Tuesday, June 24, 2014

ಅಮೇರಿಕಾದಲ್ಲಿ ಹಸ್ತ ಪ್ರತಿ ಕುರಿತ ಸಂವಾದ




ಪ್ರತಿಷ್ಠಾನದ ಪರಿಮಳ  ಮತ್ತು ಹಸ್ತಪ್ರತಿ ಅಭಿಯಾನದ ಅರಿವು ಅಮೇರಿಕಾದಲ್ಲಿ

      ಹಸ್ತಪ್ರತಿ ಕುರಿತಾದ ಉಪನ್ಯಾಸ ಅಮೇರಿಕಾದ ನ್ಯೂ ಜರ್ಸಿಯ ನಾರ್ಥಬ್ರನ್ಸವಿಕ್‌ನಲ್ಲಿ ಭಾನುವಾರ ದಿನಾಂಕ ೨೨ನೆಯ ಜೂನ್ ೨೦೧೪ ರಂದು ನಡೆಯಿತು. ಇಲ್ಲಿನ ’ಪ್ರಸ್ತಾಪ’ ಸಾಹಿತ್ಯ ಮತ್ತು ಸಾಂಸ್ಕತಿಕ ಸಂಘಟನೆಯು ಕಾರ್ಯಕ್ರಮದ ವ್ಯವಸ್ಥೆಮಾಡಿತ್ತು. ಕಾಲಾವಕಾಶ ಕಡಿಮೆ ಇರುವುದರಿಂದ  ಆಹ್ವಾನಿತರಾದ ಸುಮಾರು ಇಪ್ಪತ್ತು ಸದಸ್ಯರಲ್ಲಿ ಅರ್ಧಕ್ಕಿಂತ ಅಧಿಕ ಸದಸ್ಯರು ಭಾಗವಹಿಸಿದ್ದರು. ಕಾರ್ಯದರ್ಶಿಗಳಾದ ಶ್ರೀಕಾಂತಬಾಬು ಅವರು ಎಲ್ಲರನ್ನೂ ಸ್ವಾಗತಿಸಿ ಅತಿಥಿಗಳಾದ ,, ಅಭಿಯಾನದ ನಿರ್ದೇಶಕರಾದ ಎಚ್‌.ಶೇಷಗಿರಿರಾವ್‌ ಅವರ ಪರಿಚಯ ಮಾಡಿಕೊಟ್ಟರು. 

ಎಲ್ಲ ಸದಸ್ಯರಿಗೂ ’ Save & Study manuscripts’ ಅಭಿಯಾನದ ವಿವರವನ್ನು ಜೊತೆಗೆ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಪಿ.ವಿ. ನಾರಾಯಣರ ಧ್ವನಿಮುದ್ರಿತ ಸಂದೇಶವನ್ನೂ ಮಿಂಚಂಚೆಯ ಮೂಲಕ ಕಳುಹಿಸಲಾಗಿತ್ತು.   ಹಾಗಾಗಿ ಪವರ್‌ ಪಾಯಿಂಟ್‌ ಮೂಲಕ ಉಪನ್ಯಾಸ ಕೊಡುತಿದ್ದಂತೆಯೇ ಮಧ್ಯಮಧ್ಯ ವಿವರಣೆ , ಸ್ಪಷ್ಠನೆ ಕೇಳಿ ಅನುಮಾನ ಪರಿ ಹರಿಸಿಕೊಳ್ಳಲು  ಅವಕಾಶವಿತ್ತು.


ಇದರಿಂದ ಇದೊಂದು ಬರಿ ಒಮ್ಮುಖ ಮಾತಿನ ಉಪನ್ಯಾಸವಾಗುವುದರ ಬದಲು ಸಂವಾದದ ರೂಪ ತಳೆಯಿತು. ಮಾತುಕಥೆಯಲ್ಲಿ  ಕವಿ ಪು.ತಿ.ನ ಅವರ ಮಗಳಾದ ಶ್ರೀಮತಿ ಪದ್ಮ  ರಂಗಾಚಾರ್‌ ಬಹಳ ಅಸಕ್ತಿಯಿಂದ ವಿವರ ಪಡೆದರು. ಡಾ.ರಂಗರಾಜನ್‌,ಡಾ. ಸಿ .ಎಮ್. ರಾಮಕೃಷ್ಣ , ಡಾ.ಸರೋಜ  , ಶ್ರೀ ಕೃಷ್ಣ ಹೆಗಡೆ, ಶ್ರೀನಿವಾಸ್‌, ಶ್ರೀಕಾಂತ ಬಾಬು ಕುತೂಹಲದಿಂದ ಹಸ್ತ ಪ್ರತಿಗಳ ತಾಳೆಯ ಗರಿಗಳನ್ನು ಪರಿಶೀಲಿಸಿದರು. ಮೊದಲಬಾರಿಗೆ ನೊಡಿ ,ಮುಟ್ಟಿ ಮುಟ್ಟಿ ನಂದಿಸಿದರು. ಸಂಸ್ಕೃತ ವಿದ್ವಾಂಸ ಡಾ, ರಂಗಾಚಾರ್ ಗರಿಯಲ್ಲಿ ಸಂಸ್ಕೃತ ಬರಹ ಓದಲುಯತ್ನಿಸಿದರು   ಪರದೆಯ ಮೇಲೆ ಝೂಮ್ ಮಾಡಿದ ತಾಳೆಗರಿಯ ಮೇಲಿನ  ಅಕ್ಷರಗಳನ್ನು  ತಕ್ಕ ಮಟ್ಟಿಗೆ ಓದಲು ಶಕ್ತರಾದರು. 

ಸಿ. ಎಮ್. ರಾಮಚಂದ್ರ  ದಂಪತಿಗಳು ಪರದೆಯ ಮೇಲೆ ಮೂಡಿದ ಸರ್ವಜ್ಞನ ವಚನಗಳನ್ನು ಅಲ್ಲಲ್ಲಿ ಓದಿ ಖುಷಿಪಟ್ಟರು.
ಅಭಿಯಾನದ ನಿರ್ದೇಶಕರಾದ ಶೇಷಗಿರಿರಾಯರು ತಿಳಿಸಿದ ಅಭಿಯಾನದ ಉದ್ದೇಶ ಅವರ ಮನಮುಟ್ಟಿತು. ಡಿಜಿಟಲೈಜೇಷನ್‌ನಿಂದ ಹಸ್ತಪ್ರತಿಗಳ ಶಾಶ್ವತ ಸಂರಕ್ಷಣೆ ಮತ್ತು ಅದರಲ್ಲಿನ ವಿಷಯವನ್ನು ಕಾಲ,ದೇಶ, ದೂರವನ್ನು ಮೀರಿ   ಸುಲಭವಾಗಿ ಅಗತ್ಯವಿದ್ದವರಿಗೆ ತಲುಪಿಸುವ ಸಾಧ್ಯತೆಯ ಬಗ್ಗೆ ಮನವರಿಕೆಯಾಯಿತು. ಇದರಿಂದ ಯಾವುದೇ ಕೃತಿಯ ವ್ಯಾಪಕ ಪ್ರಚಾರವಾಗುವುದು .

  
                    
                                                  ಪವರ್  ಪಾಯಿಂಟ್‌ನಲ್ಲಿ  ತೋರಿಸಿದ  ವೈವಿದ್ಯಮಯ ಆಕೃತಿಯ ಹಸ್ತ ಪ್ರತಿಗಳು

 ಸುಲಭ ಲಭ್ಯತೆಯಿಂದ   ಕೃತಿಯ  ಪುನರ್‌ ಪರಿಶೀಲನೆ ಮತ್ತು ಮರುವ್ಯಾಖ್ಯಾನದ   ಸಾಧ್ಯತೆ ಹೆಚ್ಚಿ ಹೊಸ ಹೊಸ ಅರ್ಥ ಹೊರ ಹೊಮ್ಮುವ ಸಾಧ್ಯತೆ ಮನಗಂಡರು.   ಯಾವುದೇ ಜಾತಿ, ಮತ, ಧರ್ಮ, ಭಾಷೆಗೆ ಸೀಮಿತವಾಗದೇ ಹಸ್ತಪ್ರತಿಯಲ್ಲಿರುವುದನ್ನೆಲ್ಲ ಮುದ್ರಿತ ರೂಪದಲ್ಲಿ ತರುವ ಕನ್ನಡದ ಕಣ್ವ ಬಿ.ಎಂ. ಶ್ರೀಕಂಠಯ್ಯನವರ ಕನಸನ್ನು ನನಸು ಮಾಡುವುದಲ್ಲದೇ ಒಂದು ಹೆಜ್ಜೆ ಮುಂದೆ ಹೋಗಿ ಆನ್‌ಲೈನ್‌ನಲ್ಲಿ ಎಲ್ಲರಿಗೂ, ಎಲ್ಲೆಡೆಗೂ  ತಲುಪಿಸಬಹುದೆಂಬ ಪರಿಕಲ್ಪನೆ ಎಲ್ಲರಿಗೂ ಹಿಡಿಸಿತು.ಈ ಕೆಲಸ ಸೀಮಿತ ವರ್ಗಕ್ಕೆ ಮಾತ್ರ ಮೀಸಲಾಗದೇ  ಸಮುದಾಯವನ್ನೇ ತೊಡಗಿಸಿಕೊಳ್ಳುವದರಿಂದ ಅವುಗಳ ಕುರಿತಾದ ಮೆಚ್ಚುಗೆ ಹೆಚ್ಚುವ ಅಂಶವನ್ನು ಗಮನಿಸಲಾಯಿತು.

ಸರ್ಕಾರದ ಅನುದಾನ ಕ್ಕೆ ಕಾಯದೇ ಸ್ವಯಂ ಸೇವಕರ ಮೂಲಕ ಮಾಡಲು ಒಂದು ಹಂತದ ವರೆಗೆ ಸಾಧ್ಯವಾದರೂ ಅಂತಿಮವಾಗಿ ಹಣಕಾಸಿನ ಅಗತ್ಯ ಬೀಳುವುದು ಅದರಿಂದ ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮಾಡಿದರೆ  ಸಂಗ್ರಹಣೆ , ಸಂರಕ್ಷಣೆಯ ಜೊತೆಜೊತೆಗೆ ಅಧ್ಯಯನವೂ ಮೊದಲಾಗಬೇಕು ,ಅದಕ್ಕೆ ತಂತ್ರಜ್ಞರು, ವಿದ್ವಾಂಸರು ಮಾತ್ರವಲ್ಲದೆ ಆಸಕ್ತ ಜನಸಾಮಾನ್ಯರೂ ಭಾಗವಹಿಸಿದರೆ ಯಶಸ್ಸು ಖಂಡಿತ ವೆಂಬ ಅಭಿಪ್ರಾಯ ವ್ಯಕ್ತ ವಾಯಿತು. ಈ ದಿಶೆಯಲ್ಲಿ ಎಲ್ಲಸಂಘ ಸಂಸ್ಥೆಗಳ ಸದಸ್ಯರಿಗೆ ಪರಿಚಯಸ್ಥರಿಗೆ ಈ ಕುರಿತಾದ ವಿವರವಾದ ಮಾಹಿತಿಯನ್ನುಇ. ಮೇಲ್‌  ಮುಖಾಂತರ ಕಳುಹಿಸಲು ಒಪ್ಪಿಕೊಂಡರು. ಡಾ.ರಂಗಾಚಾರ್‌ ಅವರು ನ್ಯೂಯಾರ್ಕ ನಗರದ ಕೇಂದ್ರ ಗ್ರಂಥಾಲಯದಲ್ಲಿ ಉಪನ್ಯಾಸ ನೀಡಲು ಅವಕಾಶದ ಸಾಧ್ಯತೆಯನ್ನು  ಪರಿಶೀಲಿಸುವುದಾಗಿ ಭರವಸೆ ನೀಡಿದರು. ಶ್ರೀ. ಕೃಷ್ಣ ಹೆಗಡೆಯವರು ಫೋರ್ಡ ಫೌಂಡೇಷನ್ ಹಾಗೂ ದಕ್ಷಿಣ ಏಷಿಯಾ ಭಾಷಾ ಅಧ್ಯಯನ ಸಂಸ್ಥೆಯ ಸಹಕಾರ ಪಡೆಯಲು ಪ್ರಯತ್ನಿಸ ಬಹುದಾಗಿ ತಿಳಿಸಿದರು.ಮತ್ತು ಎಲ್ಲ ಕಡೆ ಡಾ. ಪಿ.ವಿ ನಾರಾಯಣ ಅವರ ಧ್ವನಿಮುದ್ರಿತ ಸಂದೇಶವನ್ನು ಮತ್ತು ನಿರ್ದೇಶಕರು ಸಿದ್ಧ ಪಡಿಸಿದ ಕಾರ್ಯ ಸೂಚಿಯನ್ನು ಮಿಂಚಂಚೆಯ ಮೂಲಕ ಕಳುಹಿಸಿ ಪ್ರತಿಷ್ಠಾನದ ಚಟುವಟಿಕೆಯ ಪರಿಚಯ ಮಾಡಬಹುದೆಂಬ ಸೂಚನೆ ಎಲ್ಲರಿಗೂ ಸಮ್ಮತವಾಯಿತು.ಸಾ

