Saturday, May 4, 2013

ವೀಣಾಳ ವೈಫಲ್ಯಕ್ಕೆ ಕಾರಣ




  ಅಮ್ಮಾ! ನನ್ನ  ಕೂಡೆ  ಮಾತನಾಡೆ. 
ನಿವೃತ್ತನಾದ ಮೇಲೆ ಎರಡು ವರ್ಷ ಶಾಲಾ ಸಮೂಹಗಳಿಗೆ ವಿಶೇಷ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದೆ. ಅದರಲ್ಲೂ ಅವರ ಕಾನ್ವೆಂಟ್‌ ಗೆ ವಿಶೇಷ ಗಮನ ನೀಡಬೇಕಿತ್ತು.ಅಲ್ಲಿ  ಶಿಶು ವಿಹಾರದಿಂದ ಪ್ರೌಢ ಶಾಲೆಯವರೆಗೆ  ತರಗತಿಗಳು ಇದ್ದವು.ಶಾಲೆ ಸುಸಜ್ಜಿತವಾಗಿತ್ತು. ಅವರದೆ ಆದ ಬಸ್ಸುಗಳಿದ್ದವು. ಅದರಿಂದ ಸುತ್ತ ಮುತ್ತಲಿನ ಹಳ್ಳಿಯಯಿಂದ ಸಹಾ ಮಕ್ಕಳು ಬರುತ್ತಿದ್ದರು. ನಾನು ಹೋದ ಮೊದಲ ವರ್ಷ ವಿಶೇಷ ಕಾಳಜಿ ವಹಿಸಿದೆವು. ಎಸ್  ಎಸ್ ಎಲ್‌ ಸಿ ಯಲ್ಲಿ  ೧೦೦% ಫಲಿತಾಂಶ ಬಂದಿತು. ಬಹುತೇಕ ಮಕ್ಕಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದರು.ಆ ಮಟ್ಟವನ್ನೆ ಕಾಪಾಡಿಕೊಂಡು ಹೋಗುವ ಹಂಬಲ ನಮಗಿತ್ತು. ಅದರಿಂದ ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿದೆವು. ಹತ್ತನೆ ತರಗತಿಯ ಮಕ್ಕಳಿಗೆ ಪ್ರತಿ ತಿಂಗಳೂ ಪರೀಕ್ಷೆ ಮಾಡಿ ಅವರ ಪ್ರಗತಿ ಪರಿಶೀಲಿಸಲಾಗುತಿತ್ತು . ಎಲ್ಲ ಮಕ್ಕಳೂ ಆಸಕ್ತಿ ಯಿಂದ ಅಭ್ಯಾಸ ಮಾಡುತ್ತಿದ್ದರು. ಆ ಮಕ್ಕಳಲ್ಲಿ  ವಾಣಿ ಎಂಬ ಹುಡುಗಿಯ  ಪ್ರಗತಿ  ಕುಸಿಯುತ್ತಲೆ ಹೊಯಿತು.ಅಂಕಗಳು ಕಡಿಮೆಯಾಗುತ್ತಲೆ ಸಾಗಿದವು. ಅವಳು ನಿಜವಾಗಿಯೂ ಜಾಣೆ. ಹಿಂದಿನ ತರಗತಿಯಲ್ಲಿ ಮೊದಲ  ತಪ್ಪಿದರೆ ಎರಡನೆ ಸ್ಥಾನದಲ್ಲ್ಲಿ ಇರುತಿದ್ದಳು. ಅರ್ಧ ವಾರ್ಷಿಕ ಪರೀಕ್ಷೆಯಲ್ಲಂತೂ ಪಾಸು ಮಾರ್ಕ ಪಡೆಯುವುದಕ್ಕೂ ಹೆಣಗಾಡಿದ್ದಳು.  ಇದೇ ಮುಂದು ವರೆದರೆ ನಮ್ಮ ದಾಖಲೆಯ ಫಲಿತಾಂಶ ಪಡೆಯುವುದು  ಕನಸು  ಎನಿಸಿತು.  ಅವರ ಕ್ಲಾಸ್‌ ಮಿಸ್‌ ಅನ್ನು ಕರೆದು ಚರ್ಚಿಸಿದೆ. ಅವರಿಗೂ ಅಚ್ಚರಿಯಾಗಿತ್ತು. ಅವಳು ಮಗುವಾಗಿದ್ದಾಗಲಿಂದಲೂ ನಮ್ಮ ಸಂಸ್ಥೆಯಲ್ಲೆ ಓದಿದ್ದಾಳೆ. ಯಾವಾಗಲೂ ಚುರುಕಾಗಿಯೇ ಇದ್ದಳು. ಹತ್ತನೆ ತರಗತಿಗೆ ಬಂದಾಗ ದಿನೆ ದಿನೇ ಅವಳ ಸಾಧನೆ ಕಳಪೆಯಾಗುತ್ತಾ ಸಾಗಿತ್ತು.
