Saturday, November 29, 2014

ಹಸ್ತ ಪ್ರತಿ ಅಭಿಯಾನ



ಹಸ್ತಪ್ರತಿ ಸಂರಕ್ಷಣ ಕಾರ್ಯಾಗಾರ

ಹಸ್ತಪ್ರತಿ ನಮ್ಮ ಪ್ರಾಚೀನ ಜ್ಞಾನ ಸಂಪತ್ತಿನ ಭಂಡಾರ ಎಂಬ ಬಗ್ಗೆ ಎರಡು ಮಾತಿಲ್ಲ. ಅದಕ್ಕಾಗಿಯೇ ಹಲವು ಕಡೆ ಕನ್ನಡ ಸ್ನಾತಕೋತ್ತರ ಪಠ್ಯ ಕ್ರಮದಲ್ಲಿ ಆಕರ ಶಾಸ್ತ್ರ ಎಂಬ ಒಂದು ಪತ್ರಿಕೆಯನ್ನೂ ,ಎಂಫಿಲ್ ಪಠ್ಯ ಕ್ರಮದಲ್ಲೂ  ಹಸ್ತಪ್ರತಿಸಂರಕ್ಷಣೆ , ಡಿಜಲೀಕರಣ ಕುರಿತು ಅಧ್ಯಯನ ಮಾಡಬೇಕಿದೆ..ಗ್ರಂಥ ಸಂಪಾದನೆಯಲ್ಲೂ ಹಸ್ತಪ್ರತಿಗಳೇ ಮೂಲಆಕರ. ಇದೆಲ್ಲ ಗೊತ್ತಿದ್ದರೂ ಹಸ್ತಪ್ರತಿಗಳ ಕುರಿತು ಬಹಳ ಕಡೆ ದಿವ್ಯ ನಿರ್ಲಕ್ಷ್ಯ. ಹಸ್ತಪ್ರತಿಗಳ ಸಂರಕ್ಷಣೆ ಮಾಡುವದು ಹಾಗಿರಲಿ ತಾಳೆಯ ಗರಿಯ ವೀಕ್ಣೆಣೆಯನ್ನೂ ಮಾಡದೇಅಂಕಗಳಿಸುವ ಕಲೆ ಕರಗತವಾಗಿದೆ. ಬಹುತೇಕರಿಗೆ. ಇದಕ್ಕೆ ಕಾರಣಗಳು ಹಲವಾರು. ವ್ಯವಸ್ಥೆಯೇ ಹಾಗಿರುವಾಗ ವಿದ್ಯಾಥಿಗಳತ್ತ , ಬೊಟ್ಟು ಮಾಡುವುದು ಸೂಕ್ತವಲ್ಲ.  ಈ ದಿಶೆಯಲ್ಲಿ  ಬಿ. ಎಂ ಶ್ರೀ ಪ್ರತಿಷ್ಠಾನದ ಹಸ್ತಪ್ರತಿವಿಭಾಗವು ಬೆಕ್ಕಿಗೆ ಗಂಟೆ ಕಟ್ಟುವ ಮನ ಮಾಡಿದೆ.. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಸ್ತ ಪ್ರತಿಗಳ ಸಂರಕ್ಷಣೆಯಲ್ಲಿ ಕೈ ಮುಟ್ಟಿ ಕೆಲಸ ಮಾಡುವ ಅವಕಾಶ ಒದಗಿಸುವ ಕಾರ್ಯಾಗಾರ ಹಮ್ಮಿ ಕೊಂಡಿದೆ.