ಧ್ಯವಾದರೆ  ಕ್ಯಾಲಿಫೋರ್ನಿಯಾದಲ್ಲಿ  ನಡೆವ “ಅಕ್ಕ”  ವಿಶ್ವ ಕನ್ನಡ ಸಮ್ಮೇಳನದಲ್ಲೂ ಪ್ರಚಾರ ಕೊಡಲು ಪ್ರಯತ್ನಿಸುವುದಾಗಿ ಶ್ರೀಮತಿ ಪದ್ಮ ರಂಗಾಚಾರ್‌ ತಿಳಿಸಿದರು. ಇದೇ ಸಮಯದಲ್ಲಿ ಪು.ತಿ.ನ ಅವರ ಕಾವ್ಯ ಸಂಪತ್ತನ್ನು ಆನ್‌ಲೈನ್‌ನಲ್ಲಿ ವೆಬ್‌ಸೈಟ್‌ಮೂಲಕ ನೀಡುವ ಅವರ ಯೋಜನೆಗೆ ಹಸ್ತಪ್ರತಿ ಅಭಿಯಾನದ ನಿರ್ದೇಶಕರು ಸಹಕರಿಸಿ ,  ಪ್ರತಿಷ್ಠಾನದಿಂದ ಮಾರ್ಗದರ್ಶನ ಒದಗಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಶ್ರೀಮತಿ ಅನಸೂಯ ಅವರು ಪೆನ್‌ ಯುನಿವರ್ಸಿಟಿ ಬಿಬ್ಲಿಯೋಗ್ರಾಫರ್‌  ಮತ್ತು ಭಾರತದ ಬಗ್ಗೆ ಆಸಕ್ತರಾದ ವಿಭಾಗ ಮುಖ್ಯಸ್ಥರೊಡನೆ ಭೇಟಿಯವ್ಯವಸ್ಥೆ ಮಾಡಲು ಸಿದ್ಧವಿರುವುದರಿಂದ ಯಾರಾದರೂ ಫಿಲೆಡೆಲ್ಫಿಯಾಕ್ಕೆ ಕರೆದೊಯ್ಯಲು  ವ್ಯವಸ್ಥೆ ಮಾಡಬಹುದೆಂದು ಒಮ್ಮತಕ್ಕೆ ಬರಲಾಯಿತು. ಮುಂದಿನಭೇಟಿಯ ಸಮಯದಲ್ಲಿ  ಇನ್ನೂ ವ್ಯಾಪಕ ಪ್ರಚಾರ ನೀಡಿ ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ನಡೆಸಲು ಶ್ರೀಕಾಂತಬಾಬು ಬಯಸಿದರು.
ಆತಿಥ್ಯ ನೀಡಿದ ಕುಟುಂಬ


ಅಂತಿಮವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆಲ್ಲರಿಗೂ ಆತಿಥ್ಯ ನೀಡಿ ಊಟೋಪಚಾರ ವ್ಯವಸ್ಥೆ ಮಾಡಿದ್ದ  ಶ್ರೀ.ಶೈಲೇಶ್‌ ಸ್ವರೂಪ್‌  ಮತ್ತು ಪ್ರೇಮಾ ಶೈಲೇಶ್‌ ಅವರನ್ನು ಅಭಿನಂದಿಸಲಾಯಿತು.ಎಲ್ಲ ಸದಸ್ಯರ ವಿಳಾಸ,ದೂರವಾಣಿಸಂಖ್ಯೆಮತ್ತು ಇ-ಮೇಲ್‌ವಿಳಾಸ ಪಡೆದು ಸತತ ಸಂಪರ್ಕದಲ್ಲಿರಲು ನಿರ್ಧರಿಸಲಾಯಿತು. ಒಂದು ಗಂಟೆಯ ಕಾರ್ಯಕ್ರಮ ಸುಮಾರು ಮೂರುವರೆ ಗಂಟೆಯವರೆಗೆ  
ನಡೆದುದು ಯಾರ ಗಮನಕ್ಕೂ ಬರಲೇ ಇಲ್ಲ. ಊಟದ ಸಮಯದಲ್ಲಿ ಮತ್ತೊಮ್ಮೆ ಅಧ್ಯಕ್ಷರ ಧ್ವನಿಮುದ್ರಿತ ಸಂದೇಶ ಎಲ್ಲರಿಗೂ ಕೇಳಿಸಲಾಯಿತು.ಅದನ್ನುಕೇಳಿದ ಕೆಲವರು ಪ್ರತಿಷ್ಠಾನದ ಎಲ್ಲ ಕಾರ್ಯಕ್ರಮಗಳನ್ನು ಅಂತರ್‌ಜಾಲದಲ್ಲಿ ಹಾಕಿದರೆ ಉತ್ತಮ ಎಂಬ ಅಭಿಪ್ರಾಯ ಸೂಚಿಸಿದರು. 

  ಈಗಂತೂ ನೂರಾರು ಜನರಿಗೆ ಮಿಂಚಂಚೆಯ ಮೂಲಕ ಮಾಹಿತಿ ತಲುಪಿದೆ, ಇದರ ಪರಿಣಾಮವಾಗಿ ಪ್ರತಿಷ್ಠಾನ ಮತ್ತು ಅಭಿಯಾನ ಕುರಿತಾದ ಮಾಹಿತಿ ಮತ್ತು ಸಾಧನೆಯ ಪರಿಮಳ  ಅಮೇರಿಕಾದಲ್ಲೂ ತುಸು ಮಟ್ಟಿಗೆ ಹರಡಲು ಅನುಕೂಲವಾಯಿತು.
  


ವಿದಾಯ ಹೇಳುವ ಮುನ್ನ ಸಾಹಿತಿಗಳಾದ ಡಾ. ರಂಗಾಚಾರ್‌ ತಮ್ಮ ಕೃತಿ ’ತರಗೆಲೆಯ ಹಾರಾಟ "     ಎಂಬ ಲಲಿತಪ್ರಬಂಧಗಳ ಸಂಕಲನವನ್ನು  ನೆನಪಿನ ಕಾಣಿಕೆಯಾಗಿ  ನಿರ್ದೇಶಕರಿಗೆ  ನೀಡಿದರು.ಜೊತೆಗೆ ಕಿರುಕಾಣಿಕೆಯೂ ಸಂದಿತು 







Saturday, June 21, 2014

ಅಮೇರಿಕಾದಲ್ಲಿ ಹಸ್ತಪ್ರತಿ ಕುರಿತು ಆಸಕ್ತಿ


                                         ಹಸ್ತ ಪ್ರತಿ ಕುರಿತ   ಸಂವಾದ

 ನಮ್ಮ  " Save &Study Manuscrits" ಅಭಿಯಾನ ಅಮೇರಿಕಾದಲ್ಲೂ  ಅನೇಕರಿಗೆ ಅಸಕ್ತಿ ಮೂಡಿಸಿದೆ. ಬರುವ ಭಾನುವಾರ ಒಂದು ಸಭೆ ಏರ್ಪಾಟಾಗಿದೆ. ಅಲ್ಲಿ ವಿಚಾರವಿನಿಮಯ ನಡೆಯಲಿದೆ. ಅನೇಕ ವಿದ್ವಾಂಸರು ಆಸಕ್ತಿ ತೋರಿದ್ದಾರೆ. ಪೆನ್‌ ವಿಶ್ವ ವಿದ್ಯಾಲಯದ ದಕ್ಷಿ ಏಷಿಯಾ ಭಾಷಾವಿಭಾಗದ ಮುಖ್ಯಸ್ಥರು ವಿಚಾರ ವಿನಿಮಯಕ್ಕಾಗಿ  ಆಮಂತ್ರಣ ನೀಡಿದ್ದಾರೆ. ಹೋಗಲು ಆಗುವುದೇನೋ ನೋಡ ಬೇಕು. ನನಗೆ ಎಲ್ಲ ಕಡೆ ಹೋಗಲು ಸೌಲಭ್ಯವಿಲ್ಲ. ಅದಕ್ಕೆ ಭಾನುವಾರದಂದು ನಾನಿದ್ದಲ್ಲಿಯೇ ಕಾರ್ಯಕ್ರಮ ನಡೆಸಲಿದ್ದಾರೆ. ಈ ಕೆಲಸ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳದಂತೆ ಕಾಣುವುದು. ಇದರಿಂದ ಅನುಕೂಲ ಆಗಬಹದು. ತಾವೂ ಅಭಿಯಾನದ ಕೆಲಸ ದಲ್ಲಿ ಭಾಗಿಯಾಗಲು ಸ್ವಾಗತ. ಎಚ್‌.ಶೇಷಗಿರಿರಾವ್

 prastaapa@yahoogroups.comashwatham@gmail.com;anasuya_1948@yahoo.com
From: prastaapa@yahoogroups.com
Date: Tue, 17 Jun 2014 21:04:44 -0400
Subject: [prastaapa] Morning with Mr. H. Seshagiri Rao


Dear Friends:

I am writing this to you all to invite you all to an interesting session with Sri H. Seshagiri Rao.
He will share his unique idea of preserving manuscripts in India. His success and vision.

Please see the attachments for more information.

Mr. H.S. Rao's daughter Prema Shailesh has kindly agreed to host us all for this get together on Sunday, Jun 22, 2014.
It is a very short notice but please try to make it.
Please RSVP at your earliest convenience if you can make it.

Date:                SUNDAY 6/22/2014
Get together: 10:30 - 11:00 AM
Talk by Mr. H.Seshagiri Rao on  "Save and Study Manuscripts" project - 11:00 AM - 12:30 PM
Light Refreshments - 12:30 -1:30 PM
Address: # 1605, North Oaks BLVD
                 North Brunswick 08902
                 Home # 732-354-3358 

No Potluck this time.
Thanks and See you all on Sunday.

