Wednesday, June 18, 2014

ಅಮೇರಿಕಾ ಅನುಭವ-10

ಅಂದು ರೌ  ಇಂದು ಶಾಷ್‌
                       ’ Some one  knows my name’  ಪುಸ್ತಕ ಕುರಿತ ಸಂವಾದ.


 ಲೈಬ್ರರಿಯಲ್ಲಿ ನಮ್ಮ ಬುಕ್ ಕ್ಲಬ್‌ ಸಭೆ ಬುಧವಾರ ರಾತ್ರಿ ೭.೩೦ಕ್ಕೆ  ಸೇರಿತು. ಇದು ಅಮೇರಿಕಾದಲ್ಲಿ ೧೮ನೆಯ ಶತಮಾನದಲ್ಲಿ ದೊಡ್ಡ ಸಮಸ್ಯೆಯಾಗಿದ್ದ ಗುಲಾಮಗಿರಿಯ ಕುರಿತಾದ ಪುಸ್ತಕ ’ Some one  knows my name “ ಕುರಿತಾದ ಚರ್ಚೆ ಇದ್ದಿತು. ಅದು ಕೆನಡಾ ಮೂಲದ ಲಾರೆನ್ಸ್‌ ಹಿಲ್‌ ಬರೆದ ಐತಿಹಾಸಿಕ ಕಾದಂಬರಿ. ಬೃಹತ್ ಗಾತ್ರದ್ದು. ಸುಮಾರು ಐದು ನೂರು ಪುಟಗಳದ್ದು . ಅಪಾರ ಸಂಶೋಧನೆಯ ಫಲವಾಗಿ ಹೊರಬಂದ ಕೃತಿ.  ನಾನು ಸರಿಯಾಗಿ ಏಳೂವರೆಗೆ  ಹೋದೆ. ಕಾನ್ಫರೆನ್ಸ್‌ ಹಾಲಿನ ಬಾಗಿಲು ಹಾಕಿತ್ತು. ಸರಿ ಇನ್ನು ಶುರುವಾಗಿಲ್ಲ ಎಂದುಕೊಂಡು ಪೇಪರ್ ಓದಲುಕುಳಿತೆ. ಏಕೋ ಅನುಮಾನ ಬಂದು ವಿಚಾರಿಸಿದರೆ ಆಗಲೇ ಪ್ರಾರಂಭವಾಗಿದೆ. ಬಾಗಿಲು ಹಾಕಿದ್ದಾರೆ. ತಿಳಿಯಿತು . ಬಾಗಿಲು ತೆರೆದುಒಳಗೆ ಹೋದರೆ ಆಗಲೇ ಸುಮಾರು ಇಪ್ಪತ್ತು  ಜನ ಪುಸ್ತಕ ಮುಂದಿಟ್ಟು ಕೊಂಡು ಚೌಕಾಕಾರವಾಗಿ ಹಾಗಿದ್ದ ಮೇಜುಗಳ ಹಿಂದೆ ಕುಳಿತಿದ್ದರು. ಎಲ್ಲ ಹೊಸ ಮುಖಗಳೇ.  ಹೋದ ತಕ್ಷಣ ಕಾಗದ ಮಡಿಚಿ ಮಾಡಿದ್ದ  ನಾಮಪಲಕ ನೀಡಿ  please write your first name  ಎಂದರು.ಎಲ್ಲರ ಮುಂದೆ ಮೇಜಿನ ಮೇಲೆ ಇಡಲಾಗಿದ್ದ ಫಲಕಗಳನ್ನು ಗಮನಿಸಿದೆ. ಕ್ಯಾಥಿ.ಬಾರ್ಬರಾ, ಲೂಸಿ ,ಆಮೀ ಜೋ, ಜೂಲೀ ಇತ್ಯಾದಿ ಚಿಕ್ಕದಾದ  ಹೆಸರುಗಳೇ ಕಂಡು ಬಂದವು. ನಾನು ತುಸು ಗೊಂದಲದಲ್ಲಿ ಬಿದ್ದೆ. ಅದನ್ನು ಗಮನಿಸಿ write your personal name ಎಂದಳು ಪಕ್ಕದಲ್ಲಿ ಇದ್ದ ಮಹಿಳೆ. ಮೈ ನೇಮ್ ಈಜ್ ಲೆಂಥಿ ,ಎಂದಾಗ ಹೆಸರು ಕೇಳಿದರು “ ಶೇಷಗಿರಿರಾವ್‌ ಹರಪನ ಹಳ್ಳಿ ,” ಸಂಕೋಚದಿಂದ ಹೇಳಿದೆ . Then you write Shash  ಎಂದರು. ಮತ್ತೆ ಪುನರ್‌ನಾಮಕರಣ ಎಂದು ನಸುನಕ್ಕೆ.ಹೋದ ಸಭೆಯಲ್ಲಿ ರೌ ಆಗಿದ್ದೆ ಇಂದಿನ ಸಭೆಯಲ್ಲಿ ಶಾಷ್‌ ಆದೆ.

