Thursday, December 4, 2014

ಆಳ್ವಾಸ್‌ ನುಡಿ ಸಿರಿ.





ಕನ್ನಡದ ಕಮನೀಯ ಉತ್ಸವ – ಆಳ್ವಾಸ್‌ ನುಡಿ ಸಿರಿ.
ಈ ಸಲ ಹೆಗ್ಗೋಡಿನ ನೀನಾಸಂ ಸಾಂಸ್ಕೃತಿಕ ಉತ್ಸವಕ್ಕೆ ಎಂಟು ದಿನಗಳ ಹೋದಾಗ ಅಲ್ಲಿನ ಬೆಳಗಿನಿಂದ ಸಂಜೆಯ ವರೆಗಿನ ಸಾಹಿತ್ಯ ಸಂಸ್ಕೃತಿ, ನಾಟಕ, ಉಪನ್ಯಾಸ ಮತ್ತು ವೈಚಾರಿಕ ವಾತಾವರಣ ತುಂಬ ಹಿಡಿಸಿತು. ನೂರಾರು ಜನರಿಗೆ ಹಳ್ಳಿಗಾಡಿನಲ್ಲಿ ಅವರು ಮಾಡಿದ ಅಚ್ಚು ಕಟ್ಟಾದ ವ್ಯವಸ್ಥೆ  ಅಚ್ಚರಿತಂದಿತ್ತು.  
ಅಲ್ಲಿಂದ ಕೊನೆಯ ದಿನ ಹೊರಡುವಾಗ ಗದಗಿನ ಗೆಳೆಯರೊಬ್ಬರು ಹೇಳಿದರು, “ ಸಾರ್‌ ನೀವು ಮುಂದಿನ ತಿಂಗಳು ಮೂಡುಬಿದ್ರೆಯಲ್ಲಿನ ನುಡಿ ಸಿರಿಗೆ ಹೋಗಲೇ ಬೇಕು “ ಎಂದು ಒತ್ತಾಯ ಮಾಡಿದರು ಅಲ್ಲದೆ ಅರ್ಜಿಯಂದರ ಪ್ರತಿಯನ್ನೂ ಕೊಟ್ಟರು. ನೋಡಿದಾಗ ಗೊತ್ತಾಯಿತು ಅದು ಬಹುತೇಕ ಶುಲ್ಕರಹಿತ ಕಾರ್ಯಕ್ರಮಎಂದು. ನಾಮ ಮಾತ್ರಕ್ಕೆ ೧೦೦ ಶುಲ್ಕ.. ಮನಿಆರ್ಡರ್‌ ಮಾಡಿದೆ.ನಂತರ  ಒಂದೇ ವಾರದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಂದಿತು. ಸರ್ವಾದ್ಯಕ್ಷರಾಗಿ ಡಾ. ಸಿದ್ದಲಿಂಗಯ್ಯ ಮತ್ತು ಉದ್ಘಾಟನೆ  ನಾ .ಡಿಸೋಜರದ್ದು.