Thanks,

                               “Save & Study Manuscripts” Campaign

 India was the cradle of ancient civilization with a great history dating back to several millenniums. It has got a treasure of knowledge which passed on for thousands of years through oral tradition. The first ever writing started from 600 BC since the time of Asoka the great. Later on works of great importance were written down on palm leaves, parchment, metal sheets, bark of the tree, specially prepared cloth etc. and they are called manuscripts.
In south India ancient writings are mostly found on palm leaves. There are thousands of manuscripts in several languages and scripts dealing with several subjects. The importance of manuscripts was realized during the time East India company rule and Colonel Collin Mackenzie was a pioneer in the field of collection. Most of them were sent to England. Still manuscript are there in temples, ancient houses, Mutts and private persons. Now ORI, Universities and some private institutions are having Manuscript collection. Manuscripts Mission of India is trying to protect them.
B.M.Sree Prathistana, Bangalore in Karnataka is the first ever private institution which tried to preserve our ancient knowledge. It has a collection of 1500 manuscripts in seven languages and scripts. 
A campaign named “Save and study Manuscripts “aims at collection, conservation and study of the contents through the application modern technology. Collection of manuscripts is possible only through creation of awareness among the people with the help modern media and social networking.  In most of the Manuscript library they are preserved through Physical and chemical procedure. Permanent solution is Digitalization.
The study of manuscripts started in the beginning of last century. There are scholars who devote their entire life using traditional and time consuming methods. There number is dwindling day by day.    Many works are available in printed form that too in remote libraries. Time, space and cost are the great hindrance in the study of manuscripts.
 The objective of “Save and study manuscripts “are as follows:
Main objectives:
1.       Creation of awareness among the public by making use of modern media and social networking.
.      2. Collection of original manuscript, or at least scanned copy through persuasion.
3. Conversion of manuscripts into digital form.
4.       Preparation of catalogue.
5.       Translation and transcription of manuscripts.
6.       Making the contents available through web site to the students, scholars and interested Public.

Strength:
1.  


1. Ours is a scholarly literary research institution founded by eminent writer Pro. M.V. Seetharamaih. It   conducts various literary and cultural activities and imparts training to M.Phil. And P had students .Great literary stalwarts like Pro. M.H.Krishnaiah, Dr. P.V.Narayana.  Pro.A.R. Mitra and host of others are actively associated with it.
2.  We have already in possession of thousands of manuscripts
3. Mrs. Seetha laxmi leads the technical team of 25  volunteers from India and abroad helping in the digitalization work.
4. Mr.Guruprasad and team are in to classification, conservation and cataloguing work.
5.  Intensive   practical training is given in conservation to post graduate students through one week work shop.  It is proposed to conduct such workshops on regular basis to prepare skilled man power.
6. Digitalization work is in progress .Several volunteers are involved and some are working for a nominal fees.
7.  Draft catalogue of nearly 300 works is ready.
8. More and more people are showing interest.

Challenges
1 .Selection of digitalized works which are complete and worthy to be published.
2 .Translation and transcription of such works.
3. Identifying the persons who can undertake this work on line voluntarily or for honorarium.
4 .Distribution and collection of the folios of the work to several qualified and trained persons on line with in the dead line.
5. Compilation and editing of the work by an expert committee (language wise, subject wise and script wise).
6. Publication of original folio along with translation or transcription for the benefit of scholars and students.
7. Preparation of e-book and its publication for common readers.
8. Placing the contents on-line and make it available to all he interested people.
 Weakness
1.        Scholars who can read the manuscripts are small in number. They are not Computer savvy and many of them can’t afford the gadget. Most of them expect due reward for their work
2.       Most of the younger generation have no aptitude towards this kind of work because the work is not lucrative.
3.       Lack of equipment.  and Scarcity of dedicated man power
4.       Building up of teams of scholars, technocrats, managerial and back room workers.
5.       Mobilization  of  Funds

Solution
1.       Senior scholars can be given basic training in the use of computer and a simple system can be given if needed. Remuneration can attract them towards the work
2.       Youngsters can be initiated and equipped through proper training in reading manuscripts with an opportunity to work along with scholars. They should be convinced of a rewarding career in the field of knowledge and research.
3.       Efforts can be made to procure used laptops and systems from companies and individuals who opt for improved version.
4.       A team of volunteers is to be built and entrusted with different tasks, even honorarium may be thought  of if required.
5.       Resources can be mobilized through various interested individuals, institutions and agencies.
Prospects
  The success of the pilot project may induce private collectors, institutions government department, universities and others who have manuscripts in digitalized form to make use of our network of scholars and technocrats to bring to light the contents in their possession.
Student, researchers, scholars and public may access the ocean of knowledge with the flick of their fingers whenever they like and where ever they are.

All the interested persons are most welcome to join in the venture of protecting and propagating the ancient knowledge of India

H. SeshagiriRao
Director,
Save & study manuscripts campaign.
B.M.Sri. Prtistana
Bangaluru-560019
Karnataka
India
Mobile -011-91-9448442323.
Land line- 011-91-80-26613929


                               

Wednesday, June 18, 2014

ಅಮೇರಿಕಾ ಅನುಭವ-10

ಅಂದು ರೌ  ಇಂದು ಶಾಷ್‌
                       ’ Some one  knows my name’  ಪುಸ್ತಕ ಕುರಿತ ಸಂವಾದ.


 ಲೈಬ್ರರಿಯಲ್ಲಿ ನಮ್ಮ ಬುಕ್ ಕ್ಲಬ್‌ ಸಭೆ ಬುಧವಾರ ರಾತ್ರಿ ೭.೩೦ಕ್ಕೆ  ಸೇರಿತು. ಇದು ಅಮೇರಿಕಾದಲ್ಲಿ ೧೮ನೆಯ ಶತಮಾನದಲ್ಲಿ ದೊಡ್ಡ ಸಮಸ್ಯೆಯಾಗಿದ್ದ ಗುಲಾಮಗಿರಿಯ ಕುರಿತಾದ ಪುಸ್ತಕ ’ Some one  knows my name “ ಕುರಿತಾದ ಚರ್ಚೆ ಇದ್ದಿತು. ಅದು ಕೆನಡಾ ಮೂಲದ ಲಾರೆನ್ಸ್‌ ಹಿಲ್‌ ಬರೆದ ಐತಿಹಾಸಿಕ ಕಾದಂಬರಿ. ಬೃಹತ್ ಗಾತ್ರದ್ದು. ಸುಮಾರು ಐದು ನೂರು ಪುಟಗಳದ್ದು . ಅಪಾರ ಸಂಶೋಧನೆಯ ಫಲವಾಗಿ ಹೊರಬಂದ ಕೃತಿ.  ನಾನು ಸರಿಯಾಗಿ ಏಳೂವರೆಗೆ  ಹೋದೆ. ಕಾನ್ಫರೆನ್ಸ್‌ ಹಾಲಿನ ಬಾಗಿಲು ಹಾಕಿತ್ತು. ಸರಿ ಇನ್ನು ಶುರುವಾಗಿಲ್ಲ ಎಂದುಕೊಂಡು ಪೇಪರ್ ಓದಲುಕುಳಿತೆ. ಏಕೋ ಅನುಮಾನ ಬಂದು ವಿಚಾರಿಸಿದರೆ ಆಗಲೇ ಪ್ರಾರಂಭವಾಗಿದೆ. ಬಾಗಿಲು ಹಾಕಿದ್ದಾರೆ. ತಿಳಿಯಿತು . ಬಾಗಿಲು ತೆರೆದುಒಳಗೆ ಹೋದರೆ ಆಗಲೇ ಸುಮಾರು ಇಪ್ಪತ್ತು  ಜನ ಪುಸ್ತಕ ಮುಂದಿಟ್ಟು ಕೊಂಡು ಚೌಕಾಕಾರವಾಗಿ ಹಾಗಿದ್ದ ಮೇಜುಗಳ ಹಿಂದೆ ಕುಳಿತಿದ್ದರು. ಎಲ್ಲ ಹೊಸ ಮುಖಗಳೇ.  ಹೋದ ತಕ್ಷಣ ಕಾಗದ ಮಡಿಚಿ ಮಾಡಿದ್ದ  ನಾಮಪಲಕ ನೀಡಿ  please write your first name  ಎಂದರು.ಎಲ್ಲರ ಮುಂದೆ ಮೇಜಿನ ಮೇಲೆ ಇಡಲಾಗಿದ್ದ ಫಲಕಗಳನ್ನು ಗಮನಿಸಿದೆ. ಕ್ಯಾಥಿ.ಬಾರ್ಬರಾ, ಲೂಸಿ ,ಆಮೀ ಜೋ, ಜೂಲೀ ಇತ್ಯಾದಿ ಚಿಕ್ಕದಾದ  ಹೆಸರುಗಳೇ ಕಂಡು ಬಂದವು. ನಾನು ತುಸು ಗೊಂದಲದಲ್ಲಿ ಬಿದ್ದೆ. ಅದನ್ನು ಗಮನಿಸಿ write your personal name ಎಂದಳು ಪಕ್ಕದಲ್ಲಿ ಇದ್ದ ಮಹಿಳೆ. ಮೈ ನೇಮ್ ಈಜ್ ಲೆಂಥಿ ,ಎಂದಾಗ ಹೆಸರು ಕೇಳಿದರು “ ಶೇಷಗಿರಿರಾವ್‌ ಹರಪನ ಹಳ್ಳಿ ,” ಸಂಕೋಚದಿಂದ ಹೇಳಿದೆ . Then you write Shash  ಎಂದರು. ಮತ್ತೆ ಪುನರ್‌ನಾಮಕರಣ ಎಂದು ನಸುನಕ್ಕೆ.ಹೋದ ಸಭೆಯಲ್ಲಿ ರೌ ಆಗಿದ್ದೆ ಇಂದಿನ ಸಭೆಯಲ್ಲಿ ಶಾಷ್‌ ಆದೆ.

