ಕನಾಟಕ ಇತಿಹಾಸ ಅಕಾದಮಿಗೆ ಶಾಸನ ಸಾಹಿತ್ಯ ಪ್ರಶಸ್ತಿಗಳ ಸುರಿ ಮಳೆ
ಶಾನಗಳು ಇತಿಹಾಸದ ಅಡಿಗಲ್ಲುಗಳು. ಕರ್ನಾಟಕದಲ್ಲಿ ಏಕೆ ? ಭಾರತದಲ್ಲಿಯೇ ಒಂದೇ ಕಡೆ ಶಾಸನಗಳು ಇಷ್ಟು ಅಧಿಕ ಸಂಖ್ಯೆಯಲ್ಲಿರುವುದು. ಶ್ರವಣ ಬೆಳಗೊಳದಲ್ಲಿ ಮಾತ್ರ. . ಅಲ್ಲಿನ ಚಂದ್ರಗಿರಿ ಅಥವ ಚಿಕ್ಕಬೆಟ್ಟದಲ್ಲಿ ಐದುನೂರಕ್ಕೂ ಮಿಕ್ಕಿ ಶಿಲಾಶಾಸನಗಳಿವೆ. ಶಾಸನ ಅಭ್ಯಾಸಿಗಳಿಗೆ ಚಂದ್ರಗಿರಿ ಜ್ಞಾನದ ಆಗರ . ಶ್ರವಣ ಬೆಳಗೊಳ ಜೈನಕಾಶಿ ಎಂದು ಪ್ರಖ್ಯಾತ. ಜೊತೆಗ ಶಾಸನ ಕಾಶಿ ಎನ್ನಬಹುದು. ಎರಡು ಸಹಸ್ರಮಾನಕ್ಕೂ ಪುರಾತನವಾದ ಈ ಕ್ಷೇತ್ರದಲ್ಲಿನ ಬಾಹುಬಲಿಯ ಮಹಾಮಸ್ತಕಾಭಿಷೇಕ ದಂತೆಹನ್ನೆರಡುವರ್ಷಕೊಮ್ಮೆ ಚಂದ್ರಗಿರಿ ಉತ್ಸವವನ್ನೂ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಶಾಸನ ಕ್ಷೇತ್ರದಲ್ಲಿ ಗಣನೀಯ ಸಾಧಕರಿಗೆ ಶಾಸನ ಸಾಹಿತ್ಯ ಪ್ರಶಸ್ತಿಯನ್ನು ನೀಡಲು ಪೂಜ್ಯ ಚಾರು ಕೀರ್ತಿ ಭಟ್ಟಾರಕಸ್ವಾಮೀಜಿಯವರು ನಿರ್ಧರಿಸಿರುವುರು . ಈ ಬಾರಿಯ ಶಾಸನ ಕ್ಷೇತ್ರದಲ್ಲಿನ ಹನ್ನೊಂದು ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ . ಕರ್ನಾಟಕ ಸಾಹಿತ್ಯ ಪರಿಷತ್ತಿನ ಅದ್ಯಕ್ಷರೂ ಸೇರಿದಂತೆ ೯ ಸದಸಸ್ಯರಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ. ಹನ್ನೊಂದರಲ್ಲಿ ಹತ್ತು ಪ್ರಶಸ್ತಿಗಳು ಅವರಿಗೇ ಸಂದಿವೆ.ಅವರು ಇತಿಹಾಸ ಅಕದಮಿಯ ಗೌರವ ಪತಾಕೆ ಎತ್ತಿ ಹಿಡಿದಿರುವರು.
ಹಾರ್ಧಿಕ ಅಭಿನಂದನೆಗಳು
ಕಾರ್ಯಕ್ರಮದ ವಿವರ ಹೀಗಿದೆ

No comments:
Post a Comment