ಶಿವಮೊಗ್ಗದವರೆಗೆ ರೈಲಿನಲ್ಲಿ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಮೂಡುಬಿದ್ರೆ ಮುಟ್ಟಿದೆವು ಊರು ಮೂರು ಮೈಲು ದೂರದಲ್ಲಿರುವಂತೆಯೇ ಪೋಸ್ಟರ್‌ಗಳು ಬ್ಯಾನರ್‌ಗಳು ಎಲ್ಲ ಕಡೆರಾರಾಜಿಸುತಿದ್ದವು.ಮೂಡುಬಿದ್ರೆಯಿಂದ ಮೂರು  ಕಿಮೀ ದೂರದಲ್ಲಿನ ವಿದ್ಯಾ ಗಿರಿಯಲ್ಲಿ ಕಾರ್ಯಕ್ರಮ. ವಿದ್ಯಾಗಿರಿ ಎಂಬ ಹೆಸರು ಅನ್ವರ್ಥಕ.ಅಲ್ಲಿ ಇರುವುದು ಬರೀ ಆಳ್ವಾ ಶಿಕ್ಷಣ ಸಂಸ್ಥೆಗಳ ಸಮೂಹ. ಅದು ಸರಿ ಸುಮಾರು ವಿದ್ಯಾರ್ಥಿಗಳಿಗೆ ಜ್ಞಾನದಾನ ಮಾಡುವ ಕೇಂದ್ರ ಶಿಶುವಿಹಾರದಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೆ ಎಲ್ಲ ಹಂತದ ಶಿಕ್ಷಣ ಜೊತೆಗೆ ವೃತ್ತಿ ಪರ ಶಿಕ್ಷಣವೂ ಇದೆ, ಒಂದು ರೀತಿಯಲ್ಲ ವಿಶ್ವ ವಿದ್ಯಾಲಯವನ್ನೇ ಹೋಲುತಿತ್ತು ಹೋದೊಡನೆ ವಸತಿ ವ್ಯವಸ್ಥೆಯಾಯಿತು. ಹಾಸ್ಟೆಲ್‌ಗಳಲ್ಲಿ ಅತಿಥಿಗಳಿಗೆ ವಸತಿ. 
 ಅದಕ್ಕೆಂದೆ ತಮ್ಮ ಸಂಸ್ಥೆಯ ೨೦ ಸಾವಿರ ವಿದ್ಯಾರ್ಥಿಗಳಿಗೆ ರಜೆ. ಅವರ ಜಾಗದಲ್ಲಿ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಸ್ವಯಂ ಸೇವಕರಾಗಿ ಎಲ್ಲ ಕಾರ್ಯವನ್ನು ಅಚ್ಚು ಕಟ್ಟಾಗಿ ಮಾಡುತಿದ್ದರು. ಒಂದು ಕೋಣೆಯಲ್ಲಿ ನಾಲ್ವರು. ನಾವು ಮೂವರು  ನಮಗೆ ಒಂದು ಕೋಣೆ ಕೊಡಲಾಯಿತು.ಅಲ್ಲಿಂದ ಕಾರ್ಯಕ್ರಮದ ಸ್ಥಳಕ್ಕೆ ಹೋಗಲು ಅವರದೇ ಬಸ್ಸುಗಳು.
ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ನಡೆಸಲಾಗುತಿತ್ತು. ಒಟ್ಟು ಐದು ವೇದಿಕೆಗಳು.  ರತ್ನಾಕರವರ್ಣೀ ಹೆಸರಿನ ಮುಖ್ಯ ವೇದಿಕೆ. ಉದ್ಘಾಟನೆ, ಸಮಾರೋಪ, ಕವಿನಮನ , ವಿಚಾರ ಗೋಷ್ಠಿಗಳಿಗೆ ಅದೇ ತಾಣ. ಸುಮಾರು ೨೦ ಸಾವಿರ ಜನ ಕೂಡ ಬಹುದಾದ ಮಳೆ ಗಾಳಿಗೆ ಜಗ್ಗದ ಸಭಾ ಮಂಟಪ. ಅದರ ಪಕ್ಕದಲ್ಲೇ ಕೃಷಿ ಮೇಳ. ಹಾಗೂ ಕರಕುಶಲ ಕಲಾ ವಸ್ತು ಸಂಗ್ರಹಾಲಯ. ಅದರ ಜೊತೆನೃತ್ಯ, ಯಕ್ಷಗಾನ ಮತ್ತು ತಾಳಮದ್ದಳೆಗೆ  ಮೀಸಲಾದ ಕು.ಶಿ ಹರಿದಾಸ ಭಟ್ಟ ವೇದಿಕೆ,ಕೆ.ವಿ. ಸುಬ್ಬಣ್ಣ ಬಯಲು ಮಂದಿರ ಪ್ರದರ್ಶನ ಕಲೆಗೆ ಮೀಸಲಾದುದು ಮತ್ತು ಲಘು ಸಂಗೀತಕ್ಕೆ ಬಿ.ವಿ. ಆಚಾರ್ಯ ಸಭಾಂಗಣ.ಅದಕ್ಕೆ ಹೊಂದಿಕೊಂಡಂತೆ ಆಹಾರ ಮಳಿಗೆಗಳು
ಸಮ್ಮೇಳನದ ಮುಖ್ಯ ಪರಿಕಲ್ಪನೆ- ವರ್ತಮಾದ ತಲ್ಲಣಗಳು. ಈ ಉದ್ದೇಶದ ಸುತ್ತ ಹಲವು ಗೋಷ್ಠಿಗಳು .ರಂಗಭೂಮಿ , ಕೃಷಿ ಪರಿಸರ ,ಭಾಷೆ ಮತ್ತು ಶಿಕ್ಷಣ,ಕಲೆ,ಮಾಧ್ಯಮ ರಾಜಕಾರಣ, ,ಸಾಹಿತ್ಯ ಸ್ತ್ರೀಸಂವೇದನೆ ಮತ್ತು ಆಧ್ಯಾತ್ಮ. ಇವುಗಳಲ್ಲಿ ಆಯಾ ರಂಗದ ಉದ್ದಾಮರಿಂದ ವಿಚಾರ ಮಂಡನೆ. ಜೊತೆಗೆ ವಿಶೇಷ ಉಪನ್ಯಾಸಗಳು ಪ್ರೇಕ್ಷಕರಿಗೆ ಚಿಂತನೆಗೆ ಹಚ್ಚಿದವು. ವಿಶೇಷವೆಂದರೆ ಸಾಹಿತ್ಯ ಸಮ್ಮೇಳನದಂತೆ ಇಲ್ಲ ವಿಚಾರ ಗೋಷ್ಠಿಗಳು ಸಭಿಕರ ಕೊರತೆಯಿಂದ ಭಣಭಣ ಗುಟ್ಟುತ್ತಲಿರಲಿಲ್ಲ.
ಕವಿ ಸಮಯ ಮತ್ತು ಕವಿನಮನ  ಎಂಬ ೨೦ ನಿಮಿಷದ ಕಿರು ಸಾಹಿತ್ಯಕಾರ್ಯಕ್ರಮ ಪ್ರತಿ ಗೋಷ್ಠಿಗಳ ನಡುವೆ ಅದರಲ್ಲಿ ಸುಬ್ಬು ಹೊಲೆಯಾರ್‌ ರಘುನಾಥ ಚ.ಹ.,ಬಿ.ಆರ್‌ಲಕ್ಷ್ಮಣ ರಾವ್, ರವಿಶಂಕರ ಒಡಂಬಟ್ಟು.  ಪ್ರೊ.ಎಚ್. ಎಸ್‌ ಶಿವಪ್ರಕಾಶ ಅವರ   ಕಾವ್ಯ ಮತ್ತು ಕವಿ ಪರಿಚಯ ಮಾಡಿ ಸನ್ಮಾನಿಸಲಾಯಿತು ಹೊಸ ಮತ್ತು ಹಿರಿಯ ಕವಿಗಳಿಗೆ ನೀಡಿದ ಸಮಾನ ಅವಕಾಶ ಜನಮನ ಗೆದ್ದಿತು.