ಇಂದಿನ ಸಭೆಯಲ್ಲಿ ಮಹಿಳೆಯರೇ  ಕಂಡುಬಂದರು. ಕೋರಿಯಾ, ಚೈನಾ , ಯುರೋಪಿನ ವಿಭಿನ್ನ ದೇಶಗಳವರೆಂದು ಅವರ ಮಾತಿನ ದಾಟಿಯಿಂದ ತಿಳಿದು ಬಂದಿತು ಒಬ್ಬರು ಭಾರತಿಯರಂತೆ ಕಂಡರು, ಹೋದ ಸಲಕ್ಕಿಂತ ಈ ಸಲ ವ್ಯವಸ್ಥಿತವಾಗಿತ್ತು. ಕ್ಯಾಥಿ ಸಂಯೋಜಕಿ.ಪುಸ್ತಕದ ಕುರಿತ ಸೊಗಸಾದ ಪೀಠಿಕೆ ನೀಡಿದಳು.
Some one  knows my name “  ಹದಿನೆಂಟನೆಯ ಶತಮಾನದಲ್ಲಿ ಆಫ್ರಿಕಾದಿಂದ ಕದ್ದು ಅಮೇರಿಕಾಗೆ ಸಾಗಿಸಲಾದ ೯ ವಯಸ್ಸಿನ ಬಾಲಕಿಯೊಬ್ಬಳ ಆತ್ಮಕಥೆ. ಅವಳ ಹೆಸರು ಅಮೀನಾಟ. ಚಿಕ್ಕದಾಗಿ ಮೀನಾ ಎಮದು ಕರೆಯುತಿದ್ದರು. ಇದು ಆಫ್ರಿಕಾ, ಅಮೇರಿಕಾ ಮತ್ತು ಇಂಗ್ಲೆಂಡ್ ಮೂರು ಖಂಡಗಳನ್ನು ಒಳಗೊಂಡ  ಗುಲಾಮರಾದ ನಿಗ್ರೋಗಳು ,ಇಂಡಿಗೋ ಪ್ಲಾಂಟರ್‌ ಶ್ವೇತವರ್ಣೀಯರು, ಅಮೇರಿಕಾ ಸ್ವಾತಂತ್ರ್ಯ ಹೋರಾಟಗಾರು. ಗುಲಾಮಗಿರಿ ರದ್ದತಿಯ ಹೊರಾಟಗಾರರು ಹೀಗೆ ನೂರಾರು ಪಾತ್ರಗಳ ಸರಣಿಯೇ ಇದೆ. ಬಹುತೇಕ ಪಾತ್ರಗಳು ಐತಿಹಾಸಿಕವಾದವುಗಳೇ. ಅವುಗಳು  ಬ್ರಿಟಿಷರು ಅಮೇರಿಕಾ ಬಿಡುವಾಗಿನ “ನಿಗ್ರೋ ಬುಕ್‌” ಎಂಬ ಅಧಿಕೃತ ದಾಖಲೆಯಿಂದ ಪಡೆದವು. ಜೊತೆಗೆ ಆಫ್ರಿಕನ್‌ ಅಮೇರಿಕನ್‌ರ ಚಳುವಳಿ ಹಿನ್ನೆಲೆಯಿಂದ ಲೇಖಕ ಹಿಲ್‌ ಬಂದಿರುವುದು  ಇನ್ನೊಂದು  ಪ್ರಮುಖ ಅಂಶ.
