Sunday, December 14, 2014

ಸಂಜಯ ಸೂರಿ


ಎಚ್‌.ಶೇಷಗಿರಿರಾವ್









ಕಲಾ  ಕುಟುಂಬಿ ಸಂಜಯ ಸೂರಿ
  ಎಂಬತ್ತರ ದಶಕದ ಒಂದು ಶುಕ್ರವಾರ. ರಾಜಕುಮಾರರ ಚಿತ್ರ ಬಿಡುಗಡೆಯಾಗಿದೆ. ಸಂಜಯ ಥೇಟರ್‌ಮುಂದೆ ಜನಸಾಗರ. ಥೇಟರನಲ್ಲಿ ಗಡಿಬಿಡಿಯೇ ಗಡಿಬಿಡಿ..ಮ್ಯಾಟನಿ ಮುಗಿದು ಫಸ್ಟ್‌ ಷೋಗೆ ಟಿಕೆಟ್‌ ವಿತರಣೆಯಾಗಿದೆ. ಆಗಲೇ ಹೌಸ್‌ಫುಲ್‌ ಬೋರ್ಡು ರಾರಾಜಿಸುತ್ತಿದೆ. ಕೌಂಟರ್‌ನಲ್ಲಿ ಸಂಗ್ರಹವಾದ ಹಣವನ್ನು ಚೀಲವೊಂದರಲ್ಲಿ ಹಾಕಿ ಗೆಳೆಯನ ಕೈನಲ್ಲಿಕೊಟ್ಟು ಹತ್ತು ಗಂಟೆಯ ಮೇಲೆ ಬಂದು ಲೆಕ್ಕ ಒಪ್ಪಿಸುವೆ ಈಗ ತುರ್ತಾಗಿ ಹೊಗಬೇಕು ಎಂದು ಸಂಜಯ ಸಿನೆಮಾ ಥೇಟರ್‌ನಿಂದ  ಹೊರಟ ಸದೃಢ ಸುರದ್ರೂರೂಪಿ  ಯುವಕ ಕಲಾಕ್ಷೇತ್ರದತ್ತ ಧಾವಿಸಿದ.  ಹೀರೋ  ಬಂದನಾ, ಬಂದನಾ ಎಂದು  ಹಲಬುತಿದ್ದ   ನಿರ್ದೇಶಕನಿಗೆ ," ಸಾರಿ ಸಾರ್‌, ತಡವಾಯಿತು" ಎಂದು ವಂದಿಸಿ  . ಗ್ರೀನ್‌ರೂಮಿನಲ್ಲಿ ನುಗ್ಗಿ ಬಣ್ಣ ಹಚ್ಚಿಸಿ ಕೊಂಡು ರಂಗದ ಮೇಲೆ ನಡೆದ.ಆ ವ್ಯಕ್ತಿಯೇ ಸೂರ್ಯನಾರಾಯಣ ಆಗ ರಂಗಭೂಮಿಯಲ್ಲಿ ಸೂರ್ಯ ನಾರಾಯಣನ ಹೆಸರಿನ ನಟರು ಮುರುನಾಲ್ಕು ಜನರಿದ್ದರು . ಅದಕ್ಕೆಂದೆ ಸಂಜಯ ಟಾಕೀಸ್‌ನಲ್ಲಿ ಕೆಲಸ ಮಾಡುತಿದ್ದದರಿಂದ ಸಂಜಯ  ಸೂರಿ.ಎಂಬ  ಹೆಸರು. ಕೊನೆ ತನಕ ಅದೇ ಹೆಸರು ಉಳಿದು ಬಿಟ್ಟಿತು ನಾಟಕ ರಂಗದಲ್ಲಿ.
ಸೂರ್ಯನಾರಾಯಣ