ಕೊನೆಯ ದಿನ ಹನ್ನೊಂದನೆಯ ವರ್ಷದ ನೆನಪಿಗೆ ಹನ್ನೊಂದು ಜನ ಸಾಧಕರಿಗೆ ಸನ್ಮಾನ ಮಾಡಲಾಯಿತು ಕನ್ನಡ ನಾಡಿನ ವಿವಧ ರಂಗಗಳ ಸಾಧಕರು ಸನ್ಮಾನಕ್ಕೆ ಪಾತ್ರರಾದರು
 ಇನ್ನು ಸಭಾಂಗಣಗಳ ಅಲಂಕರಣ, ಕರಾವಳಿ ಕಲೆಗಳ ಸಂಗಮ. ಚಂಡೆ, ಡೋಲು, ಜಾಪದ ಕಲೆಗಳ ಪ್ರದರ್ಶನವಂತೂ ನಾದಮಯ ವಾತಾವರಣವನ್ನೇ ನಿರ್ಮಿಸುವಲ್ಲಿ ಯಶಸ್ವಿಯಾದವು .. ಇನ್ನು ತುಳು ಸಮ್ಮೇಳನ ದ ಸಮಯದಲ್ಲಿ ತುಳುನಾಡಿನ ಜಾನಪದ ವೈಭವ ಅತ್ಯಂತ ಸೊಗಸಾಗಿತ್ತು  ಭೂತಗಳು, ತಟ್ಟಿರಾಯರು, ಕೋಲಾಟ, ಚಂಡೆ, ಮದ್ದಳೆ ಒಂದೆ ಎರಡೇ ನೋಡಿಯೇ  ಅರಿಯ ಬೇಕು ಅವುಗಳ ವೈವಿದ್ಯ.. ಒಟ್ಟು ೭೦ ವಿಚಾರ ಗೋಷ್ಟಿಗಳು ಮತ್ತು ಸಾಂಸ್ಕೃತಿಕ  ಕಾರ್ಯಕ್ರಮಗಳು ಮೂರುದಿನದಲ್ಲಿ ಯಾವುದೇ ಗಡಿಬಿಡಿಇಲ್ಲದೆ ನಡೆದವೆಂದರೆ ವ್ಯವಸ್ಥಾಪಕರ ದೂರ ದೃಷ್ಟಿ ಮತ್ತುಸಂಘಟನಾ ಚತುರೆಗೆ ಸಲಾಂ  ಎನ್ನಲೇ ಬೇಕು ಉತ್ತರ ಕರ್ನಾಟಕದ ಗೀ ಗೀ ಪದಗಳು  ಮತ್ತು  ಮಲ್ಲಕಂಬಗಳು ಬಯಲಿನಲ್ಲಿ ನಡೆದರೂ ಜನರು ನಿಂತು ನೋಡುತಿದ್ದರು..
 ಇನ್ನು ಊಟೋಪಚಾರ. ಹಿಂದಿನ ಕಾಲದಲ್ಲಿ ಗಂಡಿನ ಬೀಗರಿಗೆ ಕೊಡುತಿದ್ದ ಗೌರವಾನ್ವಿತ ಆತಿಥ್ಯದ ನೆನಪನ್ನು ಹಳಬರಿಗೆ  ನೆನಪಿಸಿತು. ಇಲ್ಲಿ  ಊಟದ ಚೀಟಿ ಇಲ್ಲ, ಪಾಸು ಇಲ್ಲ, ನೀವು ಯಾರು ಎಂದು ವಿಚಾಣೆ  ಇಲ್ಲ. ಹಸಿದು ಬಂದವರಿಗೆಲ್ಲ ಎರಡನೆಯ ಮಾತಿಲ್ಲದೆ ಆಹಾರ. ಅದೂಹತ್ತಾರು ಕೌಂಟರ್‌ಗಳಲ್ಲಿ. ಸ್ವಯಂ ಸೇವಕರು ನಗು ಮುಖದಿಂದ ನೀಡುತಿದ್ದರು 
ಯಾವುದು ಎಷ್ಟು ಬೇಕೋ ಅಷ್ಟು ತಿನ್ನಬಹುದು. ಯಾವುದೇ ಮಿತಿಇಲ್ಲ.ಮೂರು ತರಹದ ತಿಂಡಿ, ಕುಡಿಯಲು  ಕಾಫಿ . ಟೀ ಮತ್ತು ಕಷಾಯ . ಬಹುಶಃ ಈ ರೀತಿಯ ಧಾರಳತನ, ಅತಿಥಿ ದೇವೋಭವ ಎನ್ನುವ ಕಳಕಳಿ ಯಾವುದೇ ಸಮ್ಮೇಳನದಲ್ಲಿ ಕಂಡಿಲ್ಲ. ಜೊತೆಗ ಸಮ್ಮೇಳನದ ಹಿಂದಿನ ದಿನ ಮತ್ತು ಮಾರನೆಯದಿವೂ ಊಟ , ತಿಂಡಿ. ..
