ಲಿ ಅನ್ಯ ಜಾತೀಯ ಅಧಿಕಾರಿಗಳಿಗೆ ಸಿಂಹ ಸ್ವಪ್ನ ವಾಗಿರುವ   ಪ್ರಗತಿ ಪರ ಸಂಘಟನೆಗಳು ನನ್ನ  ಎಲ್ಲ ಕೆಲಸಗಳಿಗೂ  ಒತ್ತಾಸೆ  ನೀಡಿದವು.

No comments:

Post a Comment