ನಾವು ಎಸ್‌ ಎಲ್‌ ಬೈರಪ್ಪನವರು ಪ್ರತಿ ಕಾದಂಬರಿ ಬರೆವಾಗ ವಿಷಯ ಸಂಗ್ರಹ ಮತ್ತು ಮಾಡುವ ಸಂಶೋಧನೆ ಕಂಡು ಕಣ್ಣು ಕಣ್ಣು ಬಿಟ್ಟಿದ್ದೇವೆ. ಇಲ್ಲಿನವರ ಸಂಶೋಧನೆ ಮತ್ತು ಪರಾಮರ್ಶನೆ ದಿಗ್ ಭ್ರಮೆ ಮೂಡಿಸುತ್ತದೆ .ದಾಖಲೆಗಳನ್ನು ಬರಿ ಪಟ್ಟಿ ಮಾಡುವುದು ಮಾತ್ರವಲ್ಲ ಅವನ್ನು ಎಲ್ಲಿ ಮತ್ತು ಹೇಗೆ ಪಡೆಯಬಹುದು ಎಂಬ ವಿವರವನ್ನು  ನೀಡಿರುವುದರಿಂದ ನಿಖರತೆಯ ಕುರಿತು ವಿವಾದಕ್ಕೆ  ಅವಕಾಶವೆ ಇಲ್ಲ. ಕಥೆಯನ್ನುಸ್ಥೂಲವಾಗಿ ನಾಲ್ಕು ಹಂತದಲ್ಲಿ ಪರಿಗಣಿಸಬಹುದು. ನಿಸರ್ಗದ ಮಡಿಲಲ್ಲಿನ ಬಾಲಕಿಯ ಅಪಹರಣ ಮತ್ತು ಬಟ್ಟೆ ಬಿಚ್ಚಿ ನೊಗಕ್ಕೆ ಬಿಗಿದು ದನಗಳಂತೆ ಸಾಗಣೆ, ಹಡಗಿನಲ್ಲಿನ ಅಮಾನವೀಯ ಸ್ಥಿತಿ,ಕಾದ ಕಬ್ಬಿಣದ ಹಾಕುವ ಗುರುತಿನ ಬರೆ, ದಾರಿಯಲ್ಲಿ ಸತ್ತವರನ್ನು ಹಾಗೆಯೇ ಬಿಟ್ಟು ಹೋಗುವ ಪರಿ  ನಂತರ  ಇಂಡಿಗೋ ಪ್ಲಾಂಟೇಷನ್‌ನಲ್ಲಿ ಗುಲಾಮಳಾಗಿ ಜೀವನ. ನಂತರ ಮದುವೆ ಮಕ್ಕಳು ಎಲ್ಲವೂ ಪಶುಸಂಪತ್ತಿನಂತೆ ಒಡೆಯನ ಆಸ್ತಿ.ಈ ನಡುವೆ ಮಗುವನ್ನು ಕಸಿದು ಮಾರಿದಾಗ ಪ್ರತಿಭಟಿಸಿದ್ದಕ್ಕೆ  ಅವಳ  ದಟ್ಟತಲೆಗೂದಲು ಬೋಳಿಸಿ “  I am the master  you, your wool and child all my property ‘   ಎನ್ನುವ ಮಾತು ಬೆಚ್ಚಿ ಬೀಳಿಸುತ್ತದೆ. ಅವಳು ಕೆಲಸ ಮಡದೆ ಮೊಂಡು ಹಿಡಿದಾಗ ಸಿಕ್ಕ ಶಿಕ್ಷೆ ಇನ್ನೊಬ್ಬನಿಗೆ ಮಾರಾಟ. 