ಇಂದಿನ ಸಭೆಯಲ್ಲಿ ಮಹಿಳೆಯರೇ  ಕಂಡುಬಂದರು. ಕೋರಿಯಾ, ಚೈನಾ , ಯುರೋಪಿನ ವಿಭಿನ್ನ ದೇಶಗಳವರೆಂದು ಅವರ ಮಾತಿನ ದಾಟಿಯಿಂದ ತಿಳಿದು ಬಂದಿತು ಒಬ್ಬರು ಭಾರತಿಯರಂತೆ ಕಂಡರು, ಹೋದ ಸಲಕ್ಕಿಂತ ಈ ಸಲ ವ್ಯವಸ್ಥಿತವಾಗಿತ್ತು. ಕ್ಯಾಥಿ ಸಂಯೋಜಕಿ.ಪುಸ್ತಕದ ಕುರಿತ ಸೊಗಸಾದ ಪೀಠಿಕೆ ನೀಡಿದಳು.
Some one  knows my name “  ಹದಿನೆಂಟನೆಯ ಶತಮಾನದಲ್ಲಿ ಆಫ್ರಿಕಾದಿಂದ ಕದ್ದು ಅಮೇರಿಕಾಗೆ ಸಾಗಿಸಲಾದ ೯ ವಯಸ್ಸಿನ ಬಾಲಕಿಯೊಬ್ಬಳ ಆತ್ಮಕಥೆ. ಅವಳ ಹೆಸರು ಅಮೀನಾಟ. ಚಿಕ್ಕದಾಗಿ ಮೀನಾ ಎಮದು ಕರೆಯುತಿದ್ದರು. ಇದು ಆಫ್ರಿಕಾ, ಅಮೇರಿಕಾ ಮತ್ತು ಇಂಗ್ಲೆಂಡ್ ಮೂರು ಖಂಡಗಳನ್ನು ಒಳಗೊಂಡ  ಗುಲಾಮರಾದ ನಿಗ್ರೋಗಳು ,ಇಂಡಿಗೋ ಪ್ಲಾಂಟರ್‌ ಶ್ವೇತವರ್ಣೀಯರು, ಅಮೇರಿಕಾ ಸ್ವಾತಂತ್ರ್ಯ ಹೋರಾಟಗಾರು. ಗುಲಾಮಗಿರಿ ರದ್ದತಿಯ ಹೊರಾಟಗಾರರು ಹೀಗೆ ನೂರಾರು ಪಾತ್ರಗಳ ಸರಣಿಯೇ ಇದೆ. ಬಹುತೇಕ ಪಾತ್ರಗಳು ಐತಿಹಾಸಿಕವಾದವುಗಳೇ. ಅವುಗಳು  ಬ್ರಿಟಿಷರು ಅಮೇರಿಕಾ ಬಿಡುವಾಗಿನ “ನಿಗ್ರೋ ಬುಕ್‌” ಎಂಬ ಅಧಿಕೃತ ದಾಖಲೆಯಿಂದ ಪಡೆದವು. ಜೊತೆಗೆ ಆಫ್ರಿಕನ್‌ ಅಮೇರಿಕನ್‌ರ ಚಳುವಳಿ ಹಿನ್ನೆಲೆಯಿಂದ ಲೇಖಕ ಹಿಲ್‌ ಬಂದಿರುವುದು  ಇನ್ನೊಂದು  ಪ್ರಮುಖ ಅಂಶ.
ನಾವು ಎಸ್‌ ಎಲ್‌ ಬೈರಪ್ಪನವರು ಪ್ರತಿ ಕಾದಂಬರಿ ಬರೆವಾಗ ವಿಷಯ ಸಂಗ್ರಹ ಮತ್ತು ಮಾಡುವ ಸಂಶೋಧನೆ ಕಂಡು ಕಣ್ಣು ಕಣ್ಣು ಬಿಟ್ಟಿದ್ದೇವೆ. ಇಲ್ಲಿನವರ ಸಂಶೋಧನೆ ಮತ್ತು ಪರಾಮರ್ಶನೆ ದಿಗ್ ಭ್ರಮೆ ಮೂಡಿಸುತ್ತದೆ .ದಾಖಲೆಗಳನ್ನು ಬರಿ ಪಟ್ಟಿ ಮಾಡುವುದು ಮಾತ್ರವಲ್ಲ ಅವನ್ನು ಎಲ್ಲಿ ಮತ್ತು ಹೇಗೆ ಪಡೆಯಬಹುದು ಎಂಬ ವಿವರವನ್ನು  ನೀಡಿರುವುದರಿಂದ ನಿಖರತೆಯ ಕುರಿತು ವಿವಾದಕ್ಕೆ  ಅವಕಾಶವೆ ಇಲ್ಲ. ಕಥೆಯನ್ನುಸ್ಥೂಲವಾಗಿ ನಾಲ್ಕು ಹಂತದಲ್ಲಿ ಪರಿಗಣಿಸಬಹುದು. ನಿಸರ್ಗದ ಮಡಿಲಲ್ಲಿನ ಬಾಲಕಿಯ ಅಪಹರಣ ಮತ್ತು ಬಟ್ಟೆ ಬಿಚ್ಚಿ ನೊಗಕ್ಕೆ ಬಿಗಿದು ದನಗಳಂತೆ ಸಾಗಣೆ, ಹಡಗಿನಲ್ಲಿನ ಅಮಾನವೀಯ ಸ್ಥಿತಿ,ಕಾದ ಕಬ್ಬಿಣದ ಹಾಕುವ ಗುರುತಿನ ಬರೆ, ದಾರಿಯಲ್ಲಿ ಸತ್ತವರನ್ನು ಹಾಗೆಯೇ ಬಿಟ್ಟು ಹೋಗುವ ಪರಿ  ನಂತರ  ಇಂಡಿಗೋ ಪ್ಲಾಂಟೇಷನ್‌ನಲ್ಲಿ ಗುಲಾಮಳಾಗಿ ಜೀವನ. ನಂತರ ಮದುವೆ ಮಕ್ಕಳು ಎಲ್ಲವೂ ಪಶುಸಂಪತ್ತಿನಂತೆ ಒಡೆಯನ ಆಸ್ತಿ.ಈ ನಡುವೆ ಮಗುವನ್ನು ಕಸಿದು ಮಾರಿದಾಗ ಪ್ರತಿಭಟಿಸಿದ್ದಕ್ಕೆ  ಅವಳ  ದಟ್ಟತಲೆಗೂದಲು ಬೋಳಿಸಿ “  I am the master  you, your wool and child all my property ‘   ಎನ್ನುವ ಮಾತು ಬೆಚ್ಚಿ ಬೀಳಿಸುತ್ತದೆ. ಅವಳು ಕೆಲಸ ಮಡದೆ ಮೊಂಡು ಹಿಡಿದಾಗ ಸಿಕ್ಕ ಶಿಕ್ಷೆ ಇನ್ನೊಬ್ಬನಿಗೆ ಮಾರಾಟ. 

ಕೊಂಡವನು ಯೇಹೂದಿ. ಇವಳ ಲ್ಲಿನ ಚತುರತೆ ಬಳಸಿ ಹಣ ಮಾಡಿಕೊಳ್ಳಲು  ಕೊಂಡಿರುವನು. ಮೀನಾಳಿಗೆ ಓದು ಬರಹ , ವಿದ್ಯೆ ಕಲಿಸಿ ಸೆಕ್ರಟರಿಯ  ಕೆಲಸ ಮಾಡಿಸಿದ.  ನ್ಯೂಯಾರ್ಕಗೆ ಹೋದಾಗ ಅಲ್ಲಿನ ಗಲಭೆಯ ವಾತಾವರಣದಲ್ಲಿ ತಪ್ಪಿಸಿಕೊಂಡು ಹೋದಳು.ಅಲ್ಲಿನ ಗುಲಾಮರಿಗೆ ಅಕ್ಷರ ಕಲಿಸಿ,ಸೂಲಗಿತ್ತಿಯ ಕೆಲಸದಿಂದ ಜೀವನ ಸಾಗಿಸಿದಳು ಅಮೇರಿಕಾ ಸ್ವಾತಂತ್ರ್ಯ ಹೋರಾಟದಲ್ಲಿ ತಮಗೆ  ಸಹಾಯ ಮಾಡಿದ ಗುಲಾಮರಿಗೆ ಬ್ರಿಟಿಷರು ಸ್ವಾತಂತ್ರ್ಯ ನೀಡಿ ಹೊಸ ಕಾಲನಿ ನೋವಾಸ್ಕಾಟ್‌ನಲ್ಲಿ  ಪುನರ್ವಸತಿ ಗೊಳಿಸಿದರು.ಅಲ್ಲಿಯೂ ಅದೇ ಗತಿ  ಅಲ್ಲಿಂದ  ಮತ್ತೆ ಆಫ್ರಿಕಾಕ್ಕೆ  ವಲಸೆ. ಅಲ್ಲಿ ಬದಲಾದ ತಾಯ್ನಾಡಿನ  ಪರಿಸ್ಥಿತಿಯಿಂದ ಮತ್ತೆ ಮರಳಿ ಬರುವುದು ಹೀಗೆ ಕಥೆಸಾಗಿ ಕೊನೆಗೆ ಬ್ರಟಿಷ್ ಪಾರ್ಲಿ ಮೆಂಟ್‌ನಲ್ಲಿ ಗುಲಾಮಗಿರಿ ನಿಷೇಧ ಮಸೂದೆ ತರಲು ಲಂಡನ್‌ಗೆ ತೆರಳಿ ಹೇಳಿಕೆ ನೀಡುವುದರೊಂದಿಗೆ ಮುಗಿಯುವುದು  ಆಗ  ಅಲ್ಲಿ ಅಗಲಿದ ಮಗಳ ಜೊತೆ ಮಿಲನವಾಗುವುದು..
ಆಫ್ರಿಕಾದ ಮೂಲನಿವಾಸಿಗಳ ಜೀವನ, ಅವರನಡೆ ನುಡಿ. ಅಲ್ಲಿ ತಾಯಿಯಿಂದ ಕಲಿತ ಸೂಲಗಿತ್ತಿ ಕೆಲಸ ಮತ್ತು ತಂದೆಯಿಂದ  ಅರಿತ ನಾರು ಬೇರಿನ ಔಷಧಿ. ಅಕ್ಷರಗಳ ಪರಿಚಯ ನಾಯಕಿಯ ಜೀವನವನ್ನು ಸಹನೀಯ ಮಾಡುತ್ತವೆ.  ಅವಳಲ್ಲಿನ ಆ ವಿದ್ಯಯಿಂದ ಇತರರಿಗಿಂತ ಬೇರೆಯೇ ಆಗಿ ತಾನೂ ಸ್ವತಂತ್ರಳಾಗಿ ತನ್ನಂತಿರುವ ಇತರರ ಬಿಡುಗಡೆಗೂ ಹೋರಾಟ ಮಾಡುತ್ತಾಳೆ. .
 ಆಫ್ರಿಕಾ ಮತ್ತು ಭಾರತದ ಸಂಸ್ಕೃತಿಯ ಅನೇಕ ಸಾಮ್ಯತೆ ಕಾಣುತ್ತದೆ, ನಮ್ಮ ಚಂಪಾರಣ್ಯ ಸತ್ಯಾಗ್ರಹಕ್ಕೆ ಕಾರಣವಾದ ನೀಲಿ ತೋಟಗಳು ಅಮೇರಿಕಾದ ಕೆರೋಲಿನಾದಲ್ಲೂ ಶೋಷಣೆಗೆ ಕಾರಣವಾಗಿದ್ದವು, ಗುಲಾಮಗಿರಿ ನಿವಾರಣೆಗೆ ಹೋರಾಟ ಗಾರರು ಸಕ್ಕರೆ ಬಳಸದಿರುವುದು. ಅಮೇರಿಕಾದಸ್ವಾತಂತ್ರ್ಯ ಹೋರಾಟಗಾರು ಟೀ  ಬಳಕೆ ಮಾಡದಿರುವುದು ನಮ್ಮ ಸ್ವಧೇಶಿ ಸತ್ಯಾಹಗ್ರಹಕ್ಕೆ ಸಂವಾದಿಯಾವೆ ಎನಿಸಿತು. ಆ ವಿಷಯ ಗಮನಕ್ಕೆ ತಂದೆ. 
ಅಂತಿಮವಾಗಿ ಶೀರ್ಷಿಕೆಯದೆ ವಿಶೇಷತೆ.ವಸ್ತು ಎರಡುಶತಮಾನದ ಹಿಂದಿನದಾದರೂ ಶೀರ್ಷಿಕೆ ಮಾತ್ರಬಹು ಪ್ರಸ್ತುತ ವೆನಿಸಿತು. ತನ್ನ ತಯ್ನಾಡಿನಿಂದ ದೂರವಾಗಿ ಭಾಷೆ,ಆಚಾರ,ವಿಚಾರ .ವಿಭಿನ್ನವಾದ ಪ್ರದೇಶದಲ್ಲಿ ನೆಲಸಿದ ಎಲ್ಲರ ಮನಸ್ಥತಿಯನ್ನು ಅದು ಪ್ರತಿನಿಧಿಸುತ್ತದೆ.