ತರಗತಿಯಲ್ಲಿಯೂ ಮೊದಲಿನಂತೆ ಚುರುಕಾಗಿಲ್ಲವೆಂದು ತಿಳಿಯಿತು. ಹಾಜರಿ ಏನೋ ಸರಿಯಾಗಿಯೆ ಇತ್ತು. ಗೃಹ ಪಾಠಗಳನ್ನೂ ತಕ್ಕ ಮಟ್ಟಿಗೆ ಮಾಡಿಕೊಂಡು ಬರುತ್ತಿದ್ದಳು.ತರಗತಿಯಲ್ಲಿ ಸುಮ್ಮನೆ ಹೇಳಿದ್ದನ್ನು ಕೇಳುತಿದ್ದಳುತರಲೆ ತಾಪತ್ರಯದ ದೂರು ಇರಲಿಲ್ಲ.ನಮ್ಮ ಮುಖ್ಯೋಪಾಧ್ಯಾಯರನ್ನು ಕರೆದು ವಿಚಾರಿಸಿದೆ.
ವೀಣಾ ,ಬುದ್ದಿವಂತೆ. ಗಲಾಟೆಯ  ಹುಡುಗಿಯಲ್ಲ . ಅವಳ ಅಕ್ಕ ವಾಣಿಯೂ  ನಮ್ಮ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಅವಳು ಹತ್ತನೆ ತರಗತಿಯಲ್ಲಿ  ಶಾಲೆಗೆ ಪ್ರಪ್ರಥಮ  ಸ್ಥಾನ ಪಡೆದ ಪ್ರತಿಭಾನ್ವಿತೆ. ಮನೆಯಲ್ಲಿಯೂ ಉತ್ತಮ ವಾತಾವರಣವಿದೆ. ತಂದೆ ತಾಯಿ ಇಬ್ಬರೂ ಸುಶಿಕ್ಷಿತರು. ತಾಯಿ ಮಾಧ್ಯಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ. ತಂದೆಯೂ ಶಿಕ್ಷಕರು.ಇಬ್ಬರೆ ಹೆಣ್ಣು ಮಕ್ಕಳು . ಮನೆಯಿಂದ  ಅನುಕೂಲವಾಗಿಯೆ ಇದ್ದಾರೆ ಎಂ ಮಾಹಿತಿ  ಅವರಿಂದ   ದೊರೆಯಿತು
ನನಗೆ ಬುದ್ದಿವಂತ  ಹುಡುಗಿಗೆ ಒಮ್ಮಿಂದೊಮ್ಮೆ ಹೀಗೇಕೆ ಆಯಿತು ಎಂದು  ತಿಳಿಯದಾಯಿತು. ಅವಳನ್ನೆ ನನ್ನಲ್ಲಿಗೆ ಕರೆಸಿದೆ
ಏನಮ್ಮ ವಾಣಿ ನಿನಗೆ ಏನು ತೊಂದರೆ, ಏಕೆ ಬಹಳ ಕಡಿಮೆ ಅಂಕಗಳು ಬಂದಿವೆ.?