ಕೊಂಡವನು ಯೇಹೂದಿ. ಇವಳ ಲ್ಲಿನ ಚತುರತೆ ಬಳಸಿ ಹಣ ಮಾಡಿಕೊಳ್ಳಲು  ಕೊಂಡಿರುವನು. ಮೀನಾಳಿಗೆ ಓದು ಬರಹ , ವಿದ್ಯೆ ಕಲಿಸಿ ಸೆಕ್ರಟರಿಯ  ಕೆಲಸ ಮಾಡಿಸಿದ.  ನ್ಯೂಯಾರ್ಕಗೆ ಹೋದಾಗ ಅಲ್ಲಿನ ಗಲಭೆಯ ವಾತಾವರಣದಲ್ಲಿ ತಪ್ಪಿಸಿಕೊಂಡು ಹೋದಳು.ಅಲ್ಲಿನ ಗುಲಾಮರಿಗೆ ಅಕ್ಷರ ಕಲಿಸಿ,ಸೂಲಗಿತ್ತಿಯ ಕೆಲಸದಿಂದ ಜೀವನ ಸಾಗಿಸಿದಳು ಅಮೇರಿಕಾ ಸ್ವಾತಂತ್ರ್ಯ ಹೋರಾಟದಲ್ಲಿ ತಮಗೆ  ಸಹಾಯ ಮಾಡಿದ ಗುಲಾಮರಿಗೆ ಬ್ರಿಟಿಷರು ಸ್ವಾತಂತ್ರ್ಯ ನೀಡಿ ಹೊಸ ಕಾಲನಿ ನೋವಾಸ್ಕಾಟ್‌ನಲ್ಲಿ  ಪುನರ್ವಸತಿ ಗೊಳಿಸಿದರು.ಅಲ್ಲಿಯೂ ಅದೇ ಗತಿ  ಅಲ್ಲಿಂದ  ಮತ್ತೆ ಆಫ್ರಿಕಾಕ್ಕೆ  ವಲಸೆ. ಅಲ್ಲಿ ಬದಲಾದ ತಾಯ್ನಾಡಿನ  ಪರಿಸ್ಥಿತಿಯಿಂದ ಮತ್ತೆ ಮರಳಿ ಬರುವುದು ಹೀಗೆ ಕಥೆಸಾಗಿ ಕೊನೆಗೆ ಬ್ರಟಿಷ್ ಪಾರ್ಲಿ ಮೆಂಟ್‌ನಲ್ಲಿ ಗುಲಾಮಗಿರಿ ನಿಷೇಧ ಮಸೂದೆ ತರಲು ಲಂಡನ್‌ಗೆ ತೆರಳಿ ಹೇಳಿಕೆ ನೀಡುವುದರೊಂದಿಗೆ ಮುಗಿಯುವುದು  ಆಗ  ಅಲ್ಲಿ ಅಗಲಿದ ಮಗಳ ಜೊತೆ ಮಿಲನವಾಗುವುದು..
ಆಫ್ರಿಕಾದ ಮೂಲನಿವಾಸಿಗಳ ಜೀವನ, ಅವರನಡೆ ನುಡಿ. ಅಲ್ಲಿ ತಾಯಿಯಿಂದ ಕಲಿತ ಸೂಲಗಿತ್ತಿ ಕೆಲಸ ಮತ್ತು ತಂದೆಯಿಂದ  ಅರಿತ ನಾರು ಬೇರಿನ ಔಷಧಿ. ಅಕ್ಷರಗಳ ಪರಿಚಯ ನಾಯಕಿಯ ಜೀವನವನ್ನು ಸಹನೀಯ ಮಾಡುತ್ತವೆ.  ಅವಳಲ್ಲಿನ ಆ ವಿದ್ಯಯಿಂದ ಇತರರಿಗಿಂತ ಬೇರೆಯೇ ಆಗಿ ತಾನೂ ಸ್ವತಂತ್ರಳಾಗಿ ತನ್ನಂತಿರುವ ಇತರರ ಬಿಡುಗಡೆಗೂ ಹೋರಾಟ ಮಾಡುತ್ತಾಳೆ. .