ಬೆಳಗಿನ ಏಳರ ಸಮಯ. ಕಹಳೆ ಬಂಡೆ ಉದ್ಯಾನದಲ್ಲಿ ಹಿರಿಯ ನಾಗರೀಕರು ವಾಯುವಿಹಾರದಲ್ಲಿ ತೊಡಗಿದ್ದಾರೆ. ಅರವತ್ತರ ಆಚೆ ಇರುವ ಗಟ್ಟಿ ಮುಟ್ಟಾಗಿ ಕಾಣುವ ವ್ಯಕ್ತಿ ಎದುರಿಗೆ ಬಂದವರಿಗೆಲ್ಲ ಶುಭೋದಯ ಎನ್ನತ್ತಾ, ಮಾತು ಮಾತಿಗೆ ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಗಟ್ಟಿಯಾಗಿ ಹೇಳುತ್ತಾ ನಗುತ್ತಾ ನಗಿಸುತ್ತಾ ಮುದುಡಿದ ಮುಖದಲ್ಲೂ ಮುಗಳ್ನಗೆ ಮೂಡಿಸುವ ವ್ಯಕ್ತಿ  ಬೇರೆ ಯಾರೂ ಅಲ್ಲ,  ಕಲಾವಿದ ಸಂಜಯ ಸೂರಿ.

ಹುಟ್ಟಿದ್ದು ತಿಪಟೂರಿನಲ್ಲಿ. ಬಡ ಕುಟುಂಬ. ಶಿಕ್ಷಣ ಎಸ್‌ಎಲ್ ಸಿ ವರೆಗೆ. ಆಗಲೇ ಕಲೆ ಕೈ ಬೀಸಿ ಕರೆಯಿತು. ಬಾಲ ಕಲಾವಿದನಾಗಿ  ಗುಬ್ಬಿ ವೀರಣ್ಣನವರ ಕಂಪನಿಯಲ್ಲಿ ರಂಗ ಪ್ರವೇಶ. . ಪ್ರಭಾತ್‌ ಕಲಾವಿದರಲ್ಲಿ ತರಬೇತಿ. ಪರಿಣಾಮ ನಟನೆ, ನೃತ್ಯಗಳಲ್ಲಿ ಪರಿಣಿತಿ. ಅಲ್ಲಿಂದ ನಿರಂತರ ಕಲಾಪಯಣ. ಟಿ. ವಿ. ಸಿನೆಮಾಗಳಲ್ಲೂ ಅಭಿನಯ ಕೆ. ಬಾಲಚಂದರ್‌ ರವರಿಂದ ಹಿಡಿದು ಬಿ.ವಿ. ಕಾರಂತ, ನಾಗಾಭರಣ, ಟಿ ಎನ್‌.ಸೀತಾರಾಮ್. ಅವರ ಜೊತೆ ಕೆಲಸಮಾಡುವ ಅವಕಾಶ.   ಹೊಟ್ಟೆ ಪಾಡಿಗೆ ಸಂಜಯ ಥೇಟರ್‌ನಲ್ಲಿ ಉದ್ಯೋಗ.ಅಲ್ಲಿಂದ ಉದ್ಯೋಗ ಪರ್ವ ಅನೇಕ ಖಾಸಗಿ ಕಂಪನಿಗಳಲ್ಲಿ ಮುಂದುವರಿಯಿತು.. ನಾಟಕದ ಗೀಳಿನಿಂದ ವೃತ್ತಿಯಲ್ಲಿ ಹಿನ್ನೆಡೆ. ಆದರೆ ಪ್ರವೃತ್ತಿಯಾದ ಕಲಾ ಸೇವೆಗೆ ಮಾತ್ರ ಸದಾ ಮುಂದು


