Wednesday, October 29, 2014

ಪ್ರದರ್ಶನ ಕಲೆಯ ಪ್ರೀತಿ ಬೆಳೆಸುವ ನೀನಾಸಂ




ಹೆಗ್ಗೋಡಿನ ನೀನಾಸಂ.

ನೀನಾಸಂನ ನಾಟಕ ಶಿಬಿರದಲ್ಲಿ ಭಾಗ ವಹಿಸಬೇಕೆಂಬದು ಬಹುದಿನದ ಬಯಕೆ. ಉದ್ಯೋಗದಲ್ಲಿರುವ ತನಕ ಕೆಲಸದ ಒತ್ತಡದಲ್ಲಿ ರಜೆಹಾಕಿ ಹೋಗುವುದುಆಗಿರಲೇ ಇಲ್ಲ.. ಆಸಕ್ತಿಯು ನಿನಾಸಂನ ತಿರುಗಾಟದ ನಾಟಕಗಳನ್ನು ನೋಡುವುದಕ್ಕೇ ಮಾತ್ರ ಸೀಮಿತವಾಗಿತ್ತು. ಆನಾಟಕಗಳ ಪ್ರಯೋಗಗಳು ತಮ್ಮ ಹೊಸತನದಿಂದಾಗಿ ಮನ ಮುಟ್ಟುತ್ತಲಿದ್ದವು. ನೀನಾಸಂ ಕೆ.ವಿ. ಸುಬ್ಬಣ್ಣನವರ ಕನಸೊನ ಕೂಸು. ಮೈಸೂರಿನಲ್ಲ ಎಂ ಎ ಓದುವಾಗಲೇ ಸಾಹಿತ್ಯ ನಾಟಕ ಸಮಸ್ಕರತಿಗಳತ್ತ ಒಲವು. ಅಲ್ಲಿ ಅನಂತ ಮೂರ್ತಿ ವಿಶ್ವನಾಥ ಮೊದಲಾದವರ ಗೆಳೆತನ. ಎಂ. ಎ ಆದ ಮೇಲೆ ಕಾಲೇಜಿನಲ್ಲಿಪ್ರಾಧ್ಯಾಪಕನಾಗಿ ನಗರದಲ್ಲಿ ನೆಲಸುವ ಅವಕಾಶ ಬಿಟ್ಟು ಹುಟ್ಟೂರಿನ ಅಡಕೆ ತೋಟದ ಕೃಷಿಗೆ ಮನ ಮಾಡಿದರು.

ಆದರೆ ಅವರಲ್ಲಿನ ಸಾಂಸ್ಕೃತಿಕ ತುಡಿತ ಸುಮ್ಮನೆ ಕೂಡಲು ಬಿಡಲಿಲ್ಲ,ಸುತ್ತಲ ಹಳ್ಳಿಯ ಯುವಕರೊಡಗೂಡಿ ಶುರು ಮಾಡಿದ  ಹೆಗ್ಗೋಡು ಪ್ರದರ್ಶನ ಕಲೆಯ ಕೇಂದ್ರವಾಯಿತು.
ಕೆ.ವಿ ಸುಬ್ಭಣ್ಣನವರು ಕುಗ್ರಾಮವೊಂದನ್ನು ತಮ್ಮ ಶ್ರಮ  ಮತ್ತು ಸಾಧನೆಯಿಂದಾಗಿ ರಾಷ್ಟ್ರೀಯ ನೆಲೆಯಲ್ಲಿ ಸಾಂಸ್ಕೃತಿಕ ಕೇಂದ್ರವಾಗಿಸಿ ಹಳ್ಳಿಯಿಂದ ದಿಲ್ಲಿಯ ವರೆಗೆ ಹೆಸರು ಮಾಡಿದರು.ಮೆಗಸೆಸ್ಸೆ ಪ್ರಶಸ್ತಿಯು ಅವರ ಮುಡಿಗೇರಿದ ಮೇಲೆಎನ್‌ಎಸ್‌ಡಿ, ರಂಗಾಯಣ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಪೈಪೋಟಿ ನಡೆಸುವಂತಾಯಿತು.