ಅವಳು ಮೌನವಾಗಿ ತಲೆ ತಗ್ಗಿಸಿ ನಿಂತಳು.
ತರಗತಿಯಲ್ಲಿನ ಪಾಠ  ನಿನಗೆ ಸರಿಯಾಗಿ ಕಲಿಯಲು ಸಮಸ್ಯೆಯಗಿದೆಯಾ?   ಪಾಠ ಚೆನ್ನಾಗಿ ಅರ್ಥವಾಗುವುದು ತಾನೆ ? ಬೇಕಾದರೆ ವಿಶೇಷ ಕಾಳಜಿ ವಹಿಸಲು ಹೇಳುವೆ,
ತೊಂದರೆ ಇಲ್ಲ  ಸಾರ್‌, ಎಲ್ಲರೂ ಮನ ಮುಟ್ಟುವಂತೆ ಪಾಠ ಮಾಡುತ್ತಾರೆ.ನಾನೂ ಮನೆಯಲ್ಲಿ ಓದುತ್ತೇನೆ. ಆದರೆ ಏಕೋ ಪರೀಕ್ಷೆ ಬಂದಾಗ ಬರೆಯಲೆ ಅಗುವುದಿಲ್ಲ. ಎಂದು ಅಳತೊಡಗಿದಳು.

ಅಳ ಬೇಡ.   ಪರಿಹಾರ ಹುಡಕೋಣ, ಶ್ರಮ ವಹಿಸಿ ಶ್ರದ್ಧೆಯಿಂದ ಆಭ್ಯಾಸ ಮಾಡಿದರೆ ಎಲ್ಲ ಸರಿಹೋಗುವುದು. ಮನೆಯಲ್ಲಿ ಓದಲು ಸಾಕಷ್ಟು ಸಮಯ ಇಲ್ಲದಿರಬಹುದು. ನಿಮ್ಮ ಅಪ್ಪ ಅಮ್ಮನನ್ನು ಕರೆದುಕೊಂಡು ಬಾ  ವಿಚಾರಿಸುವೆ,
 ನಮ್ಮ ತಂದೆ  ಕರೆದರೆ ಬರುತ್ತಾರೆ ಸಾರ್‌ , ಅಮ್ಮನಿಗೆ ಬರಲಾಗುವುದಿಲ್ಲ , ಎಂದಳು.
ಸರಿ , ನಿಮ್ಮ ಅಪ್ಪನನ್ನೆ ನಾಳೆ ಕರೆದುಕೊಂಡು ಬಾ , ಮಾತನಾಡೋಣ . ನೀನು ಯಾವುದಕ್ಕೂಗಾಬರಿಯಾಗಬೇಡ,  ಸಮಧಾನ ಮಾಡಿ ಕಳುಹಿಸಿದೆ.
ಮಾರನೆ  ದಿನ ಸಂಜೆ ಅವಳ ತಂದೆ ಬಂದರು.ಅವರು ಬಹು ಮೆದು ಸ್ವಭಾವದವರಂತೆ ಕಂಡರು. ಅವರಿಗೂ ಮಗಳು ತರಗತಿಯಲ್ಲಿ  ಹಿಂದೆ ಬಿದ್ದಿರುವುದು ಗೊತ್ತಿತ್ತು. ಅವರೊಬ್ಬರನ್ನೆ ಕೂಡಿಸಿಕೊಂಡು  ವಾಣಿಯ ಸಮಸ್ಯೆ  ಏನು ಎಂದು ಕೇಳಿದೆ. ಯಾವುದೆ ಸಮಸ್ಯೆ ಇಲ್ಲ.  ಅವಳು ಯಾವುದೆ ತರಲೆ  ಮಾಡದೆ ಸದಾ ಪುಸ್ತಕ ಹಿಡಿದೆ ಕೂತಿರುವಳು. ಮನೆಯಲ್ಲಿ  ಕೆಲಸವನ್ನೂ ಹೇಳುವುದಿಲ್ಲ, ಎಂದರು.