ಸಮಕಾಲೀನ  ಬಹುತೇಕ ಹವ್ಯಾಸಿ ನಾಟಕ ತಂಡಗಳಲ್ಲಿ ಅವಿಭಾಜ್ಯ ಅಂಗ.    ಸುಮಾರು ನೂರಾರು ಸಲ ರಂಗವೇರಿದರೂ ತಣಿಯದ ದಾಹ. ಕಿರುತೆರೆಯಲ್ಲೂ  ನಟನೆ. ಬೆಳ್ಳಿತೆರೆಯಲ್ಲೂ ಖ್ಯಾತ ನಾಮರ ಸಿನೆಮಾಗಳಲ್ಲಿ ,ಅದೂ ಕಲಾತ್ಮಕ ಚಿತ್ರಗಳಲ್ಲಿ  ಪಾತ್ರ ವಹಿಸುವ ಅವಕಾಶ. ಜೊತೆಗೆ ತಮ್ಮದೇ ಆದ ಕಲಾತಂಡದ ಸ್ಥಾಪನೆ. ಸೂರ್ಯ ಕಲಾವಿದರು ತಂಡಕ್ಕೆ ಪ್ರಭಾತ್‌ ಕಲಾವಿದರೇ ಸ್ಪೂರ್ತಿ ಎನ್ನಬಹುದು. ವಿಶೇಷವಾಗಿ ನೃತ್ಯ ನಾಟಕಗಳ ನಿರ್ಮಾಣ. ಅನೇಕ ನಾಟಕಗಳ ನಿರ್ದೇಶನ. ಅದರಿಂದಲೇ ಸಂಜಯ ಸೂರಿ ಎಂಬ ಹೆಸರು ರಂಗಭೂಮಿಯಲ್ಲಿ ಪ್ರಚಲಿತ. ಮದುವೆಯಾದ ನಂತರ  , ಮೂರು ಮಕ್ಕಳ ಸಂಸಾರ ಸಾಕುವ ಹೊಣೆ ಹಾಗಾಗಿ. ಆಗ ಸಿನೆಮಾ ಕೇಂದ್ರ ಮದ್ರಾಸಿಗೆ ಕರೆ ಬಂದರೂ ಹೋಗಲಾರದ ಸ್ಥಿತಿ. ಕಲಾರಾಧನೆಗೇನೂ ಕುಂದಿಲ್ಲ. ಬಸವನ ಗುಡಿಯ ಕಾರಂಜಿ ಆಂಜನೇಯ ದೇವಸ್ಥಾನದ ಸಂಕೀಣದಲ್ಲ್ಯಲಿರುವ  ಹಳೆಯ ಕಾಲದ ಛತ್ರದಲ್ಲಿನ ಮೂರುಕೋಣೆಯ ಮನೆಯೇ ಅವರ ರಂಗ ಕೇಂದ್ರ. ಅಲ್ಲಿರುವ ಮನೆ ಮುಂದಿನ ಬಯಲೇ ರಂಗಮಂದಿರ.ರಂಗತಾಲೀಮಿಗೂ  ಅಲ್ಲಿಯೇ  ಅವಕಾಶ.. ಒಂದು ರೀತಿಯ ಬಯಲು ರಂಗ ಮಂದಿರ. 
ಮೋಹಿನಿ ಭಸ್ಮಾಸುರ  ನೃತ್ಯ ನಾಟಕದಲ್ಲಿ


