Monday, June 2, 2014

ಅಮೇರಿಕಾ ಅನುಭವ-8


ಪ್ರಾಣಿ ರೂಪ ತಳೆದ ಸಸ್ಯೋದ್ಯಾನ ಟೋಪಿಯರಿ ಗಾರ್ಡನ್‌
ವರ್ಷದಲ್ಲಿ ಎರಡು ತಿಂಗಳು ಮಾತ್ರ ಬಿಸಿಲ  ಮೋರೆ ಕಾಣುವ  ಈ ಚಳಿ ಪ್ರದೇಶದಲ್ಲಿ ಮರುಭೂಮಿ ಹಡಗಾದ ಒಂಟೆ, ಆಫ್ರಿಕಾದ ನಿತ್ಯಹರಿದ್ವರ್ಣದ ಕಾಡಿನಲ್ಲಿ ಓಡಾಡುವ  ಆನೆ, ಭಾರತದ ಕರಡಿ,  ತೋಳ ಪೆಂಗ್ವಿನ್‌ ಮೊದಲಾದ ಪ್ರಾಣಿಗಳನ್ನು ಒಂದೇ ಕಡೆ ನೋಡಲು ಸಿಗುವವವು. ಆದರೆ ಅವೆಲ್ಲವುಗಳೂಒಂದೇ ಹಚ್ಚ ಹಸಿರು ಬಣ್ಣದವು  ಕಾರಣ ಅವು ಪ್ರಾಣಿಗಳಲ್ಲ. ಪ್ರಾಣಿರೂಪದ ಸಸ್ಯಗಳು. ಅವು ಕಂಡುಬರುವುದು  ಗ್ರೀನ್‌ ಅನಿಮಲ್‌  ಟೋಪಯರಿ ಗಾರ್ಡನ್‌ನಲ್ಲಿ.  