ಇನ್ನು ಅವರು ಸ್ವಚ್ಛತೆಗೆ ನೀಡಿದ ಆದ್ಯತೆಯಂತೂ ಅತೀವ ಅಚ್ಚರಿ ದಾಯ೭ಕ. ಆಹಾರದ ವಿತರಣೆಯಾಗುತಿದ್ದಮತೆ ಅಡಕೆ ಹಳೇಯ ತಟ್ಟೆ , ಪ್ಲಾಸ್ಟಿಕ್‌ಲೋಟಗಳು ತತಕ್ಷಣ ವಿಲೆ ಆಗುತಿದ್ದವುಇನ್ನು ಅಹಾರ  ಪಡೆಯುವಲ್ಲಿಯೂ ಎಲ್ಲೂ ಗಡಿ ಬಿಡಿ ಗೊಂದಲ ಇಲ್ಲ. ಸಾಲಿನಲ್ಲಿ ನಿಂತುಪಡೆಯಲು ಐದು ನಿಮಿಷ ಸಾಕು ಆವ್ಯವಸ್ಥೆಯನ್ನ ನೋಡಿ ಜನರೂ ತಮ್ಮಿಂದ ತಾವೆ ಶುಚಿತ್ವ ಕಾಪಡುತಿದ್ದರು ಏನಿದ್ದರೂ ಅಲ್ಲಲ್ಲಿ ಇರಿಸಿದ್ದ ಕಸದ ಡ್ರಮ್‌ಗಳಿಗೆ ಹೋಗಿ ಹಾಕುತ್ತಿರುವುದು ಸಾಮಾನ್ಯ  ದೃಶ್ಯವಾಗಿತ್ತು ಅವು ತಂಬಿದ ತಕ್ಷಣವೆ  ಹೊರಗೆ ನಿಲ್ಲಿಸಿದ್ದ ಲಾರಿಗೆ ಸಾಗಿಸಲಾಗುತಿತ್ತು. ಕಸವಂತೂ ಕಣ್ಣೆ ಗೆ ಬೀಳುತ್ತಲೇ ಇರಲಿಲ್ಲ.
ಇದು ಒಂದುರೀತಿಯ ಹಾಲಿಡೆ ಕಾರ್ಯಕ್ರಮವಾಗಿತ್ತು ಬಹಳ ಜನ ಸಂಸಾರ ಸಮೇತವಾಗಿ ಬಂದಿದ್ದರು, ಜಾತಿ ಮತ, ಪ್ರಾದೇಶಿಕ ಬೇಧವಿಲ್ಲದೆ ಜನ ಸೇರಿದ್ದರು.ಕೊನಯ ದಿನ ಭಾನುವಾರ.ಬಹತೇಕ ಪ್ರತಿನಿಧಿಗಳೂ ಊರಿಗೆ ಹೊರಟರು. ಆದರೂ ಜನ ಜಂಗುಳಿಗೆ ಕಡಿಮೆ ಇಲ್ಲ. ಅದರಲ್ಲೈ ಅಲ್ಪಸಂಕ್ಯಾತ ಮಹಿಳೆಯರೂ ಬಹು ಸಂಖ್ಯೆಯಲ್ಲಿ ಬಂದು ಸಾಮಸ್ಕೃತಿ ಕಾರ್ಯ ಕ್ರಮಗಳ ಸೊಬಗು ಸವಿದು  ,ಸಾಲಾಗಿ ನಿಂತು ಆಕಾರ ಪಡೆಯುತಿದ್ದ ನೋಟ ಕೋಮು ಸಾಮರಸ್ಯಕ್ಕೆ ಹಿಡಿದ ಕನ್ನಡಿಯಾಗಿತ್ತು.