   ಕಲಾವಿದ  ಮುಖ್ಯ ಮಂತ್ರಿ ಚಂದ್ರು ಹೇಳುತಿದ್ದಂತೆ ಕಲಾರಂಗದಲ್ಲಿ ಯಶ ಗಳಿಸಲು ಯೋಗ ಮತ್ತು ಯೋಗ್ಯತೆ ಎರಡೂ ಬೇಕು. ಸೂರಿಗೆ ಮದಲನೆಯದು ಕನಿಷ್ಟ ಮತ್ತು ಎರಡನೆಯದು ಗರಿಷ್ಟ. ಹಣ ಗಳಿಕೆ ಹೇಳುವಂತಿಲ್ಲದಿದ್ದರೂ ಜನ ಗಳಿಕೆ ಅಪಾರ. ಎಲ್ಲ ಕಡೆ ಅಭಿಮಾನಿಗಳ ಮಹಾಪೂರ.
ಪ್ರಭಾತ್‌ ಕಲಾವಿದರೊಡನೆ ಇಪ್ಪತ್ತೈದು ವರ್ಷ ಒಡನಾಟ. ಬೆನಕ, ಸ್ಪಂದನ, ದರ್ಶನ ರಂಗಗಳಲ್ಲೂ ಸಕ್ರಿಯ. ನಂತರ ತಮ್ಮದೇ ಆದ ಸೂರ್ಯ ಕಲಾವಿದರು. ಅವರ ಉಸಿರು.   ಹೊಂದಿರುವ ತಂಡ   ನಾಟಕ ಮತ್ತು ನೃತ್ಯ ರೂಪಕಗಳ ನಿರ್ಮಾಣ. ಸಹಸ್ರಾರು ಪ್ರದರ್ಶನ ದೇಶ ವಿದೇಶಗಳಲ್ಲಿ ನೀಡಿರುವರು ಕನ್ನಡದ ಎಲ್ಲ ವಾಹಿನಿಗಳಲ್ಲಿ ಸುಮಾರು ೪೦ ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವರು. ಜೊತೆಗೆ  ಸಂಸ್ಕೃತ ಮತ್ತು ಹಿಂದಿ ಧಾರಾವಾಹಿಗಳಲ್ಲೂ ಮಿಂಚಿರುವರು.  ಸುಮಾರು ಚಲನ ಚಿತ್ರಗಳಲ್ಲಿ  ಅದರಲ್ಲೂ ೧೫ ಚಲನಚಿತ್ರಗಳಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತನಿರ್ದೇಶಕರಾದ ಕೆ. ಬಾಲಚಂದರ್‌ ಜಿ.ವಿ ಐಯರ್‌, ಗಿರೀಶ ಕರ್ನಾಡರು ಸೇರದಂತೆ ಖ್ಯಾತನಾಮ ನಿರ್ದೇಶಕರಿಗೆ ಬೇಕಾದ ನಟ. ಎಪ್ಪತ್ತೈದಕ್ಕೂ ಅಧಿಕ ಚಿತ್ರಗಳಲ್ಲಿ ಚಾರಿತ್ರ್ಯ ನಟನಾಗಿ ಕನ್ನಡದ ಡಾ. ರಾಜಕುಮಾರ್‌ ರಿಂದ ಹಿಡಿದು ಪುನೀತ್‌ರಾಜಕುಮಾರ್‌ ವರೆಗೆ  ಎಲ್ಲ ನಾಯಕ ರ ಚಿತ್ರಗಳಲ್ಲಿ ಸಹ ನಟ.
ಸಂಜಯ ಸೂರಿ
ಅನೇಕ ಬಾರಿ  ನಾಟಕದಲ್ಲಿನ  ಉತ್ತಮ ನಟನೆಗಾಗಿ ಪ್ರಶಸ್ತಿ ವಿಜೇತರು, ಕೆಂಪೇ ಗೌಡ ಮತ್ತು ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರ.. ಬಾಲ್ಯದಿಂದಲೂ ಗರಡಿಮನೆಯಲ್ಲಿ ಗಟ್ಟಿಯಾದ ದೇಹ. ಮಧ್ಯಮ ಆಕೃತಿ.ನೋಡಲು ಸುರೂಪಿ. ಸದಾ ಒಂದಲ್ಲ ಒಂದು ಕೆಲಸ.  ಜೀವನದ ಜಂಜಾಟದಲ್ಲಿ ಹಣ್ಣುಹಣ್ಣು . ಒಂದು ಕಣ್ಣಿನಲ್ಲಿ ದೃಷ್ದೋಟಿ ದೋಷ. .  ಜೊತೆಗೆ ವರ್ಣಾಂಧತೆ... ಪರಿಣಾಮ ರಂಗ ಚಟುವಟಿಕೆಗೆಗೆ . ಮೊದಲಿನಂತೆ ಓಡಾಟ  ಸಾ ಧ್ಯವಾಗದು.. ಆದರೂ ಕ್ರಿಯಾಶೀಲ. . ಆದರೆ ಸಮಾಜ ಮುಖಿ. ಹಲವಾರು ಚಟುವಟಿಕೆಗಳಲ್ಲಿ ಮಗ್ನ. ಆಧುನಿಕ ಮನೋಭಾವ. ಹಿರಿಯ ಮಗನು ವಿಧವೆಗೆ ಹೊಸ ಬಾಳು ನೀಡಲು ಮುಂದಾದಾಗ ಹೃದಯ ತುಂಬಿ ಹರಸಿದವರು.ಕಿರಿಯ ಮಗನ ಪ್ರೇಮ ವಿವಾಹಕ್ಕೂಆರ್ಶೀವಾದ. ಕಲಾವಿದೆ ಸೊಸೆಯ ಕಲಾಪಯಣದಲ್ಲೂ ಸಹಕಾರ. ಈಗ ಕಲಾ ಜ್ಯೋತಿಯನ್ನು ಮಗನ ಕೈಗೆ ನೀಡಿ ಆಗಾಗ ಮಾರ್ಗದರ್ಶನ ಮಾಡುತ್ತಾ ಖುಷಿಯಾಗಿರುವರು.
ಯುವ ಕಲಾವಿ ವಿಕ್ರಂ ಸೂರಿ