 ಹತ್ತೊಂಬತ್ತನೆ ಶತಮಾನದ ಆದಿಯಲ್ಲಿ ಅಂದರೆ ೧೯೦೫  ಥಾಮಸ್‌ ಬ್ರೈಟನ್‌  ಎಂಬ ಒಬ್ಬ ಫಾಲ್‌ಮಿಲ್‌ ಮಾಲಿಕ ಇಲ್ಲಿನೆಲಸಿದ್ದ. ಅವನಿದ್ದುದು  ಪೋರ್ಟ್ಸ ಮೌತ್‌ ಗ್ರಾಮ.  ನರ್ರಗನಸೆಟ್  ಬೇ ಯ ದಡದಲ್ಲಿ  ಅವನ  ಬೇಸಿಗೆ ಧಾಮ. ಅಲ್ಲಿ  ಒಂದು ತೋಟಮಾಡ  ಬಯಸಿದ . ಹಣ್ಣು ತರಕಾರಿ ಬೆಳೆಯುವುದು ಅವನ ಉದ್ದೇಶ.. ಅದಕ್ಕಾಗಿ ಒಬ್ಬ  ಪೋರ್ಚಗೀಸ್‌ ನಾದ  ವಲಸಿಗ ಜೋಸ್‌ ಕೆರ್ರಿಯೋ ಎಂಬುವನನ್ನು ನೇಮಿಸಿದ.   ಅವನ ಬರಿ ತೋಟದ   ಮಾಲಿ ಮಾತ್ರ ಆಗಿರಲಿಲ್ಲ.ಒಬ್ಬ ಸೃಜನ ಶೀಲ ಕಲಾವಿದನೂ ಆಗಿದ್ದ. ಸ್ವದೇಶಾಭಿಮಾನದಿಂದ ಇಲ್ಲಿನ ಹಣ್ಣುತರಕಾರಿಗಳ ಜೊತೆ  ತನ್ನ ನಾಡಿನ ಗಿಡಮರಗಳನ್ನು ಬೆಳಸಲುಯತ್ನಿಸಿದ.  ಒಂದು ಸಲಕ್ರಿಸ್‌ಮಸ್‌ ಕಾಣಿಕೆಯಾಗಿ ಬಂದ ಪ್ಯಾಕೆಟ್‌ನಲ್ಲಿ ಆನೆ ಒಂಟೆಮೊದಲಾದ  ಚಿತ್ರಗಳು ಇದ್ದವು. ಅವುಗಳನ್ನು ನೋಡಿ ಅಲಂಕಾರಿಕ ಸಸ್ಯಗಳ ತೋಟದಲ್ಲಿ  ಸಸ್ಯಗಳನ್ನು ಬಳಸಿ ವಿವಿಧ ಪ್ರಾಣಿಗಳ ಆಕಾರವನ್ನು ನಿರ್ಮಿಸಬಹುದೆಂದು ಕಂಡು ಕೊಂಡ. ಅದರ ಫಲವೇ ಇಂದಿನಪೋರ್ಟ ಮೌತ್‌ನಲ್ಲಿ ಅತಿ ಮುಖ್ಯವಾದ  ಪ್ರೇಕ್ಷಣಿಯ ಸ್ಥಳ ಟೋಪಯರಿ ಗಾರ್ಡನ್‌
ಟೋಪಿಯರಿ ಎಂಬುದ ತೋಟಗಾರಿಕೆಯ ಕಲತ್ಮಾಕ ಅಲಂಕಾರಿಕ ಸಸ್ಯಗಳ ಬೆಳೆ. ಚಿಕ್ಕದಾದ, ಮತ್ತು ದಟ್ಟವಾದ ಎಲೆಗಳು  ಮತ್ತು ಗಟ್ಟಿಯಾದ ಸಣ್ಣನೆ ಕಾಂಡವಿರುವ ಪೊದೆಯಂಥಹ ಸಸ್ಯಗಳನ್ನು  ಅವುಗಳಿಗೆ ದಟ್ಟವಾದ ಎಲೆ ಮತ್ತು ಮುಳ್ಳುಗಳು ಇರುತ್ತವೆ. ಅವುಗಳ ರೆಂಬೆಗಳನ್ನು ಹೇಗೆ ಬೇಕಾದರೂ ಬಾಗಿಸ ಬಹುದು . ರೆಂಬೆಗಳನ್ನು ಕಟ್ಟಿ, ಬಾಗಿಸಿ ಕೆಲಸಲ ಕತ್ತರಿಸಿ ಎಲೆ ಮತ್ತು ರೆಂಬೆಕೊಂಬೆಗಳನ್ನು ಸವರುತ್ತಾ ತಮಗೆ ಬೇಕಾದ ಆಕಾರಕ್ಕೆ ಅದನ್ನು ತರುವರು. ಸಾಧಾರಣವಾಗಿ ಪ್ರಾಣಿಗಳು ಮತ್ತು ಜ್ಯಾಮಿತಿಯ ವಿವಿಧ ಅಕೃತಿಗಳನ್ನು ನಿರ್ಮಿಸುವುದು ಜನಪ್ರಿಯ ಹವ್ಯಾಸ
, ಈ ರೀತಿ ಸಸ್ಯಗಳಿಗೆ ವಿವಧರೀತಿಯ ಆಕಾರ ಕೊಡುವ ಪದ್ದತಿಯು ಪ್ರಾಚೀನ ಗ್ರೀಕ್‌ ರ  ಕಾಲದಿಂದಲೂ ಪ್ರಚಲಿತವಿದೆ. ಮತ್ತು ಇದು ಚೀನಾಮತ್ತು ಜಪಾನ್‌ಗಳಲ್ಲೂ ವಿಶೇಷವಾಗಿದೆ. ಬೊನ್ಸಾಯಿಯೂ ಈ ಪ್ರಯತ್ನದ ಇನ್ನೊಂದು ರೂಪ