ನೀನಾಸಂ ಎಂಬುದು ಸ್ಥಳೀಯ ದೇವರ ಹೆಸರಿನಲ್ಲಿ  ಸ್ಥಾಪಿಸಿದ ಸಂಘಟನೆ. ನೀಲಕಂಠೇಶ್ವರ ನಾಟ್ಯ ಸೇವಾಸಂಘ .ಇದರ ಪ್ರಾರಂಭ ಸ್ವಾತಂತ್ರ್ಯಾನಂತರದ ವರುಷದಲ್ಲಿ. ಸಂಸ್ಕೃತಿಯಲ್ಲ್ಲಿಆಸಕ್ತರಾದ ಮಲೆನಾಡಿನ ಮಡಿಲಲ್ಲಿರುವ  ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ಸುತ್ತಮುತ್ತಲಿಪುಟ್ಟ ಪುಟ್ಟ ಹಳ್ಳಿಗಳ ಆಸಕ್ತ
ಯುವಕರು ಕೈ ಜೋಡಿಸಿ ೧೯೪೮ ರಲ್ಲಿ ಪ್ರಾರಂಭಿಸಿದರು. ಮೊದಲು ಇದರ ಕಾರ್ಯ ಚಟುವಟಿಕೆ ಸಂಜೆ ತೊಟದ ಕೆಲಸದ ನಂತರ ಆಸಕ್ತರು ಒಂದೆಡೆ ಸೇರಿ ಸಮಕಾಲೀನ ವಿಷಯಗಳನ್ನು ವಿಶೇವಾಗಿ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ವಿಷಯಗಳ ಚರ್ಚೆಗೆ ಮೀಸಲಾಗಿತ್ತು. ಕೃಷಿಕೆಲಸದ ಏಕತಾನತೆಯಿಂದ ಪಾರಾಗಲು ವಿಶೇಷವಾಗಿ ಮಳೆಗಾಲದಲ್ಲಿ ಯಕ್ಷಗಾನ ಮತ್ತು ನಾಟಕಗಳ  ಪ್ರದರ್ಶನವೂ ನಡೆಯುತಿತ್ತು . ಜೊತೆಗೆ ಸಾಗರಕ್ಕೆ ಭೇಟಿ ನೀಡುವ ಕಲೆ ಸಾಹಿತ್ಯ ಮತ್ತು ನಾಟಕ ರಂಗದ ಸಾಧಕರ ಉಪನ್ಯಾಸವನ್ನು ವ್ಯವಸ್ಥೆಮಾಡಲಾಗುತಿತ್ತು.


ಸಾಂಪ್ರದಾಯಿಕ ಸಮುದಾಯವನ್ನು ಆಧುನಿಕ ಸಮಾಜವಾಗಿ ಪರಿವರ್ತಿಸುವ ಪ್ರಯತ್ನ ವಾಗಿ ಉದಯಿಸಿತು,ವ್ಯಕ್ತಿ ಮತ್ತು ಸಮುದಾಯದ ನಡುವಿನ ಸಂಘರ್ಷದ ಬದಲಾಗಿ ಮೈಕ್ರೊ ವ್ಯಕ್ತಿ ಮತ್ತು ಮಾಕ್ರೋ ಸಮುದಾಯಗಳು ಸ್ಪರ್ಧೆಗೆ ಇಳಿಯದೆ  ಪರಸ್ಪರ ಪೂರಕವಾಗಿ ಸಂವಹನ ನಡೆಸುವ ಸಾಧ್ಯತೆ ಕಂಡುಕೊಳ್ಳಲು ರಚನಯಾಯಿತು. ನೂತನವಾದ ಸಮುದಾಯ,ಬಹುಆಯಾಮದ  ರಾಜಕೀಯ ಮತ್ತು ಸಂಸ್ಕೃತಿ,ಪರಂಪರೆ ಮತ್ತು ಬದಲಾವಣೆ ಸಂರಕ್ಷಣೆ ಮತ್ತ ಮಾರ್ಪುಗಳಿಗೆ ಸಮಾನ ಗೌರವ ಕೊಡುವ ಗುರಿ ಇರಿಸಿಕೊಂಡಿತು.ಆಯ್ಕೆಯ ಅಗತ್ಯಬಿದ್ದಾಗ ಅದರ ಹಕ್ಕು ಸಂಪೂರ್ಣವಾಗಿ ಸ್ಥಳೀಯ ಸಮುದಾಯದ್ದಾಗಿರ ಬೇಕು ಬೇರೆ ಯಾವುದೇ ಬಾಹ್ಯ ಶಕ್ತಿ ಕೇಂದ್ರದ್ದಾಗಿರಬಾರದು ಎಂಬುದು ಅದರ ಖಚಿತ ನಿಲುವು.