ವಿಕ್ರಂ ಸೂರಿ ತಂದೆಗೆ ತಕ್ಕ ಮಗ. ಬಾಲ್ಯದಲ್ಲೇ  ಕಲಾವಾತಾವರಣದಲ್ಲಿ ಬೆಳದವ. ಚಿಕ್ಕ ವಯಸ್ಸಿನಲ್ಲಿ ರಂಗವೇರಿದ ಪ್ರತಿಭಾನ್ವಿತ. ಪ್ರಭಾತ್‌ ಕಲಾವಿದರ ಗರಡಿಯಲ್ಲಿ ಪಳಗಿದವ. ಭರತನಾಟ್ಯ ಮತ್ತು ಕಥಕ್‌ ತರಬೇತಿ   ಪಡೆದು ನೃತ್ಯ ಪಟುವಾಗಿಯೂ ಹೆಸರು ಮಾಡಿರುವನು.  ಸೂರ್ಯ ಕಲಾವಿದರ ಸೂತ್ರ ಧಾರಿ. ನಾಟಕ ರಂಗದಲ್ಲಿ ನಟನಾಗಿ ನಿರ್ದೇಶಕನಾಗಿ ಅನುಭವ.ಕಿರು ತೆರೆಯಲ್ಲೂ ಕಿರಿಯವಯಸ್ಸಿನಲ್ಲಿಯೇ ಪ್ರವೇಶ ಮಾಡಿ ಟಿ. ಎನ್‌ಸೀತಾರಾಮ್‌ರ ಮನ್ವಂತರ ದಿಂದ ಮನೆ ಮಾತಾದ ಕಲಾವಿದ. ಪಾಪಾ ಪಾಂಡುವಿನಲ್ಲೂ ಛಾಪು ಮೂಡಿಸಿ ಪ್ರೇಕ್ಷಕರಿಗೆ ಕಚಗುಳಿ ಇಟ್ಟವರು. ಹೀಗೆ ಅನೇಕ ಧಾರಾವಾಹಿಗಳಲ್ಲಿ ಭಾಗವಹಿಸಿರುವರು. ಜೊತೆಗೆ ಸಿನೆಮಾರಂಗದಲ್ಲೂ ಪ್ರವೇಶ ದೊರಕಿದೆ.ಹಲವಾರು ಚತ್ರಗಳಲ್ಲಿ ಹಾಸ್ಯ ನಟನಾಗಿ ತಮ್ಮದೇ ಆದ ಸ್ಥಾನ ಕಂಡು ಕೊಳ್ಳುತ್ತಿರುವರು ಇವರ ನೃತ್ಯ ನಾಟಕಗಳಲ್ಲಿ ಸಹಕಲಾವಿದೆಯಾದ , ನಾಟಕಗಳಲ್ಲಿ  ನಾಯಕಿಯಾದ ನಮಿತಾ  ಜೀವನ ಸಂಗಾತಿ. ಸಪ್ತ ಪದಿ ತುಳಿದ ನಮಿತಾ ಜೀವನ, ನಾಟಕ, ನೃತ್ಯಗಳಲ್ಲೂ ಜೊತೆ ಜೊತೆಯಾಗಿ ಹೆಜ್ಜೆ ಹಾಕುತ್ತಿರುವುದರಿಂದ ಸಂಗಾತಿಗೆ ಕಲಾರಾಧನೆಗೆ  ಇನ್ನಿಲ್ಲದ ಉತ್ತೇಜನ. ಜೊತೆ ಜೊತೆಯಾಗಿ ಯಶಸ್ಸಿನತ್ತ ದಾಪುಗಾಲು