ಅಲ್ಲ ಸ್ವಾಮಿ ವಾಣೀ ದಡ್ಡಳಂತೂ ಅಲ್ಲ. ಮನೆಯಲ್ಲಿಯೂ ಚೆನ್ನಾಗಿ ಓದುತ್ತಿದ್ದಾಳೆ ಎಂದು ನೀವೆ ಹೇಳುತ್ತೀರಿ. ಇಷ್ಟು ದಿನ ೭೦ -೮೦%  ಅಂಕ ಪಡೆದವಳಿಗೆ ಈಗ ಯಾಕೆ ಪರೀಕ್ಷೆಯಲ್ಲಿ  ಸರಿಯಾದ ಅಂಕಗಳು ಬರುವುತ್ತಿಲ್ಲ ?
ಅದೇ ನಮಗೂ ಚಿಂತೆಯಾಗಿದೆ, ಅವಳು ಬಾಯಿ ಬಿಡುವುದೆ ಇಲ್ಲ.ಎಂದುತಲೆ ತಗ್ಗಿಸಿದರು.
ಹೆಣ್ಣು ಮಗು, ಏನು ತೊಂದರೆಯೋ ಏನೋ , ನಿಮ್ಮ ಮನೆಯವರನ್ನು  ಗಮನ ಕೊಡಲು  ತಿಳಿಸಿ. ತಾಯಿಯ ಎದುರಿಗೆ ಮನ ಬಿಚ್ಚಿ ಮಾತನಾಡಬಹುದು.
ತಾಯಿ ಮಗಳು ಮಾತನಡುವುದು ಬಿಟ್ಟು  ಮೂರು ತಿಂಗಳ ಮೇಲಾಗಿದೆ. ಅವರು ಉತ್ತರಿಸಿದರು
 ನನಗೆ ಸಮಸ್ಯೆ ಯಾಕೋ ಗಂಭೀರವಾಗಿದೆ ಎನಿಸಿತು.
ಇದೇನು ವಿಚಿತ್ರ ಮಗಳ ಜತೆ ಮಾತನಾಡುವುದಿಲ್ಲ ಎಂದರೆ ಏನರ್ಥ ? ನಾನು ತುಸು ಗಡುಸಾಗಿಯೆ ಕೇಳಿದೆ.
 ನೋಡಿ  ಸಾರ್‌  , ನಮಗೆ ಇರುವುದೆ ಎರಡು ಹೆಣ್ಣು ಮಕ್ಕಳು. ಆಸ್ತಿ ಸ್ವಾಸ್ಥಿ ಅಂತ ಏನೂ ಇಲ್ಲ. ನಾವು.ಇಬ್ಬರೂ ಕೆಲಸ ಮಾಡುತ್ತೇವೆ. ಜೀವನ ಆರಾಮಗಿದೆ. ನಮ್ಮ ಮನೆಯವರಿಗೆ ಮಕ್ಕಳನ್ನು ಚೆನ್ನಾಗಿ ಓದಿಸ ಬೇಕೆಂಬ ಆಶೆ. ಹಿರಿಯ ಮಗಳು ವೀಣಾ  ಎಸ್ ಎಸ್‌ ಎಲ್‌ ಸಿ ನಿಮ್ಮ ಶಾಲೆಯಲ್ಲಿಯೇ  ಓದಿದಳು. ಶಾಲೆಗೆ  ಫಸ್ಟ್ ಬಂದಿದ್ದಳು. ಅವಳನ್ನು ತಲೆಯ ಮೆಲೆ ಇಟ್ಟುಕೊಂಡು ಕುಣಿದೆವು. ಒಳ್ಳೆ ಕಾಲೇಜಿಗೆ ಡೊನೇಷನ್‌ ಕೊಟ್ಟು ಪಿ ಯು.