ಮಹಾತ್ಮಾಗಾಂಧೀಜಿಯವರ ಸ್ಪೂರ್ತಿದಾಯಕ ಮಾರ್ಗದರ್ಶನದಲ್ಲಿ ಅನ್ಯರೊಡಗಿನ ಹೋರಾಟವನ್ನೂ ಆತ್ಮ ಸಂಘರ್ಷವಾಗಿಸಿ  ಭಿನ್ನವೆನಿಸುವ ಸಂಪ್ರದಾಯ ಮತ್ತು ಆಧುನಿಕತೆ, ಪೌರಾತ್ಯ ಮತ್ತು ಪಾಶ್ಚಿಮಾತ್ಯ,ವೈಯುಕ್ತಿ ಮತ್ತುಸಾರ್ವತ್ರಿಕವ್ಯಲ್ತಿ ನಿಷ್ಠತೆ ಮತ್ತು ವಸ್ತು ನಿಷ್ಠತೆ,ಪವಿತ್ರ ಮತ್ತು ಜ್ಯಾತ್ಯಾತೀತ ಗಳನ್ನು ತೊಡೆದು ಹಾಕುವ ಕನಿಷ್ಠ ಪ್ರಶ್ನಿಸುವ ಗುರಿ ಇದರದಾಗಿತ್ತು.
ಈ  ಪ್ರಯತ್ನಕ್ಕೆ ಸಹಪಾಠಿಯಾಗಿದ್ದ ಸಾಹಿತಿ ಮತ್ತು ಚಿಂತಕ ಯು.ಆರ್‌.ಅನಂತ ಮೂರ್ತಿಯವರ ಸಹಚರ್ಯವೂ ದೊರೆಯಿತು
ಶುರುವಿನಲ್ಲಿನ ಹವ್ಯಾಸಿ ನಾಟಕ ಪ್ರದರ್ಶನ,ಸಹಿತ್ಯ ಕೃತಿಗಳ ನ್ನುತನ್ನದೇಆದ ಅಕ್ಷರ ಪ್ರಕಾಶನದ ಮೂಲಕ ತನ್ನದೇ ಆದ ಮಿತಿಯಲ್ಲಿ ಹೊರತರುವ ಸಮುದಾಯದ ವೇದಿಕೆಯಾಗಿತ್ತು.೧೯೬೦
 ದಶಕದಲ್ಲಿ ನೀನಾಸಂ ಎಂಬ ಆಧುನಿ ಹೆಸರಿನೊಡನೆ  ಹೊಸ ತಿರುವು ಪಡೆಯಿತು,ಅದು ಸಂಪ್ರದಾಯಿಕ ಹೆಸರಿನ ಆಧುನಿಕಸಂಕ್ಷಿಪ್ತರೂವಾಗಿ ಹಳೆಯ ಮತ್ತು ಹೊಸವಿಚಾರಗಳ ಸಮ್ಮಿಲನದ ಸಂಕೇತವಾಯಿತು.ಡಾ. ಶಿವರಾಮಕಾರಂತರ ನೂತನ ಯಕ್ಷಗಾನ ಪ್ರಯೋಗ, ಆಧುನಿಕ ನಾಟಕದ ಬಿ.ವಿ ಕಾರಂತರ ರಂಗ ಪ್ರಯೋಗಗಳಆವಿಷ್ಕಾರಗಳ ವೇದಿಕೆಯಾಯಿತು. ಈ ಎಲ್ಲ ಚಟುವಟಿಕೆಗಳಿಗೆ ಅಗತ್ಯವಾದ ಶಾಶ್ವತ ರಂಗಮಂಟೊದ ನಿರ್ಮಾಣವಾಯಿತು ಈ ವರೆಗೆ ಸ್ಥಳಿಯವಾಗಿದ್ದ ತಂಡವು ಬೇರೆಡೆಗೂ ರಂಗ ಪ್ರದರ್ಶನ ನೀಡಲು ಬೇಡಿಕೆ ಬರತೊಡಗಿತು. ವಿಶೇಷವಾಗಿ ’ಸಂಗ್ಯಾ ಬಾಳ್ಯಾ; ರಾಜ್ಯದ ಎಲ್ಲೆಡೆ ಬಹುಜನ ಪ್ರಿಯವಾಯಿತು ಪರಿಣಾಮವಾಗಿ ರಾಜದ್ಯಾದ್ಯಂತ ಹೆಸರಾದುದು ಮಾತ್ರವಲ್ಲ   ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಿತು.