ನಮಿತಾ ರಾವ್ ಹುಟ್ಟಿದ ಮನೆ  ಮತ್ತು ಮೆಟ್ಟಿದ ಮನೆ ಎರಡರಲ್ಲೂ ಕಲಾಸೇವೆಗೆ ಅವಕಾಶ ಪಡೆದವರು.ಭರತ ನಾಟ್ಯ ಪ್ರವೀಣೆ. ಸಂಗೀತದಲ್ಲೂ ಗತಿ ಉಂಟು. ಭಾವ ಪೂರ್ಣ ಅಭಿನಯ ನೀಡಬಲ್ಲ ನಟಿ ದೇಶವಿದೇಶದಲ್ಲಿ ಪ್ರದರ್ಶನ ನೀಡಿರುವ  ನೃತ್ಯ ಗಾತಿ . ಕಿರುತೆರೆಯಲ್ಲೂ ಮಿಂಚಿದವರು.ಹಲವಾರು ಧಾರಾವಾಹಿಗಳಲ್ಲೂ ನಟನೆ.
ಉದಯೋನ್ಮುಖ ತಾರೆ ನಮಿತಾ ರಾವ್‌


 ಸಿಲ್ಲಿಲಲ್ಲಿ ಧರಾವಾಹಿಯಲ್ಲಿ ಪ್ರೇಕ್ಷಕರು ಹೊಟ್ಟೆ ಹುಣ್ಣಾವಂತೆ ನಗಿಸಿ ಹಾಸ್ಯ ಪಾತ್ರದಲ್ಲಿ ಸೈ   ಎನಿಸಿ ಕೊಂಡ ಅಭಿನೇತ್ರಿ.   .ಶಾಸ್ತ್ರೀಯ ನೃತ್ಯ ಪರಿಣಿತೆ. ಅನೇಕ ನೃತ್ಯ ನಾಟಕಗಲಲ್ಲಿ ಹೆಸರು ಮಾಡಿರುವರು.ಪತಿಯೊಂದಿಗಿನ ಮೋಹಿನಿ ಭಸ್ಮಾಸುರ ಮೊದಲಾದ ಹಲವು ನೃತ್ಯ ನಾಟಕಗಳಿಂದ ಕಲಾ ರಂಗದಲ್ಲಿ ಹೆಸರು ಪಡೆದ ಜೋಡಿ. ದೇಶ ವಿದೇಶದಲ್ಲೂ ಪ್ರದರ್ಶನ ನೀಡಿರುವರು. ಈಗ ಸಿನೆಮಾರಂಗದಲ್ಲೂ ಪ್ರವೇಶ ದೊರೆತಿದೆ. ಇತ್ಕೆಂತೀಚಗೆ ಅವರ ಅಭಿನಯದ  ಚಿತ್ರ ಮಂದಿರದಲ್ಲಿ ಎಂಬ ಸಿನೆಮಾ  ಬೆಂಗಳೂರಿನಲ್ಲಿ ನಡೆದ ಏಳನೇ ಚಲನಚಿತ್ರೋತ್ಸವದಲ್ಲಿ  ಪ್ರದರ್ಶಿಸಿತವಾಗಿ  ಜನ ಮೆಚ್ಚುಗೆ ಗಳಿಸಿತು.ಕೆಂಪೇ ಗೌಡ ಪ್ರಶಸ್ತಿಗೂ ಪಾತ್ರಳಾಗಿರುವ ಕಲಾವಿದೆ. ಈಗ ಸೂರ್ಯಕಲಾತಂಡ  ಚಟುವಟಿಕೆಗಳಲ್ಲಿ ಪ್ರಧಾನ ಪಾತ್ರಧಾರಿ. ಕಲಾಕಟುಂಬದ ಪರಂಪರೆಯ ಮುಂದುವರಿಸಿರುವ ಯುವ ಕಲಾವಿದೆ.
.





No comments:

Post a Comment