ಸಿ ಸೇರಿಸಿದೆವು ಟ್ಯೂಷನ್ ಹೇಳಿಸಿದೆವು. ಇಂಜನಿಯರ್‌ ಮಾಡಬೇಕೆಂದು ನಮ್ಮವಳ ಆಶೆ. ಆದರೆ ಅವಳು ಬರಿ ಸೆಕೆಂಡ್‌ ಕ್ಲಾಸಿನಲ್ಲಿ ಪಾಸಾದಳು. ಈಗ ಬಿಎಸ್ಸಿ ಕೊನೆ ವರ್ಷ. ಅದಕ್ಕೆ ಅವಳ ತಾಯಿಗೆ  ತುಂಬ  ನಿರಾಶೆಯಾಯಿತು ಅವಳ ಜತೆ ಮಾತೇ ಆಡುವುದಿಲ್ಲ. ಇವಳಾದರೂ ಚೆನ್ನಾಗಿ ದಲಿ ಎಂದು ಅವರ ಹಂಬಲ ಆದರೆ ಇವಳಿಗೂ  ಹತ್ತನೆ ತರಗತಿಗೆ ಬಂದ ಕೂಡಲೆ ಏನಾಯಿತೋ ಏನೊ   ಮೊದಲ ತಿಂಗಳ ಪರೀಕ್ಷೆಯಲ್ಲಿಯೇ ಕಡಿಮೆ ಅಂಕ ಪಡೆದಳು ನಮ್ಮವರು ಕೋಪಗೊಂಡರು. ಅವಳನ್ನು ದಂಡಿಸಿದರು.ವೀಣಾ ಆದರೂ ಸಮಾಧಾನವಾಗಿ  ಮಾತನಾಡಿ  ಅವರಿಗೆ ಭರವಸೆ ನೀಡಲಿಲ್ಲ. ಅವರು ಈ ಮಕ್ಕಳಿಂದ  ಏನೂ ಬಯಸುವುದು ಬೇಡ. ನಮ್ಮ ಕರ್ಮ. ಇದ್ದಷ್ಟು ದಿನ ದುಡಿಯೋಣ. ಆಮೇಲೆ ದೇವರಿಟ್ಟಂತೆ ಆಗಲಿ ಎಂದು ಅವರ ಜತೆ ಮಾತನಾಡುವುದನ್ನೆ ಬಿಟ್ಟರು.ನಾನು ಏನು ಹೇಳಿದರೂ ಸಮಧಾನ ಮಾಡಿಕೊಂಡಿಲ್ಲಹೀಗಾಗಿ ಮನೆಯಲ್ಲಿ ಮಕ್ಕಳ ಜತೆ ನಾನೊಬ್ಬನೆ ಮಾತನಾಡುವುದು. ಜತೆಗೆ ವೀಣಾಳ ಪ್ರಗತಿಯೂ ದಿನೇ ದಿನೇ ಇಳಿಮುಖ ವಾಗುತ್ತ  ಸಾಗಿದೆ.ನನಗೆ ದಿಕ್ಕೆ ತೋಚದಾಗಿದೆ , ಹಲುಬಿದರು
ನನಗೆ ವೀಣಾಳ ಸಮಸ್ಯೆಯ ಮೂಲ ಇರುವುದೆಲ್ಲಿ ಎಂ  ಸುಳಿವು ಸಿಕ್ಕಿತು.ಅವಳನ್ನು ಛೇಂಬರಿಗೆ ಕರೆಸಿದೆ.
ವೀಣಾ , ನಿಜ ಹೇಳು . ನೀನು ನಿಮ್ಮತಾಯಿಯ ಜತೆ ಮಾತನ್ನು ಆಡುವದಿಲ್ಲ.ಹೌದಾ ?
