Saturday, January 3, 2015

ಶ್ರೀ ಪ್ರಶಸ್ತಿ


 ಬಿ. ಎಂ.ಶ್ರೀ ಪ್ರತಿಷ್ಠಾನವು  ನೀಡುವ ಎರಡನೆಯ ಶ್ರೀ ಸಾಹಿತ್ಯ  ಪ್ರಶಸ್ತಿ  ಈ ಬಾರಿ ಅಂದರೆ ೨೦೧೪-೧೫ ನೇ ಸಾಲಿಗೆ
ಶ್ರೀ. ಬಿ.ಎಸ್‌ ಸಣ್ಣಯ್ಯ ಅವರಿಗೆ ದೊರಕಿದೆ. ಸ್ಮರಣ ಫಲಕದೊಂದಿಗೆ  ಒಂದು ಲಕ್ಷ ರೂಪಾಯಿ ನಗದು ಬಹುಮಾನ ಲಭಿಸಲಿದೆ
ಮಂಡ್ಯ ಜಿಲ್ಲೆಯ  ರೈತ ಕುಟುಂಬದಲ್ಲಿ ೧೯೨೮ ರಲ್ಲಿ ಜನಿಸಿದರು..ಪಿರಿಯಾಪಟ್ಟಣ ತಾಲೂಕಿನ ಬೋಗನ ಹಳ್ಳಿಯಲ್ಲಿ ಜನಿಸಿದರು. ತಂದೆ  ಸಣ್ಣೇ ಗೌಡ ತಾಯಿ  ಬೋರಮ್ಮ . ಪ್ರಾಥಮಿಕ ಮ ತ್ತು  ಹೈಸ್ಕೂಲು ಶಿಕ್ಷಣ ಪಡೆವಾಗ ನಡೆದೇ ಹೋಗುತಿದ್ದರು. ನಂತರ ಅವರು ಮೈಸೂರಿನಲ್ಲಿ ತಮ್ಮ ಶಿಕ್ಷಣ ಪಡೆದರು.ಪದವಿ ಮತ್ತು ಕನ್ನಡದಲ್ಲಿ    ಸ್ನಾತಕೋತ್ತರ  ಪದವಿಯನ್ನು ಪಡೆದರು. ಡಿಲಿಟ್‌ ಅನ್ನು  ಪಡೆದರು. ಹಾಗೂ  ಡಿಪ್ಲೊಮಾ ಇನ್‌  ಆರ‍್ಕೀವ್ಸ್  ಕೂಡಾ ಮಾಡಿದರು ೧೯೬೫  ರಲ್ಲಿ ಪ್ರಾಚ್ಯ ವಿದ್ಯಾ ಸಂಶೋಧನ ಇಲಾಖೆಯಲ್ಲಿ ವೃತ್ತಿ ಜೀವನ ಮೊದಲು ಮಾಡಿದರು.. ಆನಂತರ ಮಾನಸ ಗಂಗೋತ್ರಿ ಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ೩೨ ವರ್ಷ ಸಾರ್ಥಕ ಸೇವೆ ಮಾಡಿ  ಉಪನಿರ್ದೇಶಕಾಗಿ ನಿವೃತ್ತರಾದರು.
ಪ್ರಶಸ್ತಿ ಫಲಕ

. ಹಸ್ತಪ್ರತಿ ಸಂಗ್ರಹದಲ್ಲೂ ಅವರದು  ಹೆಮ್ಮೆಯ ಸಾಧನೆ. ಹಳ್ಳಿ ಹಪಟ್ಟಣಗಳನ್ನು ಯಾವುದೇ ಸಾರಿಗೆ ಸಾಧನಗಳಿಲ್ಲದ ಕಾಲದಲ್ಲಿ ಕಾಲ್ನೆಡೆಗೆಯಲ್ಲಿ, ಸೈಕಲ್ಲೇರಿ ಎತ್ತಿನಗಾಡಿಯಲ್ಲಿ ಸವಾರಿ ಮಾಡಿ  ಹೋಗಿ    ಸಂಗ್ರಹಿಸಿದರು.  .ಅವರ ಶ್ರಮ ಮತ್ತು ಸಂಶೋಧನೆಯ ಫಲ ಅನೇಕ ಹಳೆಗನ್ನಡ ಕೃತಿಗಳು ಕನ್ನಡಿಗರ ಪಾಲಿಗೆ ದಕ್ಕಿದವು.ಜೈನ ಸಾಹಿತ್ಯಕ್ಕಂತೂ ಅವರದು ಅನುಪಮ ಸೇವೆ.
ನಿವೃತ್ತರಾದ ನಂತರವೂ ಶ್ರವಣಬೆಳಗೊಳದ  ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನ ಸಂಸ್ಥೆಯಲ್ಲೂ ಹಸ್ತ ಪ್ರತಿವಿಭಾಗದ ಮುಖ್ಯಸ್ಥರಾಗಿ  ಅಪ್ರಕಟಿತ ಕೃತಿಗಳ ಪರಿಷ್ಕರಣೆ ಯಲ್ಲಿ  ಸೇವೆ ಸಲ್ಲಿಸುತ್ತಿರುವರು.
ಜೀವನದ ಉದ್ದಕ್ಕೂ ಸಂಶೋಧನೆ, ಸಂಪಾದನೆ , ಕೃತಿ ರಚನೆ ಮತ್ತು ಮಾರ್ಗದರ್ಶನ ನೀಡಿ ಹಸ್ತಪ್ರತಿ ರಂಗದ ದೊಡ್ಡಣ್ಣನಾಗಿರುವರು. ಈ ವರ್ಷ ಪ್ರೊ.ಎಂ.ವಿ. ಸೀತಾರಾಮಯ್ಯನವರ  ಪ್ರೀತಿಯ ಕ್ಷೇತ್ರವಾದ ಹಸ್ತ ಪ್ರತಿ ಮತ್ತು ಸಂಶೋಧನೆಯಲ್ಲಿನ ಸಾಧನೆಗಾಗಿ ಪ್ರಶಸ್ತಿ ಪಡೆದಿರುವರು. 

.


    




ಹಸ್ತಪ್ರತಿ ತಜ್ಞರಾದ ಇವರಗೆ ಬಂದಿರುವ ಪ್ರಶಸ್ತಿ ಸನ್ಮಾನಗಳು ಅನೇಕ.ಅವುಗಳಿಗೆ ಶಿಖರಪ್ರಾಯವಾಗಿ ಶ್ರೀ ಪ್ರಶಸ್ತಿ ಸಂದಿದೆ.
ಕುಟುಂಬ ವತ್ಸಲ ಬಿ.ಎಸ್‌.ಸಣ್ಣಯ್ಯ

No comments:

Post a Comment