 ಆಫ್ರಿಕಾ ಮತ್ತು ಭಾರತದ ಸಂಸ್ಕೃತಿಯ ಅನೇಕ ಸಾಮ್ಯತೆ ಕಾಣುತ್ತದೆ, ನಮ್ಮ ಚಂಪಾರಣ್ಯ ಸತ್ಯಾಗ್ರಹಕ್ಕೆ ಕಾರಣವಾದ ನೀಲಿ ತೋಟಗಳು ಅಮೇರಿಕಾದ ಕೆರೋಲಿನಾದಲ್ಲೂ ಶೋಷಣೆಗೆ ಕಾರಣವಾಗಿದ್ದವು, ಗುಲಾಮಗಿರಿ ನಿವಾರಣೆಗೆ ಹೋರಾಟ ಗಾರರು ಸಕ್ಕರೆ ಬಳಸದಿರುವುದು. ಅಮೇರಿಕಾದಸ್ವಾತಂತ್ರ್ಯ ಹೋರಾಟಗಾರು ಟೀ  ಬಳಕೆ ಮಾಡದಿರುವುದು ನಮ್ಮ ಸ್ವಧೇಶಿ ಸತ್ಯಾಹಗ್ರಹಕ್ಕೆ ಸಂವಾದಿಯಾವೆ ಎನಿಸಿತು. ಆ ವಿಷಯ ಗಮನಕ್ಕೆ ತಂದೆ. 
ಅಂತಿಮವಾಗಿ ಶೀರ್ಷಿಕೆಯದೆ ವಿಶೇಷತೆ.ವಸ್ತು ಎರಡುಶತಮಾನದ ಹಿಂದಿನದಾದರೂ ಶೀರ್ಷಿಕೆ ಮಾತ್ರಬಹು ಪ್ರಸ್ತುತ ವೆನಿಸಿತು. ತನ್ನ ತಯ್ನಾಡಿನಿಂದ ದೂರವಾಗಿ ಭಾಷೆ,ಆಚಾರ,ವಿಚಾರ .ವಿಭಿನ್ನವಾದ ಪ್ರದೇಶದಲ್ಲಿ ನೆಲಸಿದ ಎಲ್ಲರ ಮನಸ್ಥತಿಯನ್ನು ಅದು ಪ್ರತಿನಿಧಿಸುತ್ತದೆ.

ಇದಕ್ಕೆ ಪೂರಕವಾಗಿ ಭಾರತದಿಂದ ಅಮೇರಿಕಾಕ್ಕೆ ೨೩ ವರ್ಷದ ಹಿಂದೆ ಬಂದ ಮಹಿಳೆ ತನ್ನ ತ್ರಿಶಂಕು ಸ್ಥಿತಿಯನ್ನು  ಮನಮುಟ್ಟುವಂತೆ ತಿಳಿಸಿದಳು. ಇದೊಂದು  ‘Problem of Identity crisis ‘   ಎಲ್ಲ ಕಾಲದಲ್ಲೂ ಇರುವುದೇ. ನಮಗೂ ಇದೆ.ಅಮೇರಿಕಾದಲ್ಲಿ  ನೀವು ಇಂಡಿಯಾದವರು ಎನ್ನುತ್ತಾರೆ, “ಭಾರತಕ್ಕೆ ಹೋದರೆ ನೀವು ಅಮೇರಿಕದವರು ಎನ್ನುವರು ’ ಹಾಗಾಗಿ ನಾವು ಇಲ್ಲಿಯೂ ಸಲ್ಲದವರು ಅಲ್ಲಿಯೂ ಸಲ್ಲದವರು ಆಗಿರುವೆವು ನಮಗೆ ಹೋಮ್ ತಾಯ್ನಾಡು ಎಂಬುದೇ ಇಲ್ಲದಾಗಿದೆ ಎಂದು ಅಳಲು ತೋಡಿ ಕೊಂಡಳು. ಇದಕ್ಕೆ ಕೋರಿಯಾ ಮತ್ತು ಚೀನದ ಮಹಿಳೆಯರು ಸಹಮತ ವ್ಯಕ್ತಪಡಿಸಿದರು. ಹೋಮ್‌  ಎನ್ನುವುದು  ಭೌತಿಕ ಅಂಶವಲ್ಲ. ಅದೊಂದು ಭಾವನಾತ್ಮಾಮ ಅಂಶ.  