ಈಗಾಗ ಲೇ ಎಂ,.ಇ. ಎಸ್‌ ಮತ್ತು ಎಂ. ಎಲ್‌ ಎ ಕಾಲೇಜಿನ   ಎಂ.ಎ. ವಿದ್ಯಾರ್ಥಿಗಳಿಗೆ ಒಂದುವಾರದ ಪೂರ್ಣಾವಧಿಯ ತರಬೆತಿ ನೀಡಿದ ಹಿನ್ನೆಲೆಯಲ್ಲಿ ಈ ಸಲ ಬಸವನಗುಡಿಯ ನ್ಯಾಷನಲ್‌  ಕಾಲೇಜಿನ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಲು ನಿರ್ಧರಿಸಲಾಯಿತು. ಗಣೇಶನ ಮದುವೆಗೆ ನೂರೆಂಟು ವಿಘ್ನ. ಮೊದಲನೆಯದಾಗಿ ಈಗ ಸೆಮಿಸ್ಟರ್‌ ಪದ್ದತಿಇರುವುದರಿಂದ ನಿಗದಿತ ಅವಧಿಯಲ್ಲಿ ಪಠ್ಯ ಕ್ರಮ ಪೂರೈಸುವ ತರಾತುರಿ. ಎರಡನೆಯದಾಗಿ ಮಿತವಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಜೊತೆಗೆ  ನೆಟ್‌ ಪರೀಕ್ಷೆ, ಕಿರು ಪರೀಕ್ಷೆ. .ಈ ಎಲ್ಲ ತೊಡಕುಗಳಿಗೆ ಪರಿಹಾರ ನೀಡಿದರೆ ಕಾರ್ಯಾಗಾರದ ಕೆಲಸ ಮೊದಲಾಗುವ ಸಾಧ್ಯತೆ ಇದ್ದಿತು.ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಆಸಕ್ತಿ. ಮೂಡಿಸಬೇಕಿತ್ತು.
ಈ ವಿಬಾಗದ ಮುಖ್ಯಸ್ಥರು ಮತ್ತು ಕಾಲೇಜಿನನಿವೃತ್ತ ಪ್ರಾಂಶುಪಾಲರು ಆಸಕ್ತಿ ತೋರಿದರೂ ಅಡೆ ತಡೆಗಳತ್ತ ಕೈ ತೋರಿದರು.
ಮೊಟ್ಟ ಮೊದಲನೆಯದಾಗಿ ವಿದ್ಯಾರ್ಥಿಗಳನ್ನು ಕೇಳಿದಾಗ ಅವರಿಗೆ ಆಸಕ್ತಿ ಇದೆ ಆದರೆ ಅವಕಾಶವಿಲ್ಲ.ನಿತ್ಯದ ಪಾಠಪ್ರವಚನಗಳ ಒತ್ತಡ. ಇದಕ್ಕೆ ಪರಿಹಾರ ಅವರಿಗೆ ಬಿಡುವಾಗಿದ್ದಾಗ ತರಬೇತಿ ನಡೆಸುವುದು.ಅಂದರೆ ಮದ್ಯಾಹ್ನ   ೨  ಗಂಟೆಯವರೆಗೆ ಅವರ ಕಾಲೇಜಿನ ಪಾಠ ಪ್ರವಚನಗಳು. ನಂತ ೨.೩೦ ಯಿಂದ ೫.೩೦ ವರೆಗೆ ಕಾರ್ಯಾಗಾರ. ಅದೃಷ್ಟಕ್ಕೆ ಕಾಲೇಜಿಗೂ ಮತ್ತು ತರಬೇತಿ ನೀಡುವ ಸ್ಥಳಕ್ಕೂ ಕೇವಲ ಹದಿನೈದು ನಿಮಿಷದ ಹಾದಿ ಆದ್ದರಿಂದ  ಮಧ್ಯಾಹ್ನ ೨.೩೦ ರಿಂದ  ತರಬೇತಿ ನಡೆಸಲು ನಿರ್ಧಾಆರ ಮಾಡಲಾಯಿತು