ಇದಕ್ಕೆ ಪೂರಕವಾಗಿ ಭಾರತದಿಂದ ಅಮೇರಿಕಾಕ್ಕೆ ೨೩ ವರ್ಷದ ಹಿಂದೆ ಬಂದ ಮಹಿಳೆ ತನ್ನ ತ್ರಿಶಂಕು ಸ್ಥಿತಿಯನ್ನು  ಮನಮುಟ್ಟುವಂತೆ ತಿಳಿಸಿದಳು. ಇದೊಂದು  ‘Problem of Identity crisis ‘   ಎಲ್ಲ ಕಾಲದಲ್ಲೂ ಇರುವುದೇ. ನಮಗೂ ಇದೆ.ಅಮೇರಿಕಾದಲ್ಲಿ  ನೀವು ಇಂಡಿಯಾದವರು ಎನ್ನುತ್ತಾರೆ, “ಭಾರತಕ್ಕೆ ಹೋದರೆ ನೀವು ಅಮೇರಿಕದವರು ಎನ್ನುವರು ’ ಹಾಗಾಗಿ ನಾವು ಇಲ್ಲಿಯೂ ಸಲ್ಲದವರು ಅಲ್ಲಿಯೂ ಸಲ್ಲದವರು ಆಗಿರುವೆವು ನಮಗೆ ಹೋಮ್ ತಾಯ್ನಾಡು ಎಂಬುದೇ ಇಲ್ಲದಾಗಿದೆ ಎಂದು ಅಳಲು ತೋಡಿ ಕೊಂಡಳು. ಇದಕ್ಕೆ ಕೋರಿಯಾ ಮತ್ತು ಚೀನದ ಮಹಿಳೆಯರು ಸಹಮತ ವ್ಯಕ್ತಪಡಿಸಿದರು. ಹೋಮ್‌  ಎನ್ನುವುದು  ಭೌತಿಕ ಅಂಶವಲ್ಲ. ಅದೊಂದು ಭಾವನಾತ್ಮಾಮ ಅಂಶ.  ಮಾನಸಿಕ ಸ್ಥಿತಿ. ಎಲ್ಲಿ  ಸಹಜವಾಗಿ  ನೆಮ್ಯಿಂದಿಯಿಂದ ಬದುಕ ಬಲ್ಲೆವೋ ಅದೇ ಮನೆ. ಅದಕ್ಕೆಂದೇ ಯಾರ ಮನೆಗಾದರೂ ಹೋದಾಗ’ “ Feel yourself  at home ‘ ಎನ್ನುವದರ ಅರ್ಥ ಅದೇ. ಆರಾಮಾಗಿರಿ ಎಂದು.    Home ನ  ಅರ್ಥ ವ್ಯಾಪ್ತಿ  ವಿಶಾಲ. Home town, Home state, Home Land  ಹೀಗೆ ವಿಸ್ತಾರವಾಗುವುದು .ಆದ್ದರಿಂದ Home  is more emotional than Physical  ‘ ಎಂಬ ನನ್ನ  ಮಾತಿಗೆ ಅವರೆಲ್ಲರೂ ಸಹಮತ ಸೂಚಿಸಿದರು. ನಂತರ ಶಿಕ್ಷಣದ ಮಹತ್ವದ ಬಗ್ಗೆ ಚರ್ಚೆ ಆಯಿತು. ಅಮೆರಿಕಾದಲ್ಲಿ ಬಹುತೇಕ ಎಲ್ಲರೂ ಶಿಕ್ಷಣ ಪಡೆದವರೇ ಆದರೆ ಇಂದಿನ ಯುವಜನರು ದಾರಿ ತಪ್ಪುವುದಕ್ಕೆ ಕಾರಣ ಏನು? ಎಂಬ ಪ್ರಶ್ನೆಗೆ  ಶಿಕ್ಷಣ ಎಂದರೆ   ಓದು ,ಬರಹ , ಲೆಕ್ಕ ಕಲಿಯುವುದು ಮಾತ್ರ ಅಲ್ಲ. ಜೊತೆಗೆ ಮೌಲ್ಯಗಳ ಅರಿವೂ ಬೇಕು. ಇಲ್ಲವಾದರೆ ಅವು ಅಕ್ಷರಸ್ಥರು ಮಾತ್ರ ಸುಶಿಕ್ಷತರು ಅಲ್ಲ ಎಂಬ ಮಾತನ್ನು  ಎಲ್ಲರೂ ಒಪ್ಪಿದರು.. ಶಿಕ್ಷಣದ ಹೊಣೆಯನ್ನು ಶಾಲೆ ಗೆ ಮಾತ್ರ ಬಿಟ್ಟು ಪೋಷಕರು ಮಾರ್ಗದರ್ಶನ ಮಾಡದಿರುವದೇ ಇಂದಿನ ದುಸ್ಥಿತಿಗೆ ಕಾರಣ ಎಂಬ ಇನ್ನೊಬ್ಬರ ಮಾತೂ ಎಲ್ಲರಿಗೂ ಒಪ್ಪಿತವಾಯಿತು.ಅಷ್ಟರಲ್ಲಿ ಮೂರು ಬಾರಿ ಬಾಗಿಲು ಬಡಿದಿದ್ದರು  ಲೈಬ್ರರಿ  ರಾತ್ರಿ  ೯ ಗಂಟೆಗೆ ಮುಚ್ಚುವರು. ನಮ್ಮ ಮಾತಿನ ಭರದಲ್ಲಿ ಸಮಯ ಮೀರಿ ಹೋಗಿತ್ತು ಎಲ್ಲರೂ ಗಡಿಬಿಡಿಯಿಂದ ಹೊರಟೆವು. ಹೋಗುವಾಗಲೂ ನಗು ಉಕ್ಕಿತು. ಒಬ  ಮಹಿಳೆ  ಗುಡ್ ನೈಟ್‌ ಮಿಸ್ಟರ್‌ಶಾಷ್‌ ಅಂದಳು  .ನನಗೆ ನಗೆ ಬಂದರೂ  ಸುಮ್ಮನಿದ್ದೆ. ಈವರೆಗೆ     ಶಷ್, ಶಾಷ್ ,ಸ್ಯಾಷ್   ಮೊದಲಾಗಿ ಹೇಳಿದರೂ .ನಾನು  ಶ್‌!   ಅಂದು ಕೊಂಡು ತೆಪ್ಪಗೆ ಇದ್ದೆ.

Thursday, June 5, 2014

ಅಮೇರಿಕಾ ಅನುಭವ -9

ಬಣ್ಣದ ಬಾಲೆಯರು ( The Painted Girls)






ಕ್ಯಾಥಿ ಮೇರಿ ಬುಕಾನನ್‌ ಕೆನಡಾದ ಹೆಸರಾಂತ ಲೇಖಕಿ. ಅವರು  ಹದಿನೆಂಟನೆಯ ಶತಮಾನದ ಆದಿಯಲ್ಲಿ  ಪ್ಯಾರಿಸ್‌ನಲ್ಲಿ ಬಹು ಜನಪ್ರಿಯವಾಗಿದ್ದ ಬ್ಯಾಲೆ ( Ballet) ಕಲಾವಿದರಾದ  ಮೂವರು ಸೋದರಿಯರ ಜೀವನ ಕುರಿತು ಬರೆದ ಕಾದಂಬರಿ. ಇದು ಒಂದು ರೀತಿಯಲ್ಲಿ ಐತಿಹಾಸಿಕ ಘಟನೆಯನ್ನು ಆಧರಿಸಿದೆ. ಆ ಕಾಲದ ಕಲಾವಿದ ಎಡ್ಗರ್‌ ಡೆಗಾಸ್‌ನ ಮೂರ್ತಿ ಶಿಲ್ಪ ‘Dancing girl ‘  ಗೆ ಮಾದರಿಯಾಗಿದ್ದ ಬಾಲಕಿ ಮೇರಿ.ಮತ್ತು ಆಕಾಲದ ಬ್ಯಾಲೆ ರಂಗಭೂಮಿಯ ಕಲಾಪರಿಸರ  ಕುರಿತು ಸಾಕಷ್ಟು ಸಂಶೋಧನೆ ಮಾಡಿ  ನೈಜ ಚಿತ್ರಣ ನೀಡಿರುವರು. ಇದು ಒಂದು ರೀತಿಯಲ್ಲಿ ಐತಿಹಾಸಿಕ ಕಾದಂಬರಿಯೂ ಆಗಿದೆ. ಕಾರಣ ಇದರಲ್ಲಿನ ಬಹುತೇಕ ಪಾತ್ರಗಳ ಮಾಹಿತಿ ಲಭ್ಯವಿದೆ. ಆದರೆ ಇದು ರಾಜ, ರಾಣಿ ಅಥವ ಯುದ್ಧದದ ಕಥೆಯಲ್ಲ. ಜನಸಾಮಾನ್ಯರ   ಬದುಕು ಬವಣೆಯ ನೈಜ ಚಿತ್ರಣ ಈ ಕಾದಂಬರಿಯಲ್ಲಿದೆ.



ಲೈಬ್ರರಿ
.
 
ಈ ಲೇಖನಕ್ಕೆ ಕಾರಣವಾದ ಘಟನೆಯ ಹಿನ್ನೆಲೆಯ ಅಗತ್ಯವೂ ಇದೆ. ನಾನು ಅಮೇರಿಕಾದಲ್ಲಿಯೂ ಓದುವ ಹವ್ಯಾಸ ಮುಂದುವರಿದೇ ಇತ್ತು. ಅದಕ್ಕೆ ಪೂರಕವಾದದ್ದು ಇಲ್ಲಿನ “ನಾರ್ಥ ಬ್ರನ್ಸವಿಕ್‌ ಪಬ್ಲಿಕ್‌ಲೈಬ್ರರಿ:”. ಇಲ್ಲಿನ ಗ್ರಂಥಾಲಯಗಳು ಬರಿ ಪುಸ್ತಕ ಮತ್ತು ಪತ್ರಿಕೆಗಳ ವಿತರಣೆಗ ಮಾತ್ರ ಮೀಸಲಾಗಿಲ್ಲ. ಇವು ಸಾಮಾಜಿಕ ಚಟುವಟಿಕೆಯ ಕೇಂದ್ರಗಳೂ ಆಗಿವೆ. ಎರಡು ಮೂರು ವರ್ಷದಗೆ ಎಳೆಯರಿಂದ ಹಿಡಿದು  ಹಿರಿಯನಾಗರೀಕರ ವರೆಗೆ ಒಂದಲ್ಲ ಒಂದು ಚಟುವಟಿಕೆ ಹಮ್ಮಿಕೊಂಡಿರುವರು. ಅದೂ ವಿಶೇಷವಾಗಿ ಬೇಸಿಗೆಯಲ್ಲಿ. ಮಕ್ಕಳಿಗೆ ಕಥೆ ಹೇಳುವರು,ಪುಸ್ತಕ ಓದುವುದು, ಆಟ ಆಡಿಸುವುದು, ಯುವಕರಿಗೆ ಭಾಷಾಕಲಿಕೆ  ಕಾಂಪ್ಯೂಟರ್‌ ಕಲಿಕೆ,ರಸಪ್ರಶ್ನೆ, ಮಹಿಳೆಯರಿಗೆ ಕಸೂತಿ, ಹಿರಿಯ ನಾಗರೀಕರಿಗೆ ಚುರುಕಾಗಿರಲು ಚಾರಣ , ಸೃಜನಶೀಲ ಬರಹ ಕಮ್ಮಟ, ಕವಿಗಳೊಂದಿಗೆ ಸಂವಾದ, ವಿಶೇಷ ಉಪನ್ಯಾಸ, ಹೀಗೆ ಹಲವಾರು ಕಾರ್ಯಕ್ರಮಗಳು ತೆರಪಿಲ್ಲದೆ ನಡೆಯುತ್ತಲೇ ಇರುತ್ತವೆ . ಬರಿ ಪುಸ್ತಕ ನೀಡುವುದು ಮಾತ್ರವಲ್ಲ ಆ ಕುರಿತು ಆಳವಾಗಿ ಅಧ್ಯಯನ ಮಾಡಲು ಸಹಾಯವಾಗುವ ಚರ್ಚಾ ಗೋಷ್ಠಿಗಳೂ ನಡೆಯುತ್ತವೆ. ತಿಂಗಳಿಗೆ ಮೊದಲ ಮಂಗಳವಾರ ಬೆಳಗ್ಗೆ ೧೦=೩೦  ರಿಂದ ೧೧=೩೦ ರವರೆಗೆ  ಮತ್ತು ಬುಧವಾರ  ೭-೩೦ ರಿಂದ  ೮.೩೦ ರವರೆಗ. ಆಸಕ್ತರು  ಹೆಸರು ನೊಂದಾಯಿಸಿದರೆ ಒಂದು ತಿಂಗಳು ಮುಂಚಿತವಾಗಿಯೇ ಪುಸ್ತಕ ಮತ್ತು ಅದರ ಬಗೆಗಿನ ಇತರೆ ಮಾಹಿತಿಯನ್ನು ನೀಡುವರು. ಕಾರ್ಯಕ್ರಮದ ವೇಳಾಪಟ್ಟಿಯನ್ನು ಸೂಚನಾಫಲಕದ ಮೇಲೆ ಜೊತೆಗೆ ಅವರ ಅಂತರ್‌ ಜಾಲತಾಣದಲ್ಲಿಯೂ ಹಾಕಿರುವರು.ಅದನ್ನುಗಮನಿಸಿ ನಾನೂ ಭಾಗವಹಿಸಲು ನೊಂದಾಯಿಸಿಕೊಂಡೆ.
 