ಮಾನಸಿಕ ಸ್ಥಿತಿ. ಎಲ್ಲಿ  ಸಹಜವಾಗಿ  ನೆಮ್ಯಿಂದಿಯಿಂದ ಬದುಕ ಬಲ್ಲೆವೋ ಅದೇ ಮನೆ. ಅದಕ್ಕೆಂದೇ ಯಾರ ಮನೆಗಾದರೂ ಹೋದಾಗ’ “ Feel yourself  at home ‘ ಎನ್ನುವದರ ಅರ್ಥ ಅದೇ. ಆರಾಮಾಗಿರಿ ಎಂದು.    Home ನ  ಅರ್ಥ ವ್ಯಾಪ್ತಿ  ವಿಶಾಲ. Home town, Home state, Home Land  ಹೀಗೆ ವಿಸ್ತಾರವಾಗುವುದು .ಆದ್ದರಿಂದ Home  is more emotional than Physical  ‘ ಎಂಬ ನನ್ನ  ಮಾತಿಗೆ ಅವರೆಲ್ಲರೂ ಸಹಮತ ಸೂಚಿಸಿದರು. ನಂತರ ಶಿಕ್ಷಣದ ಮಹತ್ವದ ಬಗ್ಗೆ ಚರ್ಚೆ ಆಯಿತು. ಅಮೆರಿಕಾದಲ್ಲಿ ಬಹುತೇಕ ಎಲ್ಲರೂ ಶಿಕ್ಷಣ ಪಡೆದವರೇ ಆದರೆ ಇಂದಿನ ಯುವಜನರು ದಾರಿ ತಪ್ಪುವುದಕ್ಕೆ ಕಾರಣ ಏನು? ಎಂಬ ಪ್ರಶ್ನೆಗೆ  ಶಿಕ್ಷಣ ಎಂದರೆ   ಓದು ,ಬರಹ , ಲೆಕ್ಕ ಕಲಿಯುವುದು ಮಾತ್ರ ಅಲ್ಲ. ಜೊತೆಗೆ ಮೌಲ್ಯಗಳ ಅರಿವೂ ಬೇಕು. ಇಲ್ಲವಾದರೆ ಅವು ಅಕ್ಷರಸ್ಥರು ಮಾತ್ರ ಸುಶಿಕ್ಷತರು ಅಲ್ಲ ಎಂಬ ಮಾತನ್ನು  ಎಲ್ಲರೂ ಒಪ್ಪಿದರು.. ಶಿಕ್ಷಣದ ಹೊಣೆಯನ್ನು ಶಾಲೆ ಗೆ ಮಾತ್ರ ಬಿಟ್ಟು ಪೋಷಕರು ಮಾರ್ಗದರ್ಶನ ಮಾಡದಿರುವದೇ ಇಂದಿನ ದುಸ್ಥಿತಿಗೆ ಕಾರಣ ಎಂಬ ಇನ್ನೊಬ್ಬರ ಮಾತೂ ಎಲ್ಲರಿಗೂ ಒಪ್ಪಿತವಾಯಿತು.ಅಷ್ಟರಲ್ಲಿ ಮೂರು ಬಾರಿ ಬಾಗಿಲು ಬಡಿದಿದ್ದರು  ಲೈಬ್ರರಿ  ರಾತ್ರಿ  ೯ ಗಂಟೆಗೆ ಮುಚ್ಚುವರು. ನಮ್ಮ ಮಾತಿನ ಭರದಲ್ಲಿ ಸಮಯ ಮೀರಿ ಹೋಗಿತ್ತು ಎಲ್ಲರೂ ಗಡಿಬಿಡಿಯಿಂದ ಹೊರಟೆವು. ಹೋಗುವಾಗಲೂ ನಗು ಉಕ್ಕಿತು. ಒಬ  ಮಹಿಳೆ  ಗುಡ್ ನೈಟ್‌ ಮಿಸ್ಟರ್‌ಶಾಷ್‌ ಅಂದಳು  .ನನಗೆ ನಗೆ ಬಂದರೂ  ಸುಮ್ಮನಿದ್ದೆ. ಈವರೆಗೆ     ಶಷ್, ಶಾಷ್ ,ಸ್ಯಾಷ್   ಮೊದಲಾಗಿ ಹೇಳಿದರೂ .ನಾನು  ಶ್‌!   ಅಂದು ಕೊಂಡು ತೆಪ್ಪಗೆ ಇದ್ದೆ.

No comments:

Post a Comment