ಮೊದಲ ದಿನವೇ ಸಮಯ ತುಸು ಏರು ಪೇರಾಯಿತು. ಕಾಲಲೇಜಿನ ತರಗತಿಗಳು ಮುಗಿದ ನಂತರ ಊಟ ಮಾಡಿಕೊಂಡು ಬಿಸಿಲಲ್ಲಿ ಬರುವುದಕ್ಕೆ ಅರ್ದ ಗಂಟೆಗಿಂತ ಅಧಿಕ ಸಮಯದ ಅಗತ್ಯ..ಅದಕ್ಕಾಗಿ ಕಾಲೇಜಿನವರನ್ನು ತರಗತಿಯನ್ನು ೧೫ ನಿಮಿಷ ಮುಂಚಿತವಾಗಿ ಮುಗಿಸಲು ಕೇಳಿಕೊಳ್ಳಲಾಯಿತು  ಹಾಗೂ ಕಾರ್ಯಾಗಾರದ  ಪ್ರಾರಂಭವನ್ನು ೧೫ ನಿಮಷ ಮುಂದೂಡಲಾಯಿತು,
ನಂತರ  ತರಬೇತಿ ಶುಲ್ಕ ೨೫೦/-ರೂಪಾಯ ಕುರಿತು  ಗೊಣಗಾಟ ಕಂಡುಬಂದಿತು. ಅದಕ್ಕೆ ಪರಿಹಾರವಾಗಿ ಶುಲ್ಕವನ್ನು ತರಬೇತಿಯ ಅವಧಿಯಲ್ಲಿ ಯಾವಾಗ ಬೇಕಾದರೂ ಕೊಡಬಹದು ಮತ್ತು ಅದು ಹೊರೆ ಎನಿಸಿದರೆ ಸಂಸ್ಥೆಗ ನಿಗದಿ ಪಡಿಸಿದ ಶುಲ್ಕಕ್ಕೆ ರಸೀತಿ ಹಾಕಲಾಗುವುದು ಆದರೆ  ಮನವಿಯ ಮೇರೆಗೆ ಅನಾನುಕೂಲವಿದ್ದವರ ಶುಲ್ಕದ ಆಂಶಿಕ ಭಾಗವನ್ನು ನಿರ್ದೇಶಕರೇ ನೀಡುವುದಾಗಿ ತಿಳಿಸಿದರು. ಹಣದ ಕೊರತೆಯ ಕಾರಣದಿಂದ ಯಾವ ವಿದ್ಯಾಥಿಯೂ ವಂಚಿತನಾಗಬಾರದು ಎಂಬ ನಿಲವು ತೆಗೆದುಕೊಳ್ಳಲಾಯಿತು. ಮೊದಲ ದಿನ ೨೧ ಜನ ವಿದ್ಯಾರ್ಥಿಗಳು ಭಾಗವಹಿಸಿದರು.
ತರಬೇತಿ ಉದ್ಘಾಟನೆಗೆ ಸಂಸ್ಥೆಯ ಅಧ್ಯಕ್ಷರಾದ  ಡಾ. ಪಿ.ವಿ. ನಾರಾಯಣ , ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಪ್ರೊ. ಲೀಲಾವತಿ,ಗಣಿತ ವಿಭಾಗದ ಪ್ರಾಧ್ಯಾಪಕಿ ಮತ್ತು ಕನ್ನಡ ವಿಭಾಗದ ಪ್ರಧ್ಯಾಪಕಿಯರಾದ  ಭಾಗವಹಿಸಿದರು. ವಿಶೇಷವೆಂದರೆ ವಿಜಯಾಕಾಲೇಜಿನ ಪ್ರಾಧ್ಯಾಪಕರಾದ ಶ್ರೀ ರಾಮಮೂರ್ತಿ ಹಸ್ತಪ್ರತಿ ಕುರಿತ ಆಸಕ್ತಿಯಿಂದ ತಾವೂ ಶಿಬಿರಾರ್ಥಿಯಾಗಿ ಸಂರಕ್ಷಣಾ ಕೆಲಸ ಕಲಿತು ಹಸ್ತಪ್ರತಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ,ಮುಂದೆ ಬಂದರು..