ಅಲ್ಲಿನ ವಿಶೇಷತೆ ಎಂದರೆ ನಾವು ಇಳಿದುಕೊಂಡ ಯಾವುದೇ ಕೋಣೆಗೂ ಬೀಗ ಹಾಕುವ ಅಗತ್ಯವಿರಲಿಲ್ಲ. ಬರಿ ಬಾಗಿಲುಮುಂದು ಮಾಡಿ ಚಿಲಕಹಾಕಿ ಬಂದರೂ ಆಯಿತು. ಯಾವುದೇ ವಸ್ತುವು ಕಾಣೆಯಾದ ದೂರು ಇರಲಿಲ್ಲ. ಇದರ ಜೊತೆಗೆ ಕೋಣೆಗಳಿಗೆ ಒಳಗೆ ಚಿಲಕವೂ ಇರಲಿಲ್ಲ. ಕಾರಣ ಬಾಗಿಲು ಹಾಕಿಕೊಂಡು ಮುಚ್ಚಿದ ಕೋಣೆಯಲ್ಲಿ ನಿಷಿದ್ದ ಕಾರ್ಯ ಜರುಗ ಬಾರದೆಂಬುದಕ್ಕೆ ಅದು ಮುನ್ನೆಚ್ಚರಿಕೆಯಾಗಿರ ಬಹುದು. ಎಲ್ಲವೂ ಸ್ವಯಂ ನಿಯಂತ್ರಿತ . ಶಾಂತಿ ಮತ್ತು ಶಿಸ್ತು ನೆಲಸಲು ಕಾರಣ ಅಲ್ಲಿನ ಸುವ್ಯವಸ್ಥೆಯೇ ಕಾರಣ ಎನ್ನವಹುದು .ಅಲ್ಲಿ ವಿದ್ಯಾರ್ಥಿ ನಿಲಯದ ವಿಶೇಷವೆಂದರೆ ಅಲ್ಲಿನ ವಿದ್ಯಾರ್ಥಿಗಳು  ಮೊಬೈಲ್‌ ಮತ್ತು ಸಂಗೀತೋಪಕರಣಗಳನ್ನು  ಆವರಣದೊಳಗೆ ಬಳಸುವ ಹಾಗಿಲ್ಲ. ಅವರ ಅಧ್ಯಯನ ಮತ್ತು ಚಲನವಲನವೂ ನಿಯಮಬದ್ದ.. ಒಂದುರೀತಿಯಲ್ಲಿ ಹಿಂದಿನ ಗುರುಕುಲದ ರೀತಿ. ಅದಕ್ಕೇ ಕಾರಣ ವಿರಬಹುದು ಶಿಕ್ಷಣ ಗುಣ ಮಟ್ಟವೂ ಉತ್ತಮವಾಗಿದೆ.


ಇಷ್ಟು ಉತ್ಕೃಷ್ಟ ವ್ಯವಸ್ಥೆಗೆ ಕಾರಣ ಆಳ್ವಾ ಶಿಕ್ಷಣ ಸಂಸ್ಥೆಗಳಸ್ಥಾಪಕ  ಡಾ. ಮೋಹನ ಆಳ್ವ. ಅವರು ಮೂಲತಃ ಆಯುರ್ವೇದ ವೈದ್ಯರು. ಅದಕ್ಕೆ ಆಯುರ್ವೇಧ ಕಾಲೇಜು, ಔಷಧಿ ತಯಾರಿ, ಚಿಕಿತ್ಸೆ ,ಯೋಗ,, ಮೂಲಿಕಾವನ ಹೀಗೆ ಭಾರತೀಯ ವೈದ್ಯ ಪದ್ದತಿಗೆ ಪೂರಕವಾದ ಎಲ್ಲ ಕಾರ್ಯಗಳೂ ಯಶಸ್ವಿಯಾಗಿ ನಡೆದಿವೆ,ಈಗೊಂದು ದಶಕದ ಹಿಂದೆ ನುಡಿಸಿರಿಯ ಕನಸು ಕಂಡರು. ಜೊತೆಗೆ ಆಳ್ವ ವಿರಾಸತ್‌ ಎಂಬ ಉತ್ಸವವನ್ನೂ ಹಮ್ಮಿಕೊಂಡಿದ್ದಾರೆ.