Tuesday, October 21, 2014

ಅಪೂರ್ವ ಸಾಧನೆ



                 ಅಪೂರ್ವ ಅಂಗಡಿಗೆ ರಾಜ್ಯ ಮಟ್ಟದ ಪ್ರಪ್ರಥಮ ಸ್ಥಾನ
      
                           


 ಚಿತ್ರದುರ್ಗದ ಮುರುಘಾಮಠದ ವಚನ ಕಮ್ಮಟವು ಪ್ರತೀವರ್ಷವೂ ಏರ್ಪಡಿಸುವ ವಚನ ಕಮ್ಮಟ ಪರೀಕ್ಷೆಯಲ್ಲಿ ಹಾಸನದ ಯುನೈಟೆಡ್ ಅಕಾಡೆಮಿಯ ವಿದ್ಯಾರ್ಥಿನಿ ವಿ.ಎಂ.ಅಪುರ್ವ ಅಂಗಡಿ ರಾಜ್ಯಕ್ಕೆ ಮೊದಲ ಪ್ರಪ್ರಥಮಸ್ಥಾನ ಗಳಿಸಿದ್ದಾರೆ. ಹತ್ತನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿನಿಯು 9ನೇ ತರಗತಿಯಲ್ಲಿದ್ದಾಗ ವಚನಗಳ ಬಗ್ಗೆ, ಶರಣರ ಬಗ್ಗೆ ಆಳವಾಗಿ ಅಧ್ಯಯನ ಮಾಡಿ 10/11/2013 ರಂದು  ಪರೀಕ್ಷೆ ಬರೆದಿದ್ದಳು. ಸುಮಾರು 20 ಪುಟಗಳಷ್ಟು ಬರೆದ ಸ್ಪುಟವಾದ ಬರವಣಿಗೆಯು ಈ ವಿದ್ಯಾರ್ಥಿನಿಗೆ ಪ್ರಥಮ ಪ್ರಪ್ರಥಮಸ್ಥಾನ  ಬರಲು ಪೂರಕವಾಗಿದೆ ಎಂದು ತಿಳಿದು ಬಂದಿದೆ. ಈಚೆಗೆ ಚಿತ್ರದುರ್ಗದಲ್ಲಿ ದಿನಾಂಕ 3/10/2014 ರಂದು ಜರುಗಿದ ಶರಣಸಂಸೃತಿ ಉತ್ಸವ ಕಾರ್ಯಕ್ರಮದಲ್ಲಿ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯೊಂದಿಗೆ ಅಪೂರ್ವಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಮುರುಘಾಮಠದ ಶ್ರೀಡಾ.ಶಿವಮೂರ್ತಿ ಮುರುಘಾಶರಣರು, ದಾವಣಗೆರೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಬಿ.ಕಲಿವಾಳ್, ಮತ್ತು ಶ್ರೀಶಿವಾನಂದ ಮಹಾಸ್ವಾಮಿಗಳು ಉಪಸ್ಥಿತರಿದ್ದರು. 5 ತರಗತಿಯಿಂದ ಪದವಿ   ವರೆಗೆ ರಾಜ್ಯದಲ್ಲಿನ ಸುಮಾರು 50,000 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ. ಅಪೂರ್ವಳ ತಂದೆ ವಿಜಯ ಅಂಗಡಿ ಆಕಾಶವಾಣಿ ಹಾಸನದಲ್ಲಿ ಕೃಷಿ ವಿಭಾಗದ ಹಿರಿಯ ಅಧಿಕಾರಿ. ಮೇಲಾಗಿ ಸಾವಯವಕೃಷಿಯ ಪ್ರತಿಪಾದಕರಾಗಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರು. ತಾಯಿ ಶ್ರೀ ಮತಿ  ಮಂಜುಳಾ ಅಂಚೆ ಇಲಾಖೆಯ ಉದ್ಯೋಗಿ.

No comments:

Post a Comment