ಗೋಷ್ಠಿಯಲ್ಲಿ ಅಧ್ಯಯನ ನಡೆಸಬೇಕಾದ ಪುಸ್ತಕವೇ “ The painted Girls”
ಅದು ಸುಮಾರು ೩೫೦ಪುಟಗಳ ಪುಸ್ತಕ. ಅದು ಫ್ರಾನ್ಸ್‌ ದೇಶದಕಥೆಯಾದ್ದರಿಂದ ಸಾಕಷ್ಟು ಫ್ರೆಂಚ್‌ ಪದಗಳೂ, ವಾಕ್ಯಗಳೂ ಇದ್ದವು ಜೊತೆಗೆ ಬ್ಯಾಲೆ ನರ್ತನದ ತಾಂತ್ರಿಕ ವಿವರಣೆ, ಮೊದ ಮೊದಲು ಕಬ್ಬಿಣದ ಕಡಲೆ ಎನ್ನಿಸಿತು ಓದುತ್ತಾ ಹೋದಂತೆ ಆ ಕಾದಂಬರಿ ಮನಸನ್ನಾಕರ್ಷಿಸಿತು. ಯಾವುದೇ ಕೃತಿ ಜನಪ್ರಿಯವಾಗಲು ಕಾರಣ ಅದರ ಪ್ರಾದೇಶಿಕತೆಯ ಸೊಗಡಿನ  ಹೊರತಾಗಿ ಸಾರ್ವತ್ರಿಕತೆಯ ಗುಣ ಹೊಂದಿರುವುದು. ಭಾಷೆ ಯಾವುದಾದರೇನು ಭಾವ ಒಂದೇಅಲ್ಲವೇ.
ಇದು ಆಂಟಿನೆಟ್‌, ಚಾರಲೆಟ್‌ ಮತ್ತು ಮೇರಿ ಎಂಬ ಮೂವರು ಸೋದರಿಯರ ಕಥೆ. ಅವರು ಎಳವೆಯಲ್ಲಿಯೇ ತಂದೆಯನ್ನು ಕಳೆದುಕೊಂಡವರು ತಾಯಿ ಮಧ್ಯವ್ಯಸನಿ..ಮನೆಯಲ್ಲಿ ಕಡು ಬಡತನ.  ಹಿರಿಯಕ್ಕನಿಗೆ ೧೬ ವರ್ಷ ವಯಸ್ಸು ಕೊನೆಯವಳಿಗೆ  ಎಂಟು. ಅವರು ಬ್ಯಾಲೆ ತರಬೇತಿ ಶಾಲೆಗೆ ಸೇರಿರುವರು.  ಕಾರಣ ಕಲಾರಾಧನೆ ಅಲ್ಲ. ಅಲ್ಲಿ ತರಬೇತಿ ಅವಧಿಯಲ್ಲಿ ದಿನಕ್ಕೆ ಮೊದಲ ಹಂತದಲ್ಲಿ ಮೂರು ಫ್ರಾಂಕ್‌ ಹಣ ನೀಡುವರು. ಪ್ರತಿಭೆ ತೋರಿದರೆ ಬಡ್ತಿಯಾಗುತ್ತಾ  ರಂಗಪ್ರವೇಶಕ್ಕೆ ಅರ್ಹರಾದರೆ ಉತ್ತಮ ಆದಾಯ. ಆದರೆ ತರಬೇತಿ ಬಹು ಕಠಿನ. ಮೈ ಮುರಿತಕ್ಕ ಆದ್ಯತೆ. ರಂಗದ ಮೇಲೆ ಝಗಝಗಿಸುತ್ತಾ ನರ್ತಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಕಲಾವಿದರು ಬಾಲ್ಯದಿಂದಲೇ ಎಷ್ಟು ಕಠಿನ ಪರಿಶ್ರಮ ಪಡುವರು ಎಂಬುದರ ಕಲ್ಪನೆ ಪ್ರೇಕ್ಷಕರಿಗೆ ಇರುವುದಿಲ್ಲ. ಇಲ್ಲಿ ಅವರ ದೈಹಿಕ ಪರಿಶ್ರಮದ ಜೊತೆ ಜೊತೆಗ ಮಾನಸಿಕ ತುಮುಲಗಳ ಚಿತ್ರಣವೂಇದೆ. ಹಸಿದ ಹೊಟ್ಟೆ, ಮೈ ಮುಚ್ಚದ ಬಟ್ಟೆಯ ಅವರು ಕಲೆ, ನೀತಿ ಧರ್ಮಕ್ಕೆ ಅತೀತರು. ಅಕ್ಕ, ಇಬ್ಬರು ತಂಗಿಯರನ್ನೂ ಸಾಕ ಬೇಕು.ಮನೆ ಬಾಡಿಗೆ ಹೊಂದಿಸ ಬೇಕು. ಅವರಿರುವ ಪರಿಸರ ಬಹು ದುರ್ಭರ. ಬಹುತೇಕ ಮಹಿಳೆಯರು  ತುಂಡು ಬ್ರೆಡ್ಡಿಗಾಗಿ  ಬಟ್ಟೆ ಬಿಚ್ಚುವವರು ಜೊತೆಗೆ ಮನೆಯಲ್ಲಿ ಹಸಿವಿನಿಂದ ಅಳುವ ಹಸುಗೂಸುಗಳು.. ಅವಳು ಸಹಜವಾಗಿ ಹೆಚ್ಚು ಹಣ ಬರುವ ಹಾದಿ ಹಿಡಿದು ಬ್ಯಾಲೆ ಶಾಲೆಯಿಂದ ಹೊರ ಹಾಕಲ್ಪಡುತ್ತಾಳೆ. ಅದೇ ಸಮಯದಲ್ಲಿ ಎಮಿಲಿ ಎಂಬ ಯುವಕನ ಪರಿಚಯವಾಗಿ ಪ್ರಣಯಿಗಳಾಗುವರು.ಅವರಿಬ್ಬರ ಶೃಂಗಾರ, ಕಾಮ, ಪ್ರೇಮ ಮೋಹ, ವಿರಹಗಳ ವರ್ಣನೆ ಭಾರತೀಯ ಓದುಗರಿಗೆ ಮುಜುಗರ ತರಿಸುವಷ್ಟು ಸಹಜ ಮತ್ತು ಮುಕ್ತ.  ಎಮಿಲಿ  ಮತ್ತು ಅವನ ಗೆಳೆಯರು ಸ್ವಭಾತಃ ಪುಂಡರು, ಮೈ ಮುರಿದು ದುಡಿಯಲಾರದವರು . ಅಪಮಾರ್ಗಗಳಿಂದ ಹಣ ಗಳಿಸಿ ಹೆಣ್ಣು ಹೆಂಡದ  ಮೋಜಿಗೆ ಖರ್ಚುಮಾಡುವವರು.. ಆದರೆ ಅಂಟಿನೆಟ್‌ಳಿಗೆ ಅವನಲ್ಲಿ ಅಪಾರ ಪ್ರೇಮ. ಅವನೊಂದಿಗೆ ಸಂಸಾರ ಹೂಡುವ ಕನಸು. ಅದಕ್ಕಾಗಿ ಏನು ಮಾಡಲೂ ಸಿದ್ಧ. ಸುಳ್ಳಿನ ಸರಮಾಲೆ ಹೆಣೆಯುತ್ತಾಳೆ. ಅವನು ಕೊಲೆಮಾಡಿ ಜೈಲು ಸೇರಿದರೂ ಅವಳ ಪ್ರೀತಿ ಕಡಿಮೆಯಾಗದು. ಅವನು ಅಂದು ಕೊಂಡಂತೆ  ಮರಣ ದಂಡನೆಯ ಬದಲು ಕಾಲಾಪಾನಿ ಆಗುವುದು. ಅಂದರೆ ಆಷ್ಟ್ರೇಲಿಯಾದ  ಹತ್ತಿರದ  ಫ್ರೆಂಚ್‌ ವಸಾಹತುವಾದ ದ್ವೀಪಕ್ಕೆ ಗಡಿಪಾರಾಗುವನು. ಅಲ್ಲಿ ಕೆಲ ವರ್ಷ ಸೆರೆವಾಸ. ನಂತರ  ಸುಖ ಜೀವನ ನಡೆಸಬಹುದೆಂದು ಅವನ ಹಂಚಿಕೆ.  ಅವನ ಜೊತೆ ತಾನೂ ಹೊರಡಲುಸಿದ್ಧಳಾಗುವಳು. ಪ್ರಯಾಣದ ವೆಚ್ಚ ಹೊಂದಿಸಲು  ಮಾಡಬಾರದ್ದನೆನೆಲ್ಲ  ಮಾಡಿ ಕೊನೆಗೆ ಜೈಲು ಪಾಲಾಗುವಳು. ಅಷ್ಟರಲ್ಲಿ ಅಮಿಲಿ ಮತ್ತೊಂದು ಕೊಲೆ ಮಾಡುವನು. ಅವನದು ಪ್ರೇಮವಲ್ಲ ಬರಿ ಕಾಮ ಎಂದು ಅವಳಿಗೆ ತಿಳಿಯುವುದು.ಮತ್ತೆ ಮನೆಗೆ ವಾಪಸ್‌ ಆಗಿ ತಂಗಿಯರ ಏಳಿಗೆಗೆ ಶ್ರಮಿಸುವಳು.
ತಂಗಿಯರು. ಇಬ್ಬರೂ ನೃತ್ಯಶಾಲೆಯ ಮೊದಲ ಹಂತ ದಾಟುವರು. ಮೇರಿಯ ಮುಖ ತುಸು ಆದಿ ಮಾನರನ್ನು ಹೋಲುವುದು. ಆಗಿನ ಒಂದು ನಂಬಿಕೆಯೆಂದರೆ ಮುಖ ಮನಸ್ಸಿನ ಕನ್ನಡಿ ಎಂದು. ಹೀಗಾಗಿ ಆ ರೀತಿಯ ಮುಖಭಾವ ಇರುವವರು ಜನ್ಮತಃ ಕೆಟ್ಟವರು ಎಂಬ ಭಾವನೆ ಅವಳಲ್ಲಿ ಮೂಡಿಸಿರುತ್ತಾರೆ.ಅದೇ ಅವಳ ಪತನಕ್ಕೆ ಕಾರಣವಾಗುವುದು.