ಪ್ರತಿವರ್ಷ ನವಂಬರ್‌ನಿಂದ ಮಾರ್ಚವರೆಗೆ ನಾಲ್ಕು ತಿಂಗಳ ವರಗೆ ತಿರುಗಾಟ ನಡೆಯುವುದು. ರಂಗಭೂಮಿ ಆಸಕ್ತರು ನಿಗದಿತ ಸರತ್ತು ಪುರೈಸಿ ತಮ್ಮ ಊರಿಗೆ ಕರೆಸ ಬಹುದು ನೂರಾ ನಲವತ್ತು ದಿನಗಳಲ್ಲಿ ೧೨೦ ಪ್ರದರ್ಶನ ನೀಡುವರು. ಇದು ಬಹುತೇಕ ಸ್ವಾಲಂಬಿಯಾಗಿದೆ.  ಸುಮಾರು ಇಪ್ಪತ್ತು ಜನರಿರುವ ತಂಡದಲ್ಲಿ ಸಾಮಾನು ಸಾಗಣಿಕೆಯಿಂದ ಹಿಡಿದು ರಂಗಸಜ್ಜಿಕೆ, ಸಂಗೀತ, ಬೆಳಕು,  ನಟನೆ  ಎಲ್ಲಕೆಲಸವನ್ನೂ  ತಂಡದ ಸದಸ್ಯರೇ ನಿರ್ವಹಿಸುವರು
ಇದೇಸಮಯದಲ್ಲಿ ಇನ್ನೊಂದು ಚಟುವಟಿಕೆಯೂ ಕುಡಿಯೊಡೆಯಿತು;ಆಧಿನಿಕ ಜಗತ್ತಿನ ಅತ್ಯಾಕರ್ಷಕ ಮಾಧ್ಯಮವಾದ ಚಲನಚಿತ್ರ ಕುರಿತಾಗಿ ಗಂಭೀರ ಅದ್ಯಯನ ನಡೆಸಲು ಚಿತ್ರಸಮಾಜ ರಚಿತವಾಯಿತು ಅದರಡಿಯಲ್ಲಿ ಸರ್ವಕಾಲಿಕ ಶ್ರೇಷ್ಠ ಸಿನೆಮಾಗಳ   ಚಿತ್ರೋತ್ಸವ  ಚಿತ್ರೋತ್ಸವ  ಚಲನ ಚಿತ್ರರಸ ಗ್ರಹಣ ಶಿಬಿರಗಳನ್ನು ನ್ಯಾಷನಲ್‌ ಫಿಲ್ಮ್  ಮತ್ತು ಟೆಲಿವಿಜನ್‌ ಇನಸ್ಟಿಟ್ಯೂಟ್  ಮತ್ತು ನ್ಯಾಷನಲ್‌ಫಿಲ್ಮ ಆರ್ಕೆವ್‌ಗಳ ಸಹಯೋಗದೊಡನೆ ನಡೆಸತೊಡಗಿತು. ದೇಶದಲ್ಲೇ ಗ್ರಾಮೀಣ ಭಾಗದಲ್ಲಿ ನಡೆಯುವ ಪ್ರಪ್ರಥಮ ಚಟುವಟಿಕೆ ಎಂಬ ಹಿರಿಮೆ ಇಂದಿಗೂ  ಇದೆ. ಇದರ ಫಲಶೃತಿಯಾಗಿ ಚಿತ್ರ ಜಗತ್ತಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಖ್ಯಾತ ನಾಮರು ಚಿತ್ರ ಪ್ರದರ್ಶನ ಮತ್ತು ಅವುಗಳ ಕುರಿತ ಮಾತುಕಥೆಯಿಂದ ರಸ ಗ್ರಹಣಕ್ಕೆ ಅನುವಾಗುವುದು.