ಅವಳು ತಲೆ ಎತ್ತದೆ ಹಾಗೆ ನಿಂತಿದ್ದಳು. ನಿಮ್ಮ ತಂದೆ ಎಲ್ಲ ತಿಳಿಸಿದ್ದಾರೆ . ಸಂಕೋಚ ಬೇಡ. ನೀನು ಮಾಡುತ್ತಿರುವುದು ಸರಿಯಾ ? ಅಮ್ಮನನ್ನು ಏಕೆ ಮಾತನಾಡಿಸುವುದಿಲ್ಲ ? ಪ್ರಶ್ನಿಸಿದೆ.
ಅವರೆ ನನ್ನನ್ನು ಮಾತನಾಡಿಸ ಬೇಡ ಎಂದು ಹೇಳಿದ್ದಾರೆ. ನನಗೆ ಆಶೆ ಇದೆ. ಆದರೆ ಭಯ.ಕೈನಲ್ಲಿ  ಪುಸ್ತಕ ಇದ್ದರೂ  ಯಾವಾಗಲೂ  ಅದೆ ಯೋಚನೆ. ಎಂದಳು.
ಏನೋ ಕೋಪದಲ್ಲಿ ಹಾಗಂದಿರಬಹುದು. ಅದನ್ನು ಮರೆಯಬೇಕು. ನೀನು ಫಸ್ಟ್ ಕ್ಲಾಸ್‌ ಪಾಸಾದರೂ ಅವರ ಮಗಳು, ಅಕಸ್ಮಾತ್‌  ಅಗದಿದ್ದರೂ  ಅವರ ಮಗಳೆ . ಸಿಟ್ಟು ಸೆಡವುಗಳಿಂದ ಯಾರಿಗೂ ನೆಮ್ಮದಿ ಇರುವುದಿಲ್ಲ್ಲ.ನಗುನಗುತ್ತಾ ಇರಬೆಕು . ಒಪ್ಪಿಗೆ ತಾನೆ ? ಕೇಳಿದೆ.
ಅವರು ಹೇಗೆ ಹೇಳಿದರೆ ಹಾಗೆ,  ತಲೆ ಯಾಡಿಸಿದಳು 
ಮಾರನೆ ದಿನ ಅವರನ್ನೂ ಕರೆಸಿದೆ. ಅವರು ಸಂಕೋಚದಿಮದ ಬಂದು ಕುಳಿತರು. ಮೆಡಮ್‌ ನೀವು ನೂರಾರು ಮಕ್ಕಳಿಗೆ ಪಾಠ ಹೇಳುವವರು.ನಿಮಗೆ ತೀಳಿಯದ್ದು ಏನಿದೆ. ಮಗಳ ಮೇಲಿನ ನಿಮ್ಮ ಮಮತೆ ನನಗೆ ಅರ್ಥ ವಾಗಿದೆ.  ಮಗಳು ಛಲ ಹಿಡಿದು ಚೆನ್ನಾಗಿ ಓದಲಿ ಎಂಬ ಒಳ್ಳೆಯ ಉದ್ದೇಶದಿಂದ ಅವಳ ಜತೆ ಮಾತ ನಾಡುತ್ತಿಲ್ಲ.  ಅದರೆ ಅದರ ಪರಣಾಮ ನೀವು ಅಂದುಕೊಂಡದ್ದಕ್ಕೆ ವಿರುದ್ಧ ವಾಗಿದೆ. ಅವಳು ಮನದಲ್ಲೆ  ಕೊರಗುತ್ತಿರುವಳು. ಅದರಿಂದ. ಪಾಠ ಪ್ರವಚನ ತಲೆಗೆ ಹತ್ತುತ್ತಿಲ್ಲ. ಹೀಗೆಯೆ ಮುಂದುವರಿದರೆ ಫೇಲಾದರೂ ಅಶ್ಚರ್ಯವಿಲ್ಲ. ಅವಳ  ಇಂಜನಿಯರ್‌ ಆದರೆ ಮಾತ್ರ ಜೀವನ ಸಾರ್ಥಕ ಎನ್ನುವುದು ಸರಿಯಲ್ಲ. ಅಲ್ಲದೆ ಮಕ್ಕಳು ಒಳ್ಳೆಯರಾಗುವುದು ಮುಖ್ಯ. ಬರಿ ಪರೀಕ್ಷಾ ಫಲಿತಾಂಶ  ಎಲ್ಲ  ಅಲ್ಲ.  