ಥಾಮಸ್‌ನ ನಂತರ ಅವನ ಮಗಳೂ ಇದರಲ್ಲಿ ಬಹು ಆಸಕ್ತಿ ತಳೆದಳು. ಅವಳು ಇದೊಂದು ಪೋರ್ಚುಗಿಸ್‌ ಜನಪದ ಕಲೆ ಎಂದುಕೊಂಡಳು.ಅವಳು ತನ್ನ ಜೀವನವನ್ನು ಪೂರ್ತಿ ಇದಕ್ಕೆ ಮಿಸಲಿಟ್ಟಳು. ಎಲೀಸಳು  ಇದೊಂದು ಪೋರ್ಚುಗೀಸ್‌ ಜನಪದ ಕಲೆಯ ಪ್ರತಿ ರೂಪ ಎಂದು ಅರಿತು ಉತ್ತೇಜನ ನೀಡಿದಳು.  ಯಜಮಾನನಂತೆ ತೋಟದ ಮಾಲಿಯೂ ವಂಶಪಾರಂಪರರಿಕವಾಗಿ ಈಕೆಲಸದಲ್ಲಿ ತೊಡಗಿಸಿಕೊಂಡ. ಜೊತೆಗ ಸ್ಥಳೀಯವಾಗಿ ಒಬ್ಬಿಬ್ಬರನ್ನು ತರಬೇತಿನೀಡಿ 
ತೊಡಗಿಸಿಕೊಂಡರು ಅದರ ಫಲವಾಗಿ ಶತಮಾನದ ಇತಿಹಾಸವುಳ್ಳ ಈ ಉದ್ಯಾನ ಜನರ ಗಮನ ಸೆಳೆಯ ತೊಡಗಿತು
ಅದರ ಜೊತೆಹ ಮನೆಯಲ್ಲಿ ಮಿನಿಯೇಚರ್‌ ಬೊಂಬೆಗಳ ಸಂಗ್ರಹ ಪ್ರಾರಂಭಿಸಲಾಯಿತು. ಈಗ ಮನೆಯೂ ಒಂದು ಆಕರ್ಷಕ ವಸ್ತು ಸಂಗ್ರಹಾಲಯವಾಗಿದೆ. ಅಲ್ಲಿ ದಿನ ಬಳಕೆಯ ಎಲ್ಲ ವಸ್ತುಗಳ ಕಿರು ಮಾದರಿಗಳಿವೆ. ಸುಮಾರು ವೈವಿದ್ಯಮಯ   ಪ್ರದೇಶಗಳಲ್ಲಿನ  ಯುದ್ಧ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ   ಬೊಂಬೆಗಳ ಮೂಲಕ ಜೋಡಿಸಲಾಗಿದೆ.. ದೆ. ಆಫ್ರಿಕಾದಲ್ಲಿನ ಬುಡಕಟ್ಟು ಜನರೊಡಗಿನ ಯುದ್ಧ, ಈಜಿಪ್ಟನ ಮರಳು ಪ್ರದೇಶದ ಕದನ , ಬಕಿಂಗ್‌ಹ್ಯಾಂ ಅರಮನೆ ಮುಂದಿನ ಸೈನಿಕರ ಕವಾಯಿತು, ಅಶ್ವಾರೋಹಿ ಸೈನ್ಯ ದಳ.  ಹೀಗೆಬೊಂಬೆಗಳ ಸಾಲೇ ಇದೆ. ಮೈ ಸೂರಿನಲ್ಲಿಅನೇಕ ಮನೆಗಳಲ್ಲಿನ  ದಸರೆಯ ಬೊಂಬೆಗಳ ಪ್ರದರ್ಶನವನ್ನು ಹೋಲುತ್ತವೆ . ಒಂದೇ ವ್ಯತ್ಯಾಸ ಇಲ್ಲಿ ಬರಿ  ದೈನಂದಿನ ವಸ್ತುಗಳೇ ಬಹಳ. ಅಲ್ಲಿನಂತೆ ಪೌರಾಣಿಕ, ಐತಿಹಾಸಿಕ ಮತ್ತು ಪ್ರಾಕೃತಿಕ ದೃಶ್ಯಗಳೂ ಕಡಿಮೆ.ಹಾಗಾಗಿ ನಮಗೆ ಅದೇನೂ ಅಷ್ಟು ಅಚ್ಚರಿಯ ಸಂಗ್ರಹ ಎನಿಸಲಿಲ್ಲ. ಎಲೀಸಳು ಸುಮಾರು ಎಂಬತ್ತೈದು ವರ್ಷ  ಈ ಸಂಗ್ರಹಕ್ಕಾಗಿ ದುಡಿದು ನಂತರ ಅವುಗಳನ್ನು ದಾನ ಮಾಡಿದಳು ಈಗ ಪ್ರಿಜರ್ವೇಷನ್‌ ಸೊಸೈಟಿಯವರು ನ್ಯೂಪೋರ್ಟನ  ಮ್ಯಾನಷನ್‌ಗಳ ಜೊತೆ ಇದನ್ನು ಒಂದು ಪಾರಂಪರಿಕ ಐತಿಹಾಸಿಕ ತಾಣವನ್ನಾಗಿಸಿದ್ದಾರೆ.
ಕಿರಿದಾದ ಕತ್ತಿನ ಒಂಟೆ
ಟೋಪಿಯರಿಕಲೆಯನ್ನು ಬಹುವಾರ್ಷಿಕ ಸಸ್ಯಗಳನ್ನು ಪಳಗಿಸಿಅವುಗಳ ಎಲೆ ಮತ್ತು ಚಿಕ್ಕ ರೆಂಬೆಗಳನ್ನು ಕತ್ತರಿಸಿ ವಿವಿಧ ರೂಪಕೊಟ್ಟು ಜ್ಯಾಮಿತಿಯ ಆಕಕೃತಿಗಳಾಗಿಸುವರು. ಇವುಗಳನ್ನು  ಸಜೀವ  ಶಿಲ್ಪ ಎನ್ನಲಾಗುವುದು. ಆಧುನಿಕ ವಿಧಾನದಲ್ಲಿ ತಂತಿ ಬಲೆಗಳನ್ನೂ ನಿರ್ಧಿಷ್ಟ ಆಕಾರದಲ್ಲಿರೂಪಿಸಿ ಅದರ ಮೇಲೆ ಸಸ್ಯವನ್ನು ಹಬ್ಬಸಲಾಗುವುದುಇಲ್ಲಿನ ವಿಶೇಷವೆಂದರೆ ಆರೀತಿಯ ಕೃತಕ ವಿಧಾನವನ್ನು ಬಳಸದೆ ಆಕೃತಿಗಳನ್ನು ನೈಸರ್ಗಿಕವಾಗಿಯೇ ರೂಪಿಸಿರುವರು’