              ಎಡ್ಗರ್  ಡೆಗಾಸ್‌ನ  ಕೃತಿ  

.  ಅವಳ ಮೂರ್ತಿ ಶಿಲ್ಪವು ಆಕಾಲದಲ್ಲಿ ಹೆಸರು ಪಡೆಯದಿದ್ದರೂ ನಂತರ ಜಗತ್‌ವಿಖ್ಯಾತ ಕಲಾಕೃತಿ ಎನಿಸಿದೆ. ಆದರೆ ಅದಕ್ಕೆ ಮಾದರಿಯಾಗಿದ್ದ ಮೇರಿಯ ಬದುಕುಮಾತ್ರ ಸುಖಕರವಾಗಿರಲಿಲ್ಲ. ಮೂವರಲ್ಲಿ ಅವಳೊಬ್ಬಳೇ ತುಸು ವಿದ್ಯಾವಂತೆ.ಅಕ್ಕನ ಭ್ರಮೆ ಹೋಗಲಾಡಿಸಲು ಅವಳು ಪರಿಶ್ರಮ ಪಡುತ್ತಾಳೆ.  ಕಲಾವಿದನೊಬ್ಬ ಅವಳನ್ನು ತನ್ನ ಕಲಾಕೃತಿಗಳಿಗೆ ಮಾದರಿಯಾಗಿ ಆಯ್ದುಕೊಳ್ಳುವನು. ಅವನೆದರು ಎಳೆಯ ಬಾಲಕಿ ನಗ್ನವಾಗಿ ಗಂಟೆಗಟ್ಟಲೆ ನಿಲ್ಲುವಳು. ಕಾರಣ ಅವನು ಮೂರು ಗಂಟೆಯ ಕೆಲಸಕ್ಕೆ ಆರು ಪ್ರಾಂಕ್‌ ನೀಡುವನು.. ಅದರಿಂದ ಮನೆಯ ಕಷ್ಟ ತುಸು ಪರಿಹಾರ. ಚಾರಲೆಟ್‌ ಮಾತ್ರ ತಲೆ ಬಗ್ಗಿಸಿಕೊಂಡು ನೃತ್ಯ ಕಲಿಯುತ್ತಾಳೆ.ಒಂದೇ ಸಮಸ್ಯೆ. ಅವರಿಗೆ ಯಾರೂ ದೈವ ಪಿತರು ಇಲ್ಲ ಹೀಗಾಗಿ ಮುಂದುವರಿಯುವುದು ಬಹು ಕಷ್ಟವಾಗುವುದು.
ಇದು ಐತಿಹಾಸಿಕ  ಅಂಶಗಳನ್ನು ಒಳಗೊಂಡ ಒಂದು ಸಾಮಾಜಿಕ ಕಾದಂಬರಿ. ಲೇಖಕಿಯ ಹಿರಿಮೆ ಎಂದರೆ ಬಡತನವನ್ನು ಬಣ್ಣಿಸುವಷ್ಟೇ ಸಹಜವಾಗಿ ನೃತ್ಯನಾಟಕದ ರಂಗ ವೈಭವ,  ಹೆಂಡದಂಗಡಿ, ಚಿತ್ರ ಮತ್ತು ಶಿಲ್ಪಕಲೆ,  ಪತಿತಹೆಂಗಸರನ್ನು ಮೇಲೆತ್ತಲು ಕ್ರೈಸ್ತ ಸನ್ಯಾಸಿನಿಯರ ಪ್ರಯತ್ನ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿದೆ.  ಹಸಿಹಸಿ ಕಾಮ,ಹುಸಿ ಪ್ರೇಮ , ಸೋದರ ವಾತ್ಸಲ್ಯ  ಮತ್ತು ಜೀವನಪ್ರೀತಿಯ ಕಥನವೇ ಈ ಕಾದಂಬರಿಯ ಸಾರ.
ಕೊನೆಯ ೨೦ ಅಧ್ಯಾಯಗಳು ಅಕ್ಕತಂಗಿಯರ ಮನದಾಳದ ತುಡಿತವನ್ನು ತೆರೆದಿಡಲು ಮಿಸಲಾಗಿವೆ. ಅವು ತುಂಬ ಚಿಕ್ಕವು.ಒಬ್ಬರ ನಂತರ ಇನ್ನೊಬ್ಬರ ಭಾನೆಯನ್ನು ವ್ಯಕ್ತಪಡಿಸಿ ತೀವ್ರತೆಯಿಂದ ಗಮನ ಸೆಳೆಯುತ್ತವೆ.
 ದುರಂತದ ಛಾಯೆಯಲ್ಲೂ ಬದುಕಿನ ಆಶಾಕಿರಣ ಬಿರುವ ಕೃತಿಯಾಗಿ ಮೆಚ್ಚುಗೆ ಪಡೆಯುತ್ತದೆ. ಬಣ್ಣದ ಬದುಕಿಗೆ ಕಾಲಿಟ್ಟು ವೈಭವದ ಕನಸುಕಾಣುವ ಕಿರಿಯಕಲಾವಿದರ  ಬವಣೆಯನ್ನು  ಎಲ್ಲ ಕಾಲ ದೇಶಗಳಲ್ಲೂ ಕಾಣಬಹುದು..
ಇನ್ನು ಗೋಷ್ಠಿಯದಿನ ಗಮನಸೆಳೆದದ್ದು ಅಚ್ಚುಕಟ್ಟಾದ ವ್ಯವಸ್ಥೆ. ಸುಮಾರು ಹನ್ನೆರಡು ಜನ . ಬಹುತೇಕರು ಹಿರಿಯ ನಾಗರೀಕರು.ನಮ್ಮಲ್ಲಿಯಂತೆ ಇಲ್ಲಿಯೂ ಸಾಹಿತ್ಯಿಕ ಸಭೆಗಳಿಗೆ ಯುವ ಜನಾಂಗದ ಹಾಜರಿ ಕಡಿಮೆ.. ನಾನು ತುಸು ಸಂಕೊಚದಿಂದಲೇ ಭಾಗವಹಿಸಿದೆ.ನನಗೆ ಅವರ ಮಾತಿನ ವೈಖರಿ ಗಲಿಬಿಲಿ ಮಾಡುತಿತ್ತು  . ನನಗೆ ಮೊದಲ ಅವಕಾಶ ದೊರೆಯಿತು. ನಾನು ಸವಿವರ ಟಿಪ್ಪಣಿ ಮಾಡಿಕೊಂಡಿದ್ದೆ. ಎಲ್ಲವನ್ನು ಸಾದರ ಪಡಿಸಿದೆ. ಇದೇ ಸಮಯದಲ್ಲಿ ಮುಖ ಮನಸ್ಸಿನ ಕನ್ನಡಿ ಎಂಬ ವಾದ ಪೂರ್ಣ ಸರಿಯಲ್ಲ. ಎದು ಹೇಳುತ್ತಾ ಕೆ.ವಿ.ಅಯರ್‌ಅವರ ರೂಪದರ್ಶಿ ಕಾದಂಬರರಿಯನ್ನು ಉಲ್ಲೇಖಿಸಿ , ಅದರಲ್ಲಿ ಬಾಲಯೇಸುಕ್ರಿಸ್ತನ ಚಿತ್ರಕ್ಕೆ ಮಾದರಿಯಾಗಿದ್ದವನೇ ಇಪ್ಪತ್ತು ವರ್ಷದ ನಂತರ ಜುದಾಸನ ಚಿತ್ರಕ್ಕೂ ,ಅಂದರೆ ಕೆಡುಕಿನ ಅಪರಾವತಾರಕ್ಕೂ ಮಾದರಿಯಾಗಿದ್ದ ಎಂಬ ಉದಾಹರಣೆ ನೀಡಿದೆ. ಅದು ಅವರ ಗಮನ ಸೆಳಯಿತು.ನಂತರ ಒಬ್ಬೊಬ್ಬರಾಗಿ ಮಾತನಾಡಿದರು ಆದರೆ ಯಾರೂ ಪುಸ್ತಕದ ಬಗ್ಗೆ ಸಮಗ್ರ  ಚರ್ಚೆಮಾಡಲಿಲ್ಲ. ಅಲ್ಲಿ ಇಲ್ಲಿ ಒಂದೊಂದು ಅಂಶ ಹೇಳಿದರು.
. ನಂತರ  ನಾವು ಅಮೇರಿಕನರು ವೇಗವಾಗಿ  ಮಾತನಾಡುವೆವು. ಕೆಲದಿನ ರೇಡಿಯೋ ಕೇಳಿ,  accent ಅರ್ಥವಾಗುವುದು  ಎಂಬ ಸಲಹೆ ನೀಡಿದರು. ಕೊನೆಯದಾಗಿ ಒಬ್ಬಮಹಿಳೆ “ you have  put us to shame with your presentation” ಎಂದಾಗ ಇನ್ನು ಹಲವರು ತಲೆದೂಗಿದರು..
ಎಲ್ಲರಿಗೂ ವಂದಿಸಿ ಹೊರ ಬಂದೆ.
ಮಾರನೆಯದಿನ ಲೈಬ್ರರಿಗೆ  ಹೋಗಿ ಬರುವಾಗ ಒಬ್ಬ ಮಹಿಳೆ ಬಂದು    How are  you Mr. Row  ,ಎಂದಾಗ ಕಣ್ಣು ಕಣ್ಣುಬಿಟ್ಟೆ.   ಗಡಿಬಿಡಿಯಲ್ಲಿ  Fine  thank you ಎಂದೆ
 
.

ಇದು ಯಾರಪ್ಪ  ಇಲ್ಲಿ ನನಗೆ ಮಿ.ರೌ . ಅನ್ನುವವರು !   ನನ್ನ ಟ್ಯೂಬ್‌ ಲೈಟ್‌ ತಲೆಯಲ್ಲಿ  ನಂತರ  ಭಗ್‌  ಎಂದು ಬೆಳಕು ಮೂಡಿತು. ಹಿಂದಿನ ದಿನದ ಸಭೆಯ ಪ್ರಭಾವ,  ಎಂದು

 

Monday, June 2, 2014

ಅಮೇರಿಕಾ ಅನುಭವ-8


ಪ್ರಾಣಿ ರೂಪ ತಳೆದ ಸಸ್ಯೋದ್ಯಾನ ಟೋಪಿಯರಿ ಗಾರ್ಡನ್‌
ವರ್ಷದಲ್ಲಿ ಎರಡು ತಿಂಗಳು ಮಾತ್ರ ಬಿಸಿಲ  ಮೋರೆ ಕಾಣುವ  ಈ ಚಳಿ ಪ್ರದೇಶದಲ್ಲಿ ಮರುಭೂಮಿ ಹಡಗಾದ ಒಂಟೆ, ಆಫ್ರಿಕಾದ ನಿತ್ಯಹರಿದ್ವರ್ಣದ ಕಾಡಿನಲ್ಲಿ ಓಡಾಡುವ  ಆನೆ, ಭಾರತದ ಕರಡಿ,  ತೋಳ ಪೆಂಗ್ವಿನ್‌ ಮೊದಲಾದ ಪ್ರಾಣಿಗಳನ್ನು ಒಂದೇ ಕಡೆ ನೋಡಲು ಸಿಗುವವವು. ಆದರೆ ಅವೆಲ್ಲವುಗಳೂಒಂದೇ ಹಚ್ಚ ಹಸಿರು ಬಣ್ಣದವು  ಕಾರಣ ಅವು ಪ್ರಾಣಿಗಳಲ್ಲ. ಪ್ರಾಣಿರೂಪದ ಸಸ್ಯಗಳು. ಅವು ಕಂಡುಬರುವುದು  ಗ್ರೀನ್‌ ಅನಿಮಲ್‌  ಟೋಪಯರಿ ಗಾರ್ಡನ್‌ನಲ್ಲಿ.  