ಕಳೆದ ಇಪ್ಪತ್ತೈದು ವರ್ಷದಿಂದ ಪ್ರತಿ ವರ್ಷವೂ ದಸರೆಯಸಮಯದಲ್ಲಿ ನಡೆಯುವ ಸಂಸ್ಕೃತಿ ಶಿಬಿರವು ಸಾಹಿತ್ಯ, ನಾಟಕ, ಚಲನಚಿತ್ರಗಳಲ್ಲಿನ ಆಸಕ್ತರ ಗಮನ ಸೆಳೆದಿದೆ. ಏಳುದಿನಗಳ ಅವಧಿಯ ಈ ಕಾರ್ಯಕ್ರಮವು ಸಾಹಿತ್ಯ, ಕಲೆ, ನಾಟಕ, ಜಾನಪದ, ಸಂಗೀತಗಳ  ಪರಿಚಯ ಮಾಡಿಕೊಡುವುದು.
ಮೂರನೆಯ ಮಜಲಿನಲ್ಲಿ ನೀನಾಸಂಗೆ ಅರೆ ವೃತ್ತಿಪರ ರಂಗ ತಂಡವೆಂಬ ಸ್ವರೂಪ ಬಂದಿತು. ಯುವ ಪೀಳಿಗೆಗ ಹತ್ತು ತಿಂಗಳ ಅವಧಿಯ ರಂಗ ತರಬೇತಿ ನಿಡುವ ಯೋಜನೆ ಜಾರಿಗೆ ಬಂದಿದೆ ಥೇಟರ್‌ಇನಸ್ಟಿಟ್ಯೂಟ್‌.ಮೊದಲ ಮೂರಿವಷ್ ತುಸು ಸಂಕಷ್ಟ ಎದುರಿಸಿದರು ೧೯೮೫ ರಿಂದ ಸರ್ಕಾರದ ಅನುದಾನ ದೊರೆಯ ತೊಡಗಿತು. ಆಗಲೇ ತಿರುಗಾಟ ಎಂಬ ಸಂಚಾರಿ ನಾಟಕ ತಂಡ ಜನಿಸಿತು, ನೀನಾಸಂನ ತರಬೇತಿ ಪಡೆದ ನಟರು ವೇತನ ಸಹಿತ ರಾಜ್ಯಾದ್ಯಂತ  ವಿವಿಧ ಕೇಂದ್ರಗಳಲಲ್ಲಿ  ಮೂರು ನಾಟಕಗಳನನ್ನು  ಪ್ರದರ್ಶಿಸ ತೊಡಗಿದರು.ಇದರಲ್ಲಿ ಹಳೆಯ ವಿದ್ಯಾರ್ಥಿಗಳು ಪೂರ್ಣಾವಧಿಯಲ್ಲಿ ಪಾಲ್ಗೊಳ್ಳುವರು. ಇದು ಈಗ ವಾರ್ಷಿಕ ಹವ್ಯಾಸವಾಗಿದೆ,ರಂಗಾಸಕ್ತರು ತಮ್ಮಲ್ಲಿ ನೀನಾಸಂ ನಾಟಕವಾಡಿಸಲು ಪೈಪೋಟಿ ನಡೆಸುವರು. ಪರಿಣಾಂ ತಿರುಗಾಟದ ವೆಚ್ಚ ವನ್ನುಅವರೇ ಭರಿಸುವರು.