ಅನೇಕ ಕಡೆ ಬೇಲಿಯ ಅಂಚಿನಲ್ಲಿ ಕಾಣುವ ಕತ್ತರಿಸಿದ ಪೊದೆಯೂ  ಸಹಾ ಟೋಪಯರಿಯ ಸಾಮಾನ್ಯ ರೂಪ ಎನ್ನ ಬಹುದು.
ಇಲ್ಲಿ ಅನೇಕ ಕಡೆ ಭವ್ಯ ಭವನಗಳಿಗೆ ಕಟ್ಟಿಗೆ ಅಥವ ಇಟ್ಟಿಗೆ ಕಾಂಪೌಂಡ್‌ಗೋಡೆಗಳ ಬದಲಾಗಿಹಚ್ಚ ಹಸಿರಾದ ಸಸ್ಯಗಳಿಂದ ಆವರಿತವಾದ ಆವರಣಗಳೇ ಕಂಡುಬಂದವು.ಅನೆಕ ಕಡೆ ತೋಟಗಳಲ್ಲಿ ಮಟ್ಟಸವಾಗಿ ರೂಪಿಸಿದ ವಿವಿಧ ಜ್ಯಾಮಿತಿಯಾಕೃತಿಗಳು ಇಲ್ಲಿನ ಜನರ ಕಲಾಪ್ರಿಯತೆಯನ್ನು ಸಾರುತ್ತವೆ.











  




















No comments:

Post a Comment