 ಹತ್ತೊಂಬತ್ತನೆ ಶತಮಾನದ ಆದಿಯಲ್ಲಿ ಅಂದರೆ ೧೯೦೫  ಥಾಮಸ್‌ ಬ್ರೈಟನ್‌  ಎಂಬ ಒಬ್ಬ ಫಾಲ್‌ಮಿಲ್‌ ಮಾಲಿಕ ಇಲ್ಲಿನೆಲಸಿದ್ದ. ಅವನಿದ್ದುದು  ಪೋರ್ಟ್ಸ ಮೌತ್‌ ಗ್ರಾಮ.  ನರ್ರಗನಸೆಟ್  ಬೇ ಯ ದಡದಲ್ಲಿ  ಅವನ  ಬೇಸಿಗೆ ಧಾಮ. ಅಲ್ಲಿ  ಒಂದು ತೋಟಮಾಡ  ಬಯಸಿದ . ಹಣ್ಣು ತರಕಾರಿ ಬೆಳೆಯುವುದು ಅವನ ಉದ್ದೇಶ.. ಅದಕ್ಕಾಗಿ ಒಬ್ಬ  ಪೋರ್ಚಗೀಸ್‌ ನಾದ  ವಲಸಿಗ ಜೋಸ್‌ ಕೆರ್ರಿಯೋ ಎಂಬುವನನ್ನು ನೇಮಿಸಿದ.   ಅವನ ಬರಿ ತೋಟದ   ಮಾಲಿ ಮಾತ್ರ ಆಗಿರಲಿಲ್ಲ.ಒಬ್ಬ ಸೃಜನ ಶೀಲ ಕಲಾವಿದನೂ ಆಗಿದ್ದ. ಸ್ವದೇಶಾಭಿಮಾನದಿಂದ ಇಲ್ಲಿನ ಹಣ್ಣುತರಕಾರಿಗಳ ಜೊತೆ  ತನ್ನ ನಾಡಿನ ಗಿಡಮರಗಳನ್ನು ಬೆಳಸಲುಯತ್ನಿಸಿದ.  ಒಂದು ಸಲಕ್ರಿಸ್‌ಮಸ್‌ ಕಾಣಿಕೆಯಾಗಿ ಬಂದ ಪ್ಯಾಕೆಟ್‌ನಲ್ಲಿ ಆನೆ ಒಂಟೆಮೊದಲಾದ  ಚಿತ್ರಗಳು ಇದ್ದವು. ಅವುಗಳನ್ನು ನೋಡಿ ಅಲಂಕಾರಿಕ ಸಸ್ಯಗಳ ತೋಟದಲ್ಲಿ  ಸಸ್ಯಗಳನ್ನು ಬಳಸಿ ವಿವಿಧ ಪ್ರಾಣಿಗಳ ಆಕಾರವನ್ನು ನಿರ್ಮಿಸಬಹುದೆಂದು ಕಂಡು ಕೊಂಡ. ಅದರ ಫಲವೇ ಇಂದಿನಪೋರ್ಟ ಮೌತ್‌ನಲ್ಲಿ ಅತಿ ಮುಖ್ಯವಾದ  ಪ್ರೇಕ್ಷಣಿಯ ಸ್ಥಳ ಟೋಪಯರಿ ಗಾರ್ಡನ್‌
ಟೋಪಿಯರಿ ಎಂಬುದ ತೋಟಗಾರಿಕೆಯ ಕಲತ್ಮಾಕ ಅಲಂಕಾರಿಕ ಸಸ್ಯಗಳ ಬೆಳೆ. ಚಿಕ್ಕದಾದ, ಮತ್ತು ದಟ್ಟವಾದ ಎಲೆಗಳು  ಮತ್ತು ಗಟ್ಟಿಯಾದ ಸಣ್ಣನೆ ಕಾಂಡವಿರುವ ಪೊದೆಯಂಥಹ ಸಸ್ಯಗಳನ್ನು  ಅವುಗಳಿಗೆ ದಟ್ಟವಾದ ಎಲೆ ಮತ್ತು ಮುಳ್ಳುಗಳು ಇರುತ್ತವೆ. ಅವುಗಳ ರೆಂಬೆಗಳನ್ನು ಹೇಗೆ ಬೇಕಾದರೂ ಬಾಗಿಸ ಬಹುದು . ರೆಂಬೆಗಳನ್ನು ಕಟ್ಟಿ, ಬಾಗಿಸಿ ಕೆಲಸಲ ಕತ್ತರಿಸಿ ಎಲೆ ಮತ್ತು ರೆಂಬೆಕೊಂಬೆಗಳನ್ನು ಸವರುತ್ತಾ ತಮಗೆ ಬೇಕಾದ ಆಕಾರಕ್ಕೆ ಅದನ್ನು ತರುವರು. ಸಾಧಾರಣವಾಗಿ ಪ್ರಾಣಿಗಳು ಮತ್ತು ಜ್ಯಾಮಿತಿಯ ವಿವಿಧ ಅಕೃತಿಗಳನ್ನು ನಿರ್ಮಿಸುವುದು ಜನಪ್ರಿಯ ಹವ್ಯಾಸ
, ಈ ರೀತಿ ಸಸ್ಯಗಳಿಗೆ ವಿವಧರೀತಿಯ ಆಕಾರ ಕೊಡುವ ಪದ್ದತಿಯು ಪ್ರಾಚೀನ ಗ್ರೀಕ್‌ ರ  ಕಾಲದಿಂದಲೂ ಪ್ರಚಲಿತವಿದೆ. ಮತ್ತು ಇದು ಚೀನಾಮತ್ತು ಜಪಾನ್‌ಗಳಲ್ಲೂ ವಿಶೇಷವಾಗಿದೆ. ಬೊನ್ಸಾಯಿಯೂ ಈ ಪ್ರಯತ್ನದ ಇನ್ನೊಂದು ರೂಪ
ಥಾಮಸ್‌ನ ನಂತರ ಅವನ ಮಗಳೂ ಇದರಲ್ಲಿ ಬಹು ಆಸಕ್ತಿ ತಳೆದಳು. ಅವಳು ಇದೊಂದು ಪೋರ್ಚುಗಿಸ್‌ ಜನಪದ ಕಲೆ ಎಂದುಕೊಂಡಳು.ಅವಳು ತನ್ನ ಜೀವನವನ್ನು ಪೂರ್ತಿ ಇದಕ್ಕೆ ಮಿಸಲಿಟ್ಟಳು. ಎಲೀಸಳು  ಇದೊಂದು ಪೋರ್ಚುಗೀಸ್‌ ಜನಪದ ಕಲೆಯ ಪ್ರತಿ ರೂಪ ಎಂದು ಅರಿತು ಉತ್ತೇಜನ ನೀಡಿದಳು.  ಯಜಮಾನನಂತೆ ತೋಟದ ಮಾಲಿಯೂ ವಂಶಪಾರಂಪರರಿಕವಾಗಿ ಈಕೆಲಸದಲ್ಲಿ ತೊಡಗಿಸಿಕೊಂಡ. ಜೊತೆಗ ಸ್ಥಳೀಯವಾಗಿ ಒಬ್ಬಿಬ್ಬರನ್ನು ತರಬೇತಿನೀಡಿ 
ತೊಡಗಿಸಿಕೊಂಡರು ಅದರ ಫಲವಾಗಿ ಶತಮಾನದ ಇತಿಹಾಸವುಳ್ಳ ಈ ಉದ್ಯಾನ ಜನರ ಗಮನ ಸೆಳೆಯ ತೊಡಗಿತು
ಅದರ ಜೊತೆಹ ಮನೆಯಲ್ಲಿ ಮಿನಿಯೇಚರ್‌ ಬೊಂಬೆಗಳ ಸಂಗ್ರಹ ಪ್ರಾರಂಭಿಸಲಾಯಿತು. ಈಗ ಮನೆಯೂ ಒಂದು ಆಕರ್ಷಕ ವಸ್ತು ಸಂಗ್ರಹಾಲಯವಾಗಿದೆ. ಅಲ್ಲಿ ದಿನ ಬಳಕೆಯ ಎಲ್ಲ ವಸ್ತುಗಳ ಕಿರು ಮಾದರಿಗಳಿವೆ. ಸುಮಾರು ವೈವಿದ್ಯಮಯ   ಪ್ರದೇಶಗಳಲ್ಲಿನ  ಯುದ್ಧ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ   ಬೊಂಬೆಗಳ ಮೂಲಕ ಜೋಡಿಸಲಾಗಿದೆ.. ದೆ. ಆಫ್ರಿಕಾದಲ್ಲಿನ ಬುಡಕಟ್ಟು ಜನರೊಡಗಿನ ಯುದ್ಧ, ಈಜಿಪ್ಟನ ಮರಳು ಪ್ರದೇಶದ ಕದನ , ಬಕಿಂಗ್‌ಹ್ಯಾಂ ಅರಮನೆ ಮುಂದಿನ ಸೈನಿಕರ ಕವಾಯಿತು, ಅಶ್ವಾರೋಹಿ ಸೈನ್ಯ ದಳ.  ಹೀಗೆಬೊಂಬೆಗಳ ಸಾಲೇ ಇದೆ. ಮೈ ಸೂರಿನಲ್ಲಿಅನೇಕ ಮನೆಗಳಲ್ಲಿನ  ದಸರೆಯ ಬೊಂಬೆಗಳ ಪ್ರದರ್ಶನವನ್ನು ಹೋಲುತ್ತವೆ . ಒಂದೇ ವ್ಯತ್ಯಾಸ ಇಲ್ಲಿ ಬರಿ  ದೈನಂದಿನ ವಸ್ತುಗಳೇ ಬಹಳ. ಅಲ್ಲಿನಂತೆ ಪೌರಾಣಿಕ, ಐತಿಹಾಸಿಕ ಮತ್ತು ಪ್ರಾಕೃತಿಕ ದೃಶ್ಯಗಳೂ ಕಡಿಮೆ.ಹಾಗಾಗಿ ನಮಗೆ ಅದೇನೂ ಅಷ್ಟು ಅಚ್ಚರಿಯ ಸಂಗ್ರಹ ಎನಿಸಲಿಲ್ಲ. ಎಲೀಸಳು ಸುಮಾರು ಎಂಬತ್ತೈದು ವರ್ಷ  ಈ ಸಂಗ್ರಹಕ್ಕಾಗಿ ದುಡಿದು ನಂತರ ಅವುಗಳನ್ನು ದಾನ ಮಾಡಿದಳು ಈಗ ಪ್ರಿಜರ್ವೇಷನ್‌ ಸೊಸೈಟಿಯವರು ನ್ಯೂಪೋರ್ಟನ  ಮ್ಯಾನಷನ್‌ಗಳ ಜೊತೆ ಇದನ್ನು ಒಂದು ಪಾರಂಪರಿಕ ಐತಿಹಾಸಿಕ ತಾಣವನ್ನಾಗಿಸಿದ್ದಾರೆ.
ಕಿರಿದಾದ ಕತ್ತಿನ ಒಂಟೆ
ಟೋಪಿಯರಿಕಲೆಯನ್ನು ಬಹುವಾರ್ಷಿಕ ಸಸ್ಯಗಳನ್ನು ಪಳಗಿಸಿಅವುಗಳ ಎಲೆ ಮತ್ತು ಚಿಕ್ಕ ರೆಂಬೆಗಳನ್ನು ಕತ್ತರಿಸಿ ವಿವಿಧ ರೂಪಕೊಟ್ಟು ಜ್ಯಾಮಿತಿಯ ಆಕಕೃತಿಗಳಾಗಿಸುವರು. ಇವುಗಳನ್ನು  ಸಜೀವ  ಶಿಲ್ಪ ಎನ್ನಲಾಗುವುದು. ಆಧುನಿಕ ವಿಧಾನದಲ್ಲಿ ತಂತಿ ಬಲೆಗಳನ್ನೂ ನಿರ್ಧಿಷ್ಟ ಆಕಾರದಲ್ಲಿರೂಪಿಸಿ ಅದರ ಮೇಲೆ ಸಸ್ಯವನ್ನು ಹಬ್ಬಸಲಾಗುವುದುಇಲ್ಲಿನ ವಿಶೇಷವೆಂದರೆ ಆರೀತಿಯ ಕೃತಕ ವಿಧಾನವನ್ನು ಬಳಸದೆ ಆಕೃತಿಗಳನ್ನು ನೈಸರ್ಗಿಕವಾಗಿಯೇ ರೂಪಿಸಿರುವರು’


ಅನೇಕ ಕಡೆ ಬೇಲಿಯ ಅಂಚಿನಲ್ಲಿ ಕಾಣುವ ಕತ್ತರಿಸಿದ ಪೊದೆಯೂ  ಸಹಾ ಟೋಪಯರಿಯ ಸಾಮಾನ್ಯ ರೂಪ ಎನ್ನ ಬಹುದು.
ಇಲ್ಲಿ ಅನೇಕ ಕಡೆ ಭವ್ಯ ಭವನಗಳಿಗೆ ಕಟ್ಟಿಗೆ ಅಥವ ಇಟ್ಟಿಗೆ ಕಾಂಪೌಂಡ್‌ಗೋಡೆಗಳ ಬದಲಾಗಿಹಚ್ಚ ಹಸಿರಾದ ಸಸ್ಯಗಳಿಂದ ಆವರಿತವಾದ ಆವರಣಗಳೇ ಕಂಡುಬಂದವು.ಅನೆಕ ಕಡೆ ತೋಟಗಳಲ್ಲಿ ಮಟ್ಟಸವಾಗಿ ರೂಪಿಸಿದ ವಿವಿಧ ಜ್ಯಾಮಿತಿಯಾಕೃತಿಗಳು ಇಲ್ಲಿನ ಜನರ ಕಲಾಪ್ರಿಯತೆಯನ್ನು ಸಾರುತ್ತವೆ.