ಜನಸ್ಪಂದನ ದ ಪರಿಣಾಮವಾಗಿ ಎರಡು ವರ್ಷ ರಾಜ್ಯದ ವಿವಧ ಭಾಗಗಳಲ್ಲಿ  ಅಲ್ಲಿನ ಸಾಂಸ್ಕೃತಿಕ ತಂಡಗಳ ಸಹಯೋಗದಿಂದ ಥೇಟರ್‌ ವರ್ಕಷಾಪ್‌ಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಈ ಎಲ್ಲ ಸಾಂಸ್ಕೃತಿಕ ಸೇವೆಗೆ ಅಂತರಾಷ್ಟ್ರೀಯ ಮನ್ನಣೆಯು ರೋಮನ್‌ಮೆಗಾಸಸ್‌ಎ ಪ್ರಶಸ್ತಿಯ ರೂಪದಲ್ಲಿ ಕೆ. ವಿ. ಸುಬ್ಬಣ್ಣ ಅವರಿಗೆ ದೊರೆಯಿತು. . ಪ್ರಶಸ್ತಿಯ ಹಣವನ್ನು ಮೂಲಧನವಾಗಿಸಿ ನೀನಾಸಂ ಪ್ರತಿಷ್ಠಾನ ಸ್ಥಾಪಿತಮಾಡಿ ಹೊಸ ಯೋಜನೆ ಪ್ರಾರಂಭಿಸಲಾಯಿತು  ಅದರ ಅಡಿಯಲ್ಲಿ ಈವರೆಗ ಕಿರು ಅವಧಿಯ  ಸಾಹಿತ್ಯ ರಸಗ್ರಹಣ ನೂರಕ್ಕೂ ಹೆಚ್ಚು ಶಿಬಿರಗಳನ್ನು ರಾಜ್ಯಾದ್ಯಂತ  ಸಾಂಸ್ಕೃತಿಕ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಈವರಗೆ ನಡೆಸಲಾಗಿದೆ. 
ನೀನಾಸಂನ ಹಳೆಯ ವಿದ್ಯಾರ್ಥಿಗಳು ಈಗ ನಾಡಿನಾದ್ಯಂತ ತಮ್ಮ ಗಟ್ಟಿ ಅನುಭವದ ನೆಲೆಯಲ್ಲಿ ಅನೇಕ ರಂಗ ತಂಡಗಳನ್ನು ಕಟ್ಟಿದ್ದಾರೆ. ಕಿರುತೆರೆಯಲ್ಲಂತೂ ಹೊಸ ಅಲೆ ಮೂಡಿಸಿದ್ದಾರೆ. ಇವರು ಬರಿ ನಟನೆ ಮಾತ್ರವಲ್ಲ ರಂಗಸಜ್ಜಿಕೆ, ಬೆಳಕು, ಮೇಕಪ್‌ನ ಜೊತೆ ಎಲ್ಲ ರಂಗಕೆಲಸಗಳನ್ನು ಸ್ವತಃ ನಿರ್ವಹಿಸುವುದರಿಂದ  ಎಲ್ಲವಿಧದಲ್ಲೂ ಸ್ವಾಲಂಬಿಗಳಾಗುವರು.
ಅಕ್ಷರ  ತಂದೆ ಸುಬ್ಬಣ್ಣ ನವರೊಡನೆ

ಈಗ ಕೆ.ವಿ ಸುಬ್ಬಣ್ಣನವರೂಹೋಗಿ ಐದು ವರ್ಷವಾಗಿದೆ , ಸತತ ಇಪ್ಪತ್ತೈದು ವರ್ಷ ಸ್ಪೂರ್ತಿ ನೀಡಿದ  ಅನಂತ ಮೂರ್ತಿಗಳೂ ಇಲ್ಲ ಆದರೂ ಚಟುವಟಿಕೆಗಳು ಯಥಾರೀತಿ ಸಾಗಿವೆ.ಕೆ.ವಿ .ಅಕ್ಷರ, ಟಿಪಿ. ಅಶೋಕ ಅವರ ಸಾರಥ್ಯದಲ್ಲಿ ಸುಗಮವಾಗಿ ಸಾಗಿವೆ.


No comments:

Post a Comment