ಕೋಟಿ ಕೋಟಿ ವೆಚ್ಚವಾದರೂ ತಾವೇ ಭರಿಸುತ್ತಾರೆ. ಇವಲ್ಲಕ್ಕೂ ಒತ್ತಾಸೆ ಡಾ. ವೀರೇಂದ್ರ ಹೆಗಡೆಯವರ ಆಶೀರ್ವಾದ, ಗೆಳೆಯ ಅಮರನಾಥ ಸೆಟ್ಟರ ಒತ್ತಾಸೆ ನಾ. ದಾಮೋದರ ಶೆಟ್ಟರ ಸಾಹಿತ್ಯಿಕ ಸಲಹೆ. ಮತ್ತು ತುಳುನಾಡಿನ ಘಟಾನು ಘಟಿಗಳ ಕರಾವಳಿ ಗೆಳೆಯರದು.. ಇಲ್ಲಿ ರಾಜಕೀಯಕ್ಕೆ ಎಡೆಇಲ್ಲ. ಸಾಹಿತ್ಯ, ಸಂಸ್ಕೃತಿ ಮತ್ತು ನಾಡಿನ ಹಿರಿಮೆಯಲ್ಲಿ ಗೌರವವಿರುವರಿಗೆ ಮಾತ್ರ ಅವಕಾಶ.ಹಣಕ್ಕಾಗಿ ಸರ್ಕಾರದ ನೆರವು ಬೇಡುವುದಿಲ್ಲ. ದಾನಿಗಳೆದರು ಕೈ ಚಾಚುವುದು ಇಲ್ಲ. . ಒಂದು ಖಾಸಗಿ ವಿದ್ಯಾ ಸಂಸ್ಥೆಯು ಈ ರೀತಿಯ ರಾಷ್ಟ್ರಮಟ್ಟ ದ  ಸಮ್ಮೇಳನವನ್ನು ಇಷ್ಟು ಅದ್ದೂರಿಯಾಗಿ ಸುವ್ಯವಸ್ಥಿತವಾಗಿ ನಡೆಸುವುದು ಇತಿಹಾಸದಲ್ಲೇ ಕಂಡಿಲ್ಲ ಕೇಳಿಲ್ಲ . ಇಷ್ಟಾದರೂ ಅಹಂಕಾರವಿಲ್ಲ , ವೈಯುಕ್ತಿಕ ಪ್ರಚಾರದ ಹಂಬಲವಿಲ್ಲ, ಅಷ್ಟೇ ಏಕೆ ಹಲವಾರು ವರ್ಷದಿಂದ  ನುಡಿ ಸಿರಿ ಉತ್ಸವದ ಸಮಯದಲ್ಲಿ  ತಮ್ಮ ಸಂಸ್ಥೆಗಳ ಮತ್ತು ವಿವಿಧ ಕೋರ್ಸಗಳ  ಮಾಹಿತಿ ನೀಡಲು ತೆರೆಯುತಿದ್ದ  ಕೌಂಟರ್‌ ಕೂಡಾ ಈ ವರ್ಷದಿಂದ  ಇಲ್ಲವೇ ಇಲ್ಲ. ನಮ್ಮಲ್ಲಿ  ಬೃಹತ್‌ ಶಿಕ್ಷಣ ಸಂಸ್ಥೆಗಳು  ಇದೇ ಮಾದರಿಯನ್ನು ಅನುಸರಿಸಿದರೆ ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಮಳ ನಾಡಿನಾದ್ಯಂತ ಹರಡುವುದು ಖಂಡಿತ. ಭಾಷೆಯ ಬೆಳವಣಿಗೆಗೆ ಕರ್ನಾಟಕದತ್ತ ಕಣ್ಣು ಹಾಯಿಸುವ ಕಾಲವೂ ಬಂದೀತು
  










                                                                                                            

No comments:

Post a Comment