ಹಾಗೆಯೆ  ಉತ್ತಮ ಫಲಿತಾಂಶ   ಬರಲು ಹಲವು ಹನ್ನೊಂದು ಕಾರಣ ಇರಬಹುದು. ಅದೊಂದೆ  ಜೀವನ  ಅಲ್ಲ. ಹುಡುಗಿ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ. ಪ್ರಿತಿಯಿಂದ ಮಾತನಾಡಿಸಿ. ಎಲ್ಲ ಸರಿ ಹೊಗುವುದು, ಎಂದೆ
ಅವರ ಕಣ್ಣು ತುಂಬಿ ಬಂತು.  ನೀವೇ  ನಮ್ಮ ಹುಡುಗಿಯ ಬಗ್ಗೆ  ಇಷ್ಟು  ಕಳ ಕಳಿ ತೋರಿಸುತ್ತಿರುವಿರಿ .ಖಂಡಿತ ಇನ್ನು ನಾನು ಆವೇಶದಿಂಧ ವರ್ತಿಸುವುದಿಲ್ಲ.  ಎಲ್ಲ ನಗು ನಗುತ್ತಾ ಇರುತ್ತೇವೆ. ನಮ್ಮ ಯಜಮಾನರೂ  ಹೇಳಿದರು ಯಾಕೊ ನನಗೆ  ಮನಸ್ಸಿಗೆ ತಟ್ಟಿರಲಿಲ್ಲ.ನಿಮ್ಮ ಮಾತಿಗೆ ನನ್ನ ಒಪ್ಪಿಗೆ ಇದೆ. ಇಂದಿನಿಂದ ನಮ್ಮ ಮನೆಯ ವಾತಾವರಣ ಬದಲಾಗುವುದು.ವೀಣಳನ್ನು ಕರಸಿ ಈಗಲೆ  ಮಾತನಾಡುವೆ . ಎಂದರು .
ಜವಾನ ಹೋಗಿ ತರಗತಿಯಲ್ಲಿದ್ದ ವೀಣಾಳನ್ನು ಕರೆದು ತಂದ. ಅವಳು ಹಿಂಜರಿಕೆಯಿಂದಲೆ ಬಂದಳು.ಕುಳಿತಿದ್ದವರು ಎದ್ದು ನಿಂತು, ವೀಣಾ! ನೀನು ಪರೀಕ್ಷೆಯ ಚಿಂತೆ ಮಾಡಬೇಡ. ನಿನ್ನ ಪ್ರಯತ್ನ  ನೀನು ಮಾಡು.   ಏನಾದರೂ ಸರಿ.  ನಿನ್ನ ಜತೆ  ನಾವಿದ್ದೇವೆ ಎನ್ನುತ್ತಾ ಅವಳನ್ನು ತಬ್ಬಿಕೊಂಡರು. ಅವಳ  ಕಣ್ಣ ಲ್ಲೂ ನೀರಾಡಿತು.
ಆ ವರ್ಷವೂ ನೂರಕ್ಕೆ ನೂರು ಫಲಿತಾಂಶ ಬಂದಿತು.ವೀಣಾಳು  ಶೇಕಡ ಎಂಬತ್ತು ಅಂಕ
ಪಡೆದಿದ್ದಳು.

No comments:

Post a Comment