ತರಬೇತಿಯ ಭಾಗವಾಗಿ ಸಾಧ್ಯವಾದರೆ ಎರಡು ದಿನಕೊಮ್ಮೆ ಸಂಜೆ ಅರ್ಧಗಂಟೆ  ಹಸ್ತಪ್ರತಿ ತಜ್ಞರ ವಿಶೇಷ ಉಪನ್ಯಾಸ ನಡೆಸಲು ಯೋಜನೆ ಹಾಕಿಕೊಳ್ಳಲಾಯಿತು ಮುಖ್ಯವಾಗಿ ವಿದ್ಯಾರ್ಥಿನಿಯರು ದೂರದಿಂದ ಮತ್ತು ಹೊರ ಊರಿನಿಂದ ಬರುವುದರಿಂದ ಅವರ ಅನುಕೂಲ ಗಮನಿಸಿಲು ನಿರ್ಧಾರಿಸಲಾಯಿತು. ನಿರ್ದೇಶಕರಾದ ಎಚ್‌.ಶೇಷಗಿರಿರಾಯರು ಹಸ್ತಪ್ರತಿಗಳ ಸಂರಕ್ಷಣೆ ಮತ್ತು ಅಧ್ಯಯನದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಾ ಆಧುನಿಕತಂತ್ರಜ್ಞಾನದ ಅಳವಡಿಕೆಯಿಂದ ಡಿಜಿಟಲ್‌ ರೂಪದಲ್ಲಿ ಹಸ್ತಪ್ರತಿಗಳ ಗರಿಗಳನ್ನು ಆಸಕ್ತರು ಇದ್ದಲ್ಲಿಗೆ ಕಳುಹಿಸುವ ಸಾಧ್ಯತೆಯಿಂದ ಈ ರಂಗದಲ್ಲಿ ಆಶಾದಾಯಕ ಬೆಳವಣಿಗೆ ಯಾಗುವುದೆಂದು ತಿಳಿಸಿದರು. ಮುಖ್ಯ ಅತಿಥಿಯಾದ ಪ್ರೊ. ಲೀಲಾವತಿಯವರು ವಿದ್ಯಾಥಿಗಳ ಜ್ಞಾನಪರಿಧಿ ವಿಸ್ತಾರಗೊಳಿಸುವ ಮುಂದೆ ಸಂಶೋಧನೆಗೆ ಪೂರಕವಾದ ಹಸ್ತಪ್ರತಿಗಳ ಪರಿಚಯವಾಗುವುದು ತುಂಬ ಉತ್ತಮ ಎಂದರು,  ಅಧ್ಯಕ್ಷ ಭಾಷಣದಲ್ಲಿ ಡಾ. ನಾರಾಯಣರು ಕನ್ನಡ ಸಾಹಿತ್ಯದ ಪ್ರಾಚೀನತೆ ಮತ್ತು ಸಾಹಿತ್ಯ ಸಂಪತ್ತು ಕುರಿತು ತಿಳಿಸುತ್ತಾ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆತ ಹಿನ್ನೆಲೆಯಲ್ಲಿ ಹಸ್ತಪ್ರತಿಗಳ ಅಧ್ಯಯನ ಅತಿ ಮಹತ್ವದ ಪಾತ್ರ ನಿರ್ವಹಿಸುವುದನ್ನು ವಿವರಿಸಿದರು ಹಸ್ತಪ್ರತಿ ವಿಭಾಗದ ಶ್ರೀ ಗುರುಪ್ರಸಾದ, ಶ್ರೀಮತಿ ವೀಣಾ ಮತ್ತು ಶ್ತಿಮತಿ ಮಧುರಾ ಅವರು ಅಚ್ಚುಕಟ್ಟಾಗಿ ಕಾರ್ಯಾಗಾರ ನಡೆಯಲು ಅಗತ್ಯವಾದ ವ್ಯವಸ್ಥೆ ಮಾಡಿದ್ದರು. ಮಕ್ಕಳೂ ಅಷ್ಟೇ ಆಸಕ್ತಿಯಿಂದ ಮೊದಲ ಹಂತವಾದ ಗರಿಗಳ ವಿಂಗಡಣೆ ಮತ್ತು ಶುಷ್ಕ ಶುದ್ಧೀಕರಣದ ಕೆಲಸಗಳನ್ನು ಖುಷಿಖುಷಿಯಿಂದ ಕೈಗೆತ್ತಿಕೊಂಡರು.
  



ಎಚ್.ಶೇಷಗಿರಿರಾವ್

No comments:

Post a Comment